Friday, April 18, 2025
Friday, April 18, 2025

World Coconut Day ತೆಂಗು ಆದಾಯ,ಆರೋಗ್ಯ ಹಾಗೂ ಆನಂದ ತರುವ ಕಲ್ಪವೃಕ್ಷ- ಎ.ಎನ್.ಮಹೇಶ್

Date:

World Coconut Day ತೆಂಗು ರೈತರಿಗೆ ಅತ್ಯಂತ ಅಗತ್ಯ ಹಾಗೂ ಉಪಯುಕ್ತ ಬೆಳೆಯಾಗಿದೆ. ಆದಾಯ, ಆರೋಗ್ಯ ಮತ್ತು ಆನಂದವನ್ನು ನೀಡುವ ಅಪರೂಪದ ಕಲ್ಪವೃಕ್ಷ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಚಿಕ್ಕಮಗಳೂರು, ತಾಲ್ಲೂಕಿನ ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಶಿವಮೊಗ್ಗ ವಿಸ್ತರಣಾ ನಿರ್ದೇಶನಾಲಯ ಸಹಯೋಗದಲ್ಲಿ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆಂಗು ಕೃಷಿ ಯನ್ನು ಅವಲಂಭಿಸಿಕೊoಡಿದ್ದಾರೆ. ತೆಂಗು ಕೃಷಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಸರ್ಕಾರ ತೆಂಗು ಅಭಿವೃದ್ದಿ ಮಂಡಳಿಯನ್ನು ಸ್ಥಾಪನೆ ಮಾಡಿದೆ. ವಿಶ್ವದಲ್ಲಿಯೇ ನಮ್ಮ ದೇಶ ತೆಂಗಿನ ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿ ದ್ದರೂ, ತೆಂಗಿನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯವರೆಗೆ ಕೊಂಡೊಯ್ಯುವತ್ತ ರೈತರು ಗಮನಹರಿ ಸಬೇಕು ಎಂದರು.
ತೆoಗು ಕೃಷಿಯನ್ನು ಕೇವಲ ಆಹಾರಕ್ಕಾಗಿಯೋ ಅಥವಾ ಆರ್ಥಿಕ ಲಾಭಕ್ಕಾಗಿಯೋ ಬೆಳೆಸುವುದಿಲ್ಲ. ತೆಂಗು ಆದ್ಯಾತ್ಮಿಕವಾಗಿಯೂ ಮಹತ್ವದ್ದು ಎನ್ನುವ ಭಾವನೆ ನಮ್ಮಲ್ಲಿದೆ. ಎಲ್ಲಾ ಪೂಜಾ ಕೈಂಕರ್ಯಗಳಿಗೆ ತೆಂಗು ಬೇಕು. ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಬಗ್ಗೆ ಬೆಳೆಗಾರರು ಚಿಂತಿಸದಿದ್ದರೆ, ತೆಂಗಿನ ಕೃಷಿಯನ್ನು ಲಾಭದಾಯವಾಗಿಸಲು ಸಾಧ್ಯವಿಲ್ಲ. ರೈತರು ಈ ದಿಸೆಯಲ್ಲಿ ಹೆಚ್ಚಿನ ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದರು.

ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಮಾತನಾಡಿ ತೆಂಗಿನ ನಾರಿನ ಉತ್ಪನ್ನಗಳಿಗೆ ರಾಜ್ಯವೇ ಅಲ್ಲದೆ ಇತರೆ ರಾಜ್ಯಗಳಲ್ಲೂ ಬಹಳಷ್ಟು ಬೇಡಿಕೆ ಇದೆ. ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತೆಂಗು ಬೆಳೆ ವ್ಯಾಪಕವಾಗಿದೆ. ತೆಂಗಿನ ನಾರಿನ ಉತ್ಪನ್ನಗಳ ಉದ್ಯಮಗಳಿಗೆ ವಿಪುಲ ಅವಕಾಶದ ಜೊತೆಗೆ ಪರಿಸರ ಸ್ನೇಹಿ ಉತ್ಪನ್ನವಾಗಿದೆ ಎಂದು ತಿಳಿಸಿದರು.

ತೆಂಗು ಬಹಳ ರೈತರಿಗೆ ಒಂದು ಸ್ಥಿರ ಆದಾಯ ತಂದುಕೊಡುವ ಬೆಳೆ. ಹೀಗಾಗಿ, ರೈತರ ಪಾಲಿಗೆ ತೆಂಗು ಲಾಭದಾಯಕ ಬೆಳೆ, ವಿಶ್ವ ತೆಂಗು ದಿನವನ್ನು ಸೆ.೦೨ ಆಚರಣೆಗೆ ತಂದರು, ತೆಂಗಿನ ಮರದಿಂದ ಸಿಗುವ ವಿವಿಧ ರೀತಿಯ ಉತ್ಪನ್ನಗಳು ತೆಂಗು, ಎಳನೀರು ಇತ್ಯಾದಿಯಿಂದ ಆಗುವ ಪ್ರಯೋಜನಗಳು ಮಾನವ ಸಮೂಹಕ್ಕೆ ಬಹಳಷ್ಟಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕಾ ಸಂಸ್ಕರಣ, ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಹೆಚ್. ಕುಮಾರಸ್ವಾಮಿ ರೈತರು ತೆಂಗು ಬೆಳೆ ಬೆಳೆಯಲು ಸಾವಯವ ಪದ್ಧತಿ ಅನುಸರಿಸಿದರೆ ಒಂದು ಮರಕ್ಕೆ ಸುಮಾರು 200 ಕಾಯಿಗಳನ್ನು ಪಡೆಯಬಹುದು. ಅದಲ್ಲದೇ ಮೌಲ್ಯವರ್ಧನೆ ಕಡೆ ಇನ್ನಷ್ಟು ಮುತುವರ್ಜಿ ವಹಿಸಿದರೆ ತೆಂಗಿನ ಮರಗಳು ಮತ್ತಷ್ಟು ವೃದ್ದಿಯಾಗಲಿವೆೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮದ ಸುಮಾರು 60 ಮಂದಿಗೆ ಮೂಡಿಗೆರೆ ಕೃಷಿ ವಿಜ್ಞಾನಿ ಕೇಂದ್ರದ ಸಿಬ್ಬಂದಿಗಳಿ0ದ ತೆಂಗಿನ ಬೆಳೆಯ ಆಧುನಿಕ ಬೇಸಾಯ ಕ್ರಮ, ತೆಂಗಿನ ತೋಟದಲ್ಲಿ ಅಂತರ್ ಬೆಳೆ, ತೆಂಗಿನ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ತೆಂಗಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಬೆಳೆಗಾರರಿಗೆ ಮಾಹಿತಿಯನ್ನು ನೀಡಿದರು.

World Coconut Day ಸಂದರ್ಭದಲ್ಲಿ ಲಕ್ಕಮ್ಮನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್, ಮಾಜಿ ಅಧ್ಯಕ್ಷೆ ರತ್ನಮ್ಮ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಸತೀಶ್, ಡಾ. ಸುಚಿತ್ರ, ಡಾ. ಸಹನಾ, ತೋಟಗಾರಿಕಾ ಸಂಸ್ಕರಣ, ಮಾರಾಟ ಸಹಕಾರ ಸಂಘದ ನಿರ್ದೇಶಕ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಏಪ್ರಿಲ್ 19 ಆಲ್ಕೊಳ ಫೀಡರ್ ಎ.ಎಫ್. 3 & 5 ರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು...

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...