Sunday, July 13, 2025
Sunday, July 13, 2025

G Seva Kendra ರೈತರು & ನಗರದ ನಿವಾಸಿಗಳಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಜನಸ್ನೇಹಿ ಕೆಲಸ ಮಾಡಬೇಕು- ಶಾಸಕ ತಮ್ಮಯ್ಯ

Date:

G Seva Kendra ಚಿಕ್ಕಮಗಳೂರು ನಗರದ ನೇಕಾರ ಬೀದಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ‘ಜಿ ಸೇವಾ ಕೇಂದ್ರ’ ಮಳಿಗೆಯನ್ನು ಶಾಸಕ ಹೆಚ್.ಡಿ.ತಮ್ಮಯ್ಯ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಜಿ ಸೇವಾ ಕೇಂದ್ರದ ಮಳಿಗೆಯ ಸಿಬ್ಬಂದಿಗಳು ರೈತರು ಹಾಗೂ ನಗರದ ನಿವಾಸಿಗಳಿಗೆ ಸರ್ಕಾರದಿಂದ ಉಪಯೋಗವಾಗುವ ಎಲ್ಲಾ ಯೋಜನೆಗಳನ್ನು ಒದಗಿಸಿಕೊಡುವ ಮೂಲಕ ಜನಸ್ನೇಹಿ ಕೆಲಸ ಮಾಡಿ ಜನಮನ್ನಣೆಗೆ ಪಾತ್ರರಾಗಬೇಕು ಎಂದರು.

G Seva Kendra ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ವಿಕಲಚೇತನರಿಗೆ ಗುರುತಿನ ಚೀಟಿ, ಬಸ್‌ಪಾಸ್, ಪಹಣ , ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತಿಸಿ ಕಂಪ್ಯೂಟರ್ ಟೈಪಿಂಗ್, ನೋಟರಿ, ಪಾನ್ ಕಾರ್ಡ್ ಹಾಗೂ ಸರ್ಕಾರದ ಇನ್ನಿತರೆ ಸೌಲಭ್ಯಗಳನ್ನು ನೀಡುತ್ತಿದ್ದು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲಿ ಕಂಟ್ರಾಕ್ಟರ್ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಜಿ ಸೇವಾ ಕೇಂದ್ರದ ಮಾಲೀಕರಾದ ಚಂದ್ರಶೇಖರ್, ಕೃಷ್ಣಮೂರ್ತಿ, ವಕೀಲ ಡಿ.ಸಿ.ಪುಟ್ಟೇಗೌಡ, ಮುಖಂಡರುಗಳಾದ ಶಿವಾನಂದ ಸ್ವಾಮಿ, ಪಿಡಿಓ ಲಕ್ಷ್ಮಣ್, ವಿಕಲಚೇತನರ ಕಲ್ಯಾಣಾಧಿಕಾರಿ ಪೃಥ್ವಿಜಿತ್, ಸೋಮಶೇಖರ್, ಮೋಹನ್‌ಕುಮಾರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Miss Universe Karnataka ಚಿಕ್ಕಮಗಳೂರಿನ ಕು.ವಂಶಿ ಅವರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಪುರಸ್ಕಾರ

Miss Universe Karnataka ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ...

Department of Agriculture ಶೇ 48. ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಬೇಕೆಂಬ ಮನವಿಯನ್ನ ಪರಿಶೀಲಿಸಲಾಗುತ್ತದೆ- ಸಚಿವ ಶಿವಾನಂದ ಪಾಟೀಲ್

Department of Agriculture ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಹತೆಗಳಲ್ಲಿ‌ ತಿದ್ದುಪಡಿ ಆದೇಶ

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಗಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು,...

University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ...