Child Care center ಚಿಕ್ಕಮಗಳೂರು, ನಗರದ ಕೋಟೆ ಸಮೀಪದ ಕಣದಾಳ್ ರಸ್ತೆಯಲ್ಲಿ ನೂತನ ಅಂಗನವಾಡಿ ಶಿಶು ಪಾಲನಾ ಕೇಂದ್ರವನ್ನು ಸೋಮವಾರ ಕೇಂದ್ರದ ಮುಖ್ಯಸ್ಥ ಕಿರಣ್‌ರಾಜ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಹಾಗೂ ಹೆಣ್ಣು ಮಕ್ಕಳಿಗೆ, ಗರ್ಭಿಣಿಯರಿಗೆ, ಮತ್ತು ಬಾಣಂತಿಯರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಕಾರ್ಯನಿರ್ವಹಿಸಬೇಕು. ಜೊತೆಗೆ ಶ್ರೀಸಾಮಾನ್ಯರಿಗೆ ತಿಳಿಸುವಂತಾ ಕಾರ್ಯಕ್ರಮಗಳು ನಡೆಸಬೇಕು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರು ರೆಡ್‌ಕ್ರಾಸ್ ಜಿಲ್ಲಾ ನಿರ್ದೇಶಕ ಕೋಟೆ ಸೋಮಣ್ಣ ಮಾತನಾಡಿ ಕೋಟೆ ಸಮೀದಲ್ಲಿ ಎರಡನೇದಾಗಿ ಅಂಗ ನವಾಡಿ ಶಿಶುಪಾಲನಾ ಕೇಂದ್ರ ತೆರೆದಿರುವುದರಿಂದ ಸುತ್ತಮುತ್ತಲಿನ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
Child Care center ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಸುಜಾತಾ ಶಿವಕುಮಾರ್, ಕಾಂಗ್ರೆಸ್ ಮುಖಂಡ ಆನಂದ್, ಕರಿಯಣ್ಣ ಸ್ಥಳೀಯರಾದ ನಾಗೇಶ್, ರೂಪ ಮಧುರಾಜ್‌ಅರಸ್, ಲಕ್ಷ್ಮೀ ನಂಜಯ್ಯ, ವಸಂತ್, ಹಾಗೂ ಅಂಗನವಾಡಿಯ ಶಿಕ್ಷಕಿಯರು ಹಾಜರಿದ್ದರು.