Chikmagalur Development Authority ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆಯಿಂದ ದುಡಿದು ಕಾರ್ಯನಿರ್ವಹಿಸಿರುವ ದಲಿತ ಮುಖಂಡರಿಗೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮರ್ಲೆ ಅಣ್ಣಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಗೆ ನಗರ ಪೌರಾಡಳಿತ ಸಚಿವರಾದ ಬೈರತಿ ಸುರೇಶ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಿಡಿಎ ಅಧ್ಯಕ್ಷ ಸ್ಥಾನವನ್ನು ಪಕ್ಷದ ಉತ್ತಮವಾಗಿ ಕಾರ್ಯನಿರ್ವಹಿಸಿರುವ ದಲಿತ ಮುಖಂಡರಿಗೆ ಮಾತ್ರ ನೀಡಿ ಸಮಾಜದ ಏಳಿಗೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.
Chikmagalur Development Authority ಹಿಂದಿನಿಂದಲೂ ದಲಿತರು, ಕಾರ್ಮಿಕರು, ಅಲ್ಪಸಂಖ್ಯಾತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ.90 ರಷ್ಟು ಮಂದಿ ಕಾಂಗ್ರೆಸ್ ಮತ ನೀಡುವ ಮೂಲಕ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದಲ್ಲಿ ಸೇವೆ ಸಲ್ಲಿಸಿ ಜೀವನವನ್ನೇ ಮುಡಿಪಾಗಿಸಿರುವ ದಲಿತ ಮುಖಂಡರಿಗೆ ಸಿಡಿಎ ಅಧ್ಯಕ್ಷ ಸ್ಥಾನ ನೀಡಬೇಕು ಎಂದಿದ್ದಾರೆ.
ಈ ಹಿಂದೆಯು ಸಿಡಿಎ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಕ್ಕೆ ಹಾಗೂ ಎಲ್ಲಾ ಸಮು ದಾಯದವರಿಗೆ ನೀಡಲಾಗಿದೆ. ಆದ್ದರಿಂದ ಈ ಬಾರಿಯ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರ ಚುಕ್ಕಾಣ ಯನ್ನು ಪಕ್ಷದಲ್ಲಿ ಗುಣಾತ್ಮಕ ಸೇವೆ ಸಲ್ಲಿಸಿರುವ ದಲಿತ ಮುಖಂಡರಿಗೆ ನೀಡುವ ಮೂಲಕ ಜನಾಂಗ ಅಭಿವೃಧ್ದಿಗೆ ಒತ್ತು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.