KSRTC Shivamogga ಶಿವಮೊಗ್ಗ ನಗರದ ಕೆಎಸ್ಆರ್ ಟಿಸಿ ಬಡಾವಣೆಯ ಮೂಲಭೂತ ಸೌಕರ್ಯ ಒದಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಭರವಸೆ ನೀಡಿದರು.
ಕೆಎಸ್ಆರ್ ಟಿಸಿ ಬಡಾವಣೆಯೃ ನಿವಾಸಿಗಳ ಕುಂದು ಕೊರತೆ ಆಲಿಸಿ, ಮನವಿ ಪತ್ರ ಸ್ವೀಕರಿಸಿದ ಅವರು, ಈ ಭಾಗದ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಗ ಎನ್. ಚನ್ನಬಸಪ್ಪರವರನ್ನು ಬಡಾವಣೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
KSRTC Shivamogga ಕಾರ್ಯಕ್ರಮದಲ್ಲಿ ಬಡಾವಣೆ ಅಧ್ಯಕ್ಷರಾದ ಕೆ ವಿ ಅಶೋಕ್ ಕುಮಾರ್ ಗೌರವಾಧ್ಯಕ್ಷರಾದ ಮೋಹನ್ ಉಪಾಧ್ಯಕ್ಷರಾದ ಈಶ್ವರಪ್ಪ ಸಿ , ಕಾರ್ಯದರ್ಶಿ ವಾಸುದೇವ್ ಕೆ ಸಹ ಕಾರ್ಯದರ್ಶಿ ವಿಶ್ವೇಶ್ವರಯ್ಯ ಖಜಾಂಚಿ ಕೇಶವ್ ಸಿ ಶೇಟ್. ಡಾಕ್ಟರ್ ನಾಗರಾಜ್ ಅಂಗಡಿ. ಶ್ರೀಧರ್ ಲೋಕೇಶ್ ಸುರೇಶ್ ಪಟೇಲ್. ನಾಗಭೂಷಣ್ ಗಣೇಶ್ ಉಡುಪ. ಇಂದಿರಾ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ನಿವಾಸಿಗಳು, ಹಿತೈಷಿಗಳು ಹಾಜರಿದ್ದರು.