DC Chikkamagalur ಚಿಕ್ಕಮಗಳೂರು ಸಮೀಪದ ಬಸವರಾಜ್ ಲೇಟ್‌ನಲ್ಲಿ ಖಾಸಗೀ ಕಂಪನಿಯವರಿಗೆ ಮರದ ಕಾರ್ಖಾನೆ ಸ್ಥಾಪಿಸಲು ನಗರಸಭೆ ಹಾಗೂ ಅರಣ್ಯ ಇಲಾಖೆ ಅನುಮತಿ ನೀಡಿರುವ ಪರಿಣಾಮ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಲೇಔಟ್‌ನ ನಿವಾಸಿಗಳಾದ ನಾಗರಾಜ್, ಸಮಿವುಲ್ಲ ಹಾಗೂ ನದೀಮ್ ಅಹಮದ್ ಎಂಬುವವರು ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಸ್ಥಾಪಿಸದಂತೆ ಒತ್ತಾಯ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಬಸವರಾಜ್ ಲೇಔಟ್‌ನಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಮನೆಗಳು, ಕಲ್ಯಾಣ ಮಂಟಪ, ಪ್ರಾರ್ಥನಾ ಸ್ಥಳಗಳನ್ನು ಹೊಂದಿವೆ. ಶಾಲಾ ಮಕ್ಕಳು, ಹೃದಯ ಸಂಬಂಧಿ ರೋಗಿಗಳು, ವೃದ್ದರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿ ಸುತ್ತಿರುವ ಈ ಬಡಾವಣೆಗಳಲ್ಲಿ ಮರದ ಕಾರ್ಖಾನೆಗೆ ಅನುಮತಿ ನೀಡಿದರೆ ನಿವಾಸಿಗಳಿಗೆ ಪ್ರತಿನಿತ್ಯ ಸಮಸ್ಯೆ ಎದುರಾಗಲಿದೆ ಎಂದಿದ್ದಾರೆ.
DC Chikkamagalur ಇತೀಚೆಗೆ ರಸ್ತೆಯ ಡಾಂಬರೀಕರಣ ಮಾಡಿರುವುದರಿಂದ ಮರದ ದಿಂಬಿ ತುಂಬಿರುವ ಭಾರಿ ವಾಹನಗಳ ಓಡಾಟದಿಂದ ರಸ್ತೆಗಳು ಹದಗೆಡುವ ಸಂಭವವಿರುತ್ತದೆ. ಕಾರ್ಖಾನೆಯಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ದಿಂದ ನಿವಾಸಿಗಳ ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಇರುವುದರಿಂದ ಸಾಮಿಲ್ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಬಡಾವಣೆಯು ಕೇವಲ ವಾಸದ ಮನೆಗಳಿಗೆ ಮಾತ್ರ ಸೀಮಿತವಾಗಿರುವ ಕಾರಣ ಜಿಲ್ಲಾಧಿಕಾರಿಗಳ ಕಾರ್ಯಾಲಯದದಿಂದ ಆದಂತಹ ಅನ್ಯಕ್ರಾಂತ, ಭೂ ಪರಿವರ್ತನೆ ವಾಸದ ಮನೆಗಳನ್ನು ನಿರ್ಮಿಸಲು ಮಾತ್ರ ಅವಕಾಶವಿರುತ್ತದೆ ಹಾಗೂ ನಗರಾಭಿವದ್ಧಿ ಪ್ರಾಧಿಕಾರದಿಂದ ಮಾಡಿರುವಂತಹ ಯೋಜನಾ ನಕ್ಷೆಯಂತೆ ವಾಸದ ಮನೆಗಳನ್ನು ನಿರ್ಮಿಸಲು ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಈ ಬಡಾವಣೆಯಲ್ಲಿ ಮರದ ಕಾರ್ಖಾನೆ ನಡೆಸಲು ನಗರಸಭೆ ಹಾಗೂ ಅರಣ್ಯ ಇಲಾಖೆ ಅನು ಮತಿ ನೀಡಿರುವುದನ್ನು ಕೈಬಿಟ್ಟು ಸ್ಥಳೀಯಗಳಿಗೆ ಅನುಕೂಲ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.