Kannada Sahitya Parishad District Committee ಪ್ರಜಾಪ್ರಭುತ್ವದಲ್ಲಿ ಸಹ ಜೀವನದ ವಿನ್ಯಾಸ, ಭಾವೈಕ್ಯತೆ, ವೈಚಾರಿಕ ಚಿಂತನೆಯ ಮೂಲಕ ಸಾಹಿತ್ಯ ಹೇಗೆ ಅರ್ಥಮಾಡಿಸುತ್ತೆ ಎನ್ನುವುದಕ್ಕೆ ಅನೇಕ ಉದಾಹರಣೆ ನೀಡಿ ಒಲವು, ಪ್ರೀತಿಯಿಂದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಪ್ರಾಧ್ಯಾಪಕರಾದ ಡಾ. ಮೇಟಿ ಮಲ್ಲಿಕಾರ್ಜುನ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣ ದಲ್ಲಿ ಡಾ. ನೂರ್ ಸಮದ್ ಅಬ್ಬಲಗೆರೆ ಅವರು ನೀಡಿರುವ ದಿ. ಅಬ್ಬಾಸ್ ಅಬ್ಬಲಗೆರೆ ದತ್ತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಭಾವೈಕ್ಯತೆಗೆ ಸಾಹಿತ್ಯದ ಕೊಡುಗೆ ವಿಷಯವಾಗಿ ಮಾತನಾಡಿದರು.
ಸಹನೆ, ಹೊಂದಿಕೆಯೊಂದಿಗೆ ಸಮಾನ ಮನಸ್ಕರರಾಗಿ ಬದುಕುವುದು ಮುಖ್ಯ. ಮೌಲ್ಯ ಅಳವಡಿಸಿ ಕೊಳ್ಳುವಾಗ ಅದು ಬಿಕ್ಕಟ್ಟಿಗೆ ಕಾರಣವಾಗಬಾರದು. ಪರಸ್ಪರ ಬದುಕುವುದು, ಯಾರಿಗೂ ಕೇಡಿಲ್ಲದ ಎಲ್ಲರೂ ಒಂದೇ ಎನ್ನುವ ಆಶಯ ಸಾಹಿತ್ಯದ್ದಾಗಿರುತ್ತೆ. ಅದು ಜಗತ್ತಿನ ಎಲ್ಲೆಡೆಯೂ ಅದನ್ನೇ ಹೇಳುತ್ತಿದೆ. ಯಾವ ಸಾಹಿತ್ಯವೂ ಜೀವ ವಿರೋಧಿಯಲ್ಲ ಎಂದು ವಿವರಿಸಿದರು.
ಜಿನರಾಜ್ ಜೈನ್ ಗೆಳೆಯರ ಬಳಗ ನೀಡಿದ ದಿ. ಎಂ. ಜಿನರಾಜ್ ಹೆಗ್ಗಡೆ ಸ್ಮಾರಕ ದತ್ತಿ ಆಶಯದಂತೆ ನಾಣ್ಯಗಳು, ಛಾಯಾಚಿತ್ರ ಕಲೆಗೆ ಜಿನರಾಜ್ ಹೆಗ್ಗಡೆಯವರ ಕೊಡುಗೆ ವಿಚಾರವಾಗಿ ಇತಿಹಾಸ ಉಪನ್ಯಾಸಕರಾದ ಡಾ. ಕೆ.ಜಿ. ವೆಂಕಟೇಶ್ ಅವರು ಸಂಗ್ರಹಿಸಿದ ನಾಣ್ಯಗಳು ವೈವಿಧ್ಯಮಯ. ಅಲ್ಲಿ ಏನಿಲ್ಲ ಎಂದು ಹುಡುಕುವುದು ಕಷ್ಟ. ಅಷ್ಟು ಸಂಗ್ರಹ ಅಲ್ಲಿದೆ. ಅದನ್ನು ವಿದ್ಯಾರ್ಥಿಗಳು ನೋಡಿ ಕಲಿಯುವ ಅವಕಾಶ ಮಾಡಬೇಕು. ಅವರ ಹೆಸರಿನ ದತ್ತಿ ಸ್ಥಾಪನೆ ಅರ್ಥಪೂರ್ಣವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಗಿಡಕ್ಕೆ ನೀರೆರೆದು ಉದ್ಘಾಟಿಸಿ ದತ್ತಿ ನಿಧಿ ಕುರಿತು ಮಾಹಿತಿ ನೀಡಿದರು.
Kannada Sahitya Parishad District Committee ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಡಾ. ಎಚ್. ಎಸ್. ನಾಗಭೂಷಣ, ಡಾ. ಎಚ್. ಎಸ್. ಅನ್ನಪೂರ್ಣ , ಉಪನ್ಯಾಸಕರಾದ ಬಸವರಾಜ್,ಡಾ. ಪಾಲಾಕ್ಷ ಇನ್ನೂ ಮುಂತಾದವರು ಉಪಸ್ಥಿತರಿದ್ದರು.