Friday, April 25, 2025
Friday, April 25, 2025

ಮಹಿಳೆಯರ ಅಂಡರ್19 ಕ್ರಿಕೆಟ್ ಪಂದ್ಯಾವಳಿಗೆ ಶಿವಮೊಗ್ಗದ ಪ್ರತಿಭೆಗಳ ಆಯ್ಕೆ

Date:

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಶ್ರೀ ವೇದ ಕೃಷ್ಣಮೂರ್ತಿ ನೇತೃತ್ವದ ಕರ್ನಾಟಕದ ಹಿರಿಯ ಮಹಿಳಾ ಟಿ-20 ತಂಡವು ದಿನಾಂಕ: 11-10-2022 ರಿಂದ ಗುಜರಾತ್‍ನ ಸೂರತ್‍ನಲ್ಲಿ ನಡೆಯುವ ಪಂದ್ಯಾವಳಯಲ್ಲಿ ಭಾಗವಹಿಸುತ್ತಿದ್ದು, ಶಿವಮೊಗ್ಗದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಆಲ್‍ರೌಂಡರ್ ಆದ ಕು.ಅದಿತಿ ರಾಜೇಶ್ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಶ್ರಯದ ಹೈದರಾಬಾದ್‍ನಲ್ಲಿ ನಡೆಯಲಿರುವ ರಾಷ್ಟ್ರೀಯ 19 ವರ್ಷ ವಯೋಮಿತಿಯೊಳಗಿನ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದಿಂದ ಕು.ಸಿ.ಜೆ.ನಿರ್ಮಿತಾ ಇವರು ಆಲ್‍ರೌಂಡರ್ ಆಗಿ ಆಯ್ಕೆಯಾಗಿರುತ್ತಾರೆ.

ಈ ಕ್ರೀಡಾಪಟುಗಳು ಪ್ರಸ್ತುತ ಡಿವಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಸಹ್ಯಾದ್ರಿ ಕೀಡಾಂಗಣದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ, ಶಿವಮೊಗ್ಗದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಮಹಿಳಾ ಕ್ರಿಕೆಟ್ ಕ್ರೀಡೆಯಲ್ಲಿ ತರಬೇತಿ ಪಡೆಯಲು ಆಸಕ್ತಿ ಇರುವ ಬಾಲಕಿಯರು ಈ ತರಬೇತುದಾರರನ್ನು ಮೊ.ಸಂ: 9964599936 ಮೂಲಕ ಸಂಪರ್ಕಿಸಬಹುದು.

ಮಹಿಳಾ ಟಿ-20 ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ಈ ಪ್ರತಿಭಾವಂತ ಬಾಲಕಿಯರಿಗೆ ಕೆಎಸ್‍ಸಿಎ ಶಿವಮೊಗ್ಗ ವಲಯ ಸಂಚಾಲಕರಾದ ಡಿ.ಎಸ್.ಅರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಸಿಬ್ಬಂದಿ ವರ್ಗದವರು ಹಾಗೂ ಹಿರಿಯ, ಕಿರಿಯ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...