ಜಿ 7 ಶೃಂಗಸಭೆಗಾಗಿ ಜರ್ಮನಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಾಪಸ್ ಆಗುವ ಸಂದರ್ಭದಲ್ಲಿ ಅಬುಧಾಬಿಗೆ ಅಲ್ಪಕಾಲದ ಭೇಟಿ ನೀಡಿದ್ದಾರೆ.
ಈ ವೇಳೆಯಲ್ಲಿ ಅವರನ್ನು ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರರಾದ ಶೇಕ್ ಮೊಹಮ್ಮದ್ ಬಿನ್ ಝಾಯಿದ್ ಅಲ್ ನಯ್ಹೆನ್ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶೇಕ್ ಮಹಮ್ಮದ್ ಅವರ ಜೊತೆಗೆ ರಾಜ ಕುಟುಂಬದ ಇತರ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದು, ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕಳೆದ ತಿಂಗಳು ವಿಧಿವಶರಾದ ಶೇಕ್ ಖಲೀಫಾ ಬಿನ್ ಝಾಯಿದ್ ಅಲ್ ನಯ್ಹೆನ್ ಅವರಿಗೆ ಸಂತಾಪ ಸೂಚಿಸಿದ್ದಾರೆ.
2019ರ ನಂತರ ಉಭಯ ದೇಶಗಳ ನೇತಾರರ ಮೊದಲ ಭೇಟಿ ಇದಾಗಿದೆ.
ತಮ್ಮನ್ನು ಆತ್ಮೀಯವಾಗಿ ಬರಮಾಡಿ ಕೊಂಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ನನ್ನ ಸಹೋದರ ಸಮಾನರಾದ ಶೇಕ್ ಮಹಮ್ಮದ್ ಬಿನ್ ಝಾಯಿದ್ ಅಲ್ ನಯ್ಹೆನ್ ಅವರ ನಡೆಯಿಂದ ನನ್ನ ಹೃದಯ ತುಂಬಿ ಬಂದಿದೆ. ನನ್ನ ಸ್ವಾಗತಕ್ಕಾಗಿ ಅಬುಧಾಬಿಯ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.