Sunday, October 11, 2026
Sunday, October 11, 2026

ಶೇ40 ಕಮೀಷನ್ ವಿಷಯ ಬಹಿರಂಗಪಡಿಸಲಿ- ಈಶ್ವರಪ್ಪ

Date:

40 ಪರ್ಸೆಂಟ್ ಕಮಿಷನ್ ಕೊಟ್ಟು ಯಾರು ಗುತ್ತಿಗೆಯನ್ನು ಪಡೆದಿದ್ದಾರೆ ಅವರು ನೇರವಾಗಿ ವಿಚಾರ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

40 ಪರ್ಸೆಂಟ್ ಕಮಿಷನ್ ಬಗ್ಗೆ ಕೇಂದ್ರದಿಂದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಇಲಾಖೆ, ಯಾವ ಮಂತ್ರಿ, ಯಾವ ಶಾಸಕ ಪರ್ಸೆಂಟೇಜ್ ಕೇಳಿದ್ರು ?

ಯಾವ ಗುತ್ತಿಗೆದಾರನಿಗೆ, ಯಾವ ಕಾಮಗಾರಿಗೆ ಕೇಳಿದ್ರು? ಇದರಲ್ಲಿ ಯಾರಾದರೂ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ಆದ್ದರಿಂದ, ಯಾರಾದ್ರೂ ಕಮಿಷನ್ ಕೊಟ್ಟಿದ್ದರೆ ಅದನ್ನು ಮೊದಲು ಬಹಿರಂಗಪಡಿಸಲಿ ಇಲ್ಲವಾದರೆ ಇದು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆ ರೀತಿ ಆಗುತ್ತೆ. ಅನ್ಯವ್ಯಕ್ತಿಗಳ ರಾಜಕೀಯ ಕುಮ್ಮಕ್ಕಿನಿಂದ ಪತ್ರ ಬರೆದರಾ ಎಂಬ ಪ್ರಶ್ನೆ ಕೂಡಾ ಜನರಿಗೆ ಎದುರಾಗುತ್ತೆ? ಅಲ್ಲದೆ ರಾಜಕೀಯ ದಾಳಕ್ಕೆ ಗುತ್ತಿಗೆದಾರರ ಸಂಘ ಇದಿಯೋ ಎಂಬ ಅನುಮಾನ ಆರಂಭವಾಗುತ್ತೆ ಎಂದರು.

ಗುತ್ತಿಗೆದಾರರ ಸಂಘದ ಕೆಂಪಣ್ಣ ಬಳಿ ದಾಖಲೆಯಿದೆ ಎಂದು ಬಹಳ ಹಿಂದಿನಿಂದ ಹೇಳ್ತಾ ಇದ್ದಾರೆ. ಈ ಹಿಂದೆ ಸಿಎಂ ಜೊತೆ ಕೂಡಾ ಅವರು ಸಭೆ ನಡೆಸಿದ್ದಾರೆ. ಆಗಲೂ ಕೆಂಪಣ್ಣ ಬಾಯಿ ಬಿಟ್ಟಿಲ್ಲ. ಪ್ರಧಾನಿ ಕಚೇರಿಯಿಂದ ಕರೆ ಬಂದ ಮೇಲೆ ಮತ್ತೆ ವಿಚಾರ ಮುನ್ನೆಲೆಗೆ ಬಂದಿದೆ. ಆದ್ದರಿಂದ, ಯಾರು ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಷಯ ಬಹಿರಂಗ ಪಡಿಸಲಿ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...