Tuesday, November 18, 2025
Tuesday, November 18, 2025

ಪುಟಿನ್ ಗೆ ತೀವ್ರಸ್ವರೂಪದ ಕಾಯಿಲೆ

Date:

ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್​ ರಕ್ತದ​ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಕುರಿತಾಗಿ ಮಾಜಿ ಬ್ರಿಟಿಷ್​ ಗುಪ್ತಚರರೊಬ್ಬರು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಡೊನಾಲ್ಡ್ ಟ್ರಂಪ್ ಕುರಿತು ಬರೆದಿದ್ದ ಹಾಗೂ 2016ರ ಅಮೆರಿಕದ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವಿತ್ತು ಎಂದು ಆರೋಪಿಸಿದ್ದ ಕ್ರಿಸ್ಟೋಫರ್ ಸ್ಟೀಲ್, ರಷ್ಯಾ ಮತ್ತು ಇತರೆಡೆಯ ಮೂಲಗಳಿಂದ ಪುಟಿನ್ ಅನಾರೋಗ್ಯದ ಸಂಗತಿಗಳು ನಿಜವಾಗಿವೆ.

ಉಕ್ರೇನ್ ಯುದ್ಧಾರಂಭದ ನಂತರ ರಷ್ಯಾಧ್ಯಕ್ಷರ ಅನಾರೋಗ್ಯದ ಕುರಿತಾಗಿ ಹಲವು ಊಹಾಪೋಹಗಳು ಹರಡುತ್ತಿವೆ.
ಅವರು ತೀವ್ರ ಸ್ವರೂಪದ ಖಾಯಿಲೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಪುಟಿನ್ ಅವರನ್ನು ಕಾಡುತ್ತಿರುವ ಅನಾರೋಗ್ಯವು ನಿಖರವಾಗಿ ಏನೆಂದು ಗೊತ್ತಾಗಿಲ್ಲ. ಆದರೆ ಇದು ಗುಣಪಡಿಸಲಾಗದ ಅಥವಾ ಟರ್ಮಿನಲ್ ಯಾವುದಾದರೂ ಆಗಿರಬಹುದು ಎನ್ನಲಾಗುತ್ತಿದೆ. ಇನ್ನೊಂದೆಡೆ, ಪುಟಿನ್ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಎಂದು ರಷ್ಯಾದ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ ಹೆಸರಿಸದ ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿರುವುದನ್ನು ಅಮೆರಿಕದ ನಿಯತಕಾಲಿಕೆ ವರದಿ ಮಾಡಿದೆ.

ಕಳೆದ ವಾರ ರಷ್ಯಾ ವಿಜಯ ದಿನಾಚರಣೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಪುಟಿನ್ ನಿಶಕ್ತರಾಗಿರುವಂತೆ ಕಂಡುಬಂದಿದ್ದರು. ಈ ಕುರಿತ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ

Kuvempu University ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ನ.18ರಂದು...

Agricultural University ರೈತರಿಗೆ ಕೃಷಿಯಿಂದ ಆದಾಯ ಹೆಚ್ಚಬೇಕು.ಕೃಷಿಯಲ್ಲಿ ಆಂದೋಲನವಾಗಬೇಕು- ಸಚಿವ ಎನ್.ಚಲುವರಾಯ ಸ್ವಾಮಿ

Agricultural University ಸರ್ಕಾರದ ವಿವಿಧ ಕಾರ್ಯಕ್ರಮಗಳು, ಯೋಜನೆಗಳು, ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆ,ಹೊಸ...

ಮಾಹಿತಿ ಹಕ್ಕು ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಿ- ಆಯುಕ್ತ ರುದ್ರಣ್ಣ ಹರ್ತಿಕೋಟೆ

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ...