Monday, March 24, 2025
Monday, March 24, 2025

ಕಾಶಿ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆ

Date:

ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿ
ನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಈ ಹೇಳಿಕೆಯ ಬಳಿಕ ನ್ಯಾಯಾಲಯವು ಆ ಸ್ಥಳವನ್ನು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ತಡೆಹಿಡಿಯುವಂತೆ ಆದೇಶಿಸಿರುವುದು ನ್ಯಾಯಯುತವಾಗಿಲ್ಲ. ಹಾಗೂ ಕೋಮುಸೌಹಾರ್ದತೆಯನ್ನು ಹದಗೆಡಿಸುವ ಯತ್ನ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

ನ್ಯಾಯಾಲಯದ ಕಡ್ಡಾಯ ವೀಡಿಯೋಗ್ರಫಿ ಸಮೀಕ್ಷೆಯ ವೇಳೆಯಲ್ಲಿ, ಮುಸ್ಲಿಂರು ನಮಾಜ್ ಗೂ ಮುಂಚೆ ಕೈ ತೊಳೆದುಕೊಳ್ಳುವ ವಜೂಖಾನಾ ಸಮೀಪದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದರು.

ಆದರೆ, ಈ ಹೇಳಿಕೆಯನ್ನು ಅಲ್ಲಗಳೆದಿರುವ ಮಸೀದಿ ನಿರ್ವಹಣಾ ಸಮಿತಿ ವಕ್ತಾರರೊಬ್ಬರು, ಇದು ಕಾರಂಜಿಯ ಭಾಗವಾಗಿದೆ ಎಂದಿದ್ದಾರೆ. ನ್ಯಾಯಾಲಯ ಸಾರ್ವಜನಿಕ ಪ್ರವೇಶ ತಡೆಯಿಡಿಯುವ ಆದೇಶ ಪ್ರಕಟಿಸುವ ಮುಂಚೆ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ಹೇಳುವುದನ್ನು ಸಂಪೂರ್ಣವಾಗಿ ಆಲಿಸಿಲ್ಲ ಎಂದು ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಮಸೀದಿಯಾಗಿದೆ. ಹಾಗೂ ಮಸೀದಿಯಾಗಿಯೇ ಉಳಿಯುತ್ತದೆ. ಇದನ್ನು ದೇವಾಲಯ ಎಂದು ಕರೆಯುವ ಪ್ರಯತ್ನವು ಕೋಮು ಸೌಹಾರ್ದತೆಯನ್ನು ಸೃಷ್ಟಿಸುವ ಪಿತೂರಿಗಿಂತ ಹೆಚ್ಚೇನೂ ಅಲ್ಲ. ಇದು ಸಾಂವಿಧಾನಿಕ ಹಕ್ಕುಗಳು ಮತ್ತು ಕಾನೂನಿಗೆ ವಿರುದ್ಧವಾದ ವಿಷಯವಾಗಿದೆ ಎಂದು ನಿನ್ನೆ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಖಾಲಿದ್ ಸೈಫುಲ್ಲಾ ರಹಮಾನಿ ತಿಳಿಸಿದ್ದಾರೆ.

1937 ರಲ್ಲಿ, ದೀನ್ ಮೊಹಮ್ಮದ್ ವಿರುದ್ಧ ರಾಜ್ಯ ಕಾರ್ಯದರ್ಶಿ ಪ್ರಕರಣದಲ್ಲಿ, ನ್ಯಾಯಾಲಯವು ಮೌಖಿಕ ಸಾಕ್ಷ್ಯ ಮತ್ತು ದಾಖಲೆಗಳ ಆಧಾರದ ಮೇಲೆ ಜ್ಞಾನವಾಪಿ ಮಸೀದಿ ಸಂಕೀರ್ಣ ಮುಸ್ಲಿಂ ವಕ್ಫ್‌ಗೆ ಸೇರಿದೆ. ಅದರಲ್ಲಿ ನಮಾಜ್ ಮಾಡುವ ಹಕ್ಕು ಮುಸ್ಲಿಮರಿಗೆ ಇದೆ ಎಂದು ನಿರ್ಧರಿಸಿತ್ತು. ಮಸೀದಿಯ ವಿಸ್ತೀರ್ಣ ಎಷ್ಟು, ದೇವಸ್ಥಾನದ ವಿಸ್ತೀರ್ಣ ಎಷ್ಟು ಎಂಬುದನ್ನೂ ನ್ಯಾಯಾಲಯ ನಿರ್ಧರಿಸಿತ್ತು.

ಅದೇ ಸಮಯದಲ್ಲಿ, ವಝೂಖಾನಾವನ್ನು ಮಸೀದಿಯ ಆಸ್ತಿಯಾಗಿ ಸ್ವೀಕರಿಸಲಾಯಿತು ಎಂದು ರಹಮಾನಿ ಹೇಳಿದ್ದಾರೆ.

1991 ರಲ್ಲಿ, ಪೂಜಾ ಸ್ಥಳಗಳ ಕಾಯ್ದೆಯನ್ನು ಅಂಗೀಕರಿಸಿದ ಸಂಸತ್ತು 1947 ರಲ್ಲಿದ್ದ ಪೂಜಾ ಸ್ಥಳಗಳನ್ನು ಅದೇ ಸ್ಥಿತಿಯಲ್ಲಿ ನಿರ್ವಹಿಸಲಾಗುವುದು ಎಂದು ಹೇಳುತ್ತದೆ. ಬಾಬರಿ ಮಸೀದಿ ತೀರ್ಪಿನಲ್ಲೂ, ಎಲ್ಲಾ ಸ್ಥಳಗಳು ಪೂಜಾ ಸ್ಥಳಗಳು ಈ ಕಾನೂನಿನ ಅಡಿಯಲ್ಲಿರುತ್ತವೆ ಎಂದು ಹೇಳಿರುವುದಾಗಿ ಅವರು ಹೇಳಿದ್ದಾರೆ.

ಈ ಸಂಬಂಧ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣ ವಿಚಾರಣೆ ಹಂತದಲ್ಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ...

PM Yoga Awards ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ...

PM Yoga Awards 2025 ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards 2025 ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ...