ನೆರೆಯ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಕೈಮೀರಿ ಹೋಗುತ್ತಿರುವ ನಡುವೆ ಅಲ್ಲಿನ ಪ್ರತಿಪಕ್ಷ ಇವತ್ತು ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಗಡಿ ಮಹಾಭಿಯೋಗಕ್ಕೆ ಸಹಿ ಹಾಕಿದೆ.
ಲಂಕಾದ ಪ್ರತಿಪಕ್ಷವಾದ ಸಮಗಿ ಜನ ಬಲವೆಗಯ ನಾಯಕ ಸಜಿತ್ ಪ್ರೇಮದಾಸ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಬದಲಾವಣೆ ಆಗದೇ ನಾವು ಸುಮ್ಮನಾಗೊಲ್ಲ. ಅವಿಶ್ವಾಸ ನಿರ್ಣಯ ಮತ್ತು ಪದಚ್ಯುತಿ ನಿರ್ಣಯಕ್ಕೆ ಸಹಿ ಮಾಡ್ತಾ ಇದ್ದೇವೆ. ಜೊತೆಗೆ ಅಧ್ಯಕ್ಷೀಯ ಪದ್ದತಿ ಬದಲಾವಣೆ ಆಗೋಕೆ ಸಂವಿಧಾನಾತ್ಮಕ ತಿದ್ದುಪಡಿ ಆಗಲಿದೆ ಅಂತ ಹೇಳಿದ್ದಾರೆ.
ಈ ನಿರ್ಣಯಗಳನ್ನ ಮಂಡಿಸೋಕು ಮೊದಲು ಲಂಕಾದ ಪ್ರತಿಪಕ್ಷಗಳಿಗೆ ವಿವಿಧ ಪಕ್ಷಗಳ 40 ಚುನಾಯಿತ ಸದಸ್ಯರ ಸಹಿ ಬೇಕು. ಈಗಾಗಲೇ ಎಸ್‌ಜೆಬಿ ಇಂದ 50 ಜನ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಆ ಕಡೆ ಪ್ರತಿಭಟನಾಕಾರರ ಜೊತೆ ಮಾತಾಡೋಕೆ ತಯಾರಿದ್ದೇವೆ ಎಂದು ಶ್ರೀಲಂಕಾ ಸರ್ಕಾರ ಹೇಳಿದ್ದು ಮಾತುಕತೆಗೆ ಆಹ್ವಾನಿಸಿದೆ.