Thursday, May 14, 2026
Thursday, May 14, 2026

Bharat scout and Guides ವಿಪತ್ತು ಸಂದರ್ಭಗಳಲ್ಲಿ ನೆರವಾಗುವ ಯುವ ಆಪದ್ ಮಿತ್ರ

Date:

Bharat scout and Guides ವಿಪತ್ತು ಸಂದರ್ಭಗಳಲ್ಲಿ ಪ್ರಾಣ ಮತ್ತು ಆಸ್ತಿ ಹಾನಿ ತಡೆಗಟ್ಟಲು, ಯುವ ಸ್ವಯಂ ಸೇವಕರಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಕಮಾಂಡಿಂಗ್ ಆಫೀಸರ್ ಲೆಪ್ಟಿನೆಂಟ್ ಕರ್ನಲ್ ಮಾಣಿಕ್ ಪಟಾನಿಯಾ ಹೇಳಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಸಹಯೋಗದೊಂದಿಗೆ ಶಿವಮೊಗ್ಗದ 300 ಎನ್‌ಸಿಸಿ ಕೆಡೆಟ್‌ಗಳಿಗೆ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವ ಆಪದ್ ಮಿತ್ರ” ನಾಗರೀಕ ರಕ್ಷಣಾ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.

ಯುವ ಆಪದ್ ಮಿತ್ರ ಯೋಜನೆಯು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತ್ ಸೌಟ್ಸ್ & ಗೈಡ್ಸ್ ಕರ್ನಾಟಕದ ಸಹಯೋಗದೊಂದಿಗೆ ರೋವರ್ಸ್, ರೇಂಜರ್ಸ್, ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡುವ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ಯುವ ಜನರಿಗೆ ಪ್ರವಾಹ, ಭೂಕಂಪ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಕೌಶಲ್ಯ ಮತ್ತು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ನ ರೋವರ್ಸ್, ರೇಂಜರ್ಸ್ ಮತ್ತು ದಳನಾಯಕರನ್ನು ತರಬೇತಿ ಶಿಬಿರಗಳಿಗೆ ನಿಯೋಜಿಸಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ತರಬೇತಿ ಪಡೆದವರು ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆ ಮತ್ತು ಸಹಾಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ ಎಂದರು.

Bharat scout and Guides ಜಿಲ್ಲಾ ಆಯುಕ್ತ (ರೋವರ್) ಕೆ.ರವಿ ಅವರು ಯುವ ಆಪದ್ ಮಿತ್ರ ತರಬೇತಿಯ ಬಗ್ಗೆ ಎನ್‌ಸಿಸಿ ಕೆಡೆಟ್‌ಗಳಿಗೆ ವಿವರಣೆ ನೀಡಿದರು. ಆರ್.ಕೆ ಶಂಕರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ.ವಿ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ 300 ಎನ್‌ಸಿಸಿ ಕೆಡೆಟ್‌ಗಳು ಒಂದು ವಾರ ಯುವ ಆಪದ್ ಮಿತ್ರ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು ಮನುಷ್ಯರ ಜವಾಬ್ದಾರಿ- ಬಿ.ಜಿ.ಶಿವಮೂರ್ತಿ

Rotary Club Shivamogga ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು...

Bhadra dam ಮೇ17 ರ ಮಧ್ಯರಾತ್ರಿಯಿಂದ ಭದ್ರಾ ಬಲ ಮತ್ತು ಎಡದಂಡೆ ಕಾಲುವೆಗಳ ಮೂಲಕ ಹರಿಯುತ್ತಿರುವ ನೀರು ಬಂದ್

Bhadra dam ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡ...

Royal Diamond English Medium School ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು- ವೀಣಾ ನಾಯಕ್

Royal Diamond English Medium School ಸಿರಿಗನ್ನಡ ವೇದಿಕೆ, ಮಹಿಳಾ...

Priyanka Kharge ಗ್ರಾಮ ಪಂಚಾಯತ್ ಗಳು ರಾಷ್ಡ್ರಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಭಾಜನ: ಸಶಕ್ತೀಕರಣಕ್ಕೆ ಹಿಡಿದ ಕನ್ನಡಿ- ಸಚಿವ ಪ್ರಿಯಾಂಕ ಖರ್ಗೆ

Priyanka Kharge ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಕರ್ನಾಟಕದ...