Thursday, May 14, 2026
Thursday, May 14, 2026

State Bank of India ಪೊಲೀಸ್ ಇಲಾಖೆಯವರು ಸರ್ಕಾರದಿಂದ ಎಂಓಯು ಪಡೆದ ಬ್ಯಾಂಕುಗಳ ಸೌಲಭ್ಯಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕು- ಬಿ.ನಿಖಿಲ್

Date:

State Bank of India ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸರ್ಕಾರದಿಂದ ಎಂಒಯು ಮಾಡಿಕೊಂಡ ಬ್ಯಾಂಕ್‌ಗಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದರು.
ದಿ: 12-10-2025 ರಂದು ಭದ್ರಾವತಿಯ ಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಮುಳುಗಿ ಮರಣ ಹೊಂದಿದ್ದ ಎಲ್. ಚಂದ್ರಶೇಖರ್, ಆರ್‌ಹೆಚ್‌ಸಿ-60, 8ನೇ ಪಡೆ, ಕೆಎಸ್‌ಆರ್‌ಪಿ, ಶಿವಮೊಗ್ಗ ಇವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನೀಡಲಾದ ರೂ.1 ಕೋಟಿ ಪರಿಹಾರ ಚೆಕ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶನಿವಾರ 8ನೇ ಪಡೆ, ಕೆಎಸ್‌ಆರ್‌ಪಿ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿ ಶನಿವಾರ ದಿವಂಗತ ಎಲ್ ಚಂದ್ರಶೇಖರ್‌ರವರ ಪತ್ನಿ ಶ್ರೀಮತಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್‌ನ್ನು ವಿತರಣೆ ಮಾಡಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೃತ ಎಲ್ ಚಂದ್ರಶೇಖರ್‌ರವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶಿವಮೊಗ್ಗ ಶಾಖೆಯಲ್ಲಿ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಖಾತೆದಾರರಾಗಿರುತ್ತಾರೆ. ಆದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಈ ಸೌಲಭ್ಯ ದೊರೆಯುತ್ತಿದೆ ಎಂದರು.
ಎಸ್. ಯುವಕುಮಾರ್, ಕಮಾಂಡೆಂಟ್, 8ನೇ ಪಡೆ, ಕೆಎಸ್‌ಆರ್‌ಪಿ ಶಿವಮೊಗ್ಗ ಇವರು ಮಾತನಾಡಿ, ನೌಕರರು ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಅಪಘಾತ, ದುರ್ಘಟನೆಗಳು ಸಂಭವಿಸಿದಾಗ ಕುಟುಂಬವು ಆರ್ಥಿಕ ದುಸ್ಥಿತಿಗೆ ಒಳಗಾಗದಂತೆ ತಡೆಯುವ ಸಲುವಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಹಾಗೂ ಪೊಲೀಸ್ ಸ್ಯಾಲರಿ ಪ್ಯಾಕೇಜ್‌ಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
State Bank of India ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಮುಚಾರ್ಲರವರು ಎಲ್ ಚಂದ್ರಶೇಖರ್‌ರವರ ಪತ್ನಿ ಶ್ರೀಮತಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್‌ನ್ನು ವಿತರಣೆ ಮಾಡಿದರು ಈ ವೇಳೆ ಎಸ್‌ಬಿಐ ನ ಪ್ರಾದೇಶಿಕ ಪ್ರಬಂಧಕರು ವಿಜಯ್ ಸಾಯಿ ಮದುಗುಲ, ಎಸ್‌ಬಿಐ(ಡಿ-ವಿಎಎಸ್)ಮುಖ್ಯ ಪ್ರಬಂಧಕರಾದ ಕೆ.ಪುಷ್ಪಲತ, ಎಸ್‌ಬಿಐ ಬಿ ಹೆಚ್ ರಸ್ತೆ ಶಾಖೆಯ ಮುಖ್ಯ ಪ್ರಬಂಧಕರಾದ ಪ್ರಕಾಶ್‌ಕುಮಾರ್, ಮತ್ತು 8ನೇ ಪಡೆಯ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು ಮನುಷ್ಯರ ಜವಾಬ್ದಾರಿ- ಬಿ.ಜಿ.ಶಿವಮೂರ್ತಿ

Rotary Club Shivamogga ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು...

Bhadra dam ಮೇ17 ರ ಮಧ್ಯರಾತ್ರಿಯಿಂದ ಭದ್ರಾ ಬಲ ಮತ್ತು ಎಡದಂಡೆ ಕಾಲುವೆಗಳ ಮೂಲಕ ಹರಿಯುತ್ತಿರುವ ನೀರು ಬಂದ್

Bhadra dam ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡ...

Royal Diamond English Medium School ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು- ವೀಣಾ ನಾಯಕ್

Royal Diamond English Medium School ಸಿರಿಗನ್ನಡ ವೇದಿಕೆ, ಮಹಿಳಾ...

Priyanka Kharge ಗ್ರಾಮ ಪಂಚಾಯತ್ ಗಳು ರಾಷ್ಡ್ರಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಭಾಜನ: ಸಶಕ್ತೀಕರಣಕ್ಕೆ ಹಿಡಿದ ಕನ್ನಡಿ- ಸಚಿವ ಪ್ರಿಯಾಂಕ ಖರ್ಗೆ

Priyanka Kharge ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಕರ್ನಾಟಕದ...