Monday, June 15, 2026
Monday, June 15, 2026

ಕ್ರಿಕೆಟ್ ದಾಖಲೆ ಮಾಡಿದ ದಂಪತಿ

Date:

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‍ ಕೀಪರ್- ಬ್ಯಾಟರ್ ಅಲಿಸ್ಸಾ ಹೀಲಿ, ಮಹಿಳಾ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಫೈನಲ್‍ ನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು 71 ರನ್‍ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದಿದೆ.

ಇಂಗ್ಲೆಂಡ್ ವಿರುದ್ಧದ ಫೈನಲ್‍ನಲ್ಲಿ 170 ರನ್ ಸಿಡಿಸಿದ ಅವರು, ಈ ಹಿಂದಿನ ವಿಜೇತರ ಪ್ರತಿಷ್ಠಿತ ರೋಲ್-ಕಾಲ್‍ನಲ್ಲಿ ತಮ್ಮ ಹೆಸರು ದಾಖಲಿಸಿ, ಆಸ್ಟ್ರೇಲಿಯಾದ ಮಾಜಿ ನಾಯಕಿ ಕರೆನ್ ರೋಲ್ಟನ್ (2005) ಅವರ ಜತೆ ದಾಖಲೆಗೆ ಸೇರಿದ್ದಾರೆ. ಜತೆಗೆ ಸ್ಟಾರ್ ಆಟಗಾರ್ತಿಯರು (ಇಂಗ್ಲೆಂಡ್‍ನ ಕ್ಲಾರೆ ಟೇಲರ್ 2009, ನ್ಯೂಝಿಲೆಂಡ್‍ನ ಸೂಸಿ ಬಟೇಸ್ 2013 ಮತ್ತು ಇಂಗ್ಲೆಂಡ್‍ನ ಟ್ಯಾಮಿ ಬಿಯಮಂಟ್, 2017) ಕೂಡಾ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದರು.
ಅಲಿಸ್ಸಾ ಹೀಲಿ ತಮ್ಮ ಪತಿ ಮಿಚೆಲ್ ಸ್ಟಾರ್ಕ್ ಅವರ ಸಾಧನೆಯನ್ನೂ ಸರಿಗಟ್ಟಿದ್ದು, ಈ ಎಡಗೈ ವೇಗದ ಬೌಲರ್ 2015ರ ಐಸಿಸಿ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದಾಗ ಟೂರ್ನಿಯ ಅತ್ಯುತ್ತಮ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಅಲಿಸ್ಸಾ ಹೀಲಿ (509) ನ್ಯೂಝಿಲೆಂಡ್‍ನಲ್ಲಿ ಗರಿಷ್ಠ ರನ್ ಗಳಿಸಿದ ಖ್ಯಾತಿಗೂ ಪಾತ್ರರಾದರು. ಸೆಮಿಫೈನಲ್ ಮತ್ತು ಫೈನಲ್‍ನಲ್ಲಿ ಅವರ ಶತಕಗಳು ಆಸ್ಟ್ರೇಲಿಯಾಗೆ ದಾಖಲೆ ಏಳನೇ ಬಾರಿ ವಿಶ್ವಕಪ್ ಗೆಲ್ಲಲು ನೆರವಾದವು. 32 ವರ್ಷದ ಅಲಿಸ್ಸಾ ಹೀಲಿ 56.55 ಸರಾಸರಿಯಲ್ಲಿ ರನ್ ಗಳಿಸಿದ್ದಲ್ಲದೇ, ನಾಲ್ಕು ಕ್ಯಾಚ್ ಹಾಗೂ ನಾಲ್ಕು ಸ್ಟಂಪಿಂಗ್ ಮೂಲಕ ಎಂಟು ವಿಕೆಟ್‌ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ಡಿ.ಕೆ. ಶಿವಕುಮಾರ್

D.K. Shivakumar ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ, ಕಾನೂನು...

B.Y. Raghavendra ಕೆರೆ ಬಸವಣ್ಣ ಶೇಡಿನ ಕೆರೆ” ಲೋಕಾರ್ಪಣೆ!

B.Y. Raghavendra ಶ್ರೀ ಡಿ. ಯೇಸು ಪ್ರಕಾಶ್ ಅವರ ಸ್ಮರಣಾರ್ಥ, ಸಾರಾ...

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...