2022ರ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಸ್ಟ್ರೇಲಿಯ ಆಟಗಾರ್ತಿ ಆ್ಯಶ್ಲೀ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ನೂತನ ಚಾಂಪಿಯನ್ ಹೊರಹೊಮ್ಮಿದ್ದಾರೆ.
ರಾಡ್ ಲೇವರ್ ಅಂಕಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಅಮೇರಿಕಾದ 27ನೇ ಶ್ರೇಯಾಂಕದ ಆಟಗಾರ್ತಿ ಡೇನಿಯಲ್ ಕಾಲಿನ್ಸ್ ಅವರನ್ನು 6-3,7-6 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಆ್ಯಶ್ಲೀ ಬಾರ್ಟಿ ಅವರು ಮುಡಿಗೇರಿಸಿಕೊಂಡಿದ್ದಾರೆ.
ಮೊದಲನೇ ಸೆಟ್ ನಲ್ಲಿ 6-3 ರ ಅಂತರದಿಂದ ಸುಲಭವಾಗಿ ಪಾರ್ಟಿ ಗೆಲುವು ಸಾಧಿಸಿದರು. ಎರಡನೇ ಸೆಟ್ನಲ್ಲಿ ಅಮೆರಿಕ ಆಟಗಾರ್ತಿ ಇಂದ ತೀವ್ರ ಪೈಪೋಟಿ ಎದುರಾಗಿತ್ತು. 5-1 ಮುನ್ನಡೆಯಲ್ಲಿದೆ ಕಾಲಿನ್ಸ್ ಇನ್ನೇನು ಎರಡನೇ ಸೆಟ್ ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಆ್ಯಶ್ಲೀ ಬಾರ್ಟಿ ಚೇತರಿಕೆಯ ಆಟವಾಡಿ 6-6 ರ ಸಮಬಲ ಸಾಧಿಸಿದರು. ಅಂತಿಮವಾಗಿ 7-6 ರಿಂದ ಆ ಸೆಟ್ ಬಾರ್ಟಿ ಪಾಲಾಯಿತು.
ಹದಿನೈದೂವರೆ ಕೋಟಿ ರೂಪಾಯಿ ಮೊತ್ತದ ಪ್ರಶಸ್ತಿ ಬಾರ್ಟಿ ಅವರು ಪಾಲಾಯಿತು.
ಆ್ಯಶ್ಲೀ ಪಾಲಿಗೆ ಇದು ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದೆ. ಪಾಟೀಲ್ ಅವರು ಇದಕ್ಕೂ ಮೊದಲು ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಚಾಂಪಿಯನ್ ಆಗಿದ್ದರು. ಇದರೊಂದಿಗೆ ಪಾರ್ಟಿ ಅವರು ಮೂರು ಅಂಕಣಗಳಲ್ಲಿ ಚಾಂಪಿಯನ್ ಆದ ಅಮೇರಿಕಾದ ಸೆರೆನಾ ವಿಲಿಯಮ್ಸ್ ಸಾಲಿಗೆ ಸೇರಿದ್ದಾರೆ.