ಸಾಹಿತ್ಯದ ಚಟುವಟಿಕೆಗಳನ್ನು ನಡೆಸಲು ವಿಸ್ತಾರವಾದ ಕಾರ್ಯಕ್ಷೇತ್ರವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುತ್ತಾ ಜನರಿಗೂ ಇದನ್ನು ಮುಟ್ಟಿಸುವ ಕೆಲಸವಾಗಲಿ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಮಂಜುನಾಥ್ ಅವರು ಆಶಿಸಿದರು.
ಜ. 23 ರಂದು ನಡೆದ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಣಿಯ ಮೊದಲ ಸಭೆಯಲ್ಲಿ ಭಾಗವಹಿಸಿದರು. ಮಂಜುನಾಥ್ ಅವರು, ಮನೆಯಂಗಳಕ್ಕೆ ಮತ್ತು ಶಾಲೆಯೆಡೆಗೆ ಸಾಹಿತ್ಯ ಕಾರ್ಯಕ್ರಮಗಳು, ದತ್ತಿ ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ಪರಿಚಯ ಸೇರಿದಂತೆ ವೈವಿಧ್ಯಮಯ ಕಾರ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಹಾಗೆಯೇ ನಾಡು ನುಡಿಗೆ ಧಕ್ಕೆಯಾಗುವ ಸಂದರ್ಭ ಬಂದಾಗ ಯಾವುದೇ ಅಳುಕಿಲ್ಲದೆ ಇದನ್ನು ವಿರೋಧಿಸುವ ಧೈರ್ಯವನ್ನೂ ತೋರಬೇಕು ಎಂದರು.
ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಲು ಮತ್ತು ನಿರ್ವಹಣಾ ವೆಚ್ಚವನ್ನು ಕೂಡ ನೀಡುವಂತೆ ಕೋರಲಾಗಿದೆ. ಸಾಹಿತ್ಯದ ಚಟುವಟಿಕೆಗಳನ್ನು ಹೆಚ್ಚೆಚ್ಚು ನಡೆಸುವಂತೆ ಸೂಚಿಸಿದರು.
ಇದಕ್ಕೆ ಮೊದಲು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿಯ ಮೊದಲ ಸಭೆಯು ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ದಿನಗಳಲ್ಲಿ ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಕುರಿತಾಗಿ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಾಗೆಯೇ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಏರ್ಪಡಿಸುವ ಕುರಿತಾಗಿ ಮತ್ತು ಈ ನೂತನ ಕಾರ್ಯಕಾರಿ ಸಮಿತಿಗೆ ಸಲಹೆಗಾರರಾಗಿ ಕೆಲವರನ್ನು ಸೇರಿಸಿಕೊಳ್ಳುವ ಕುರಿತಾಗಿಯೂ ಚರ್ಚಿಸಲಾಯಿತು.
ಸಭೆಯಲ್ಲಿ ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ , ಕೋಶಾಧಿಕಾರಿ ಹಾಲಿಗೆ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಾಬಲೇಶ್ವರ ಹೆಗಡೆ, ಕೋಣಂದೂರು ಎಸ್. ಇ.ಅಶೋಕ್, ಆರ್.ಎಂ.ಧರ್ಮಕುಮಾರ್ , ಜಿ.ಕೆ.ಸತೀಶ್, ಕೆ.ಎಸ್. ನಾಗರತ್ನ, ಸೋಮಶೇಖರ್ ಟಿ.ಜಿ. , ಕೆ.ಜಿ. ಮಹಮ್ಮದ್ , ಎಚ್.ಸಿ. ಪ್ರಸನ್ನಕುಮಾರ್ ಅವರು ಪಾಲ್ಗೊಂಡು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ
Date: