ನಮ್ಮ ರಾಜ್ಯದಲ್ಲಿ ರಕ್ತಹೀನತೆ ಮತ್ತು ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಗಣನೀಯವಾಗಿ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಮಹಿಳೆಯರಲ್ಲಿ ಶೇ. 48ರಷ್ಟು ರಕ್ತಹೀನತೆ ಸಮಸ್ಯೆ ಏರಿಕೆಯಾಗಿದೆ. ಆರು ತಿಂಗಳಿನಿಂದ ಸುಮಾರು ಐದು ವರ್ಷದವರೆಗಿನ ಮಕ್ಕಳಲ್ಲಿ ಈ ಪ್ರಮಾಣ ಶೇ. 66 ರಷ್ಟು ಹೆಚ್ಚಾಗಿದೆ.
2015-16 ವರ್ಷಕ್ಕೆ ಹೋಲಿಸಿದರೆ ರಕ್ತಹೀನತೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಶೇ.5ರಷ್ಟು ಹೆಚ್ಚಾಗಿದೆ. ಮತ್ತು ಮಹಿಳೆಯರ ಸಂಖ್ಯೆಯಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ.
“ಅಪೌಷ್ಟಿಕತೆ ಹಾಗೂ ಕಬ್ಬಿಣ ಅಂಶ ದೇಹದಲ್ಲಿ ಕಡಿಮೆಯಾಗಿರುವುದರಿಂದ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆ ಉಂಟಾದಾಗ ರಕ್ತದ ಮೂಲಕ ದೇಹದಾದ್ಯಂತ ಆಮ್ಲಜನಕದ ಪೂರೈಕೆ ಸಾಮರ್ಥ್ಯ ಕಡಿಮೆಯಾಗುತ್ತದೆ.
ಆರೋಗ್ಯವಂತ ಮಹಿಳೆಯಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಪ್ರತಿ ಡೆಸಿಲೀಟರ್ ಗೆ 12ಗ್ರಾಂ ಇರಬೇಕು. ಅರ್ಧ ವರ್ಷಕ್ಕಿಂತ ಕಡಿಮೆ ಪ್ರಾಯದ ಮಗುವಿಗೆ ಪ್ರತಿದಿನ 0. 27 ಮಿಲಿಗ್ರಾಂ ಕಬ್ಬಿಣಾಂಶ ಅಗತ್ಯವಾಗಿರುತ್ತದೆ ” ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಕೆ . ಪಿ ಬಾಲರಾಜ್ ಅವರು ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಶೇ. 62. 8ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ. 67.1ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಿದರಷ್ಟೇ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ರಕ್ತಹೀನತೆ ಪ್ರಸವಪೂರ್ವ ಅಥವಾ ಪ್ರಸವ ನಂತರದಲ್ಲಿ ತಾಯಂದಿರ ಸಾವಿಗೂ ಕಾರಣವಾಗಬಹುದು. ನಿಶ್ಯಕ್ತಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಸಿತ, ಅವಧಿಗೂ ಮುನ್ನ ಪ್ರಸವ, ಕಡಿಮೆ ತೂಕದ ಶಿಶುಗಳ ಜನನಕ್ಕೆ ಕಾರಣವಾಗಬಹುದಾಗಿದೆ. ರಕ್ತಹೀನತೆಗೆ ಕಬ್ಬಿನ ವಿಷ ಕಡಿಮೆ ಇರುವುದೇ ಪ್ರಮುಖ ಕಾರಣ.
15-19 ವರ್ಷದ ಇವತ್ತು ಯರಲ್ಲಿ ರಕ್ತಹೀನತೆಯ ಪ್ರಮಾಣ 2015 ಕ್ಕೆ ಹೋಲಿಸಿದರೆ, ಶೇ.4 ರಷ್ಟು ಹೆಚ್ಚಾಗಿದೆ. ಈ ಸಮಯದಲ್ಲಿಯೇ ಪುರುಷರಲ್ಲಿವೂ ಕೂಡ ರಕ್ತಹೀನತೆ ಸಮಸ್ಯೆ ಹೆಚ್ಚಾಗಿರುವುದು ಕಂಡುಬಂದಿದೆ.
ರಕ್ತಹೀನತೆಗೆ ರಕ್ತದ ನಷ್ಟ ಅಥವಾ ಕೆಂಪು ಕಣಗಳನ್ನು ನಾಶ ಪ್ರಮುಖ ಕಾರಣವಾಗಿದೆ. ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ. ಜಂತುಹುಳುಗಳ ಕಾಣಿಸಿಕೊಳ್ಳುವುದು. ಮೂಲವ್ಯಾಧಿ, ಮಲೇರಿಯಾ, ಕುಕ್ಕೆ ಹುಳುಗಳು, ಪೌಷ್ಟಿಕಾಂಶದ ಕೊರತೆ ಸಹ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿ ಕಬ್ಬಿಣಾಂಶ ಹೆಚ್ಚಿರುವ ಹಾಗೂ ವಿಟಮಿನ್ ಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು. ಹಸಿರು ಸೊಪ್ಪುಗಳು, ಒಣ ಹಣ್ಣು, ಕಾಳುಗಳು ವಿಟಮಿನ್ ಬಿ-12 ಪೂರ್ವಕವಾದ ಆಹಾರವನ್ನು ಸೇವಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.