ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಪಟು ಸುಹಾಸ್ ಯತಿರಾಜ್ ಅವರಿಗೆ ಮಾನ್ಯ ರಾಷ್ಟ್ರಪತಿಗಳು ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ..
ಕೆಲವು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿತ್ತು. 35 ಕ್ರೀಡಾಪಟುಗಳ ಪೈಕಿ ಯಲ್ಲಿ ಸುಹಾಸ್ ಕೂಡ ಒಬ್ಬರು. ನವದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಾನ್ಯ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ ಅವರಿಂದ ಸುಹಾಸ್ ಯತಿರಾಜ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು ..
ಅರ್ಜುನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್ ಪಡೆದಿದ್ದಾರೆ. ಪ್ರತಿಯೋರ್ವ ಕನ್ನಡಿಗನಿಗೆ ಅಭಿಮಾನದ ಸಂಗತಿಯಾಗಿದೆ.