Monday, April 13, 2026
Monday, April 13, 2026
Home Blog Page 711

Government Industrial Training Institute ಗಾಜನೂರಿನ ಸರ್ಕಾರಿ ಐಟಿಐ ನಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ

0

Government Industrial Training Institute 2024 ನೇ ಸಾಲಿನಲ್ಲಿ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್,ಸಿ ಉತ್ತೀರ್ಣರಾದವರಿಗೆ ಸಿಓಪಿಎ(ಎನ್‍ಸಿವಿಟಿ), ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಇನ್ಸುಟ್ರುಮೆಂಟ್ ಮೆಕ್ಯಾನಿಕ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಇಂಡಸ್ಟ್ರಿಯಲ್ ರೋಬೊಟಿಕ್ ಆ್ಯಂಡ್ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್, ಅಡ್ವಾನ್ಸ್ ಸಿ.ಎನ್.ಸಿ ಮೆಷಿನಿಂಗ್, ಆರ್ಟಿಸನ್ ಯುಸಿಂಗ್ ಅಡ್ವಾನ್ಸಡ್ ಟೂಲ್, ಬೇಸಿಕ್ ಡಿಸೈನರ್ ಅನ್ ವಿರ್ಚುವಲ್ ವೆರಿಫಿಯರ್, ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಅನ್ ಆಟೋಮೇಷನ್ ಹುದ್ದೆಗಳಿಗೆ ತರಬೇತಿ ನೀಡಲಾಗುವುದು.
Government Industrial Training Institute ಆಸಕ್ತ ಆಭ್ಯರ್ಥಿಗಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ- ಶಿವಮೊಗ್ಗ, ಗಾಜನೂರು ಅಂಚೆ ಇಲ್ಲಿಗೆ ಭೇಟಿ ನೀಡಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆಯ್ಕೆ ಮಾಡಿಕೊಂಡ ಸರ್ಕಾರಿ ಐಟಿಐ ಗಳಲ್ಲಿ ಮೂಲ ದಾಖಲಾತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ತೆರಳಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9448530349/9449775239 ಗಳನ್ನು ಸಂಪರ್ಕಿಸುವುದು.

Hongirana Ranga tanda ಜೂನ್ 1ರಂದು ದನಕಾಯೋರ ದೊಡ್ಡಾಟ ಕೃಷ್ಣ ಸಂಧಾನ ನಾಟಕ ಪ್ರದರ್ಶನ

0

Hongirana Ranga tanda ಶಿವಮೊಗ್ಗ ನಗರದ ಹೊಂಗಿರಣ ರಂಗತಂಡವು ಜೂನ್ 1ರಂದು ದನಾ ಕಾಯೋರ ದೊಡ್ಡಾಟ ಶ್ರೀಕೃಷ್ಣ ಸಂಧಾನ ಎಂಬ ಹಾಸ್ಯ ನಾಟಕವನ್ನು ಕುವೆಪು ರಂಗಮಂದಿರದಲ್ಲಿ ಸಂಜೆ 7ಕ್ಕೆ ಏರ್ಪಡಿಸಿದೆ. ಜೊತೆಗೆ ಎಸ್ಸೆಸೆಲ್ಸಿ ಮತ್ತು ಪಿಯುನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಈ ನಾಟಕ ತಂಡದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು ಎಂದು ಹೊಂಗಿರಣ ತಂಡದ ಅಧ್ಯಕ್ಷ ಸಾಸ್ವೆಹಳ್ಳಿ ಸತೀಶ್ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 27 ವರ್ಷಗಳಿಂದ ಹೊಂಗಿರಣ, ಶಿವಮೊಗ್ಗ ತಂಡವು ನಿರಂತರ ರಂಗ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಹೆಸರಾಗಿದೆ. ತಂಡದ ಹೆಸರಿನ ಅಡಿ ಬರಹವೇ ಹೇಳುವ ‘ಸೃಜನಶೀಲ ರಂಗ ಪಯಣ’ ದ ಮೂಲಕ ನೂರಾರು ಹೊಸತನದ ನಾಟಕಳನ್ನು ರಂಗಕ್ಕೆ ತಂದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಶಿವಮೊಗ್ಗಕ್ಕೆ ತಂದ ಕೀರ್ತಿ ತಂಡದ್ದು. ರಂಗಭೂಮಿಗಷ್ಟೆ ಸಿಮಿತವಾಗದೇ ಪುಸ್ತಕ ಪ್ರಕಟಣೆ, ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ಮಾಣ, ಸಿನಿಮಾ ಪ್ರದರ್ಶನ ಆಯೋಜನೆ, ಬೀದಿ ನಾಟಕ, ಸ್ವಯಂ ಪ್ರೇರಿತ ಜಾಗೃತಿ ಕಾರ್ಯಕ್ರಮ, ಸಂಗೀತ ಕಛೇರಿ ಕಾರ್ಯಕ್ರಮ, ಮಸ್ತಕ ಬಿಡುಗಡೆ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ತಂಡವು ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ ಎಂದರು.

ಜೂನ್ 1 ರಂದು ‘ದನಾ ಕಾಯೋರ ದೊಡ್ಡಾಟ ಮತ್ತು ಶ್ರೀ ಕೃಷ್ಣ ಸಂಧಾನ’ ಎಂಬ ಹಾಸ್ಯ ನಾಟಕ ಪ್ರದರ್ಶಿತವಾಗಲಿದೆ. ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಸೀಸನ್ -3 ರ ಫೈನಲಿಸ್ಟ್ ಆಗಿದ್ದ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿರುವ ತಂಡದ ‘ಚಂದ್ರಶೇಖರ ಹಿರೇಗೋಳಿನಲ್ (ಹೊಂಗಿರಣ ಚಂದ್ರು ನಿರ್ದೇಶನ ಮಾಡಿ ನಟಿಸಿದ್ದಾರೆ. ‘ಲಕ್ಷ್ಮೀ ನಿವಾಸ’ ಧಾರವಾಹಿಯ ವೆಂಕಿ ಪಾತ್ರದಲ್ಲಿ ಮಿಂಚುತ್ತಿರುವ ತಂಡದ ಕಲಾವಿದ ಚಂದ್ರಶೇಖರ ಶಾಸ್ತ್ರಿ ಜೊತೆಗೆ ಹಲವು ಕಿರುತೆರೆ-ಹಿರಿತೆರೆಯಲ್ಲಿ ಗುರುತಿಸಿಕೊಂಡ ತಂಡದ ಕಲಾವಿದರು ಅಭಿನಯಿಸಲಿದ್ದಾರೆ ಎಂದರು.

Hongirana Ranga tanda ಈ ಪ್ರದರ್ಶನಕ್ಕೆ ಒಬ್ಬರಿಗೆ ರೂ 50 ನ್ನು ಪ್ರೋತ್ಸಾಹ ದರವನ್ನಾಗಿ ನಿಗದಿ ಮಾಡಲಾಗಿದೆ. ಮುಂಗಡ ಟಿಕೆಟ್‌ಗಳು ಕ್ರೀಡಾ ಲೋಕ (ಉಲ್ಲಾಸ್ ಸ್ಪೋರ್ಟ್ಸ್) ಶ್ರೀನಿಧಿ ಕಾಂಪ್ಲೆಕ್ಸ್, ಗೋಪಿ ಸರ್ಕಲ್, ಶಿವಮೊಗ್ಗ ಇಲ್ಲಿ ದೊರೆಯುತ್ತವೆ. ಈಗಾಗಲೇ ಈ ನಾಟಕ ಸುಮಾರು 95 ಕ್ಕೂ ಹೆಚ್ಚಿನ ಪ್ರದರ್ಶನ ಕಂಡಿದ್ದು ನಾಡಿನ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ ಎಂದ ಅವರು, ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ರ‍್ಯಾಂಕ್ ಬಂದ ತಂಡದ ಕಲಾವಿದರಾದ ಕೆ.ಸಿ ಚುಕ್ಕಿ ಹಾಗೂ ನಾದ ಹಾಲಸ್ವಾಮಿ ಜೊತೆಗೆ ರಂಗಭೂಮಿ ವಿಷಯದಲ್ಲಿ ಪಿ ಹೆಚ್ ಡಿ ಪಡೆದ ಲವ ಜಿ ಆರ್, ಡಿಲಿಟ್ ಪದವಿ ಪಡೆದ ಗಣೇಶ್ ಕೆಂಚನಾಳ ಅವರನ್ನು ಸನ್ಮಾನಿಸಲಾಗುವುದು ಎಂದರು.

Siddhan Gowda Patil ಪ್ರಭಾವಿ ವ್ಯಕ್ತಿ ದೌರ್ಜನ್ಯವೆಸಗಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ನೀಡುತ್ತಿದ್ದೇವೆ- ಸಿದ್ಧನಗೌಡ ಪಾಟೀಲ್

0

Siddhana Gowda Patil ದೇವೇಗೌಡರೆ ನಿಮಗೆ ನೈತಿಕತೆ ಇದ್ರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದಿರಲ್ಲ ಅದನ್ನ ಉಳಿಸಿಕೊಳ್ಳಿ’ ಎಂದು ಹಿರಿಯ ಹೋರಾಟಗಾರ ಸಿದ್ದನಗೌಡ ಪಾಟೀಲ್ ಸವಾಲು ಹಾಕಿದರು.
ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನಾವಿಲ್ಲಿ ಸೇರಿರುವುದು ಹೆಮ್ಮೆಯ ಸಂಗತಿಯಲ್ಲವಾದರೂ ಇಂತಹ ಪರಿಸ್ಥಿತಿಯನ್ನು ಈ ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಂದುಕೊಟ್ಟಿದೆ. ಜಾತಿಯ ಬಲದಿದಂದ, ಹಣದ ಬಲದಿಂದ ತಾನು ಇರುವ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಪರಿಸ್ಥಿತಿ ಇಂದುನೆನ್ನೆಯದಲ್ಲ. ಹಾಸನದಲ್ಲಿ ನಡೆದಿರುವ ಈ ದೌರ್ಜನ್ಯವನ್ನು ಸರ್ಕಾರದ ಹೆಗಲಿಗೆ ಬಿಡದೆ, ಈ ರಾಜ್ಯದ ಜನಪರ ಚಳುವಳಿಗಳು ಜವಾಬ್ದಾರಿವಹಿಸಿ ಮಾಡುತ್ತಿರುವ ಹೋರಾಟ, ಈ ರಾಜ್ಯದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ” ಎಂದರು.

“ಕ್ರಿಮಿಲ್‌ಗಳು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಈ ದೇಶದಲ್ಲಿ ರಾಜಕಾರಣಿಗಳು ಆಗ್ತಾ ಇರುವ ಸಂದರ್ಭದಲ್ಲಿ, ಜನಪರ ಸಂಘಟನೆಗಳು ವಾಚ್‌ಡಾಗ್ ರೀತಿ ಕೆಲಸಮಾಡಬೇಕಿದೆ” ಎಂದರು.
“ಹಾಸನದಲ್ಲಿ ಹಲವು ದಶಕಗಳ ಹಿಂದೆ ನಡೆದ ನುಗ್ಗೆಹಳ್ಳಿ ನೀರಿನ ಹೋರಾಟದ ಸಂದರ್ಭದಲ್ಲಿ ಅಲ್ಲಿನ ಹಳ್ಳಿಯ ಮಹಿಳೆಯರ ಮೇಲೂ ಪೊಲೀಸರು ದೌರ್ಜನ್ಯ ಎಸಗಿಸುವಂತಹ, ಜೈಲಿಗಟ್ಟುವ ಕೆಲಸ ಮಾಡಿದ್ದ ದೇವೇಗೌಡರಿಗೆ ಇಲ್ಲಿನ ಜನ ಅಂದೇ ಸರಿಯಾದ ಪಾಠ ಕಲಿಸಿದ್ದಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದು ಹೇಳಿದರು.

Siddhana Gowda Patil “ದೇವೇಗೌಡರು ಮೊಮ್ಮಗನಿಗೆ ಒಂದು ಎಚ್ಚರಿಕೆ ಪತ್ರ ಬರೆದಿದ್ದರು.., ಎಲ್ಲಿದ್ದರೂ ಬಂದು ಶರಣಾಗು ಅಂತ. ಆದ್ರೆ, ನಾನು ನಿಮಗೆ ನೇರವಾಗಿ ಒಂದು ಮಾತನ್ನು ಹೇಳ್ತೇನೆ, ನಿಮಗೆ ನೈತಿಕತೆ ಇದ್ರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದಿರಲ್ಲ ಅದನ್ನ ಉಳಿಸಿಕೊಳ್ಳಿ. 4ರಂದು ಫಲಿತಾಂಶ ಬಂದ ನಂತರ ದೇವೇಗೌಡರ ಕುಟುಂಬದ ದನಿಗಳು ಎನಾಗುತ್ತವೋ ಗೊತ್ತಿಲ್ಲ. ಆದರೆ, ನಾವಂತೂ ನಿಮ್ಮ ಕೃತ್ಯವನ್ನು ಖಂಡಿಸದೆ, ತಕ್ಕ ಪಾಠವನ್ನು ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೊಟ್ಟು ಹೋಗುತ್ತಿದ್ದೇವೆ. ಪ್ರಜ್ವಲನಂತಹ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಒಗ್ಗಟ್ಟಿನ ಹೋರಾಟ ಮಾಡುತ್ತೇವೆ” ಎಂದರು

Bhima Showroom ಭೀಮಾ ಷೋರೂಂ ನಲ್ಲಿ ಚಿನ್ನ ಖರೀದಿಗೆ ಬಂದ ಈರ್ವರು ಮಹಿಳೆಯರು ಯಾಮಾರಿಸಿ ಚಿನ್ನದ ಲಾಕೆಟ್ ಅಪಹರಣ

0

Bhima Showroom ಶಿವಮೊಗ್ಗ ನಗರದ ಬಿಹೆಚ್ ರಸ್ತೆಯಲ್ಲಿರುವ ಭೀಮಾ ಚಿನ್ನಾಭರಣಗಳ ಮಾರಾಟದ ಶೋರೂಂನಲ್ಲಿ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದು 27,600 ರೂ ಮೌಲ್ಯದ 3 ಲಾಕೆಟ್ ಗಳನ್ನು ಕಳುವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಮೇ 10 ರಂದು ಅಕ್ಷಯ ತೃತೀಯದಿನದಂದು ನಡೆದ ಕಳುವಿನ ಪ್ರಕರಣ ಎರಡು ದಿನಗಳ ಹಿಂದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೋರೂಂನಲ್ಲಿದ್ದ ಸ್ಟಾಕ್ ತಪಾಸಣೆ ಮಾಡಲು ಮುಂದಾದ ಮ್ಯಾನೇಜರ್ ಗೆ 3 ಚಿನ್ನದ ಲಾಕೆಟ್ ಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ.
Bhima Showroom ನಂತರ ಸಿಸಿ ಟಿವಿಯನ್ನು ತಪಾಸಣೆ ನಡೆಸಿದಾಗ ಅಕ್ಷಯ ತೃತೀಯ ದಿನದಂದು ಶೋರೂನಲ್ಲಿ ಚಿನ್ನದ ಖರೀದಿಗೆ ರಶ್ ಇತ್ತು. ಈ ಸಮಯದಲ್ಲಿ ಮಧ್ಯಾಹ್ನ ಬಂದ ಇಬ್ಬರು ಮಹಿಳೆಯರು ಮತ್ತು ಓರ್ವ ಯುವತಿ ಕೈಚಳಕ ತೋರಿರುವುದು ಪತ್ತೆಯಾಗಿದೆ.
ಲಾಕೆಟ್ ತೋರಿಸುವಂತೆ ಇಬ್ಬರು 45-48 ವಯಸ್ಸಿನ ಮಹಿಳೆಯರು ಶೋರೂಂನ ಸೇಲ್ಸ್ ಮ್ಯಾನ್ ಗೆ ಹೇಳಿದಾಗ , ಸೇಲ್ಸ್ ಮ್ಯಾನ್ ಲಾಕೆಟ್ ನೀಡಿದ್ದಾನೆ‌, ನಂತರ 25 ವರ್ಷದ ಯುವತಿ ಕೈಗೆ ಮಹಿಳೆಯರು ಅದನ್ನು ಕೊಟ್ಟಿ ರುವ ದೃಶ್ಯ ಸಹ ಲಭ್ಯವಾಗಿದೆ, ಚಿನ್ನ ಖರೀದಿ ಮಾಡದೆ ಮಹಿಳೆಯರು ಹೋಗಿರುವ ದೃಶ್ಯ ಪತ್ತೆಯಾಗಿದೆ.
ಕೈಚಳಕ ತೋರಿದ ಮಹಿಳೆಯರನ್ನು ಪತ್ತೆಹಚ್ಚಿ ಕಳುವಾಗಿರುವ ಆಭರಣಗಳನ್ನು ಹಿಂದಿರುಗಿಸಿ ಕೊಡಬೇಕೆಂದು ಕೋರಿ ಭೀಮಾ ಗೋಲ್ಡ್ ನ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.

Karnataka Lokayukta ಗಾಡಿಕೊಪ್ಪ ವೃತ್ತ ಗ್ರಾಮಾಡಳಿತಾಧಿಕಾರಿ ಲೋಕಾಯುಕ್ತದಿಂದ”ರೆಡ್ ಹ್ಯಾಂಡ್” ಅರೆಸ್ಟ್

0

Karnataka Lokayukta ಮೇ 30ರಂದು ಶಿವಮೊಗ್ಗ ತಾಲೂಕು ಕಸಬಾ -1 ಹೋಬಳಿ, ಗಾಡಿಕೊಪ್ಪ ವೃತ್ತ, ಗ್ರಾಮ ಅಡಳಿತ ಅಧಿಕಾರಿ ಸುರೇಶ್ ಜಿ. ಬಿನ್ ನಾಗಪ್ಪಜಿ ಎಂಬುವವರು ಜಮೀನು ಖಾತೆ ಮಾಡಿಕೊಡಲು ಆರು ಸಾವಿರ ರೂ.ಗಳ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಕೃಷಿನಗರ ವಾಸಿ ಸಂಕೇತ್ ಎಂಬುವವರು ಖರೀದಿಸಿದ ಜಮೀನನ್ನು ತನ್ನ ತಾಯಿ ಶ್ರೀಮತಿ ವೀಣಾ ಬಿ.ಎಂ. ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಶಿವಮೊಗ್ಗ ವಿನೋಬನಗರ ಪ್ರೀಡಂ ಪಾರ್ಕ್‍ನಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಹೋಗಿ ವಿ ಎ ಆಗಿರುವ ಸುರೇಶ್ ಜಿ. ಬಳಿ ತಾವು ಖರೀದಿಸಿದ ಜಮೀನನ್ನು ಖಾತೆ ಮಾಡಿಕೊಡುವಂತೆ ಕೇಳಿಕೊಂಡಾಗ ಕೆಲಸ ಮಾಡಿಕೊಡಲು ರೂ. 6000/-ಗಳ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರವಾಗಿ ಇವರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
Karnataka Lokayukta ಅಪಾದಿತರನ್ನು ಬಂಧಿಸಿ ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕರು ವೀರಬಸಪ್ಪ ಎಲ್ ಕುಸಲಾಪುರರವರು ಕೈಗೊಂಡಿರುತ್ತಾರೆ. ಕಾರ್ಯಾಚರಣೆಯಲ್ಲಿ ಕ.ಲೋ.ಪೋ. ಅಧೀಕ್ಷಕ ಮಂಜುನಾಥ್ ಚೌಧರಿ ಎಂ.ಹೆಚ್. ಮತ್ತು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಇವರುಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ವಿ.ಎ.ಮಹಂತೇಶ ಸಿ.ಹೆಚ್.ಸಿ., ಯೋಗೇಶ್ .ಸಿ.ಹೆಚ್.ಸಿ. ಸುರೇಂದ್ರ ಹೆಚ್.ಜಿ., ಸಿ.ಹೆಚ್.ಸಿ., ಬಿ.ಟಿ ಚನ್ನೇರ್ಶ. ಸಿ.ಪಿ.ಸಿ., ಪ್ರಶಾಂತ್‍ಕುಮಾಋ ಸಿ.ಪಿ.ಸಿ., ರಘುನಾಯ್ಕ ಸಿ.ಪಿ.ಸಿ., ದೇವರಾಜ್ ಸಿ.ಪಿ.ಸಿ., ಗಂಗಾಧರ ಎ.ಪಿ.ಸಿ., ಪ್ರದೀಪ್ ಎ.ಪಿ.ಸಿ., ಗೋಪಿ ವಿ.,ಎ.ಪಿ.ಸಿ., ಹಾಗು ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದರು.

Sahyadri College ಜೂನ್ 4 ರಂದು ಸಹ್ಯಾದ್ರಿ ಕಾಲೇಜಿನಲ್ಲಿ ಚುನಾವಣಾ ಮತ ಎಣಿಕೆ ನಿಮಿತ್ತ ಶಿವಮೊಗ್ಗಕ್ಕೆ ಬರುವ ವಾಹನ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ

0

Sahyadri College ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್ 04 ರಂದು ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ನಡೆಯಲಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಹಾಗೂ ವಾಹನಗಳ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀ. ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇದಿಸಲಾಗಿದೆ. ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‍ಗಳು ಹಾಗೂ ಕಾರು ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬಂದು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಬಿ.ಹೆಚ್.ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಹೋಗುವುದು. ಹೊನ್ನಾಳಿ ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‍ಗಳನ್ನು 100 ಅಡಿರಸ್ತೆ, ವಿನೋಬನಗರ ಮಾರ್ಗವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‍ಗಳು ಎ. ಎ. ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂ.ಆರ್.ಎಸ್. ಸರ್ಕಲ್ ಕಡೆಗೆ ಹೋಗುವುದು. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ.
ಏಜೆಂಟರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳ ವಾಹನಗಳ ನಿಲುಗಡೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು ಮತ್ತು ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ವಾಹನ ಪಾರ್ಕಿಂಗ್‍ಗೆ ಅನುಮತಿಸಿದೆ. ಎಂ.ಆರ್.ಎಸ್. ಸರ್ಕಲ್‍ನ ಹತ್ತಿರವಿರುವ ಕೆ.ಇ.ಬಿ ಸಮುದಾಯ ಭವನದ ಹಿಂಭಾಗ ವಾಹನಗಳ Sahyadri College ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಸಾರ್ವಜನಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆ ಎಂಆರ್.ಎಸ್. ನಿಂದ ಎನ್.ಆರ್.ಪುರ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡುವುದು. ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ವೇಡಿಯಂ ಹತ್ತಿರ ಸಾರ್ವಜನಿಕರ ಎಲ್ಲಾ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಎಂ.ಆರ್.ಎಸ್. ಸರ್ಕಲ್‍ನಿಂದ ಬಿ.ಹೆಚ್.ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್‍ವರೆಗೆ ಸಾರ್ವಜನಿಕರ ವಾಹನಗಳು ಒಡಾಡದಂತೆ ನಿಷೇದಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

DC Shivamogga ಶಿವಮೊಗ್ಗ ಜಿಲ್ಲೆಯಾದ್ಯಂತ ಜೂನ್ 4 ರಿಂದ 5 ರವರೆಗೆ ನಿಷೇಧಾಜ್ಞೆ ಜಾರಿ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಮೇ 07 ರಂದು ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತ ಎಣಿಕೆಯು ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದ್ದು, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂ-04 ರ ಬೆಳಗ್ಗೆ 6 ರಿಂದ ಜೂ-05 ರ ಬೆಳಗ್ಗೆ 6.00 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ನಿಷೇದಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ. ಯಾವುದೇ ಮೆರವಣಿಗೆ, ಸಭೆ, ಸಮಾರಂಭಗಳು, ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶ ನಡೆಸುವಂತಿಲ್ಲ. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ. ಯಾವುದೇ ವಿನಾಶಕಾರಿ ವಸ್ತು ಇಲ್ಲವೇ ಸ್ಪೋಟಕವಸ್ತು ಒಯ್ಯತಕ್ಕುದ್ದಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಲ್ಲು ಅಥವಾ ಎಸೆಯುವ ವಸ್ತುಗಳ ಅಥವಾ ವಸ್ತುಗಳನ್ನು ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು, ತಯಾರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು, ಬಂದೂಕುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಮತ್ತು ಅಂತಹ ವ್ಯಕ್ತಿಯ ಬಳಿಯಲ್ಲಿರುವ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಣುಕು ಶವಗಳ ಪ್ರದರ್ಶನ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿಷೇಧಿಸಲಾಗಿದೆ.

ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದಾತ್ಮಕವಾಗಿ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡುಗುವುದನ್ನು ನಿಷೇಧಿಸಲಾಗಿದೆ.

ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾ.ದಂ.ಸಂ.ಕಲಂ 188ರನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

DC Shivamogga ಈ ನಿಷೇಧಾಜ್ಞೆಯು ಸದುದ್ದೇಶದ ಕಾರ್ಯಗಳಾದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರಾರ್ಥನೆಗೆ ತೆರುಳುವವರಿಗೆ ಹಾಗೂ ಇನ್ನಿತರ ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಅನ್ವಯಿಸುವುದಿಲ್ಲ.

District Consumer Disputes Redressal Commission ಆ್ಯಕ್ಸಿಡೆಂಟ್ ಕಾರು ದುರಸ್ತಿ: ಪರಿಹಾರ ನೀಡಲು ಆದೇಶ

0

District Consumer Disputes Redressal Commission ಅಪಘಾತಕ್ಕೊಳಗಾಗಿ ಹಾನಿಯಾಗಿದ್ದ ಕಾರನ್ನು ದುರಸ್ತಿಪಡಿಸಿದ ನಂತರ ಅದರ ಖರ್ಚನ್ನು ಸಂದಾಯ ಮಾಡುವಂತೆ ಮನವಿ ಮಾಡಿದ್ದರೂ ಹಣ ನೀಡದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರರಾದ ನಿತೇಶ್ ಟಿ. ನಾಯಕ್ ಎಂಬುವವರು ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಜಯಪುರ, ರಾಜಸ್ತಾನ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಾಹನ ವಿಮಾ ಪಾಲಿಸಿಯ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರರ ಟೊಯೋಟೊ ಇಟಿಯೋಸ್ ಕಾರ್ ಸೆ.೨೭,೨೦೨೨ ರಂದು ಅಪಘಾತಕ್ಕೊಳಗಾಗಿ ಹಾನಿಯಾಗಿದ್ದು, ಈ ಸಂಬಂಧ ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನು ಸಂಪರ್ಕಿಸಿ ಎಸ್ಟಿಮೇಟ್ ಪ್ರಕಾರ ರಿಪೇರಿ ಖರ್ಚು ರೂ. ೧,೫೩,೩೯೭/- ಗಳ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು. ಆದರೆ ಕಂಪನಿಯವರು ವಾಹನಕ್ಕೆ ಉಂಟಾದ ಹಾನಿಗಳು ವಾಹನದ ಪೂರ್ವ ತಪಾಸಣೆಗೆ ಮುಂಚೆ ಉಂಟಾಗಿರುವಂತ ಹಾನಿಗಳಾದ್ದರಿಂದ ಅಪಘಾತ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು.
District Consumer Disputes Redressal Commission ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ. ಎದುರುದಾರು ಅರ್ಜಿದಾರರಿಗೆ ರೂ. ೩೦,೨೨೬ ಗಳನ್ನು ವಾಹನ ರಿಪೇರಿಗಾಗಿ ತಗುಲಿದ ಖರ್ಚು-ವೆಚ್ಚಗಳ ಬಾಬ್ತು ಎಂದು ಲೀಗಲ್ ನೋಟೀಸ್ ನೀಡದ ದಿ:೦೨/೦೬/೨೦೨೩ ರಿಂದ ಶೇ.೯% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.೨೫,೦೦೦ ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦ ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.

JNN Engineering College ಶಿವಮೊಗ್ಗದ ಜೆ ಎನ್ ಎನ್ ಸಿ‌ ಇ ಕಾಲೇಜಿನ ವಿದ್ಯಾರ್ಥಿಗಳಿಂದ ಐಓಟಿ ತಂತ್ರಜ್ಞಾನದ ಹೆಲ್ಮೆಟ್ ಸಂಶೋಧನೆ

0

JNN Engineering College ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ರಸ್ತೆ ಅಪಘಾತಗಳು ಸಾವು ನೋವುಗಳು ಹೆಚ್ಚುತ್ತಲೆ ಇವೆ. ಅದರಲ್ಲು ಹೆಚ್ಚಾಗಿ ತಲೆಗೆ ಪೆಟ್ಟುಬಿದ್ದು ಸಾವಿಗೀಡಾದ ಸಂಖ್ಯೆಯೇ ಜಾಸ್ತಿ. ಅಂತಹ ಅಪಘಾತಗಳಿಂದ ತಲೆಗೆ ರಕ್ಷಣೆ ನೀಡುವ, ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವಂತಹ ಹಾಗೂ ಅಪಘಾತವಾದ ತುರ್ತು ಪರಿಸ್ಥಿಯಲ್ಲಿ ವ್ಯಕ್ತಿಯ ಸಂಬಂಧ ಪಟ್ಟವರಿಗೆ ತಿಳಿಸುವ ಐಓಟಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಹೆಲ್ಮೆಟ್‌ ಒಂದನ್ನು ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳು ರೂಪಿಸಿದ್ದಾರೆ.
ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ಸ್‌ ತಾಂತ್ರಿಕ ಪ್ರಯೋಗಗಳ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪ್ರಜ್ವಲ್.ಎಸ್.ಎಲ್‌, ಉದಿತ್‌ ಎಂ.ಡಿ, ಶ್ರೀಕೃಷ್ಣ ಕಂಠಿ, ಮೊಹಮದ್‌ ಶೇಕ್‌ ಅವರ ತಂಡ ಸಹ ಪ್ರಾದ್ಯಾಪಕಿ ರೂಪಾ.ಬಿ.ಎಸ್‌ ಮಾರ್ಗದರ್ಶನದಲ್ಲಿ ರೂಪಿಸಿದ ‘ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ’ ಪ್ರಾತ್ಯಕ್ಷಿಕೆ ಸುರಕ್ಷಿತ ವಾಹನ ಚಾಲನೆಗೆ ಹೊಸ ಸ್ಪರ್ಶ ನೀಡಿತ್ತು.
ಈ ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡುವುದರಿಂದ ಹಿಂದೆ ಬರುವ ಇತರೆ ವಾಹನಗಳನ್ನು ಚಿಕ್ಕ ಪರದೆಯ ಮೂಲಕ ಸವಾರರು ನೋಡಬಹುದಾಗಿದೆ. ಇದರೊಂದಿಗೆ ಅಪಘಾತವಾದ ಸಂದರ್ಭದಲ್ಲಿ ಅಪಘಾತಗೊಂಡ ನಿಖರ ಸ್ಥಳದ ಮಾಹಿತಿಯನ್ನು ಅಪಘಾತಕ್ಕಿಡಾದ ವ್ಯಕ್ತಿಯ ಸಂಬಂಧಿಕರಿಗೆ ತಲುಪುವಂತೆ ರೂಪಿಸಲಾಗಿದೆ. ಐಓಟಿ ತಂತ್ರಜ್ಞಾನದೊಂದಿಗೆ ರಾಸ್ಬೆರಿ ಪೈ ಮತ್ತು ಅರ್ಡಿನೊ ಮೈಕ್ರೊ ಕಂಟ್ರೊಲರ್‌ ಬಳಸಿ ಹೆಲ್ಮೆಟ್‌ ರೂಪಿಸಲಾಗಿದ್ದು ಮೂರು ತಿಂಗಳ ನಿರಂತರ ಪ್ರಯೋಗಗಳು ನಡೆಸಿದ್ದೆವೆ ಎನ್ನುತ್ತಾರೆ ವಿದ್ಯಾರ್ಥಿಗಳ ತಂಡ.
JNN Engineering College ಐಓಟಿ ಮೂಲಕ ಮೊಬೈಲ್‌ ಮೂಲಕವೇ ಸ್ವಯಂಚಾಲಿತವಾಗಿ ಅಡಿಕೆ ಬೇಯಿಸುವ ಮತ್ತು ಒಣಗಿಸುವ ಯೋಜನಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಮೊಹಮದ್‌ ಫೌಜಾನ್‌, ಚಂದನ್.ಆರ್.ಎಸ್‌, ಸೈಯದ್‌ ಮೊಹಮದ್‌ ನಯಾಜ್‌ ತಂಡ ಸಹಾಯಕ ಪ್ರಾಧ್ಯಾಪಕಿ ಪ್ರೇಮಾ.ಕೆ.ಎನ್ ಅವರ ಮಾರ್ಗದರ್ಶನದಲ್ಲಿ ರೂಪಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಇದರೊಂದಿಗೆ ಡೀಪ್‌ ಲರ್ನಿಂಗ್‌ ಮೂಲಕ ಇನ್‌ಫ್ಯಾಟ್ಸ್‌ ಕ್ರೈ ರೆಸ್ಪಾನ್ಸ್‌, ಅಂಧರಿಗಾಗಿ ಫೇಕ್‌ ಕರೆನ್ಸಿ ರೆಕಗ್ನಿಷನ್ ಸಿಸ್ಟಮ್‌, ವಿಶುಯಲ್‌ ಕ್ರಿಪ್ಟೊಗ್ರೆಫಿ ಸ್ಕೀಮ್‌ ಡಿಸೈನ್‌ ಬೇಸಡ್‌ ಆನ್‌ ಕ್ಯೂಆರ್‌ ಕೋಡ್‌, ಲೈಫೈ ಮೂಲಕ ಡೇಟಾ ಟ್ರಾನ್ಸ್‌ಮಿಷನ್‌, ಮೊಬೈಲ್‌ ನಲ್ಲಿರುವ ತಾಂತ್ರಿಕ ಗುಣಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಜಿಎಸ್‌ಎಂ ಮಾಡೆಲ್‌ ಹೊಂದಿದ ಸೆಲ್‌ ಫೋನ್‌, ಬ್ರೈನ್‌ ಕಂಟ್ರೋಲ್ಡ್‌ ರೊಬೊಟಿಕ್‌ ಕಾರು, ಕೃತಕ ಬುದ್ದಿಮತ್ತೆ ಮೂಲಕ ಕ್ಷ-ಕಿರಣದಿಂದ ಶ್ವಾಸಕೋಶ ಕ್ಯಾನ್ಸರ್‌ ಪತ್ತೆ ಮಾಡುವ ತಂತ್ರಜ್ಞಾನ ಸೇರಿದಂತೆ ವಿದ್ಯಾರ್ಥಿಗಳ ನಾವೀನ್ಯ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಶೀಲಾ.ಎಸ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರುಣ.ಹೆಚ್‌, ಸುಮಂತ್.ಯು, ಪುರುಷೋತ್ತಮ್‌, ಯುವರಾಜ್‌ ತಂಡ ರೂಪಿಸಿದ ಡಿಸೈನ್‌ ಸಿಮ್ಯುಲೇಷನ್‌ ಅಂಡ್‌ ಲೇಔಟ್‌ ಆಫ್‌ ಲೋ ಡ್ರಾಪ್‌ ಔಟ್‌ ಓಲ್ಟೇಜ್‌ ರೆಗ್ಯುಲೇಟರ್ (ಪ್ರಥಮ ಬಹುಮಾನ), ಡಾ.ಶ್ವೇತಾ.ಹೆಚ್.ಆರ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಂಕಿತಾ.ಬಿ, ರತ್ನಾ.ಹೆಚ್.ಜಿ, ಗಗನಾ, ಮೊಹಮದ್‌ ಇಸ್ಮಾಯಿಲ್‌ ತಂಡ ರೂಪಿಸಿದ ಆಟೊಮೆಟೆಡ್‌ ರೆಸ್ಪಾನ್ಸ್‌ ಅಂಡ್‌ ಕ್ಲಾಸಿಫಿಕೇಷನ್‌ ಆಫ್‌ ಇನ್ ಫ್ಯಾಂಟ್ಸ್ ಕ್ರೈ(ದ್ವಿತೀಯ ಬಹುಮಾನ), ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ (ತೃತೀಯ ಬಹುಮಾನ) ಪಡೆದಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌, ಸಂಶೋಧನಾ ಡೀನ್‌ ಡಾ.ಎಸ್.ವಿ.ಸತ್ಯನಾರಾಯಣ, ಏಕತ್ವ ಇನೊವೇಷನ್‌ ಕಂಪನಿ ಸಿಇಓ ವಿಕಾಸ್.ಹೆಚ್.ಸಿ, ಕ್ಯಾಡೆನ್ಸ್‌ ಡಿಸೈನ್‌ ಸಿಸ್ಟಮ್‌ ಇಂಜಿನಿಯರ್‌ ಸಂಜಯ್.ಎ.ಸಿ, ಸಂಯೋಜಕರಾದ ಡಾ.ಪ್ರಮೋದ್‌ ಕುಮಾರ್.ಎಸ್, ಎಸ್.ಡಿ.ನಳೀನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Goods and Services Tax Department ಶಿವಮೊಗ್ಗ ವಿಭಾಗೀಯ ವ್ಯಾಪ್ತಿಯಲ್ಲಿ ಜಾಗೃತಿದಳ ದಾಳಿ:ಅಕ್ರಮ ಅಡಿಕೆ ದಾಸ್ತಾನು ಪತ್ತೆ- ದಂಡ ವಸೂಲಿ

0

Goods and Services Tax Department ಶಿವಮೊಗ್ಗ ವಿಭಾಗೀಯ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ ಹಾಗೂ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸುಮಾರು 40 ಅಧಿಕಾರಿಗಳ ತಂಡ ಮಲೆನಾಡು ವಿಭಾಗ ವ್ಯಾಪ್ತಿಯ ಎಲ್ಲಾ ಅಡಿಕೆ ವರ್ತಕರ ವ್ಯಾಪಾರ ಗೋದಾಮು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಲಕ್ಷಾಂತರ ಮೊತ್ತದ ಅಕ್ರಮ ಅಡಿಕೆ ವಹಿವಾಟು ದಾಸ್ತಾನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

Goods and Services Tax Department ಈ ವಿಶೇಷ ಕಾರ್ಯಾಚರಣೆಯ ನೇತೃತ್ವವನ್ನು ಶಿವಮೊಗ್ಗದ ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳ ಹಾಗೂ ಸರಕು ಮತ್ತು ಸೇವಾ ತೆರಿಗೆಗಳ ಜಂಟಿ ಆಯುಕ್ತರುಗಳು ಹಾಗೂ ಉಪ ಆಯುಕ್ತರುಗಳ ನೇತೃತ್ವದಲ್ಲಿ ನಡೆಸಿದ್ದು ಅಕ್ರಮವಾಗಿ ಅಡಿಕೆ ಸಂಗ್ರಹಿಸಿದ ವ್ಯಾಪಾರಿಗಳ ಮೇಲೆ ಜಿ.ಎಸ್ ಟಿ ಕಾಯ್ದೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ.