Monday, April 13, 2026
Monday, April 13, 2026
Home Blog Page 708

Arunachal Pradesh ಅರುಣಾಚಲ ಪ್ರದೇಶ್ ವಿಧಾನಸಭಾ ಚುನಾವಣೆ : ಬಿಜೆಪಿ ಗೆ ಬಹುಮತ

0

Arunachal Pradesh 60 ಸದಸ್ಯ ಬಲದ ಅರುಣಾಚಲ ಪ್ರದೇಶ ಅಸೆಂಬ್ಲಿಯಲ್ಲಿ ಬಿಜೆಪಿ 39 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತವನ್ನು ಪಡೆದುಕೊಂಡಿದ್ದರಿಂದ ಬಿಜೆಪಿ ಭಾನುವಾರ ಸತತ ಮೂರನೇ ಬಾರಿಗೆ ಅರುಣಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Arunachal Pradesh ಏಪ್ರಿಲ್ 19 ರಂದು ಈಶಾನ್ಯ ರಾಜ್ಯದಲ್ಲಿ ಚುನಾವಣೆ ನಡೆದ 50 ಸ್ಥಾನಗಳಿಗೆ ಇಂದು ಮತ ಎಣಿಕೆ ನಡೆಯಿತು.

Assembly Constituency ಜಯಲಕ್ಷ್ಮೀ ಒಲಿಯದ ಮಾಜಿ ಫುಟ್ಬಾಲ್ ಕ್ರೀಡಾಳು ಬೈಚುಂಗ್ ಭುಟಿಯಾ

0

Assembly Constituency ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಉಪಾಧ್ಯಕ್ಷ ಬೈಚುಂಗ್ ಭುಟಿಯಾ ಅವರು ನಾಮ್ಚಿ ಜಿಲ್ಲೆಯ ಬರ್ಫುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

ಎಸ್‌ಕೆಎಂನ ರಿಕ್ಷಾಲ್ ದೋರ್ಜಿ ಭುಟಿಯಾ ವಿರುದ್ಧ ಭುಟಿಯಾ ಸುಮಾರು 4 ಸಾವಿರಕ್ಕೂ ಅಧಿಕ ಮತಗಳ ಅಂತದಲ್ಲಿ ಸೋತಿದ್ದಾರೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಭ್ಯರ್ಥಿ 8,358 ಮತಗಳನ್ನು ಪಡೆದರೆ, ಭುಟಿಯಾ 4,012 ಮತಗಳನ್ನು ಪಡೆದಿದ್ದಾರೆ.
ಉಳಿದಂತೆ ಸಿಟಿಜನ್ ಆಕ್ಷನ್ ಪಾರ್ಟಿ — ಬಾರ್ಫುಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಅಭ್ಯರ್ಥಿ ದಾದುಲ್ ಲೆಪ್ಚಾ 656 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ತಾಶಿ ದಾದುಲ್ ಭುಟಿಯಾ ಕೇವಲ 298 ಮತಗಳನ್ನು ಪಡೆದಿದ್ದಾರೆ.
ಈ ಮೂಲಕ 10 ವರ್ಷಗಳಲ್ಲಿ ಬರೋಬ್ಬರಿ ಆರು ಬಾರಿ ಸೋಲುವ ಮೂಲಕ ಸೋಲಿನಲ್ಲೂ ಭುಟಿಯಾ ದಾಖಲೆ ಬರೆದಿದ್ದಾರೆ.

ಬೈಚುಂಗ್ ಭುಟಿಯಾ ಅವರು 2018 ರಲ್ಲಿ ತಮ್ಮದೇ ಆದ ಹಮ್ರೋ ಸಿಕ್ಕಿಂ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ ಕಳೆದ ವರ್ಷ ಅದನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು. ಪ್ರಸ್ತುತ ಅವರು ಎಸ್‌ಡಿಎಫ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಿಲಿಂಗ್‌ನಿಂದ ಹಾಗೂ 2016 ರ ವಿಧಾನಸಭಾ ಚುನಾವಣೆಯಲ್ಲಿ ಸಿಲಿಗುರಿಯಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆಯೂ ಅವರು ಸೋಲು ಅನುಭವಿಸಿದ್ದರು.

ನಂತರ ಹಿಮಾಲಯ ಪ್ರದೇಶದಲ್ಲಿ ಬರುವ ಸರೋವರಗಳಿಗೆ ಹೆಸರುವಾಸಿಯಾಗಿರುವ ಸುಂದರವಾದ ರಾಜ್ಯ ಸಿಕ್ಕಿಂನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ ಅವರು ಅಲ್ಲಿ ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. 2019 ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾಂಗ್ಟಾಕ್ ಮತ್ತು ತುಮೆನ್ ಲಿಂಗಿಯಿಂದ ಸ್ಪರ್ಧಿಸಿದರು ಆದರೆ ಎರಡೂ ಕ್ಷೇತ್ರಗಳಲ್ಲೂ ಅವರು ಮತ್ತೆ ಸೋಲು ಕಂಡರು.

2019 ರಲ್ಲಿ ಮತ್ತೆ ಗ್ಯಾಂಗ್‌ಟಾಕ್‌ನ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತರು.
ಬೈಚುಂಗ್ ಭುಟಿಯಾ
ಚುನಾವಣಾ ಫಲಿತಾಂಶದ ಕುರಿತು ಕಾರ್ಯತಂತ್ರ ರೂಪಿಸಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಭೆ
ಬೈಚುಂಗ್ ಭುಟಿಯಾ ಸಿಕ್ಕಿಂ ವಿಧಾನಸಭಾ ಚುನಾವಣೆಗೂ ಮುನ್ನ ಎಸ್‌ಡಿಎಫ್‌ಗೆ ಸೇರಿದ್ದರು.

Assembly Constituency ಅವರು ಹಿಂದಿನ ಹಮ್ರೊ ಸಿಕ್ಕಿಂ ಪಕ್ಷವನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು. ಇದೀಗ ವಿಧಾನಸಭೆ ಚುನಾವಣೆಯಲ್ಲೂ ಸೋಲು ಕಂಡಿದ್ದಾರೆ.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಭಾನುವಾರ ಹಿಮಾಲಯ ರಾಜ್ಯದಲ್ಲಿ 32 ಸದಸ್ಯ ಬಲದ ಅಸೆಂಬ್ಲಿಯಲ್ಲಿ 31 ಸ್ಥಾನಗಳನ್ನು ಗೆದ್ದು ಪ್ರಚಂಡ ಜಯಗಳಿಸುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದೆ.

Dr. Keladi Gunda jois ನಾಡಿನ ಪ್ರಸಿದ್ಧ ಇತಿಹಾಸ ಸಂಶೋಧಕ ಡಾ.ಕೆಳದಿ ಗುಂಡಾಜೊಯಿಸ್ ನಿಧನ

0

Dr. Keladi Gundajois ಇತಿಹಾಸ ಸಂಶೋಧಕ, ಕೈ ಬರಹಗಳ ತಜ್ಞ, ಉತ್ಸಾಹದ 94 ವರ್ಷದ ಡಾ. ಕೆಳದಿ ಗುಂಡಾ ಜೋಯ್ಸ್ ರವರು ಭಾನುವಾರ ಸಂಜೆ ಸ್ವರ್ಗಸ್ಥರಾದರೆಂದು ತಿಳಿದುಬಂದಿದೆ.

ಅಂತಿಮ ದರ್ಶನಕ್ಕಾಗಿ ದೇಹವನ್ನು ಅವರ ಪುತ್ರರಾದ ಕೆಳದಿ ಡಾ.ವೆಂಕಟೇಶ್ ಜೋಯ್ಸ್ ರವರ ಸಾಗರದ ಅಣಲೇ ಕೊಪ್ಪ ಬಡಾವಣೆ ಮನೆಯಲ್ಲಿ ಇರಿಸಲಾಗಿತ್ತು. ಮೃತರ ಅಂತ್ಯಕ್ರಿಯೆ ಸೋಮವಾರ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಡಾ. ಕೆಳದಿ ಗುಂಡಾ ಜೋಯಿಸ ಅವರ ದೈವಾಧೀನರಾಗಿದ್ದಾರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಕನ್ನಡ ನಾಡಿನ ಶ್ರೇಷ್ಠ ಇತಿಹಾಸ ವಿದ್ವಾಂಸರಾದ ಡಾ. ಕೆಳದಿ ಗುಂಡಾ ಜೋಯಿಸರು ಕೆಳದಿ ಇತಿಹಾಸವನ್ನು ವಿಶ್ವಪ್ರಸಿದ್ಧ ಮಾಡುವಲ್ಲಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇತಿಹಾಸ ಮತ್ತು ಲಿಪಿ ಕ್ಷೇತ್ರದಲ್ಲಿ ಅವರ ಸಾಧನೆಗಳು ಹಿರಿಯವು.
ಶ್ರೀಯುತರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 18ನೇ ವಾರ್ಷಿಕ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ೨೦೧೮ರಲ್ಲಿ ಬಾದಾಮಿಯಲ್ಲಿ ನಡೆದ 32ನೇ ವಾರ್ಷಿಕ ಸಮ್ಮೇಳನದಲ್ಲಿ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ಇತಿಹಾಸ ಅಕಾದೆಮಿಯ ಹಿರಿಯ ಸದಸ್ಯರು ˌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರ್ಗದರ್ಶಕರಾಗಿ ಸದಾ ಲವಲವಿಕೆಯಿಂದ ಬೆರೆಯುತ್ತಿದ್ದ ಹಿರಿಯರು ತಮ್ಮ ಕೊನೆಯ ದಿನಗಳವರೆಗೂ ಅಕಾದೆಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

Dr. Keladi Gundajois ನಿರಂತರ ಅಧ್ಯಯನ ಅಧ್ಯಾಪನ ಇತಿಹಾಸ ಸಂರಕ್ಷಣೆ ಹಾಗೂ ಹಲವು ಸಮಾಜಮುಖಿ ಕಾರ್ಯಗಳನ್ನು ತಮ್ಮ ಜೀವನದುದ್ದಕ್ಕೂ ನಡೆಸಿದ ಹಿರಿಯರ ಅಗಲಿಕೆ ನಾಡಿನ ಸಾಂಸ್ಕೃತಿಕ ಲೋಕಕ್ಕೆ, ಇತಿಹಾಸ ಅಕಾಡೆಮಿಗೆ ತುಂಬಲಾರದ ನಷ್ಟವಾಗಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯು ನಾಡಿನ ಶ್ರೇಷ್ಠ ವಿದ್ವಾಂಸ ಡಾ. ಕೆಳದಿ ಗುಂಡಾ ಜೋಯಿಸರಿಗೆ ಗೌರ

Shivamogga Cycle Club ರಕ್ತದಾನದಿಂದ ದೈಹಿಕ & ಮಾನಸಿಕ ಆರೋಗ್ಯ ಸದೃಢ-ಶ್ರೀಕಾಂತ್

0

Shivamogga Cycle Club ವೃತ್ತಿ ಜತೆಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದು ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಾರಧ್ವಾಜ್ ಹೇಳಿದರು.

ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್, ಮೂರ್ತಿ ಸೈಕಲ್ ಆಂಡ್ ಫಿಟ್ನೆಸ್ ವತಿಯಿಂದ ಹರ್ಕ್ಯೂಲಸ್ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ಸೈಕಲ್ ಸವಾರಿ ಜಾಗೃತಿ ಮತ್ತು ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸೈಕಲ್ ಕ್ಲಬ್ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದು, 50ಕ್ಕೂ ಹೆಚ್ಚು ಸದಸ್ಯರು ಗಿನ್ನೆಸ್ ದಾಖಲೆ ಮಾಡಿದ ಗೌರವ ನಮ್ಮ ಸಂಸ್ಥೆಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಕಲ್ ಕ್ಲಬ್ ಹಿರಿಯ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಸೈಕಲ್ ತುಳಿಯುವ್ಯದರಿಂದ ಸದಾ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ.

ಸದಾ ಲವಲವಿಕೆಯಿಂದ ಇರುವ ಜತೆಯಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹಿರೋಗಳು. ರಕ್ತದ ಕೊರತೆ ಹೆಚ್ಚಿರುವುದನ್ನು ನಾವು ಕಾಣುತ್ತೇವೆ. ರಕ್ತದಾನ ಮಾಡಲು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು ಮುಂದಾಗಬೇಕು. ಇತರರನ್ನು ರಕ್ತದಾನ ಮಾಡಲು ಪ್ರೇರೆಪಿಸಬೇಕು ಎಂದು ಹೇಳಿದರು.

Shivamogga Cycle Club ಹರ್ಕ್ಯೂಲಸ್ ಕಂಪನಿಯ ಅಜಿತ್ ಚವ್ಹಾಣ್, ತೇಜಸ್ವಿ, ದಿನಕರ್ ವಸಂತ್, ಅಭಿಲಾಶ್, ರಾಜೇಶ್, ಪ್ರಮೋದ್, ದರ್ಶನ್, ಶ್ರೀಧರಚಂದ್ರ ಕೇಸರಿ, ನಾಗರಾಜ್, ಅಕ್ಷಯ್, ಕಾರ್ಯದರ್ಶಿ ಗೀರೀಶ್ ಕಾಮತ್, ಸಂಜಯ್, ಡಾ. ನಂದಕಿಶೋರ್, ಧರಣೇಂದ್ರ ದಿನಕರ್, ರಜನಿಕಾಂತ್ ಉಪಸ್ಥಿತರಿದ್ದರು.

ICC T-20 ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್:ಕೆನಡಾ ವಿರುದ್ಧ ಯುಎಸ್ಎ ದಾಖಲೆ ವಿಜಯ

0

ICC T-20 ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅತಿಥೇಯ ಯುಎಸ್ ಎ ತಂಡ ಕೆನಡಾ ವಿರುದ್ಧ ದಾಖಲೆಯ ಜಯ ದಾಖಲಿಸಿದೆ.

ಕೆನಡಾ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಯುಎಸ್ಎ ತಂಡ 17.4 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿದೆ. ಯುಎಸ್ಎ ಪರ ಆರಂಭಿಕ ಆಟಗಾರ ಸ್ಟೀವೆನ್ ಟೈಲರ್ ಡಕೌಟ್ ಆಗಿ ಆರಂಭಿಕ ಆಘಾತ ನೀಡಿದರು.

ಆದರೂ ದೃತಿಗೆಡದ ಯುಎಸ್ ಎ ತಂಡ ಆ್ಯಂಡ್ರಿಸ್ ಗಾಸ್ 65 ರನ್ ಮತ್ತು ಆ್ಯರನ್ ಜೋನ್ಸ್ ರ ಅಜೇಯ 94 ರನ್ ಗಳ ನೆರವಿನಿಂದ 17.4 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿತು.

ಕೆನಡಾ ವಿರುದ್ಧ ಯುಎಸ್ಎ ದಾಖಲೆಯ ಜಯ:

ಇದು ಟಿ20 ಇತಿಹಾಸದಲ್ಲೇ ಮೂರನೇ ದಾಖಲೆಯ ಜಯವಾಗಿದೆ. ಚೇಸಿಂಗ್ ನಲ್ಲಿ 3ನೇ ಗರಿಷ್ಠ ರನ್ ಚೇಸಿಂಗ್ ಇದಾಗಿದೆ. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೆನಡಾ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು.

ಕೆನಡಾ ಪರ ಆರನ್ ಜೋನ್ಸ್ 23 ರನ್, ನವನೀತ್ ಧಲಿವಾಲ್ 61 ರನ್, ನಿಕೋಲಸ್ ಕಿರ್ಟನ್ 51 ರನ್, ಕನ್ನಡಿಗ ಕರ್ನಾಟಕದ ದಾವಣಗೆರೆ ಮೂಲದ ಶ್ರೇಯಸ್ ಮೊವ್ವಾ 32 ರನ್ ಕಲೆ ಹಾಕಿದರು.

ICC T-20 ಇನ್ನು ಯುಎಸ್ಎ ಚೇಸ್ ಮಾಡಿದ 195 ರನ್ ಗಳ ಗುರಿ ಟಿ20 ವಿಶ್ವಕಪ್ ನಲ್ಲಿ ದಾಖಲಾದ 3ನೇ ಗರಿಷ್ಠ ರನ್ ಗಳ ಯಶಸ್ವಿ ಚೇಸಿಂಗ್ ಆಗಿದೆ. ಈ ಹಿಂದೆ 2016ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 230 ರನ್ ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

ಇದಕ್ಕೂ ಮೊದಲು 2007ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 206ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ 194ರನ್ ಗಳನ್ನು ಯುಎಸ್ಎ ಯಶಸ್ವಿಯಾಗಿ ಚೇಸ್ ಮಾಡಿದೆ.

Soraba Police ಅಡಿಕೆ ಕದ್ದು ಪರಾರಿಯಾಗುತ್ತಿದ್ದ ಕಳ್ಳನ ಬಂಧನ

0

Soraba Police ಮೂಡುಗೋಡುನಲ್ಲಿ ಅಡಿಕೆ ಕದ್ದು ಪರಾರಿಯಾಗಿದ್ದವನನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 4.70ಲಕ್ಷ ರೂ. ನಗದು, ಕಳ್ಳತನಕ್ಕೆ ಉಪಯೋಗಿಸಿದ್ದ 8ಲಕ್ಷ ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಮೂಡುಗೋಡುವಿನ ಜಯಕುಮಾರ್ ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ, ಗೇರುಬೀಜ ಕಳ್ಳತನವಾಗಿರುವ ಕುರಿತು ಮೇ 10ರಂದು ದೂರು ದಾಖಲಿಸಿದ್ದರು.

Soraba Police ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಾವಲಿ ಗ್ರಾಮಸಮೀಪ ಶಿಕಾರಿಪುರದ ಜಕ್ಕನಹಳ್ಳಿ ನಿವಾಸಿ ನಂದೀಶ್ ಎಂಬಾತನನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾದ ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಕುಮಾರ್ ಭೂಮರೆಡ್ಡಿ, ಎಎಸ್ಪಿ ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಕೆ.ಇ.ಕೇಶವ ಮಾರ್ಗದರ್ಶನಲ್ಲಿ ಸೊರಬ ಸಿಪಿಐ ರಮೇಶ್ ರಾವ್, ಪಿಎಸ್ಐ ಎಚ್.ಎನ್.ನಾಗರಾಜ್, ಎಎಸ್ಐಗಳಾದ ಲಿಂಗರಾಜ, ಪ್ರಭಾಕರ, ಹೆಚ್ಪಿಸಿಗಳಾದ ರಾಜುನಾಯ್ಕ್, ನಾಗರಾಜ, ಅಶೋಕ, ನಾಗೇಶ್, ಕಾನ್ಸ್ಟೇಬಲ್ಗಳಾದ ಕೆ.ಎನ್.ಲೋಕೇಶ್, ರಾಘವೇಂದ್ರ, ವಿನಯ, ಮಲ್ಲೇಶ್, ವಿಶ್ವನಾಥ, ಶಶೀಧರ, ಉಮೇಶ ಪರಸಪ್ಪ, ಸುನೀಲ್, ಸಂದೀಪ್, ಲೋಕೇಶ್, ಆನವಟ್ಟಿ ಠಾಣೆಯ ಆರ್.ಸಿ. ಮಂಜುನಾಥ, ಶಿವಮೊಗ್ಗ ಸಿಡಿಆರ್ ಸೆಲ್ನ ವಿಜಯಕುಮಾರ್, ಇಂದ್ರೇಶ್ ತಂಡ ಪ್ರಕರಣವನ್ನು ಭೇದಿಸಿದೆ.

Shivamogga News ಒಡವೆ ಅಂಗಡಿಯಲ್ಲಿ ಒಡವೆ ಪೆಟ್ಟಿಗೆ ದೋಚಿಕೊಂಡು ವ್ಯಕ್ತಿ ಪರಾರಿ

0

Shivamogga News ಗ್ರಾಹಕರಂತೆ ಚಿನ್ನ-ಬೆಳ್ಳಿ ಅಂಗಡಿಗೆ ಬಂದಿದ್ದ ಮೂವರು ಯುವತಿಯರು ಹಾಗೂ ಓರ್ವ ಪುರುಷ ವ್ಯಕ್ತಿ ಉಂಗುರ ಮತ್ತು ಬೆಳ್ಳಿ ದೀಪ ಖರೀದಿ ನೆಪದಲ್ಲಿ ಬುದ್ಧಿವಂತಿಕೆಯಿಂದ ಅಂಗಡಿಯವರ ಕಣ್ತಪ್ಪಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 67 ಗ್ರಾಂ ತೂಕದ ಒಡವೆಗಳ ಬಾಕ್ಸ್ ಅನ್ನು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ಶಿವಮೊಗ್ಗ ನಗರದ ಗಾಂಧಿಬಜಾರ್ ಬಳಿಯ ತಿರುಪಳಯ್ಯನ ಕೇರಿಯ ಸಂಪತ್ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ ಎಂದು ಅಂಗಡಿ ಮಾಲೀಕರು ದೂರಿತ್ತಿದ್ದಾರೆ. ಅಂಗಡಿಗೆ ಬಂದಿದ್ದ ಇವರು ಮದುವೆ ಗಿಫ್ಟ್‌ಗೆ ಬಂಗಾರದ ಉಂಗುರ ತೋರಿಸುವಂತೆ ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಹಾಗೂ ಮಹಿಳೆ ಬೆಳ್ಳಿ ಕಾಮಾಕ್ಷಿ ದೀಪ ತೋರಿಸಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಯರಿಬ್ಬರಿಗೆ ಡಿಸ್‌ಪ್ಲೇಸ್‌ನಲ್ಲಿದ್ದ ಉಂಗುರಗಳನ್ನು ತೋರಿಸಿದಾಗ ಇದು ಬೇಡ ಕಡಿಮೆ ತೂಕದ 3 ಗ್ರಾಂ ಒಳಗಿನ ಉಂಗುರ ತೋರಿಸಿ ಎಂದಿದ್ದಾರೆ. ಆಗ ಮಾಲೀಕರು ಬೇರೆ ಉಂಗುರ ತರಲು ಲಾಕರ್ ರೂಂಗೆ ಹೋಗಿ ಉಂಗುರ ತಂದು ತೋರಿಸಿದಾಗ ಇದು ಓಕೆ, ನಮ್ಮವರನ್ನು ಕರೆದುಕೊಂಡು ಬಂದು ಖರೀದಿಸುತ್ತೇನೆ ಎಂದು ಆ ಯುವತಿಯರು ಜಾಗ ಖಾಲಿ ಮಾಡಿದ್ದಾರೆ.

Shivamogga News ಇನ್ನೋರ್ವ ಪುರುಷ ಹಾಗೂ ಮಹಿಳೆ ಕಡಿಮೆ ಬೆಲೆಯ ಬೆಳ್ಳಿ ದೀಪ ತೋರಿಸಿ ಎಂದು ಹೇಳಿ ನಂತರ ಬರುತ್ತೇವೆ ಎಂದು ವಾಪಾಸ್ ಹೊರಟಿದ್ದಾರೆ. ಉಂಗುರ ತರಲು ತಾವು ಲಾಕರ್ ರೂಮಿಗೆ ಹೋದಾಗ ನಮ್ಮ ಅಂಗಡಿಯ ಹುಡುಗಿಗೆ ಇನ್ನಿಬ್ಬರು ಅಡ್ಡಲಾಗಿ ನಿಂತಿದ್ದು, ಈ ಸಂದರ್ಭ ಬಳಸಿ ಚಿನ್ನದ ಒಡವೆಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಅನ್ನು ಓರ್ವ ಯುವತಿ, ಡಿಸ್‌ಪ್ಲೇ ಗ್ಲಾಸ್ ಡ್ರಾ ತೆಗೆದು ಕೈ ಹಾಕಿ ಅಲ್ಲಿದ್ದ ಒಡವೆಗಳ ಬಾಕ್ಸ್‌ನ್ನು ತನ್ನ ಬ್ಲೌಸ್‌ನಲ್ಲಿ ಹಾಕಿಕೊಂಡು ಬುದ್ದಿವಂತಿಕೆ ಯಿಂದ ಒಡವೆಗಳನ್ನು ದೋಚಿದ್ದಾರೆ ಎಂದು ಪೇಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ

Pranavananda Swamiji ಮೃತ ಚಂದ್ರಶೇಖರ್ ಸಾವಿಗೆ ಕಾರಣರಾದವರನ್ನ ಬಂಧಿಸಿ.ಕುಟುಂಬಕ್ಕೆ ಪರಿಹಾರ ನೀಡಿ- ಶ್ರೀಪ್ರಣವಾನಂದಶ್ರೀ

0

Pranavananda Swamiji ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಇಂದು ಶಿವಮೊಗ್ಗದ ಚಂದ್ರಶೇಖರನ್ ನಿವಾಸಕ್ಕೆ ಭೇಟಿ ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ವಿರೋಧಿಸಿ ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಶೇಖರನ್ ಕುಟುಂಬಕ್ಕೆ ಪ್ರಣವಾನಂದ ಸ್ವಾಮೀಜಿ ಸಾಂತ್ವಾನ ಹೇಳಿದರು.

ನಂತರ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ , ನಾರಾಯಣಗುರು ಪೀಠ ಈಡಿಗ ಸಮಾಜದ ಪರವಾಗಿ ಸಾಂತ್ವನ ಹೇಳಲು ಬಂದಿದ್ದೇನೆ.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಹಿಂದೆ ಪ್ರಭಾವಿ ಬಲಶಾಲಿಗಳಿದ್ದಾರೆ. 183 ಕೋಟಿ ಹಣ ಬೇರೆ ರಾಜ್ಯದ ಕಂಪನಿಗಳ ಖಾತೆಗೆ ವರ್ಗಾವಣೆಯಾಗಿದೆ ಆ ಕಂಪನಿಗಳ ಮಾಲೀಕರಿಗೂ ರಾಜ್ಯದ ರಾಜಕೀಯ ಮಹಾನ್ ನಾಯಕರುಗಳಿಗೆ ಇರುವ ಸಂಬಂಧ ಏನು ಇದೆಲ್ಲವೂ ಸಹ ತನಿಖೆ ಆಗಬೇಕು ಎಂದರು.

40% ಕಮೀಷನ್ ವಿರುದ್ಧವಾಗಿ ಬಂದ ಈ ಸರ್ಕಾರ ಈಗ ಎಷ್ಟು ಪರ್ಸಂಟೇಜ್ ಕಮೀಷನ್ ಸರ್ಕಾರ ಎಂದು ಹೇಳಬೇಕಿದೆ. ಒಂದು ನಿಗಮದಲ್ಲಿ ಅಧಿಕಾರಿಗಳು ಪಿನ್ ಬದಲಾವಣೆ ಮಾಡಬೇಕೆಂದರೆ ಆ ಇಲಾಖೆಯ ಸಚಿವರ ಅನುಮತಿ ಬೇಕಾಗುತ್ತದೆ ಹಾಗಿದ್ದಲ್ಲಿ ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ ಎಂದರೆ ಸಚಿವರ ಅನುಮತಿ ಇಲ್ಲದೆ ಆಗಿಲ್ಲ ಆದ್ದರಿಂದ ಕೂಡಲೆ ಸಚಿವ ನಾಗೇಂದ್ರರನ್ನು ಸರ್ಕಾರ ಕೈಬಿಡಬೇಕು ಎಂಬುದು ಆಗ್ರಹವಾಗಿದೆ ಎಂದರು.

Pranavananda Swamiji ಎಸ್ ಐ ಟಿ ಹಾಗು ಸಿ ಐ ಡಿಯಿಂದ ಕೆಲಸವಾಗಲ್ಲ ಈ ಪ್ರಕರಣದಲ್ಲಿ ಅಂತರಾಜ್ಯದ ಮಟ್ಟದಲ್ಲಿ ವ್ಯವಹಾರ ಆಗಿದೆ ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
ಚಂದ್ರಶೇಖರನ್ ಕುಟುಂಬ ಮನೆಯ ಯಜಮಾನ ಕಳೆದುಕೊಂಡು ಕಷ್ಟದಲ್ಲಿದೆ ಸರ್ಕಾರ ಚಂದ್ರಶೇಖರನ್ ಕುಟುಂಬದ ಪತ್ನಿ ಅಥವಾ ಅವರ ಮಗನಿಗೆ ಸರ್ಕಾರಿ ಕೆಲಸ ಮತ್ತು ಅವರಿಗೆ ತಕ್ಷಣ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಹಾಗು
ತಪ್ಪಿತಸ್ಥರನ್ನು ಬಂಧಿಸಬೇಕು ಎಂದರು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ನಿಗಮಗಳ ಹಣವನ್ನು ರಕ್ಷಣೆ ಮಾಡುವಲ್ಲಿ ಸಿದ್ಧರಾಮಯ್ಯ ಸರ್ಕಾರ ವಿಫಲವಾಗಿದೆ . ಆದ್ದರಿಂದ ಕೂಡಲೇ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪ್ರಣವಾನಂದ ಸ್ವಾಮಿಗಳು ಆಗ್ರಹಿಸಿದರು.

Sumalatha ರಾಜ್ಯ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆ.ಬಿಜೆಪಿ ಸಂಭಾವ್ಯ ಪಟ್ಟಿಯಲ್ಲಿ ಸುಮಲತಾ ಹೆಸರು?

0

Sumalatha ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಜೂನ್‌ 13 ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ತನ್ನ ಪಾಲಿನ ಮೂರು ಸ್ಥಾನಗಳಿಗೆ ವಿಧಾನಪರಿಷತ್‌ನ ಹಾಲಿ ಸದಸ್ಯ ಎನ್‌.ರವಿಕುಮಾರ್‌, ಸಂಸದೆ ಸುಮಲತಾ ಮತ್ತು ಪ್ರೊ.ಎಂ.ನಾಗರಾಜ್ ಅವರನ್ನು ಸಂಭಾವ್ಯ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್‌ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್‌ ಸಿಕ್ಕಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿಯಾದ ಹಿನ್ನೆಲೆ ಸುಮಲತಾ ಅಂಬರೀಶ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ್ದು, ಇದೀಗ ಬಿಜೆಪಿ ಹೈಕಮಾಂಡ್‌ ಬಂಪರ್‌ ಆಫರ್‌ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

Sumalatha ಮೂರು ಸ್ಥಾನಗಳಿಗೆ ಬಿಜೆಪಿಯಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸುಮಾರು 40 ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ನಳಿನ್‌ಕುಮಾರ್ ಕಟೀಲ್‌, ಪ್ರತಾಪ ಸಿಂಹ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಸುಮಾರು 15 ಹೆಸರುಗಳನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಲಾಗಿತ್ತು.

ಜೂನ್ 01ರಂದು ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.

Dr. Shanth A. Thimmaiah ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನ ವಜಾಗೊಳಿಸಿ ಆದೇಶ

0

Dr. Shanth A. Thimmaiah ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಡಾ. ಶಾಂತ್ ಎ ತಿಮ್ಮಯ್ಯ ಅವರನ್ನು ವಜಾಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ (ಮೇ 31) ಆದೇಶ ಹೊರಡಿಸಿದೆ.

ಮಂಡಳಿಯ ಪ್ರಚಾರ ಜಾಹೀರಾತು ನೀಡುವಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಶಾಂತ್ ಎ ತಿಮ್ಮಯ್ಯ ಅವರ ವಿರುದ್ಧ ಕೇಳಿ ಬಂದಿತ್ತು.
ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಮಂಜೂರಾತಿಯಲ್ಲಿ ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಕಡೆಗಣಿಸಿ ಖಾಸಗಿ ಜಾಹೀರಾತು ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿ ಶಾಂತ್‌ ತಿಮ್ಮಯ್ಯ ಸಾರ್ವಜನಿಕ ಹಣದ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

Dr. Shanth A. Thimmaiah ಈ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿತ್ತು. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹದೇವ ಅವರು ತನಿಖೆ ನಡೆಸಿ ಸಲ್ಲಿಸಿದ ವರದಿಯನ್ನು ಆಧರಿಸಿ ಸರ್ಕಾರ ಕ್ರಮ ಕೈಗೊಂಡಿದೆ. ಮಂಡಳಿಯ ಸದಸ್ಯ ಸ್ಥಾನದಿಂದಲೂ ಶಾಂತ್‌ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಲಾಗಿದೆ.