Dr. Keladi Gundajois ಇತಿಹಾಸ ಸಂಶೋಧಕ, ಕೈ ಬರಹಗಳ ತಜ್ಞ, ಉತ್ಸಾಹದ 94 ವರ್ಷದ ಡಾ. ಕೆಳದಿ ಗುಂಡಾ ಜೋಯ್ಸ್ ರವರು ಭಾನುವಾರ ಸಂಜೆ ಸ್ವರ್ಗಸ್ಥರಾದರೆಂದು ತಿಳಿದುಬಂದಿದೆ.
ಅಂತಿಮ ದರ್ಶನಕ್ಕಾಗಿ ದೇಹವನ್ನು ಅವರ ಪುತ್ರರಾದ ಕೆಳದಿ ಡಾ.ವೆಂಕಟೇಶ್ ಜೋಯ್ಸ್ ರವರ ಸಾಗರದ ಅಣಲೇ ಕೊಪ್ಪ ಬಡಾವಣೆ ಮನೆಯಲ್ಲಿ ಇರಿಸಲಾಗಿತ್ತು. ಮೃತರ ಅಂತ್ಯಕ್ರಿಯೆ ಸೋಮವಾರ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಡಾ. ಕೆಳದಿ ಗುಂಡಾ ಜೋಯಿಸ ಅವರ ದೈವಾಧೀನರಾಗಿದ್ದಾರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಕನ್ನಡ ನಾಡಿನ ಶ್ರೇಷ್ಠ ಇತಿಹಾಸ ವಿದ್ವಾಂಸರಾದ ಡಾ. ಕೆಳದಿ ಗುಂಡಾ ಜೋಯಿಸರು ಕೆಳದಿ ಇತಿಹಾಸವನ್ನು ವಿಶ್ವಪ್ರಸಿದ್ಧ ಮಾಡುವಲ್ಲಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇತಿಹಾಸ ಮತ್ತು ಲಿಪಿ ಕ್ಷೇತ್ರದಲ್ಲಿ ಅವರ ಸಾಧನೆಗಳು ಹಿರಿಯವು.
ಶ್ರೀಯುತರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 18ನೇ ವಾರ್ಷಿಕ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ೨೦೧೮ರಲ್ಲಿ ಬಾದಾಮಿಯಲ್ಲಿ ನಡೆದ 32ನೇ ವಾರ್ಷಿಕ ಸಮ್ಮೇಳನದಲ್ಲಿ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ಇತಿಹಾಸ ಅಕಾದೆಮಿಯ ಹಿರಿಯ ಸದಸ್ಯರು ˌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರ್ಗದರ್ಶಕರಾಗಿ ಸದಾ ಲವಲವಿಕೆಯಿಂದ ಬೆರೆಯುತ್ತಿದ್ದ ಹಿರಿಯರು ತಮ್ಮ ಕೊನೆಯ ದಿನಗಳವರೆಗೂ ಅಕಾದೆಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
Dr. Keladi Gundajois ನಿರಂತರ ಅಧ್ಯಯನ ಅಧ್ಯಾಪನ ಇತಿಹಾಸ ಸಂರಕ್ಷಣೆ ಹಾಗೂ ಹಲವು ಸಮಾಜಮುಖಿ ಕಾರ್ಯಗಳನ್ನು ತಮ್ಮ ಜೀವನದುದ್ದಕ್ಕೂ ನಡೆಸಿದ ಹಿರಿಯರ ಅಗಲಿಕೆ ನಾಡಿನ ಸಾಂಸ್ಕೃತಿಕ ಲೋಕಕ್ಕೆ, ಇತಿಹಾಸ ಅಕಾಡೆಮಿಗೆ ತುಂಬಲಾರದ ನಷ್ಟವಾಗಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯು ನಾಡಿನ ಶ್ರೇಷ್ಠ ವಿದ್ವಾಂಸ ಡಾ. ಕೆಳದಿ ಗುಂಡಾ ಜೋಯಿಸರಿಗೆ ಗೌರ