Sunday, April 12, 2026
Sunday, April 12, 2026
Home Blog Page 695

Statue of Mahatma Gandhi ಇಟಲಿಯಲ್ಲಿ ಖಲಿಸ್ತಾನ್ ವಾದಿಗಳಿಂದ ಮಹಾತ್ಮಗಾಂಧಿ ಪ್ರತಿಮೆ ಧ್ವಂಸ

0

Statue of Mahatma Gandhi ಇಟಲಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಬುಧವಾರ ಧ್ವಂಸಗೊಳಿಸಿದ್ದು, ಹರ್ದೀಪ್ ಸಿಂಗ್ ನಿಜ್ಜರ್‌ಗೆ ಸಂಬಂಧಿಸಿದ ವಿವಾದಾತ್ಮಕ ಘೋಷಣೆಗಳನ್ನು ಪ್ರತಿಮೆಯ ಮೇಲೆ ಬರೆದಿದ್ದಾರೆ.

ಘಟನೆಯ ಬೆನ್ನಲ್ಲಿ ಈ ಪ್ರದೇಶದಲ್ಲಿ ನಿಗಾ ವಹಿಸಿದ್ದೇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಇಟಲಿಗೆ ತೆರಳುವ ಒಂದು ದಿನ ಮುನ್ನ ಈ ಘಟನೆ ನಡೆದಿದೆ.

50ನೇ ಜಿ7 ಶೃಂಗಸಭೆಯು ಇಟಲಿಯ ಅಪುಲಿಯಾ ಪ್ರದೇಶದ ಬೊರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ಜೂನ್ 13ರಿಂದ 15ರವರೆಗೆ ನಡೆಯಲಿದೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಪ್ರಕಾರ, ಪ್ರಧಾನಿ ಮೋದಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸಲು ನಾಳೆ ಇಟಲಿಯ ಅಪುಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

Statue of Mahatma Gandhi ಘಟನೆಯ ಕುರಿತು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ, ಭಾರತೀಯ ಅಧಿಕಾರಿಗಳು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ವಿಷಯದ ಬಗ್ಗೆ ಇಟಲಿ ಅಧಿಕಾರಿಗಳ ಮುಂದೆ ಮಾತುಕತೆಯನ್ನು ನಡೆಸಿದ್ದಾರೆ.

ಈ ಕುರಿತು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ

Ministry of Agriculture and Farmers’ Welfare ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ವಿರುದ್ಧ ಕಿಸಾನ್ ಸಂಯುಕ್ತ ಮೋರ್ಚಾದಿಂದ ಪ್ರತಿಭಟನೆ

0

Ministry of Agriculture and Farmers’ Welfare ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವನ್ನು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಹಂಚಿಕೆ ಮಾಡಿರುವ ಎನ್‌ಡಿಎ ಸರಕಾರದ ನಿರ್ಧಾರದ ವಿರುದ್ಧ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ) ಪ್ರತಿಭಟಿಸಿದ್ದು, ಜೂನ್‌ 2017ರಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಡೆದ 6 ರೈತರ ಹತ್ಯೆಗೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಹೊಣೆಗಾರರು ಎಂದು ಹೇಳಿಕೊಂಡಿದೆ.

ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ, ಸಾಲ ಮನ್ನಾ ಹಾಗೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ವಿರುದ್ಧ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ರೈತರನ್ನು ಹತ್ಯೆ ಮಾಡಲಾಗಿದೆ ಎಂದು ಎಸ್‌ಕೆಎಂ ಆರೋಪಿಸಿದೆ.

ಎಸ್‌ಕೆಎಂ ತನ್ನ ಸಾಮಾನ್ಯ ಸಭೆಯನ್ನು ಜುಲೈ 10ರಂದು ದೆಹಲಿಯಲ್ಲಿ ನಡೆಸುವುದಾಗಿ ತೀರ್ಮಾನಿಸಿದ್ದು, ಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳ ರೈತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

2014 ಮತ್ತು 2019ರಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರಕಾರ ನಡೆಸಿದಾಗ ದುರಹಂಕಾರ ಮತ್ತು ಸಂವೇದನಾಶೀಲತೆಯನ್ನು ಪ್ರದರ್ಶಿಸಿದೆ. ಇದು ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಜನರಲ್ಲಿ ಕೋಪವನ್ನು ಹುಟ್ಟುಹಾಕಿದೆ ಎಂದು ಎಸ್‌ಕೆಎಂ ಹೇಳಿದೆ.

Ministry of Agriculture and Farmers’ Welfare ಜೂನ್ 2017ರಲ್ಲಿ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ರೈತರ ಗುಂಪಿನ ಮೇಲೆ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಗುಂಡು ಹಾರಿಸಿದ ನಂತರ ಆರು ರೈತರು ಸಾವನ್ನಪ್ಪಿದ್ದರು.

ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಕೆಎಂ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತೀವ್ರವಾದ ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಯನ್ನು ಪರಿಹರಿಸಲು ಎನ್‌ಡಿಎ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದು, ಎಂಎಸ್‌ಪಿ ವಿಚಾರದಲ್ಲಿನ ಬಹುಕಾಲದ ಬೇಡಿಕೆಗಳನ್ನು ಪುನರುಚ್ಚರಿಸಿದೆ.

Tungabhadra Dam ಜಲಾಶಯ & ಕೆರೆಗಳ ಅಭಿವೃದ್ದಿ ಬಗ್ಗೆ ಸಭೆ ಕರೆಯಲು‌ ಜನಸ್ಪಂದನ ಟ್ರಸ್ಟ್ ಮನವಿ

0

Tungabhadra Dam ಶಿವಮೊಗ್ಗದ ಭದ್ರಾ ಹಾಗೂ ತುಂಗಾ ಜಲಾಶಯ ಅಭಿವೃದ್ಧಿ, ಭದ್ರಾವತಿ ವ್ಯಾಪ್ತಿ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಜನ್ನಾಪುರದ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಲಾಶಯ ಹಾಗೂ ಕೆರೆಗಳ ಅಭಿವೃದ್ಧಿ ಕರಿತ ಸಭೆ ಕರೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿಯಲ್ಲಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳ ರೈತರ ಗದ್ದೆ ತೋಟಗಳಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ಯಾವುದೇ ಅಡೆತಡೆ ಇಲ್ಲದೇ ಸಮೃದ್ಧಿಯಾಗಿ ನಿರಂತರವಾಗಿ ನೀರನ್ನು ಹರಿಸಲು ಹಾಗೂ ಕೆರೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರಮುಖ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಈ ಸಂಬಂಧ ಅಧಿಕಾರಿವರ್ಗದವರ ಒಂದು ಸಭೆಯನ್ನು ಭದ್ರಾಜಲಾಶಯ ಸಮೀಪವಿರುವ ಅತಿಥಿಗೃಹದಲ್ಲಿ ಕರೆಯಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸಲಾಗಿದೆ.

Tungabhadra Dam ಸುಮಾರು 10ಕ್ಕೂ ಅಧಿಕ ವರ್ಷಗಳಿಂದ ತುಂಗಾ ಜಲಾಶಯದಿಂದ (ಗಾಜನೂರು ಡ್ಯಾಂ) ಹೆಚ್ಚುವರಿ ನೀರು ಕಾಲುವೆಗಳ ಮೂಲಕ ಭದ್ರಾ ಜಲಾಶಯಕ್ಕೆ ಜೋಡಣೆ ಮಾಡುವ ಕಾಮಗಾರಿ (ಭದ್ರಾ ಮೇಲ್ದಂಡ ಯೋಜನೆ ಪ್ಯಾಕೇಜ್ ನಂ.೧)ಬಹಳ ಮಂದಗತಿಯಲ್ಲಿ ನಡೆಯುತ್ತಿದ್ದು, ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ೨೦೨೫ ನೇ ಇಸವಿ ಮಳೆಗಾಲ ಪ್ರಾರಂಭವಾಗುವ ಮೊದಲು ಸದರಿ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು ಎಂದು ತಿಳಿಸಲಾಗಿದೆ

KSRTC Bus ಸೊರಬ ತಾಲ್ಲೂಕು ಕೋಡಂಬಿ ಗ್ರಾಮಕ್ಕೆ ಬಸ್ ವ್ಯವಸ್ಥೆ: ಊರಿನಲ್ಲಿ ಸಡಗರ

0

KSRTC Bus ಸೊರಬ ತಾಲೂಕಿನ ಕೋಡಂಬಿ ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಗ್ರಾಮೀಣ ಭಾಗದ ಜನರ ಬಹುಕಾಲದ ಕನಸಾಗಿದ್ದ ಬಸ್ಸಿನ ವ್ಯವಸ್ಥೆ ಕಲ್ಪಿಸಿರುವುದು ಗ್ರಾಮಸ್ಥರಿಗೆ ಹರ್ಷ ತಂದಿದೆ. ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ ಅವರ ಮುತುವರ್ಜಿಯಿಂದಾಗಿ ಬಸ್ ವ್ಯವಸ್ಥೆ ಆರಂಭಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.

KSRTC Bus ಸೊರಬದಿಂದ ಬೆಳಗ್ಗೆ ೭ಕ್ಕೆ ಹೊರಡುವ ಬಸ್ ಚಂದ್ರಗುತ್ತಿ, ಚನ್ನಪಟ್ಟಣ, ಮಣ್ಣತ್ತಿ, ನರ್ಚಿ, ಕೋಡಂಬಿ, ಕಾರಗೋಡು ಮಾರ್ಗದಿಂದ ೧೬ನೇ ಮೈಲುಗಲ್ಲಿಗೆ ತಲುಪಲಿದೆ.
ಈ ಸಂರ್ಭದಲ್ಲಿ ಮುಖಂಡರಾದ ಆರ್. ಶ್ರೀಧರ್ ಹುಲ್ತಿಕೊಪ್ಪ, ಸುನಿಲ್ ಗೌಡ, ರವಿಕುಮಾರ್ ಕೋಡಂಬಿ, ಉಮಾಪತಿ ತೌಡತ್ತಿ, ಎಸ್.ಟಿ. ನಾಯಕ್ ಹುಲ್ತಿಕೊಪ್ಪ, ಶಶಿ ನರ್ಚಿ, ಚಂದ್ರಹಾಸ ನರ್ಚಿ, ಉಮೇಶ ಕೋಡಂಬಿ ಸೇರಿದಂತೆ ಊರ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ks

Gauri movie ಇಂದ್ರಜಿತ್ ಲಂಕೇಶ್ ನಿರ್ದೇಶನದ ” ಗೌರಿ” ಸಿನಿಮಾ ಮುಂದಿನ ತಿಂಗಳು ತೆರೆಗೆ

0

Gauri movie ಗೌರಿ ಚಲನಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಸಿನಿಮಾಕ್ಕೆ ದೊಡ್ಡ ಬಜೆಟ್ ಹೂಡಲಾಗಿದೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ಐವರು ಸಂಗೀತ ನಿರ್ದೇಶಕರಿದ್ದಾರೆ.

ಕಮರ್ಷಿಯಲ್ ಆದರೂ ಒಳ್ಳೆಯ ಮೆಸೇಜ್ ಇದೆ. ಗೌರಿ ತತ್ವದ ಮೇಲೆ ಸಿನಿಮಾ ಮಾಡುತ್ತಿಲ್ಲ. ಗೌರಿಯ ಕಥೆಯಲ್ಲ. ಆದರೆ ಅಕ್ಕನ ನೆನಪಿಗಾಗಿ ಸಿನಿಮಾ ಮಾಡುತ್ತಿರುವುದಾಗಿಯೂ ಮುಂದಿನ ತಿಂಗಳು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದರು.

ಗೌರಿ ಚಲನ ಚಿತ್ರದ ಪ್ರಮೋಷನ್‌ಗಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಅವರ ಮೊಮ್ಮಗ ಸಮರ್ಜಿತ್ ಲಂಕೇಶ್ ನಾಯಕನಾಗಿ ನಾಯಕಿಯಾಗಿ ಸಾನಿಯಾ ಅಯ್ಯರ್ ಅಭಿನಯಿಸಿದ್ದಾರೆ. ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಥಿಯೇಟರ್ ಸ್ಟಡಿಸ್ ಮಾಡಿದ್ದಾರೆ. ಇಬ್ಬರು ಕನ್ನಡ ಪ್ರತಿಭೆಗಳಿದ್ದಾರೆ.

ಪ್ರಿಯಾಂಕ ಉಪೇಂದ್ರ, ಲೂಸ್ ಮಾದ, ನೀನಾಸಂ ಸುಧೀರ್, ಅಕುಲ್ ಬಾಲಾಜಿ, ಚಂದು ಗೌಡ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ ಎಂದರು.
ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ. ಅಕ್ಕ ಗೌರಿಯ ನೆನಪಿಗಾಗಿ ಸಿನಿಮಾಕ್ಕೆ ಅದೇ ಹೆಸರು ಇಡಲಾಗಿದೆ.

ಗೌರಿಯ ನೆನಪಿಗಾಗಿ ಆರಂಭಿಸಲಾಗಿದೆ ವಿನಃ ಇದು ಗೌರಿ ಸಿದ್ದಾಂತದ ಸಿನಿಮಾ ಅಲ್ಲ. ಕನ್ನಡಕ್ಕೆ ಸೀಮಿತವಾಗಿದೆ. ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಯುವಕರ ಮೇಲೆ ಒತ್ತಡ ಹಾಕಬಾರದು ಎಂಬ ಕಾರಣಕ್ಕೆ ಕನ್ನಡಕ್ಕೆ ಸೀಮಿತವಿಡಲಾಗಿದೆ ಎಂದರು.

ನೈಜ ಘಟನೆಯ ಸಿನಿಮಾ ಇದಾಗಿದೆ. ಸಿನಿಮಾ ಕಥೆಯ ವಿಷಯದಲ್ಲಿ ಗೆದ್ದಿದ್ದೇನಿ ಮತ್ತು ಸೋತಿದ್ದೇನೆ. ಆದರೆ ಗುಣಮಟ್ಟದಲ್ಲಿ ಸೋತಿಲ್ಲ. ನಮಗೆ ವಿದೇಶದಲ್ಲಿ ಶೂಟಿಂಗ್ ಗೆ ಆಗುವ ಖರ್ಚಿನಲ್ಲಿ ರಾಜ್ಯದಲ್ಲಿ ಎರಡು ಶೂಟಿಂಗ್ ಮಾಡಬಹುದು. ಹಾಗಾಗಿ ವಿದೇಶದಲ್ಲಿ ಶೂಟಿಂಗ್ ಮಾಡಿಲ್ಲ. ಕಥೆಗೆ ವಿದೇಶಕ್ಕೆ ಹೋಗಿದ್ದರೂ ಶೂಟಿಂಗ್ ನ ಅವಶ್ಯಕತೆ ಇರಲಿಲ್ಲವೆಂದರು.

Gauri movie ಸಮರ್ಜಿತ್ ಲಂಕೇಶ್ ಮಾತನಾಡಿ, ಚಿಕ್ಕ ವಯಸ್ಸಿನಿಂದ ಸಿನಿಮಾ ಇಂಡಸ್ಟ್ರೀಸ್ ಹೆಚ್ಚು ಪ್ರೀತಿ. ಸುದೀಪ್ ಮತ್ತು ನನ್ನ ತಂದೆಯ ಸಿನಿಮಾಗಳ ಪ್ರೇರಣೆ. ಯೋಗರಾಜ್ ಭಟ್ ರವರ ಗರಡಿ ಮತ್ತು ಕರಟಕಧಮನಕ ಸಿನಿಮಾದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಸಿಸ್ಟೆಂಟ್ ನೃತ್ಯ ನಿರ್ದೇಶಕರಾಗಿದ್ದೇನೆ. ಪಲ್ಲವಿ ಮತ್ತು ಎಲ್ಲಿಂದಲೋ ಬಂದವರು ಸಿನಿಮಾವನ್ನು ಅತ್ತೆ ಜೊತೆ ನೋಡಿದ್ದ ನೆನಪನ್ನು ಮೆಲುಕು ಹಾಕಿದ ನವ ನಾಯಕ, ಅಪ್ಪು ಸಾರ್ ಮತ್ತು ಸುದೀಪ್ ನನಗೆ ಸ್ಫೂರ್ತಿ ಎಂದರು.

ಸಾನಿಯಾ ಅಯ್ಯರ್ ಮಾತನಾಡಿ, ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಿರುವುದು ಖುಷಿಯಾಗಿದೆ. ಸಮರ್ಜಿತ್ ಇಡೀ ತಂಡದಲ್ಲಿ ಕೆಲಸ ಮಾಡುವಾಗ ಕುಟುಂಬಸ್ಥಳು ಎಂಬಂತೆ ಟ್ರೀಟ್ ಸಿಕ್ಕಿದೆ. ಸಮರ್ಜಿತ್ ನೋಡಿದಾಗ ಅಪ್ಪು ಸಾರ್ ನೆನಪಾಗುತ್ತದೆ. ಪಾತ್ರಕ್ಕಾಗಿ ಕಲಿಯಬೇಕಾದ ಅಂಶ ಸಿನಿಮಾದಲ್ಲಿದೆ. ಇಂದ್ರಜಿತ್ ಸಾರ್ ಇಲ್ಲವಾದರೆ ನನ್ನ ಕನಸು ಚಿಗುರು ಒಡೆಯುತ್ತಿರಲಿಲ್ಲ. ನಾನು ಧಾರಾವಾಹಿಯಿಂದ ನನ್ನ ಪ್ರಯಾಣ ಆರಂಭಿಸಿದೆ ಸಿನಿಮಾದಲ್ಲಿ ತೆರೆದುಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದ ಅವರು ತಾವೇ ಬರೆದ ಕಾವ್ಯವನ್ನೂ ಹೇಳಿದ್ದು ಗಮನಾರ್ಹವಾಗಿತ್ತು ಎಂದರು.

Youth Hostel of Association India ಚಾರಣದಿಂದ ಸಸ್ಯ & ಜೀವ ವೈವಿಧ್ಯತೆಯ ಪರಿಚಯ- ಜಿ.ಜಿ.ಸುನೀಲ್ ಕುಮಾರ್

0

Youth Hostel of Association India ಚಾರಣ ಚಟುವಟಿಕೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ ಮನಸ್ಸು ಸದೃಢಗೊಳ್ಳುವುದರ ಜತೆಯಲ್ಲಿ ಸಂತೋಷ ನಮ್ಮದಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಜಿ.ಸುನೀಲ್‌ಕುಮಾರ್ ಹೇಳಿದರು.

ಯೂತ್ ಹಾಸ್ಟೆಲ್ ಆಫ್ ಅಸೋಸಿಯೇಷನ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮಳೆಗಾಲದ ಚಾರಣ.. ಬಂಡೆಕಲ್ ಗುಡ್ಡ ಹಾಗೂ ಉಕ್ಕಡ ಫಾಲ್ಸ್ ಗೆ ಚಿಕ್ಕಮಂಗಳೂರು ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾರಣಗಳನ್ನು ಪ್ರತಿ ವರ್ಷ ಜಿಲ್ಲಾ ಘಟಕದ ಆಯೋಜಿಸುತ್ತಿದ್ದು, ನೂರಾರು ಜನರು ಚಾರಣದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.

ಚಾರಣ ಮಾಡುವುದರಿಂದ ಸಸ್ಯ ಸಂಕುಲ ಹಾಗೂ ಜೀವ ವೈವಿಧ್ಯತೆಯ ಪರಿಚಯ ಆಗುತ್ತದೆ. ಪರಿಸರದ ವಿಶೇಷತೆ ಬಗ್ಗೆ ತಿಳಿಯುತ್ತದೆ. ಉಕ್ಕಡ ಜಲಪಾತ ಹಾಗೂ ಬಂಡೆ ಕಲ್ ಬೆಟ್ಟಕ್ಕೆ ನೂರು ಜನ ಸದಸ್ಯರು ಪಾಲ್ಗೊಂಡಿರುವುದು ವಿಶೇಷ. ಮಹಿಳೆಯರು, ಮಕ್ಕಳು ಅತ್ಯಂತ ಖುಷಿಯಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ಜಿಲ್ಲಾ ಚೇರ‍್ಮನ್ ಹರೀಶ್ ಪಂಡಿತ್ ಮಾತನಾಡಿ, ಚಾರಣದಿಂದ ಸಹ ಪ್ರವಾಸಿಗಳೊಂದಿಗೆ ಉತ್ತಮ ಸಂವಹನ ನಡೆಸುವ ಜತೆಯಲ್ಲಿ ಮಾಹಿತಿ ವಿನಿಮಯ ಆಗುತ್ತದೆ. ಮಾನಸಿಕ ದುಗುಡ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ. ದೇಹದ ಶಕ್ತಿ ಸಾಮಾರ್ಥ್ಯದ ಅರಿವಾಗುತ್ತದೆ ಎಂದು ಹೇಳಿದರು.

Youth Hostel of Association India ಯೂತ್ ಹಾಸ್ಟೆಲ್ ರಾಜ್ಯ ಸಂಘದ ಮಾಜಿ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ತುಂಬಾ ಕಡಿಮೆ ಖರ್ಚಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಚಾರಣಗಳನ್ನು ಯೂತ್ ಹಾಸ್ಟೆಲ್ ಆಯೋಜಿಸುತ್ತದೆ. ಹೆಚ್ಚು ಹೆಚ್ಚು ಜನರು ಯೂತ್ ಹಾಸ್ಟೆಲ್ ಸದಸ್ಯರಾಗಬೇಕು. ಮಳೆಯಲ್ಲಿ ನಡೆದ ಚಾರಣ ವಿಶೇಷ ಅನುಭವ ಎಂದು ತಿಳಿಸಿದರು.
ಚಾರಣದಲ್ಲಿ ಕಾರ್ಯದರ್ಶಿ ಪ್ರಶಾಂತ್, ಉಮೇಶ್ , ರಾಘವೇಂದ್ರ, , ಮನಮೋಹನ್ ಪವಾರ್. ನವೀನ್ ಪಂಡಿತ್. ಹೇಮಂತ್ ರಾಘವೇಂದ್ರ. ಈಶ್ವರಿ.. ಚಿಕ್ಕಮಂಗಳೂರು ಘಟಕದ. ಶಿವಾನಂದ್. ಮಧುಸೂದನ್ ಅಲ್ತಾಫ್ ಸುನೀಲ್, ಆನಂದ್ ಜಿಲ್ಲಾ ಘಟಕದ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Tirthahalli Police ತೀರ್ಥಹಳ್ಳಿ ತಾಲ್ಲೂಕಿನಲ್ಲ ಗಾಂಜಾ ಬೆಳೆ ಪತ್ತೆ: ಬೆಳೆದಾತನ ವಿರುದ್ಧ ಕೇಸ್

0

Tirthahalli Police ತೀರ್ಥಹಳ್ಳಿ ಪೊಲೀಸರು ಅಡಿಕೆ ತೋಟದ ಮೇಲೆ ದಾಳಿ ನಡೆಸಿ ಅಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿ ಅವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ ಎಂದು ಖಚಿತ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿತ್ತು.

Tirthahalli Police ಈ ಹಿನ್ನೆಲೆಯಲ್ಲಿ ಡಿಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದ ಸಿಬ್ಬಂಧಿಗಳ ತಂಡ, ಮಾಹಿತಿ ಲಭ್ಯವಾದ ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.
ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು ಮೌಲ್ಯ ೨,೫೦,೦೦೦ ರೂಗಳ ೯ ಕೆಜಿ ೫೨೪ ಗ್ರಾಂ ತೂಕದ ಒಟ್ಟು ೧೪ ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ ೦೧೪೮/೨೦೨೪ ಕಲಂ ೮ಅ, ೨೦ (ಚಿ) (i) ಓಆPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

Anjaneyaswamy Temple ಆಂಜನೇಯ ಗುಡಿಯಲ್ಲಿನ ಹುಂಡಿಯನ್ನೇ ಕದ್ದ ಕಳ್ಳರು!

0

Anjaneyaswamy Temple ಹೊಳೆಹೊನ್ನೂರು ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದ ಪುರಾತನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯನ್ನು ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಹುಂಡಿಯಲ್ಲಿ 1.5ಲಕ್ಷ ರೂ. ಇತ್ತೆಂದು ಅಂದಾಜಿಸಲಾಗಿದೆ. ಅರ್ಚಕ ಕೃಷ್ಣಮೂರ್ತಿ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದಾಗ ಕಾಣಿಕೆ ಹುಂಡಿ ಕಾಣೆಯಾಗಿರುವುದು ಗೊತ್ತಾಗಿದೆ. ಆ ಬಳಿಕ ಅವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

Anjaneyaswamy Temple ಆ ಬಳಿಕ ಸ್ಥಳೀಯರು ಸುತ್ತಮುತ್ತ ಹುಡುಕಾಡಿದ್ದಾರೆ. ಊರಿನಿಂದ ಹೊಳೆಗೆ ಹೋಗುವ ರಸ್ತೆ ಪಕ್ಕದಲ್ಲಿ ಹುಂಡಿ ಒಡೆದು ಅದರಲ್ಲಿದ್ದ ಹಣ ದೋಚಿಕೊಂಡು ಕಳ್ಳರು ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Actor Darshan ಕೊಲೆ ಕೇಸಿನ ಸಂಬಂಧ ನಟ ದರ್ಶನ್ ಅರೆಸ್ಟ್

0

Actor Darshan ನಟ ದರ್ಶನ್ ಮದುವೆಯಾಗಿದ್ದಾರೆ ಎನ್ನಲಾದ ನಟಿ ಪವಿತ್ರಾ ಗೌಡ ಅವರಿಗೆ ಮೆಸೇಜ್ ಮಾಡಿದ್ದ ಎಂದು ಆರೋಪಿಸಿ ಚಿತ್ರದುರ್ಗ ಮೂಲದ ಯುವಕನನ್ನು ಕೊಲೆ ಮಾಡಲಾಗಿದ್ದು, ದರ್ಶನ್ ಮತ್ತು ಅವರ 10 ಜನ ಸಹಚರರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಇಂದು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ನಟಿ ಪವಿತ್ರಾ ಗೌಡ ಅವರನ್ನು ದರ್ಶನ್ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇಬ್ಬರ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು.

ಪವಿತ್ರಾ ಗೌಡ ಅವರಿಗೆ ಸ್ವಾಮಿ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಕೋಪಗೊಂಡಿದ್ದ ದರ್ಶನ್ ತಮ್ಮ ಬೆಂಬಲಿಗರನ್ನು ಕಳುಹಿಸಿ ಥಳಿಸಿದ್ದರು ಎನ್ನಲಾಗಿದೆ.
ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾಗುತ್ತಿರುವ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಯಿಸಲಾಗಿದೆ.

ಜೂನ್ 8ರಂದು ಆತನನ್ನು ನಗರದ ಶೆಡ್ ಒಂದರಲ್ಲಿ ಇರಿಸಿ ಕೊಲೆ ಮಾಡಲಾಗಿದೆ. ಜೂನ್ 09 ರಂದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಕೊಲೆ ಮಾಡಿದ ಆರೋಪಿಗಳು ತಾವೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ದರ್ಶನ್ ಅವರ ಸೂಚನೆ ಮೇರೆಗೆ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೊಲೆ ಪ್ರಕರಣ ವಿಚಾರವಾಗಿ ಇಂದು ಪೊಲೀಸರು ಮೈಸೂರಿನ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Actor Darshan ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ ಸೇರಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಕೊಲೆಗಾರರ ತಾವು ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಮೊದಲು ಮೂರು ಜನ ಪೊಲೀಸರಿಗೆ ಸರೆಂಡರ್ ಆಗಿದ್ದರು. ನಂತರ ಅವರನ್ನು ವಿಚಾರಣೆ ಮಾಡಿದ ಬಳಿಕ ಇದರಲ್ಲಿ ನಟ ದರ್ಶನ್ ಪಾತ್ರ ಇದೆ ಎಂಬುದು ಗೊತ್ತಾಗಿದೆ.

World Day Against Child Labour ದುಡಿಯುವ ಮಕ್ಕಳನ್ನ ಶಾಲೆಗೆ ತನ್ನಿ- ನ್ಯಾ.ಎಂ.ಎಸ್.ಸಂತೋಷ್

0

World Day Against Child Labour ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಬರುವಂತೆ ಮಾಡಬೇಕು ಹಾಗೂ ಹೆಚ್ಚಿನ ಬಾಲ ಕಾರ್ಮಿಕ ತಪಾಸಣೆಯನ್ನು ಕೈಗೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಶಿವಮೊಗ್ಗ ಹಾಲು ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಜೂ.12 ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ-2024’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೂ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಬಾಲ ಕಾರ್ಮಿಕ ತಪಾಸಣೆಯನ್ನು ಹೆಚ್ಚೆಚ್ಚು ಕೈಗೊಂಡು ಮಕ್ಕಳು ದುಡಿಯುತ್ತಿರುವುದು ಕಂಡು ಬಂದಲ್ಲಿ, ಸೂಕ್ತ ಕ್ರಮ ಕೈಗೊಂಡು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕೆಂದು ತಿಳಿಸಿದರು.

ಮಕ್ಕಳು ಶಾಲೆಗೆ ಬಂದಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಮಕ್ಕಳು ಶಾಲೆಗೆ ಬಂದು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ಬರುವಂತೆ ಮಾಡಬೇಕೆಂದು ತಿಳಿಸಿದರು.

World Day Against Child Labour ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಾದ ಗ್ಯಾರೇಜ್‍ಗಳು, ಕಟ್ಟಡ ಕೆಲಸ, ಭಿಕ್ಷಟಾನೆ ಮತ್ತು ಬೇರೆ ಯಾವುದೇ ಕ್ಷೇತ್ರದಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೂಂಡರೆ ಅಥವಾ ಮಕ್ಕಳು ಕೆಲಸ ಮಾಡುತ್ತಿದ್ದರೆ ಅಂತಹ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಬೇಕು. ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ನೀಡಿ ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಿರೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಬೆಳಗ್ಗೆ 10 ರಿಂದ ಸಂಜೆ 4.30 ವರೆಗೆ ಮಕ್ಕಳು ಶಾಲೆಯಲ್ಲಿ ಕಲಿಯಬೇಕು. ಕೆಲಸಕ್ಕೆ ಹೊಗಬಾರದು. ಆ ರೀತಿ ಕೆಲಸ ಮಾಡುವ ನಿಮ್ಮ ಸ್ನೇಹಿತರು ಕಂಡು ಬಂದರೆ ಶಾಲಾ ಶಿಕ್ಷಕರಿಗೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಮಕ್ಕಳು ಮೊಬೈಲ್ ಬಳಕೆಯನ್ನು ಮಿತವಾಗಿ ಮಾಡಬೇಕು. ಕೇವಲ ಕಲಿಕೆಯ ವಿಷಯವಾಗಿ ಮಾತ್ರ ಬಳಕೆ ಮಾಡಬೇಕೆಂದು ತಿಳಿ ಹೇಳಿದರು. ಹಾಗೂ ಈ ಮಾಹಿತಿಯನ್ನು ತಂದೆ ತಾಯಿ, ಸುತ್ತಮುತ್ತಲಿನ ಜನರಿಗೆ ತಿಳಿಸಿ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನ ಅಧಿಕಾರಿ ಗಂಗಾ ಬಾಯಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಮನೆಯಲ್ಲಿ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಬೇಕು. ಹಾಗೂ ಮಕ್ಕಳ ಮತ್ತು ಮಹಿಳೆಯರ ಸಾಗಣೆ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅಂತಹ ಘಟನೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಹಾಗೂ 112 ಗೆ ಕರೆ ಮಾಡಿ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕ ಭೀಮೇಶ್ ಪಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಮಡು ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ 2016 ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ, ಕಾರ್ಮಿಕ ಅಧಿಕಾರಿ ವೇಣುಗೋಪಾಲ್, ದುರ್ಗಿಗುಡಿ ಶಾಲೆ ಮುಖ್ಯೋಪಾಧ್ಯಾಯ ಮೋಹನ್, ದೈಹಿಕ ಶಿಕ್ಷಕ ನಿರಂಜನಮೂರ್ತಿ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಾಗೃತಿ ಜಾಥಾಕ್ಕೆ ಚಾಲನೆ : ಬೆಳಿಗ್ಗೆ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಅಂಗವಾಗಿ ನಗರದ ಶಿವಪ್ಪ ಸರ್ಕಲ್‍ನ್ ನಿಂದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆವರೆಗೆ ಏರ್ಪಡಿಸಲಾಗಿದ್ದ ಸ್ತಬ್ದಚಿತ್ರ ವಾಹನ ಹಾಗೂ ಕರಪತ್ರ ಮೂಲಕ ಕಾನೂನು ಅರಿವು ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಚಾಲನೆ ನೀಡಿದರು.