Sunday, April 12, 2026
Sunday, April 12, 2026
Home Blog Page 694

Actress Ramya ದರ್ಶನ್ ಕೇಸ್ ಬಗ್ಗೆ ತೀವ್ರ ಖಾರವಾಗಿ ಅನಿಸಿಕೆ ವ್ಯಕ್ತಪಡಿಸಿದ ನಟಿ ರಮ್ಯಾ

0

Actress Ramya ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಇತ್ತ ದರ್ಶನ್‌ ಪರ ಹಾಗೂ ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದೆ.

ಪವಿತ್ರಾ ಗೌಡ ಅವರಿಗೆ ಆಶ್ಲೀಲವಾಗಿ ಮೆಸೇಜ್‌ ಮಾಡಿದ್ದಕ್ಕಾಗಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಅಲ್ಲಿ ಶೆಡ್‌ ವೊಂದರಲ್ಲಿ ಹಲ್ಲೆ ಮಾಡಿ, ಕೊಲೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು.

ಈ ಪ್ರಕರಣದಲ್ಲಿ ದರ್ಶನ್‌ ಎ1 ಆಗಿದ್ದು, 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಚಿತ್ರರಂಗ ಈ ಘಟನೆ ಬಗ್ಗೆ ಕೇಳಿ ಶಾಕ್‌ ಆಗಿದೆ. ಕೆಲ ಕಲಾವಿದರು ವಿಚಾರಣೆ ಪೂರ್ತಿ ಆಗಿ ದರ್ಶನ್‌ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಲಿ ಎಂದು ಟ್ವೀಟ್‌ ಮಾಡಿದ್ದಾರೆ.

Actress Ramya ಈ ಬಗ್ಗೆ ನಟಿ ರಮ್ಯಾ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕೆಂದು ಹೇಳಿರುವ ಪೋಸ್ಟ್‌ ವೊಂದನ್ನು ಹಂಚಿಕೊಂಡು, ತನ್ನ ಅಭಿಪ್ರಾಯವನ್ನೂ ಆ ಮೂಲಕ ವ್ಯಕ್ತಪಡಿಸಿದ್ದಾರೆ.
“ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆ ಸಾಬೀತಾದರೆ ದರ್ಶನ್‌ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಹಣ ಅಥವಾ ಇತರೆ ಅಂಶ ಪರಿಣಾಮ ಬೀರಬಾರದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಹೇಳಿರುವ ಪೋಸ್ಟ್‌ ವೊಂದನ್ನು ʼಎಕ್ಸ್‌ʼ ನಲ್ಲಿ ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

ನಟಿ ರಮ್ಯಾ ಈ ಹಿಂದೆ ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆತವಾದ ಪ್ರಕರಣದ ಸಂದರ್ಭದಲ್ಲೂ ಸ್ಪಂದಿಸಿದ್ದರು. ಫ್ಯಾನ್ಸ್‌ ಹಾಗೂ ಸ್ಟಾರ್‌ ಗಳಿಗೆ ಬುದ್ಧಿವಾದ ಹೇಳಬೇಕಾಗಿದೆ ಎಂದಿದ್ದರು.

ಸದ್ಯ ರಮ್ಯಾ ಅವರ ಈ ಟ್ವೀಟ್‌ ಗಮನ ಸೆಳೆದಿದ್ದು, ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

B.Y.Raghavendra ಶಿಕಾರಿಪುರದಲ್ಲಿ ಮಾತ್ರ ಬಿಜೆಪಿಗೆ ಕಡಿಮೆ ಮತಗಳು. ಪರಾಮರ್ಶೆ ಮಾಡಬೇಕಿದೆ- ಸಂಸದ ಬಿ.ವೈ‌.ಆರ್.

0

B.Y.Raghavendra ಶಿಕಾರಿಪುರ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ ಆದರೆ ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ ಅದಕ್ಕೆ ಪಕ್ಷದ ಕಾರ್‍ಯಕರ್ತರು ಪರಾಮರ್ಶೆ ಮಾಡಿಕೊಂಡು ಮುಂದೆ ಈ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್‍ಯಕರ್ತರಿಗೆ ಅಭಿನಂದನೆ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ತಾಲೂಕಿನಲ್ಲಿಯೇ ಹೆಚ್ಚು ಮತ ಬಂದಿದ್ದರೆ, ಬಿಜೆಪಿಗೆ ಕಡಿಮೆ ಲೀಡ್ ಬಂದಿದೆ. ಆದರೂ ೧೯೮೩ರಿಂದ ೨೦೨೪ರವರೆಗೆ ಜಿಲ್ಲೆ, ತಾಲೂಕಿನಲ್ಲಿ ನಡೆದಿರುವ ೧೧ವಿಧಾನಸಭೆ, ೬ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿಗೆ ಅತಿಹೆಚ್ಚು ೮೭೧೫೩ ಮತ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ೮೫ಸಾವಿರ, ವಿಧಾನಸಭೆ ಚುನಾವಣೆಯಲ್ಲಿ ೮೧ಸಾವಿರ ಮತ ಬಂದಿತ್ತು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮತ ಪಡೆಯಬೇಕು ಎನ್ನುವ ಆಸೆ ಈಡೇರಿಲ್ಲ ಎಂದರು.
ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಕಾರ್‍ಯಕರ್ತರ ಹಿತಕ್ಕೆ, ಅಭಿವೃದ್ಧಿಗೆ ಗಮನ ನೀಡಿದ್ದೇವೆ. ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಬಿಜೆಪಿ ಮನೆಗೆ ಹೋಗಿದೆ ಎನ್ನುವ ಅವರ ಹೇಳಿಕೆ ಹಾಸ್ಯಾಸ್ಪದ. ೧೮೦ಕೋಟಿ ರೂ. ತೆಲಂಗಾಣಕ್ಕೆ ಸಾಗಿಸಿದ್ದು ಅವರದೆ ಪಕ್ಷ ಎನ್ನುವುದು ಅವರು ಮರೆತಿದ್ದಾರೆ.
B.Y.Raghavendra ಏಳು ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆ ಕಿತ್ತುಕೊಂಡಿದ್ದು ಮಧು ಬಂಗಾರಪ್ಪ, ಪಕ್ಷದ ಕಾರ್‍ಯಕರ್ತರಿಗೆ ಚೇಲಾಗಳು ಎಂದು ಕರೆದಿದ್ದು ಅವರೆ ಆದರೂ ಅವರಿಗೆ ತಾಲೂಕಿನಲ್ಲಿ ಜಿಲ್ಲೆಯಲ್ಲೆ ಹೆಚ್ಚು ಮತ ಸಿಕ್ಕಿದೆ ಎನ್ನುವುದು ಮರೆಯಬಾರದು ಎಂದು ಹೇಳಿದರು.

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅರ್ಧದಷ್ಟು ಸೀಟು ಗೆಲ್ಲುವುದಕ್ಕೆ ಆಗದ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

Land Beat App ಸರ್ಕಾರಿ ಜಮೀನು ರಕ್ಷಣೆಗೆ ಲ್ಯಾಂಡ್ ಬೀಟ್ ಆ್ಯಪ್

0

Land Beat App ಸರ್ಕಾರಿ ಜಮೀನು ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಲ್ಯಾಂಡ್‌ ಬೀಟ್‌ ಅಪ್ಲಿಕೇಶನ್‌ ಮೂಲಕ ಅಕ್ರಮವಾಗಿ ಭೂ ಒತ್ತುವರಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಅಪ್ಲಿಕೇಶನ್‌ ಮೂಲಕ ಬೆರಳ ತುದಿಯಲ್ಲೇ ಸುಮಾರು 14 ಲಕ್ಷ ಸರ್ಕಾರಿ ಆಸ್ತಿಗಳ ಸಂಕ್ಷಿಪ್ತ ವಿವರಗಳು ಲಭ್ಯವಿದೆ. ಪಹಣಿದಾರರ ಜಮೀನುಗಳ ರಕ್ಷಣೆಗೂ ಅತ್ಯಪಯುಕ್ತ ಮಾಹಿತಿ ಸಿಗುತ್ತದೆ.

Pre Primary School ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಸರ್ಕಾರದ ಹಸಿರು ನಿಶಾನೆ

0

Pre Primary School ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. 7 ಜಿಲ್ಲೆಗಳಲ್ಲಿ 1,008 ಪೂರ್ವ ಪ್ರಾಥಮಿಕ ಶಾಲೆಗಳು ಈ ವರ್ಷದಿಂದಲೇ ಆರಂಭಿಸಲು ಆದೇಶ ಹೊರಡಿಸಲಾಗಿದೆ.

ಬಳ್ಳಾರಿ- 119 ಶಾಲೆಗಳು, ಬೀದರ್ -98 ಶಾಲೆಗಳು, ಕೊಪ್ಪಳ-131 ಶಾಲೆಗಳು, ಕಲಬುರಗಿ-234 ಶಾಲೆಗಳು, ರಾಯಚೂರು- 190 ಶಾಲೆಗಳು, ವಿಜಯನಗರ- 142 ಶಾಲೆಗಳು, ಯಾದಗಿರಿಯಲ್ಲಿ 94 ಶಾಲೆಗಳು ಆರಂಭಗೊಳ್ಳಲಿವೆ.

MESCOM ಜೂನ್ 15 ರಂದು ಹೊಳೆಹೊನ್ನೂರು& ತಾವರೆ ಚಟ್ನಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಹೊಳೆಹೊನ್ನೂರು ಮತ್ತು ತಾವರೆಚಟ್ನಹಳ್ಳಿ ವಿ.ವಿ. ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂನ್ 15 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚಿನ್ನಮುಂಬಾಪುರ, MESCOM ಮತ್ತೋಡು, ರತ್ನಗಿರಿನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‍ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Pandit Rajeev Taranath ಸರೋದ್ ಮಾಂತ್ರಿಕ ರಾಜೀವ್ ತಾರಾನಾಥ್ ಇನ್ನಿಲ್ಲ

0

Pandit Rajeev Taranath ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (93) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು (ಜೂನ್ 11) ನಿಧನರಾಗಿದ್ದಾರೆ.
ಕುವೆಂ‍ಪು ನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ತಿಂಗಳ ಹಿಂದೆ ಕುಸಿದು ಬಿದ್ದು ಅವರ
ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ
ಇಂದು ರಾತ್ರಿ 7.05ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀವ್ ತಾರಾನಾಥ್ ಅವರು ಬೆಂಗಳೂರಿನಲ್ಲಿ 17 ಅಕ್ಟೋಬರ್ 1932 ರಂದು ಜನಿಸಿದರು. ಅವರು ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು. ಒಂಬತ್ತು ವರ್ಷದವರಾಗಿದ್ದಾಗ ತಮ್ಮ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನವನ್ನು ನೀಡಿದ್ದರು. ರಾಜೀವ್ ಅವರು ತಮ್ಮ ಇಪ್ಪತ್ತು ವಯಸ್ಸಿಗಿಂತ ಮೊದಲು ಆಕಾಶವಾಣಿಗೆ ಹಾಡುತ್ತಿದ್ದರು.
ಸಾಹಿತ್ಯದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದ ರಾಜೀವ್ ತಾರಾನಾಥ್ ಅವರು, ತಿರುಚಿರಾಪಳ್ಳಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತದ ಮೇಲಿನ ಪ್ರೀತಿಯಿಂದಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಕೊಲ್ಕತ್ತಾಗೆ ತೆರಳಿ, ಅಲ್ಲಿ ಅಲೀ ಅಕ್ಬರ್ ಖಾನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತರಬೇತಿ ಪಡೆದಿದ್ದರು.
Pandit Rajeev Taranath ರಾಜೀವ್ ತಾರನಾಥ್ ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ-1998, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ-1993, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1996, ಕೆಂಪೇಗೌಡ ಪ್ರಶಸ್ತಿ- 2006, ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ಭ್ರಮರಾಂಬಾ ಎನ್ ನಾಗರಾಜ್ ಬಂಗಾರದ ಪದಕ, ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ, ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕುವೆಂಪು ನಗರದ ನಿವಾಸದಲ್ಲಿ ಬುಧವಾರ (ಜೂನ್ 12) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ರಾಜೀವ್ ತಾರಾನಾಥ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Kadamba Karaoke Group ಜೂನ್ 26. ಕದಂಬ ಕರೋಕೆ ಗ್ರೂಪ್ ನಿಂದ ಕರೋಕೆ ಗಾಯನ ಸ್ಪರ್ಧೆ

0

Kadamba Karaoke Group “ಕದಂಬ ಕರೋಕೆ ಗ್ರೂಪ್ ವತಿಯಿಂದ. ಕರೋಕೆ ಗಾಯನ ಸ್ಪರ್ಧೆ.”
ಶಿವಮೊಗ್ಗ ನಗರದ ಕದಂಬ ಕರೋಕೆ ಗ್ರೂಪ್ ವತಿಯಿಂದ ಭದ್ರಾವತಿ ವಾಸು ಇವರ ಸಾರಥ್ಯದಲ್ಲಿ.ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರಲ್ಲಿ ಯುಗಳಗೀತೆ. ವೈಯಕ್ತಿಕ ಗೀತೆಗಳು ಗಾಯನ. ಕನ್ನಡ ಹಾಗೂ ಹಿಂದಿ ಗೀತೆಗಳು ಹಾಡಲು ಅವಕಾಶವಿದೆ ಈ ಕಾರ್ಯಕ್ರಮ 23. 6 2024ನೇ ಭಾನುವಾರ. ಅಶೋಕ ನಗರ ಎಆರ್ ಬಿ ಕಾಲೋನಿಯ ಯೋಗ ಮಂದಿರದಲ್ಲಿ ಬೆಳಿಗ್ಗೆ 9:00 ಯಿಂದ ರಾತ್ರಿ 8:00ವರೆಗೆ . ನಡೆಯಲಿದ್ದು. ಆಸಕ್ತರು ಭಾಗವಹಿಸಲು ಕೋರಿಕೊಳ್ಳಲಾಗಿದೆ.. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು Kadamba Karaoke Group ಕೈಗಾರಿಕಾ ಸಂಘದ ಸಹಕಾರದ ಶ್ರೀ ವಿಜಯಕುಮಾರ್ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಯಾಗಿ ನಿವೃತ್ತ ಏ ಎಸ್ ಐ ರವಿ ಚೌಹಾನ್. ತೀರ್ಪುಗಾರರಾಗಿ ರಾಜಶೇಖರ್. ಆಧ್ಯ. ಸುನಿತಾ ಶೆಟ್ಟಿ. ಆಗಮಿಸಲಿದ್ದು ಅಧ್ಯಕ್ಷತೆಯನ್ನು ಭದ್ರಾವತಿ ವಾಸು ಅವರು ವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಈ ದೂರವಾಣಿಗೆ ಕೆರೆ ಮಾಡಲು. ಕೋರಲಾಗಿದೆ… Mob no 7483514159

Kuwait Fire Tragedy ಕುವೈತ್ ನ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ. ಭಾರತೀಯರೂ ಸೇರಿದಂತೆ 41ಮಂದಿ ದಹನ

0

Kuwait Fire Tragedy ಕುವೈತ್‌ನಲ್ಲಿ ಕಾರ್ಮಿಕರು ವಾಸಿಸುತ್ತಿದ್ದ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯರು ಸೇರಿ 41 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿರುವ ಮಂಗಾಫ್ ಪ್ರದೇಶದ ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು ಮತ್ತು ಅದೇ ಕಂಪೆನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಕಟ್ಟಡದಲ್ಲಿ ತಂಗಿದ್ದ ಹೆಚ್ಚಿನ ಕಾರ್ಮಿಕರು ಭಾರತೀಯರು ಎಂದು ವರದಿಯಾಗಿದೆ.
ಕಾರ್ಮಿಕರೆಲ್ಲ ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದವರೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಕೇರಳದ ಉದ್ಯಮಿ ಕೆ ಜಿ ಅಬ್ರಹಾಂ ಅವರ ಎನ್‌ಬಿಟಿಸಿ ಗ್ರೂಪ್‌ ಒಡೆತನದ ಕಟ್ಟಡ ಇದೆಂದು ಹೇಳಲಾಗಿದ್ದು, ಎನ್‌ಬಿಟಿಸಿ ಸೂಪರ್‌ಮಾರ್ಕೆಟ್‌ ಉದ್ಯೋಗಿಗಳೂ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ.

ಅವಘಡದ ಬೆನ್ನಲ್ಲಿ ಭಾರತೀಯ ಕಾರ್ಮಿಕರನ್ನು ಒಳಗೊಂಡ ದುರಂತ ಬೆಂಕಿ-ಅಪಘಾತಕ್ಕೆ ಸಂಬಂಧಿಸಿದಂತೆ ರಾಯಭಾರ ಕಚೇರಿಯು ತುರ್ತು ಸಹಾಯವಾಣಿ ಸಂಖ್ಯೆ +965-65505246ನ್ನು ನೀಡಿದ್ದು, ತುರ್ತು ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಲು ಸೂಚಿಸಿದೆ.

ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ರಾಯಭಾರ ಕಚೇರಿಯು ಬದ್ಧವಾಗಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

Kuwait Fire Tragedy ಕುವೈತ್ ನಗರದಲ್ಲಿ ಬೆಂಕಿ ಅವಘಡದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಮತ್ತು 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ರಾಯಭಾರಿ ಸ್ಥಳಕ್ಕೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರಿಗೂ ನಮ್ಮ ರಾಯಭಾರ ಕಚೇರಿಯು ಸಂಪೂರ್ಣ ಸಹಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

Shivamogga Police ಶಿವಮೊಗ್ಗ ಬೈಪಾಸ್ ಬಳಿಯ ಲೇಔಟ್ ನಲ್ಲಿ ಗುತ್ತಿಗೆದಾರ ಶವವಾಗಿ ಪತ್ತೆ

0

Shivamogga Police ಶಿವಮೊಗ್ಗ ನಗರದ ಗುತ್ತಿಗೆದಾರನೋರ್ವನ ಮೃತ ದೇಹವೊಂದು ಬೈಪಾಸ್ ರಸ್ತೆಯ ಲೇಔಟ್ ನಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟೊಯೊಟಾ ಶೋ ರೂಂ ಹಿಂಭಾಗದ ಗರುಡ ಲೇಔಟ್ ನ ಗದ್ದೆಯ ಬಳಿ ಮೃತ ದೇಹವೊಂದು ಪತ್ತೆಯಾಗಿದ್ದು ಇವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

Shivamogga Police ಪತ್ತೆಯಾದ ಮೃತ ದೇಹದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನನ್ನು ಮಹಾನಗರ ಪಾಲಿಕೆಯ ಗುತ್ತಿಗೆದಾರ ವಾಸು ಎಂದು ಗುರುತಿಸಲಾಗಿದೆ.

ಸಾವಿಗೆ ಕಾರಣ ತಿಳಿದು ಬರಬೇಕಿದೆ.

Shantiniketan’s Institute of Fine Arts College ಚಿಕ್ಕಮಗಳೂರಿನ ಶಾಂತಿನಕೇತನ ಚಿತ್ರಕಲಾಶಾಲೆಗೆ ಪ್ರವೇಶಾತಿ ಆರಂಭ

0

Shantiniketan’s Institute of Fine Arts College ಚಿಕ್ಕಮಗಳೂರಿನಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ದೃಶ್ಯಕಲಾ ಪದವೀಯ ಪ್ರವೇಶ ಆರಂಭವಾಗಿದೆ ಮಹಾ ವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚರ್ಯ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾವಿದ್ಯಾಲಯವು ಕಳೆದ 28 ವರ್ಷಗಳಿಂದ ಕಲೆ ಮತ್ತು ಸಂಸ್ಕøತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಶಿಕ್ಷಣ ರೂಪದಲ್ಲಿ ಪದವಿ ನೀಡುತ್ತಿದೆ ಎಂದರು.

ಎಸ್‍ಎಸ್‍ಎಲ್‍ಸಿ ಪಾಸಾದ ನಂತರ ಪಿಯುಸಿ, ಐಟಿಐ, ಡಿಪ್ಲೋಮಾ ಪಾಸಾದ ಅಥವಾ ಪೇಲಾದ ವಿದ್ಯಾರ್ಥಿಗಳು ಸೃಜನಶೀಲವಾದ ಪ್ರಾಯೋಗಿಕ ಶಿಕ್ಷಣ ಆಯ್ಕೆ ಮಾಡಿದಲ್ಲಿ ಸ್ವಾವಲಂಬಿ ಬದುಕು, ನಿರಂತರ ಜೀವನೋತ್ಸಾಹದ ಶಿಕ್ಷಣ,ಅಂಕಗಳ ಪ್ರಾಧಾನ್ಯತೆಯಿಂದ ಹೊರತಾದ ಸಮಾಜದ ನಡುವೆ ವೈಯುಕ್ತಿಕವಾಗಿ ಸಾಧಿಸುವ, ಗುರುತಿಸಿಕೊಳ್ಳುವ ಸೃಜನಾತ್ಮಕ ಜೀವನಕಟ್ಟುವಲ್ಲಿ ದೇಶಾತೀತ, ಭಾಷಾತೀತ ಚಿತ್ರಕಲಾ ಶಿಕ್ಷಣ ಭರವಸೆ ಮೂಡಿಸಬಲ್ಲದು ಎಂದರು.

Shantiniketan’s Institute of Fine Arts College ಸಂಪ್ರಾದಾಯಿಕ ಶಿಕ್ಷಣವಾದ ಪದವಿ, ಇಂಜಿನಿಯರ್, ವೈದ್ಯಕೀಯ ಪದವಿಯಂತೆಯೇ ದೃಶ್ಯಕಲಾ ಪದವಿಯು ಕೂಡ ಇದಾಗಿದೆ. ಈ ದೃಶ್ಯಕಲಾ ಪದವಿ ಬಿ.ವಿ.ಎ. ಅನೌಪಚಾರೀಕ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ಪದವಿಯಲ್ಲಿ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ. ತನಕ ಶಿಕ್ಷಣ ಲಭ್ಯವಿದೆ ಎಂದರು.