Sunday, April 12, 2026
Sunday, April 12, 2026
Home Blog Page 692

Native Theater Institute ಜೂನ್ 16 ರಂದು”ಗೋರ್ಮಾಟಿ” ನಾಟಕ ಪ್ರದರ್ಶನ- ರಂಗ ನಿರ್ದೇಶಕ ಹಾಲಸ್ವಾಮಿ

0

Native Theater Institute ಮೈಸೂರು ರಂಗಾಯಣದಿಂದ ಜೂ.16ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ “ಗೋರ್‍ಮಾಟಿ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗನಿರ್ದೇಶಕ ಹಾಲಸ್ವಾಮಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋರ್‍ಮಾಟಿ ನಾಟಕವು ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಬದುಕು ಬವಣೆಗಳಿಗೆ ಕನ್ನಡಿ ಹಿಡಿಯುವ ನಾಟಕ ಇದಾಗಿದೆ. ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಈ ನಾಟಕವನ್ನು ಆಯೋಜನೆ ಮಾಡಿದ್ದು, ಜಿಲ್ಲಾ ಬಂಜಾರ ಸಂಘ ಇನ್ನಿತರ ಸಂಘಟನೆಗಳು ಸಹಕಾರ ನೀಡಿವೆ ಎಂದರು.
‘ಗೋರ್ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನಲೆಯಲ್ಲಿ ಬಳಸಲಾಗಿದ್ದು, ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯ. ಕಾಡು, ಬೆಟ್ಟ, ನೀರು ಇರುವ ಪ್ರದೇಶಗಳಲ್ಲಿ ತಾಂಡಗಳಾಗಿವೆ ಎಂದರು.
ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರ ಜಾತಿ ಸ್ವರೂಪದಲ್ಲಿ ಹರಿದು ಹಂಚಿ ಹೋಗಿರುವ ಬಂಜಾರರು ಭಾರತ ದೇಶ ಮರೆತ ಮಕ್ಕಳು. ವಸಾಹತು ಪೂರ್ವಕಾಲದಲ್ಲಿ ಎತ್ತುಗಳ ಮೇಲೆ ಉಪ್ಪು, ದಿನಸಿ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಬುಡಕಟ್ಟು ಇದ್ದಕ್ಕಿದ್ದಂತೆ ತೆರೆ ಮರೆಯಾದ್ದದ್ದ ಹೇಗೆ?. ಇವರ ಇತಿಹಾಸ, ಬಲಿದಾನ ಯಾಕೆ ನೆನಪಾಗುವುದಿಲ್ಲ?. ಈ ಎಲ್ಲಾ ಸವಾಲುಗಳ ಹುಡುಕಾಟವೇ ‘ಗೋರ್ಮಾಟಿ’ ನಾಟಕ ಇದಾಗಿದೆ ಎಂದರು.
‘ಗೋರ್ಮಾಟಿ’ ರೂಪಕದಲ್ಲಿ ಶಾಂತಾನಾಯಕ ಕಾದಂಬರಿ ‘ಗೋರ್ಮಾಟಿ’ಯ ಕೆಲವು ಅಧ್ಯಾಯಗಳನ್ನು ಬಿ.ಟಿ. ಲಲಿತನಾಯಕ್ ಅವರ ‘ತಾಂಡಾಯಣ’ ಮತ್ತು ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ, ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಯಲಾಗಿದೆ.
Native Theater Institute ಬಂಜಾರರು ವ್ಯಾಪಾರಿಗಳಾಗಿ, ಪಶು ಸಂಗೋಪನಾ ಪಾಲಕರಾಗಿ, ಕೃಷಿ ಕಾರ್ಮಿಕರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗುಪ್ತಚರರಾಗಿ, ಶ್ರಮಜೀವಿಗಳಾಗಿ ತಮ್ಮದೇ ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಂಪ್ರದಾಯ, ಉಡುಗೆ ತೊಡುಗೆಯಿಂದ ಜಗತ್ತಿನ ಗಮನ ಸೆಳೆಯುವ ಬಂಜಾರ ಸಮುದಾಯ ಭಾರತೀಯ ಮುಖ್ಯವಾಹಿನಿಗೆ ಬರಲು ಇನ್ನೂ ಹೆಣಗಾಡುತ್ತಿದೆ. ಅವರ ದುಃಖದುಮ್ಮಾನಗಳಿಗೆ ಕಲೆ ಸಂಸ್ಕೃತಿ ಅಭಿವ್ಯಕ್ತಿಯ ಪ್ರಕ್ರಿಯೆ ಈ ರಂಗಪ್ರಯೋಗ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಶ್‍ನಾಯ್ಕ, ಸೈಯ್ಯದ್ ಅಲಿಂ ಇದ್ದರು.

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ

0

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ,ಸೌಹಾರ್ದತೆ ಕಾಪಾಡಿಕೊಂಡು ಸಹಬಾಳ್ವೆಯೊಂದಿಗೆ ಹಬ್ಬ ಆಚರಿಸಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಬಕ್ರೀದ್ ಸಮಯದಲ್ಲಿ ಶಾಂತಿ ಕದಡುವ ಪೋಸ್ಟ್ ಗಳು,ಸುದ್ದಿ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕರಾದ ಗಜಾನನ ವಾಮನ ಸುತಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಕೋಮುಸೌಹಾರ್ಧತೆಯನ್ನು ಕದಡುವ,ಕಾನೂನನ್ನು ಕೈಗೆತ್ತಿಕೊಳ್ಳವ ಕೃತ್ಯದಲ್ಲಿ ಭಾಗವಹಿಸಿದರೆ ಹಾಗೂ ನೈತಿಕ ಪೊಲೀಸ್ ಗಿರಿ ನೆಡೆಸುವವರ ವಿರುದ್ಧ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳತ್ತದೆ ಎಂದರು.
ಹೊರರಾಜ್ಯದಿಂದ ಪಟ್ಟಣಕ್ಕೆ ವಾಸಿಸಲು ಬರುವವರಿಗೆ ಬಾಡಿಗೆ ಮನೆ ನೀಡುವವರು ಅಂತಹ ವ್ಯಕ್ತಿಗಳ ಸೂಕ್ತ ಗುರುತಿನ ಚೀಟಿಗಳ ಆಧಾರ್ ಕಾರ್ಡ್,ಓಟರ್ ಕಾರ್ಡ್ ಪಡೆದುಕೊಳ್ಳಬೇಕು ಜೊತೆಗೆ ಪೂರ್ವಪರ ಬಗ್ಗೆ ಜಾಗೃತಿ ವಹಿಸಬೇಕು,ಕೆಲಸಕ್ಕಾಗಿ ಹೊರ ಊರುಗಳಿಂದ ಬರುವ ಕಾರ್ಮಿಕರ ಬಗ್ಗೆ ಗುತ್ತಿಗೆದಾರರು ಜಾಗೃತಿವಹಿಸಿ ಕೆಲಸ ನೀಡಬೇಕು,ತಾಲೂಕಿನ ಮಾಳೂರು,ಆಗುಂಬೆ,ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಸಮಸ್ಯೆ ಉಂಟಾದರೆ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು.
Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಪಟ್ಟಣದ ವ್ಯಾಪ್ತಿಯ ಖಾಸಗಿ ಶಾಲೆಗಳ ವ್ಯಾನ್ ಗಳಲ್ಲಿ ಮಕ್ಕಳನ್ನು ಮಿತಿ ಮೀರಿ ತುಂಬಿಕೊಂಡು ಹೋಗುವ ಬಗ್ಗೆ ಇಲಾಖೆಯು ಗಮನಹರಿಸಿದ್ದು,ಈ ವಿಚಾರದ ಬಗ್ಗೆ ಆಯಾ ಶಾಲೆಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎಂದರು.
ತಾಲೂಕಿನಾದ್ಯಂತ ಹಲವರು ಡಿಜಿಟಲ್ ಇನ್ವೆಸ್ಟ್ ಮೆಂಟ್ ನಲ್ಲಿ ಹಣ ತೊಡಗಿಸುತ್ತಿದ್ದಾರೆ,ಇಂತಹ ಡಿಜಿಟಲ್ ಕಂಪನಿಗಳ ಬಗ್ಗೆ ಎಚ್ಚರವಹಿಸಿ ಹಣ ತೊಡಗಿಸಿಕೊಳ್ಳುವ ಜವಾಬ್ದಾರಿ ಜನರದ್ದಾಗಿದೆ ಎಂದರು.
ತಾಲೂಕಿನಲ್ಲಿ ಎನ್ ಡಿ ಪಿ ಎಸ್ ಆಕ್ಟ್ ಪ್ರಕಾರ ಮಾದಕ ದ್ರವ್ಯಗಳ ಮಾರಾಟ,ಸಂಗ್ರಹ ವಿಚಾರದಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕಾರ್ಯಾಚರಣೆ ನೆಡೆಸುತ್ತ ಬಂದಿದೆ,ಗಾಂಜಾ ಮುಕ್ತ ಶಿವಮೊಗ್ಗ ,ಗಾಂಜಾ ಮುಕ್ತ ತೀರ್ಥಹಳ್ಳಿ ಮಾಡುವುದು ಪೊಲೀಸ್ ಇಲಾಖೆಯ ಮುಖ್ಯಧ್ಯೇಯವಾಗಿದೆ ಎಂದರು.

Shivamogga Police ಪುರದಾಳ್ ಕ್ರಾಸ್ ಬಳಿ ಗಾಂಜಾ ಮಾರಾಟ: ಈರ್ವರು ಯುವಕರ ಬಂಧನ

0

Shivamogga Police ಶಿವಮೊಗ್ಗ ನಗರದ ಹರ್ಷ ಫರ್ನ್ ಹೊಟೆಲ್ ಹತ್ತಿರ ಪುರದಾಳು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತುಂಗಾನಗರ ಪೊಲೀಸರು ದಾಳಿ ನಡೆಸಿ ಇಬ್ಬರು ಯುವಕರನ್ನು ಬಂಧಿಸಿ ಅವರಿಂದ ಗಾಂಜಾ ಮತ್ತು ಬೈಕ್ ವಶಪಡಿಕೊಂಡಿದ್ದಾರೆ.

ಬಂಧಿತರೆಂದರೆ ವಿನೋಬನಗರದ ಮಾಲತೇಶ ಜೆ, (32) ಮತ್ತು ಶರಾವತಿನಗರದ ರಮೇಶ ವಿ, (25) . ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 14,000 ರೂಗಳ 260 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ತುಂಗಾನಗರ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Shivamogga Police ಪಿಎಸ್ ಐ ಮಂಜುನಾಥ ಮತ್ತು ಶಿವಪ್ರಸಾದ್ ದಾಳಿ ನಡೆಸಿದ್ದರು.

District Court ಕೊಲೆಗಾರನಿಗೆ ಶಿಕ್ಷೆ ತೀರ್ಪು ಪ್ರಕಟಿಸಿದ ನ್ಯಾಯಾಲಯ

0

District Court ಕಳೆೆದ ಗ್ರಾಪಂ ಚುನಾವಣೆಯಲ್ಲಿ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ದ್ವೇಷ ಬೆಳೆಸಿಕೊಂಡು ತನ್ನ ಗ್ರಾಮದವನನ್ನೇ ಕೊಲೆ ಮಾಡಿದ್ದವನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ 23,500 ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 3 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.

ತಾಲೂಕಿನ ಹೊಳೆಬೆನವಳ್ಳಿ ದೊಡ್ಡತಾಂಡಾದ ವಾಸಿ ಕುಮಾರ್ ನಾಯ್ಕ್ (43)ಕೊಲೆ ಮಾಡಿ ಶಿಕ್ಷೆಗೊಳಗಾದವನು. ಮಹೇಶ್ ನಾಯ್ಕ್ ಕೊಲೆಯಾದವನು. ಗ್ರಾಮದ ಚಾನೆಲ್ ಹತ್ತಿರ ಮಹೇಶ್ ನಾಯ್ಕ ಅವರನ್ನು ಅಡ್ಡಗಟ್ಟಿ ಅವರ ಕುತ್ತಿಗೆ ಮತ್ತು ಮೈ ಕೈ ಗೆ ಹರಿತವಾದ ಆಯುಧ ದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆಗಿನ ತನಿಖಾಧಿಕಾರಿ ಸಿಪಿಐ ಲೋಕೇಶ್ ಪ್ರಕರಣದ ತನಿಖೆ ಕೈಗೊಂಡು, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

District Court ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪುಷ್ಪಾವತಿ ಪ್ರಕರಣದ ವಾದ ಮಂಡಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶೆ ಪಲ್ಲ

Karnataka Farmers Association ಬ್ಯಾಂಕ್ ಗಳು ಬರಗಾಲ ಪರಿಹಾರ ಹಣವನ್ನ ಖಾತೆದಾರರ ಸಾಲಕ್ಕೆ ಜಮಾ ಮಾಡಬಾರದು-ಎಚ್.ಆರ್.ಬಸವರಾಜಪ್ಪ

0

Karnataka Farmers Association ಸಮರ್ಪಕ ಬರಗಾಲ ಪರಿಹಾರ ವಿತರಣೆಯಾಗಬೇಕು. ಬೆಳೆ ವಿಮೆ ಹಣವನ್ನು ರೈತರಿಗೆ ತಕ್ಷಣವೇ ನೀಡಬೇಕು. ಬ್ಯಾಂಕ್‌ಗಳು ವಿವಿಧ ಯೋಜನೆಗಳಿಂದ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡಬಾರದು. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಬೇಕೆಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ, ತಮ್ಮ ಸರ್ಕಾರ ಕೇಂದ್ರ ಸರ್ಕಾರ ವಿಪತ್ತು ಮಾರ್ಗಸೂಚಿಯ ಪ್ರಕಾರ ಬಿಡುಗಡೆ ಮಾಡಿದ ಹಣವನ್ನಷ್ಟೇ ರೈತರಿಗೆ ಕೊಡುತ್ತಿದೆ. ಹಿಂದಿನ ಸರ್ಕಾರ ರಾಜ್ಯ ವಿಪತ್ತು ನಿಧಿಯಿಂದ ಸೇರಿಸಿ ಕ್ರಮವಾಗಿ ಒಂದು ಹೆಕ್ಟರ್‌ಗೆ ಒಣಭೂಮಿಗೆ ಕೇಂದ್ರ 8,500 ಜೊತೆಗೆ ರಾಜ್ಯ 4,500 ಸೇರಿಸಿ ಒಟ್ಟು 13,000 ರೂ. ತರಿ ಜಮೀನಿಗೆ ಕೇಂದ್ರ 13,000 ಜೊತೆಗೆ ರಾಜ್ಯ 5,000 ಸೇರಿಸಿ ಒಟ್ಟು 18,000 ರೂ.ತೋಟದ ಬೆಳೆಗಳಿಗೆ ಕೇಂದ್ರ 18,000 ಜೊತೆಗೆ ರಾಜ್ಯ 5000 ಸೇರಿಸಿ ಒಟ್ಟು 23000 ರೂ. ಕೊಡಲಾಗಿತ್ತು.

ತಾವು ಸಹ ರಾಜ್ಯ ವಿಪತ್ತು ನಿಧಿಯಿಂದ ಹಣ ಬಿಡುಗಡೆ ಮಾಡಿ ರೈತರಿಗೆ ನೀಡಬೇಕು. ಕನಿಷ್ಟ ಎಕರೆಗೆ 25, 000ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆ ಹಣ ಇನ್ನೂ ಕೆಲವು ರೈತರಿಗೆ ಸಿಕ್ಕಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಬೆಳೆ ವಿಮೆ ಹಣ ತಲುಪುವಂತಾಗಬೇಕು. ಸರ್ಕಾರ ಕೊಟ್ಟಂತ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಸರ್ಕಾರ ಆದೇಶ ಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಆದ್ದರಿಂದ ಜಮಾ ಮಾಡಿಕೊಳ್ಳದಂತೆ ಸೂಚನೆ ನೀಡಿದಾಗ್ಯೂ, ಆದೇಶವನ್ನು ನಿರ್ಲಕ್ಷಿಸಿ ಸರ್ಕಾರದ ಯೋಜನೆಗಳನ್ನು ಭಗ್ನಗೊಳಿಸಿ ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.

Karnataka Farmers Association ದೀರ್ಘಾವಧಿ ಹೊಸದಾಗಿ ಸಾಲ ಕೊಡಲು ನಿರ್ದೇಶನ ನೀಡಬೇಕು.ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯುವ ಆದೇಶವನ್ನು ರದ್ದುಮಾಡಬೇಕು. ಐ.ಪಿ ಸೆಟ್‌ಗಳಿಗೆ ವಿದ್ಯುತ್ ಚ್ಚಕ್ತಿ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಜಾರಿ ಮಾಡಲಾಗಿದೆ. 1 ಎಕರೆ ಇರುವಂತ ರೈತ ವಿದ್ಯುತ್ ಸಂಪರ್ಕ ಪಡೆಯಲು 3 ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ಈ ಆದೇಶ ಸಣ್ಣ ಮತ್ತು ಅತೀಸಣ್ಣ ರೈತರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಮೊದಲಿನಂತೆ ಮ-ಸಕ್ರಮ ಯೋಜನೆಯಡಿ 20 ಸಾವಿರ ಹಣವನ್ನು ಕಟ್ಟಿಸಿಕೊಂಡು ಆರ್.ಆರ್ ನಂಬರ್‌ಗಳನ್ನು ಕೊಟ್ಟು ತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

University of Agriculture and Horticulture ಮಲೆನಾಡಿನ ಅಪರೂಪದ ಹಲಸು ತಳಿಗಳಿಗೆ ಪ್ರಾಧಿಕಾರದಿಂದ ಮಾನ್ಯತೆ- ಪ್ರೊ.ಎಂ.ಬಿ.ದುಶ್ಯಂತ್ ಕುಮಾರ್

0

University of Agriculture and Horticulture ಮಲೆನಾಡಿನ ವಿಶಿಷ್ಟ ಹಲಸಿನ ತಳಿಗಳಾದ ಹಳದಿ ರುದ್ರಾಕ್ಷಿ-ಜೆ.ಎ.ಆರ್., ಆರೆಂಜ್-ಆರ್.ಪಿ.ಎನ್., ಕೆಂಪು ರುದ್ರಾಕ್ಷಿ-ಡಿ.ಎಸ್.ವಿ ಮತ್ತು ರೆಡ್-ಆರ್.ಟಿ.ಬಿ. ತಳಿಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಣಿಗೊಂಡು ಮಾನ್ಯತೆ ಪಡೆದಿವೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಪ್ರೊ. ಎಂ.ಬಿ. ದುಶ್ಯಂತಕುಮಾರ್ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಿವಿನಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಸಂರಕ್ಷಿಸಿ, ಬೆಳೆಸುವ ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿರುವುದನ್ನು ಮನಗಂಡು ಈ ನಾಲ್ಕು ತಳಿಗಳ ಕುರಿತು ಸುಮಾರು 3-4 ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಲಾಗಿದೆ

University of Agriculture and Horticulture ಸಂಪೂರ್ಣ ಮಾಹಿತಿಯನ್ನು ನವದೆಹಲಿಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಾಧಿಕಾರ ದಿಂದ ನೇಮಕಗೊಂಡ ತಜ್ಞ ವಿಜ್ಞಾನಿಗಳು ೨ಬಾರಿ ಸ್ಥಳ ಪರಿ ಶೀಲನೆ ನಡೆಸಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ, ಅಂತಿಮವಾಗಿ ನೋಂದಣಿಗೆ ಅರ್ಹವೆಂದು ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡು ಪ್ರಮಾಣಪತ್ರ ದೊರಕಿದೆ ಎಂದರು.

ಈ ಅಪರೂಪದ ಸಸ್ಯ ತಳಿಗಳನ್ನು ಪ್ರಸಕ್ತ ಸಾಲಿನಿಂದಲೇ ಅಭಿವೃದ್ಧಿಪಡಿಸಿ, ಆಸಕ್ತ ಕೃಷಿಕರಿಗೆ ತಲುಪಿಸಲು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ವಿಶೇಷ ಗಮನಹರಿಸಲಿದೆ. ಅಲ್ಲದೇ ಅಷ್ಟೇ ಮಿಡಿ ತರಹದ ಅತ್ಯಪರೂಪದ ಮಾವಿನ ವಿಶಿಷ್ಟ ತಳಿಗಳನ್ನೂ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಿದೆ. ಅಪರೂಪದ ತಳಿ ಇವುಗಳಾಗಿದ್ದು, ಹಲಸು ಬೆಳೆಯುವ ಆಸಕ್ತ ಕೃಷಿಕರಿಂದ ಈ ಹಲಸಿನ ತಳಿ ಉಳಿ ದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.+++

Times Spirit International School ವಿಘ್ನೇಶ್ವರ ಪೂಜೆಯೊಂದಿಗೆ ವಿದ್ಯಾರಂಭ ನಮ್ಮ ಸಂಸ್ಕೃತಿ- ಗಂಗಾಧರ್

0

Times Spirit International School ಭದ್ರಾವತಿ ನಗರದ ಹೊಸ ಸಿದ್ದಾಪುರ ಬೈಪಾಸ್ ಬಿ.ಹೆಚ್.ರಸ್ತೆಯಲ್ಲಿರುವ ಟೈಮ್ಸ್ ಸ್ಪೂರ್ತಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಪುಟ್ಟ ಕಂದಮ್ಮಗಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಂದಮ್ಮಗಳಿಗೆ ಕಲಿಕೆ, ಬುದ್ದಿ ಬೆಳವಣಿಗೆ, ಜ್ಞಾನೋದಯ ತುಂಬಿಸುವ ಹೊಸ ಶೈಕ್ಷಣಿಕಾರಂಭಕ್ಕೆ ಸ್ಪೂರ್ತಿಯಾಯಿತು. ಪುಟ್ಟ ಮಗು ಜಗತ್ತಿಗೆ ಕಣ್ಣು ಬಿಟ್ಟ ಕ್ಷಣದಿಂದಲೇ ಅದರ ಕಲಿಕೆ ಪ್ರಾರಂಭವಾಗುತ್ತದೆ. ನಗುವುದು, ಕೂರುವುದು, ನಿಲ್ಲುವುದು, ಚಪ್ಪಾಳೆ ತಟ್ಟುವುದು, ತೊದಲು ಮಾತು ಆರಂಭ ಎಲ್ಲವೂ ಮಗುವಿನ ಕಲಿಕೆಯೇ ಆಗಿರುತ್ತದೆ. ಇದರ ಜೊತೆಗೆ ದೊಡ್ಡವರನ್ನು ನೋಡಿ ಕಲಿಯುತ್ತಲೇ ಇರುತ್ತದೆ. ಇಷ್ಟೆಲ್ಲಾ ಆಗಿ ಮಗು ಶಾಲೆ ಎಂಬ ಜ್ಞಾನಾರ್ಜನೆಯ ಹಾದಿಗೆ ಹೆಜ್ಜೆ ಇಡುವ ಶುಭ ಗಳಿಗೆಯಲ್ಲಿ ಸರಸ್ವತಿ ದೇವಿಯ ಆರಾಧನೆ ಮತ್ತು ವಿಘ್ನೇಶ್ವರ ಸ್ವಾಮಿಯ ಪೂಜೆಯೊಂದಿಗೆ ವಿದ್ಯಾರಂಭ ಮಾಡುವುದು ನಮ್ಮೆಲ್ಲರ ಸಂಸ್ಕೃತಿಯಾಗಿದೆ ಎಂದು ಗಂಗಾಧರ್ ಹೇಳಿದರು.
Times Spirit International School ಪ್ರಾಂಶುಪಾಲ ಕೆ.ಚೇತನ್ ಸರಸ್ವತಿ ದೇವಿಯ ಆರಾಧನೆಯೊಂದಿಗೆ ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಪೋಷಕರು ತಮ್ಮ ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು ಓಂ ನಮೋ ಎಂದು ಬರೆಸಲಾಯಿತು. ನಂತರ ಶಿಕ್ಷಕರು ಮಕ್ಕಳಿಗೆ ಕಂಕಣ ಕಟ್ಟುವ ಮೂಲಕ ಅವರ ಕಲಿಕೆಯ ಜವಾಬ್ದಾರಿ ವಹಿಸಿಕೊಂಡರು. ಗುರುಗಳು ಮಕ್ಕಳಿಗೆ ಕಲಿಕೆಯ ವಸ್ತುಗಳನ್ನು ನೀಡುವುದರ ಮೂಲಕ ಆಶೀರ್ವಧಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಿ ಮಮತಾ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ನೂರಾರು ಪೋಷಕರು ಭಾಗವಹಿಸಿದ್ದರು.

H.D.Kumaraswamy ಸಚಿವ ಕುಮಾರಣ್ಣ ಸಹಿ ಮಾಡಿದ ಮೊದಲ ಕಡತವೇ ಕರ್ನಾಟಕ ಕೆಐಒಸಿಎಲ್

0

H.D.Kumaraswamy ಎಚ್.ಡಿ.ಕುಮಾರಸ್ವಾಮಿ ಅವರು
ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಇದು ತವರು ಕರ್ನಾಟಕಕ್ಕೆ ಸಂಬಂಧಿಸಿದ್ದಾಗಿದೆ.

ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗಾಗಿ KIOCL ಲಿಮಿಟೆಡ್‌ನ ಮೊದಲ ಕಡತಕ್ಕೆ ಸಹಿ ಹಾಕಲಾಯಿತು. ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರ ನಾಥ್ ಸಿನ್ಹಾ ಉಪಸ್ಥಿತರಿದ್ದರು.

H.D.Kumaraswamy ಭೇಷ್..ಕುಮಾರಣ್ಣ ರಾಜ್ಯಕ್ಕೆ ಆದ್ಯತೆ ನೀಡಿದವರಿಗೆ ಮಾದರಿಯಾಗಿದ್ದೀರಿ.
ಹಾಗೆಯೇ ಭದ್ರಾವತಿ ಉಕ್ಕು ಘಟಕದ ಬಗ್ಗೆ ಶೀಘ್ರಕ್ರಮ ಕೈಗೊಳ್ಳಿ.‌ಕಾಗದ ಕಾರ್ಖಾನೆ ಶುರುವಾಗ ಬೇಕು ಎಂದು ಜನತೆ ಆಶಯ ವ್ಯಕ್ತಪಡಿಸಿದ್ದಾರೆ.

Anandpur Police ಆನಂದಪುರದ ಅಂದಾಸುರ ಗ್ರಾಮದಲ್ಲಿ ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ಕಳ್ಳತನ

0

Anandpur Police ಇಂಟರ್ಲಾಕ್ ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಕಳ್ಳತನವಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ಗ್ರಾಮದಲ್ಲಿ ನಡೆದಿದೆ.

ಆನಂದಪುರದ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಬ್ದುಲ್ ಅಹಮದ್ ರವರು ಆನಂದಪುರದಿಂದ ವರ್ಗಾವಣೆಯಾದ ಹಿನ್ನೆಲೆ ಮಣಿಪಾಲ್ ಗೆ ಶನಿವಾರ ಸಂಜೆ ತೆರಳಿದ್ದರು. ಬುಧವಾರ ಸಂಜೆ ಅಬ್ದುಲ್ ಅಹಮದ್ ರವರಿಗೆ ಸ್ಥಳೀಯರು ಕರೆ ಮಾಡಿ ನಿಮ್ಮ ಮನೆ ಬಾಗಿಲು ಯಾರೋ ಮುರಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Anandpur Police ತಕ್ಷಣ ಆನಂದಪುರ ಪೊಲೀಸ್ ಸಬ್ ಇನ್ಸೆಕ್ಟರ್ ಯುವರಾಜ್ ಕಂಬಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಮನೆಯ ಇಂಟರ್ಲಾಕ್ ಮುರಿದಿರುವ ಮಾಹಿತಿ ಲಭ್ಯವಾಗಿದೆ.
ತಕ್ಷಣ ಮನೆಯ ಮಾಲೀಕರು ಮಣಿಪಾಲ್ ನಿಂದ ಆನಂದಪುರಕ್ಕೆ ಆಗಮಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, 330 ಗ್ರಾಂ ಬಂಗಾರದ ಆಭರಣ ಹಾಗೂ 90,000 ನಗದು ಮನೆಯ ಬೀರುವಿನಲ್ಲಿತ್ತು, ಕಳ್ಳರು ಇದನ್ನು ದೋಚಿದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

The Food Safety and Standards ಸ್ಥಳೀಯ ಸಮಸ್ಯೆಗಳ ಬಗ್ಗೆ ಸೀಎಂ ಅವರ ವಿಶೇಷ ಕರ್ತವ್ಯಾಧಿಕಾರಿಗಳ X ಖಾತೆಗೆ ಕಳಿಸಿ, ಪರಿಹಾರ ಪಡೆಯಿರಿ

0

The Food Safety and Standards ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದೆ, ಕಲುಷಿತ, ವಿಷಾಹಾರ ಸೇವನೆ, ಕಲಬೆರಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳನ್ನು ಉಪಯೋಗಿಸುತ್ತಿರುವ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿರುತ್ತಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and Standards Act – 2006 ಮತ್ತು 2011 ನಿಯಮಗಳಲ್ಲಿ ಸೂಚಿಸಿರುವ ಮಾರ್ಗಸೂಚಿಯಂತೆ ತಪಾಸಣೆ ನಡೆಸಿ ಸೂಕ್ತ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

The Food Safety and Standards ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ
@osd_cmkarnataka
`ಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಿ ಕಳಿಸಬಹುದು.