Sunday, April 12, 2026
Sunday, April 12, 2026
Home Blog Page 691

Karnataka Rakshana Vedike ನಾವು ಯಾವಾಗಲೂ ಕನ್ನಡ ಶಾಲೆಗಳ ಪರ- ಕರವೇ ಎಚ್.ಎಸ್.ಕಿರಣ್ ಕುಮಾರ್

0

Karnataka Rakshana Vedike ಕರವೇ ಯುವಸೇನೆ ಹಾಗೂ ಆನಂದಣ್ಣ ಯಂಗ್ ಬ್ರಿಗೇಡ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಣೆ
ಶಿವಮೊಗ್ಗ ಜಿಲ್ಲೆಯ ಆನಂದಣ್ಣ ಯಂಗ್ ಬ್ರಿಗೇಡ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಹುಣಸೆ ಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಟ್ರ್ಯಾಕ್ ಸೂಟ್ ಸಮವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸುಮಾರು 150 ಮಕ್ಕಳಿಗೆ ಶನಿವಾರದಂದು ವಿಶೇಷ ರೀತಿಯಲ್ಲಿ ಸಮವಸ್ತ್ರವನ್ನ ವಿತರಿಸಲಾಯಿತು ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಏನು ಇಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಮಕ್ಕಳ ಸಂತೋಷ ಎದ್ದು ಕಾಣುತ್ತಿತ್ತು.

ಸಂತೋಷದಲ್ಲಿ ಭಾಗಿಯಾದ ಶಿಕ್ಷಕ ವೃಂದದ ಮನಃಸ್ಪೂರ್ವಕವಾಗಿ ಕರವೇ ಯುವ ಸೇನೆ ಹಾಗೂ ಆನಂದಣ್ಣ ಯಂಗ್ ಬ್ರಿಗೇಡ್ ಅಧ್ಯಕ್ಷರ ನೇತೃತ್ವದ ತಂಡವನ್ನ ಅಭಿನಂದಿಸಿದರು.

Karnataka Rakshana Vedike ಈ ಸಂದರ್ಭದಲ್ಲಿ ಕರವೇ ಯುವ ಸೇನೆ ಹಾಗೂ ಆನಂದಣ್ಣ ಅಧ್ಯಕ್ಷ ಕಿರಣ್ ಕುಮಾರ್ ಹೆಚ್ಎಸ್ ಮಾತನಾಡಿ ನಾವು ಯಾವಾಗಲೂ ಕನ್ನಡ ಶಾಲೆಗಳ ಪರವಾಗಿದ್ದೇವೆ ಎಂದು ಹೇಳಿದರು ಯಾವಾಗಲೂ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವುದಾಗಿ ಸಹ ತಿಳಿಸಿದರು ಅತಿ ಹೆಚ್ಚು ಅಂಕ ಪಡೆದ ಹೊಸನಗರ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಚಿನ್ಮಯ್ ಸಿ ಅವರನ್ನು ಕರವೇ ಯುವ ಸೇನೆಯಿಂದ ಸನ್ಮಾನಿಸಲಾಯಿತು ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಖಜಾಂಚಿ ಗಣೇಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Rotary Shivamogga ರಕ್ತದಾನಿಗಳು ನಮಗೆಲ್ಲ ಮಾದರಿ-ಜಿ.ವಿಜಯಕುಮಾರ್

0

Rotary Shivamogga ರಕ್ತದ ಬೆಲೆ ಗೊತ್ತಾಗುವುದು ನಮ್ಮವರಿಗೆ ತುರ್ತು ಅಗತ್ಯವಿದ್ದಾಗ ಮಾತ್ರ. ಜೀವ ಉಳಿಸುವ ಮಹತ್ತರ ಕಾರ್ಯ ಮಾಡುವ ರಕ್ತದಾನಿಗಳು ನಮ್ಮೆಲ್ಲರಿಗೂ ಮಾದರಿ ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಘ ಸಂಸ್ಥೆಗಳ ದೊಡ್ಡ ಪಾತ್ರವಿದೆ. ಇದರಿಂದ ನೂರಾರು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
115 ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಮಾತನಾಡಿ, ಜೂನ್ 14ರಂದು ವಿಶ್ವಾದ್ಯಂತ ರಕ್ತದಾನಿಗಳ ಆಚರಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ರಕ್ತದಾನಿ ಇರಬೇಕು. ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
Rotary Shivamogga ಐಎಂಎ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
75 ಬಾರಿ ರಕ್ತದಾನ ಮಾಡಿರುವ ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ವೀರೇಶ್, 93 ಬಾರಿ ರಕ್ತದಾನ ಮಾಡಿರುವ ಪರ್ಫೆಕ್ಟ್ ಅಲಾಯ್ಸ್ನ ಮಂಜುನಾಥ್ ಹಾಗೂ ಧರಣೇಂದ್ರ ದಿನಕರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಿಯೋಜಿತ ಅಧ್ಯಕ್ಷ ಅರುಣ್ ದೀಕ್ಷಿತ್, ಮಾಜಿ ಅಧ್ಯಕ್ಷರಾದ ಎನ್.ಎಚ್.ಶ್ರೀಕಾಂತ್, ಕಾರ್ಯದರ್ಶಿ ಕಿಶೋರ್ ಕುಮಾರ್, ನಿವೃತ್ತ ಅಧಿಕಾರಿ ಚಂದ್ರಶೇಖರಯ್ಯ, ಮುಕುಂದೇಗೌಡ, ಸಂಜೀವ್ ಕುಮಾರ್ ರೋಟರಿ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Shivamogga Tourism Department ಪ್ರವಾಸಿ ಮಾರ್ಗದರ್ಶಿಗಳ ಆಯ್ಕೆಗಾಗಿ ಅರ್ಜಿಗಳ ಆಹ್ವಾನ

0

Shivamogga Tourism Department ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳ ಹುದ್ದೆಗೆ 2ನೇ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ದೇಶ/ವಿದೇಶಿ ಪ್ರವಾಸಿಗರಿಗೆ ನೀಡಲು “ಒಂದು ರಾಜ್ಯ-ಹಲವು ವಿಸ್ಮಯಗಳು” ಎಂಬುದನ್ನು ಪರಿಚಯಿಸುವುದರ ಮೂಲಕ ಜಿಲ್ಲೆಯ ಭವ್ಯ ಸಂಸ್ಕೃತಿ, ವೈವಿಧ್ಯತೆಗಳ ವಿಭಿನ್ನ ಕಲೆ-ವಾಸ್ತುಶಿಲ್ಪ ಹಾಗೂ ಜಿಲ್ಲೆಯ ಸಮಗ್ರತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ಸೆಳೆಯುವಂತಿರಬೇಕು.
Shivamogga Tourism Department ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಪ್ರವಾಸೋದ್ಯಮ ಇಲಾಖೆ, ‘ಎ’ ಬ್ಲಾಕ್ 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿದ ಜುಲೈ 25 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-251444 / 7019740132 ಗಳನ್ನು ಸಂಪರ್ಕಿಸುವುದು.

Bharat Scouts and Guides ಯೋಗ, ನಮ್ಮ ಬುದ್ಧಿ, ಮನಸ್ಸು & ಶರೀರವನ್ನ ಸಮತೋಲನದಲ್ಲಿಡುತ್ತದೆ- ಶಾಸಕ ಡಾ.ಧನಂಜಯ ಸರ್ಜಿ

0

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುಷ ಇಲಾಖೆ, ಶಿವಮೊಗ್ಗರವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಗರ ಶಾಲೆ ಕಾಲೇಜುಗಳ ಒಟ್ಟು ,500 ಸ್ಕೌಟ್, ಗೈಡ್,ರೋವರ್, ರೇಂಜರ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ಗಳು ಹಾಜರಿದ್ದರು. ಬೆಳ್ಳಿಗ್ಗೆ 08-00 ಗಂಟೆಗೆ ಖ್ಯಾತ ಮಕ್ಕಳ ತಜ್ನರು, ಶಾಸಕರು ವಿಧಾನ ಪರಿಷತ್‌ನ ಡಾ|| ಧನಂಜಯ ಸರ್ಜಿ ರವರು ಹೂಕುಂಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿ ಭಾರತೀಯ ಇತಿಹಾಸದಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೆ ಋಷಿ ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು. ಯೋಗಾಸನ ಬುದ್ದಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಒಂದು ದಿವ್ಯ ಶಕ್ತಿಯನ್ನು ಹೊಂದಿದೆ ಔಷಧಿಗಳು ಕೇವಲ ಶೇ. 20ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ 100 ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಅಲ್ಲದೆ ಯೋಗದಿಂದ ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ತಿಳಿಸಿದರು.

Bharat Scouts and Guides ಜಿಲ್ಲಾ ಆಯುಷ ಅಧಿಕಾರಿಯವರಾದ ಡಾ|| ಲಿಂಗರಾಜ್ ರವರು ಮಾತನಾಡುತ್ತಾ ಜೂನ 10 ರಿಂದ 20ನೇ ತಾರಿಕಿನ ವರೆಗೆ ಪೂರ್ವಭಾವಿ ಕಾರ್ಯಕ್ರಮ ಯೋಗೋತ್ಸವವನ್ನು ಇಂದು ಆಚರಿಸುತ್ತಿದ್ದು ಈ ವಷದ ಧ್ಯೇಯವಾಕ್ಯ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬುದಾಗಿದ್ದು ಮಾಹಿಳಾ ಕಾಲೇಜು ಹಾಸ್ಟೇಲ್‌ಗಳಲ್ಲಿ ಯೋಗಾಭ್ಯಾಸವನ್ನು ಆಯುಷ ಇಲಾಖೆರವರಿಂದ ಮಾಡಿಸುತ್ತಿದ್ದು ಮುಂದೆನು ಇದನ್ನು ರೋಡಿಸಿಕೊಳ್ಳಬೇಕೆಂದು ತಿಳಿಸಿದರು.

ಆಯುಷ ಇಲಾಖೆಯ ಶ್ರೀ ಮಹೇಂದ್ರ ಬಿ.ಆರ್ ಮತ್ತು ಕು|| ಮೋನಿಕಾ ಸಿ.ಎಸ್. ರವರು ಕೆಲವು ಆಸನಗಳನ್ನು ಮಾಡಿ ತೋರಿಸಿ ಮಕ್ಕಳಿಂದ ಮಾಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲೆಯ ಮುಖ್ಯ ಆಯುಕ್ತರಾದ ಶ್ರೀ. ಕೆ.ಪಿ.ಬಿಂದುಕುಮಾರರವರು ಮಾತನಾಡಿ ನಿವೆಲ್ಲರೂ ದಿನಾಲೂ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ರವರು ಸ್ವಾಗತಿಸಿದರು. ಡಾ|| ಅನಿಲ್ ಕುಮಾರ ರವರು ವಂದಿಸಿದರು. ಸಭಾ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಡಾಯಸ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ರವರು ನಿರ್ವಹಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ ಜಂಟಿ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಡಾ|| ಸುರೇಂದ್ರ ಆಯುಷ್ ಇಲಾಖೆಯ ಶಿಬ್ಬಂದಿ ವರ್ಗದವರು, ವಿಜಯಕುಮಾರ, ಹೆಚ್.ಶಿವಶಂಕರ, ಗೀತಾಚಿಕ್ಕಮಠ, ರಾಜೇಶ ಅವಲಕ್ಕಿ, ಕೃಷ್ಣಸ್ವಾಮಿ, ಮಲ್ಲಿಕಾರ್ಜುನ ಹಿರಿಯ ಸ್ಕೌಟರ್ ಗೈರ‍್ಸ್ಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
ಕಾರ್ಯಕ್ರಮದ ನಂತರ ಪ್ರಮುಖ ಬಿದಿಗಳಲ್ಲಿ ಯೋಗ ಜಾಗ್ರತಿ ಜಾಥಾವನ್ನು ಕೈಗೊಳ್ಳಲಾಯಿತು.

Native Theater Institute ಜೂನ್ 16 ರಂದು”ಗೋರ್ಮಾಟಿ” ನಾಟಕ ಪ್ರದರ್ಶನ- ರಂಗ ನಿರ್ದೇಶಕ ಹಾಲಸ್ವಾಮಿ

0

Native Theater Institute ಮೈಸೂರು ರಂಗಾಯಣದಿಂದ ಜೂ.16ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ “ಗೋರ್‍ಮಾಟಿ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗನಿರ್ದೇಶಕ ಹಾಲಸ್ವಾಮಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋರ್‍ಮಾಟಿ ನಾಟಕವು ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಬದುಕು ಬವಣೆಗಳಿಗೆ ಕನ್ನಡಿ ಹಿಡಿಯುವ ನಾಟಕ ಇದಾಗಿದೆ. ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಈ ನಾಟಕವನ್ನು ಆಯೋಜನೆ ಮಾಡಿದ್ದು, ಜಿಲ್ಲಾ ಬಂಜಾರ ಸಂಘ ಇನ್ನಿತರ ಸಂಘಟನೆಗಳು ಸಹಕಾರ ನೀಡಿವೆ ಎಂದರು.
‘ಗೋರ್ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನಲೆಯಲ್ಲಿ ಬಳಸಲಾಗಿದ್ದು, ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯ. ಕಾಡು, ಬೆಟ್ಟ, ನೀರು ಇರುವ ಪ್ರದೇಶಗಳಲ್ಲಿ ತಾಂಡಗಳಾಗಿವೆ ಎಂದರು.
ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರ ಜಾತಿ ಸ್ವರೂಪದಲ್ಲಿ ಹರಿದು ಹಂಚಿ ಹೋಗಿರುವ ಬಂಜಾರರು ಭಾರತ ದೇಶ ಮರೆತ ಮಕ್ಕಳು. ವಸಾಹತು ಪೂರ್ವಕಾಲದಲ್ಲಿ ಎತ್ತುಗಳ ಮೇಲೆ ಉಪ್ಪು, ದಿನಸಿ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಬುಡಕಟ್ಟು ಇದ್ದಕ್ಕಿದ್ದಂತೆ ತೆರೆ ಮರೆಯಾದ್ದದ್ದ ಹೇಗೆ?. ಇವರ ಇತಿಹಾಸ, ಬಲಿದಾನ ಯಾಕೆ ನೆನಪಾಗುವುದಿಲ್ಲ?. ಈ ಎಲ್ಲಾ ಸವಾಲುಗಳ ಹುಡುಕಾಟವೇ ‘ಗೋರ್ಮಾಟಿ’ ನಾಟಕ ಇದಾಗಿದೆ ಎಂದರು.
‘ಗೋರ್ಮಾಟಿ’ ರೂಪಕದಲ್ಲಿ ಶಾಂತಾನಾಯಕ ಕಾದಂಬರಿ ‘ಗೋರ್ಮಾಟಿ’ಯ ಕೆಲವು ಅಧ್ಯಾಯಗಳನ್ನು ಬಿ.ಟಿ. ಲಲಿತನಾಯಕ್ ಅವರ ‘ತಾಂಡಾಯಣ’ ಮತ್ತು ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ, ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಯಲಾಗಿದೆ.
Native Theater Institute ಬಂಜಾರರು ವ್ಯಾಪಾರಿಗಳಾಗಿ, ಪಶು ಸಂಗೋಪನಾ ಪಾಲಕರಾಗಿ, ಕೃಷಿ ಕಾರ್ಮಿಕರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗುಪ್ತಚರರಾಗಿ, ಶ್ರಮಜೀವಿಗಳಾಗಿ ತಮ್ಮದೇ ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಂಪ್ರದಾಯ, ಉಡುಗೆ ತೊಡುಗೆಯಿಂದ ಜಗತ್ತಿನ ಗಮನ ಸೆಳೆಯುವ ಬಂಜಾರ ಸಮುದಾಯ ಭಾರತೀಯ ಮುಖ್ಯವಾಹಿನಿಗೆ ಬರಲು ಇನ್ನೂ ಹೆಣಗಾಡುತ್ತಿದೆ. ಅವರ ದುಃಖದುಮ್ಮಾನಗಳಿಗೆ ಕಲೆ ಸಂಸ್ಕೃತಿ ಅಭಿವ್ಯಕ್ತಿಯ ಪ್ರಕ್ರಿಯೆ ಈ ರಂಗಪ್ರಯೋಗ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಶ್‍ನಾಯ್ಕ, ಸೈಯ್ಯದ್ ಅಲಿಂ ಇದ್ದರು.

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ

0

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ,ಸೌಹಾರ್ದತೆ ಕಾಪಾಡಿಕೊಂಡು ಸಹಬಾಳ್ವೆಯೊಂದಿಗೆ ಹಬ್ಬ ಆಚರಿಸಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಬಕ್ರೀದ್ ಸಮಯದಲ್ಲಿ ಶಾಂತಿ ಕದಡುವ ಪೋಸ್ಟ್ ಗಳು,ಸುದ್ದಿ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕರಾದ ಗಜಾನನ ವಾಮನ ಸುತಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಕೋಮುಸೌಹಾರ್ಧತೆಯನ್ನು ಕದಡುವ,ಕಾನೂನನ್ನು ಕೈಗೆತ್ತಿಕೊಳ್ಳವ ಕೃತ್ಯದಲ್ಲಿ ಭಾಗವಹಿಸಿದರೆ ಹಾಗೂ ನೈತಿಕ ಪೊಲೀಸ್ ಗಿರಿ ನೆಡೆಸುವವರ ವಿರುದ್ಧ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳತ್ತದೆ ಎಂದರು.
ಹೊರರಾಜ್ಯದಿಂದ ಪಟ್ಟಣಕ್ಕೆ ವಾಸಿಸಲು ಬರುವವರಿಗೆ ಬಾಡಿಗೆ ಮನೆ ನೀಡುವವರು ಅಂತಹ ವ್ಯಕ್ತಿಗಳ ಸೂಕ್ತ ಗುರುತಿನ ಚೀಟಿಗಳ ಆಧಾರ್ ಕಾರ್ಡ್,ಓಟರ್ ಕಾರ್ಡ್ ಪಡೆದುಕೊಳ್ಳಬೇಕು ಜೊತೆಗೆ ಪೂರ್ವಪರ ಬಗ್ಗೆ ಜಾಗೃತಿ ವಹಿಸಬೇಕು,ಕೆಲಸಕ್ಕಾಗಿ ಹೊರ ಊರುಗಳಿಂದ ಬರುವ ಕಾರ್ಮಿಕರ ಬಗ್ಗೆ ಗುತ್ತಿಗೆದಾರರು ಜಾಗೃತಿವಹಿಸಿ ಕೆಲಸ ನೀಡಬೇಕು,ತಾಲೂಕಿನ ಮಾಳೂರು,ಆಗುಂಬೆ,ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಸಮಸ್ಯೆ ಉಂಟಾದರೆ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು.
Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಪಟ್ಟಣದ ವ್ಯಾಪ್ತಿಯ ಖಾಸಗಿ ಶಾಲೆಗಳ ವ್ಯಾನ್ ಗಳಲ್ಲಿ ಮಕ್ಕಳನ್ನು ಮಿತಿ ಮೀರಿ ತುಂಬಿಕೊಂಡು ಹೋಗುವ ಬಗ್ಗೆ ಇಲಾಖೆಯು ಗಮನಹರಿಸಿದ್ದು,ಈ ವಿಚಾರದ ಬಗ್ಗೆ ಆಯಾ ಶಾಲೆಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎಂದರು.
ತಾಲೂಕಿನಾದ್ಯಂತ ಹಲವರು ಡಿಜಿಟಲ್ ಇನ್ವೆಸ್ಟ್ ಮೆಂಟ್ ನಲ್ಲಿ ಹಣ ತೊಡಗಿಸುತ್ತಿದ್ದಾರೆ,ಇಂತಹ ಡಿಜಿಟಲ್ ಕಂಪನಿಗಳ ಬಗ್ಗೆ ಎಚ್ಚರವಹಿಸಿ ಹಣ ತೊಡಗಿಸಿಕೊಳ್ಳುವ ಜವಾಬ್ದಾರಿ ಜನರದ್ದಾಗಿದೆ ಎಂದರು.
ತಾಲೂಕಿನಲ್ಲಿ ಎನ್ ಡಿ ಪಿ ಎಸ್ ಆಕ್ಟ್ ಪ್ರಕಾರ ಮಾದಕ ದ್ರವ್ಯಗಳ ಮಾರಾಟ,ಸಂಗ್ರಹ ವಿಚಾರದಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕಾರ್ಯಾಚರಣೆ ನೆಡೆಸುತ್ತ ಬಂದಿದೆ,ಗಾಂಜಾ ಮುಕ್ತ ಶಿವಮೊಗ್ಗ ,ಗಾಂಜಾ ಮುಕ್ತ ತೀರ್ಥಹಳ್ಳಿ ಮಾಡುವುದು ಪೊಲೀಸ್ ಇಲಾಖೆಯ ಮುಖ್ಯಧ್ಯೇಯವಾಗಿದೆ ಎಂದರು.

Shivamogga Police ಪುರದಾಳ್ ಕ್ರಾಸ್ ಬಳಿ ಗಾಂಜಾ ಮಾರಾಟ: ಈರ್ವರು ಯುವಕರ ಬಂಧನ

0

Shivamogga Police ಶಿವಮೊಗ್ಗ ನಗರದ ಹರ್ಷ ಫರ್ನ್ ಹೊಟೆಲ್ ಹತ್ತಿರ ಪುರದಾಳು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತುಂಗಾನಗರ ಪೊಲೀಸರು ದಾಳಿ ನಡೆಸಿ ಇಬ್ಬರು ಯುವಕರನ್ನು ಬಂಧಿಸಿ ಅವರಿಂದ ಗಾಂಜಾ ಮತ್ತು ಬೈಕ್ ವಶಪಡಿಕೊಂಡಿದ್ದಾರೆ.

ಬಂಧಿತರೆಂದರೆ ವಿನೋಬನಗರದ ಮಾಲತೇಶ ಜೆ, (32) ಮತ್ತು ಶರಾವತಿನಗರದ ರಮೇಶ ವಿ, (25) . ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 14,000 ರೂಗಳ 260 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ತುಂಗಾನಗರ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Shivamogga Police ಪಿಎಸ್ ಐ ಮಂಜುನಾಥ ಮತ್ತು ಶಿವಪ್ರಸಾದ್ ದಾಳಿ ನಡೆಸಿದ್ದರು.

District Court ಕೊಲೆಗಾರನಿಗೆ ಶಿಕ್ಷೆ ತೀರ್ಪು ಪ್ರಕಟಿಸಿದ ನ್ಯಾಯಾಲಯ

0

District Court ಕಳೆೆದ ಗ್ರಾಪಂ ಚುನಾವಣೆಯಲ್ಲಿ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ದ್ವೇಷ ಬೆಳೆಸಿಕೊಂಡು ತನ್ನ ಗ್ರಾಮದವನನ್ನೇ ಕೊಲೆ ಮಾಡಿದ್ದವನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ 23,500 ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 3 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.

ತಾಲೂಕಿನ ಹೊಳೆಬೆನವಳ್ಳಿ ದೊಡ್ಡತಾಂಡಾದ ವಾಸಿ ಕುಮಾರ್ ನಾಯ್ಕ್ (43)ಕೊಲೆ ಮಾಡಿ ಶಿಕ್ಷೆಗೊಳಗಾದವನು. ಮಹೇಶ್ ನಾಯ್ಕ್ ಕೊಲೆಯಾದವನು. ಗ್ರಾಮದ ಚಾನೆಲ್ ಹತ್ತಿರ ಮಹೇಶ್ ನಾಯ್ಕ ಅವರನ್ನು ಅಡ್ಡಗಟ್ಟಿ ಅವರ ಕುತ್ತಿಗೆ ಮತ್ತು ಮೈ ಕೈ ಗೆ ಹರಿತವಾದ ಆಯುಧ ದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆಗಿನ ತನಿಖಾಧಿಕಾರಿ ಸಿಪಿಐ ಲೋಕೇಶ್ ಪ್ರಕರಣದ ತನಿಖೆ ಕೈಗೊಂಡು, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

District Court ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪುಷ್ಪಾವತಿ ಪ್ರಕರಣದ ವಾದ ಮಂಡಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶೆ ಪಲ್ಲ

Karnataka Farmers Association ಬ್ಯಾಂಕ್ ಗಳು ಬರಗಾಲ ಪರಿಹಾರ ಹಣವನ್ನ ಖಾತೆದಾರರ ಸಾಲಕ್ಕೆ ಜಮಾ ಮಾಡಬಾರದು-ಎಚ್.ಆರ್.ಬಸವರಾಜಪ್ಪ

0

Karnataka Farmers Association ಸಮರ್ಪಕ ಬರಗಾಲ ಪರಿಹಾರ ವಿತರಣೆಯಾಗಬೇಕು. ಬೆಳೆ ವಿಮೆ ಹಣವನ್ನು ರೈತರಿಗೆ ತಕ್ಷಣವೇ ನೀಡಬೇಕು. ಬ್ಯಾಂಕ್‌ಗಳು ವಿವಿಧ ಯೋಜನೆಗಳಿಂದ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡಬಾರದು. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಬೇಕೆಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ, ತಮ್ಮ ಸರ್ಕಾರ ಕೇಂದ್ರ ಸರ್ಕಾರ ವಿಪತ್ತು ಮಾರ್ಗಸೂಚಿಯ ಪ್ರಕಾರ ಬಿಡುಗಡೆ ಮಾಡಿದ ಹಣವನ್ನಷ್ಟೇ ರೈತರಿಗೆ ಕೊಡುತ್ತಿದೆ. ಹಿಂದಿನ ಸರ್ಕಾರ ರಾಜ್ಯ ವಿಪತ್ತು ನಿಧಿಯಿಂದ ಸೇರಿಸಿ ಕ್ರಮವಾಗಿ ಒಂದು ಹೆಕ್ಟರ್‌ಗೆ ಒಣಭೂಮಿಗೆ ಕೇಂದ್ರ 8,500 ಜೊತೆಗೆ ರಾಜ್ಯ 4,500 ಸೇರಿಸಿ ಒಟ್ಟು 13,000 ರೂ. ತರಿ ಜಮೀನಿಗೆ ಕೇಂದ್ರ 13,000 ಜೊತೆಗೆ ರಾಜ್ಯ 5,000 ಸೇರಿಸಿ ಒಟ್ಟು 18,000 ರೂ.ತೋಟದ ಬೆಳೆಗಳಿಗೆ ಕೇಂದ್ರ 18,000 ಜೊತೆಗೆ ರಾಜ್ಯ 5000 ಸೇರಿಸಿ ಒಟ್ಟು 23000 ರೂ. ಕೊಡಲಾಗಿತ್ತು.

ತಾವು ಸಹ ರಾಜ್ಯ ವಿಪತ್ತು ನಿಧಿಯಿಂದ ಹಣ ಬಿಡುಗಡೆ ಮಾಡಿ ರೈತರಿಗೆ ನೀಡಬೇಕು. ಕನಿಷ್ಟ ಎಕರೆಗೆ 25, 000ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆ ಹಣ ಇನ್ನೂ ಕೆಲವು ರೈತರಿಗೆ ಸಿಕ್ಕಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಬೆಳೆ ವಿಮೆ ಹಣ ತಲುಪುವಂತಾಗಬೇಕು. ಸರ್ಕಾರ ಕೊಟ್ಟಂತ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಸರ್ಕಾರ ಆದೇಶ ಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಆದ್ದರಿಂದ ಜಮಾ ಮಾಡಿಕೊಳ್ಳದಂತೆ ಸೂಚನೆ ನೀಡಿದಾಗ್ಯೂ, ಆದೇಶವನ್ನು ನಿರ್ಲಕ್ಷಿಸಿ ಸರ್ಕಾರದ ಯೋಜನೆಗಳನ್ನು ಭಗ್ನಗೊಳಿಸಿ ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.

Karnataka Farmers Association ದೀರ್ಘಾವಧಿ ಹೊಸದಾಗಿ ಸಾಲ ಕೊಡಲು ನಿರ್ದೇಶನ ನೀಡಬೇಕು.ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯುವ ಆದೇಶವನ್ನು ರದ್ದುಮಾಡಬೇಕು. ಐ.ಪಿ ಸೆಟ್‌ಗಳಿಗೆ ವಿದ್ಯುತ್ ಚ್ಚಕ್ತಿ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಜಾರಿ ಮಾಡಲಾಗಿದೆ. 1 ಎಕರೆ ಇರುವಂತ ರೈತ ವಿದ್ಯುತ್ ಸಂಪರ್ಕ ಪಡೆಯಲು 3 ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ. ಈ ಆದೇಶ ಸಣ್ಣ ಮತ್ತು ಅತೀಸಣ್ಣ ರೈತರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಮೊದಲಿನಂತೆ ಮ-ಸಕ್ರಮ ಯೋಜನೆಯಡಿ 20 ಸಾವಿರ ಹಣವನ್ನು ಕಟ್ಟಿಸಿಕೊಂಡು ಆರ್.ಆರ್ ನಂಬರ್‌ಗಳನ್ನು ಕೊಟ್ಟು ತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

University of Agriculture and Horticulture ಮಲೆನಾಡಿನ ಅಪರೂಪದ ಹಲಸು ತಳಿಗಳಿಗೆ ಪ್ರಾಧಿಕಾರದಿಂದ ಮಾನ್ಯತೆ- ಪ್ರೊ.ಎಂ.ಬಿ.ದುಶ್ಯಂತ್ ಕುಮಾರ್

0

University of Agriculture and Horticulture ಮಲೆನಾಡಿನ ವಿಶಿಷ್ಟ ಹಲಸಿನ ತಳಿಗಳಾದ ಹಳದಿ ರುದ್ರಾಕ್ಷಿ-ಜೆ.ಎ.ಆರ್., ಆರೆಂಜ್-ಆರ್.ಪಿ.ಎನ್., ಕೆಂಪು ರುದ್ರಾಕ್ಷಿ-ಡಿ.ಎಸ್.ವಿ ಮತ್ತು ರೆಡ್-ಆರ್.ಟಿ.ಬಿ. ತಳಿಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಣಿಗೊಂಡು ಮಾನ್ಯತೆ ಪಡೆದಿವೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಪ್ರೊ. ಎಂ.ಬಿ. ದುಶ್ಯಂತಕುಮಾರ್ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಿವಿನಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಸಂರಕ್ಷಿಸಿ, ಬೆಳೆಸುವ ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿರುವುದನ್ನು ಮನಗಂಡು ಈ ನಾಲ್ಕು ತಳಿಗಳ ಕುರಿತು ಸುಮಾರು 3-4 ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಲಾಗಿದೆ

University of Agriculture and Horticulture ಸಂಪೂರ್ಣ ಮಾಹಿತಿಯನ್ನು ನವದೆಹಲಿಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಾಧಿಕಾರ ದಿಂದ ನೇಮಕಗೊಂಡ ತಜ್ಞ ವಿಜ್ಞಾನಿಗಳು ೨ಬಾರಿ ಸ್ಥಳ ಪರಿ ಶೀಲನೆ ನಡೆಸಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ, ಅಂತಿಮವಾಗಿ ನೋಂದಣಿಗೆ ಅರ್ಹವೆಂದು ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡು ಪ್ರಮಾಣಪತ್ರ ದೊರಕಿದೆ ಎಂದರು.

ಈ ಅಪರೂಪದ ಸಸ್ಯ ತಳಿಗಳನ್ನು ಪ್ರಸಕ್ತ ಸಾಲಿನಿಂದಲೇ ಅಭಿವೃದ್ಧಿಪಡಿಸಿ, ಆಸಕ್ತ ಕೃಷಿಕರಿಗೆ ತಲುಪಿಸಲು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ವಿಶೇಷ ಗಮನಹರಿಸಲಿದೆ. ಅಲ್ಲದೇ ಅಷ್ಟೇ ಮಿಡಿ ತರಹದ ಅತ್ಯಪರೂಪದ ಮಾವಿನ ವಿಶಿಷ್ಟ ತಳಿಗಳನ್ನೂ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಿದೆ. ಅಪರೂಪದ ತಳಿ ಇವುಗಳಾಗಿದ್ದು, ಹಲಸು ಬೆಳೆಯುವ ಆಸಕ್ತ ಕೃಷಿಕರಿಂದ ಈ ಹಲಸಿನ ತಳಿ ಉಳಿ ದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.+++