Friday, April 10, 2026
Friday, April 10, 2026
Home Blog Page 666

CM Siddaramaiah ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddaramaiah ಸಿಎಂ ಸಿದ್ದರಾಮಯ್ಯನವರು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ, ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದರು.

SCSP/TSP ಸಭೆಯ ಬಳಿಕ ನೇರವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಶಾಲೆಯಲ್ಲಿನ ಲೋಪಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 250 ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಮೊದಲಿಗೆ 10 ನೇ ತರಗತಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಪಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದ ವಿದ್ಯಾರ್ಥಿಗಳು. ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದು ತಿಳಿಸಿದರು. ಆಗಾಗ ಪಲಾವ್ ಕೊಡ್ತಾರೆ ಎಂದು ವಿದ್ಯಾರ್ಥಿಗಳು ಖುಷಿಪಟ್ಟರು.

ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರು ಸಿಎಂ ಸಿದ್ದರಾಮಯ್ಯಗೆ ವಿವರಿಸಿದರು. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ಸಿಎಂಗೆ ವಿದ್ಯಾರ್ಥಿಗಳು ತಿಳಿಸಿದರು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, MLC ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.‌

ಹಾಗೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ಅವರು ಮಕ್ಕಳ ಜೊತೆಯಲ್ಲೇ ಕುಳಿತು ಊಟ ಮಾಡಿದರು.

ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ: ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ…

CM Siddaramaiah ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದರು. ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಸಿದ್ದರಾಮಯ್ಯ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.
ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನಿಸಿದರು. ನೀವೇ ಆರಂಭಿಸಿದ್ದು ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95 ರಲ್ಲಿ ಆರಂಭಿಸಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿದರು.

Linganamakki Dam ಖುಷಿ ತಂದ ಆರಿದ್ರಾ ಮಳೆ : ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ1763.40 ಅಡಿ

0

Linganamakki Dam ಶಿವಮೊಗ್ಗ ಜಿಲ್ಲೆಯಲ್ಲಿ ಆರಿದ್ರಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ನಾಲ್ಕೈದು ದಿನಗಳಿಂದ ವರುಣ ಆರ್ಭಟಿಸುತ್ತಿರುವದರಿಂದ ಕೆರೆ-ಕಟ್ಟೆಗಳು ತುಂಬಿವೆ. ಬಿಡುವು ಮಾಡಿ ಕೊಟ್ಟು ಮಳೆ ಬರುತ್ತಿರುವುದರಿಂದ ಬೇಸಾಯಕ್ಕೆ ಅನುಕೂಲಕರವಾಗುತ್ತಿದೆ. ಇದರಿಂದ ಭತ್ತದ ಬಿತ್ತನೆ, ನಾಟಿ ಕಾರ್ಯ ಜೋರಾಗಿದೆ.
ಧಾರಾಕಾರ ಮಳೆ ಸುರಿಯುತ್ತಿದ್ದು ಕೆರೆ-ಕಟ್ಟೆ, ಡ್ಯಾಂಗಳು ಭರ್ತಿಯಾಗುತ್ತಿವೆ. ಜೋಗ ಜಲಪಾತಕ್ಕೂ ಮತ್ತೆ ಜೀವಕಳೆ ಬಂದಿದೆ.ಲಿAಗನಮಕ್ಕಿ ಜಲನಯನ ಭಾಗದಲ್ಲಿ ಉತ್ತಮವಾದ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಇದರಿಂದ ರಾಜ, ರಾಣಿ, ರೋರರ್ ಲೇಡಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದರಿಂದ ಪ್ರವಾಸಿಗರ ಕಣ್ಣಿಗೆ ಹಬ್ಬದಂತಾಗಿದೆ.

ಅಣೆಕಟ್ಟೆಗಳಿಗೆ ಹೆಚ್ಚಿನ ಒಳ ಹರಿವು: ಮಳೆಯಿಂದ ಜಿಲ್ಲೆಯ ಎಲ್ಲಾ ಅಣೆಕಟ್ಟೆಗಳಲ್ಲಿನ ಒಳ ಹರಿವು ಹೆಚ್ವಾಗಿದೆ. ತುಂಗಾ ಅಣೆಕಟ್ಟೆಗೆ ೪೦ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅದೇ ರೀತಿ ೧೫ ಕ್ರಸ್ಟ್ ಗೇಟ್ ಮೂಲಕ ನದಿಗೆ ೪೦ ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಭದ್ರಾ ಅಣೆಕಟ್ಟೆಗೆ ೪.೦೯೮ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೩೪೮ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ೬೦.೨೩೮ ಕ್ಯೂಸಕ್ ನೀರು ಹರಿದು ಬಂದಿದೆ. ನದಿ ಸೇರಿದಂತೆ ವಿದ್ಯುತ್?ಗೆ ೫೮೬ .೨೪ ಕ್ಯೂಸೆಕ್ ನೀರು ಅಣೆಕಟ್ಟೆಯಿಂದ ಹೊರಕ್ಕೆ ಹೋಗುತ್ತಿದೆ. ವರಾಹಿ ಮಾಣಿ ಅಣೆಕಟ್ಟೆಗೆ ೮.೩೨೪ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೆರೆ-ಕಟ್ಟೆಗಳು ನಳನಳಿಸುತ್ತಿವೆ.

Linganamakki Dam ನೀರಿನ ಮಟ್ಟದ ವಿವರ:
ಲಿಂಗನಮಕ್ಕಿ ಅಣೆಕಟ್ಟೆ:

ಒಟ್ಟು ಎತ್ತರ – ೧೮೧೯
ಇಂದಿನ ನೀರಿನ ಮಟ್ಟ – ೧೭೬೩.೪೦ ಅಡಿ
ಒಳ ಹರಿವು – ೪೪.೦೨೪ ಕ್ಯೂಸೆಕ್
ಹೊರ ಹರಿವು – ೧೪೪೦.೮೪ ಕ್ಯೂಸೆಕ್
ಕಳೆದ ವರ್ಷ – ೧೭೪೨.೬೫ ಅಡಿ

Robot Suicide News ವಿಚಿತ್ರ ಆದರೂ ಸತ್ಯ.ರೋಬೋಟ್ ಆತ್ಮಹತ್ಯೆ ಪ್ರಸಂಗ

0

Robot Suicide News ಜೀವವಿರುವ ದುರ್ಬಲ ಮನಸ್ಸಿರುವ ಮನುಷ್ಯರು ತಾವು ಮಾಡಿದ ಕೆಲ ತಪ್ಪುಗಳಿಂದಲೂ ಅಥವಾ ಬೇರೆಯವರ ಕಿರುಕುಳದಿಂದಲೂ ಜೀವನದ ಜಿಗುಪ್ಸೆಯಿಂದಲೂ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಇದು ದಿನನಿತ್ಯ ನಡೆಯುವ ಸಹಜವಾದ ಘಟನೆಗಳು. ಆದರೆ ಮನುಷ್ಯ ತಯಾರಿಸಿದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆಯಂತೆ. ಹೀಗೆ ಹೇಳಲು ನಂಬಲು ಸಾಧ್ಯವೆ..? ಹೌದು ಎನ್ನಬೇಕು.

ಮಧ್ಯ ದಕ್ಷಿಣ ಕೊರಿಯಾದ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ. ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಸ್ ಇದಾಗಿದೆ.

ಮೆಟ್ಟಿಲುಗಳ ಕೆಳಗೆ ಬಿದ್ದ ನಂತರ ರೋಬೋಟ್ ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಹೇಳಿದೆ. ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲಸಾಲುಗಳಲ್ಲಿ ಬಿದ್ದಿರುವುದು ಕಂಡುಬಂದಿದ್ದು, ರೋಬೋಟ್ ನ ಭಾಗಗಳನ್ನು ಸಂಗ್ರಹಿಸಲಾಗಿದೆ.

ಮೃತ ರೋಬೋಟ್ ಅಧಿಕೃತವಾಗಿ ಪಾಲಿಕೆಯ ಭಾಗವಾಗಿತ್ತು. ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್ ಇದನ್ನು ಅಭಿವೃದ್ಧಿಪಡಿಸಿತ್ತು.

ಮೊದಲ ಬಾರಿ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಕರೆಯಲ್ಪಡುವ ದಕ್ಷಿಣ ಕೊರಿಯಾದ ನಗರದ ಸ್ಥಳೀಯರು ಈಗ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು, ಆದರೆ ಪತನಕ್ಕೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ‘ತುಂಡುಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಂಪನಿಯು ವಿಶ್ಲೇಷಿಸುತ್ತದೆ’ ಎಂದು ಹೇಳಿದರು.

Robot Suicide News ಆತ್ಮಹತ್ಯೆ ಬಗ್ಗೆ ಅಧಿಕಾರಿಯೊಬ್ಬರು ಸಹ ವಿಷಾದ ವ್ಯಕ್ತಪಡಿಸಿದ್ದಾರಂತೆ, ಹೌದು ಮನುಷ್ಯರ ಸಾವಿಗೆ ಸಂತಾಪ ಸೂಚಿಸುವಂತೆ ಇಲ್ಲಿನ ಘಟನೆಗೂ ಅಧಿಕಾರಿ ವಿಷಾದಿಸಿದ್ದಾರಂತೆ. ಮುನ್ಸಿಪಾಲ್ ಕಾರ್ಪೊರೇಷನ್ ನ ಕೆಲಸದಲ್ಲಿ ರೋಬೋಟ್ ಸಹಾಯ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಗುಮಿ ನಗರದ ನಿವಾಸಿಗಳಿಗೆ ಆಡಳಿತಾತ್ಮಕ ಕೆಲಸದಲ್ಲಿ ಬ್ಯುಸಿ ಆಗಿತ್ತು. ಕಳೆದ ವಾರ ಮೆಟ್ಟಿಲುಗಳ ಕೆಳಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರೋಬೋಟ್ ಪತ್ತೆಯಾಗಿದೆ. ಪ್ರತ್ಯಕ್ಷದರ್ಶಿಗಳು ರೋಬೋಟ್ ಬೀಳುವ ಮೊದಲು ಓಡಾಡುತ್ತಿರೋದನ್ನು ನೋಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೆಲಸ ಮಾಡುತ್ತಿತ್ತು. ಯಾಕೆ ಹಾಗೆ ಮಾಡಿಕೊಂಡಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರಂತೆ.

Kote Police Station ಕೋಟೆ ಪೊಲೀಸ್ ಠಾಣೆ ಮುಖಾಂತರ ಕೇಸ್ ದಾಖಲು: ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟ

0

Kote Police Station ಶಿವಮೊಗ್ಗ ನಗರದ ವಾದಿ ಎ‌ ಹುದಾ ಬಡಾವಣೆಯಲ್ಲಿ ಮೊಹ್ಮದ್ ಜೈದಾನ್ ಎನ್ನುವವನನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗಳಿಗೆ ಒಳಗಾದದವರಿಗೆ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.

ಜೈದಾನ್ ಕೊಲೆ ಮಾಡಿದ್ದ ಮೊಹಮ್ಮದ್ ನಾಖೇಶ್ ಶಾ ಅಲಿ ಯಾನೆ ನಖೈ ಮತ್ತು ಅಬು ಸಲೇಹ್ ಗೆ ಹಾಫ್ ಮರ್ಡರ್ ಕೇಸ್ ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ಮತ್ತು ತಲಾ 15 ವರ್ಷ ಶಿಕ್ಷೆ ಪ್ರಕಟವಾಗಿದೆ.‌

ಶಿವಮೊಗ್ಗ ಟೌನ್ ಲಕ್ಷರ್ ಮೊಹಲ್ಲಾದ ವಾಸಿಗಳಾದ ಮೊಹಮ್ಮದ್ ನಾಖೇಶ ಅಲಿ ಮತ್ತು ಅಬು ಸಲೇಹ್ ರವರುಗಳು ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಲಷ್ಕರ್ ಮೊಹಲ್ಲಾದ ನಿವಾಸಿ ಮೊಹಮ್ಮದ್ ಯೂಸೂಫ್(50) ಅವರನ್ನು ಅಲ್ ಹಿಲಾಲ್ ಶಾಲೆಯ ಹತ್ತಿರ ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ಬಲ ದವಡೆಗೆ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.‌

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶಿವಪ್ರಸಾದ್, ಪಿಎಸ್ಐ, ಕೋಟೆ ಪೊಲೀಸ್ ಠಾಣೆ ಮತ್ತು ಶಿವಾನಂದ್ ಕೆ, ಪಿಎಸ್ಐ, ಕೋಟೆ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.‌
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಸುರೇಶ್ ಕುಮಾರ ವಾದ ಮಂಡಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಮಂಜುನಾಥ್ ನಾಯಕ್ ರವರು ಶಿಕ್ಷೆ ಪ್ರಕಟಿಸಿದ್ದಾರೆ.‌

Kote Police Station ಆರೋಪಿತರಾದ 1) ಮೊಹಮ್ಮದ್ ನಾಖೇಶ್ ಶಾ ಅಲಿ @ ನಖೈ, 19 ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಮತ್ತು 2) ಅಬು ಸಲೇಹ್, 20 ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಇವರುಗಳಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 15,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 06 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Malnad Area Development Board ಕಾಲು ಸಂಕದಿಂದ ಜಾರಿಬಿದ್ದ ಮಹಿಳೆ ಸಾವಿಗೆ ಸ್ಪಂದಿಸಿದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷಆರ್.ಎಂ.ಮಂಜುನಾಥ ಗೌಡ

0

Malnad Area Development Board ಹೊಸನಗರ ತಾಲ್ಲೂಕು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೈಸೆ ಗ್ರಾಮದ ಚಿಕಳಿ ನಿವಾಸಿ ಶಶಿಕಲಾ ಎಂಬ ಮಹಿಳೆಯು ಅಡಿಕೆ ದಬ್ಬೆಯಲ್ಲಿ ನಿರ್ಮಾಣ ಮಾಡಿರುವ ಕಾಲುಸಂಕವನ್ನು ದಾಟುವಾಗ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ವಿಷಯ ತಿಳಿದು ತುಂಬಾ ನೋವಾಗಿದ್ದು, ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡ ಅವರು ತಿಳಿಸಿದ್ದಾರೆ.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಮಲೆನಾಡು ಜಿಲ್ಲೆಗಳಲ್ಲಿ ಶಾಸಕರುಗಳು ಸೂಚಿಸುವ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮಂಡಳಿಯ 2024-25 ನೇ ಸಾಲಿನ ಯೋಜನೆಯಲ್ಲಿ ಹೆಚ್ಚಿನದಾಗಿ ಕಾಲುಸಂಕಗಳಿಗೆ ಪ್ರಾಮುಖ್ಯತೆ ನೀಡಿ ಕಾಮಗಾರಿಗಳನ್ನು ನೀಡುವಂತೆ ಶಾಸಕರುಗಳಿಗೆ ತಿಳಿಸಲಾಗಿರುತ್ತದೆ. ಮತ್ತು ಜುಲೈ ಅಂತ್ಯದೊಳಗೆ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ನಡೆಸಿ ಸದರಿ ವಿಷಯದ ಬಗ್ಗೆ ವಿವರವಾಗಿ ಚರ್ಚಿಸಿ ಅಗತ್ಯ ತಿರ್ಮಾನ ಕೈಗೊಳ್ಳಲಾಗುವುದು.
ಈಗಾಗಲೇ ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಲುಸಂಕ ನಿರ್ಮಿಸುವ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದು ಮಂಡಳಿಯ ಅನುದಾನದಲ್ಲಿ Malnad Area Development Board ಕೊಡಲೇ ಕಾಲುಸಂಕ ನಿರ್ಮಿಸಲು ಕ್ರಮ ವಹಿಸಲಾಗುವುದು.
ಮಳೆಗಾಲದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಸಂಬಂಧಿಸಿದ ಶಾಸಕರುಗಳು ತಮ್ಮ ಅನುದಾನದಲ್ಲಿ ಕಾಮಗಾರಿಗಳುನ್ನು ಪ್ರಸ್ತಾಪಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾಲುಸಂಕಗಳ ಕಾಮಗಾರಿಗಳನ್ನು ಕೈಗೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Food Safety and Standards Authority of India ದೇಶದಾದ್ಯಂತ 111 ಮಸಾಲೆ ಪದಾರ್ಥ ಉತ್ಪಾದಕರ ಪರವಾನಗಿ ರದ್ದು

0

Food Safety and Standards Authority of India ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ 111 ಮಸಾಲೆ ಉತ್ಪಾದಕರ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದೆ.

ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ಹೇಳಿವೆ.

ಕಳೆದ ಎಪ್ರಿಲ್‌ನಲ್ಲಿ ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಜನಪ್ರಿಯ ಭಾರತೀಯ ಬ್ರ್ಯಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ಮಾರಾಟವನ್ನು ನಿಷೇಧಿಸಿದಾಗಿನಿಂದ ಎಫ್‌ಎಸ್‌ಎಸ್‌ಎಐ ದೇಶಾದ್ಯಂತದಿಂದ ಮಸಾಲೆ ಉತ್ಪನ್ನಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಿದೆ. ಹಲವಾರು ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಕೀಟನಾಶಕ ಎಥೆಲೀನ್ ಆಕ್ಸೈಡ್ ಪತ್ತೆಯಾದ ಬಳಿಕ ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಈ ಬ್ರ್ಯಾಂಡ್‌ಗಳನ್ನು ನಿಷೇಧಿಸಿವೆ.

ಎಫ್‌ಎಸ್‌ಎಸ್‌ಎಐ ಈವರೆಗೆ 4,000 ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು,ಈ ಪೈಕಿ ಸುಮಾರು 2,200 ಸ್ಯಾಂಪಲ್‌ಗಳನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಎಫ್‌ಎಸ್‌ಎಸ್‌ಎಐ ಇನ್ನಷ್ಟು ಸ್ಯಾಂಪಲ್‌ಗಳ ಪರೀಕ್ಷೆಯನ್ನು ಮುಂದುವರಿಸಿರುವುದರಿಂದ ಮತ್ತಷ್ಟು ಪರವಾನಿಗೆಗಳು ರದ್ದಾಗುವ ಸಾಧ್ಯತೆಯಿದೆ.

ಈವರೆಗೆ ಪರವಾನಿಗೆ ರದ್ದುಗೊಂಡಿರುವ ಮಸಾಲೆ ಉತ್ಪನ್ನಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಎವರೆಸ್ಟ್,ಎಂಡಿಹೆಚ್,ಕ್ಯಾಚ್ ಮತ್ತು ಬಾದಶಾಹ್ ಸೇರಿವೆ.

ಪರವಾನಿಗೆಗಳು ರದ್ದುಗೊಂಡಿರುವ ಹೆಚ್ಚಿನ ಕಂಪನಿಗಳು ಕೇರಳ ಮತ್ತು ತಮಿಳುನಾಡಿಗೆ ಸೇರಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಹಲವಾರು ಕಂಪನಿಗಳೂ ನಿಗಾದಲ್ಲಿವೆ. ಪರವಾನಿಗೆ ರದ್ದುಗೊಂಡಿರುವ ಹೆಚ್ಚಿನ ಕಂಪನಿಗಳು ಸಣ್ಣ ಪ್ರಮಾಣದ ಉದ್ಯಮಗಳಾಗಿವೆ.

Food Safety and Standards Authority of India ಅರಿಷಿಣ, ಮೆಣಸಿನ ಹುಡಿ, ಕರಿಮೆಣಸು, ದಾಲ್ಚಿನಿ ಮತ್ತು ಕೊತ್ತಂಬರಿ ಹುಡಿಯಂತಹ ಮಸಾಲೆ ತಯಾರಿಕೆಯಲ್ಲಿ ಬಳಕೆಯಾಗುವ ಸಾಂಬಾರ್ ಪದಾರ್ಥಗಳು ಸುಲಭವಾಗಿ ಕಲಬೆರಕೆಗೆ ಗುರಿಯಾಗುತ್ತವೆ. ಮಸಾಲೆ ಉತ್ಪಾದಕರು ಪ್ರಮಾಣವನ್ನು ಹೆಚ್ಚಿಸಲು ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸ್ಟಾರ್ಚ್,ಮರದ ಹೊಟ್ಟು, ಕೃತಕ ಬಣ್ಣಗಳು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಇದು ಈ ಮಸಾಲೆಗಳ ಗುಣಮಟ್ಟ ಮತ್ತು ಸುರಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ,ಇನ್ನಷ್ಟು ಕಲಬೆರಕೆಯನ್ನು ತಡೆಯಲು

Klive Special ಸುದ್ದಿ ಸಾಲು ( 6 ಜುಲೈ 2024)

0

Klive Special ಪ್ರಮುಖ ಸುದ್ದಿಗಳು

ಮಹಾಮಳೆ: ಕರಾವಳಿ ಅಯೋಮಯ.

ಝೀಕಾ ವೈರಸ್ ಗೆ ಶಿವಮೊಗ್ಗದ ಗಾಂಧಿನಗರದಲ್ಲಿ 75ರ ಅಜ್ಜ ಬಲಿ .ರಾಜ್ಯದ ಮೊದಲ ಪ್ರಕರಣ

ದರ್ಶನ್ ಗ್ಯಾಂಗ್ ಕ್ರೌರ್ಯಃ ಗಿರಿನಗರ ಶಾಸಕ ರವಿ ಸುಬ್ರಹ್ಮಣ್ಯ ಅವರ ಚಾಲಕ ಕೃತ್ಯ ನಡೆದ ನಂತರ ಶೆಡ್ ಗೆ ಭೇಟಿ, ಹೊಸ ತಿರುವು .

ಭಾರಿ ಮಳೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ರಜೆ .

ಹಾಸನದಲ್ಲಿ ಡೆಂಗ್ಯೂಗೆ 6 ಮಕ್ಕಳು ಬಲಿ

Klive Special ಬಾಗಲಕೋಟೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ನಕಲಿ ವೈದ್ಯರು ಬೆಳಕಿಗೆ.

ಎನ್ ಆರ್ ಪುರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಸತಿ ಶಾಲೆಯ ದೈಹಿಕ ಶಿಕ್ಷಕ ಬಂಧನ

ಬಿಹಾರ: 17 ದಿನದಲ್ಲಿ 10 ಸೇತುವೆ ಕುಸಿತ: 14 ಇಂಜಿನಿಯರ್ ಗಳು ಅಮಾನತು.

D.K.Shivakumar ಮೂಡಾ ಹಗರಣದ ಬಗ್ಗೆ ಸಚಿವ ಎಚ್ ಡಿ ಕೆ ಹೇಳಿಕೆಗೆ ಡಿಕೆಶಿ ಖಾರದ ನುಡಿ

0

D.K.Shivakumar ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ ಎಂಬ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ‌ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಪತ್ನಿ ಹೆಸರಿಗೆ ನಿವೇಶನ ಹಂಚಿಕೆಯಾಗಿರುವ ಮೈಸೂರಿನ ಮೂಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದರು.

ಸಿಡಿ ಫ್ಯಾಕ್ಟರಿ ನಂತರ ಈಗ ಮುಡಾ ಫ್ಯಾಕ್ಟರಿ ಹೊರಬರುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ “ಕೆಲವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ತಿರುಗೇಟು ನೀಡಿದರು.

D.K.Shivakumar ಮಂಡ್ಯದಲ್ಲಿ ತಾವು ಮಾಡುತ್ತಿರುವ ಜನತಾದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರಕಾರದಿಂದ ಸೂಚನೆ ನೀಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದು ಹೇಳಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಅದೇ ರೀತಿಯ ಜನಕ್ಕೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ? ಎಂದರು.

Klive Special Article ಕೆ ಲೈವ್ ವಿಶೇಷ

0

Klive Special Article ಹೊಸ ಅಪರಾಧಿಕ ಕಾನೂನುಗಳು-ಒಂದು ಪರಿಚಯ
ಬದಲಾವಣೆ ಜಗದ ನಿಯಮ.ಜಗತ್ತಿನಲ್ಲಿ ಇದಕ್ಕೆ ಹೊರತಾಗಿ ಯಾರೂ , ಯಾವುದೂ ಇಲ್ಲ. ಸಮಾಜ, ತಂತ್ರಜ್ಞಾನ ಈ ಕೆಲವು ವರ್ಷಗಳಲ್ಲಿ ಹಿಂದೆ ಕಲ್ಪಿಸಿಕೊಳ್ಳಲಾರದ ಮಟ್ಟಿಗೆ ಬದಲಾಗಿದೆ. ಹೀಗೆ ಬದಲಾದ, ಬದಲಾಗುತ್ತಿರುವ ಪರಿದೃಶ್ಯದಲ್ಲಿ ಕಾನೂನುಗಳ ಬದಲಾವಣೆಯೂ ಅಷ್ಟೇ ಮುಖ್ಯ.

ಹಳೆಯ ಮೂರು ಕ್ರಿಮಿನಲ್ ಕಾನೂನುಗಳಿಗೆ ಹೊಸ ಬದಲಾವಣೆ ತಂದು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಈ ಹೊಸ ಬದಲಾವಣೆ ಏನಿದೆ?
ಕಾನೂನು ತಜ್ಞ ಶ್ರೀ ಸುಧೀರ್ ಕೀಳಂಬಿ
ನಮ್ಮ “ಕೆ ಲೈವ್” ಓದುಗರಿಗೆಂದೇ ಸರಳವಾಗಿ ನಿರೂಪಿಸಿದ್ದಾರೆ.

ಈ ನಿಟ್ಟಿನಲ್ಲಿ, ಸರ್ಕಾರವು ಬ್ರಿಟಿಷ್ ಕಾಲದ ಹಳೆಯ ಮೂರು ಕ್ರಿಮಿನಲ್ ಕಾನೂನುಗಳನ್ನು ಹೊಸ ಕಾನೂನುಗಳೊಂದಿಗೆ ಬದಲಾಯಿಸಿದೆ. ಈ ಮೂಲಕ ಭಾರತದ ಅಪರಾಧಿಕ ನ್ಯಾಯ ವ್ಯವಸ್ಥೆಯು ಯನ್ನು ಬಹುತೇಕವಾಗಿ ಬದಲಾಯಿಸಿ, ಹೊಸ ಆಯಾಮವನ್ನು ನೀಡಿದೆ. 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ, 2023 (BNS); 126 ವರ್ಷಗಳ ಹಿಂದಿನ ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಬದಲಿಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, 2023 (BNSS); ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷಿ ಅಧಿನಿಯಮದ ಬದಲಿಗೆ ಭಾರತೀಯ ಸಾಕ್ಷಿ ಅಧಿನಿಯಮ 2023 (BSA) ಯನ್ನು ಜಾರಿಗೆ ತರಲಾಗಿದೆ. ಈ ಮೂರೂ ಕಾನೂನುಗಳನ್ನು ಡಿಸೆಂಬರ್ 2023 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅವು ಜುಲೈ 1 ರಿಂದ ಕಾರ್ಯಾನ್ವಯ ಆಗಿವೆ

ಈ ಮೂರು ಹೊಸ ಕಾನೂನುಗಳು ಶಿಕ್ಷೆಗಿಂತ ಹೆಚ್ಚಾಗಿ ನ್ಯಾಯದ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ತ್ವರಿತ ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿವೆ, ನ್ಯಾಯಾಂಗ ಮತ್ತು ನ್ಯಾಯಾಲಯದ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಹಾಗು ಎಲ್ಲರಿಗೂ ನ್ಯಾಯ ದೊರಕಿಸುವ ಉದ್ದೇಶವನ್ನು ಇವು ಒತ್ತಿಹೇಳುತ್ತವೆ.

Klive Special Article ಭಾರತದಲ್ಲಿನ ಆಪರಾಧಿಕ ನ್ಯಾಯ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿದ್ದು ಸುಧಾರಣೆಯ ಅವಶ್ಯಕತೆಯನ್ನು ಭಾರತದ ಕಾನೂನು ಆಯೋಗ ಪ್ರತಿಪಾದಿಸುತ್ತಲೇ ಇತ್ತು. ಇವುಗಳಲ್ಲಿ ಕೆಲವನ್ನು ಹೇಳುವುದಾದರೆ, ತನಿಖೆಯಲ್ಲಿ ಲೋಪ ಮತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಿಕೆ, ಬೃಹತ್ ಸಂಖ್ಯೆಯ ಕ್ರಿಮಿನಲ್ ಮೊಕದ್ದಮೆಗಳ ಬಾಕಿ, ವಿಳಂಬವಾದ ನ್ಯಾಯಾಲಯದ ವಿಚಾರಣೆಗಳು, ಕಡಿಮೆ ಶಿಕ್ಷೆ ಪ್ರಮಾಣ ಮತ್ತು ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಇತ್ಯಾದಿ.

ರಚನಾತ್ಮಕವಾಗಿ ನೋಡುವುದಾದರೆ, ಜಾರಿಯಾಗಿರುವ ಹೊಸ ಭಾರತೀಯ ದಂಡ ಸಂಹಿತೆ ಬದಲಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯು ಹಿಂದಿನ 511 ಸೆಕ್ಷನ್‌ಗಳ ಬದಲಿಗೆ 358 ಸೆಕ್ಷನ್‌ ಗಳನ್ನು ಹೊಂದಿದೆ. ಇದರಲ್ಲಿ 175 ಸೆಕ್ಷನ್‌ಗಳನ್ನು ಬದಲಿಸಿ, 8 ಹೊಸ ಸೆಕ್ಷನ್‌ಗಳನ್ನು ಸೇರಿಸಿ, 22 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈಗ 513 ಸೆಕ್ಷನ್‌ಗಳನ್ನು ಹೊಂದಿದೆ. ಹಳೆಯ ಕಾನೂನಿನ 160 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ 9 ಹೊಸ ಸೆಕ್ಷನ್‌ ಸೇರಿಸಿ, 9 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷಿ ಸಂಹಿತೆ ಹಿಂದಿನ 167ರ ಬದಲಿಗೆ 170 ಸೆಕ್ಷನ್‌ಗಳನ್ನು ಹೊಂದಿರುತ್ತದೆ. 23 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಒಂದು ಹೊಸ ಸೆಕ್ಷನ್‌ಅನ್ನು ಸೇರಿಸಲಾಗಿದೆ ಮತ್ತು 5 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ.

ಈ ಮೂರು ಕಾನೂನುಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ಕ್ರೋಡೀಕರಿಸಬಹುದು:

• ಹೊಸ BNS ನಲ್ಲಿ, ದ್ವೇಷದ ಅಪರಾಧಗಳು ಮತ್ತು ಗುಂಪು ಹತ್ಯೆ, ಭಯೋತ್ಪಾದನೆ, ಸಂಘಟಿತ ಅಪರಾಧ, ಮತ್ತು ದ್ವೇಷದ ಭಾಷಣದಂತಹ ಅಪರಾಧಗಳನ್ನು ಸೇರಿಸಲಾಗಿದೆ. ದೇಶದ್ರೋಹವನ್ನು ರಾಷ್ಟ್ರೀಯ ಸಮಗ್ರತೆಯನ್ನು ಅಪಾಯಕ್ಕೆ ಒಳಪಡಿಸುವ ಕೃತ್ಯಗಳೆಂದು ಮರು ವ್ಯಾಖ್ಯಾನಿಸಲಾಗಿದೆ. ಇದಲ್ಲದೆ, ಕಳ್ಳತನದ ವ್ಯಾಪ್ತಿಯನ್ನು ವಿಸ್ತರಿಸಿ, ಡೇಟಾ ಮತ್ತು ಅಮೂರ್ತ ವಸ್ತುಗಳ ಕಳ್ಳತನವನ್ನೂ ಇದರಲ್ಲಿ ಸೇರಿಸಲಾಗಿದೆ.
• ಹೊಸ ಕಾನೂನಿನ ಪ್ರಕಾರ, ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ಸಾಕ್ಷಿ ರಕ್ಷಣೆ ಯೋಜನೆಗಳನ್ನು ಜಾರಿಗೆ ತರಬೇಕು.
• ವಿಜ್ಞಾನ ತಂತ್ರಜ್ಞಾನ ತುಂಬಾ ಮುಂದುವರೆದಿದ್ದರೂ, ಆಪರಾಧಿಕ ಕಾನೂನಿನಲ್ಲಿ ಅವುಗಳ ಸದುಪಯೋಗ ಅಷ್ಟಾಗಿ ಆಗುತ್ತಿರಲಿಲ್ಲ. ಉದಾಹರಣೆಗೆ ವಿಡಿಯೋ ಮೂಲಕ ಸಾಕ್ಷ್ಯ ಸಂಗ್ರಹಣೆ, ಹೇಳಿಕೆ ದಾಖಲಿಸುವುದು, ಮೊಬೈಲ್ ಮೂಲಕ ಸಮನ್ಸ್ ಜಾರಿ ಇತ್ಯಾದಿ ಕ್ರಮಗಳ ಮೂಲಕ ಶೀಘ್ರ ನ್ಯಾಯ ವಿಲೇವಾರಿ ಜೊತೆಗೇ ಪಾರದರ್ಶಕ ನ್ಯಾಯ ನಿರ್ವಹಣೆಯೂ ನಡೆಯಲಿದೆ.
• ಇನ್ನೊಂದು ಹೊಸ ವಿಷಯ ಸೇರಿಸಿರುವುದೇನೆಂದರೆ, ಸಮುದಾಯ ಸೇವೆ. ಕ್ಷುಲ್ಲಕ ಕಳ್ಳತನದಂತಹ ಸಣ್ಣ ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲು ಸಮಾಜ ಸೇವೆ ಶಿಕ್ಷೆಯಾಗಬಹುದು.
• ವೈದ್ಯಕೀಯ ವರದಿಯನ್ನು ಏಳು ದಿನಗಳಲ್ಲಿ ಪೂರ್ಣಗೊಳಿಸಬೇಕು.
• ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಕುರಿತು ಹೊಸ ಅಧ್ಯಾಯವನ್ನು ಕಾನೂನಿಗೆ ಸೇರಿಸಲಾಗಿದೆ. ಇದರಲ್ಲಿ ಮಗುವನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಘೋರ ಅಪರಾಧ ಎಂದು ವರ್ಗೀಕರಿಸಲಾಗಿದ್ದು, ಕಠಿಣ ಶಿಕ್ಷೆ ವಿಧಿಸುವ ಅವಕಾಶವಿದೆ.
• ಅತ್ಯಾಚಾರ ಸಂತ್ರಸ್ತರ ಹೇಳಿಕೆಗಳನ್ನು ಸಂತ್ರಸ್ತೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ದಾಖಲಿಸಿಕೊಳ್ಳುತ್ತಾರೆ.
• ಅಪ್ರಾಪ್ತ ವಯಸ್ಕರ ಮೇಲೆ ಸಾಮೂಹಿಕ ಅತ್ಯಾಚಾರವು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು.
• ಹೊಸ ಕಾನೂನಿನ ಪ್ರಕಾರ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡುವುದು ಅಥವಾ ಅವರನ್ನು ದಾರಿ ತಪ್ಪಿಸುವ ಮೂಲಕ ಕೈಕೊಡುವ ಪ್ರಕರಣಗಳಿಗೆ ಶಿಕ್ಷೆಯ ನಿಬಂಧನೆಗಳನ್ನು ಒಳಪಡಿಸಲಾಗಿದೆ.
• ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಎಲ್ಲಾ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ.
• ಎಫ್‌ಐಆರ್, ಪೊಲೀಸ್ ವರದಿ, ಚಾರ್ಜ್ ಶೀಟ್, ಹೇಳಿಕೆ, ತಪ್ಪೊಪ್ಪಿಗೆ ಹೇಳಿಕೆ ಮತ್ತು ಇತರ ದಾಖಲೆಗಳ ನಕಲು ಪ್ರತಿಗಳನ್ನು 14 ದಿನಗಳಲ್ಲಿ ಪಡೆಯುವ ಹಕ್ಕು ಆರೋಪಿ ಮತ್ತು ಸಂತ್ರಸ್ತರು ಇಬ್ಬರಿಗೂ ಇದೆ.
• ಇದಲ್ಲದೆ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದು, ಇದು ಪೊಲೀಸ್ ಠಾಣೆಗೆ ಹೋಗುವ ಅಗತ್ಯವನ್ನು ತಪ್ಪಿಸುತ್ತದೆ.
• ಅಪರಾಧ ಎಲ್ಲಿಯೇ ನಡೆದಿರಲಿ, ಒಬ್ಬ ವ್ಯಕ್ತಿ ತನ್ನ ಹತ್ತಿರ ಇರುವ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದು.
• ಈಗ ಗಂಭೀರ ಅಪರಾಧಗಳಿಗೆ, ಫೋರೆನ್ಸಿಕ್ ತಜ್ಞರು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯವಾಗಿದೆ.
• ಲಿಂಗದ ವ್ಯಾಖ್ಯಾನವು ಈಗ ತೃತೀಯ ಲಿಂಗಿಗಳನ್ನೂ ಸಹ ಒಳಗೊಂಡಿರುತ್ತದೆ, ಇದು ಸಮಾನತೆಯನ್ನು ಉತ್ತೇಜಿಸುತ್ತದೆ.
• ಮಹಿಳೆಯರ ವಿರುದ್ಧದ ಕೆಲವು ಅಪರಾಧಗಳಿಗೆ, ಸಾಧ್ಯವಾದಾಗಲೆಲ್ಲಾ, ಸಂತ್ರಸ್ತೆಯ ಹೇಳಿಕೆಯನ್ನು ಮಹಿಳಾ ಮ್ಯಾಜಿಸ್ಟ್ರೇಟ್ ದಾಖಲಿಸಲು ಅವಕಾಶವಿದೆ.ಕ್ರಿಮಿನಲ್ ಕಾನೂನುಗಳ ಸುಧಾರಣೆಯ ಗಾಳಿ ಬೇರೆ ಕಾನೂನುಗಳೆಡೆಯೂ ಬೀಸಿ, ಸಮಗ್ರ ಕಾನೂನುಗಳು ಸುಧಾರಣೆಯಾಗಲಿ. ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೆಯಾಗುವಂತಹ ಕಾನೂನುಗಳು ಇನ್ನಷ್ಟು ಬರಲಿ. ಈ ಮೂಲಕ ಸಮಾಜ ಮತ್ತು ಜನರ ಜೀವನ ಮಟ್ಟ ಸುಧಾರಿಸಲಿ.

(ಇದರಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)
ಸುಧೀರ್ ಕೀಳಂಬಿ
ಲೇಖಕರು ವಿದೇಶಾಂಗ ಇಲಾಖೆಯಲ್ಲಿ ಕಾನೂನು ಸಲಹೆಗಾರರು

Police Department ಬಾಲ ಕಾರ್ಮಿಕರನ್ನ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ

0

Police Department 2024-25ನೇ ಸಾಲಿನಲ್ಲಿ ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಉದ್ದಿಮೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರಾವಸ್ಠೆ ಮಕ್ಕಳನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದವಾಗಿದ್ದು, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಯಂತ್ರಣ ಹಾಗೂ ನಿಷೇಧ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರಡಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ನೇಮಿಸಿಕೊಂಡ ಮಾಲೀಕರುಗಳಿಗೆ ರೂ. 50,000/-ಗಳ ದಂಡ ಅಥವಾ ಎರಡು ವರ್ಷವರೆಗಿನ ಸೆರೆಮನೆ ವಾಸದ ಶಿಕ್ಷೆ ಮತ್ತು

Police Department ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.
ಬಾಲಕಾರ್ಮಿಕ ಹಾಗೂ ಕಿಶೋರಾಕಾರ್ಮಿಕರು ಜಿಲ್ಲೆಯಲ್ಲಿ ಕಂಡು ಬಂದಲ್ಲಿ ಕಾರ್ಮಿಕ ಇಲಾಖೆ-ದೂ.ಸಂ.: 08182-248810, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098 ನ್ನು ಸಂಪರ್ಕಿಸುವುದು.