MESCOM ತಾವರೆಚಟ್ನಹಳ್ಳಿ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಎಫ್-3 ಅಬ್ಬಲಗೆರೆ ಐಪಿ ಮಾರ್ಗ ಮತ್ತು ಎಫ್-7 ಎನ್‍ಜೆವೈ ಮಾರ್ಗಗಳಲ್ಲಿ ವಾಹಕ ಬದಲಾವಣೆ ಮತ್ತು ಜಂಗಲ್ ಕಟ್ಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ತಲ್ಲಗಂಗೂರು, ಮೋಜಪ್ಪನ ಹೊಸೂರು, ಸುತ್ತಮುತ್ತಲಿನ ಕ್ರಷರ್‍ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜು. 08 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
CM Siddharamaih ಐಎಎಸ್ ಇತ್ಯಾದಿ ಪರೀಕ್ಷೆಗಳಿಗೆ ಸಿದ್ಧವಾಗುವ ಎಸ್ ಸಿ & ಎಸ್ ಟಿ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಹಾಸ್ಟೆಲ್ ಸ್ಥಾಪನೆಗೆ ಕ್ರಮ -ಸಿದ್ಧರಾಮಯ್ಯ
CM Siddharamaih ಎಸ್.ಸಿ ಹಾಗೂ ಎಸ್.ಟಿ ಸಮುದಾಯದ ಐ.ಎ.ಎಸ್ ಹಾಗೂ ಐ.ಆರ್.ಎಸ್ ಆಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ದೆಹಲಿಯಲ್ಲಿ ಹಾಸ್ಟೆಲ್ ಸ್ಥಾಪನೆ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಈ ಸಂಬಂಧ ತಕ್ಷಣ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ.
ಈ ಹಾಸ್ಟೆಲ್ ನಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿ ಖರೀದಿ, ಇತರೆ ಖರ್ಚು ವೆಚ್ಚಗಳನ್ನು ಭರಿಸಲು ತಿಂಗಳಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ.
ದೆಹಲಿಯಲ್ಲಿ ನಿರ್ಮಾಣವಾಗುವ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರೆರಿ ಸ್ಥಾಪನೆಯಾಗಲಿದ್ದು. ಅಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಹಂಚಿಕೆ ರಾಜ್ಯ ಪರಿಷತ್ ಸಭೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.
Shimoga Muddinakoppa Tree Park ಮುದ್ದಿನ ಕೊಪ್ಪ ಬಳಿ ಭೀಕರ ಅಫಘಾತ.ಕಾರುಗಳ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು
Shimoga Muddinakoppa Tree Park ಶಿವಮೊಗ್ಗ ಮುದ್ದಿನಕೊಪ್ಪ ಟ್ರೀ ಪಾರ್ಕ್ ಬಳಿ ಭೀಕರ ಅಪಘಾತ ಸಂಭವಿಸಿದ್ದು,ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಆಯನೂರು ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಚಿತ್ರದುರ್ಗದ ಶಿಫ್ಟ್ ಕಾರು ಹಾಗೂ ಶಿವಮೊಗ್ಗ ಕಡೆಯಿಂದ ಸಿಗಂದೂರಿಗೆ ಕಡೆಯಿಂದ ಹೋಗುತ್ತಿದ್ದ ಇನೋವಾ ಕಾರಿನ ನಡುವೆ ಅಫಘಾತವಾಗಿದೆ.
Shimoga Muddinakoppa Tree Park ಓವರ್ ಟೇಕ್ ಮಾಡಲು ಹೋಗಿ ಅವಘಡವಾಗಿದ್ದು,
ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಗಿದೆ
Zika virus ಶಿವಮೊಗ್ಗ ಜಿಲ್ಲೆಯಲ್ಲಿ ಝಿಕಾ ವೈರಸ್ ಗೆ ಮೊದಲ ಬಲಿ!
Zika virus ಶಿವಮೊಗ್ಗ ಜಿಲ್ಲೆಯಲ್ಲಿ ಝಿಕಾಗೆ ಪತ್ತೆಯಾದ ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಗಾಂಧಿ ನಗರದ 74 ವರ್ಷದ ವೃದ್ಧ ಮನೆಯಲ್ಲಿ ಸಾವು ಝಿಕಾ ವೈರಸ್ ಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಜೂ. 19 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು
Zika virus ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧನಿಗೆ ಚಿಕಿತ್ಸೆ ಪಡೆದಿದ್ದರು.
ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಗುರುವಾರ ಕರೆದುಕೊಂಡು ಹೋಗಿದ್ದರು.
ಜ್ವರ ಮಾತ್ರವಲ್ಲದೇ ವಿವಿದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ.
Karnataka Union of Working Journalists ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಮಾಹಿತಿ ಆಹ್ವಾನ
Karnataka Union of Working Journalists ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಜುಲೈ ೨೧ ರಂದು ಶಿವಮೊಗ್ಗದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಮತ್ತು ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳು ತಮ್ಮ ಅಂಕಪಟ್ಟಿ ಪ್ರತಿ, ಭಾವಚಿತ್ರ, ಆಧಾರ್ ಕಾರ್ಡ್ ಮತ್ತು Karnataka Union of Working Journalists ತಮ್ಮ ಪೋಷಕರು ಪ್ರತಿನಿಧಿಸುವ ಪತ್ರಿಕಾ ಸಂಸ್ಥೆಯ ದೃಢೀಕರಣ ಪತ್ರವನ್ನು ಶಿವಮೊಗ್ಗ ಪತ್ರಿಕಾಭವನ ಕಚೇರಿಗೆ ಸಲ್ಲಿಸಬಹುದಾಗಿದೆ.
ಜುಲೈ ೧೫ ರೊಳಗೆ ಮಾಹಿತಿ ನೀಡಬೇಕಿದ್ದು, ನಂತರ ಬಂದ ಹೆಸರುಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ, 93411 26340, 98445 18866, 9448138183 ಈ ನಂಬರುಗಳಿಗೆ ಸಂಪರ್ಕಿಸಬಹುದು.
Doctor’s Day ವೈದ್ಯರ ದಿನದಂದು ಡಾ.ಲತಾ ಶಶಿಧರ್ ಗೆ ಸನ್ಮಾನ
Doctor’s Day ವೈದ್ಯರ ದಿನಾಚರಣೆ ಅಂಗವಾಗಿ ನಮ್ಮ ಕ್ಲಬ್ ವತಿಯಿಂದ ಗುತ್ತಿ ನರ್ಸಿಂಗ್ ಹೋಮ್ ಡಾಕ್ಟರ್ ಲತಾ ಶಶಿಧರ್ ರವರಿಗೆ ಸನ್ಮಾನ ಮಾಡಲಾಯಿತು. 2024-25ರ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಕಾರ್ಯದರ್ಶಿ ಲತಾ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷೆ ಶಬರಿ ಕಡಿದಾಳ್, ಮಾಜಿ ಅಧ್ಯಕ್ಷೆ ಜಯಂತಿ ವಾಲಿ, ಅಧ್ಯಕ್ಷೆ ಶ್ವೇತಾ ಆಶಿತ್, ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ವಿಜಯಶ್ರೀ, Doctor’s Day ಅಮೃತ ಬಸವರಾಜ ಹಾಗೂ ಡಾಕ್ಟರ್ ಅಭಿಷೇಕ್ ನುಚ್ಚಿನ್ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು
DC Shivamogga ಡೆಂಗ್ಯು ನಿಯಂತ್ರಣದಲ್ಲಿ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿ- ಗುರುದತ್ತ ಹೆಗಡೆ
DC Shivamogga ನೀರು ತುಂಬುವ ಡ್ರಂ, ಬಕೆಟ್, ತೊಟ್ಟಿ ಮತ್ತು ಇತರೆ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಚಗೊಳಿಸಬೇಕು ಮತ್ತು ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಬೇಕು. ಹಾಗೂ ತಮ್ಮ ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಡೆಂಗ್ಯೂ ನಿಯಂತ್ರಣದಲ್ಲಿ ತಮ್ಮ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡೆಂಗ್ಯು ಜ್ವರ ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿ ಶುಕ್ರವಾರವನ್ನು ಡೆಂಗ್ಯು ಹರಡುವ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಚಟುವಟಿಕೆಯ ದಿನವಾಗಿ ಅನುಷ್ಟಾನಗೊಳಿಸಲು ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಜು.05 ರ ಶುಕ್ರವಾರದಂದು ಜಿಲ್ಲಾಧಿಕಾರಿಗಳು ನಗರದ ಶೇಷಾದ್ರಿಪುರಂ ಮತ್ತು ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಿದರು.
ಪ್ರಸ್ತುತ ಮಳೆಗಾಲವಾಗಿದ್ದು ಡೆಂಗ್ಯು ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ನಂತರದ ದಿನಗಳಲ್ಲಿ ರೋಗ ಪ್ರಸರಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಡೆಂಗ್ಯು ಜ್ವರ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮನೆ ಮನೆಗೆ ಆಶಾ, ಅಂಗನವಾಡಿ, ಆರೋಗ್ಯ ಕಾಯಕರ್ತರು ತೆರಳಿ ಲಾರ್ವಾ ಸಮೀಕ್ಷೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಲಾಖೆ ಜೊತೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿದರೆ ನಿಯಂತ್ರಣ ಪರಿಣಾಮಕಾರಿ ಆಗುತ್ತದೆ.
ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳು ಹಾಗೂ ಸಿಬ್ಬಂದಿ ವರ್ಗದವರು ಕಚೇರಿಗಳು, ಶಾಲಾ, ಕಾಲೇಜುಗಳಲ್ಲಿ ನೀರು ತುಂಬುವ ಪರಿಕರಗಳನ್ನು ಸ್ವಚ್ಚವಾಗಿ ತೊಳೆದು ಒಣಗಿಸಿ, ಪುನಃ ಭರ್ತಿ ಮಾಡಬೇಕು. ಅವಶ್ಯವಿರುವ ನೀರಿಗೆ ಮುಚ್ಚಬೇಕು. ಈಡಿಸ್ ಸೊಳ್ಳೆ ಶುದ್ದ ನೀರಿನಲ್ಲೇ ಉತ್ಪತ್ತಿಯಾಗುವ ಕಾರಣ ಈ ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಡಿಹೆಚ್‍ಓ ಡಾ.ನಟರಾಜ್ ಮಾತನಾಡಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಇದೊಂದು ದೈನಂದಿನ ಅಭ್ಯಾಸದಂತಾಗಿ ವರ್ತನೆಯಲ್ಲಿ ಶಾಶ್ವತ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಸಹಕರಿಸಬೇಕು. ತಮ್ಮ ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ತೊಟ್ಟಿ, ಡ್ರಂ ಇತರೆ ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡಬೇಕು. ಸೊಳ್ಳೆ ನಿರೋಧಕಗಳು ಮತ್ತು ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ತಿಳಿಸಿದರು.
DC Shivamogga ಇದೇ ವೇಳೆ ಆರೋಗ್ಯ ಇಲಾಖೆ ವೈದ್ಯರು, ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ, ನಾಶಪಡಿಸಿ, ಅರಿವು ಮೂಡಿಸಿದರು.
ಜಿಲ್ಲಾಧಿಕಾರಿಗಳ ಭೇಟಿ ವೇಳೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ, ಆರ್‍ಸಿಹೆಚ್‍ಓ ಡಾ.ನಾಗರಾಜ್ ನಾಯಕ್, ಟಿಹೆಚ್‍ಓ ಡಾ.ಚಂದ್ರಶೇಖರ್, ಡಾ.ಶ್ರೀಧರ್, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು ಹಾಜರಿದ್ದರು.
India Biodiversity Award ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕವಲಕೋಡು ವೆಂಕಟೇಶ್ ಗೆ ಜೀವವೈವಿಧ್ಯತಾ ಪ್ರಶಸ್ತಿ
India Biodiversity Award ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಶೆಡ್ತಿಕೆರೆ ಇದರ ಮೂಲಕ ಕವಲಕೋಡು ವೇಕಟೇಶ್ ಇವರು ನಡೆಸುತ್ತಿರುವ ಜನಪರ ಕಾರ್ಯಗಳನ್ನು ಗುರುತಿಸಿ 1988- 89ರಲ್ಲಿ ಕರ್ನಾಟಕ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವಪ್ರಶಸ್ತಿ, 1992-93ರಲ್ಲಿ ನೆಹರು ಯುವ ಕೇಂದ್ರ ಪರಿಸರ ಪ್ರಶಸ್ತಿ, India Biodiversity Award ಶಿವಮೊಗ್ಗದಿಂದ ಜಿಲ್ಲಾಮಟ್ಟದಲ್ಲಿಉತ್ತಮ ಯುವಸಂಘಟನೆ ಪ್ರಶಸ್ತಿ ಲಭಿಸಿದೆ.
ಅಲ್ಲದೇ 2009-10ರಲ್ಲಿ ಕರ್ನಾಟಕ ಅರಣ್ಯ,ಪರಿಸರ, ಜೀವಶಾಸ್ತ್ರ ಇಲಾಖೆಯಿಂದ ಕರ್ನಾಟಕ ರಾಜ್ಯ ಮತ್ತು 2001ರಲ್ಲಿ ಪರಿಸರ, ವಿಜ್ಞಾನ ಮತ್ತು ಕೃಷಿಗಳ ಬಗ್ಗೆ ಜನಜಾಗೃತಿ ಸೇವೆಯನ್ನು ಗಮನಿಸಿ ರಾಜ್ಯಮಟ್ಟದ ಸಂದೇಶ ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ.
Bharat Scouts and Guides ಶಿಬಿರಗಳಿಂದ ಶಿಸ್ತು,ರಾಷ್ಟ್ರಾಭಿಮಾನ,ಸೇವಾಮನೋಭಾವ ಇತ್ಯಾದಿ ಪ್ರಯೋಜನಗಳಾಗುತ್ತವೆ- ಬಿ.ಕೃಷ್ಣಪ್ಪ
Bharat Scouts and Guides ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸ್ಕೌಟ್ಸ್ ಭವನದಲ್ಲಿ ಜು.5 ರಿಂದ ಜು.7ರ ವರೆಗೆ “ರಾಜ್ಯಪುರಸ್ಕಾರ ಪೂರ್ವಸಿದ್ಧತಾ ಪರೀಕ್ಷಾ ಶಿಬಿರ”ವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 242 ಸ್ಕೌಟ್ಸ್, ಗೈಡ್ಸ್, ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ಶಿಬಿರದ ಉದ್ಘಾಟನೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಬಿ.ಕೃಷ್ಣಪ್ಪ ನವರು ನೆರವೇರಿಸಿದರು.ಉದ್ಘಾಟನಾ ನುಡಿಯಲ್ಲಿ ಶಿಬಿರಗಳು ಮಕ್ಕಳಲ್ಲಿ “ ಶಿಸ್ತುಬದ್ಧಜೀವನ ರಾಷ್ಟ್ರಾಭಿಮಾನ, ಸ್ವಾಭಿಮಾನ, ಸೇವಾಮನೋಭಾವ ,ಸಂಸ್ಕಾರ, ಉತ್ತಮ ಸಂಸ್ಕೃತಿ, ಪರಸ್ಪರ ಸಹಕಾರ, ಪರಸ್ಪರ ಗೌರವ ವಿನಿಮಯದಂತಹ ಉದಾತ್ತ ಗುಣಗಳನ್ನು ಬೆಳೆಸುವಲ್ಲಿ ಪ್ರೇರಕ” ವಾಗಿವೆ ಎಂದು ಹೇಳುತ್ತಾ,”ಬೆಳೆಯುವ ಪೈರು ಮೊಳಕೆಯಲ್ಲಿ” ಎಂಬ ಮಾತನ್ನು ಮಕ್ಕಳಿಗೆ ವಿವರಿಸಿ ಉತ್ತಮ ಆದರ್ಶ ಜೀವನ ನಿಮ್ಮದಾಗಲಿ ಎಂದು ಆಶಿಸಿದರು.
ರೋವರ್, ರೇಂಜರ್ ವಿದ್ಯಾರ್ಥಿಗಳಾದ ಸೊರಬದ ಕು.ಲಕ್ಷ್ಮೀಶ ಹಾಗೂ ಕು.ರಿತಿಕಾ.H.R.ಶಿಬಿರದಿಂದ ತಾವು ಕಲಿತ ವಿಷಯಗಳಲ್ಲಿ ಪ್ರಥಮ ಚಿಕಿತ್ಸಾ ವಿಧಾನವು ತಮ್ಮದೈನಂದಿನ ಜೀವನದಲ್ಲಿ ಅನ್ವಯವಾಗಿರುವುದನ್ನು ಇಲ್ಲಿ ಸ್ಮರಿಸಿ ಹೆಮ್ಮೆ ಪಟ್ಟರು, ತಮ್ಮ ಜಿಲ್ಲೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವಂತೆ ಶ್ರಮ ಪಡುವುದಾಗಿ ಅಭಿಪ್ರಾಯ ಪಟ್ಟರು.
ಅಧ್ಯಕ್ಷೀಯ ನುಡಿಯಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತರಾದ ಶ್ರೀ ಬಿಂದುಕುಮಾರ್. ಅವರು ಶಿಬಿರಾರ್ತಿಗಳಿಗೆ ತಾವು ಸಮ್ಮ ಸ್ನೇಹಿತರನ್ನು ಮನವೊಲಿಸಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ವಿಸ್ತರಿಸಿ ಬಲಪಡಿಸುವಂತೆ ಕರೆಕೊಟ್ಟರು,ಹಾಗೂ ಉನ್ನತ ಶಿಕ್ಷಣದಲ್ಲಿ ಸ್ಕೌಟ್ ಮತ್ತು ಗೈಡ್ ಕೋಟಾದಡಿಯಲ್ಲಿ ಮೀಸಲಾತಿಯನ್ನು ದೊರಕಿಸುವ ಪ್ರಯತ್ನ ರಾಜ್ಯ ಸಂಸ್ಥೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.
Bharat Scouts and Guides ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾರ್ಯದರ್ಶಿಯವರಾದ ಶ್ರೀ.ಹೆಚ್.ಪರಮೇಶ್ವರ್ ಅವರು ಸ್ವಾಗತಿಸಿದರು, ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಮತಿ. ಲಕ್ಷ್ಮೀ ಕೆ ರವಿ ಅವರು ವಂದಿಸಿದರು, ಶಿಬಿರದ ತರಬೇತಿ ತಂಡದ ರೋವರ್ ವಿಭಾಗದ ನಾಯಕರಾದ ಶ್ರೀ ರಾಜೇಶ್ ಅವಲಕ್ಕಿ ಅವರು ನಿರೂಪಣೆ ಮಾಡಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಖಜಾಂಚಿ ಶ್ರೀ.ಚೂಡಾಮಣಿಪವಾರ್ ,ಜಿಲ್ಲಾ ಸ್ಥಾನಿಕ ಕಮಿಷನರ್ ಶ್ರೀ.ಕೆ.ರವಿ ,ಶ್ರೀ. ವಿಜಯಕುಮಾರ್ PRO,ಸಹಕಾರ್ಯದರ್ಶಿ ಶ್ರೀ.ವೀರೇಶಪ್ಪ.Y.R. ತರಬೇತಿತಂಡದ ನಾಯಕರುಗಳಾದ ಶಿವಶಂಕರ.ಹೆಚ್, ಚಂದ್ರಶೇಖರಯ್ಯ, ಶ್ರೀ. ಮಲ್ಲಿಕಾರ್ಜುನ ಕಾಣೂರ್ ಶ್ರೀ. ಪ್ರಮೇಶ್ವರಯ್ಯ, ತರಬೇತಿತಂಡದ ನಾಯಕಿರರಾದ ಶ್ರೀಮತಿ.ಶಾಂತಮ್ಮ. ಶ್ರೀಮತಿ, ಗೀತಾಚಿಕ್ಮಠ್. ವಿವಿಧ ತಾಲ್ಲೂಕಿನ ದಳನಾಯಕ/ನಾಯಕಿಯರು ಸಹನಾಯಕರುಗಳು ಉಪಸ್ಥಿತರಿದ್ದರು.
Government Urdu School Shivamogga ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ನಗರದ ಪ್ರತಿಭೆಗಳಿಗೆ ಪುರಸ್ಕಾರ
Government Urdu School Shivamogga ರಾಷ್ಟ್ರಮಟ್ಟದ ಜಿಜ್ಞಾಸಾ ಸೈನ್ಸ್ ಮಾಡೆಲ್ ಮೇಕಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಶಾಂತಿನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ ಅಂಬೆರ್ ಮತ್ತು ಹನೀಫಾ ಬೀ ಯವರು ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ಗಳಿಸಿದರು.
Government Urdu School Shivamogga ಈ ಬಹುಮಾನಗಳನ್ನು ಶಿವಮೊಗ್ಗ ಬಿಇಓ ನಾಗರಾಜ್ ರವರು ವಿತರಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆ ಆಯೋಜಿಸಿದ್ದ ಆಯನೂರಿನ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ನ ಪ್ರಮುಖರಾದ ಶಿವರಾಜ್, ನಯ್ಮಾ ಹಾಗೂ ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಕರೀಂ ಖಾನ್ ಉಪಸ್ಥಿತರಿದ್ದರು.
