Thursday, April 9, 2026
Thursday, April 9, 2026
Home Blog Page 653

K. J. George ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಶಾಸಕರ ಆಸನಗಳ ವ್ಯವಸ್ಥೆ ಬಗ್ಗೆ “ಗರಂ”ವಾಗ್ಯುದ್ಧ

0

K. J. George ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ‌ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಖುರ್ಚಿ ಗಲಾಟೆ ನಡೆಯಿತು.

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸಮಾಧಾನ ಮಾಡಲು ಹೈರಾಣಾದರು.
ಉಸ್ತುವಾರಿ ಸಚಿವರು ಸಭೆಯಲ್ಲಿ ಆಸೀನರಾಗುತ್ತಿದ್ದಂತೆ ಶಾಸಕರು ವೇದಿಕೆ ಖುರ್ಚಿಯಲ್ಲಿ ಆಸೀನರಾದರು. ಈ ವೇಳೆ ಸಿ.ಟಿ.ರವಿ, ಹಾಗೂ ಭೋಜೇಗೌಡ ಈ ಹಿಂದಿನ ಎಲ್ಲಾ ಸಭೆಗಳಲ್ಲಿ ಶಾಸಕರು ಕೆಳಗಿನ ಆಸನಗಳಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ ಎಂದರು.

ಈ ವೇಳೆ ಕಡೂರು ಶಾಸಕ ಕೆ.ಎಸ್. ಆನಂದ್ ಶಾಸಕರ ಘನತೆ ಎತ್ತಿ ಹಿಡಿಯುವ ಉದ್ದೇಶದಿಂದ ಮೇಲೆ ಕುಳಿತುಕೊಳ್ಳಬೇಕು. ವಿಧಾನ ಪರಿಷತ್ ಸದಸ್ಯರ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲ ಎನ್ನುತ್ತಿದ್ದಂತೆ ಸಿ.ಟಿ.ರವಿ ಮತ್ತು ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ವೇದಿಕೆ ಮೇಲೆ ಕೂರಬೇಕೆ ಅಥವಾ ಕೆಳಗೆ ಕೂರಬೇಕೆ ಎನ್ನುವ ವಿಚಾರ ಸಭೆಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದಿದೆ ಎಂದು ಸಿಇಓ ಸಭೆಗೆ ತಿಳಿಸಿದರು.

K. J. George ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಈ ಗೊಂದಲಕ್ಕೆ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸಲಾಗು ವುದು ಎಂದರು. ಈ ಸಿ.ಟಿ.ರವಿ ಮತ್ತು ಭೋಜೇಗೌಡ ವೇದಿಕೆ ಕೆಳಗಿನ ಖುರ್ಚಿಯಲ್ಲಿ ಕುಳಿತರು. ಗೊಂದಲದ ಸ್ಪಷ್ಟತೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸೋಣ ಈಗ ವೇದಿಕೆಗೆ ಬನ್ನಿ ಎಂದು ಜಾರ್ಜ್ ಮತ್ತೇ ಮನವಿ ಮಾಡಿದರು.

ಇದಕ್ಕೆ ಸಿ.ಟಿ.ರವಿ ಮತ್ತು ಭೋಜೇಗೌಡ ಕೆಳಗಿನ ಆಸನದಲ್ಲೆ ಕುಳಿತು ಸಭೆಯಲ್ಲಿ ಪಾಲ್ಗೊಂಡರು.

Shivamogga Police ಸಾರ್ವಜನಿಕ ಸ್ಥಳಗಳಲ್ಲಿ ಲಾಂಗ್ & ಚಾಕು ಝಳಪಿಸಿದ ಐವರ ವಿರುದ್ಧ ಪೊಲೀಸರ ಕ್ರಮ

0

Shivamogga Police ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಭಯವನ್ನು ಉಂಟುಮಾಡುವಂತೆ ಲಾಂಗ್ ಮತ್ತು ಚಾಕುಗಳನ್ನು ಹಿಡಿದುಕೊಂಡು ಪ್ರದರ್ಶಸಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಐವರು ಯುವಕರ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದರ್ಶನ್ ತಂದೆ ಚಂದ್ರಾನಾಯ್ಕ, ರಾಕೇಶ ತಂದೆ ಲೋಕೇಶ್ ನಾಯ್ಕ, ರಾಹುಲ್ ತಂದೆ ರಮೇಶ್ ನಾಯ್ಕ, ಸತೀಶ ತಂದೆ ಲಾಲಾ ನಾಯ್ಕ, ಚೇತನ್ ನಾಯ್ಕ ತಂದೆ ಜಯ ನಾಯ್ಕ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲರೂ ಗಾಡಿಕೊಪ್ಪ ತಾಂಡ ವಾಸಿಗಳಾಗಿದ್ದು, ಈ ಐವರ ವಿರುದ್ಧ ಸು-ಮೋಟೋ ದೂರು ದಾಖಲಿಸಲಾಗಿದೆ.
ಇವರು ಮಾಡಿದ ವಿಡಿಯೋದಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಇದೆ.

ಐವರು ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದು ಅದರಲ್ಲಿ ಒಬ್ಬ ಹುಡುಗ ಸುಮಾರು 2 ಅಡಿ ಉದ್ದದ ಲಾಂಗ್ ಹಿಡಿದುಕೊಂಡಿದ್ದು ಇನ್ನೂ ಮೂರು ಜನ ಹುಡುಗರ ಕೈ ಗಳಲ್ಲಿ ಚಾಕುಗಳನ್ನು ಹಿಡಿದುಕೊಂಡಿದ್ದು ಮತ್ತೊಬ್ಬ ಹುಡುಗ ವಿಡಿಯೋದಲ್ಲಿ ಸ್ವಲ್ಪ ಮರೆಯಾಗಿ ಹಿಂದೆ ನಿಂತಿದ್ದಾನೆ.

Shivamogga Police ಪೊಲೀಸರನ್ನು ಬಯ್ಯುವ ಆಡಿಯೋ ಈ ವೇಳೆ ಪ್ಲೇ ಮಾಡಲಾಗಿದೆ.
ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದರ ಅನ್ವಯ ಇವರ ವಿರುದ್ದ ಕ್ರಮ ಜರುಗಿಸಲಾಗಿದೆ.

Municipal corporation ಜೆ.ಎಚ್.ಪಟೇಲ್ & ಸಹಕಾರಿ ಬಡಾವಣೆಗಳಲ್ಲಿನ ರಸ್ತೆ ದುರಸ್ಥಿಗೆ ಮನವಿ

0

Municipal corporation ಶಿವಮೊಗ್ಗ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಜೆ.ಹೆಚ್. ಬಡಾವಣೆ (೧ನೇ ವಾರ್ಡ್) ಯ ರವಿಶಂಕ ವಿದ್ಯಾ ಸಂಸ್ಥೆ ಮತ್ತು ಇಲ್ಲಿನ ಬಸ್ ಸ್ಟ್ಯಾಂಡ್ ಸುತ್ತ ಮುತ್ತ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಹಾ ನಗರ ಪಾಲಿಕೆ ಮತ್ತು ಸಂಬಂಧಪಟ್ಟ ಇಲಾಖೆಯವರು ಕೂಡಲೆ ರಸ್ತೆ ದುರಸ್ಥಿ ಮಾಡಿಸುವಂತೆ ಜೆ.ಹೆಚ್. ಪಟೇಲ್ ಬಡಾವಣೆಯ ಹಾಗೂ ಸಹಕಾರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದ್ದಾರೆ.

ಈ ಭಾಗದಲ್ಲಿ ಶಾಲಾ ವಾಹನಗಳು, ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು, ಕೂಲಿ ಕಾರ್ಮಿಕರು ಜೊತೆಗೆ ಶಾಲಾ ಮಕ್ಕಳು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಇಲ್ಲಿ ದೇವಸ್ಥಾನಗಳೂ ಕುಡ ಇವೆ. ಕಳೆದ ಬಾರಿಯ ಮಳೆಗಾಲದಲ್ಲಿ ಇಲ್ಲಿ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿ ಓಡಾಡುವುದೇ ದುಸ್ಥಿತಿಯಾಗಿತ್ತು.

Municipal corporation ಆಗ ರಸ್ತೆಗಳನ್ನು ಸರಿಪಡಿಸುವಂತೆ ಸ್ಥಳೀಯ ಪಾಲಿಕೆ ಸದಸ್ಯರಿಗೆ ತಿಳಿಸಲಾಗಿತ್ತಾದರೂ ಏನೂ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಸುರಿದ ಮಳಿಗೆ ರಸ್ತೆಯಲ್ಲಿ ಗುಂಡಿಗಳು ಇನ್ನೂ ಹೆಚ್ಚಾಗಿ ಓಡಾಡುವುದೇ ಕಷ್ಟವಾಗಿದೆ. ಇದ ರಿಂದಾಗಿ ಬೈಕ್ ಸವಾರರು ಹಲವಾರು ಭಾರಿ ಬಿದ್ದಿರುವ ಉದಾಹರಣೆಗಳಿವೆ.

ಕೂಡಲೇ ಮಹಾನಗರ ಪಾಲಿಕೆ ಸದಸ್ಯರು, ಸಂಬಂಧಪಟ್ಟ ಇಲಾಖೆ ಯವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ಥಿ ಮಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಸಾರ್ವಜನಿ ಕರು ಸುರಕ್ಷಿತವಾಗಿ ಓಡಾಡಲು ಅನುವು ಮಾಡಿಕೊಡಬೇಕೆಂದು ಈ ಭಾಗದ ಜನರು ಮನವಿ ಮಾಡಿದ್ದಾರೆ.

Police Department ಕಾನೂನು ಬಾಹಿರ ವ್ಯವಹಾರಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು- ಸಚಿವ ಮಧು ಬಂಗಾರಪ್ಪ

0

Police Department ಶಿವಮೊಗ್ಗ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ರೂ.80 ಕೋಟಿ ವೆಚ್ಚದಲ್ಲಿ ಗುಣಮಟ್ಟದಿಂದ ಕೂಡಿದ ಸುಸಜ್ಜಿತ ವಸತಿಗೃಹಗಳನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.
ಸೊರಬದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ವಸತಿಗೃಹ ಸಮುಚ್ಚಯ ಉದ್ಘಾಟಿಸಿ ಮಾತನಾಡಿದರು.
ಗೃಹ ಸಚಿವರೇ ಇಂದು ವಸತಿಗೃಹ ಸಮುಚ್ಚಯವನ್ನು ಉದ್ಘಾಟಿಸಬೇಕತ್ತು. ಕಾರಣಾಂತರದಿಂದ ಬರಲಯ ಆಗಲಿಲ್ಲ. ಸೊರಬಕ್ಕೆ ರೂ.೮ ಕೋಟಿ ಸೇರಿದಂತೆ ಜಿಲ್ಲೆಯ ಲ್ಲಿ ರೂ. ೮೦ ಕೋಟಿ ವೆಚ್ಚದ ವಸತಿಗೃಹ ಲೋಕಾರ್ಪಣೆ ಆಗುತ್ತಿರುವುದು ಸಂತೋಷದ ವಿಷಯ. ವಸತಿಗೃಹಗಳು ಗುಣಮಟ್ಟ ದಿಂದ, ಆಶುನಿಕತೆಯಿಂದ ಕೂಡಿದ್ದು ನಿವಾಸಿಗಳು ಚೆನ್ನಾಗಿ ನೋಡಿಕೊಳ್ಳಬೇಕಯ ಎಂದರು. ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಇತರೆ ಕಾನೂನು ಬಾಹಿರ ವ್ಯವಹಾರಕ್ಕೆ ಪೋಲೀಸ್ ಇಲಾಖೆ ಕಡಿವಾಣ ಹಾಕಬೇಕು. ಹಾಗೂ ಸಾರ್ವಜನಿಕರು‌ ಕೂಡ ಗಾಂಜಾ ಬೆಳೆಸಬೇಡಿ ಎಂದು ಮನವಿ‌ ಮಾಡಿದರು.
ವರದ ನದಿ‌ಗೆ ೫ ಬ್ಯಾರೇಜ್ ನಿರ್ಮಾಣಕ್ಕೆಮಂಜೂರಾತಿ ದೊರೆತಿದೆ. ರೂ. ೫೦ ಕೋಟಿ ವೆಚ್ಚದಲ್ಲಿ ಕೆಲಸ ಆರಂಭಿಸಲಾಗುವುದು.
ಶರಾವತಿ ನದಿಯಿಂದ ಸೊರಬ, ಆನವಟ್ಟಿ ಶಿರಾಳಕೊಪ್ಪ ಹಾಗೂ 356 ಹಳ್ಳಿಗಳಿಗೆ
ರೂ.೫೮೬ ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ನೀಡುವ ಯೋಜನೆಗೆ ಮಂಜೂರಾತಿ‌ ದೊರೆತಿದೆ. ಜಿಲ್ಲೆಯಲ್ಲಿ‌ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ಕುಡಿಯುವ ನೀರು ನೀಡಲಾಗುವುದು. ಸೊರಬ ತಾಲ್ಲೂಕಿಲ್ಲಿ ೧೩೮೩ ಕೆರೆ ಇದ್ದರೂ ರಬೇಸಿಗೆಯಲ್ಲಿ ನೀರಿಗೆ ತುಂಬಾ ಕಷ್ಟ ಆಗುತ್ತದೆ ಆದ್ದರಿಂದ ಮುಳಗಡೆ ಇಲ್ಲದೆ ದಂಡಾವತಿ ಯೋಜನೆಯಿಂದ ೭೦-೮೦ ಕೆರೆ ತುಂಬಿಸುವ ಯೋಜನೆ ಮೂರು ನಾಲ್ಕು ತಿಂಗಳಲ್ಲಿ ಜಾರಿಗೆ ತರಲಾಗುವುದು.
ದರಕಾಸ್ತು ಭೂಮಿ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಮಿತಿ ರಚನೆ ಮಾಡಲಾಗುವುದು. ಅರಣ್ಯ ಭೂಮಿಯಲ್ಲಿ ಸಾಗುಔಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಹೊಸದಾಗಿ ಸಾಗುವಳಿ ಮಾಡಬಾರದು ಎಂದರು.
Police Department ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು.
ಮುಂದಿನ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಕೋಚಿಂಗ್ ನೀಡಲಾಗುವುದು. ಹಾಗೂ ವಾರದ6 ದಿನ ೧೦ ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ಎಂದರು ನೀಡಲಾಗುವುದು
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಸ್ವಾಗತಿಸಿದರು. ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಪ್ರಾಸ್ತಾವಿಕ ವಾಗಿ ಮಾತನಾಡಿ, ನಾಲ್ಕು ತಾಲೂಕುಗಳಲ್ಲಿ ಒಟ್ಟು ೧೩೨ ಗುಣಮಟ್ಟದ ವಸತಿ‌ಗೃಹ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1.10 ಕೋಟಿ ಪೋಲಿಸರಿದ್ದು,
೨೪ ಗಂಟೆ ಕೆಲಸ ಮಾಡುವ ಇವರಿಗೆ ಅನುಕೂವಾಗಲೆಂದು ವಸತಿಗೃಹ‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ೧೦ ಸಾವಿರ ಗೃಹ ನಿರ್ಮಾಣಕ್ಕೆ ಮಂಜೂರು ದೊರೆತಿದ್ದು ಕಾಮಗಾರಿ‌ ಶುರು‌ ಆಗಿದೆ ಎಂದರು.
ಪುರಸಭೆ ಚುನಾಯಿತ ಸದಸ್ಯರು,
ಪೂರ್ವ ವಲಯದ ಉಪ ಪೋಲೀಸ್ ಮಹಾನಿರೀಕ್ಷಕರಾದ ಬಿ.ರಮೇಶ್, ಮುಖ್ಯ ಅಭಿಯಂತರ ಬಿ.ಹೆಚ್ ಮಂಜುನಾಥ್, ಇತರರು ಹಾಜರಿದ್ದರು

Department of Law ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನ

0

Department of Law ಶಿವಮೊಗ್ಗ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲು ಅರ್ಹ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಕರ್ನಾಟಕ ಕಾನೂನು ಅಧಿಕಾರಿಗಳ(ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977 ರ ನಿಯಮ 5 ಮತ್ತು 26(2) ಹಾಗೂ 12(ಎ)(ಬಿ) ಮತ್ತು (ಸಿ) ರನ್ವಯ ಅರ್ಜಿ ಆಹ್ವಾನಿಸಲಾಗಿದೆ.
Department of Law ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಆಯ್ಕೆ ಬಯಸುವವರು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರಬೇಕು. ಆಯ್ಕೆ ಬಯಸುವ ಅರ್ಹ ನ್ಯಾಯವಾದಿಗಳು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಿ ದಿ: 23-07-2024 ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-221100, 08182-221010, 9110642146 ನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

Rotary Club Shivamogga ರೋಟರಿ ಕ್ಲಬ್ ಮೂಲಕ “ನವ್ಯ ಸಂಕಲ್ಪ”ಯುಟ್ಯೂಬ್ ಗೆ ಚಾಲನೆ

0

Rotary Club Shivamogga ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ವ್ಯಸನವನ್ನು ತಡೆಗಟ್ಟಲು ರೋಟರಿ ಕ್ಲಬ್ ರೂಪಿಸಿರುವ ಹೊಸ ಯೋಜನೆ ಸಹಾಕಾರಿಯಾಗುತ್ತದೆ ಎಂದು ರೊ. ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶುಕ್ರವಾರ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ಕಾರ್ಯಕ್ರಮದ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿದ್ದ ಅವರು, ಮಾದಕ ವ್ಯಸನ ತಡೆ ಜಾಗೃತಿಗಾಗಿ ಕ್ಲಬ್ ನ ಹೊಸ ಯುಟ್ಯೂಬ್ ಚಾನೆಲ್ ‘ನವ್ಯ ಸಂಕಲ್ಪ’ ಕ್ಕೆ ಚಾಲನೆ ನೀಡಿ, ಈ ನಿಟ್ಟಿನಲ್ಲಿ ಕ್ಲಬ್ ರೂಪಿಸಿರುವ ಹೊಸ ಯೋಜನೆಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಕ್ಲಬ್ ನ 2023-24 ನೇ ಸಾಲಿನ ಅಧ್ಯಕ್ಷರಾದ ರೊ.ಸಿ.ರಾಜು ಅವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ವರ್ಗಾವಣೆ ಮಾಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷ ರೊ.ಮುಸ್ತಾಕ್ ಅಲಿಶಾ.ಟಿ.ಎಂ ಮಾತನಾಡಿ, ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ರೂಪಿಸಿರುವ ಹೊಸ ಯೋಜನೆಯು ಬಹಳ ಉಪಯುಕ್ತವಾಗಿದೆ. ಇತರೆ ಕ್ಲಬ್ ಗಳು ಹಾಗೂ ಸಾರ್ವಜನಿಕರೂ ಸಹ ರೋಟರಿ ಕ್ಲಬ್ ನೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.

Rotary Club Shivamogga ಸಮಾರಂಭದಲ್ಲಿ ಉಪಸ್ಥಿತರಿದ್ದ ವಲಯ 10 ರ ಸಹಾಯಕ ಗವರ್ನರ್ ರೊ.ನಾಗರಾಜ್.ಎಸ್.ಆರ್ ರೋಟರಿಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿ, ಇವುಗಳನ್ನು ಸಮುದಾಯಗಳಿಗೆ ತಲುಪಿಸುವಲ್ಲಿ ಕ್ಲಬ್ ಗಳ ಪಾತ್ರದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಪ್ರಕಾಶ್ ಮೂರ್ತಿ, 2023-24 ನೇ ಸಾಲಿನಲ್ಲಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಪಕ್ಷಿನೋಟ ಪ್ರಸ್ತುತ ಪಡಿಸಿದರು.

ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ರೊ.ಶ್ರೀಕಾಂತ್.ಎ.ವಿ, 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲ್ಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ವಲಯ ಸೇನಾನಿ ರೊ.ಮಂಜುಳಾ ರಾಜು ಕ್ಲಬ್ ನ ಮೊದಲ ಅಧ್ಯಕ್ಷರಾಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಪರಿನೀಟ್ ಅಕಾಡೆಮಿ, ಶಿವಮೊಗ್ಗದ ಸಹಯೋಗ ಹಾಗೂ ರೊ. ಆನಂದ ಮೂರ್ತಿ, ರೊ. ಹೆಚ್.ಎಲ್.ರವಿ ಹಾಗೂ ರೊ. ಮಂಜುಳಾ ಸಿ.ರಾಜು ರವರ ಸಹಕಾರದೊಂದಿಗೆ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಆಯ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷಾ ತಯಾರಿ ಪುಸ್ತಕಗಳನ್ನು ವಿತರಿಸಲಾಯಿತು.

ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಐದು ಜನ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ ಹಾಗೂ ಧನಸಹಾಯವನ್ನು ಸಹ ನೀಡಲಾಯಿತು.

ರೋಟರಿಯ ಹೊಸ ಯೋಜನೆಗೆ ಇತರ ಸಂಘ ಸಂಸ್ಥೆಗಳ ಪ್ರಮುಖರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ಕ್ಷೇತ್ರದ ಹಲವರು ಆಗಮಿಸಿ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಮಂಡಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಇತರ ಕ್ಲಬ್ ಗಳ ರೊಟೇರಿಯನ್ಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

MESCOM ಶಿವಮೊಗ್ಗ ಮೆಸ್ಕಾಂ ಕಚೇರಿಯಲ್ಲಿ ಜುಲೈ 16 ರಂದು ಜನ ಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಯಕ ಇಂಜಿನಿಯರ್ ಕಚೇರಿ, ಬಾಲರಾಜ್ ಅರಸ್‍ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಮೆಸ್ಕಾಂ ಕಚೇರಿಯಲ್ಲಿ ದಿ: 15.07.2024ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದೆ.
ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Puttahalli Hitturu ಹಿಟ್ಟೂರಿನಲ್ಲಿ ಪ್ರವೇಶಾತಿ ಕ್ಷೀಣಿಸಿದ ಶಾಲೆಗೆ ಮತ್ತೆ ಕಾಯಕಲ್ಪ ನೀಡಿದ ಶಾಲಾ ಉಸ್ತುವಾರಿ ಸಮಿತಿ

0

Puttahalli Hitturu ಶಿವಮೊಗ್ಗ ತಾಲೂಕಿನ ಪುಟ್ಟಹಳ್ಳಿ ಹಿಟ್ಟೂರು ಗ್ರಾಮದಲ್ಲಿ 1 ರಿಂದ 7ನೇ ತರಗತಿಯವರೆಗೆ ಯಶಸ್ವಿಯಾಗಿ ಶಾಲೆ ನಡೆಯುತ್ತಿತ್ತು. ಆದರೆ ಇತ್ತೀಚಿನ ಖಾಸಗಿ ಶಾಲೆಗಳ ಹಾವಳಿಯಿಂದ ಗ್ರಾಮದ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಸೇರಿಸಲು ಮುಂದಾದರು.

ಇದರಿಂದ ಶಾಲೆಯ ದಾಖಲಾತಿ ಕೇವಲ 12ಕ್ಕೆ ಇಳಿಯಿತು. ಕಾರಣ ಸದರಿ ಶಾಲೆಯನ್ನು ಪಕ್ಕದ ಗ್ರಾಮದ ಶಾಲೆಯಲ್ಲಿ ವಿಲೀನಗೊಳಿಸಲು ತೀರ್ಮಾನಿಸಿ ಕ್ರಮ ಆರಂಭವಾಗಿತ್ತು.

ಗ್ರಾಮದಲ್ಲಿ ಶಾಲೆ ಇಲ್ಲದಂತಾದ ಸಂದರ್ಭದಲ್ಲಿ ಶಾಲೆಯ ಉಸ್ತುವಾರಿ ಸಮಿತಿ ಗ್ರಾಮದ ಪೋಷಕರ ಮನವೊಲಿಸಿ ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಮರಳಿ ನಮ್ಮೂರ ಶಾಲೆಗೆ ಸೇರಿಸಲು ಯಶಸ್ವಿಯಾಗಿದ್ದಾರೆ.

ಪೋಷಕರ ಮನವೊಲಿಸಿ ಶಾಲೆಯನ್ನು ಉಳಿಸಿಕೊಳ್ಳವಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು
ಹರಸಾಹಸವನ್ನೆ ಪಟ್ಟಿದ್ದಾರೆ.
ಒಂದು ಮಗುವಿಗೆ 40 ಸಾವಿರ ಖರ್ಚು ಮಾಡುತ್ತಿದ್ದ ಪೋಷಕರೆಲ್ಲ ಸೇರಿ ಶಾಲೆಗೆ ಒಬ್ಬ ಸ್ಪೋಕನ್ ಇಂಗ್ಲೀಷ್ ಟೀಚರ್‌ನ್ನು ನೇಮಿಸಿಕೊಂಡಿದ್ದಾರೆ.

Puttahalli Hitturu ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಹ ಇನ್ನೊಬ್ಬ ಶಿಕ್ಷಕರನ್ನು ನಿಯೋಜಿಸಿದ್ದಾರೆ. ಈಗ ಒಟ್ಟು ೪ ಜನ ಶಿಕ್ಷಕರು ೨೫ ಮಕ್ಕಳಿಗೆ ಇಂಗ್ಲೀಷ್ ಕಲಿಕೆಯೊಂದಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ. ಮತ್ತು ಉಚಿತ ಸಮವಸ್ತ್ರ, ಊಟ ಸೌಲಭ್ಯದೊಂದಿಗೆ ಮಕ್ಕಳ ಶಿಕ್ಷಣ ಉತ್ತಮವಾಗಿ ಸಾಗುತ್ತಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ ಶಾಲಾ ಉಸ್ತುವಾರಿ ಸಮಿತಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Shivamogga-Bangalore Train ಜುಲೈ 18 & 25 ರಂದು ಶಿವಮೊಗ್ಗ- ಬೆಂಗಳೂರು ರೈಲು ಸಂಚಾರ ರದ್ದು & ಇತರೆ ಮಾಹಿತಿ

0

Shivamogga-Bangalore Train ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಲ್ಲಿರುವ ರಸ್ತೆ ಕ್ರಾಸಿಂಗ್ 62 ರಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ರೈಲುಗಳ ಸಂಚಾರ ರದ್ದು
ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳನ್ನು ಜುಲೈ 18 & 25 ರಂದು ರದ್ದು ಪಡಿಸಲಾಗುತ್ತಿದೆ.

ಭಾಗಶಃ ರದ್ದು:
ಜುಲೈ 18 ಮತ್ತು 25 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ನಿಲ್ದಾಣಗಳ ನಡುವೆ ಸಂಚರಿಸುವ (06571/06572) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ತಾಳಗುಪ್ಪ-ಕೆಎಸ್ಆರ್ ಬೆಂಗಳೂರು (20652) ರೈಲು, ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು (12725/12726) ರೈಲುಗಳನ್ನು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗಿದೆ.

ಮಾರ್ಗ ಬದಲಾವಣೆ:
ಜುಲೈ 17 & 24 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ18 & 25 ರಂದು ಹೊರಡುವ ಮೈಸೂರು-ವಾರಣಾಸಿ (22687) & ಯಶವಂತಪುರ-ಜೈಪುರ (82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಮೈಸೂರು-ಬೆಳಗಾವಿ (17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮೈಸೂರು-ಉದಯಪುರ ಸಿಟಿ (19668) ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.

Shivamogga-Bangalore Train ರೈಲುಗಳ ನಿಯಂತ್ರಣ:
ಜುಲೈ 16 & 23 ರಂದು ಬಿಕಾನೇರ್ ನಿಲ್ದಾಣದಿಂದ ಹೊರಡುವ ಬಿಕಾನೇರ್-ಯಶವಂತಪುರ (16588) ರೈಲನ್ನು ಮಾರ್ಗದಲ್ಲಿ 150 ನಿಮಿಷ, ಜುಲೈ 18 & 25 ರಂದು ಯಶವಂತಪುರ-ಹಜರತ್ ನಿಜಾಮುದ್ದೀನ್ (12629) ರೈಲು 50 ನಿಮಿಷ, ಕೆಎಸ್ಆರ್ ಬೆಂಗಳೂರು-ತಾಳಗುಪ್ಪ (20651) ರೈಲು 10 ನಿಮಿಷ, ಬೆಳಗಾವಿ-ಮೈಸೂರು (17325) ರೈಲು 55 ನಿಮಿಷ, ಚಾಮರಾಜನಗರ-ತುಮಕೂರು (07345) ರೈಲನ್ನು 120 ನಿಮಿಷ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತದೆ
ಸಮಯ ಮರುನಿಗದಿ:
ಜುಲೈ 18 & 25 ರಂದು ಯಶವಂತಪುರ-ವಾಸ್ಕೋಡಗಾಮಾ (17309) ರೈಲು ಯಶವಂತಪುರದಿಂದ 60 ನಿಮಿಷ, ಜುಲೈ 24 ರಂದು ತುಮಕೂರು-ಶಿವಮೊಗ್ಗ ಟೌನ್ (06513) ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

Chamber Of Commerce Shivamogga ಅಡ್ವಾನ್ಸ್ ಸ್ಕಿಲ್ ಅಕಾಡೆಮಿ ಕೇಂದ್ರದ ಪ್ರಾರಂಭೋತ್ಸವ

0

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘದ ವತಿಯಿಂದ ಬಹು ದಿನಗಳ ಕನಸು ಮತ್ತು ಸಂಘದ ಅಲ್ಲದೆ ವಿದ್ಯಾಭ್ಯಾಸವನ್ನು ಬಿಟ್ಟ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಲು ಸಾದ್ಯವಾಗುವುದಲ್ಲದೆ ಇದರಿಂದ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಬರುವುದರೊಂದಿಗೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಅಕಾಡೆಮಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸುತ್ತಾ ಸಂಘದ ಸದಸ್ಯರುಗಳು, ನಗರದ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿ ವತಿಯಿಂದ ಈ ಮೂಲಕ ಕೋರಲಾಗಿದೆ.

ಮಾಜಿ ಅಧ್ಯಕ್ಷರುಗಳ ಆಶಯದಂತೆ ವಜ್ರ ಮಹೋತ್ಸವ ಆಚರಿಸುತ್ತಿರುವ ಈ ವರ್ಷ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಸಂಘದ ಕಟ್ಟಡದಲ್ಲಿ ಪ್ರಾರಂಭಿಸಲು ಒಂದು ವರ್ಷದ ಪ್ರಯತ್ನದ ಫಲವಾಗಿ ಶಿವಮೊಗ್ಗ ಜಿಲ್ಲೆಯ ವಿದ್ಯಾವಂತ ನಿದುದ್ಯೋಗಿಗಳಿಗೆ ಕೌಶಲ್ಯ ನೀಡುವ ಮತ್ತು ಶಿವಮೊಗ್ಗ ಜಿಲ್ಲೆಯ ಕೈಗಾರಿಕೋಧ್ಯಮಿಗಳಿಗೆ ಮತ್ತು ವಾಣಿಜ್ಯೋಧ್ಯಮಿಗಳಿಗೆ ಪೂರಕವಾದ ಕೌಶಲ್ಯಯುಕ್ತ ಉದ್ಯೋಗಿಗಳನ್ನು ಒದಗಿಸುವ ನೆಲೆಯಲ್ಲಿ ದಿನಾಂಕ: ೧೪.೦೭.೨೦೨೪ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಕೇಂದ್ರದ ಪ್ರಾರಂಭೋತ್ಸವವನ್ನು ನೆರವೇರಿಸಲಾಗುತ್ತಿದೆ.

ತರಬೇತಿ ಕೇಂದ್ರದ ಮುಖ್ಯ ಉದ್ದೇಶ ಪ್ರಚಲಿತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯದ ಕೊರತೆ ಎದ್ದು ಕಾಣುತ್ತದೆ ಶಿವಮೊಗ್ಗ ನಗರದಲ್ಲಿ ಉನ್ನತ ಮಟ್ಟದ ಕೌಶಲ್ಯ ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು, ಶಿವಮೊಗ್ಗ ಜಿಲ್ಲೆಯ ಯುವ ವಿದ್ಯಾವಂತ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ತರಬೇತಿ ಕೊಟ್ಟು ೨-೩ ವರ್ಷಗಳಲ್ಲಿ ಉದ್ಯೋಗದ ಭರವಸೆ ನೀಡುವಂತದ್ದಾಗಿದೆ ಹಾಗೂ ಕೌಶಲ್ಯ ಯುಕ್ತ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ದೊರೆತಾಗ ಶಿವಮೊಗ್ಗ ನಗರಕ್ಕೆ ಹೊಸ ಹೊಸ ಸ್ಟಾರ್ಟ ಆಪ್ ಕಂಪೆನಿಗಳು ಬರಲು ಅವಕಾಶವಾಗುತ್ತದೆ. ಈ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರ ಬೆಳೆಯಲು ಸಾದ್ಯವಾಗುತ್ತದೆ ಹಾಗೂ ಬೇಕಾದ ಕೆಲಸಕ್ಕೆ ಬೇಕಾದಂತಹ ಕೆಲಸಗಾರರು ಸಿಗುವಂತಹ ಕೆಲಸಗಾರರ ಸಮೂಹವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಜೊತೆಗೆ ಜಿಲ್ಲೆಯಲ್ಲಿರುವ ಪ್ರತಿಭಾವಂತ ಕೆಲಸಗಾರರನ್ನು ಶಿವಮೊಗ್ಗದಲ್ಲಿ ಉಳಿಸಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಬೇಕು ಕೌಶಲ್ಯ ತರಬೇತಿಗಾಗಿ ಹಲವು ಕಂಪೆನಿಗ ಮತ್ತು ನಗರದ ಅನೇಕ ವಿದ್ಯಾಸಂಸ್ಥೆಗಳೊAದಿಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ.

Chamber Of Commerce Shivamogga ಅಲ್ಲದೆ ವಿದ್ಯಾಭ್ಯಾಸವನ್ನು ಬಿಟ್ಟ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಲು ಸಾದ್ಯವಾಗುವುದಲ್ಲದೆ ಇದರಿಂದ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಬರುವುದರೊಂದಿಗೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಅಕಾಡೆಮಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸುತ್ತಾ ಸಂಘದ ಸದಸ್ಯರುಗಳು, ನಗರದ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿ ವತಿಯಿಂದ ಈ ಮೂಲಕ ಕೋರಲಾಗಿದೆ.

ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರು, ಮಾನ್ಯ ಶಾಲಾ ಶಿಕ್ಷಣ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿರುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಬಿ.ವೈ ರಾಘವೇಂದ್ರರವರು, ಮಾನ್ಯ ಸಂಸದರು, ಶಿವಮೊಗ್ಗ ಲೋಕಸಭಾಕ್ಷೇತ್ರ ಇವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಎಸ್. ರುದ್ರೇಗೌಡರು, ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಖ್ಯಾತ ಮಕ್ಕಳ ವೈದ್ಯರು ಹಾಗೂ ವಿಧಾನಪರಿಷತ್ ಸದಸ್ಯರು ಆಗಮಿಸಲಿರುವರು ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ಎನ್. ಗೋಪಿನಾಥ್‌ರವರು ವಹಿಸಲಿದ್ದಾರೆ.