Thursday, September 17, 2026
Thursday, September 17, 2026

Rotary club Konandur ಕೋಣಂದೂರು ರೋಟರಿ ಕ್ಲಬ್ ಗೆ ಕ್ರೀಡಾಕೂಟದ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ

Date:

Rotary club Konandur ಕೃಷಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರೋಟರಿ ವಲಯ ಮಟ್ಟದ “ಪೂರ್ವ ಚಂದ್ರ” ಕ್ರೀಡಾಕೂಟದಲ್ಲಿ ಕೊಣಂದೂರು ರೋಟರಿ ಕ್ಲಬ್ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಡಿಸೆಂಬರ್ 8 ಹಾಗೂ 9ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಕೋಣಂದೂರು ರೋಟರಿ ಕ್ಲಬ್ ಪ್ರತಿನಿಧಿಸಿದ್ದ ತಂಡವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಸತತ ಮೂರನೇ ಬಾರಿ ಗೆಲುವು ಸಾಧಿಸಿತು.

ವಾಲಿಬಾಲ್ ಹಾಗೂ ಟಗ್ ಆಫ್ ವಾರ್ ಸ್ಪರ್ಧೆಗಳಲ್ಲಿಯೂ ರೋಟರಿ ಕ್ಲಬ್ ಕೊಣಂದೂರು ಪ್ರಥಮ ಸ್ಥಾನ ಗಳಿಸಿದೆ.

ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ 11ರ ಸಹಾಯಕ ಗವರ್ನರ್ ರವಿ ಕೊಟೋಜಿ, ಕ್ರೀಡಾ ಚೇರ‍್ಮನ್ ಗಣೇಶ ಎಂ.ಅಂಗಡಿ, ವಸಂತ ಹೋಬಳಿದಾರ್ ಅವರು ವಿಜೇತ ತಂಡಕ್ಕೆ ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

ಮೆಡಲ್‌ಗಳನ್ನು ನೀಡಿ ಗೌರವಿಸಿದರು. ಕ್ರಿಕೆಟ್‌ನಲ್ಲಿ ವಿಶೇಷ ಪ್ರದರ್ಶನ ನೀಡಿದ ಭಾರಧ್ವಾಜ್ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.

ರೋಟರಿ ಕ್ಲಬ್ ಕೊಣಂದೂರು ಅಧ್ಯಕ್ಷ ಮುರುಗೇಂದ್ರ ಟಿ.ಜಿ. ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಮ್ಮ ಸಂಸ್ಥೆ ಸೇವಾ ಚಟುವಟಿಕೆಗಳ ಜತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಮುಖ್ಯತೆ ನೀಡುತ್ತಿದೆ. ಸತತ ಮೂರನೇ ಬಾರಿಗೆ ಕ್ರಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದರು.

Rotary club Konandur ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್ ಕುಮಾರ್, ಮಲ್ಲೇಶ್, ಬಿ.ಎಸ್.ರಾಘವೇಂದ್ರ, ರತೀಶ್, ಡಾ. ಗಣೇಶ ಶೆಟ್ಟಿ, ವಿಕಾಸ್, ಸದಾಶಿವ, ಸಚಿನ್, ರಾಜನ್, ರಾಜನ್, ರಾಮಕೃಷ್ಣ, ರಾಜಶೇಖರ್, ಪುಟ್ಟಪ್ಪ, ವೀರಣ್ಣ, ಸುಧೀರ್ ಹಾಗೂ ಎಲ್ಲ ಕ್ಲಬ್ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...