Thursday, April 9, 2026
Thursday, April 9, 2026
Home Blog Page 651

Rakesh D’Souza ರಾಜ್ಯ ಜೆಡಿಎಸ್ ಕಾರ್ಯದರ್ಶಿಯಾಗಿ ರಾಕೇಶ್ ಡಿಸೋಜಾ ನೇಮಕ

0

Rakesh D’Souza ಶಿವಮೊಗ್ಗ ನಗರದ ಜೆಡಿಎಸ್ ಮುಖಂಡರಾದ ಅಲ್ಫೋನ್ಸ್ ರಾಕೇಶ್ ಡಿಸೋಜ ಇವರನ್ನು ಜಾತ್ಯತೀತ ಜನತಾದಳ ರಾಜ್ಯ ಘಟಕದ ಕಾರ್ಯದರ್ಶಿಗಳನ್ನಾಗಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.

Holalkere Police ಟಿ.ನುಲೇನೂರು ಬಳಿ ಬಸ್ ಅಪಘಾತ ಶಿಕಾರಿಪುರದ ನಿವಾಸಿಯ ಮರಣ

0

Holalkere Police ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಿಕಾರಿಪುರದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಸಮೀಪ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

Holalkere Police ಪರಿಣಾಮ ಕಾರಿನಲ್ಲಿದ್ದ ಎಂ.ನಸ್ರುಲ್ಲಾ (45) ಸಾವನ್ನಪ್ಪಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಸ್ರುಲ್ಲಾ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಈ ವೇಳೆ ಇವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ.

DVS College of Arts, Science and Commerce ತಂತ್ರಜ್ಞಾನದ ಧನಾಂಶಗಳನ್ನು ಮಾತ್ರ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು-ಕೆ.ವಿ.ಜ್ಯೋತಿ ಕುಮಾರಿ

0

DVS College of Arts, Science and Commerce ಯುವ ವಿದ್ಯಾರ್ಥಿಗಳು ಮೊಬೈಲ್ ಸೇರಿ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಯಥೇಚ್ಚವಾಗಿ ಬಳಸಬಾರದು. ತಂತ್ರಜ್ಞಾನದ ಧನಾತ್ಮಕ ಅಂಶಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕಿ ಕೆ.ವಿ.ಜ್ಯೋತಿಕುಮಾರಿ ಹೇಳಿದರು.

ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್ ಮತ್ತು ಐಕ್ಯೂಎಸಿ ಘಟಕದಿಂದ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಡಿವಿಎಸ್ ಸಾರಂಗ್ 2024” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಯುವ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗುತ್ತಿದ್ದು, ಹೆಚ್ಚು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಕಲಿಕೆಯ ದೃಷ್ಟಿಯಿಂದ ಸೀಮಿತವಾಗಿ ಬಳಸಬೇಕು. ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಸ್ವಾಮಿ ವಿವೇಕಾನಂದ ಸೇರಿದಂತೆ ಮಹನೀಯರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಎಂದು ಸಲಹೆ ನೀಡಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಭಾರತ ದೇಶವು ಅತ್ಯಂತ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಯುವಜನತೆ ದೇಶದ ಐತಿಹಾಸಿಕ ಸಂಗತಿ ಹಾಗೂ ಶ್ರೀಮಂತಿಕೆಯನ್ನು ಅರಿತುಕೊಳ್ಳಬೇಕು. ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆಯು ಇದ್ದು, ಸೂಕ್ತ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸ ಪ್ರಕ್ರಿಯೆಯಿಂದ ಪ್ರತಿಭೆ ಅನಾವರಣ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

DVS College of Arts, Science and Commerce ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಸಾಂಸ್ಕೃತಿಕ ವೇದಿಕೆಗಳು ಸಹಕಾರಿ ಆಗುತ್ತವೆ ಎಂದರು.

ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಛಾಯಾಗ್ರಾಹಕ ಶಿವಮೊಗ್ಗ ನಂದನ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಂಯೋಜಕಿ ಎನ್.ಕೇತನಾ ಆರ್ತಿ, ನಿವೃತ್ತ ಉಪನ್ಯಾಸಕ ಕೆ.ಎ.ಭಾಸ್ಕರ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Vriddhi Charitable Trust ಚೆಸ್ ಕ್ರೀಡೆಯು ಮನುಷ್ಯನ ಮೆದುಳು‌, ಕಣ್ಣು ಹಾಗೂ ಇತರ ಭಾಗಗಳಿಗೆ ಚುರುಕು ನೀಡುವ ಕ್ರೀಡೆ- ವಿ.ಶಂಕರ್

0

Vriddhi Charitable Trust ಶಿವಮೊಗ್ಗ ಜಿಲ್ಲಾ ಮೂಕರ ಮತ್ತು ಶ್ರವಣಮಾಂದ್ಯರ ಸಂಘ (ರಿ) ವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಹಯೋಗದೊಂದಿಗೆ
ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯಮಟ್ಟದ ಕಿವುಡರ 19ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಸ್ಪರ್ದೆಯನ್ನು ಮೊದಲ ಸ್ಥಾನವನ್ನು ಮೈಸೂರು ತಂಡ, ಎರಡನೇ ಸ್ಥಾನ, ಬೆಳಗಾವಿ ತಂಡ ಮತ್ತು ಮೂರನೇ ಸ್ಥಾನವನ್ನು ಗದಗ ತಂಡ ಗಳಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ನವ ದೆಹಲಿಯ ಅಖಿಲ ಭಾರತ ಕಿವುಡರ ಸಂಘದ ಅಧ್ಯಕ್ಷರಾದ ಮಾನ್ಯ ಶ್ರೀ ವಿ.ಕುಮಾರ್‌ರವರು ಈ ಚೆಸ್ ಕ್ರೀಡೆಯು ಮನುಷ್ಯನ ಮೆದುಳು ಮತ್ತು ಕಣ್ಣಿನ ಹಾಗೂ ವಿವಿಧ ಭಾಗಗಳಿಗೆ ಜ್ಞಾನ ಸಂಪತ್ತು, ಬುದ್ಧಿವಂತಿಕೆ ಆಟವಾಗಿರುತ್ತದೆ. ಎಲ್ಲಾ ಕ್ರೀಡೆಗಳಿಗಿಂತಲು ಚೆಸ್ ಆಟವಾಡುವುದು ಮೆದುಳಿನ ಬುದ್ದಿ ಮತ್ತು ಜ್ಞಾನ ತೋರಿಸುವ ಆಟವಾಗಿರುತ್ತದೆ ಎಂದು ಹೇಳಿದರು.

Vriddhi Charitable Trust ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಕೆ.ಹೆಚ್.ಶಂಕರ್‌ರವರು ಮಾತನಾಡಿ ನಮ್ಮ ದ್ವನಿಗೆ ಬಹಳಷ್ಟು ಸಮಯದಿಂದ ವಿಶೇಷ ಚೇತನರ ಪರ ಏನೇ ಹೋರಾಟ ಮಾಡಿದರೂ ನಮ್ಮ ದ್ವನಿಗೆ ಕಿವುಡರ ಮತ್ತು ಮೂಕರ ಆಹವಾಲುಗಳಿಗೆ ಸ್ಪಂದಿಸುತ್ತಿಲ್ಲ .ಯಾವ ಸಚಿವರಾಗಲಿ, ಶಾಸಕರಾಗಲಿ, ಮಂತ್ರಿಗಳಾಗಲೀ ಸ್ಪಂದಿಸಬೇಕು. ಈಗಾಗಲೇ ಬಹಳಷ್ಟು ಹೋರಾಟಗಳನ್ನು ಮಾಡಿದರು. ಬೆಂಗಳೂರು ವಿಧಾನಸೌದದ ಮುಂದೆ ಹೋರಾಟ ಮಾಡಿದರೂ ಫಲಕಾರಿಯಾಗಿರುವುದಿಲ್ಲ. ಈ ಕೂಡಲೇ ಮುಂದಿನ ಆಹವಾಲುಗಳಿಗೆ ಈಗಿನ ಸರ್ಕಾರ ಸ್ಪಂದಿಸಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅತೀ ಘೋರವಾದ ಹೋರಾಟ ಮಾಡಲಿದ್ದೇವೆ ಎಂದು ನುಡಿದರು. ಶಿವಮೊಗ್ಗದ ತರಂಗಶಾಲೆ ವೆಂಕಟೇಶ್‌ರವರು ಮಾತನಾಡಿ ಈ ಕೆಲಸ ಮತ್ತು ಕಾರ್ಯಕ್ರಮ ನೇರವೇರುವುದು ಶ್ಲಾಘನೀಯ ಎಂದರು. ಎಸ್.ದೇವರಾಜ್ ಚಿಕ್ಕಮಗಳೂರು ಈ ಕಾರ್ಯಕ್ರಮ ಇನ್ನು ಮುಂದೆ ಯಾವಾಗಲು ನಡೆಯಬೇಕು ಎಂದರು.
ಗೌರವಾಧ್ಯಕ್ಷರಾದ ಓಂಗಣೇಶ ಶೇಟ್‌ರವರು
ಈ ಎಲ್ಲಾ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ಬಂದಿರುವಂತಹ ಎಲ್ಲಾ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಸ್ಪರ್ಧಾಗಳುಗಳಿಗೂ ಹಾಗೂ ಪೋಷಕರಿಗೂ, ಕುಟುಂಬದವರಿಗೂ ಒಳ್ಳೆಯ ಸ್ಪಂದನೆ ನೀಡಿರುತ್ತಾರೆ ಎಂದು ಹೇಳಿದರು. ಅಧ್ಯಕ್ಷರಾದ ಗಿರೀಶ್, ಪ್ರಧಾನಕಾರ್ಯದರ್ಶಿಯಾದ ಅಶ್ವಿನ್‌ಕುಮಾರ್ ವೈ.ಎ., ಇನ್ನತರೆ ಪದಾಧಿಕಾರಿಗಳು ಕಿರಣ್ ಕುಮಾರ್, ಅರುಣ್ ಕುಮಾರ್ ವಿಕ್ರಂ ಎಸ್., ಅರುಣದಾಸ್, ಜೆ.ಮಂಜುಳಾ, ಜಯಮಣ ಜೆ., ಪ್ರದೀಪ್ ಕೆ., ಸಂದೇಶ್ ಎಸ್.ಎನ್, ಭರತ್, ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂರುದಿನಗಳ ಕಾಲ ನೆರವೇರಿತು.

Rippenpete Police ಸೆಮಿಸ್ಟರ್ ನಲ್ಲಿ ಇಂಗ್ಲೀಷ್ ಪೇಪರ್ ಫೈಲ್: ವಿದ್ಯಾರ್ಥಿ ಆತ್ಮಹತ್ಯೆ

0

Rippenpete Police ರಿಪ್ಪನ್‌ಪೇಟೆಯ ಕಾಲೇಜಿನಲ್ಲಿ ಓದುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಬೇಸತ್ತು ಈ ಕೃತ್ಯವೆಸಗಿಕೊಂಡ ಬಗ್ಗೆ ಹೇಳಲಾಗಿದೆ. ಬಿ ಎ ಓದುತ್ತಿದ್ದ ವಿದ್ಯಾರ್ಥಿ ಧನುಷ್ ಡಿ (19) ಮೃತ ಯುವಕ. ಈತ ಆನಂದಪುರ ಸಮೀಪದ ಅಡೂರು ಗ್ರಾಮದ ನಿವಾಸಿಯಾಗಿದ್ದಾನೆ.

Rippenpete Police ಇತ್ತೀಚೆಗೆ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಮನುಷ್ ಫೇಲ್ ಆಗಿದ್ದ. ಆ ಬಳಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗುತ್ತಿದೆ. ಈ ನಡುವೆ ಕಳೆದ ಶುಕ್ರವಾರ ರಾತ್ರಿ ಆನಂದಪುರ ಸಮೀಪದ ಅಡೂರು ಗ್ರಾಮದ ತನ್ನ ನಿವಾಸದಲ್ಲಿ ಕಳೆನಾಶಕ ಸೇವಿಸಿದ್ದಾನೆ. ಆ ಬಳಿಕ ಆತನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಶಿವಮೊಗ್ಗದ ಮೆಗ್ಗಾನ್ ಗೆ ಶಿಫ್ಟ್ ಮಾಡಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Gaurav Gogoi ಸಂಸದ ಗೌರವ್ ಗೊಗೋಯ್ ಲೋಕಸಭೆ ಕಾಂಗ್ರೆಸ್ ಉಪನಾಯಕ

0

Gaurav Gogoi ಸಂಸದ ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ ಎಂದು ಕೆಸಿ ವೇಣುಗೋಪಾಲ್ ಭಾನುವಾರ (ಜುಲೈ 14) ಮಾಹಿತಿ ನೀಡಿದ್ದಾರೆ.
ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಿರುವ ಇತ್ತೀಚಿನ ನೇಮಕಾತಿಗಳ ಬಗ್ಗೆ ಸೋನಿಯಾ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಮತ್ತು ಡಾ ಎಂಡಿ ಜವೈದ್ ಅವರನ್ನು ವಿಪ್‌ಗಳಾಗಿ ನೇಮಿಸಲಾಗಿದೆ.
Gaurav Gogoi “ಗೌರವಾನ್ವಿತ ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ಸಚೇತಕರ ನೇಮಕದ ಬಗ್ಗೆ ಮಾನ್ಯ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ” ಎಂದು ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

K. Armstrong ತಮಿಳುನಾಡು ಬಿಎಸ್ ಪಿ ಮುಖಂಡ ಆರ್ಮ್ ಸ್ಟ್ರಾಂಗ್ ಕೊಲೆ ಆರೋಪಿ ಪೊಲೀಸ್ ಎನ್‌ಕೌಂಟರ್‌ ಗೆ ಬಲಿ

0

K Armstrong ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ನಿನ್ನೆ ಸಂಜೆ ಚೆನ್ನೈನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ ಬಂದೂಕಿನಿಂದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದಾಗ ಘಠನೆ ನಡೆದಿದ್ದು, ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ತಿರುವೆಂಗಡಮ್ ಅವರನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. “ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿರುವ ಅವರ ಮನೆಯ ಸಮೀಪ ಆರು ಮಂದಿ ಬೈಕ್‌ನಲ್ಲಿ ಬಂದವರು ಕೊಂದಿದ್ದರು.
ಆರ್ಮ್‌ಸ್ಟ್ರಾಂಗ್ ಅವರು ನಗರದ ಸೇಂಬಿಯಂ ಪ್ರದೇಶದಲ್ಲಿನ ಅವರ ಮನೆಯ ಬಳಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಆರು ಜನರು ಆತನ ಮೇಲೆ ಹಲ್ಲೆ ನಡೆಸಿ ನಂತರ ಪರಾರಿಯಾಗಿದ್ದಾರೆ. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾದ ಶಂಕಿತರಲ್ಲಿ ತಿರುವೆಂಗಡಮ್ ಕೂಡ ಒಬ್ಬನಾಗಿದ್ದ.. ವಕೀಲರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು 2006 ರಲ್ಲಿ ಚೆನ್ನೈ ಕಾರ್ಪೊರೇಷನ್ ಕೌನ್ಸಿಲ್‌ಗೆ ಆಯ್ಕೆಯಾದರು. ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸಿದ ನಂತರ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಆಹ್ವಾನಿಸಿದ ನಂತರ ಅವರು ಖ್ಯಾತಿಯನ್ನು ಗಳಿಸಿದರು.
K. Armstrong ದಾಳಿಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು
ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಾನು ರಾಜ್ಯ ಸರ್ಕಾರವನ್ನು ವಿಶೇಷವಾಗಿ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ವಿಶೇಷವಾಗಿ ದುರ್ಬಲ ವರ್ಗದವರು ಸುರಕ್ಷಿತವಾಗಿರಬೇಕು. ಸರ್ಕಾರ ಗಂಭೀರವಾಗಿರುತ್ತಿದ್ದರೆ ಆರೋಪಿಗಳನ್ನು ಬಂಧಿಸಲಾಗುತ್ತಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.

Agumbe Ghat ಆಗುಂಬೆ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಸೂಚಿ

0

Agumbe Ghat ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನ್ಳಿಗೆ ಗಳಿಗೆ ಆಗುಂಬೆ ಘಾಟಿಯಲ್ಲಿ ನಿರ್ಬಂಧ ಹೇರಲಾಗಿದೆ. ಈ‌ಮಧ್ಯೆ ಘಾಟಿಯಲ್ಲಿ ಕಳೆದ ರಾತ್ರಿ ಗುಡ್ಡ ಕುಸಿದಿದೆ.

ಸ್ವಲ್ಪ ಪ್ರಮಾಣದಲ್ಲಿ ಈಗ ಕುಸಿದಿದ್ದರೂ ಮಳೆ ಹೆಚ್ಚಿರುವ ಕಾರಣ ಆತಂಕ ಉಂಟಾಗಿದೆ.
ಘಾಟಿ ತಿರುವುಗಳಲ್ಲಿ ಧರೆಯಿಂದ ಇಳಿಯುವ ನೀರು, ಮಣ್ಣನ್ನು ಸಡಿಲಗೊಳಿಸುತ್ತಲೇ ಇರುತ್ತವೆ. ಇನ್ನೂ ರಸ್ತೆ ಮೇಲಿನ ನೀರು ಧರೆಕೊರೆಯುತ್ತಾ ಹರಿಯುತ್ತವೆ. ಇದರ ಪರಿಣಾಮವೋ ಏನೋ ಎಂಬಂತೆ ಇವತ್ತು ಐದು ಮತ್ತು ಆರನೇ ಕ್ರಾಸ್‌ನಲ್ಲಿ ಬೆಟ್ಟದಲ್ಲಿ ರಸ್ತೆ ಪಕ್ಕದ ಧರೆ ತುಸು ಪ್ರಮಾಣದಲ್ಲಿ ಕುಸಿದಿದೆ.

Agumbe Ghat ಕುಸಿದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಅರ್ಧರಸ್ತೆಯ ತುಂಬಾ ಹರಡಿದೆ. .
ಸ್ಥಳೀಯರು ಹೇಳುವ ಪ್ರಕಾರ, ಇನ್ನೊಂದಿಷ್ಟು ದಿನ ಹೀಗೆ ಧರೆಕುಸಿಯುವ ಆತಂಕವಿದೆ. ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಘಾಟಿಯಲ್ಲಿ ಗುಡ್ಡ ಕುಸಿದಿತ್ತು. ಆ ಥರದ ಘಟನೆಗಳು ಮತ್ತೆ ಸಂಭವಿಸದೇ ಇರಲಿ ಎನ್ನುತ್ತಾರೆ.

ಭಾರಿ ತೀರ್ಥಹಳ್ಳಿ – ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಹೋಗುತ್ತಿವೆ. ಈಗ ಆಗುಂಬೆ ಘಾಟಿಯ 5 ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದ್ದು ವಾಹನ ಸವಾರರು ಎಚ್ಚರಿಕೆವಹಿಸಬೇಕಿದೆ.

Malnad Area Development Board ದೇಶದ ಯೋಜನೆ ರೂಪಿಸಬೇಕಾದರೆ ಜನಸಂಖ್ಯೆ & ಸಂಪನ್ಮೂಲಗಳ ಬಳಕೆ ಮುಖ್ಯ- ಡಾ.ಹರಿಪ್ರಸಾದ್

0

Malnad Area Development Board ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಂಖ್ಯಿಕ ಇಲಾಖೆಯ ದತ್ತಾಂಶ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದತ್ತಾಂಶ ಇಲ್ಲದೇ ತೆಗೆದುಕೊಳ್ಳುವ ನಿರ್ಧಾರ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಉಪನ್ಯಾಸಕ ಡಾ.ಹರಿಪ್ರಸಾದ್ ಹೇಳಿದರು.

ಶಿವಮೊಗ್ಗ ನಗರದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಸಿ ಮಹಾಲನೋಬಿಸ್
ಜನ್ಮದಿನಾಚರಣೆ ಹಾಗೂ ಸಾಂಖ್ಯಿಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದ ಅವರು ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಜನಸಂಖ್ಯೆ ಹಾಗೂ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆ ರೂಪಿಸಿ ಅಭಿವೃದ್ಧಿ ಸಾಧಿಸಲು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ನೀಡುವ ಅಂಕಿಅಂಶಗಳು ಬಹುಮುಖ್ಯವಾಗಿದೆ.

ಯುದ್ದಗಳ ಸಂದರ್ಭದಲ್ಲಿ ಎದುರಾಳಿ ಸೈನ್ಯದ ಸಂಖ್ಯಾಬಲ ಹಾಗೂ ನಮ್ಮ ಸೈನ್ಯದಲ್ಲಿ ಇರುವ ಶಸ್ತ್ರಾಸ್ತ್ರಗಳ ಕುರಿತು ಸರಿಯಾದ ದತ್ತಾಂಶ ಮಾಹಿತಿ ಇದ್ದರೆ, ಯುದ್ದ ಮಾಡಬೇಕು ಅಥಾವ ಬೇಡ ಎಂದು ನಿರ್ಧಾರ ಮಾಡಲು ಸಾಧ್ಯ. ಆದ್ದರಿಂದ ದತ್ತಾಂಶ ಇಲದೇ ಹೋದರೆ ಒಂದು ದೇಶವೇ ಅವನತಿ ಹೊಂದುತ್ತದೆ. ಇಸ್ರೋ ಏರೋನಾಟಿಕ್ಸ್ ಸರ್ವೆ, ಬೆಳೆ ಸರ್ವೆಗಳನ್ನು ಆಧರಿಸಿ ಸರ್ಕಾರಗಳು ರೈತರ ಬೆಳೆಗಳ ಕುರಿತು ಮಾಹಿತಿ ಪಡೆದು ರೈತರಿಗೆ ಪರಿಹಾರವನ್ನು ನೀಡಲು ಸಹಕಾರಿ ಆಗಿದೆ.

ಪ್ರೊ.ಸಿ ಮಹಾಲನೋಬಿಸ್ ಅವರು ಒಬ್ಬ ಶ್ರೇಷ್ಠ ಸಾಂಖ್ಯಿಕ ತಜ್ಞರಾಗಿದ್ದು ಖ್ಯಾತ ಗಣಿತಶಾಸ್ತ್ರಜ್ಞರಾದ ಸರ್ ಸಿ ವಿ ರಾಮಾನುಜನ್ ಅವರ ಪ್ರಭಾವಕ್ಕೆ ಒಳಗಾಗಿ ಸಂಖ್ಯಾಶಾಸ್ತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಹಾಗೂ ರವಿಂದ್ರನಾಥ್ ಠಾಗೂರ್ ಅವರ ಒಡನಾಡಿಯಾಗಿ ಬದುಕಿದ ವ್ಯಕ್ತಿಯಾಗಿದ್ದು ಭಾರತದ ಸಾಂಖ್ಯಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕಳೆದ 17 ವರ್ಷಗಳಿಂದ ಅವರ ಜನ್ಮ ದಿನವನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

Malnad Area Development Board ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಅವರು ಮಾತನಾಡಿ ಎಲ್ಲಾ ಇಲಾಖೆಗಳಿಗೂ ದತ್ತಾಂಶದ ಕುರಿತು ಮಾಹಿತಿ ಅಗತ್ಯವಾಗಿದ್ದು ಅಂಕಿ ಅಂಶಗಳು ಇಲ್ಲದೇ ಯಾವುದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಯೋಜನೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಇದೇ ರೀತಿ ಮಾನವನ ಪ್ರತಿದಿನದ ಜೀವನದಲ್ಲಿ ದತ್ತಾಂಶ ಆಧಾರಿತ ಜೀವನವನ್ನು ನಾವು ನಡೆಸುತ್ತಿದ್ದೇವೆ . ಪ್ರತಿಯೊಂದು ಮನೆ, ಹಾಗೂ ಉದ್ಯೋಗ ಸ್ಥಳ,ಹಾಗೂ ವಿವಿಧ ಚಟುವಟಿಕೆಗಳಲ್ಲಿ ದತ್ತಾಂಶ ಅತೀ ಮುಖ್ಯವಾಗಿದೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಸಲ್ಲಿಸೊಣ ಎಂದರು.

ಸೂಡಾ ಆಯುಕ್ತರಾದ ವಿಶ್ವನಾಥ್ ಮಾತನಾಡಿ ಪ್ರೊ.ಸಿ ಮಹಾಲನೋಬಿಸ್ ಅವರ ಜಯಂತಿ ಪ್ರತಿಯೊಬ್ಬರಿಗೂ ತಿಳಿಯುವಂತೆ ಆಗಬೇಕಾಗಿದೆ. ಅದ್ದರಿಂದ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ, ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಇಲಾಖೆಯ ನಿವೃತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

G. Parameshwar ಹವಾಮಾನ ವೈಪರೀತ್ಯ ಶಿವಮೊಗ್ಗದ ಧರೆಗಿಳಿಯದೇ ಬೆಂಗಳೂರಿಗೆ ಗೃಹಸಚಿವರಿದ್ದ ವಿಮಾನ ವಾಪಸ್

0

G. Parameshwar ಹವಾಮಾನ ವೈಪರೀತ್ಯದಿಂದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಶಿವಮೊಗ್ಗಕ್ಕೆ ಬಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಬೇಕಾಗಿತ್ತು. ಬೆಳಗ್ಗೆ ಬೆಂಗಳೂರಿನಿಂದ ಸುಮಾರು 11:30ಕ್ಕೆ ಹೊರಟು 12:30ಕ್ಕೆ ಶಿವಮೊಗ್ಗಕ್ಕೆ ಆಗಮಿಸಬೇಕಿತ್ತು. ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ ಶಿವಮೊಗ್ಗಕ್ಕೆ ಬಂದಾಗ ಇಲ್ಲಿ ವಿಮಾನ ಲ್ಯಾಂಡ್ ಮಾಡಿಸಲು ಪೂರಕ ವಾತಾವರಣ ಇರದ ಕಾರಣಕ್ಕೆ ವಿಮಾನ ಬೆಂಗಳೂರಿಗೆ ವಾಪಸ್ ಆಗಿದೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ, ಸೊರಬದಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆ ನಡೆಸಿ, ತೀರ್ಥಹಳ್ಳಿಗೆ ತೆರಳಬೇಕಿತ್ತು. ತೀರ್ಥಹಳ್ಳಿಯಲ್ಲಿ 20.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕೋಣಂದೂರು ಪೊಲೀಸ್​ ವಸತಿ ಸಂಕೀರ್ಣ, ತೀರ್ಥಹಳ್ಳಿ ರಥಬೀದಿ ಪೊಲೀಸ್​ ಸ್ಟೇಷನ್, ಬೆಟ್ಟಮಕ್ಕಿಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಫೈರ್ ಸ್ಟೇಷನ್ ಹಾಗೂ ಸೊಪ್ಪುಗುಡ್ಡೆಯಲ್ಲಿ 24 ಮನೆಗಳುಳ್ಳ ವಸತಿ ಸಮುಚ್ಚಯ ಕೂಡ ಉದ್ಘಾಟನೆ ಮಾಡಬೇಕಿತ್ತು. ಇಂದು ಗೃಹ ಸಚಿವರು ಬಾರದ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.
G. Parameshwar ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೃಹ ಸಚಿವರು ಇಂದು ಸೊರಬಕ್ಕೆ ಬರಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡ್ ಆಗದೆ ವಾಪಸ್ ಆಗಿದ್ದಾರೆ. ಗೃಹ ಸಚಿವರ ಗೈರಿನಲ್ಲಿ ನಾನು ಉದ್ಘಾಟನೆ ಮಾಡಲಿದ್ದೇನೆ ಎಂದು ತಿಳಿಸಿದರು.