Thursday, April 9, 2026
Thursday, April 9, 2026
Home Blog Page 650

Chamber Of Commerce ತಂತ್ರಜ್ಞಾನ ಆಧರಿತ ತರಬೇತಿ ನೀಡಿ ಕೌಶಲ್ಯ ವೃದ್ಧಿ ಮಾಡುವ ಅಗತ್ಯವಿದೆ-ಸಂಸದ ರಾಘವೇಂದ್ರ

0

Chamber Of Commerce ಯುವಜನರಿಗೆ ಶಿಕ್ಷಣದ ಜತೆಯಲ್ಲಿ ತಂತ್ರಜ್ಞಾನ ಆಧರಿತ ತರಬೇತಿ ನೀಡುವುದು ಹಾಗೂ ಕೌಶಲ್ಯ ವೃದ್ಧಿಸುವುದು ಅತ್ಯಂತ ಅವಶ್ಯಕ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಧುನಿಕ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ಥಳೀಯ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಸಂಘದ ಯೋಜನೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದು, ರಸ್ತೆ, ರೈಲು, ವಿಮಾನ ಮಾರ್ಗಗಳಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಿಗೆ ಸಂಚರಿಸಲು ಅನುಕೂಲವಾಗಲು ಎಲ್ಲ ವಾತಾವರಣವಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಪ್ರಮುಖ ಸ್ಥಳಗಳಿಗೆ ವಿಮಾನ ಹಾರಾಟ ಆರಂಭಿಸುವ ಗುರಿ ಹೊಂದಲಾಗಿದೆ. ಇದರಿಂದ ವ್ಯಾಪಾರ ವಹಿವಾಟು ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ತಂತ್ರಜ್ಞಾನ ಬಳಸಿಕೊಂಡು ಯುವಜನರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಉದ್ಯೋಗ ಕ್ಷೇತ್ರಕ್ಕೆ ತಯಾರು ಮಾಡಬೇಕಿದೆ. ಕೈಗಾರಿಕಾ ಕ್ಷೇತ್ರದ ಆಕಾಂಕ್ಷೆಗಳಿಗೆ ಪೂರಕವಾಗಿ ಕೌಶಲ್ಯಯುತ ಯುವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕಿಲ್ ಅಕಾಡೆಮಿ ಮೂಲಕ ವಿಶೇಷ ಪ್ರಯತ್ನ ನಡೆಸುತ್ತಿರುವುದು ಉತ್ತಮ ಸಂಗತಿ ಎಂದು ಹೇಳಿದರು.
Chamber Of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ರಸ್ತೆ, ರೈಲು, ವಿಮಾನ ಸಂಪರ್ಕ ವ್ಯವಸ್ಥೆ ಸದೃಢವಾಗುತ್ತಿದೆ. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಪ್ರಯತ್ನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಗತ್ಯ ಸೌಕರ್ಯಗಳು ದೊರಕಿವೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವಿದ್ದರೂ ಕೈಗಾರಿಕೆಗಳ ಸ್ಥಾಪನೆ ಆಗುತ್ತಿಲ್ಲ. ಇದಕ್ಕೆ ಕೌಶಲ್ಯ ಸಂಪನ್ಮೂಲ ಕೊರತೆಯು ಒಂದು ಕಾರಣ. ಆದ್ದರಿಂದ ಸಂಘದ ವತಿಯಿಂದ ಸ್ಕಿಲ್ ಅಕಾಡೆಮಿ ಸ್ಥಾಪಿಸಿದ್ದು, ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವಂತೆ ಯುವಜನರಿಗೆ ತರಬೇತಿ ನೀಡಲಾಗುವುದು. ಈಗಾಗಲೇ ಬಾಷ್ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಸ್ಕಿಲ್ ಅಕಾಡೆಮಿ ಮಹತ್ತರ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ವಸಂತ ಹೋಬಳಿದಾರ್ ಸ್ಕಿಲ್ ಅಕಾಡೆಮಿ ರೂಪುರೇಷೆ ಕುರಿತು ವಿವರಣೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಮಧುಸೂದನ್ ಐತಾಳ್, ಬಿ.ಆರ್.ಸಂತೋಷ್, ಕೆ.ಎಸ್.ಸುಕುಮಾರ್, ಪ್ರದೀಪ್ ವಿ.ಯಲಿ, ಇ.ಪರಮೇಶ್ವರ್, ಗಣೇಶ್ ಎಂ.ಅಂಗಡಿ, ಬಿ.ಮಂಜೇಗೌಡ, ಮರಿಸ್ವಾಮಿ, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತಕುಮಾರ್, ಡಿ.ಎಂ.ಶಂಕರಪ್ಪ ಮತ್ತಿತರರು ಇದ್ದರು.

Arjun Guruji ಜುಲೈ 16 ರಂದು ಶಿವಮೊಗ್ಗದಲ್ಲಿ ಅರ್ಜುನ್ ಗುರೂಜಿ ಅವರಿಗೆ “ಗುರುವಂದನೆ” ಕಾರ್ಯಕ್ರಮ

0

Arjun Guruji ಶಿವಮೊಗ್ಗ ನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ದೇವರಾಜ ಅರಸ ಬಡಾವಣೆಯಲ್ಲಿನ ಆರ್ಯವೈಶ್ಯ ಸಂಸ್ಕೃತಿ ಸದನದಲ್ಲಿ ಜುಲೈ 16ರಂದು ಸಂಜೆ 6ಕ್ಕೆ ಸಮನ್ವಯ ಟ್ರಸ್ಟ್ ವತಿಯಿಂದ ಆರ್‌ಜಿಎಸ್ ಕೇಟರಿಂಗ್, ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಮೈಸೂರಿನ ಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರಿಗೆ ಗುರುಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಹಾಗೂ ಲಲಿತ ಸಹಸ್ರ ನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಶ್ರೀ ಅರ್ಜುನ ಅವಧೂತ Arjun Guruji ಮಹಾರಾಜರು, ಹೊಸನಗರ ಮೂಲೆಗದ್ದೆ ಸದಾಶಿವ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಸಿದ್ದಾಪುರದ ದೈವಜ್ಞ ಬ್ರಾಹ್ಮಣ ಮಹಾಸಭಾದ ಶ್ರೀ ಸಂತೋಷ್ ಭಟ್ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಭಜನಾ ಪರಿಷತ್ ಮುಖ್ಯಸ್ಥ ಶಬರೀಶ್ ಕಣ್ಣನ್, ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ ಅಧ್ಯಕ್ಷತೆ ವಹಿಸುವರು. ಗುರುವಂದನಾ ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ಇರುತ್ತದೆ.

Shivamogga Police ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಭರಣಗಳ ಬ್ಯಾಗ್ ಕಳವು ಮಾಡುವ ಕಳ್ಳರ ಗ್ಯಾಂಗ್ ಅಂದರ್

0

Shivamogga Police ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯರು ರಶ್ ಮಧ್ಯೆಯೇ ಬಸ್ ಏರುವ ವೇಳೆ ಬ್ಯಾಗಿನಿಂದ ಚಿನ್ನಾಭರಣ ಕದಿಯುತ್ತಿದ ಕಳ್ಳಿಯರ ತಂಡವನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಳ್ಳಿಯರೆಲ್ಲ ಭದ್ರಾವತಿಯ ಹೊಸಮನೆಯವರು.
ಹೊಸಮನೆಯ ಹನುಮಂತನಗರದ ಶಾಂತಿ ಅಲಿಯಾಸ್ ಕರ್ಕಿ (31), ಮೀನಾಕ್ಷಿ 38), ಸಾವಿತ್ರಿ ಅಲಿಯಾಸ್ ಬಾಬಾ (29), ) ಸುಶೀಲಮ್ಮ 66) ಮತ್ತು ಹೊಸಮನೆ ಬೋವಿ ಕಾಲನಿಯ ದುರ್ಗಾ ಅಲಿಯಾಸ್ ಸಣ್ಣದುರ್ಗಾ (29) ಬಂಧಿತರು. ಜೂನ್ 29 ರಂದು ಶಿವಮೊಗ್ಗ ನಗರದ ಜೆ. ಸಿ. ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗಾಗಿ ದಾವಣಗೆರೆಗೆ ಹೊರಟಿದ್ದರು.

ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ನಲ್ಲಿ ಬಸ್ ಹತ್ತಿದ್ದರು. ಆ ಬಳಿಕ ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದ್ದ ಅವರಿಗೆ ಆಘಾತವಾಗಿತ್ತು. ಏಕೆಂದರೆ ಅದರಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 379 ಐಪಿಸಿ ಕೇಸ್ ದಾಖಲಾಗಿತ್ತು.

ನಂತರ ಪ್ರಕರಣದ ಪತ್ತೆಗಾಗಿ ಪಿಐ ರವಿ ಪಾಟೀಲ್ ನೇತೃತ್ವದಲ್ಲಿ ನಾಗರಾಜ್ ಎಎಸ್‌ಐ, ಹೆಚ್‌ಸಿ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್ಕ್, ಸಿಪಿಸಿ ಚಂದ್ರ ನಾಯ್ಕ, ಗುರು ನಾಯ್ಕ, ನಿತಿನ್, ಪುನೀತ್ ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪಾ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ಅವರನ್ನು ಒಳಗೊಂಡ ತನಿಖಾ ತಂಡವ ರಚನೆಯಾಗಿತ್ತು. ತಂಡವು ಆರೋಪಿಗಳನ್ನು ಬಂಧಿಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ ಒಟ್ಟು 7 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 8,13,000 ರೂ ಗಳ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಮಾನತುಪಡಿಸಿಕೊಂಡಿದೆ.
ಶಿವಮೊಗ್ಗದ ಇನೊಬ್ಬ ಕಳ್ಳಿಯ ಬಂಧನ
ಮಹಿಳೆಯರು ಬಸ್ ಏರುವ ವೇಳೆ ಬ್ಯಾಗಿನಿಂದ ಚಿನ್ನಾಭರಣ ಕದಿಯುತ್ತಿದ ಎರಡು ಪ್ರಕರಣಕ್ಕೆ ಸಬಂಧಿಸಿ ಕಳ್ಳಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

Shivamogga Police ಮಂಜುನಾಥ ಬಡಾವಣೆಯ ವಾಸಿ ತಾಹಿರಾ ರೋಹಿ, (32) ಬಂಧಿತ ಕಳ್ಳಿ.
ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡುಬಂದಿತ್ತು.

ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತಂಡವು ಕಳ್ಳಿಯನ್ನು ದಸ್ತಗಿರಿ ಮಾಡಿ, ೨ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,45,೦೦೦ ರೂ ಗಳ 81 ಗ್ರಾಂ 800 ಮಿಲಿ ತೂಕದ ಬಂಗಾರದ ಆಭರಣಗಳನ್ನು ಅಮಾನತುಪಡಿಸಿಕೊಂಡಿದೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Rakesh D’Souza ರಾಜ್ಯ ಜೆಡಿಎಸ್ ಕಾರ್ಯದರ್ಶಿಯಾಗಿ ರಾಕೇಶ್ ಡಿಸೋಜಾ ನೇಮಕ

0

Rakesh D’Souza ಶಿವಮೊಗ್ಗ ನಗರದ ಜೆಡಿಎಸ್ ಮುಖಂಡರಾದ ಅಲ್ಫೋನ್ಸ್ ರಾಕೇಶ್ ಡಿಸೋಜ ಇವರನ್ನು ಜಾತ್ಯತೀತ ಜನತಾದಳ ರಾಜ್ಯ ಘಟಕದ ಕಾರ್ಯದರ್ಶಿಗಳನ್ನಾಗಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.

Holalkere Police ಟಿ.ನುಲೇನೂರು ಬಳಿ ಬಸ್ ಅಪಘಾತ ಶಿಕಾರಿಪುರದ ನಿವಾಸಿಯ ಮರಣ

0

Holalkere Police ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಿಕಾರಿಪುರದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಸಮೀಪ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

Holalkere Police ಪರಿಣಾಮ ಕಾರಿನಲ್ಲಿದ್ದ ಎಂ.ನಸ್ರುಲ್ಲಾ (45) ಸಾವನ್ನಪ್ಪಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಸ್ರುಲ್ಲಾ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಈ ವೇಳೆ ಇವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ.

DVS College of Arts, Science and Commerce ತಂತ್ರಜ್ಞಾನದ ಧನಾಂಶಗಳನ್ನು ಮಾತ್ರ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು-ಕೆ.ವಿ.ಜ್ಯೋತಿ ಕುಮಾರಿ

0

DVS College of Arts, Science and Commerce ಯುವ ವಿದ್ಯಾರ್ಥಿಗಳು ಮೊಬೈಲ್ ಸೇರಿ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಯಥೇಚ್ಚವಾಗಿ ಬಳಸಬಾರದು. ತಂತ್ರಜ್ಞಾನದ ಧನಾತ್ಮಕ ಅಂಶಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕಿ ಕೆ.ವಿ.ಜ್ಯೋತಿಕುಮಾರಿ ಹೇಳಿದರು.

ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್ ಮತ್ತು ಐಕ್ಯೂಎಸಿ ಘಟಕದಿಂದ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಡಿವಿಎಸ್ ಸಾರಂಗ್ 2024” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಯುವ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗುತ್ತಿದ್ದು, ಹೆಚ್ಚು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಕಲಿಕೆಯ ದೃಷ್ಟಿಯಿಂದ ಸೀಮಿತವಾಗಿ ಬಳಸಬೇಕು. ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಸ್ವಾಮಿ ವಿವೇಕಾನಂದ ಸೇರಿದಂತೆ ಮಹನೀಯರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಎಂದು ಸಲಹೆ ನೀಡಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಭಾರತ ದೇಶವು ಅತ್ಯಂತ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಯುವಜನತೆ ದೇಶದ ಐತಿಹಾಸಿಕ ಸಂಗತಿ ಹಾಗೂ ಶ್ರೀಮಂತಿಕೆಯನ್ನು ಅರಿತುಕೊಳ್ಳಬೇಕು. ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆಯು ಇದ್ದು, ಸೂಕ್ತ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸ ಪ್ರಕ್ರಿಯೆಯಿಂದ ಪ್ರತಿಭೆ ಅನಾವರಣ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

DVS College of Arts, Science and Commerce ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಸಾಂಸ್ಕೃತಿಕ ವೇದಿಕೆಗಳು ಸಹಕಾರಿ ಆಗುತ್ತವೆ ಎಂದರು.

ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಛಾಯಾಗ್ರಾಹಕ ಶಿವಮೊಗ್ಗ ನಂದನ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಂಯೋಜಕಿ ಎನ್.ಕೇತನಾ ಆರ್ತಿ, ನಿವೃತ್ತ ಉಪನ್ಯಾಸಕ ಕೆ.ಎ.ಭಾಸ್ಕರ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Vriddhi Charitable Trust ಚೆಸ್ ಕ್ರೀಡೆಯು ಮನುಷ್ಯನ ಮೆದುಳು‌, ಕಣ್ಣು ಹಾಗೂ ಇತರ ಭಾಗಗಳಿಗೆ ಚುರುಕು ನೀಡುವ ಕ್ರೀಡೆ- ವಿ.ಶಂಕರ್

0

Vriddhi Charitable Trust ಶಿವಮೊಗ್ಗ ಜಿಲ್ಲಾ ಮೂಕರ ಮತ್ತು ಶ್ರವಣಮಾಂದ್ಯರ ಸಂಘ (ರಿ) ವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಹಯೋಗದೊಂದಿಗೆ
ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯಮಟ್ಟದ ಕಿವುಡರ 19ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಸ್ಪರ್ದೆಯನ್ನು ಮೊದಲ ಸ್ಥಾನವನ್ನು ಮೈಸೂರು ತಂಡ, ಎರಡನೇ ಸ್ಥಾನ, ಬೆಳಗಾವಿ ತಂಡ ಮತ್ತು ಮೂರನೇ ಸ್ಥಾನವನ್ನು ಗದಗ ತಂಡ ಗಳಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ನವ ದೆಹಲಿಯ ಅಖಿಲ ಭಾರತ ಕಿವುಡರ ಸಂಘದ ಅಧ್ಯಕ್ಷರಾದ ಮಾನ್ಯ ಶ್ರೀ ವಿ.ಕುಮಾರ್‌ರವರು ಈ ಚೆಸ್ ಕ್ರೀಡೆಯು ಮನುಷ್ಯನ ಮೆದುಳು ಮತ್ತು ಕಣ್ಣಿನ ಹಾಗೂ ವಿವಿಧ ಭಾಗಗಳಿಗೆ ಜ್ಞಾನ ಸಂಪತ್ತು, ಬುದ್ಧಿವಂತಿಕೆ ಆಟವಾಗಿರುತ್ತದೆ. ಎಲ್ಲಾ ಕ್ರೀಡೆಗಳಿಗಿಂತಲು ಚೆಸ್ ಆಟವಾಡುವುದು ಮೆದುಳಿನ ಬುದ್ದಿ ಮತ್ತು ಜ್ಞಾನ ತೋರಿಸುವ ಆಟವಾಗಿರುತ್ತದೆ ಎಂದು ಹೇಳಿದರು.

Vriddhi Charitable Trust ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಕೆ.ಹೆಚ್.ಶಂಕರ್‌ರವರು ಮಾತನಾಡಿ ನಮ್ಮ ದ್ವನಿಗೆ ಬಹಳಷ್ಟು ಸಮಯದಿಂದ ವಿಶೇಷ ಚೇತನರ ಪರ ಏನೇ ಹೋರಾಟ ಮಾಡಿದರೂ ನಮ್ಮ ದ್ವನಿಗೆ ಕಿವುಡರ ಮತ್ತು ಮೂಕರ ಆಹವಾಲುಗಳಿಗೆ ಸ್ಪಂದಿಸುತ್ತಿಲ್ಲ .ಯಾವ ಸಚಿವರಾಗಲಿ, ಶಾಸಕರಾಗಲಿ, ಮಂತ್ರಿಗಳಾಗಲೀ ಸ್ಪಂದಿಸಬೇಕು. ಈಗಾಗಲೇ ಬಹಳಷ್ಟು ಹೋರಾಟಗಳನ್ನು ಮಾಡಿದರು. ಬೆಂಗಳೂರು ವಿಧಾನಸೌದದ ಮುಂದೆ ಹೋರಾಟ ಮಾಡಿದರೂ ಫಲಕಾರಿಯಾಗಿರುವುದಿಲ್ಲ. ಈ ಕೂಡಲೇ ಮುಂದಿನ ಆಹವಾಲುಗಳಿಗೆ ಈಗಿನ ಸರ್ಕಾರ ಸ್ಪಂದಿಸಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅತೀ ಘೋರವಾದ ಹೋರಾಟ ಮಾಡಲಿದ್ದೇವೆ ಎಂದು ನುಡಿದರು. ಶಿವಮೊಗ್ಗದ ತರಂಗಶಾಲೆ ವೆಂಕಟೇಶ್‌ರವರು ಮಾತನಾಡಿ ಈ ಕೆಲಸ ಮತ್ತು ಕಾರ್ಯಕ್ರಮ ನೇರವೇರುವುದು ಶ್ಲಾಘನೀಯ ಎಂದರು. ಎಸ್.ದೇವರಾಜ್ ಚಿಕ್ಕಮಗಳೂರು ಈ ಕಾರ್ಯಕ್ರಮ ಇನ್ನು ಮುಂದೆ ಯಾವಾಗಲು ನಡೆಯಬೇಕು ಎಂದರು.
ಗೌರವಾಧ್ಯಕ್ಷರಾದ ಓಂಗಣೇಶ ಶೇಟ್‌ರವರು
ಈ ಎಲ್ಲಾ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ಬಂದಿರುವಂತಹ ಎಲ್ಲಾ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಸ್ಪರ್ಧಾಗಳುಗಳಿಗೂ ಹಾಗೂ ಪೋಷಕರಿಗೂ, ಕುಟುಂಬದವರಿಗೂ ಒಳ್ಳೆಯ ಸ್ಪಂದನೆ ನೀಡಿರುತ್ತಾರೆ ಎಂದು ಹೇಳಿದರು. ಅಧ್ಯಕ್ಷರಾದ ಗಿರೀಶ್, ಪ್ರಧಾನಕಾರ್ಯದರ್ಶಿಯಾದ ಅಶ್ವಿನ್‌ಕುಮಾರ್ ವೈ.ಎ., ಇನ್ನತರೆ ಪದಾಧಿಕಾರಿಗಳು ಕಿರಣ್ ಕುಮಾರ್, ಅರುಣ್ ಕುಮಾರ್ ವಿಕ್ರಂ ಎಸ್., ಅರುಣದಾಸ್, ಜೆ.ಮಂಜುಳಾ, ಜಯಮಣ ಜೆ., ಪ್ರದೀಪ್ ಕೆ., ಸಂದೇಶ್ ಎಸ್.ಎನ್, ಭರತ್, ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂರುದಿನಗಳ ಕಾಲ ನೆರವೇರಿತು.

Rippenpete Police ಸೆಮಿಸ್ಟರ್ ನಲ್ಲಿ ಇಂಗ್ಲೀಷ್ ಪೇಪರ್ ಫೈಲ್: ವಿದ್ಯಾರ್ಥಿ ಆತ್ಮಹತ್ಯೆ

0

Rippenpete Police ರಿಪ್ಪನ್‌ಪೇಟೆಯ ಕಾಲೇಜಿನಲ್ಲಿ ಓದುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಬೇಸತ್ತು ಈ ಕೃತ್ಯವೆಸಗಿಕೊಂಡ ಬಗ್ಗೆ ಹೇಳಲಾಗಿದೆ. ಬಿ ಎ ಓದುತ್ತಿದ್ದ ವಿದ್ಯಾರ್ಥಿ ಧನುಷ್ ಡಿ (19) ಮೃತ ಯುವಕ. ಈತ ಆನಂದಪುರ ಸಮೀಪದ ಅಡೂರು ಗ್ರಾಮದ ನಿವಾಸಿಯಾಗಿದ್ದಾನೆ.

Rippenpete Police ಇತ್ತೀಚೆಗೆ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಮನುಷ್ ಫೇಲ್ ಆಗಿದ್ದ. ಆ ಬಳಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗುತ್ತಿದೆ. ಈ ನಡುವೆ ಕಳೆದ ಶುಕ್ರವಾರ ರಾತ್ರಿ ಆನಂದಪುರ ಸಮೀಪದ ಅಡೂರು ಗ್ರಾಮದ ತನ್ನ ನಿವಾಸದಲ್ಲಿ ಕಳೆನಾಶಕ ಸೇವಿಸಿದ್ದಾನೆ. ಆ ಬಳಿಕ ಆತನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಶಿವಮೊಗ್ಗದ ಮೆಗ್ಗಾನ್ ಗೆ ಶಿಫ್ಟ್ ಮಾಡಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Gaurav Gogoi ಸಂಸದ ಗೌರವ್ ಗೊಗೋಯ್ ಲೋಕಸಭೆ ಕಾಂಗ್ರೆಸ್ ಉಪನಾಯಕ

0

Gaurav Gogoi ಸಂಸದ ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ ಎಂದು ಕೆಸಿ ವೇಣುಗೋಪಾಲ್ ಭಾನುವಾರ (ಜುಲೈ 14) ಮಾಹಿತಿ ನೀಡಿದ್ದಾರೆ.
ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಿರುವ ಇತ್ತೀಚಿನ ನೇಮಕಾತಿಗಳ ಬಗ್ಗೆ ಸೋನಿಯಾ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಮತ್ತು ಡಾ ಎಂಡಿ ಜವೈದ್ ಅವರನ್ನು ವಿಪ್‌ಗಳಾಗಿ ನೇಮಿಸಲಾಗಿದೆ.
Gaurav Gogoi “ಗೌರವಾನ್ವಿತ ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ಸಚೇತಕರ ನೇಮಕದ ಬಗ್ಗೆ ಮಾನ್ಯ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ” ಎಂದು ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

K. Armstrong ತಮಿಳುನಾಡು ಬಿಎಸ್ ಪಿ ಮುಖಂಡ ಆರ್ಮ್ ಸ್ಟ್ರಾಂಗ್ ಕೊಲೆ ಆರೋಪಿ ಪೊಲೀಸ್ ಎನ್‌ಕೌಂಟರ್‌ ಗೆ ಬಲಿ

0

K Armstrong ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ನಿನ್ನೆ ಸಂಜೆ ಚೆನ್ನೈನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ ಬಂದೂಕಿನಿಂದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದಾಗ ಘಠನೆ ನಡೆದಿದ್ದು, ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ತಿರುವೆಂಗಡಮ್ ಅವರನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. “ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿರುವ ಅವರ ಮನೆಯ ಸಮೀಪ ಆರು ಮಂದಿ ಬೈಕ್‌ನಲ್ಲಿ ಬಂದವರು ಕೊಂದಿದ್ದರು.
ಆರ್ಮ್‌ಸ್ಟ್ರಾಂಗ್ ಅವರು ನಗರದ ಸೇಂಬಿಯಂ ಪ್ರದೇಶದಲ್ಲಿನ ಅವರ ಮನೆಯ ಬಳಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಆರು ಜನರು ಆತನ ಮೇಲೆ ಹಲ್ಲೆ ನಡೆಸಿ ನಂತರ ಪರಾರಿಯಾಗಿದ್ದಾರೆ. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾದ ಶಂಕಿತರಲ್ಲಿ ತಿರುವೆಂಗಡಮ್ ಕೂಡ ಒಬ್ಬನಾಗಿದ್ದ.. ವಕೀಲರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು 2006 ರಲ್ಲಿ ಚೆನ್ನೈ ಕಾರ್ಪೊರೇಷನ್ ಕೌನ್ಸಿಲ್‌ಗೆ ಆಯ್ಕೆಯಾದರು. ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸಿದ ನಂತರ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಆಹ್ವಾನಿಸಿದ ನಂತರ ಅವರು ಖ್ಯಾತಿಯನ್ನು ಗಳಿಸಿದರು.
K. Armstrong ದಾಳಿಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು
ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಾನು ರಾಜ್ಯ ಸರ್ಕಾರವನ್ನು ವಿಶೇಷವಾಗಿ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ವಿಶೇಷವಾಗಿ ದುರ್ಬಲ ವರ್ಗದವರು ಸುರಕ್ಷಿತವಾಗಿರಬೇಕು. ಸರ್ಕಾರ ಗಂಭೀರವಾಗಿರುತ್ತಿದ್ದರೆ ಆರೋಪಿಗಳನ್ನು ಬಂಧಿಸಲಾಗುತ್ತಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.