Wednesday, April 8, 2026
Wednesday, April 8, 2026
Home Blog Page 635

Rain In Hosanagara ಹೊಸನಗರ ತಾಲ್ಲೂಕಿನ ಕೆಂದಾಳದಿಂಬದಲ್ಲಿ ಮಳೆಗೆ ಮನೆ ಕುಸಿತ. ನಿವಾಸಿಗಳು ಪ್ರಾಣಾಪಾಯದಿಂದ ಪಾರು

0

Rain In Hosanagara ಹೊಸನಗರದಲ್ಲಿ ಸುರಿದ ಭಾರೀ ಮಳೆಗೆ ಇಡೀ ಮನೆ ಕುಸಿದಿದ್ದು, ಅದೃಷ್ಟವಶಾತ್ ಆ ಮನೆಯ ನಿವಾಸಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಳೂರು ಗ್ರಾಪಂ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪ ಕೆಂದಾಳದಿಂಬದಲ್ಲಿ ನಡೆದಿದೆ.

ರಾತ್ರಿ ಘಟನೆ ಈ ಘಟನೆ ನಡೆದಿದೆ. ಅಮರ್ ಸಿಂಗ್ ಬಿನ್ ಬಿಷ್ಣುಸಿಂಗ್ ರೇಖಾ ದಂಪತಿಗಳಿಗೆ ಸೇರಿದ ಮನೆಯಾಗಿದ್ದು, ರಾತ್ರಿ ಅಲ್ಲಿ ಉಳಿಯದೇ ಸಂಬಂಧಿಕರ ಮನೆಗೆ ತೆರಳಿದ್ದ ಕಾರಣ ಅನಾಹುತದಿಂದ ಪಾರಾಗಿದ್ದು ಬದುಕಿತು ಬಡಜೀವಗಳು ಎಂಬಂತಾಗಿದೆ.

ಇಡೀ ಮನೆ ಕುಸಿತಕ್ಕೆ ಒಳಗಾಗಿದ್ದು ಪಿಡಿಓ ಭರತ್, ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ :
ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗದ ಮಾವಿನಗದ್ದೆ (ಕಾಕೋಡು ಕ್ರಾಸ್) ರಸ್ತೆ ಪಕ್ಕದ ಧರೆ ಕುಸಿತ ಮತ್ತು ಹುಲಿಕಲ್ ಘಾಟಿಯ ಗುಡ್ಡ ಕುಸಿತ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಿಇ ಜಗದೀಶ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.

ಮುಂಜಾಗೃತ ಕ್ರಮಗಳ ಅಳವಡಿಕೆ ಮತ್ತು ಮಳೆಗಾಲದ ನಂತರ ಕಾಮಗಾರಿ ನಡೆಸಲು ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್, ಪ್ರದೀಪ್‌ಗೆ ಸೂಚಿಸಿದರು.
ಇಇ ಬಿ.ಎಸ್.ನಾಗೇಶ್, ಎಇಇ ಸಂತೋಷ್ ನಾಯ್ಕ್, ಎಇ ಕೊಟ್ರೇಶ್, ವಿಶ್ವಾಸ್ ಇದ್ದರು.
ಹುಲಿಕಲ್ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಿಇ ಜಗದೀಶ ನಾಯ್ಕ್ ಭೇಟಿ ನೀಡಿದರು.

ಮರ ಬಿದ್ದು ಸಂಚಾರ ಸ್ಥಗಿತ:
ಮಾಸ್ತಿಕಟ್ಟೆ – ಕುಂದಾಪುರ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು ೪ ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಮಳೆ ಸುರಿದಿದ್ದು ಗಾಳಿ ರಭಸಕ್ಕೆ ಮರ ಧರಾಶಾಹಿಯಾಗಿದೆ.

Rain In Hosanagara ಶಿವಮೊಗ್ಗ ಉಡುಪಿ ನಡುವಿನ ಪ್ರಮುಖ ಮಾರ್ಗ ಇದಾಗಿದೆ. ಬೆಳಗ್ಗಿನ ಜಾವ ಆದ ಕಾರಣ ವಾಹನ ದಟ್ಟಣೆ ಅಷ್ಟಾಗಿರಲಿಲ್ಲ. ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ ೩ ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ೭ ಗಂಟೆಗೆ ಮುಕ್ತವಾಯಿತು.
ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.

Linganamakki Dam ಲಿಂಗನಮಕ್ಕಿ ನೀರಿನ ಮಟ್ಟ 1801 ಅಡಿ. ಜಲಾಶಯ ತುಂಬುವ ನಿರೀಕ್ಷೆ.. ಹೆಚ್ಚುವರಿ ನೀರು ಬಿಡುವ ಸಾಧ್ಯತೆ

0

Linganamakki Dam ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1801 ಅಡಿ ತಲುಪಿದ್ದು ಶೇ.65 ರಷ್ಟು ನೀರು ಸಂಗ್ರಹವಾಗಿದ್ದು 60 ಸಾವಿರ ಕ್ಯೂಸೆಕ್ಸ್ ಗಿಂತಲೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಶೀಘ್ರದಲ್ಲಿ ಜಲಾಶಯ ತುಂಬುವ ಸಾಧ್ಯತೆ ಇದೆ.

ಅಣೇಕಟ್ಟು ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲೂ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಗಲ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಮೊದಲ ಮುನ್ನೆಚ್ಚರಿಕೆಯ ಸೂಚನೆ ನೀಡಿದ್ದಾರೆ.

Linganamakki Dam ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ.

Supreme Court ಶಂಭುಗಡಿ ಬ್ಯಾರಿಕೇಡ್ ಮುಕ್ತಮಾಡಲು ಸುಪ್ರೀಂ ನೀಡಿದ್ದ ಆದೇಶ‌ ಪ್ರಶ್ನಿಸಿ ಹರಿಯಾಣ ಸರ್ಕಾರ ಮನವಿ

0

Supreme Court ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆಯಿದೆ; ಅವರನ್ನು ತಲುಪಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ಮತ್ತು ದಿಗ್ಬಂಧನಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
“ರೈತರನ್ನು ತಲುಪಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ದೆಹಲಿಗೆ ಏಕೆ ಬರಲು ಬಯಸುತ್ತಾರೆ? ನೀವು ಇಲ್ಲಿಂದ ಮಂತ್ರಿಗಳನ್ನು ಕಳುಹಿಸುತ್ತಿದ್ದೀರಿ ಮತ್ತು ಅವರ ಉತ್ತಮ ಉದ್ದೇಶದ ಹೊರತಾಗಿಯೂ ವಿಶ್ವಾಸದ ಕೊರತೆಯಿದೆ. ನೀವು ಅವರ ಸ್ಥಳೀಯ ಆಸಕ್ತಿ ಮತ್ತು ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕೇವಲ ಸ್ವಾರ್ಥದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಅವರು ಭಾವಿಸುತ್ತಾರೆ. ನೀವು ತಟಸ್ಥ ನಿಲುವಿನ ವ್ಯಕ್ತಿಗಳನ್ನು ಸಂದಾಣಕ್ಕೆ ಏಕೆ ಕಳುಹಿಸಬಾರದು” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಪ್ರಶ್ನಿಸಿದೆ.

ಹರ್ಯಾಣ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ದೆಹಲಿಗೆ ರೈತರ ಪಾದಯಾತ್ರೆಯಿಂದ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಟ್ಯಾಂಕ್‌ಗಳೊಂದಿಗೆ ಬರುವುದು, ಜೆಸಿಬಿಗಳು ಘರ್ಷಣೆಗೆ ಕಾರಣವಾಗುತ್ತವೆ. ಈ ಮೊದಲು, ಇದು ಕೃಷಿ ಕಾನೂನಿನ ನೆಪದಲ್ಲಿತ್ತು” ಎಂದು ಅವರು ಹೇಳಿದರು.

ಒಂದು ವಾರದೊಳಗೆ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ಆದೇಶವನ್ನು ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಲು ಹಲವಾರು ರೈತರ ಸಂಘಟನೆಗಳು ದೆಹಲಿಗೆ ಮೆರವಣಿಗೆಯನ್ನು ಘೋಷಿಸಿದ ನಂತರ ಈ ಫೆಬ್ರವರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು.

Supreme Court ಗಡಿ ದಾಟುವಾಗ ಪ್ರತಿಭಟನಾ ನಿರತ ರೈತರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆಗಳು ನಡೆದವು. “ಹೆದ್ದಾರಿಯನ್ನು ದಿನಗಟ್ಟಲೆ ತಡೆಯುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹರ್ಯಾಣಕ್ಕೆ ಹೈಕೋರ್ಟ್ ನಿರ್ದೇಶನದ ಮೇಲೆ ವಿರಾಮವನ್ನು ಮಾತ್ರ ಕೋರುತ್ತಿದ್ದೇನೆ ಎಂದು ಸಾಲಿಸಿಟರ್ ಜನರಲ್ ಹೇಳಿದರು. “ಒಂದು ಕಲ್ಯಾಣ ರಾಜ್ಯವಾಗಿದ್ದರೂ ಸಹ, ಸೂಕ್ಷ್ಮ ವಿಷಯಗಳಲ್ಲಿ ವ್ಯವಹರಿಸುವಾಗ ನಾವು ಅಹಿತಕರ ವಿಷಯಗಳನ್ನು ಪಡೆಯಲು ಸಾಧ್ಯವಿಲ್ಲ.

ಇವುಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ

Mathura Paradise ಉದ್ದಿಮೆ ಕನಸುಗಾರ ಗೋಪಿನಾಥ್ ಅವರ ಮಥುರಾ ಪ್ಯಾರಡೈಸ್-25. ಬೆಳ್ಳಿಹಬ್ಬದ ವರ್ಷ – ವಿಶೇಷ

0

Mathura Paradise ಮಥುರ ಪ್ಯಾರಡೈಸ್ ರಜತೋತ್ಸವ ಪ್ರಯುಕ್ತ ವಷವಿಡೀಕಾರ್ಯಕ್ರಮ
೧೯೯೧ರಲ್ಲಿ ಪ್ರಾಂಭವಾದ ಮಥುರ ಪ್ಯಾರಡೈಸ್ ನಗರದಲ್ಲಿ ಮೊದಲ ಬಾರಿಗೆ ಹಾಲ್ ಬಾಡಿಗೆ ಇಲ್ಲದೆ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡುವ ಸೌಲಭ್ಯ ಪ್ರಾರಂಭಿಸಿದವರು. ಅಂದು ಒಂದು ಊಟದ ಬೆಲೆ ೩೦ ರೂಪಾಯಿಗಳು. ಕೇವಲ ಮೂರು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನೂರು ಜನರಿಗೆ ಕಾರ್ಯಕ್ರಮ ಏರ್ಪಡಿಸುವ ಸುಲಭ ವಿಧಾನ ಹಲವರಿಗೆ ವರದಾನವಾಯಿತು. ನಾಮಕರಣ, ಸೀಮಂತ, ಹುಟ್ಟುಹಬ್ಬ, ತೊಟ್ಟಿಲ ಶಾಸ್ತ್ರದಿಂದ ಹಿಡಿದು ವಿವಾಹ ಮಹೋತ್ಸವದವರೆಗೂ ಕಾರ್ಯಕ್ರಮಗಳು ಸುಲಲಿತವಾಗಿ ನಡೆದ ತೃಪ್ತಿ ಜನ ಮಾನಸದಲ್ಲಿ ಬೆಳೆಸಿತು. ಇಂತಹ ಸಾರ್ವಜನಿಕರ ಸೇವೆಯನ್ನು ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಸ್ಥಾಪಿಸಿ ಜನ ಸಾಮಾನ್ಯರಿಗಾಗಿ ಹೋಟೆಲ್ ಉದ್ಯಮದಲ್ಲಿ ದೊಡ್ಡದೊಂದು ಕನಸು ಕಂಡು, ನನಸು ಮಾಡಬಹುದೆಂದು ಹಲವರಿಗೆ ಸ್ಫೂರ್ತಿಯಾಗಿ, ಮಾದರಿಯಾಗಿ ನಿಂತವರು ಶ್ರೀ ಎನ್. ಗೋಪಿನಾಥ್.
ಈಗ ಮಥುರ ಪ್ಯಾರಡೈಸ್ ಪ್ರಾರಂಭವಾಗಿ ೨೫ ವರ್ಷಗಳು ತುಂಬಿವೆ. ಮಥುರ ಪ್ಯಾರಡೈಸ್ ಅಂದರೆ ತಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಗೋಪಿ, ಮಥುರ ಪ್ಯಾರಡೈಸ್ ಹಲವಾರು ಸಂಘ ಸಂಸ್ಥೆಗಳಿಗೆ ತವರುಮನೆ ಇದ್ದಂತೆ. ಇಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಸಂಘ-ಸAಸ್ಥೆಯವರು ಸಭೆ ಸಮಾರಂಭ ನಡೆಸುತ್ತಾರೆ. ಪತ್ರಿಕಾ ಗೋಷ್ಠಿಯನ್ನು ಕೂಡ ಇಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಗೋಪಿಯ ಉಪಚಾರ ಸ್ನೇಹ ಮನೋಭಾವನೆ ಸಲಹೆ ಸಹಕಾರ ಯಾರೊಬ್ಬರೂ ಮರೆಯುವಂತಿಲ್ಲ ಎಂದು ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿಯ ಅಧ್ಯಕ್ಷ ವಸಂತ್ ಹೋಬಳಿದಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅವರ ಈ ಅಭಿಮಾನದಿಂದ ನಗರದ ಸುಮಾರು ೫೦ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಒಂದು ವರ್ಷಕಾಲ ಸ್ವಯಂಪ್ರೇರಿತವಾಗಿ ‘ಮಥುರ ಪ್ಯಾರಡೈಸ್ ರಜತೋತ್ಸವ’ವನ್ನು ಅಚರಿಸಲು ಮುಂದಾಗಿದೆ. ಒಂದು ವರ್ಷದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದು ಅದರಲ್ಲೂ ವಿಶೇಷವಾಗಿ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಆಯಾ ಸಂಘ ಸಂಸ್ಥೆಯವರೇ ಭರಿಸಲು ತೀರ್ಮಾನಿಸಲಾಗಿದೆ. ಇದೊಂದು ಸ್ವಾಭಿಮಾನದ ರಜತೋತ್ಸವ ಕಾರ್ಯಕ್ರಮವಾಗಲಿದೆ.
ಶ್ರೀ ಎನ್. ಗೋಪಿನಾಥ್ ರವರು ಸಮಾಜಕ್ಕೆ ನಿಡಿದ ಕೊಡುಗೆಗಳು.
Mathura Paradise ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟುಕೊAಡು ಹಲವು ವಿನೂತನ ಯೋಜನೆಗಳ ಮೂಲಕ ಕಾರ್ಯಚಟುವಟಿಕೆ ನಡೆಸಲು ನಮ್ಮ ಕನಸಿನ ಶಿವಮೊಗ್ಗ ತಂಡವನ್ನು ಕಟ್ಟಿಕೊಂಡು ಯುವ ಉದ್ದಿಮೆಗಳ ಕನಸುಗಳಿಗೆ ನೀರೆರೆಯಲು, ಪೋಷಿಸಲು ಮತ್ತು ಅದಕ್ಕೊಂದು ಸ್ಪಷ್ಟ ರೂಪ ನೀಡಲು ಮುಂದಾಗಿರುವ ಶ್ರೀ ಎನ್. ಗೋಪಿನಾಥ್‌ರವರು ೧೯೯೦ರಲ್ಲಿ ಹೋಟೆಲ್ ಮಥುರ ಪ್ಯಾರಡೈಸ್ ಆರಂಭಿಸಿ ಇಂದಿನವರೆಗೂ ಉದ್ಯಮದ ಜೊತೆ ಜೊತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಇವರು ಶಿವಮೊಗ್ಗ ನಗರಕ್ಕೆ ಮೆಡಿಕಲ್ ಕಾಲೇಜು ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಹಾಗೆಯೇ ತುಂಗಾ ನದಿಯ ಸ್ವಚ್ಛತೆಗಾಗಿ ೨೦೦೦ ದಿಂದ ಇಂದಿನವರೆಗೂ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದಾರೆ. ಇವರ ಪ್ರಮುಖ ಕನಸುಗಳು ಹಸಿರಿನ ಶಿವಮೊಗ್ಗ, ನಮ್ಮೂರು ನಮಗೆಷ್ಟು ಗೊತ್ತು, ಮರಳಿ ಶಿವಮೊಗ್ಗಕ್ಕೆ ಬನ್ನಿ.. ಇತ್ಯಾದಿ.
‘ನಮ್ಮ ಕನಸಿನ ಸಂಸ್ಥೆ’ಯನ್ನು ಸ್ಥಾಪಿಸಿ ಅದರ ಮೂಲಕ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ (ರಿ) ಸ್ಥಾಪಿಸಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಚಾರಣ, ಸೈಕ್ಲಿಂಗ್, ಬೋಟಿಂಗ್, ಹಿಮಾಲಯ ಪರ್ವತಾರೋಹಣ, ರಾಕ್ ಕ್ಲೆöÊಂಬಿAಗ್ ನಂತಹ ಸಾಹಸ ಚಟುವಟಿಕೆಗಳನ್ನು ಪರಿಚಯಿಸಿದ್ದಾರೆ.
ಶಿವಮೊಗ್ಗ ಸೈಕಲ್ ಕ್ಲಬ್ (ರಿ). ಈ ಸಂಸ್ಥೆಯನ್ನು ಪ್ರಾರಂಭಿಸಿ ನಗರದ ನೂರಾರು ಜನ ಇಂದು ಪ್ರತಿದಿನ ಸೈಕಲ್ ಬಳಸುತ್ತಿರುವುದು ಶಿವಮೊಗ್ಗ ನಗರದಲ್ಲಿ ಗೋಚರಿಸುತ್ತಿದೆ. ಈ ಕ್ಲಬ್ ಈಗಾಗಲೇ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯವಾಗಿದೆ.
‘ಶಿವಮೊಗ್ಗ ಬೈಕ್ ಕ್ಲಬ್’ ಸಂಸ್ಥೆಯನ್ನು ಪ್ರಾರಂಬಿಸಿ ಈ ಕ್ಲಬ್ ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿ, ಪಶ್ಚಿಮದಿಂದ ಪೂರ್ವ, ಭಾರತ – ನೇಪಾಳ ಬೈಕ್ ರ‍್ಯಾಲಿಯನ್ನು ಯಶಸ್ವಿಯಾಗಿ ನೆರವೇರಿಸಿರುತ್ತದೆ.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ (ರಿ) ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರಚಾರ, ಮಾರ್ಗದರ್ಶಕರಿಗೆ ತರಬೇತಿ, ಪ್ರವಾಸದ ಚಟುವಟಿಕೆಗಳನ್ನು ನಡೆಸುತ್ತಿದೆ.
೨೦೨೨-೨೦೨೪ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿವಮೊಗ್ಗ ನಗರದ ಅಭಿವೃದ್ಧಿ ಬಗ್ಗೆ ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಎನ್. ಗೋಪಿನಾಥ್‌ರವರು ಇನ್ನೂ ಹಲವಾರು ಸಂಸ್ಥೆಗಳ ಪೋಷಕರಾಗಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸಂಯೋಜಕ ಅ.ನಾ.ವಿಜಯೇಂದ್ರ ರಾವ್, ಜಿ.ವಿಜಯಕುಮಾರ್. ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಶೆಟ್ಟಿ. ನಿರ್ದೇಶಕರಾದ ಅಚ್ಚುತ್ ರಾವ್. ಉಪಸ್ಥಿತರಿದ್ದರು.

District Co-operative Society ಗಿರವಿ ವರ್ತಕರು ತಮ್ಮ ಪರವಾನಗಿಯನ್ನ ಕಡ್ಡಾಯ ಪ್ರದರ್ಶಿಸಬೇಕು

0

District Co-operative Society ಶಿವಮೊಗ್ಗ ಜಿಲ್ಲೆಯಲ್ಲಿ ಲೇವಾದೇವಿ ನಡೆಸುತ್ತಿರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆಯನ್ನು ಕಡ್ಡಾಯವಾಗಿ ಪ್ರದರ್ಶಿಸತಕ್ಕದ್ದು.
ಕರ್ನಾಟಕ ಲೇವಾದೇವಿ ಅಧಿನಿಯಮ ೧೯೬೧ ರ ಪ್ರಕರಣ ೨೮ ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿದರ ಭದ್ರತಾ ಸಾಲಗಳಿಗೆ ವಾರ್ಷಿಕ ಶೇ.೧೪ ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ.೧೬ ರಷ್ಟಯ ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು. ಸರ್ಕಾರವು District Co-operative Society ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ ಕಂಡುಬದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸದರಿಯವರ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

Minorities Welfare Haj and Waqf Department ಮದರಸಗಳಿಗೆ ಅನುದಾನ ಪಡೆಯಲು ಪ್ರಸ್ತಾವನೆಗಳಿಗೆ ಆಹ್ವಾನ

0

Minorities Welfare Haj and Waqf Department 2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ರಾಜ್ಯದಲ್ಲಿ ನಡೆಸಲಾಗುತ್ತಿರುವ ಮುಸ್ಲಿಂ ಸಮುದಾಯದ ನೊಂದಾಯಿತ ಮದರಸಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 2 ಮದರಸಗಳನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಅಧಿಕಾರಿಗಳ ಅನುಮೋದನೆಯೊಂದಿಗೆ ಅಯ್ಕೆ ಮಾಡಲಾಗುತ್ತಿದ್ದು, ಅರ್ಹ ಮದರಸಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ.
ಸ್ವಂತ ಕಟ್ಟಡವನ್ನು ಹೊಂದಿರುವ ವಕ್ಫ್ ಮದರಸದಲ್ಲಿ ಕನಿಷ್ಠ 10 ಮಕ್ಕಳ ದಾಖಲಾತಿ ಸಂಖ್ಯೆಯಿರಬೇಕು. ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಹಾಗೂ ಮೂಲಭೂತ ಸೌಕರ್ಯಗಳ ಅತಿ ಅಗತ್ಯವಿರುವ ಮದರಸಗಳನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಇದೇ ಉದ್ದೇಶಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದ ಮದರಸಗಳನ್ನು ಪರಿಗಣಿಸುವುದಿಲ್ಲ. ಅರ್ಹ ಮದರಸಗಳಿಗೆ ಒಂದು ಬಾರಿಗೆ ಗರಿಷ್ಠ ರೂ. 5.00 ಲಕ್ಷಗಳ ಅನುದಾನ ಮಂಜೂರು ಮಾಡಲಾಗುವುದು.
Minorities Welfare Haj and Waqf Department ಆಸಕ್ತ ಮದರಸ ಸಂಸ್ಥೆಗಳು ಅರ್ಜಿ ನಮೂನೆಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 30ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.

Chamber Of Commerce ಗಣೇಶ ಎಂ ಅಂಗಡಿ ಔಷಧ ವ್ಯಾಪಾರಿಗಳ ಸಂಘದ ನಿರ್ದೇಶಕರಾಗಿ ಆಯ್ಕೆ.ಅಭಿನಂದಿಸಿದ ಎನ್.ಗೋಪಿನಾಥ್

0

Chamber Of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರಾದ ಶ್ರೀ ಗಣೇಶ ಎಂ. ಅಂಗಡಿಯವರು ಕಳೆದ ಭಾನುವಾರ ಶಿವಮೊಗ್ಗ ಜಿಲ್ಲಾ ಔಷದ ವ್ಯಾಪಾರಿಗಳ ಸಂಘದ ನಡೆದ ಚುನಾವಣೆಯಲ್ಲಿ ಸಮರ್ಥ ತಂಡದಿAದ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ. ವಾಣ ಜ್ಯ ಸಂಘದ ನಿರ್ದೇಶಕರ ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್ ಕಾರ್ಯದರ್ಶಿ ವಸಂತ್

Chamber Of Commerce ಹೋಬಳೀದಾರ್, ಜಂಟೀ ಕಾರ್ಯದರ್ಶಿ ಜಿ. ವಿಜಯಕುಮಾರ್ ಹಾಗೂ ನಿರ್ದೇಶಕರುಗಳಾದ ಎಸ್.ಎಸ್. ಉದಯಕುಮಾರ್, ಈ ಪರಮೇಶ್ವರ, ಕೆ.ಎಸ್. ಸುಕುಮಾರ್, ಮರಿಸ್ವಾಮಿ, ಎಂ.ಎ ರಮೇಶ್ ಹೆಗಡೆ, ಹಾಗೂ ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪರವರು ಅಭಿನಂದಿಸಿದರು.

Kollur Ghat ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿ.ಕೊಲ್ಲೂರು ಘಾಟಿಯಲ್ಲಿ ಉರುಳಿದ ಶಾಲಾ ಬಸ್

0

Kollur Ghat ಕೊಲ್ಲೂರು ಘಾಟಿಯಲ್ಲಿ ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ ಖಾಸಗಿ ಬಸ್ ಒಂದು ರಸ್ತೆಯ ಪಕ್ಕಕ್ಕೆ ಉರುಳಿದೆ. ವಿದ್ಯಾರ್ಥಿಗಳೇ ಹೆಚ್ಚಿದ್ದ ಬಸ್‌ನಲ್ಲಿ ಯಾವುದೇ ಸಾವು ನೋವುಗಳಾಗದಿದ್ದರೂ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ಶಿವಮೊಗ್ಗದಿಂದ ಸಾಗರದ ಮೂಲಕ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ನಲ್ಲಿ ೮೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಘಾಟಿಯಲ್ಲಿ ಪ್ರಯಾಣಿಸುವಾಗ ಅವಘಡ ಸಂಭವಿಸಿದೆ. ಶಾಲಾ ಮಕ್ಕಳಿಗೆ ಗಾಯಗಳಾಗಿವೆ. ಘಟನೆಗೆ ಬ್ರೇಕ್ ಫೇಲ್ ಎಂದು ಹೇಳಲಾಗುತ್ತಿದೆ. ಆದರೆ ಅಪಘಾತಕ್ಕೆ ಟಯರ್ ಗಳು ಸವದಿದ್ದರೂ ಗಾಡಿ Kollur Ghat ಚಲಾಯಿಸಿದ ಪರಿಣಾಮ ಘಟನೆ ನಡೆದಿರುವುದಾಗಿ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಟಯರ್ ಸವದಿರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರೂ ಚಾಲಕ ವಾಹನ ಚಲಾಯಿಸಿದ ಪರಿಣಾಮ ಘಟನೆ ನಡೆದಿದೆ ಎಂದು ಸಾಗರ ತಾಲೂಕಿನ ತುಮರಿ ಭಾಗದ ಸಾಮಾಜಿಕ ಹೋರಾಟಗಾರರೊಬ್ಬರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಎರಡು ಮೂರು ತಿಂಗಳಿಂದ ವಾಹನದ ನಿರ್ವಹಣೆ ಸರಿಯಲ್ಲದ ಕಾರಣ ಒಂದೊಂದು ಸಮಸ್ಯೆ ತಲೆದೋರಿತ್ತು. ಇದರ ಮುಂದುವರೆದ ಭಾಗ ಎಂದು ಸಹ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಬಗ್ಗೆ ವೈರಲ್ ಮಾಡಲಾಗಿದೆ

Kathmandu’s Tribhuvan Airport ನೇಪಾಳದ ಕಠ್ಮಂಡುವಿನಲ್ಲಿ ವಿಮಾನ ಅಫಘಾತ.

0

Kathmandu’s Tribhuvan Airport ನೇಪಾಳದ ಕಠ್ಮಂಡುವಿನ ತ್ರಿಭುವನ್ ವಿಮಾನ ನಿಲ್ದಾಣದಿಂದ‌ ಪೋಖರಾಗೆ ಹೊರಟಿದ್ದ ವಿಮಾನ
ಟೇಕ್ ಆಫ್ ಆಗುವಷ್ಟರಲ್ಲೇ ಅಪಘಾತಕ್ಕೀಡಾಗಿದೆ.

Kathmandu’s Tribhuvan Airport ಇಂದು ಬೆಳಿಗ್ಗೆ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿ ಚಾಲಕ ಸಿಬ್ಬಂದಿಯೂ ಸೇರಿ 19 ಮಂದಿ ಇದ್ದರೆಂದು ಹೇಳಲಾಗಿದೆ.
ತಕ್ಷಣ ಜೀವ ಸಂರಕ್ಷಿಸುವ ,ಪರಿಹಾರ ಕಾರ್ಯ ಕ್ಷಿಪ್ರವಾಗಿ ನಡೆಯುತ್ತಿದೆ.
ಪೈಲಟ್ ಕ್ಯಾಪ್ಟನ್ ಶಾಕ್ಯಾ ಉಳಿದಿದ್ದಾರೆ. ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ. ಈವರೆಗೆ
ಹದಿನೆಂಟೂ ದೇಹಗಳನ್ನ ಹೊರತೆಗೆಯಲಾಗಿದೆ.
ಅಫಘಾತದ ವಿವರ ಇತ್ಯಾದಿ ಪೂರ್ಣ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ಪುರಸ್ಕಾರಕ್ಕಾಗಿ ವಿವಿಧ ಪ್ರಕಾರಗಳ ಕನ್ನಡ ಕೃತಿಗಳ ಲೇಖಕರಿಂದ ಅರ್ಜಿ ಆಹ್ವಾನ

0

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.
2023ನೇ ಅವಧಿಯಲ್ಲಿ ಪ್ರಕಟವಾದ ಕಾವ್ಯ, ನವಕವಿಗಳ ಪ್ರಥಮ ಕವನಸಂಕಲನ, ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ/ಅಂಕಣಬರಹ, ಅನುವಾದ-1 ಮತ್ತು 2, ಲೇಖಕರ ಮೊದಲ ಸ್ವತಂತ್ರಕೃತಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ, ದಾಸ ಸಾಹಿತ್ಯ, ಸಂಕೀರ್ಣ ಕೃತಿಗಳ ತಲಾ 4 ಪ್ರತಿಗಳನ್ನು ರಿಜಿಸ್ಟಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-02 ಇವರಿಗೆ ರಿಜಿಸ್ಟರ್ ಅಂಚೆ/ ಕೊರಿಯರ್ ಮೂಲಕ ಅಥವಾ ಖುದ್ದಾಗಿ ಆಗಸ್ಟ್ 31 ರೊಳಗಾಗಿ ಸಲ್ಲಿಸುವುದು. ಕಳುಹಿಸುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯದ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು.
Karnataka Sahitya Academy ಮರುಮುದ್ರಣವಾದ ಪುಸ್ತಕಗಳು, ಪಿಹೆಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ಈಗಾಗಲೇ ಕ.ಸಾ.ಅ.ಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು, ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ ಮೂರು ವರ್ಷದವರೆಗೆ ಪರಿಗಣಿಸುವುದಿಲ್ಲ. ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂ.ಸಂ.: 080-22211730/22106460 ಹಾಗೂ ವೆಬ್‌ಸೈಟ್ www.sahithyaacademy.karnataka.gov.in ಗಳನ್ನು ಸಂಪರ್ಕಿಸುವುದು.