Wednesday, April 8, 2026
Wednesday, April 8, 2026
Home Blog Page 634

Department of Animal Husbandry and Fisheries ರಾಜಾಸ್ಥಾನ್ ರಾಜ್ಯದಲ್ಲಿ ಬೀಡಾಡಿ‌ ದನಗಳಿಗೆ ಹೊಸಪದ” ನಿರಾಶ್ರಿತ್” ಎಂಬ ಹೆಸರಿನಲ್ಲಿ ದಾಖಲು

0

Department of Animal Husbandry and Fisheries ರಾಜಸ್ಥಾನದಲ್ಲಿ ಇನ್ನು ಮುಂದೆ ಹಸುಗಳಿಗೆ ‘ಬಿಡಾಡಿ ದನ’ ಎಂಬ ಪದವನ್ನು ಬಳಸುವಂತಿಲ್ಲ ಎಂದು ಪಶುಸಂಗೋಪನೆ ಮತ್ತು ಡೈರಿ ಸಚಿವ ಜೋರಾರಾಮ್ ಕುಮಾವತ್ ಅವರು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅನುದಾನದ ಬೇಡಿಕೆಯ ಮೇಲಿನ ಚರ್ಚೆಗೆ ಉತ್ತರಿಸಿದ ಕುಮಾವತ್ ಅವರು, ಇನ್ನು ಮುಂದೆ ಬಿಡಾಡಿ ದನಗಳಿಗೆ ‘ನಿರಾಶ್ರಿತ್’ (ನಿರ್ಗತಿಕ) ಪದವನ್ನು ಬಳಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಮೌಲ್ಯಯುತ ಪಶು ಸಂಪತ್ತನ್ನು ಅಭಿವೃದ್ಧಿಪಡಿಸಿ ಜಾನುವಾರುಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಪಶುಪಾಲಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

Department of Animal Husbandry and Fisheries ಗೋವು ಮತ್ತು ಗೂಳಿಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಸರ್ಕಾರ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಚರ್ಚೆಯ ನಂತರ ವಿಧಾನಸಭೆಯು ಧ್ವನಿ ಮತದ ಮೂಲಕ ಇಲಾಖೆಯ ಅನುದಾನ ಬೇಡಿಕೆಗಳನ್ನು ಅಂಗೀಕರಿಸಿತು.

Forest Department ಕಿರುಗುಣಸೆ ಗ್ರಾಮದಲ್ಲಿ ಬೇಲಿ ಉರುಳಿಗೆ ಚಿರತೆ ಬಲಿ

0

Forest Department ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥರೊಬ್ಬರು ಚಿರತೆ ಉರುಳಿಗೆ ಸಿಲುಕಿ ಕೂಗುವುದನ್ನು ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶಿವಮೊಗ್ಗದಿಂದ ಅರವಳಿಕೆ ತಜ್ಞರು ಆಗಮಿಸಿ ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡುವಷ್ಟರಲ್ಲಿ ಚಿರತೆ ಮೃತಪಟ್ಟಿದೆ.

Forest Department ಜಮೀನಿನೊಂದರ ತಂತಿ ಬೇಲಿಗೆ ಹಂದಿ‌ ಹಿಡಿಯಲು ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು 4 ವರ್ಷದ ಗಂಡು ಚಿರತೆ ಮೃತಪಟ್ಟಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್. ಪರಶುರಾಮ್, ಉಪವಲಯ ಅರಣಯಾಧಿಕಾರಿಗಳಾದ ಜಿ. ಪರಶುರಾಮ್, ರಾಮಪ್ಪ, ಗಸ್ತು ಅರಣ್ಯಪಾಲಕರಾದ ಹರೀಶ್, ಆನಂದ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಈ ಸಂಬಂಧ ಜಮೀನಿನ ಮಾಲಿಕ ರಾಜು ಸಿ. ಕಳತ್ತೂರು ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮೃತ ಚಿರತೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಯಿತು.

KPTCL ಶಿಕಾರಿಪುರ ತಾಲ್ಲೂಕು ಬನ್ನೂರು ವಿದ್ಯುತ್ ಕೇಂದ್ರ ಕಾಮಗಾರಿ ಸಂಬಂಧಿಸಿದಂತೆ ಭೂನಷ್ಟ ಬಾಧಿತರ ಸಭೆ

0

KPTCL ಕೆಪಿಟಿಸಿಎಲ್ 1*10 ಎಂವಿಎ, 110/11 ಕೆವಿ ಬನ್ನೂರು ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಸಂಬಂಧಿಸಿದಂತೆ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಸಂಡ, ಆಮಟೇಕೊಪ್ಪ, ಕೋಟಿಪುರ, ಚುಂಚನಕೊಪ್ಪ, ಕಪ್ಪನಹಳ್ಳಿ, ಹೋತನಕಟ್ಟೆ, ರಾಂಪುರ, ಬನ್ನೂರು ಗ್ರಾಮಗಳ ವಿವಿಧ ಜಮೀನುಗಳಲ್ಲಿ 110ಕೆವಿ ವಿದ್ಯುತ್ ಮಾರ್ಗವು ಈ ಕೆಳಗೆ ತಿಳಿಸಿರುವ ಸರ್ವೆ ನಂ. ಜಮೀನುಗಳಲ್ಲಿ ಹಾದು ಹೋಗುವುದರಿಂದ, ಸಂಬAಧಪಟ್ಟ ಭೂನಷ್ಟ ಭಾದಿತರಿಗೆ ಗೋಪುರದ ತಳಪಾಯ ಹಾಗೂ 110ಕೆವಿ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲ್ಲಿ ದಿ:30.07.2024 ಬೆಳಗ್ಗೆ 11:00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದ್ದು, ಈ ಸಭೆಗೆ ಗ್ರಾಮಗಳ ಭೂನಷ್ಟ ಭಾದಿತರು ತಪ್ಪದೆ ಹಾಜರಾಗುವಂತೆ ಬೃ.ಕಾ.ವಿ, ಕವಿಪ್ರನಿನಿ, ಶಿವಮೊಗ್ಗ.. ಕಾರ್ಯನಿರ್ವಾಹಕ ಇಂಜಿನಿಯರ್ (ವಿ),ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಡಗ್ರಾಮದ ಸರ್ವೆ ನಂ.233, 232, 231, 5/1, 5/2, 6, 7, 8, 10, 11, 12, 14, 18, 19, 20/1, 20/2, 22, 27/1, 30, 31, 43, 44, 45, 60, 59, 58, 96, 87.
ಹರಗವಳ್ಳಿಗ್ರಾಮದ ಸರ್ವೆ ನಂ. 57.
KPTCL ಆಮಟೇಕೊಪ್ಪಗ್ರಾಮದ ಸರ್ವೆ ನಂ.91, 104, 106, 110/1, 110/2, 109/1, 109/2, 109/3, 108/2, 127, 128, 129/1, 129/3, 129/4, 137, 139/1, 139/2, 138, 142/1, 142/2, 143/1, 143/2, 144, 145/1, 145/2, 146/1, 146/2, 149, 148.
ಕೋಟಿಪುರಗ್ರಾಮದ ಸರ್ವೆ ನಂ. 125, 124, 72, 113/1, 113/3, 113/4, 112, 111,7/1, 7/3, 7/4,4/1, 4/3, 4/4, 4/6, 4/7, 4/9, 4/10, 106/1, 103, 98/1, 98/3, 98/4, 98/6, 99, 102, 100, 101/1, 101/3, 101/4, 96, 19/1, 19/2, 21, 20/1, 20/3, 20/4, 20/5, 24/1, 24/2, 25/1, 25/2, 53, 54/1, 54/2, 56, 57/1, 57/2, 58/1, 58/3, 59/2, 49, 50, 51, 52, 37, 38, 67/1, 45/1, 45/2, 39/1, 39/2, 39/3, 44, 43/1, 43/3, 43/4, 42/1.
ಚುಂಚನಕೊಪ್ಪಗ್ರಾಮದ ಸರ್ವೆ ನಂ.8/8, 8/10, 8/11, 8/13, 8/16, 8/7, 8/3, 8/4, 8/6, 8/9, 8/5, 9, 4/1, 23, 24, 26, 27, 28/1, 28/2, 29, 30, 31/1, 31/2, 33/2, 34/2, 35/1, 35/3, 39, 36/1, 36/2, 39, 38, 37.
ಹೋತನಕಟ್ಟೆಗ್ರಾಮದ ಸರ್ವೆ ನಂ. 14, 15/1, 15/2, 9/, 18/2, 6/1, 20/4, 20/5, 21/1, 21/2, 26, 23/1, 23, 25/1, 25/2, 33, 32/1, 32/2, 34/2, 3/1, 38/2, 39/2, 40/1, 40/2, 41/1, 41/2. 12/2, 13/1, 12/3, 33/1, 33/2, 34, 10/1, 4/1, 4/2, 6/1, 6/3, 6/4, 6/6, 6/7, 6/8, 7, 8/3, 9/1, 9/2, 10, 11/1, 11/2, 12/1.
ರಾಂಪುರಗ್ರಾಮದ ಸರ್ವೆ ನಂ.2, 3/4, 3/5, 3/3, 3/2, 3/6, 4, 5, 6/1, 6/2, 17/1, 17/2, 8/1, 8/3, 11.
ಬನ್ನೂರುಗ್ರಾಮದ ಸರ್ವೆ ನಂ.35, 1, 126, 125.

ICAR Agricultural Science Centre shivamogga ತೋಟಗಾರಿಕಾ ಬೆಳೆ ನರ್ಸರಿ ನಿರ್ವಹಣೆ ಬಗ್ಗೆ ತರಬೇತಿ

0


ICAR Agricultural Science Centre shivamogga ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇಲ್ಲಿ ದಿನಾಂಕ: 12.08.2024 ರಿಂದ 14.08.2024 ರವರೆಗೆ ತೋಟಗಾರಿಕೆ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ 18 ರಿಂದ 36 ವರ್ಷದ ಯುವಕ, ಯುವತಿಯರು/ರೈತರು ಭಾಗವಹಿಸಬಹುದು.
ತರಬೇತಿ ವೇಳೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಮೊದಲು ನೋಂದಾಯಿಸಿದ 25 ಅರ್ಹ ಅಭ್ಯರ್ಥಿಗಳಿಗೆ ಅವಕಾಶವಿದ್ದು, ICAR Agricultural Science Centre shivamogga ತರಬೇತಿ ಕಾರ್ಯಕ್ರಮಕ್ಕೆ ರೈತ ಬಾಂಧವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ ತರತಕ್ಕದ್ದು.
ಆಸಕ್ತ ರೈತರು ಡಾ. ಭರತ್ ಕುಮಾರ್ ಎಂ. ವಿ., ವಿಜ್ಞಾನಿ (ತೋಟಗಾರಿಕೆÀ), ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ, ಮೊಬೈಲ್ ಸಂಖ್ಯೆ: ೮೨೭೭೨೦೬೫೪೯ ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ

Landslide in Shirur ಶಿರೂರು ಗುಡ್ಡ ಕುಸಿತಕ್ಕೆ ಸಿಕ್ಕ ಟ್ರಕ್ ಕಡೆಗೂ ಪತ್ತೆ. ಹೊರಗೆ ತರುವ ಪ್ರಯತ್ನ ಪ್ರಗತಿಯಲ್ಲಿದೆ

0

Landslide in Shirur ಶಿರೂರಿನಲ್ಲಿ ಭೂಕುಸಿತದಿಂದ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಶೋಧ ನಡೆಸುತ್ತಿರುವ ಮಧ್ಯೆ, ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಖಚಿತಪಡಿಸಿದೆ.

ರಕ್ಷಣಾ ಕಾರ್ಯಾಚರಣೆಗಳು ನಿರ್ಣಾಯಕ ಹಂತವನ್ನು ತಲುಪಿದ್ದು, ನೀರಿನಲ್ಲಿ ಮುಳುಗಿರುವ ಟ್ರಕ್ ಅನ್ನು ಈಗ ಗುರುತಿಸಲಾಗಿದೆ ಮತ್ತು ಅದನ್ನು ಹೊರಗೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.

“ಟ್ರಕ್ ನೀರಿನಲ್ಲಿ ಮುಳುಗಿರುವುದನ್ನು ಖಚಿತವಾಗಿ ಪತ್ತೆಹಚ್ಚಲಾಗಿದೆ ಮತ್ತು ನೌಕಾಪಡೆಯ ಪರಿಣಿತರು ಶೀಘ್ರದಲ್ಲೇ ಲಂಗರು ಹಾಕಲು ಪ್ರಯತ್ನಿಸುತ್ತಾರೆ. ನದಿಯನ್ನು ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಶೋಧಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ಶವಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸಲಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ನಾಸಾ, ಇಸ್ರೋ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ನಿಂದ ಮಹತ್ವದ ನೆರವು ಸಿಕ್ಕಿದೆ, ಜಿಲ್ಲಾ ಪೊಲೀಸ್ ಮುಖ್ಯಸ್ಥ ನಾರಾಯಣ್ ಮತ್ತು ಅವರ ತಂಡದ ಸಂಘಟಿತ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

Landslide in Shirur “ನಾಸಾದ ಸ್ನೇಹಿತರಿಗೆ ನಾನು ವಿವರಗಳನ್ನು ಕಳುಹಿಸಿದೆ, ಅವರು ಸ್ಥಳಾಕೃತಿ ಚಾರ್ಟ್ ಅನ್ನು ಒದಗಿಸಿದ್ದಾರೆ. ನಾವು ಇದನ್ನು ಇಸ್ರೋನೊಂದಿಗೆ ಹಂಚಿಕೊಂಡಿದ್ದೇವೆ, ಅದು ಚಿತ್ರಗಳನ್ನು ವಿಶ್ಲೇಷಿಸಿ ಟ್ರಕ್ ಇರುವ ಸ್ಥಳವನ್ನು ದೃಢಪಡಿಸಿತು. ನಾವು ಹೊರತೆಗೆಯಲು ಯಂತ್ರೋಪಕರಣಗಳನ್ನು ವಿನಂತಿಸಿದರೂ, ಕೊಂಕಣ ರೈಲ್ವೆ ಸೇತುವೆ ಮತ್ತು ಎರಡು ಸೇತುವೆಗಳು ಗಂಗವಳ್ಳಿ ಸೇತುವೆ ಬಳಿಗೆ ಯಂತ್ರೋಪಕರಣಗಳನ್ನು ತರಲು ಸಾಧ್ಯವಾಗದ ಕಾರಣ, ಕ್ರೇನ್ ಮೂಲಕ ಅವಶೇಷಗಳನ್ನು ಹುಡುಕಲಾಗುತ್ತದೆ” ಎಂದು ಉತ್ತರ ಕನ್ನಡದ ಎಸ್‌ಪಿ ನಾರಾಯಣ್ ತಿಳಿಸಿದ್ದಾರೆ.

“ಪರಿಣಿತರ ನಿರ್ದೇಶನಗಳ ಆಧಾರದ ಮೇಲೆ, ನದಿಯಲ್ಲಿನ ಸ್ಥಳವನ್ನು ಗುರುತಿಸಲು ನಾವು ಭಾರತೀಯ ನೌಕಾಪಡೆಯಿಂದ ಚಾಪರ್‌ಗಳನ್ನು ವಿನಂತಿಸಿದ್ದೇವೆ. ನಂತರ ಭೂಸೇನೆ ತಂಡವು ಪ್ರದೇಶವನ್ನು ಗುರುತಿಸುತ್ತದೆ. ನಾವು ನಿಖರವಾದ ಸ್ಥಳವನ್ನು ಪಡೆದ ನಂತರ, ನಾವು ಯಾವುದೇ ಮೃತದೇಹಗಳನ್ನು ಹುಡುಕುವುದನ್ನು ಮುಂದುವರಿಸುತ್ತೇವೆ” ಎಂದು ನಾರಾಯಣ್ ಹೇಳಿದ್ದಾರೆ.

Karnataka State Press Distributors Union ಪತ್ರಿಕಾ ವಿತರಕರ ಅಗತ್ಯಕ್ಕೆ ಸ್ಪಂದಿಸಿದ ನಗರದ ಉದ್ಯಮಿ ಸೋಮೇಶ್

0

Karnataka State Press Distributors Union ಪತ್ರಿಕಾ ವಿತರಕರ ಗಳಿಗೆ ಸೋಮೇಶ್ ಶಿವಮೊಗ್ಗ ಶ್ರೀ ಸಾಯಿ ಈವೆಂಟ್ಸ್ ಶ್ರೀ ಕಲೆಕ್ಷನ್ ಕಡೂರು ಮಾಲೀಕರಾದ ಸೋಮೇಶ್ ರವರ ಸಹಕಾರ ದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಸಂಘದ ಶಿವಮೊಗ್ಗ ಭದ್ರಾವತಿ ಶಿಕಾರಿಪುರ ಪತ್ರಿಕಾ ವಿತರಕರಗಳಿಗೆ ಶಿವಮೊಗ್ಗ ನಗರದ ಎಸ್ ,ಡಿ ,ಪಿ ಸರ್ವಿಸ್ ಸೆಂಟರ್ ಸಾಮಾಜಿಕ ಜಾಲತಾಣದ ಜನಪ್ರಿಯ ವ್ಯಕ್ತಿಯಾದ ಶಿವಮೊಗ್ಗ ವಿರೂಪಾಕ್ಷ ರವರು ಜರ್ಕಿನ್ ವಿತರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ವಿತರಕರ ಸೇವೆ ಅನನ್ಯ ಹೊಟ್ಟೆಪಾಡಿಗಾಗಿ ಜೀವ ಹೋಗುವ ಅಂತ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಮನೆಮನೆಗೂ ಇಲಾಖೆಗಳಿಗೂ ಪತ್ರಿಕೆ ಹಂಚಿ ಸುದ್ದಿ ತಲುಪಿಸಿದ ಹೆಗ್ಗಳಿಕೆ ವಿತರಕರದ್ದು ಖಾಸಗಿ ಸಣ್ಣಪುಟ್ಟ ವ್ಯಾಪಾರಿಗಳೇ ಇವತ್ತು ಇತರಕರಿಗೆ ಸಹಾಯ ಮಾಡುವಂತಹ ಇಂಥ ಪರಿಸ್ಥಿತಿಯಲ್ಲಿ ಸಂಪಾದಕರು ಮುಂದೆ ಬಂದು ಸಹಕರಿಸುವುದು ಉತ್ತಮ ಎಂದು ಅಭಿಪ್ರಾಯಸಿದರು. ಈ ವರ್ತಕರು ನೀಡುತ್ತಿರುವ ಇಂದಿನ ಸಹಕಾರ ಬೇರೆಯವರಿಗೆ ಪ್ರೇರೇಪಣಾ ಮಾದರಿಯಾಗಲಿದೆ ಸಹಕಾರ ಸಹಾಯ ಹಸ್ತವನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು ವಿತರಕನನ್ನು ಕೆಲಸಗಾರ ನಂದು ಪರಿಗಣಿಸದೆ ನಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಾನೆ ಎಂಬುದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಸಂಪಾದಕ ಒಕ್ಕೂಟ ವಿತರಕರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕೆಂದು ಮನವಿ ಮಾಡಿದರು

,Karnataka State Press Distributors Union ಸಂದರ್ಭದಲ್ಲಿ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ ,(ನಜೀರ್) ಸಂಘಟನಾ ಕಾರ್ಯದರ್ಶಿಯಾದ ಪರಶುರಾಮ್, ರಾವ್ ಸಂಘದ ಸದಸ್ಯರಾದ ಅಜೀ ಜುಲ್ಲಾ, ಪರ್ತಿಭಾನ್, ಪ್ರಶಾಂತ, ದುರ್ಗಾಜಿ, ನಾಗರಾಜ್ ನಾಯ್ಡು, ಮಲ್ಲಿಕಾರ್ಜುನ್, ದೇವೇಂದ್ರಪ್ಪ, ಕೃಷ್ಣಮೂರ್ತಿ,

Family Planning Association of India ಸ್ವರ್ಣ ಸಂಭ್ರಮದ ಹೊಸ್ತಿಲಲ್ಲಿ ಶಿವಮೊಗ್ಗದ ಎಫ್ ಪಿ ಎ ಐ ಶಾಖೆಯ ಚಟುವಟಿಕೆಗಳು

0

Family Planning Association of India ಶಿವಮೊಗ್ಗ ನಗರದ ಮಲ್ಲೇಶ್ವರ ನಗದಲ್ಲಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಶಾಖೆಯ ಸ್ವರ್ಣ ಸಂಭ್ರಮ ಜುಲೈ 27ರಂದು‌ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಭ್ರಮೋತ್ಸವ ಸಮಿತಿಯ ಚೇರ್ಮನ್ ಉಮೇಶ್ ಆರಾಧ್ಯ, ಕಾರ್ಯಕ್ರಮ‌ ಅಂಬೇಡ್ಕರ್ ಭವನದಲ್ಲಿ 27ರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.

Family Planning Association of India ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸುವರು ಎಂದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಡಾ|| ರತ್ನಮಾಲಾ ದೇಸಾಯಿ ರಾಷ್ಟ್ರೀಯ ಪೂರ್ವಾಧ್ಯಕ್ಷ ಡಾ|| ಎಂ.ಎನ್, ತಾವರಗೇರಿ, ಪೂರ್ವ ಪ್ರಧಾನ ಕಾರ್ಯದರ್ಶಿ ಡಾ!! ಕೆ..ಶೇಷಗಿರಿರಾವ್ , ಮುಂಬೈನ ಎಫ್ ಪಿಎಐನ ಡೈರೆಕ್ಟರ್ ಜನರಲ್ ಡಾ!! ಕಲ್ಪನಾ ಅಷ್ಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ!! ಕೆ ಎಸ್ ನಟರಾಜ , ಕುಟುಂಬ ಕಲ್ಯಾಣ‌ಜಿಲ್ಲಾಧಿಕಾರಿ ಡಾ!! ವೆಂಕಟೇಶ್ ಆಗಮಿಸುವರೆಂದರು. ಅಧ್ಯಕ್ಷತೆಯನ್ನು ಎಚ್ ಆರ್ ಉಮೇಶ್ ಆರಾಧ್ಯ ವಹಿಸುವರು. ವಿಶ್ವ ಆರೋಗ್ಯ ಸಂಸ್ಥೆಯ ಉಪಸಮಿತಿಗೆ ನೇಮಕವಾದ ಡಾ!! ರತ್ನಮಾಲಾ ದೇಸಾಯಿ ಅವರನ್ನು ಗೌರವಿಸಲಾಗುವುದು ಎಂದರು.

Lokayukta Police ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಸಾಗರ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ

0

Lokayukta Police ಜು.24 ರಂದು ಬೆಳಿಗ್ಗೆ 11.00 ರಿಂದ ಮದ್ಯಾಹ್ನ 02:00 ಗಂಟೆ ವರೆಗೆ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ ಡಿ.ಎಸ್.ಪಿ. ಮತ್ತು ಸಿಬ್ಬಂದಿಗಳೊಂದಿಗೆ ಸಾಗರ ತಾಲ್ಲೂಕ್ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿರುತ್ತಾರೆ.
ಈ ಸಮಯದಲ್ಲಿ ಸಾಗರ ತಾಲ್ಲೂಕಿನ ತಹಶೀಲ್ದಾರ್. ಗ್ರೇಡ್-2 ತಹಶೀಲ್ದಾರ್, ಶಿರಸ್ಥೆದಾರರು ಮತ್ತು ತಾಲ್ಲೂಕ್ ಕಛೇರಿಯ ಸಿಬ್ಬಂದಿಯವರು ಹಾಜರಿದ್ದು, ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಹಕ್ಕು ಪತ್ರ, ಮ್ಯೂಟೇಷನ್, ಚೌತಿಖಾತೆ, ವೃದ್ಧಾಪ್ಯವೇತನ, Lokayukta Police ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಸಾಮಾಜಿಕ ಭದ್ರತೆ ಯೋಜನೆ, ಖಾತೆ ಬದಲಾವಣೆ, ಕರೆ ಒತ್ತುವರಿ ತೆರವು ಪ್ರಕರಣಗಳು, ಬಗರ್‌ಹುಕುಂ ಸಾಗುವಳಿ ಬಾಕಿ ಇರುವ ಅರ್ಜಿಗಳು ಮತ್ತು ಸಕಾಲ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದು. ಪರಿಶೀಲನೆ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಕುರಿತು ಚಂದ್ರಶೇಖರ್ ನಾಯ್ಕ ತಹಶೀಲ್ದಾರ್. ಸಾಗರ ತಾಲ್ಲೂಕ್, ಸಾಗರ ರವರಿಗೆ ಸೂಚನೆಗಳನ್ನು ನೀಡಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.

Akashvani Bhadravati ಆಕಾಶವಾಣಿ ಭದ್ರಾವತಿ ಕೇಂದ್ರದ 50 ನೇ ಕ್ಯಾಪಸ್ ಕಟ್ಟೆ ಕಾರ್ಯಕ್ರಮ

0


Akashvani Bhadravati ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕಾಗಿಯೇ ರೂಪಿತವಾದ ಆಕಾಶವಾಣಿ ಭದ್ರಾವತಿಯ ಕ್ಯಾಂಪಸ್‌ಕಟ್ಟೆ ೫೦ನೇ ಕಾರ್ಯಕ್ರಮವು ನೇರಪ್ರಸಾರದಲ್ಲಿ ಪ್ರಸಾರವಾಗಲಿದೆ.
ಕ್ಯಾಂಪಸ್‌ಕಟ್ಟೆ ಎನ್ನುವ ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೇರಪ್ರಸಾರದಲ್ಲಿ ವಿವಿಧ ಮಹನೀಯರು, ಸಾಹಿತಿಗಳು, ಸಾಧಕರು ಮತ್ತು ಆಯ ಪ್ರದೇಶದ ವಿಶೇಷತೆಯನ್ನು ತಿಳಿಸುತ್ತಾರೆ. ಪ್ರತೀ ಕಾರ್ಯಕ್ರಮದಲ್ಲಿ ೬ ರಿಂದ ೮ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳು ಮಾಹಿತಿ ನೀಡಿದ ಮಹನೀಯರಿಗೆ ಸಂಬAಧಿಸಿದ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ನೀಡಿ ಅವರಿಂದ ವಾಟ್ಸಪ್ ಮುಖಾಂತರ ಉತ್ತರ ಪಡೆದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಚಿತ್ರಗೀತೆಗಳ ಸಂಗಮವಾದ ಈ

Akashvani Bhadravati ಕಾರ್ಯಕ್ರಮದಲ್ಲಿ ಇದುವರೆಗೆ ವಿವಿಧ ಕಾಲೇಜಿನ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಕಾಲೇಜಿನಿಂದ ನೇರಪ್ರಸಾರದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ. ೨೫.೦೭.೨೦೨೪ರ ಗುರುವಾರ ಬೆಳಿಗ್ಗೆ ೧೦ಗಂಟೆಯಿಂದ ೧೧ಗಂಟೆವರೆಗೆ MPMES ಸ್ವತಂತ್ರ ಪದವಿಪೂರ್ವಕಾಲೇಜು ಭದ್ರಾವತಿಯ ಕ್ಯಾಂಪಸ್‌ ನೇರಪ್ರಸಾರದಲ್ಲಿ ಪ್ರಸಾರವಾಗಲಿದೆ. ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಈ ೫೦ನೇ ಕಾರ್ಯಕ್ರಮ ಪ್ರಸಾರವಾಗುತ್ತಿರುವುದನ್ನು ತಿಳಿಸಲು ಹೆಮ್ಮೆ ಆಗುತ್ತದೆ ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು FM 103.5 ಹಾಗೂ MW 675 khz ನಲ್ಲಿ ಕೇಳುವದರೊಟ್ಟಿಗೆ ಜಗತ್ತಿನಾದ್ಯಂತAkashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು.

Shivamogga Co-Op Milk Producer’s Societies Union Ltd ಶಿಮುಲ್ ಚುನಾವಣೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮನವಿ

0

Shivamogga Co-Op Milk Producer’s Societies Union Ltd ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇದರ ಆಡಳಿತ ಮಂಡಲಿ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಬಿನ್ ರಾಮಪ್ಪಗೌಡ ಇವರ ಪ್ರತಿನಿಧಿತ್ವವನ್ನು ಪರಿಗಣಿಸಬಾರದು.

ಶಿಮುಲ್ ಚುನಾವಣೆ ಪಾರದರ್ಶಕವಾಗಿ ನಡೆಸಬೇಕೆಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಮಂಜುನಾಥಗೌಡ ಇವರು ಶಿವಮೊಗ್ಗ ತಾಲೂಕು ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಲಿ ನಿರ್ದೇಶಕರಾಗಿರುವುದು ಅನೂರ್ಜಿತವಾಗಿದೆ. ಶಿಮುಲ್‌ಗೆ ಪ್ರತಿನಿಧಿ ಆಗಲು ಕಾನೂನಿನಲ್ಲಿ ಇದಕ್ಕೆ ಯಾವುದೇ ಅವಕಾಶ ಇಲ್ಲ. ಸುರೇಶ ಎನ್ನುವವರು 2023ರ ಡಿ. 20ರಂದು ಕಲ್ಲುಕೊಪ್ಪ ಹಾಲು ಸಂಘಕ್ಕೆ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದು ಅಂಗೀಕಾರವಾಗಿದೆ.

ಈ ಸಭೆಯ ಸಂದರ್ಭದಲ್ಲಿ ಸುರೇಶ ಹಾಜರಿದ್ದು, ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ.

ಇದು ಸಹಕಾರ ಸಂಘಗಳ ಕಾಯ್ದೆ ೧೯೫೯, ಕಲಂ ೨೯-ಬಿ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸುರೇಶ ರಾಜಿನಾಮೆ ವಿ?ಯವನ್ನು ಮುಖ್ಯ ಕಾರ್ಯಸೂಚಿಯಲ್ಲಿ ತಾರದೇ ಇರುವುದು ಸಹಕಾರ ಸಂಘಗಳ ಕಾಯ್ದೆ ೧೯೫೯, ನಿಯಮಗಳು ೧೯೬೦, ನಿಯಮ ೧೪-ಎಕೆ(೬)ಉಲ್ಲಂಘನೆಯಾಗಿದೆ.ಮಂಜುನಾಥಗೌಡ ಇವರನ್ನು ನಿರ್ದೇಶಕರಾಗಿ ಕೋ-ಆಪ್ಸ್ ಮಾಡಿಕೊಂಡಿರುವುದು ಕೂಡ ಮುಖ್ಯ ಕಾರ್ಯಸೂಚಿಯಲ್ಲಿತಾರದೇ ಇರುವುದು ಸಹಕಾರ೧೯೬೦, ನಿಯಮ ೧೪-೨(೬) ಸಂಘಗಳ ಕಾಯ್ದೆ ೧೯೫೯, ನಿಯಮಗಳು ಉಲ್ಲಂಘನೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

Shivamogga Co-Op Milk Producer’s Societies Union Ltd ಸಹಕಾರ ಸಂಘಗಳ ಕಾಯ್ದೆ ಕಲಂ ೨೯-ಇ ಪ್ರಕಾರ ಮಂಡಲಿಯ ಉಳಿದ ಪದಾವಧಿಯು ಅದರ ಮೂಲ ಪದಾವಧಿಯ ಅರ್ಧಕ್ಕಿಂತ ಹೆಚ್ಚು ಇದ್ದರೆ, ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆಯನ್ನು ನಡೆಸತಕ್ಕದು ಎಂದಿದ್ದು, ಈ ಆಡಳಿತ ಮಂಡಲಿಯ ಚುನಾವಣೆಯು ದಿನಾಂಕ ೦೪-೦೧-೨೦೨೨ರ ಜನವರಿ ೪ಕ್ಕೆ ನಡೆದಿದೆ., ರಾಜೀನಾಮ ೨೦೨೩ರ ಡಿ. ೨೦ ಆಗಿದೆ. ಉಳಿದ ಪದಾವಧಿಯು ಅರ್ಧಕ್ಕಿಂತ ಹೆಚ್ಚು ಇರುವುದರಿಂದ ಚುನಾವಣೆ ನಡೆಸಬೇಕು.

ನಿಯಮ ೧೪-ಎಎಫ್ ಪ್ರಕಾರ ೬೦ ದಿನಗಳೊಳಗೆ ಚುನಾವಣೆ ನಡೆಸಬೇಕಾಗಿದ್ದು, ಚುನಾವಣೆಯು ನಡೆದಿಲ್ಲ ಎಂದು ವಿವರಿಸಿದ್ದಾರೆ..
ಈ ವರ್ಷದ ಮಾ. ೧೫ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಮುಲ್‌ನ ಆಡಳಿತ ಮಂಡಲಿ ಚುನಾವಣೆಗೆ ಪ್ರತಿನಿಧಿ ಆಗಿ ನಿರ್ದೇಶಕ ಲೋಕೇಶ್ ಹೆಸರನ್ನು ಸೂಚಿಸಿದ್ದು, ಆದರೆ, ನಡಾವಳಿಯಲ್ಲಿ ಆರ್.ಎಂ.ಮಂಜುನಾಥಗೌಡ ಹೆಸರು ನಮೂದಾಗಿದೆ ಎಂದಿದ್ದಾರೆ.

ಮನವಿ ಸಲ್ಲಿಕೆ ವೇಳೆ ತ್ಯಾಜ್ಯವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ಸಹಕಾರಿ ಕ್ಷೇತ್ರದ ಪ್ರಮುಖರಾದ ಎಸ್.ಹೆಚ್.?ಣ್ಮುಖಪ್ಪ, ಹೆಚ್.ಈ.ಗಡ್ಲಬಸಪ್ಪ, ಈಶ್ವರಪ್ಪ, ಎಸ್.ಜಿ.ಮಲ್ಲಿಕಾರ್ಜುನ್, ಚಂದ್ರು ಹಾಗೂ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಬಿ.ನಂದೀಶ್, ಬಿ.ಟಿ.ಈಶ್ವರಪ್ಪ, ಹೆಚ್.ವಿ.ಅರುಣ್ ಉಪಸ್ಥಿತರಿದ್ದರು.