Wednesday, April 8, 2026
Wednesday, April 8, 2026
Home Blog Page 636

McGANN Hospital ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ನೊಂದು ದಂಪತಿ ಆತ್ಮಹತ್ಯೆ

0

McGANN Hospital 30 ವರ್ಷವಾದರೂ ಮಕ್ಕಳಾಗಿಲ್ಲ ಅಂತಾ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ. ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗುತ್ತಿರುವ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಷಣ್ಮುಖಪ್ಪ (62) ಇಂದ್ರಮ್ಮ(50) ಮೃತರು
ಮದುವೆಯಾಗಿ 30 ವರ್ಷವಾದರು ಮಕ್ಕಳಿಲ್ಲ ಎಂಬ ಚಿಂತೆಯಲ್ಲಿ ಇಬ್ಬರು ಖಿನ್ನತೆಗೆ ಒಳಗಾಗಿದ್ದು. ಈ ಹಿನ್ನೆಲೆಯಲ್ಲಿ ವಿಷಪೊರಿತ ಮಾತ್ರೆ ನುಂಗಿದ್ದಾರೆ. ಆ ಬಳಿಕ ನೋವು ತಡೆಯಲಾಗದೇ ಕೂಗಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಇಬ್ಬರನ್ನು McGANN Hospital ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಗಂಡ ಹೆಂಡತಿಯನ್ನ ದಾಖಲಿಸಿದ್ದಾರೆ. ಆ ಬಳಿಕ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಇಬ್ಬರನ್ನ ಶಿಫ್ಟ್‌ ಮಾಡಲಾಗಿದೆ. ಅಷ್ಟರಲ್ಲಿ ಪತ್ನಿ ಸಾವನ್ನಪ್ಪಿದ್ದಾರೆ. ಇನ್ನೂ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಪತಿಯು ಸಾವನ್ನಪ್ಪಿದ್ದಾರೆ.

CM Siddharamaih ಸೀಎಂ& ಸಚಿವರನ್ನ ಬಹುಕೋಟಿ ಹಗರಣದಲ್ಲಿ ಹೆಸರಿಸಲು ಇಡಿ & ಸಿಬಿಐನಿಂದ ಒತ್ತಾಯ ಆರೋಪಿಸಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

0

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರು, ಸಂಪುಟ ಸಚಿವರು ಸೋಮವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳು ತಮ್ಮ ಹೇಳಿಕೆಗಳಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಹೇಳುವಂತೆ ಸರ್ಕಾರಿ ಅಧಿಕಾರಿಗಳನ್ನು ಒತ್ತಾಯಿಸುತ್ತಿವೆ ಎಂದು ಪಕ್ಷ ಆರೋಪಿಸಿದೆ. ವಾಲ್ಮೀಕಿ ಹಗರಣದ ತನಿಖೆ ವೇಳೆ ಮುಖ್ಯಮಂತ್ರಿ ಹೆಸರನ್ನು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಾಯಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ದೂರು ದಾಖಲಿಸಿದ ನಂತರ ಪಕ್ಷವು ಪ್ರತಿಭಟನೆ ನಡೆಸಿತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, “ಸಿಎಂ ಮತ್ತು ಸಚಿವರ ಹೆಸರು ಹೇಳುವಂತೆ ಅಧಿಕಾರಿಯೊಬ್ಬರಿಗೆ ಇಡಿ ಬಲವಂತ ಮಾಡಿರುವುದು ದುರದೃಷ್ಟಕರ. ಪ್ರಕರಣದ ಬಗ್ಗೆ ಎಸ್‌ಐಟಿ ರಚನೆ ಮಾಡಲಾಗಿದ್ದು, ಕ್ರಮ ಕೈಗೊಳ್ಳುತ್ತೇವೆ ಮತ್ತು ಸಚಿವರು ಶಾಮೀಲಾದರೆ ನಾವು ಅವರನ್ನು ಬಿಡುವುದಿಲ್ಲ. ಇದರ ವಿರುದ್ಧ ಪ್ರತಿಭಟಿಸುವುದು ನಮ್ಮ ಬದ್ಧ ಕರ್ತವ್ಯವಾಗಿದೆ. ಏಕೆಂದರೆ, ಇಡಿ ಅಧಿಕಾರಿಗಳು ಯಾರನ್ನೂ ಹೆಸರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ದೇಶವು ತಿಳಿದಿರಬೇಕು. ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ. ಶಿವಕುಮಾರ್ ಕೂಡ ಕೇಂದ್ರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ ಮತ್ತು ಸಿಬಿಐ ಕಿರುಕುಳ ನೀಡುತ್ತಿದೆ” ಎಂದು ಆರೋಪಿಸಿದರು.
CM Siddharamaih ಕೇಂದ್ರೀಯ ಸಂಸ್ಥೆಗಳು ಸಿಎಂ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಸ್ಕ್ರಿಪ್ಟೆಡ್ ತನಿಖೆ ನಡೆಸುತ್ತಿವೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಮೇಲೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ. ಇಡಿ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳು ತಾವು ಭಾಗಿಯಾಗದ ಹಗರಣಗಳಲ್ಲಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಹೆಸರಿಸುವಂತೆ ಒತ್ತಡ ಹೇರುತ್ತಿದ್ದಾರೆ. ನಾವು ಅಧಿಕಾರಿಗಳ ಕಾರ್ಯವೈಖರಿ ಅಥವಾ ತನಿಖೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ, ನೀವು ಅವರ ಹೆಸರಿಸಲು ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Indian Premier League ಆರ್ ಸಿ ಬಿ ತಂಡಕ್ಕೆ ನಾಯಕನಾಗಿ ರಾಹುಲ್ ಕ್ಯಾಪ್ ಧರಿಸುವ ಸಾಧ್ಯತೆ?

0

Indian Premier League ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಆರ್​​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​ ಆಗಿ ದಿನೇಶ್​ ಕಾರ್ತಿಕ್​ ಅವರನ್ನು ನೇಮಿಸಿದೆ. ಈ ಮಧ್ಯೆ ಮತ್ತೋರ್ವ ಸ್ಫೋಟಕ ಬ್ಯಾಟರ್​ ಆರ್​​ಸಿಬಿಗೆ ಎಂಟ್ರಿ ಆಗೋ ಸೂಚನೆ ಸಿಕ್ಕಿದೆ.
ವರ್ಷದ ಕೊನೆ ಡಿಸೆಂಬರ್​ನಲ್ಲಿ 2025ರ ಐಪಿಎಲ್​​​​ ಮೆಗಾ ಆಕ್ಷನ್​ ನಡೆಯಲಿದೆ. ಮೆಗಾ ಆಕ್ಷನ್​ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಆರ್​​ಸಿಬಿ ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್​ ಆರ್​​ಸಿಬಿಯದ್ದು. ಹಾಗಾಗಿ ಕೆ.ಎಲ್​ ರಾಹುಲ್​ ಅವರ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ.
Indian Premier League ಅವರೊಂದಿಗೆ ಇಶಾನ್​ ಕಿಶನ್​ ಮೇಲೂ ಆರ್​​ಸಿಬಿ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸೀಸನ್​ ವೇಳೆಗೆ ಇಶಾನ್​ ಕಿಶನ್​ ಮುಂಬೈ ತಂಡವನ್ನು ಬಿಡೋದು ಪಕ್ಕಾ ಆಗಿದೆ. ಹಾಗಾಗಿ ಇಶಾನ್​ ಕಿಶನ್​ ಅವರನ್ನು ಆರ್​​ಸಿಬಿ ಖರೀದಿ ಮಾಡೋ ಸಾಧ್ಯತೆ ಇದೆ.
ಕ್ಯಾಪ್ಟನ್​ ಫಾಫ್​ಗೆ ಕೊಕ್​​..!
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್​​ಗೆ ಕೊಕ್​ ಕೊಟ್ಟು, ರಾಹುಲ್​ ಅವರನ್ನು ಕ್ಯಾಪ್ಟನ್​ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ.

Shivamogga Traffic Police ಸಂಚಾರಿ ನಿಯಮ ಉಲ್ಲಂಘನೆ : ನಾಲ್ಕು ಪ್ರಕರಣಗಳಲ್ಲಿ ಭಾರಿ ದಂಡ

0

Shivamogga Traffic Police ಶಿವಮೊಗ್ಗದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ. ಇದಕ್ಕೆ ಪೊರಕ ಸಾಕ್ಷಿ ಎಂಬಂತೆ ನಾಲ್ಕು ಪ್ರಕರಣಗಳು ಇಲ್ಲಿದೆ .
ಶಿವಮೊಗ್ಗ ಸಂಚಾರಿ ಪೊಲೀಸರು ದ್ವಿಚಕ್ರವಾಹನವೊಂದು 12 ಬಾರಿ Traffic signal Jump ಮಾಡಿದ್ದನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೆ ಆ ವಾಹನದ ಮಾಲೀಕರಿಂದ ₹-12000/- ದಂಡ ವಿಧಿಸಿದ್ದಾರೆ
ಇನ್ನೊಂದೆಡೆ ಕಾರೊಂದು 14 ಬಾರಿ Over speed ನಲ್ಲಿ ಚಾಲನೆ ಮಾಡಿದ ಆರೋಪ ಎದುರಿಸಿದ್ದು, ಈ ಸಂಬಂದ ₹-14500/ ದಂಡ ವಿದಿಸಲಾಗಿದೆ.
Shivamogga Traffic Police ಜೋಗದಲ್ಲಿ 10 ಸಾವಿರ ರೂಪಾಯಿ ದಂಡ
ಇನ್ನೊಂದೆಡೆ ಶರಾವತಿ ಕಣಿವೆ ಪ್ರದೇಶದಲ್ಲಿ ಪ್ರದೇಶದಲ್ಲಿ ಇತ್ತೀಚೆಗೆ ಪಾನಮತ್ತನಾಗಿ ವಾಹನ ಚಲಾಯಿಸಿದ ಸಂತೋಷ ಎಂಬಾತನಿಗೆ ಸಾಗರದ ನ್ಯಾಯಾಲಯ
10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಈತನ ವಿರುದ್ಧ ಕಾರ್ಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆಗುಂಬೆಯಲ್ಲಿ ದಂಡ
ಇನ್ನು ಅತ್ತ ಆಗುಂಬೆಯಲ್ಲಿ ಕುಡಿದು ವಾಹನ ಚಲಾಯಿಸಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನಿಗೆ ನ್ಯಾಯಲಯ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಆಗುಂಬೆ ಪೊಲೀಸರು ಡ್ರಂಕ್‌ ಆಂಡ್‌ ಡ್ರೈವ್‌ ವಿಚಾರದಲ್ಲಿ ಕೇಸ್‌ ದಾಖಲಿಸಿದ್ದ ಪ್ರಕರಣ ಇದಾಗಿತ್ತು.

Government Advocate ಅಪರ ಸರ್ಕಾರಿ ವಕೀಲರ ನೇಮಕಾತಿಗೆ ಅರ್ಜಿ ‌ಆಹ್ವಾನ

0

Government Advocate ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ನೇಮಕ ಮಾಡಲು ಅರ್ಹ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಆಯ್ಕೆ ಬಯಸುವವರು 07(ಏಳು) ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರಬೇಕು. ಅರ್ಹ Government Advocate ನ್ಯಾಯವಾದಿಗಳು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಿ ದಿನಾಂಕ: 02-08-2024 ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನ್ಯಾಯಾಂಗ ಶಾಖೆ, ಡಿಸಿ ಕಚೇರಿ, ದೂ.ಸಂ: 08182-221100, 221010, 9110642146 ನ್ನು ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

Family Planning Association of India ಬಳ್ಳಾರಿಯ ಭಾರತೀಯ ಕುಟುಂಬ ಯೋಜನಾ ಸಂಘದ 50 ವರ್ಷಗಳ ಸಾರ್ಥಕ ಸೇವೆ. ಅಭಿನಂದನೀಯ-ಡೀಸಿ‌ ಮೊಹಮ್ಮದ್ ಜುಬೇರ್

0

Family Planning Association of India “ಸುಮಾರು 50 ವರ್ಷಗಳಿಂದ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ನಿಜವಾಗಿಯೂ ಅಭಿನಂದನೆಗೆ ಅರ್ಹವಾಗಿದೆ” ಎಂದು ಹೇಳುತ್ತಾ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಯುತ ಮೊಹಮ್ಮದ್ ಜುಬೇರ್ ರವರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ (ಕೇಂದ್ರ ಕಛೇರಿ) 75 ನೇ ಸಂಸ್ಥಾಪನ ದಿನಾಚರಣೆಯಾದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.

ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾ “ಆರೋಗ್ಯ ಸೇವೆಯನ್ನು ಇಂದಿಗೂ ಸೇವೆಯಾಗಿ ಕಡಿಮೆ ಖರ್ಚಿನಲ್ಲಿ ಕೊಡುತ್ತಿರುವ ಎಫ್‌ಪಿಎಐ ಸಂಸ್ಥೆಯನ್ನು ನೋಡಿ ಸಾಕಷ್ಟು ಖುಷಿಯಾಯಿತು, ಈ ಸಂಸ್ಥೆಯ ಸ್ವಚ್ಛತೆ ಹಾಗೂ ಆರೋಗ್ಯಕರವಾದ ವಾತಾವರಣವನ್ನು ನೋಡಿದರೆ ಈ ಆಸ್ಪತ್ರೆ ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯುತ್ತದೆ” ಎಂದು ಹೇಳಿದರು.

ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರದ ಚಾಲನೆಯನ್ನು ನೀಡಿದ ಬಳ್ಳಾರಿಯ ವೃತ್ತ ನಿರೀಕ್ಷಕರಾದ ಶ್ರೀಯುತ ಅಯ್ಯನ್ ಗೌಡ ಪಾಟೀಲ್ ರವರು ಮಾತನಾಡಿ ಆರೋಗ್ಯ ಸೇವೆಯು ನೈತಿಕತೆಯನ್ನು ಒಳಗೊಂಡಿರಬೇಕಾಗುತ್ತದೆ, ಹಾಗೆಯೇ ಈ ಸಂಸ್ಥೆಯು ನೈತಿಕತೆಯಿಂದ, ಶ್ರದ್ಧೆಯಿಂದ ಯಾವುದೇ ರೀತಿಯ ಜನಪ್ರಿಯತೆಗೆ ಆಸೆ ಪಡದೆ ತನ್ನ ಕಾರ್ಯವನ್ನು ಎಲೆಮರೆಕಾಯಿಯಾಗಿ ಮಾಡುತ್ತಿದೆ.

ಈ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪೊಲೀಸ್ ರಕ್ಷಣೆ ಹಾಗೂ ಪೊಲೀಸ್ ಸೇವೆ ಬೇಕಿದ್ದಲ್ಲಿ ನಮ್ಮ ಬಳ್ಳಾರಿಯ ಪೊಲೀಸ್ ಇಲಾಖೆಯು ಸದಾ ಸಿದ್ಧವಾಗಿರುತ್ತದೆ” ಎಂದು ಹೇಳಿದರು.

Family Planning Association of India ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಳ್ಳಾರಿಯ ಕುಟುಂಬ ಕಲ್ಯಾಣ ಯೋಜನಾಧಿಕಾರಿಯಾದ ಡಾ.ಪೂರ್ಣಿಮಾ ಕಟ್ಟೀಮನಿಯವರು ಮಾತನಾಡಿ “ಎಫ್ ಪಿ ಎ ಐ ಸಂಸ್ಥೆಯು ಹದಿಹರೆಯದ ಶಿಕ್ಷಣ, ಲೈಂಗಿಕತೆ ಹಾಗೂ ಪ್ರಜನನ ಆರೋಗ್ಯದ ಬಗ್ಗೆ ಮಾಹಿತಿ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಹಾಗೂ ಲಸಿಕೆ, ಸ್ತನ ಕ್ಯಾನ್ಸರ್ ತಪಾಸಣೆ, ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ, ಪುರುಷ ಹಾಗೂ ಮಹಿಳೆಯರಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಇನ್ನೂ ಹಲವಾರು ರೀತಿಯ ವೈದ್ಯಕೀಯ ಸೇವೆಗಳನ್ನು ಸ್ವತಂತ್ರದ ನಂತರದಿಂದಲೂ ನಡೆಸಿಕೊಂಡು ಬಂದಿದೆ. ಇಂದು ಈ ಸಂಸ್ಥೆಗೆ 75 ವರ್ಷ ತುಂಬಿದೆ, ಒಂದು ಸ್ವಯಂಸೇವಾ ಸಂಸ್ಥೆಯು ತನ್ನೆಲ್ಲಾ ಅಡೆತಡೆಗಳನ್ನು ದಾಟಿ 75 ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರೆ ಅದು ನಿಜವಾಗಿಯೂ ಶ್ಲಾಘನಾರ್ಹ ಸಂಗತಿ” ಎಂದರು.

ಸ್ತ್ರೀರೋಗ ತಜ್ಞರಾದ ಡಾ.ರುಕ್ಸಾರ್ ಭಾನುರವರು ಸುಮಾರು 75 ಕ್ಕೂ ಹೆಚ್ಚಿನ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಶ್ರೀಯುತ ಟಿ.ಜಿ.ವಿಠ್ಠಲ್ ರವರು ಮಾತನಾಡಿ “ಹೆಚ್ ಪಿ ವಿ ಲಸಿಕೆಯನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಹಾಗೂ ಆಧುನಿಕ ತಂತ್ರಜ್ಞಾನವಾದ ಸ್ಮಾರ್ಟ್ ಸ್ಕೋಪನ್ನು ಬಳಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವೈದ್ಯಕೀಯ ಸೌಲಭ್ಯವು ಎಫ್ ಪಿ ಎ ಐ ನಲ್ಲಿ ಲಭ್ಯವಿರುವುದು ಸಂತಸದ ಸಂಗತಿ” ಎಂದು ಹೇಳಿದರು.
ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಗಿಡಗಳನ್ನು ಸಂಸ್ಥೆಯ ಆವರಣದ ಮುಂಭಾಗದ ರಸ್ತೆಯಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ವಿಜಯಸಿಂಹರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳ್ಳಾರಿ ಶಾಖೆಯ ಉಪಾಧ್ಯಕ್ಷರಾದ ಡಾ.ಚಂದನ, ಸಂಸ್ಥೆಯ ಆರ್ಥಿಕ ಸಲಹೆಗಾರರಾದ ಡಾ.ಭಾಗ್ಯ, ಸದಸ್ಯರಾದ ವಿಷ್ಣು, ಅಹಿರಾಜ್, ಪ್ರಶಾಂತ್ ಕೇಣಿ, ಗಿರೀಶ್.ಡಿ, ಶ್ರೀ ಚೈತನ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀಮತಿ ಚೆನ್ನಾರೆಡ್ಡಿ ಸ್ಮಾರಕ ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಎಂ ಅಂಡ್ ಇ ಆಫೀಸರ್ ಶ್ರೀಮತಿ ಸುಜಾತ ಪುರಾಣಿಕ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕರಾದ ಎಸ್.ವಿಜಯಲಕ್ಷ್ಮಿ ನಿರೂಪಿಸಿ, ಕಾರ್ಯಕ್ರಮಾಧಿಕಾರಿಯಾದ ಬಸವರಾಜ್ ವಂದಿಸಿದರು.

Rotary Shivamogga ಮನೆಯ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬದಲ್ಲಿ ಜೀವಕಳೆ- ಡಾ.ಬಿ.ಪಿ.ಚಂದುಶ್ರೀ

0

Rotary Shivamogga ಮನೆಯ ಸ್ತ್ರೀ ಆರೋಗ್ಯವಾಗಿದ್ದರೆ ಆ ಕುಟುಂಬವೇ ಜೀವಕಳೆಯಿಂದ ತುಂಬಿರುತ್ತದೆ. ಆರೋಗ್ಯವಂತ ಮಹಿಳೆ ಮನೆಯ ಭದ್ರ ಬುನಾದಿಯಾಗಿರುತ್ತಾಳೆ ಎಂದು ಸರ್ಜಿ ಪುಷ್ಯ ಮೆಟರ್ನಿಟಿ ಸೆಂಟರ್ ನ ಸ್ತ್ರೀರೋಗ, ಬಂಜೆತನ ನಿವಾರಣೆ ಹಾಗೂ ಲ್ಯಾಪರೋಸ್ಕೋಪಿಕ್ ತಜ್ಞ ವೈದ್ಯೆ ಡಾ. ಚಂದುಶ್ರೀ.ಬಿ.ಪಿ ಅಭಿಪ್ರಾಯಪಟ್ಟರು.

ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಜುಲೈ ತಿಂಗಳನ್ನು ತಾಯಂದಿರ ಆರೋಗ್ಯ ಹಾಗೂ ಮಕ್ಕಳ ಕಾಳಜಿಗೆಂದೇ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ತನ್ನ ಸಾಪ್ತಾಹಿಕ ಸಭೆಯಲ್ಲಿ ಕ್ಲಬ್ ನ ಸದಸ್ಯರ ಕುಟುಂಬದವರಿಗಾಗಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗರ್ಭಿಣಿ ಸ್ತ್ರೀಯರ ಆರೋಗ್ಯ ಹಾಗೂ ಮಕ್ಕಳ ಆರೋಗ್ಯ ಕಾಳಜಿ ಕುರಿತಾಗಿ ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟ ಅವರು, “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂಬ ಮಾತಿನಂತೆ ನಾರಿಯನ್ನು ಪೂಜಿಸುವುದೆಂದರೆ ಕೇವಲ ಆಕೆಯನ್ನು ಗೌರವಿಸುವುದಷ್ಟೆ ಅಲ್ಲ, ಆಕೆಯ ಆರೋಗ್ಯದ ಕಾಳಜಿ ಮಾಡುವುದನ್ನೂ ಒಳಗೊಂಡಿದೆ. ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು, ಗರ್ಭಕೋಶ ಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಗೆ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಅತ್ಯುಪಯುಕ್ತ ಮಾಹಿತಿ ನೀಡಿದರು.

ಉಪನ್ಯಾಸದ ನಂತರ ವೈದ್ಯರೊಡನೆ ನಡೆದ ಸಂವಾದದಲ್ಲಿ ಸಭೆಯಲ್ಲಿದ್ದ ಮಹಿಳೆಯರು ತಮ್ಮ ಅನೇಕ ಸಂಶಯಗಳಿಗೆ ಸೂಕ್ತ ಉತ್ತರ ಪಡೆದುಕೊಂಡರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೊ. ಮುಶ್ತಾಕ್ ಮಾತನಾಡಿ, 2024-25 ನೇ ಸಾಲಿಗೆ ಕ್ಲಬ್ ನ ಅಧ್ಯಕ್ಷರಾಗಿ ತಾವು ಪದಸ್ವೀಕಾರ ಮಾಡಿದ ಬಳಿಕ ಹಮ್ಮಿಕೊಂಡ ಮೊದಲ ಕಾರ್ಯಕ್ರಮ ಇದಾಗಿದ್ದು, ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಸಂತಸ ವ್ಯಕ್ತ ಪಡಿಸಿದರು.

Rotary Shivamogga ಆರೋಗ್ಯ ರಕ್ಷಣೆ ಹಾಗೂ ಜಾಗೃತಿ ಕುರಿತಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಿದ್ದು, ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಕುರಿತು ಜಾಗೃತಿಗಾಗಿ ಈಗಾಗಲೇ ಕಾರ್ಯಾರಂಭಿಸಲಾದ ನೂತನ ಯುಟ್ಯೂಬ್ ಚಾನೆಲ್ ‘ನವ್ಯಸಂಕಲ್ಪ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನವಜಾತ ಶಿಶುವಿಗೆ ಹಾಗೂ ತಾಯಿಗೆ ಅವಶ್ಯಕವಾದ ಕಿಟ್ ಸಹ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಚಂದುಶ್ರೀ ಅವರನ್ನು ಉಪಸ್ಥಿರಿದ್ದವರೆಲ್ಲರೂ ಸೇರಿ ಗೌರವಿಸಿ ಅಭಿನಂದಿಸಿದ್ದು ವಿಶೇಷವಾಗಿತ್ತು.ಕಳೆದ ಸಾಲಿನ ಅಧ್ಯಕ್ಷರಾದ ರೊ. ರಾಜು.ಸಿ, ಕ್ಲಬ್ ನ ಕಲಿಕಾ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ. ಹೆಚ್.ಎಲ್.ರವಿ, ಕ್ಲಬ್ ನ ಇತರ ಸದಸ್ಯರು, ಆನ್ಸ್ ಹಾಗೂ ಆನೆಟ್ಸ್ ಉಪಸ್ಥಿತರಿದ್ದರು. ಉಪನ್ಯಾಸ ನೀಡಿದ ಡಾ. ಚಂದುಶ್ರೀ ಅವರನ್ನು ಪರಿಚಯಿಸಿದ ವಲಯ ಸೇನಾನಿ ರೊ. ಮಂಜುಳಾ ರಾಜು ಕಾರ್ಯಕ್ರಮವನ್ನು ನಿರೂಪಿಸಿ, ಕ್ಲಬ್ ನ ಉಪಾಧ್ಯಕ್ಷೆ ರೊ. ಅಲೇಖಾ ಸ್ವಾಗತಿಸಿ, ಸಹ ಕಾರ್ಯದರ್ಶಿ ರೊ. ಡಾ. ಸಿದ್ಧಲಿಂಗ ಮೂರ್ತಿ ಎಲ್ಲರನ್ನೂ ವಂದಿಸಿದರು.

National Doctor’s Day ಕರಾವಳಿಯಿಂದ ಬಂದ ಬಂಟ ಸಮುದಾಯ ಶಿವಮೊಗ್ಗದಲ್ಲಿ ಎಲ್ಲ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ ವಿಶ್ವಾಸಗಳಿಸಿದ್ದಾರೆ- ಡಾ.ಎ.ಸತೀಷ್ ಕುಮಾರ್ ಶೆಟ್ಟಿ

0

National Doctor’s Day ಶಿವಮೊಗ್ಗ ಬಂಟರ ಭವನದಲ್ಲಿ ಬಂಟ್ಸ್ ಮಹಿಳಾ ವಿಭಾಗದ ವತಿಯಿಂದ ಆಯೋಜನೆಗೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮವು ಅದ್ದೂರಿಯಿಂದ ನೆರವೇರಿತು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶಿವಮೊಗ್ಗದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಬಂಟ ಸಮಾಜದ 35 ಜನ ಹಿರಿಯ ಮತ್ತು ಕಿರಿಯ ವೈದ್ಯರುಗಳನ್ನು ಸನ್ಮಾನಿಸಲಾಯಿತು.
National Doctor’s Day ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ರವರು ಬಂಟ ಸಮುದಾಯ ಕರಾವಳಿಯಿಂದ ಮಲೆನಾಡಿಗೆ ಬಂದು ಇಲ್ಲಿ ಸುಮಾರು 60 -70 ವರ್ಷಗಳಿಂದ ನೆಲೆಸಿ ಆರೋಗ್ಯ ಕ್ಷೇತ್ರ, ಹೋಟೆಲ್ ಉದ್ದಿಮೆ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ವಿಶೇಷವಾಗಿ ಬಂಟ ಸಮಾಜದ ವೈದ್ಯರು ಶಿವಮೊಗ್ಗದ ಪ್ರತಿಷ್ಠಿತ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿ ಜನರ ಸೇವೆ ಮಾಡುತ್ತಿದ್ದಾರೆ ಎಂದರು.
ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಎಸ್. ಶೆಟ್ಟಿ ಮಾತನಾಡಿ ವೈದ್ಯರ ದಿನಾಚರಣೆ ಅಂಗವಾಗಿ ಬಂಟ ಸಮಾಜದ ವೈದ್ಯರಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವ ಉದ್ದೇಶಕ್ಕಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಂಟ ಸಮಾಜದ ಪ್ರಮುಖರಾದ ಎಂ ಕೆ ಸುರೇಶ್ ಕುಮಾರ್, ದಿವಾಕರ್ ಶೆಟ್ಟಿ ಮಹೇಶ್ ಶೆಟ್ಟಿ ರಾಜೀವ್ ಶೆಟ್ಟಿ, ಡಾ.ಅಮಿತ ಹೆಗ್ಡೆ, ಪ್ರಭಾವತಿ ಎಸ್ ಶೆಟ್ಟಿ, ಕಿಲಕ ಎಂ. ಮಧುಸೂದನ್, ವಾತ್ಸಲ್ಯ ಎಸ್. ಶೆಟ್ಟಿ , ಜ್ಯೋತಿ ಡಿ. ಶೆಟ್ಟಿ, ಶೃತಿ ಎಂ. ಶೆಟ್ಟಿ, ಬಂಟ್ಸ್ ಪುರುಷ ಮತ್ತು ಮಹಿಳಾ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Sri Shivaganga Yoga Centre ಗುರುವಿನ ಪಾತ್ರ ಪ್ರಮುಖ.ಗುರುವಿನ ಮಾರ್ಗದರ್ಶನ ಅವಶ್ಯಕ-ಜಿ.ಎಸ್.ಓಂಕಾರ್

0

Sri Shivaganga Yoga Centre ಶಿವಮೊಗ್ಗ ಪ್ರತಿಯೊಂದು ಹಂತದಲ್ಲೂ ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ಪಾತ್ರ ಬಹಳ ಪ್ರಮುಖವಾದದ್ದು, ಗುರುವಿಲ್ಲದೇ ಜ್ಞಾನವಿಲ್ಲ ಎಂದು ಶಿವಗಂಗಾ ಯೋಗಾ ಕೇಂದ್ರದ ರಾಘವ ಶಾಖೆಯ ಯೋಗಾ ಗುರುಗಳಾದ ಜಿ.ಎಸ್.ಓಂಕಾರ್ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ರಾಘವ ಶಾಖೆಯ ಯೋಗಾ ಪಟುಗಳು ಆಯೋಜಿಸಿದ್ದ ಗುರು ವಂದನಾ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಅಂಧಕಾರ ಹೋಗಲಾಡಿಸಿ, ಬೆಳಕನ್ನು ನೀಡುವ ಗುರುವಿನ ಸ್ಥಾನ ತುಂಬಾ ದೊಡ್ಡದು ಎಂದರು.

ಮತ್ತೋರ್ವ ಯೋಗ ಗುರುಗಳಾದ ಹರೀಶ್ ಮಾತನಾಡಿ, ನಮ್ಮ ದೇಹ ಮನಸ್ಸು ಸ್ವಾಸ್ಥ್ಯದಲ್ಲಿ ಇರಬೇಕಾದರೆ ಯೋಗ, ಪ್ರಾಣಯಾಮ, ಧ್ಯಾನ ತುಂಬಾ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಾವೆಲ್ಲ ಸುಖಿಗಳು, ನಮಗೆ ಉಚಿತವಾಗಿ ಯೋಗ ತರಗತಿಗಳನ್ನು ಶಿವಗಂಗಾ ಯೋಗ ಕೇಂದ್ರ ಆಯೋಜಿಸಿದೆ ಎಂದರು.

ಇನ್ನೋರ್ವ ಯೋಗ ಗುರುಗಳಾದ ವಿಜಯ್ ಕೃಷ್ಣ ಮಾತನಾಡಿ, ಇಂದು ಗುರುಗಳ ಮೇಲೆ ಶಿಕ್ಷಕರಿಗೆ ಗೌರವ ಕಡಿಮೆ ಆಗುತ್ತಿದೆ. ಯೋಗ ನಮ್ಮ ಮನಸ್ಸು ದೇಹವನ್ನು ಸಧೃಡಗೊಳಿಸುತ್ತದೆ ಎಂದರು.

ಶಿ.ಜಿ.ವಾ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ರೋ. ಜಿ.ವಿಜಯ್ ಕುಮಾರ್ ಮಾತನಾಡಿ, ಪ್ರಸ್ತುತ ಹೆತ್ತ ತಂದೆ ತಾಯಿ, ಗುರುಗಳ ಋಣ ಬಹಳ ದೊಡ್ಡದು. ನಮಗೆ ಯೋಗದಲ್ಲಿ ಸಂಸ್ಕಾರದ ಜೊತೆಗೆ ಆಧ್ಯಾತ್ಮ ಹಾಗೂ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ನುಡಿದರು.

Sri Shivaganga Yoga Centre ಇದೇ ಸಂದರ್ಭದಲ್ಲಿ ರಾಘವ ಶಾಖೆಯ 4 ಜನ ಯೋಗ ಶಿಕ್ಷಕರಿಗೆ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು. ಕಾಟನ್ ಜಗದೀಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾರಂಭದಲ್ಲಿ ಬಿಂದು ವಿಜಯ್ ಕುಮಾರ್, ನರಸೋಜಿ ರಾವ್, ಶ್ರೀನಿವಾಸ, ಎಸ್.ಟಿ.ಆನಂದ, ಮಹೇಶ, ಸುಜಾತ, ಮಧುಕೇಶ್ವರ, ಗಾಯಿತ್ರಿ, ಸುಮಾ, ಶೋಭಾ, ಶಂಕರ, ವಿಕ್ಕಿ, ಅಶೋಕ, ಸುಮಂತ್, ಪ್ರೇಮ..ಪ್ರೀತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

DC Shivamogga ಜಿಲ್ಲೆಯಲ್ಲಿನ ಮಳೆ ಪ್ರಕೋಪ. ಬಿತ್ತನೆ ಪ್ರಗತಿ ಬಗ್ಗೆ ಡೀಸಿ ಗುರುದತ್ತ ಹೆಗಡೆ ಅವರಿಂದ ತಾಜಾ ಮಾಹಿತಿ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 21 ರವರೆಗೆ ಸರಾಸರಿ 529.0 ಮಿ.ಮೀ ವಾಡಿಕೆ ಮಳೆಗೆ 831.00 ಮಿ.ಮೀ ಮಳೆಯಾಗಿದ್ದು ವಾಡಿಕೆಗಿಂತ ಶೇ.57 ರಷ್ಟು ಹೆಚ್ಚು ಮಳೆ ವರದಿಯಾಗಿದೆ.
ಜುಲೈ ಮಾಹೆಯಲ್ಲಿ ಭಾರೀ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪರಿಹಾರ ಕ್ರಮಗಳು ಪ್ರಗತಿಯಲ್ಲಿವೆ.
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಶಶಿಕಲಾ, ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಗ್ರಾಮದ ನಾಗೇಂದ್ರ ಹಾಗೂ ಶಿಕಾರಿಪುರ ತಾಲ್ಲೂಕಿನ ಅಮಟೇಕೊಪ್ಪ ಗ್ರಾಮದ ನಾಗರಾಜ ಮರಣ ಹೊಂದಿರುತ್ತಾರೆ. ಶಶಿಕಲಾ ಮತ್ತು ನಾಗೇಂದ್ರ ಕುಟುಂಬದವರಿಗೆ ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ತಲಾ ರೂ.5 ಲಕ್ಷ ಪರಿಹಾರ ನೀಡಲಾಗಿರುತ್ತದೆ. ನಾಗರಾಜ ರವರ ಕುಟುಂಬಕ್ಕೆ ಎಫ್‍ಎಲ್‍ಸಿ ವರದಿ ಬಂದ ನಂತರ ಪರಿಹಾರ ವಿತರಣೆ ಮಾಡಲಾಗುವುದು.
ಜಿಲ್ಲೆಯಲ್ಲಿ ಜುಲೈ 19 ರವರೆಗೆ ಒಟ್ಟು 6 ಜಾನುವಾರು ಮೃತಪಟ್ಟಿದ್ದು ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಅತಿ ಹೆಚ್ಚು ಮಳೆಯಿಂದ ಜೂನ್‍ವರೆಗೆ ಸುಮಾರು 7 ಮನೆ ಪೂರ್ಣ ಹಾನಿಗೊಳಪಟ್ಟಿದ್ದು ಅದರಲ್ಲಿ 4 ಮನೆಗಳಿಗೆ ತಲಾ ರೂ.1.20 ಲಕ್ಷ ನೀಡಲಾಗಿದೆ. 130 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಪರಿಹಾರ ನೀಡಲು ಕ್ರಮ ವಹಿಸಲಾಗಿದೆ.
DC Shivamogga ಜಿಲ್ಲೆಯಲ್ಲಿ ಸುಮಾರು 74916 ಹೆ. ಭತ್ತದ ಪ್ರದೇಶದಲ್ಲಿ 9508 ಹೆ ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲಿ ಸಾಗರ ತಾಲ್ಲೂಕಿನ ತಾಳಗುಪ್ಪ 500 ಹೆ, ಕಸಬಾ 20 ಹೆ, ಆನಂದಪುರ 10 ಹೆ, ಸೊರಬ ತಾಲ್ಲೂಕಿನ ಅಬಸೇ, ಕಡಸೂರು ಗ್ರಾಮಗಳು ಸೇರಿ ಒಟ್ಟು 610 ಹೆ.ಪ್ರದೇಶ ಜಲಾವೃತಗೊಂಡಿರುತ್ತದೆ. ಜಂಟಿ ಸಮೀಕ್ಷೆ ನಂತರ ಹಾನಿ ಪ್ರಮಾಣವನ್ನು ಅಂದಾಜಿಸಲಾಗುವುದು. ಮತ್ತು 47000 ಹೆಕ್ಟೇರ್ ಪ್ರದೇಶದಲ್ಲಿ 43345 ಹೆ.ಬಿತ್ತನೆಯಾಗಿದ್ದು ಈವರೆಗೆ ಯಾವುದೇ ಹಾನಿಯಾಗಿರುವುದಿಲ್ಲ.
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್‍ಫಾರ್ಮರ್‍ಗಳು ಹಾನಿಯಾಗಿಯಾಗಿರುತ್ತವೆ.
ಪ್ರವಾಹದಿಂದ 24.92 ಕಿ.ಮೀ ರಾಜ್ಯ ಹೆದ್ದಾರಿ, 42.13 ಕಿ.ಮೀ ಜಿಲ್ಲೆಯ ಮುಖ್ಯ ರಸ್ತೆ, 421.00 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿರುತ್ತದೆ. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 110 ಸೇತುವೆಗಳು ಹಾನಿಯಾಗಿರುತ್ತದೆ. 143 ಶಾಲಾ ಕಟ್ಟಡಗಳು, 118 ಅಂಗನವಾಡಿ ಕಟ್ಟಡಗಳು ಹಾಗೂ 09 ಆರೋಗ್ಯ ಕೇಂದ್ರಳು ಹಾನಿಗೊಳಗಾಗಿರುತ್ತವೆ. ಜಿಲ್ಲೆಯಲ್ಲಿ ಪ್ರವಾಹದಿಂದ 64 ಕೆರೆಗಳು ಹಾನಿಗೊಳಗಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ