Department of Health and Family Welfare ನಮ್ಮ ಸಮಾಜವು ದುಷ್ಟ ಮನಸ್ಸಿನ ಜನರಿಂದ ತುಂಬಿದೆ.ಸಮಾಜದಲ್ಲಿ ಮಕ್ಕಳನ್ನು ಬಲವಂತವಾಗಿ ಬಿಕ್ಷಾಟನೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವುದು ಕಾನೂನಿಗೆ ವಿರುದ್ಧವಾದದ್ದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕರಾದ ಶ್ರೀಮತಿ ಆಶಾರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು,ಜಿಲ್ಲಾ ರಕ್ಷಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಮಹಾರಾಣಿ ಪ್ರೌಢಶಾಲೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಬಾಲ ಬಿಕ್ಷಾಟನೆ ಅರಿವು ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಕೆಲವು ಮಕ್ಕಳು ಶಾಲೆಗೆ ಹೋಗುವ ಬದಲು ಪೋಷಕರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹ ಮಾಡುವುದು, ಕಾರ್ಖಾನೆಗಳಲ್ಲಿ, ಹೊಲಗದ್ದೆಗಳಲ್ಲಿ, ಕೆಲಸಗಳನ್ನು ಮಾಡಲು ಕಳಿಸುತ್ತಾರೆ. ವಿದ್ಯಾರ್ಥಿಗಳಾದ ನೀವುಗಳು ಅಂತಹ ವಿಚಾರಗಳು ತಮ್ಮ ಗಮನಕ್ಕೆ ಬಂದರೆ ತಮ್ಮ ಶಾಲೆ ಶಿಕ್ಷಕರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ತಿಳಿಸಿದರೆ, ಇಂತಹ ಅನಿಷ್ಟ ಪದ್ಧತಿಯನ್ನು ನಿಲ್ಲಿಸಬಹುವುದು, ಇದರಿಂದ ಮಕ್ಕಳ ಉಜ್ವಲ ಭವಿಷ್ಯ ಹೊಂದಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
Department of Health and Family Welfare ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿನೋಬ ನಗರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಎಸ್. ಮತ್ತು ಪುನೀತ್ ದೊಡ್ಮನಿ, ವೈದ್ಯಾಧಿಕಾರಿಗಳಾದ ಶ್ರೀಮತಿ ಉಮಾ, ತಾಲೂಕು ನೋಡಲ್ ಅಧಿಕಾರಿಗಳಾದ ಭರತ್ ಎಸ್.ಎಂ., ಮಕ್ಕಳ ಸಹಾಯವಾಣಿ ಸಂಯೋಜಕರಾದ ಪ್ರಮೋದ್, ಮಹಾರಾಣಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಕರಿಬಸಪ್ಪ ಎನ್.ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ನಾಗನಗೌಡ, ಮಲ್ಲೇಶಪ್ಪ ಡಿ. ಎಸ್., ಭೀಮಾ ನಾಯ್ಕ, ಶೋಭಾ ಹಾಗೂ ವಿದ್ಯಾರ್ಥಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ಹುಲ್ಲತ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆ. ಶಿವಾನಂದ ಬಿ.ಸ್ವಾಗತಿಸಿದರು
Department of Health and Family Welfare ಮಕ್ಕಳನ್ನ ಭಿಕ್ಷಾಟನೆ ತಳ್ಳುವುದು ಮಹಾಪರಾಧ-ಶ್ರೀಮತಿ ಆಶಾ
Shivamogga News ಕವಿ ಎಚ್ ಎಸ್ ವಿ ಕವಿತೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ- ವಸಂತ ಹೋಬಳಿದಾರ್
Shivamogga News ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ. ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶೇಷ ಅರ್ಥಪೂರ್ಣ ಗೀತೆಗಳೊಂದಿಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಮಥುರಾ ರಜತೋತ್ಸವ ಸಮಿತಿ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ಮಥುರಾ ರಜತೋತ್ಸವ ಸಮಿತಿ ಜಂಟಿಯಾಗಿ ಎಚ್‌ಎಸ್‌ವಿ ಅವರ 80ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತಗಾಯನ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿ, ಸಂಗೀತದಿಂದ ಸದಾ ಉಲ್ಲಾಸದಿಂದ ಇರುವುದರ ಜತೆಗೆ ಧ್ವನಿ ಸಂಸ್ಕರಣಗೊಳ್ಳುತ್ತದೆ. ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
Shivamogga News ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಮಥುರಾ ಪಾರಾಡೈಸ್ ರಜತ ಮಹೋತ್ಸವ ಅಂಗವಾಗಿ 50 ಸಂಸ್ಥೆಗಳ ಆಶ್ರಯದಲ್ಲಿ ಸಮಾಜಮುಖಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 6ನೇ ಕಾರ್ಯಕ್ರಮವಾಗಿದೆ.
ಸುಗಮ ಸಂಗೀತ ಪರಿಷತ್‌ಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಸುಪ್ರಿಯಾ ಸಂತೋಷ್ ಪ್ರಥಮ ಬಹುಮಾನ, ಶ್ವೇತಾ ಪಾಟೀಲ್ ದ್ವಿತೀಯ ಬಹುಮಾನ, ಎಂ.ಸುಜಾತಾ, ವರ್ಷಿಣಿ ಭಟ್‌ಗೆ ನಗದು ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಪರಿಷತ್ ಸದಸ್ಯರಿಂದ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತೆಗಳ ಗಾಯನ ನೆರವೇರಿತು. ಜಿಲ್ಲಾ ಖಜಾಂಚಿ ಜಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎಸ್.ಮಂಜುನಾಥ, ಸಂಚಾಲಕರಾದ ಭದ್ರಾವತಿ ವಾಸು, ಸಹ ಕಾರ್ಯದರ್ಶಿ ತ್ರಿವೇಣಿ, ಸಹ ಸಂಚಾಲಕರಾದ ಶೋಭಾ ಸತೀಶ್, ವಿದುಷಿ ಲಲಿತಮ್ಮ, ಜಯಶ್ರೀ ಶ್ರೀಧರ್, ದಾಕ್ಷಾಯಿಣಿ, ರಾಜಕುಮಾರ, ಮಥುರಾ ನಾಗರಾಜ್, ಉಮಾ ದಿಲೀಪ್, ಲಕ್ಷ್ಮೀ ಮಹೇಶ್, ಹೇಮಾ ವರ್ಷಿಣಿ, ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
Shivamogga News ಮಾದರಿಯಾಗಿ ನಿಂತ ಶಿವಮೊಗ್ಗ ಸ್ನೇಹಬಳಗ.”ಪ್ರಸಾದಂ” ಗೆ.ವರ್ಷಾಚರಣೆಯ ಸಂತಸ
Shivamogga News ಕಳೆದ ಒಂದು ವರ್ಷಗಳಿಂದ ಸ್ನೇಹ ಬಳಗದವರು ವಾರದಲ್ಲಿ ಒಂದು ದಿನ ಭಾನುವಾರ ರಂದು 150 ರಿಂದ 200 ಜನಕ್ಕೆ ಉಚಿತವಾಗಿ “ಪ್ರಸಾದಂ” ಎಂಬ ಅಭಿದಾನದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ತಾ.4-8-24 ರಂದು “ಪ್ರಸಾದಂ “
52ನೇ ವಾರಕ್ಕೆ ಕಾಲಿಟ್ಟಿದೆ. ಉಚಿತವಾಗಿ ಊಟ ನೀಡುತ್ತಿರುವುದು
ಹಸಿದವರಿಗೆ ಮಾತ್ರ.
ಇದರಲ್ಲಿ ಬಡವರು ,ಸಿರಿವಂತರು ಭೇಧವಿಲ್ಲ. ಹಸಿದ ಮಧ್ಯಾಹ್ನದ ಸಮಯದಲ್ಲಿ ಊಟದ ವಿತರಣೆ ನಡೆಯುತ್ತಿದೆ ಎಂದು “ಪ್ರಸಾದಂ”ಗೆ ಪ್ರೇರಕರಾದ
ಹಿರಿಯ ಎ.ಜೆ ರಾಮಚಂದ್ರ ಹೇಳಿದ್ದಾರೆ.
ಸ್ನೇಹ ಬಳಗದ ಕಟ್ಟಾಳು
ಕೆ.ಜೆ ಕೃಷ್ಣಾನಂದ ಅವರು ಹಲವಾರು ದಾನಿಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ. ಈ ರೀತಿ ನಗರದ ಹಲವಾರು ಕಡೆ ಹಸಿವು ದಣಿಸುವ ಕೆಲಸ ಮಾಡಿದರೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದರು.
ಈ ರೀತಿಯ ಕಾರ್ಯ ಕ್ರಮಗಳನ್ನು ಮಾಡುವುದರಿಂದ ಹಲವಾರು ದಾನಿಗಳು ಮುಂದೆ ಬರುತ್ತಿದ್ದಾರೆ. ಪ್ರತಿ ವಾರ ಒಬ್ಬೊಬ್ಬರು ದಾನಿಗಳು ಇದ್ದರೆ. ಶನಿವಾರ ಹಾಗೂ ಭಾನುವಾರಸಹ ಮಧ್ಯಾಹ್ನದ ಊಟವನ್ನು ಮುಂದುವರಿಸಬಹುದು ಎಂದು ಮಾಧವ್ ಶಿವಮೊಗ್ಗ ಅವರು ಹೇಳಿದ್ದಾರೆ.
Shivamogga News ಡಾ.ತಿಮ್ಮಪ್ಪ ವೈದ್ಯಕೀಯ ಅಧೀಕ್ಷಕರು ಮೆಚ್ಚುಗೆ ಮಾತುಗಳನ್ನಾಡಿದರು,
ಕಳೆದ ಒಂದು ವರ್ಷಗಳಿಂದ ಮೆಗನ್ ಆಸ್ಪತ್ರೆಗೆ ಬಂದ ರೋಗಿಗಳ ಸಂಬಂಧಿಗಳಿಗೆ ಸ್ನೇಹ ಬಳಗದಿಂದ ಅನ್ನದಾನ ಮಾಡುತ್ತಿದ್ದಾರೆ. ಮುಖ್ಯವಾಗಿ ರುಚಿ ಮತ್ತು ಶುಚಿಯಾದ ಊಟ ನೀಡುವುದೇ ಅಲ್ಲದೆ ಸ್ವಚ್ಛತೆಯನ್ನ ಸ್ನೇಹ ಬಳಗದವರು ನಿಗಾವಹಿಸಿದ್ದಾರೆ.
” ಪ್ರಸಾದಂ” ವಾರ್ಷಿಕ
ಊಟದ ವಿತರಣೆಯನ್ನ ಶಾಸಕ ಡಿ.ಎಸ್.ಅರುಣ್ ಅವರ ಪತ್ನಿ ಶ್ರೀಮತಿ ಅರುಣ್ ನೆರವೇರಿಸಿದರು.
ಪ್ರಸಾದಂ ಮುಂದಾಳು
ನಗರಗದ್ದೆ ಶ್ರೀನಾಥ್ ಅವರು ದಾನಿಗಳ ನೆರವಿನಿಂದ ಪ್ರಸಾದಂ ವರ್ಷದ ಹೊಸ್ತಿಲು ಮುಟ್ಟಿದೆ. ನಿರಂತರ ನಡೆಸುವ ಅಪೇಕ್ಷೆ ಇದೆ ಎಂದು ಹೇಳಿ
ದಾನಿಗಳಿಗೆಲ್ಲ ಸ್ಮರಣಫಲಕ ,ಪುಷ್ಪಹಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆಲ್ಲರಿಗೂ ವಂದನೆ ಅರ್ಪಿಸಿದರು
Madhu Bangarappa ನದಿ ಯೋಜನೆಗಳ ಹಿನ್ನೆಲೆ ಭೂಮಿ ಕಳೆದುಕೊಂಡವರ ಪರ & ಸರ್ಕಾರದ ಪರ ದಾವೆ ಹೂಡಲು ಉದ್ದೇಶಿಸಲಾಗಿದೆ – ಸಚಿವ ಮಧು ಬಂಗಾರಪ್ಪ
Madhu Bangarappa ಶರಾವತಿ, ವರಾಹಿ, ಸಾವೆಹಕ್ಲು ಮತ್ತು ಚಕ್ರಾ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಟಾನ ಸಂದರ್ಭದಲ್ಲಿ ಮನೆ, ಭೂಮಿ ಕಳೆದುಕೊಂಡು ನಿರಾಶ್ರಿತರಾದವರ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಹಾಗೂ ನಿರಾಶ್ರಿತರ ಪರವಾಗಿ ದಾವೆ ಹೂಡಲು ಸಮರ್ಥ ವಕೀಲರನ್ನು ನೇಮಿಸಲು ಉದ್ದೇಶಿಸಲಾಗಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಸಹಕಾರ ನೀಡುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಮನವಿ ಮಾಡಿದರು.
ಶಿವಮೊಗ್ಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿರುವ ಮುಂಗಾರು ಮಳೆಯಿಂದ ರಾಜ್ಯದಲ್ಲಿನ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಅತೀವೃಷ್ಟಿಯಿಂದಾಗಿ ತಪ್ಪಲು ಪ್ರದೇಶಗಳಲ್ಲಿ ಭೂಕುಸಿತ ಪ್ರಕರಣಗಳು ಕಂಡುಬಂದಿವೆ. ಕೆರೆ-ಕಟ್ಟೆ-ಕಾಲುವೆಗಳು ಹಾನಿಗೊಳಗಾಗಿವೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಹುಕಾಲದಿಂದ ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದಂತೆ ಹಾಗೂ ಅವರ ರಕ್ಷಣೆಗೆ ರಾಜ್ಯ ಸರ್ಕಾರ ಶೀಘ್ರದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಅನಾದಿಕಾಲದಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
ಆದರೆ, 2015ರಿಂದ ಇತ್ತೀಚೆಗೆ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಪರವಾಗಿ ಸರ್ಕಾರ ರಕ್ಷಣೆ ಒದಗಿಸುವುದು ಅರಣ್ಯ ಕಾನೂನಿನ ದೃಷ್ಟಿಯಿಂದ ಕಷ್ಟಸಾಧ್ಯವಾಗಲಿದೆ ಎಂದರು. ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ ಅಲ್ಲದೇ ಪ್ರತಿದಿನ ಮಾಹಿತಿ ಪಡೆದು, ಅಗತ್ಯವಾಗಿರುವ ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಿಂದ ಮನೆಹಾನಿಯಾಗಿರುವ ಕೆಲವು ಕಡೆಗಳಲ್ಲಿ ಪರ್ಯಾಯವಾಗಿ ತಾತ್ಕಾಲಿಕ ಊಟ ಮತ್ತು ವಸತಿ ಸೌ¯ಭ್ಯವನ್ನು ಒದಗಿಸುವ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ ಎಂದರು.
Madhu Bangarappa ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಿಂದ ಭಾಗಶಃ ಹಾನಿಗೊಳಗಾಗಿರುವ ಅಧಿಕೃತ ಹಾಗೂ ಅನಧಿಕೃತ ಮನೆಗಳ ಮಾಲೀಕರಿಗೆ ಕೇಂದ್ರ ಸರ್ಕಾರದ 6500/-ರೂ.ಗಳ ನೆರವು ಅತ್ಯಲ್ಪವಾಗಿದ್ದು, ರಾಜ್ಯ ಸರ್ಕಾರವು ಅದಕ್ಕೆ ಹೆಚ್ಚುವರಿಯಾಗಿ 43,500/-ಗಳನ್ನು ಸೇರಿಸಿ, ಒಟ್ಟು 50,000-ರೂ.ಗಳನ್ನು ನೀಡುತ್ತಿದೆ ಎಂದರು.
ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಸರ್ಕಾರದ ವತಿಯಿಂದ 1.20ಲಕ್ಷ ರೂ.ಗಳ ತುರ್ತು ನೆರವಿನ ಜೊತೆಗೆ ಸ್ಥಳೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳಿಂದ ನೆರವನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ.
ವಿಶೇಷವಾಗಿ ಸಂಪೂರ್ಣ ನಾಶವಾಗಿರುವ ಅಧಿಕೃತ ಅಥವಾ ಅನಧಿಕೃತ ಮನೆಗಳ ಮಾಲೀಕರಿಗೆ ಸರ್ಕಾರದಿಂದಲೇ ಹೊಸ ಮನೆಯನ್ನು ಕಟ್ಟಿಸಿಕೊಡಲು ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದವರು ನುಡಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಸೇವೆ ಒದಗಿಸಲು ಪ್ರತಿಷ್ಟಿತ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ 1500 ಕೋಟಿ ರೂ.ಗಳ ಆರ್ಥಿಕ ಸಹಕಾರ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ಇಂತಹ ಅಸಂಖ್ಯಾತ ದಾನಿಗಳು ಸಹಾಯಹಸ್ತ ನೀಡುವುದಾಗಿ ತಿಳಿಸಿರುವುದು ಇನ್ನಷ್ಟು ರಚನಾತ್ಮಕ ಕಾರ್ಯ ಕೈಗೊಳ್ಳಲು ಆನೆಬಲ ಬಂದಂತಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಸರ್ಕಾರಿ ಕಚೇರಿಗಳು, ಅಂಗನವಾಡಿ ಮತ್ತು ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರದ ವತಿಯಿಂದ ಕ್ರಮ ವಹಿಸಲಾಗುತ್ತಿದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಡಾ|| ಆರ್.ಎಂ.ಮಂಜುನಾಥಗೌಡ, ಎಸ್.ಕೆ.ಮರಿಯಪ್ಪ, ಚಂದ್ರಭೂಪಾಲ್, ಕಲೀಂ, ರಮೇಶ್, ಶಿವಾನಂದ್, ವಿಜಯಕುಮಾರ್, ರಮೇಶ್‌ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
World Beautician Day ಎಲ್ಲರಿಗೂ ಸರ್ಕಾರಿಉದ್ಯೋಗ ಸಾಧ್ಯವಿಲ್ಲ. ಸ್ವಂತ ಉದ್ಯೋಗ ಆರಂಭಿಸಿ – ಅಶ್ವಿನಿ.ಪಿ.ಗೌಡ
World Beautician Day ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವ- ಉದ್ಯೋಗ ಪ್ರಾರಂಭಿಸಿ , ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿರಬೇಕು ಎಂದು ಶಿವಮೊಗ್ಗ ಅಸೋಸಿಯೇಷನ್ ಬ್ಯೂಟಿಷಿಯನ್ ಅಧ್ಯಕ್ಷೆ ಅಶ್ವಿನಿ ಪಿ ಗೌಡ ಹೇಳಿದರು.
ಬಿಗ್ ಬ್ಯೂಟಿ ಪಾರ್ಲರ್ ವತಿಯಿಂದ ವಿಶ್ವ ಬ್ಯೂಟಿಷಿಯನ್ ದಿನದ ಅಂಗವಾಗಿ ಹಲವಾರು ವಷ್ಗಳಿಮದ ಬ್ಯೂಟಿಷಿಯನ್ ವೃತ್ತಿ ನಡೆಸಿಕೊಂಡು ಬಂದಿರುವ ಹಿರಿಯ ಬ್ಯೂಟಿಷಿಯನ್‌ಗಳಾದ ರೇಖಾ ಸತೀಶ್, ಲತಾ ರಮೇಶ್, ಜ್ಯೋತಿ, ಕವಿತಾ ಪಿಂಕಿ, ರಾಜಶ್ರೀ ಕಾಮತ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಹಿಳೆಯರಲ್ಲಿ ಈಗ ಸೌಂದರ್ಯಪ್ರಜ್ಞೆ ಹೆಚ್ಚುತ್ತಿದ್ದು, ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಸಮಾಜದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ . ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್ ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆ ಶ್ಲ್ಲಾಘನೀಯ ಎಂದರು.
ಮಹಿಳೆಯರು ಸಹ ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರು ಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರು ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಹೀಗಾಗಿ ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ಈ ಮೂಲಕ ನೀಡಬೇಕು ಎಂದು ಹೇಳಿದರು.
21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಮಹಿಳೆ ಪುರುಷನಷ್ಟೇ ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ನಗರ-ಗ್ರಾಮೀಣ ಪ್ರದೇಶವೆನ್ನದೆ ಸೌಂದರ್ಯಪ್ರಜ್ಞೆ ಎಲ್ಲ ವಯೋಮಾನದ ಮಹಿಳೆಯರಲ್ಲಿ ಮೂಡುತ್ತಿದೆ. ಬ್ಯೂಟಿ ಪಾರ್ಲರ್ ಉದ್ಯಮ ಬೇಡಿಕೆಯ ಉದ್ಯಮವಾಗಿದೆ. ಮಹಿಳೆಯರು ಕೂಡ ಯಶಸ್ವಿ ಉದ್ಯಮಿಗಳಾಗಲು ಅವಕಾಶ ಇದೆ ಎಂದರು.
World Beautician Day ಇದೇ ಸಂದರ್ಭದಲ್ಲಿ ಸಮಾಜಸೇವಕರಾದ ಲಕ್ಷ್ಮಿ ಶಿಕ್ಷಕಿ, ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪಾಲಿಕೆಯ ಮಾಜಿ ಸದಸ್ಯೆ ಗೌರಿ ಶ್ರೀನಾಥ್, ಶಿವಮೊಗ್ಗ ಬ್ಯೂಟಿಷಿಯನ್ ಸಂಘದ ಪದಾಧಿಕಾರಿಗಳಾದ ಪಲ್ಲವಿ, ಐಶ್ವರ್ಯಾ, ಭವಾನಿ, ಬಿಂದು, ಪದ್ಮಾ, ಪಾವನಿ, ಶಿಲ್ಪಾ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
Paralympics ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆದವರಿಗೆ ಸರ್ಕಾರದಿಂದ ನೌಕರಿ ಪತ್ರ ವಿತರಣೆ
Paralympics ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ ಲಭ್ಯವಾಗಿದೆ.
ಭಾನುವಾರ ಮುಖ್ಯಮoತ್ರಿ ಸಿದ್ದರಾಮಯ್ಯ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶದ ಪತ್ರ ವಿತರಿಸಿದರು.
Paralympics ಒಲoಪಿಕ್ಸ್ ಪ್ಯಾರಾಲಿoಪಿಕ್ಸ್ ಏಷಿಯನ್ ಗೇಮ್ಸ್ ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮoತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿoದ ರಾಜು, ಯುವ ಸಬಲೀಕರಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮoಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Supreme Court ರಾಜ್ಯಪಾಲರು ಸಕ್ರೀಯ ಪಾತ್ರ ವಹಿಸಬೇಕಾದಾಗ ನಿಷ್ಕ್ರಿಯರಾಗಿದ್ದಾರೆ- ಸುಪ್ರೀಂ ಕೋರ್ಟ್ ನ್ಯಾ. ಬಿ.ವಿ.ನಾಗರತ್ನ
Supreme Court ಭಾರತದಲ್ಲಿ ಗವರ್ನರ್‌ಗಳು ಮಾಡಬಾರದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಸಕ್ರಿಯ ಪಾತ್ರ ವಹಿಸಬೇಕಾದಾಗ ನಿಷ್ಕ್ರಿಯರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಹೇಳಿದ್ದಾರೆ.
“ಉನ್ನತ ನ್ಯಾಯಾಲಯದ ಮುಂದೆ ರಾಜ್ಯಪಾಲರ ವಿರುದ್ಧದ ಪ್ರಕರಣಗಳನ್ನು ದುಃಖದ ಕಥೆ” ಎಂದು ಕರೆದಿದ್ದಾರೆ.
ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ತಮ್ಮ ರಾಜ್ಯಪಾಲರು ವಿಧೇಯಕಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವುದರ ಕುರಿತು ಸುಪ್ರೀಂ ಕೋರ್ಟ್‌ಗೆ ತೆರಳುವ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯವು ಪ್ರತ್ಯೇಕ ವಿಷಯದಲ್ಲಿ, ಕ್ರಿಮಿನಲ್ ಮೊಕದ್ದಮೆಯಿಂದ ಗವರ್ನರ್‌ಗಳಿಗೆ ವಿನಾಯಿತಿಯ ಪ್ರಶ್ನೆಯನ್ನು ಪರಿಶೀಲಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಎನ್‌ಎಲ್‌ಎಸ್‌ಐಯು ಪ್ಯಾಕ್ಟ್ ಕಾನ್ಫರೆನ್ಸ್‌ನಲ್ಲಿ “ಹೋಮ್ ಇನ್ ದಿ ನೇಷನ್: ಇಂಡಿಯನ್ ವುಮೆನ್ಸ್ ಸಾಂವಿಧಾನಿಕ ಇಮ್ಯಾಜಿನರೀಸ್” ಕುರಿತು ಸಮಾರೋಪ ಭಾಷಣ ಮಾಡಿದ ನ್ಯಾಯಮೂರ್ತಿ ನಾಗರತ್ನ, “ಇಂದಿನ ದಿನಗಳಲ್ಲಿ ದುರದೃಷ್ಟವಶಾತ್ ಭಾರತದಲ್ಲಿನ ಕೆಲವು ರಾಜ್ಯಪಾಲರು ತಾವು ಮಾಡಬೇಕಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಅವರು ಇರಬೇಕಾದ ಸ್ಥಳದಲ್ಲಿ ನಿಷ್ಕ್ರಿಯವಾಗಿರುತ್ತವೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಪಾಲರ ವಿರುದ್ಧದ ಪ್ರಕರಣಗಳು ಭಾರತದಲ್ಲಿ ರಾಜ್ಯಪಾಲರ ಸಾಂವಿಧಾನಿಕ ಸ್ಥಾನದ ಬಗ್ಗೆ ದುಃಖದ ಕಥೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಗವರ್ನರ್‌ಗಳ ತಟಸ್ಥತೆ” ವಿಷಯದ ಕುರಿತು ವಕೀಲೆ ಮತ್ತು ಸಮಾಜ ಸೇವಕಿ ದುರ್ಗಾಬಾಯಿ ದೇಶಮುಖರನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ನಾಗರತ್ನ, “ಕೆಲವು ಕಾರ್ಯಗಳನ್ನು ರಾಜ್ಯಪಾಲರು ನಿರ್ವಹಿಸುವ ನಿರೀಕ್ಷೆಯಿದೆ.
Supreme Court ನಾವು ನಮ್ಮ ಸಂವಿಧಾನದಲ್ಲಿ ರಾಜ್ಯಪಾಲರನ್ನು ಪರಿಚಯಿಸಲು ಬಯಸುತ್ತೇವೆ. ಏಕೆಂದರೆ, ಸೌಹಾರ್ದತೆಯ ಅಂಶ ಇರುತ್ತದೆ ಮತ್ತು ರಾಜ್ಯಪಾಲರು ನಿಜವಾಗಿಯೂ ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತರಾಗಿದ್ದರೆ, ಅವರು ಕಾರ್ಯನಿರ್ವಹಿಸುತ್ತಿದ್ದರೆ ಆ ಸಂಸ್ಥೆಯು ಸಂಘರ್ಷದ ಜನರ ನಡುವೆ ಕೆಲವು ರೀತಿಯ ತಿಳುವಳಿಕೆ ಮತ್ತು ಸಾಮರಸ್ಯವನ್ನು ತರುತ್ತದೆ ಎಂದು ನಾವು ಭಾವಿಸಿದ್ದೇವೆ. ರಾಜ್ಯಪಾಲರನ್ನು ಪಕ್ಷ ರಾಜಕೀಯಕ್ಕಿಂತ, ಬಣಗಳ ಮೇಲೆ ಇರಿಸುವುದು ಮತ್ತು ಪಕ್ಷದ ವ್ಯವಹಾರಗಳಿಗೆ ಒಳಪಡಿಸದಿರುವುದು ಆಡಳಿತದ ಆಲೋಚನೆಯಾಗಿದೆ” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರು ಕೇಳಿಬಂದಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ನಡುವೆಯೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬೆಂಗಳೂರಿನಲ್ಲಿ ಈ ಹೇಳಿಕೆ ನೀಡಿದ್ದಾರೆ. ಗೆಹ್ಲೋಟ್ ಕಳೆದ ವಾರ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು.
ಗುರುವಾರ, ಕರ್ನಾಟಕ ಸರ್ಕಾರವು ನೋಟಿಸ್ ಹಿಂಪಡೆಯಲು ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯವನ್ನು ಅಂಗೀಕರಿಸಿತು.
“ಭಾರತೀಯ ಸಾಂವಿಧಾನಿಕತೆಯನ್ನು ಆಳಗೊಳಿಸಲು, ರಾಷ್ಟ್ರವು ಫೆಡರಲಿಸಂ, ಭ್ರಾತೃತ್ವ, ಮೂಲಭೂತ ಹಕ್ಕುಗಳು ಮತ್ತು ತತ್ವದ ಆಡಳಿತಕ್ಕೆ ಒತ್ತು ನೀಡಬೇಕು” ಎಂದು ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದರು. ಕೇಂದ್ರ ಮತ್ತು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಘರ್ಷಣೆಗಳೊಂದಿಗೆ, ನ್ಯಾಯಮೂರ್ತಿ ನಾಗರತ್ನ ಅವರು ರಾಜ್ಯಗಳನ್ನು “ಅಸಮರ್ಥ ಅಥವಾ ಅಧೀನ” ಎಂದು ಭಾವಿಸಬಾರದು ಮತ್ತು ಆಡಳಿತ ಮಂತ್ರವು ಸಾಂವಿಧಾನಿಕ ರಾಜನೀತಿಯನ್ನು ಹೊಂದಿರಬೇಕು ಎಂದು ಒತ್ತಿ ಹೇಳಿದರು.
“ರಾಷ್ಟ್ರೀಯ ಮತ್ತು ಪ್ರಾದೇಶಿಕ ಆಮದು ವಿಷಯಗಳಿಗೆ ಕ್ರಮವಾಗಿ ಹಾಜರಾಗಲು ಒಕ್ಕೂಟ ಮತ್ತು ರಾಜ್ಯವು ಆದೇಶವನ್ನು ಹೊಂದಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯಗಳು ಅತ್ಯಲ್ಪವಾಗಿರುವುದಿಲ್ಲ. ರಾಜ್ಯಗಳನ್ನು ಅಸಮರ್ಥ ಅಥವಾ ಅಧೀನ ಎಂದು ಭಾವಿಸಬಾರದು. ಸಾಂವಿಧಾನಿಕ ರಾಜತಾಂತ್ರಿಕತೆಯ ಮನೋಭಾವವು ಮಂತ್ರವಾಗಬೇಕು ಮತ್ತು ಪಕ್ಷಪಾತವಲ್ಲ” ಎಂದರು.
ಸಂವಿಧಾನದ ಪೀಠಿಕೆಯಲ್ಲಿ ವಿವರಿಸಿರುವ ನಾಲ್ಕು ಆದರ್ಶಗಳಲ್ಲಿ ಭ್ರಾತೃತ್ವವು ಅತ್ಯಂತ ಕಡಿಮೆ ಅಭ್ಯಾಸವಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ನಾಗರತ್ನ, ಸಂವಿಧಾನದ ಅನುಚ್ಛೇದ 51Aರ ಭ್ರಾತೃತ್ವದ ಆದರ್ಶವನ್ನು ಸಾಧಿಸುವ ಅನ್ವೇಷಣೆಯು “ಪ್ರತಿಯೊಬ್ಬ ನಾಗರಿಕನು ತನ್ನ ಮೂಲಭೂತ ಕರ್ತವ್ಯಗಳ ಅಂಗೀಕಾರದಿಂದ ಪ್ರಾರಂಭವಾಗಬೇಕು” ಎಂದು ಹೇಳಿದರು.
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದೊಂದಿಗೆ ಸಮಾಜವು ನಿಜವಾದ “ರಚನಾತ್ಮಕ ಪೌರತ್ವ” ವನ್ನು ಪಡೆದುಕೊಳ್ಳುತ್ತದೆ. ಸಾಮಾಜಿಕ ಸುಧಾರಣೆಗೆ ಮತ್ತು ಮಹಿಳೆಯರ ಆರ್ಥಿಕ ಶೋಷಣೆಯ ವಿರುದ್ಧದ ಅತ್ಯಂತ ಸುರಕ್ಷಿತ ಸಾಧನವೆಂದರೆ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಎಂಬುದನ್ನು ನಾವು ಗಮನಿಸಬೇಕು. ಸಮಾಜದಲ್ಲಿ ಪರಿವರ್ತನಾಶೀಲ ಬದಲಾವಣೆಗಾಗಿ ಮತ್ತು ನಿಜವಾದ ‘ರಚನಾತ್ಮಕ ಪೌರತ್ವ’ವನ್ನು ಪಡೆದುಕೊಳ್ಳಲು ಕಾನೂನಿನ ರಕ್ಷಣೆಯು ಮಹಿಳೆಯರು ಮಾತೃತ್ವ ಮತ್ತು ಉದ್ಯೋಗದ ನಡುವೆ ಚೌಕಾಶಿ ಮಾಡಬೇಕಾಗಿಲ್ಲ” ಎಂದು ಅವರು ಹೇಳಿದರು.
High Court ಸರ್ಕಾರಿ ನೌಕರರು ಆಫೀಸು ಹಾಜರಿ ತಕ್ಷಣ ತಮ್ಮ ಬಳಿಯ ನಗದು ಹಣ ಘೋಷಿಸಿ ದಾಖಲೆ ಮಾಡಬೇಕು- ಸರ್ಕಾರದ ಸುತ್ತೋಲೆ
High Court ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ಕಚೇರಿಗಳಲ್ಲಿ ಹೈಕೋರ್ಟ್ ಆದೇಶದನ್ವಯ ನಗದು ಘೋಷಣೆ ರಿಜಿಸ್ಟರ್’ ನಿರ್ವಹಣೆ ಮಾಡಬೇಕೆಂದು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಎಲ್ಲಾ ರಾಜ್ಯ ಸರಕಾರಿ ಕಚೇರಿಗಳಲ್ಲಿ ನಗದು ಘೋಷಣೆ ರಿಜಿಸ್ಟರ್ ಅನ್ನು ನಿರ್ವಹಿಬೇಕು ಎಂದು ಸುತ್ತೋಲೆ ಹೊರಡಿಸಿದೆ. ಸರಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು ತಮ್ಮ ಬಳಿ ಇರುವ ನಗದು ಹಣವನ್ನು ಪ್ರತಿದಿನ ಬೆಳಿಗ್ಗೆ, ರಿಜಿಸ್ಟರ್ ನಲ್ಲಿ ಸ್ವಯಂ ಘೋಷಣೆ ಮಾಡಬೇಕು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ನಿಗಮ ಮಂಡಳಿಗಳಲ್ಲಿ ನಗದು ಘೋಷಣಾ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ನೌಕರರು ನಗದು ಘೋಷಣಾ ರಿಜಿಸ್ಟರ್ ನಲ್ಲಿ ನಗದನ್ನು ದಾಖಲಿಸದೆ ಇರುವ ಪ್ರಸಂಗ ಬೆಳಕಿಗೆ ಬಂದಿತ್ತು. ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಪ್ಪಿತಸ್ಥ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಿ ಮೈಸೂರಿನ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಣ ಪತ್ರ ಸಲ್ಲಿಸಿದ ಬೆಳಕಿನಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು, ಕೂಡ ಕೈಗೊಳ್ಳಲಾಯಿತು.
High Court ಮೈಸೂರು ಮಹಾನಗರ ಪಾಲಿಕೆಯಲ್ಲಿ ನಗದು ಘೋಷಣ ವಹಿಯನ್ನು ನಿರ್ವಹಿಸದೇ ಇರುವುದರಿಂದ ತಾವು ನಗದು ಫೋಷಣೆ ಮಾಡಿಲ್ಲವೆಂಬ ಆರೋಪಿಗಳ ವಾದವನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯ ಅವರನು, ದೋಷ ಮುಕ್ತರನ್ನಾಗಿ ಮಾಡಿತ್ತು. ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳು ದೋಷ ಮುಕ್ತರಾದರೂ ಇಲಾಖಾ ವಿಚಾರಣೆ ಮುಂದುವರೆಯಿತು.
Rotary Shivamogga ದೇಶಕ್ಕೆ ಸೇವೆ ಸಲ್ಲಿಸುವರು ನಿತ್ಯ ಸ್ಮರಣೀಯರು- ವಾಗ್ದೇವಿ ಬಸವರಾಜ್
Rotary Shivamogga ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರು ಸೈನಿಕ ಅಧಿಕಾರಿಗಳು ನಿತ್ಯ ಸ್ಮರಣೀಯರು ಎಂದು ಶಿವಮೊಗ್ಗ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ 20 ವರ್ಷಗಳ ಕಾಲ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶದ ವಿವಿಧ ಭಾಗಗಳಲ್ಲಿ ಅನೇಕ ಸೇವೆಗಳನ್ನ ಸಲ್ಲಿಸಿದ ಮಹಾಬಲೇಶ್ವರ ಹೆಗಡೆ ದಂಪತಿಗಳಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಹಗಲಿರಳು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಚಳಿ ಮಳೆ ಗಾಳಿಯಲ್ಲಿ ಯಾವುದನ್ನು ಲೆಕ್ಕಿಸದೆ ಗಡಿ ಭಾಗಗಳಲ್ಲಿ ದೇಶವನ್ನು ಕಾಯುತ್ತಿರುವ ಯೋಧರಿಗೆ ನಾವು ದೊಡ್ಡದೊಂದು ಸಲಾಂ ಅರ್ಪಿಸುತ್ತಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಹಾಬಲೇಶ್ವರ ಹೆಗಡೆಯವರು ಮಾತನಾಡಿ, ದೇಶ ಸೇವೆಯಲ್ಲಿ ಮಾಡಿದ ಕೆಲಸ ನಿಜವಾಗು ತೃಪ್ತಿ ತಂದಿದೆ. ಇಂತಹ ಪವಿತ್ರವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ತುಂಬಾ ಹೆಮ್ಮೆಯಾಗಿದೆ. ಹಿಂದೆ ಸೇನೆಗೆ ಸೇರುವವರು ಯಾವುದಕ್ಕೂ ಬಾರದವರು ಎಂಬ ಮಾತಿತ್ತು, ಆದರೆ ಈಗ ಭಾರತೀಯ ಸೇನೆ ತುಂಬಾ ಸುರಕ್ಷತೆ ಹಾಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯಲ್ಲಿ ತಮ್ಮನ ತಾವು ತೊಡಗಿಸಿಕೊಂಡು ದೇಶ ಸೇವೆಯಲ್ಲಿ ಪಾಲ್ಗೊಳ್ಳೋಣ ಎಂದ ಅವರು, ಇನ್ನರ್ ವೀಲ್ ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು.
Rotary Shivamogga ಸಮಾರಂಭದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ಶ್ವೇತಾ ಆಶಿತ್, ಮಧುರ ಮಹೇಶ್, ಜಯಂತಿ ವಾಲಿ, ಲತಾ ಸೋಮಣ್ಣ, ವೇದ ನಾಗರಾಜ್, ವಿಜಯ ರಾಯ್ಕರ್, ರಾಜೇಶ್ವರಿ ಪ್ರತಾಪ್, ವೀಣಾ ಹರ್ಷ, ನಮಿತಾ ಸೂರ್ಯನಾರಾಯಣ್, ಜ್ಯೋತಿ ಸುಬ್ಬೆಗೌಡ, ವಿನೋದಾದಳವೆ, ವಾಣಿ ಪ್ರವೀಣ್, ಗೀತಾ ಬಸವ ಕುಮಾರ್, ಪೂರ್ಣಿಮಾ ನರೇಂದ್ರ, ಲಾವಣ್ಯ ಶಶಿಧರ್, ಸುಮಾ ರವಿ, ಆಶಾ ಶ್ರೀಕಾಂತ್ ಹಾಗೂ ಇನ್ನರ್ ವೀಲ್ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
Rotary Shivamogga ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ.ಆಯಾ ಇಲಾಖೆ & ಮಹಾನಗರ ಪಾಲಿಕೆಗೆ ಹಸ್ತಾಂತರ ಬಾಕಿ- ವಿಜಯ್ ಕುಮಾರ್
Rotary Shivamogga ಸ್ಮಾರ್ಟ್ ಸಿಟಿ ಕಾರ್ಯಗಳು ದೀರ್ಘಕಾಲ ಉಳಿಯಲು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಬರಲು ಸಾರ್ವಜನಿಕರ ಸಹಕಾರ ಮುಖ್ಯ, ಅವರ ಜವಾಬ್ದಾರಿ ಹೆಚ್ಚಿರುತ್ತದೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯಕುಮಾರ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಪಾಡಿಕೊಳ್ಳಬೇಕು. ಸ್ಮಾರ್ಟ್ ಸಿಟಿಯಲ್ಲಿ ಈಗಾಗಲೇ 930 ಕೋಟಿ ರೂ. ಕಾಮಗಾರಿ ನಡೆದಿದ್ದು, ರಿಪೇರಿ ಕಾರ್ಯಕ್ಕೆ ಇನ್ನು 70 ಕೋಟಿ ರೂ. ಹಣವನ್ನು ಮೀಸಲು ಹಣವಾಗಿ ಇಡಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿವಿಧ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವುದು ಬಾಕಿ ಉಳಿದಿರುತ್ತದೆ. ಪೂರ್ಣಗೊಂಡ ಕಾಮಗಾರಿಗಳನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿ ನಿರ್ದೇಶನ ನೀಡಿರುತ್ತಾರೆ ಎಂದರು.
ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳನ್ನು, ಪತ್ರ ವ್ಯವಹಾರಗಳನ್ನು ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಲಾಗುತ್ತದೆ. ನಿರ್ವಹಣೆಯ ಮೊತ್ತವನ್ನು ತೆಗೆದುಕೊಂಡು ರಸ್ತೆ ಪಾರ್ಕ್ ಇತ್ಯಾದಿಗಳ ನಿರ್ವಹಣೆಯನ್ನು ಪ್ರಾರಂಭಿಸಬೇಕಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿಯಲ್ಲಿ ಆಗಬೇಕಿರುವ ಬಾಕಿ ಸಣ್ಣಪುಟ್ಟ ಕೆಲಸಗಳು ರಿಪೇರಿ ಕಾರ್ಯಗಳನ್ನು ಬೇಗ ಮಾಡಿ ಮುಗಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗ ನಗರ ಸಾಕಷ್ಟು ಅಭಿವೃದ್ಧಿ ಹೊಂದುವುದರ ಜತೆಗೆ ತುಂಬಾ ಸುಂದರವಾಗಿ ಕಾಣುತ್ತಿದೆ. ಇನ್ನು ಆಗಬೇಕಿರುವ ಕೆಲಸದ ಕಡೆ ಗಮನ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಸದಸ್ಯರ ಹಲವಾರು ಪ್ರಶ್ನೆಗಳಿಗೆ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯ್ ಕುಮಾರ್ ಉತ್ತರಿಸಿದರು. ಯಾವುದೇ ಸರ್ಕಾರ ಯೋಜನೆಗಳು ಫಲಪ್ರದವಾಗಲು ಸಾರ್ವಜನಿಕರ ಸಹಕಾರ ಬೇಕು. ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗ ಚಿತ್ರಣವೇ ಬದಲಾಗಿದೆ ಎಂದು ನುಡಿದರು.
Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಬಿಂದು ವಿಜಯಕುಮಾರ್, ಮಂಜುನಾಥ್‌ರಾವ್ ಕದಂ, ಚಂದ್ರಹಾಸ್ ಪಿ.ರಾಯ್ಕರ್, ಡಾ. ಅರುಣ್, ಡಾ. ಧನಂಜಯ, ಕೆ.ಜಿ.ರಾಮಚಂದ್ರರಾವ್, ಗಣೇಶ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ಹೊಸತೋಟ ಸೂರ್ಯನಾರಾಯಣ್, ರವೀಂದ್ರನಾಥ್ ಐತಾಳ್, ಕಿಶೋರ್‌ಕುಮಾರ್, ಡಾ. ಎಚ್.ಎಸ್. ನಾಗಭೂಷಣ್, ಕಾಂತೇಶ್ ಕದರಮಂಡಲಗಿ, ಶ್ರೀನಿವಾಸ್ ಗೌಡ, ಮಂಜುನಾಥ್, ಕೃಷ್ಣಮೂರ್ತಿ, ಗೀತಾ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
