Tuesday, April 7, 2026
Tuesday, April 7, 2026
Home Blog Page 620

Raghavendra Swamy ಬಾಳಗಾರಿನಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ 353 ನೇ ಆರಾಧನಾ ಮಹೋತ್ಸವ

0

Raghavendra Swamy ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದ ಕೇವಲ ಒಂಬತ್ತು ವರ್ಷದಲ್ಲಿ ಪ್ರತಿಷ್ಠಾಪಿತವಾದ ತೀರ್ಥಹಳ್ಳಿ ತಾಲ್ಲೂಕು, ಬಾಳಗಾರು ಶ್ರೀ ರಾಘವೇಂದ್ರಸ್ವಾಮಿ ಗಳವರ ಮೃತ್ತಿಕಾ ಬೃಂದಾವನದ ಸನ್ನಿಧಿಯಲ್ಲಿ 353 ನೆಯ ಆರಾಧನೆ, ಇದೇ ತಿಂಗಳು 20,21,22.08.24 ರ ವಿಜೃಂಭಣೆಯಿಂದ ನಡೆಸಲಾಗುವುದು.

Raghavendra Swamy 22.08.24 ರ ಸಂಜೆ 7.00 ಘಂಟೆಗೆ ತೀರ್ಥಹಳ್ಳಿ, ಯಕ್ಷಭಾರತಿ ಶಾಲಾ ಮಕ್ಕಳಿಂದ “ವಿಧ್ಯನ್ಮತಿ ಕಲ್ಯಾಣ” ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಯರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಠದ ಮ್ಯಾನೇಜಿಂಗ್ ಟ್ರಸ್ಟೀ ಶ್ರೀಯುತ ಅಳಗoಭಟ್ ಗುರುರಾಜ ರವರು ವಿನಂತಿಸಿದ್ದಾರೆ.

DC Shivamogga ಎಲ್ಲಾ ಇಲಾಖೆಗಳ ಸಮನ್ವಯ ಕಾರ್ಯದಿಂದ ಡೆಂಗು ನಿಯಂತ್ರಿಸಿ – ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣ ಕಾರ್ಯಗಳನ್ನು ತೀವ್ರಗೊಳಿಸಿ, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಆದ್ಯತೆ ಮೇರೆಗೆ ಡೆಂಗಿ ನಿಯಂತ್ರಣ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಡೆಂಗಿ ನಿಯಂತ್ರಣ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವಾರ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಸಿ, ಡೆಂಗಿ ನಿಯಂತ್ರಣವನ್ನು ಪರಿಣಾಮಕಾರಿಗೊಳಿಸಲಾಗುವುದು. ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬರುತ್ತಿದ್ದು ಮುಂಜಾಗೃತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಪ್ರತಿ ಶುಕ್ರವಾರ ನೀರು ಸಂಗ್ರಹಿಸುವ ಪರಿಕರಗಳನ್ನು ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ ಮತ್ತೆ ನೀರು ತುಂಬುವ ಮೂಲಕ ಶುಷ್ಕದಿನ ಆಚರಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಯವರು, ಪಿಡಿಓ ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನಗರ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರು, ಪರಿಸರ ಅಭಿಯಂತರರು ಸೇರಿದಂತೆ ಸಾರ್ವಜನಿಕರು ಡೆಂಗಿ ನಿಯಂತ್ರಣ ಕಾರ್ಯಗಳಲ್ಲಿ ಕಡ್ಡಾಯವಾಗಿ ತೊಡಗಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಡೆಂಗಿ ಪ್ರಕರಣ ವಿವರ : ಜ.01 ರಿಂದ ಆ.2 ರವರೆಗೆ ವರದಿಯಾದ ಪ್ರಕರಣಗಳಲ್ಲಿ ಭದ್ರಾವತಿ ತಾಲ್ಲೂಕಿನಲ್ಲಿ 476 ರಕ್ತದ ಮಾದರಿ ಪರೀಕ್ಷೆಯಲ್ಲಿ 34 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಪಾಸಿಟಿವಿಟಿ ರೇಟ್ ಶೇ.7, ಹೊಸನಗರದಲ್ಲಿ 582 ಪರೀಕ್ಷೆಯಲ್ಲಿ 37 ಪಾಸಿಟಿವ್ ಇದ್ದು ಶೇ.6 ಪಾಸಿಟಿವಿಟಿ ದರ, ಸಾಗರದಲ್ಲಿ 568 ಪರೀಕ್ಷೆಯಲ್ಲಿ 48 ಪಾಸಿಟಿವ್ ಬಂದಿದ್ದು ಶೇ.8 ಪಾಸಿಟಿವಿಟಿ, ಶಿಕಾರಿಪುರದಲ್ಲಿ 625 ಪರೀಕ್ಷೆಯಲ್ಲಿ 104 ಪಾಸಿಟಿವ್ ಬಂದಿದ್ದು ಶೇ.16.64, ಶಿವಮೊಗ್ಗದಲ್ಲಿ 708 ಪರೀಕ್ಷೆಯಲ್ಲಿ 153 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.21.61, ಸೊರಬದಲ್ಲಿ 681 ಪರೀಕ್ಷೆಯಲ್ಲಿ 46 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.7 ಪಾಸಿಟಿವಿಟಿ ಮತ್ತು ತೀರ್ಥಹಳ್ಳಿಯಲ್ಲಿ 473 ಪರೀಕ್ಷೆಯಲ್ಲಿ 35 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಶೇ.7 ಪಾಸಿಟಿವಿಟಿ ದರ ದಾಖಲಾಗಿರುತ್ತದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 07 ಹಾಗೂ ಒಟ್ಟು ಈವರೆಗೆ 457 ಡೆಂಗಿ ಪ್ರಕರಣ ಪತ್ತೆಯಾಗಿದ್ದು, 02 ಮರಣ ದೃಢಪಟ್ಟಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಮಾಹಿತಿ ನೀಡಿದರು.
DC Shivamogga ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಡೆಂಗಿ ಪ್ರಕರಣ ಹೆಚ್ಚು ಇರುವ ಶಿವಮೊಗ್ಗ, ಶಿಕಾರಿಪುರ ಮತ್ತು ಸಾಗರ ತಾಲ್ಲೂಕುಗಳಲ್ಲಿ ತೀವ್ರತರವಾಗಿ ಡೆಂಗಿ ನಿಯಂತ್ರಣ ಕಾರ್ಯವಾಗಬೇಕು. ಮಳೆ ಕಡಿಮೆ ಆಗುತ್ತಿದ್ದಂತೆ ಡೆಂಗಿ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಎಚ್ಚರಿಕೆ ವಹಿಸಬೇಕು. ಡೆಂಗಿ ಪ್ರಕರಣ ಹೆಚ್ಚು ಇರುವೆಡೆ ಮನೆಯೊಳಗೆ ಸಹ ಫಾಗಿಂಗ್‌ಗೆ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ಫಾಗಿಂಗ್ ಮಷೀನ್ ಸಿದ್ದವಿರಿಸಿಕೊಳ್ಳಬೇಕು. ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನವನ್ನು ಪರಿಣಾಮಕಾರಿಗೊಳಿಸಬೇಕು. 2 ಕ್ಕಿಂತ ಹೆಚ್ಚು ಡೆಂಗಿ ಪ್ರಕರಣ ಪತ್ತೆಯಾದ ಪ್ರದೇಶವನ್ನು ಡೆಂಗಿ ಹಾಟ್‌ಸ್ಪಾಟ್ ಎಂದು ಗುರುತಿಸಿ ನಾಲ್ಕು ವಾರಗಳ ಕಾಲ ಆ ಪ್ರದೇಶವಸನ್ನು ಫಾಗಿಂಗ್ ಮಾಡಿಸಬೇಕೆಂದು ಸೂಚನೆ ನೀಡಿದರು.
ಸುಬ್ಬಯ್ಯ ಮತ್ತು ಸಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಡೆಂಗಿ ನಿಯಂತ್ರಣ ಅರಿವು ಕಾರ್ಯ ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ನಗರದಲ್ಲಿನ ಡೆಂಗಿ ಹೆಚ್ಚಿರುವ ಪ್ರದೇಶಗಳನ್ನೂ ದತ್ತು ಪಡೆದು ನಿಯಂತ್ರಣ ಚಟುವಟಿಕೆಯಲ್ಲಿ ಭಾಗಯಾಗಬೇಕೆಂದರು. ಇನ್ನೆರಡು ತಿಂಗಳು ತೀವ್ರತರವಾಗಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದರು.
ಶಾಲೆಗಳ ಸುತ್ತಮುತ್ತ ಸಹ ಲಾರ್ವಾ ಉತ್ಪತ್ತಿ ತಾಣ ನಾಶಪಡಿಸುವ ಕೆಲಸವಾಗಬೇಕು. ಶಾಲೆಗಳ ಒಳಗೆ ಸಹ ಫಾಗಿಂಗ್ ಆಗಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ 5 ಸಾವಿರ ಸೊಳ್ಳೆ ನಿವಾರಕ ಡೆಪಾ ಆಯಿಲ್ ನೀಡಲಾಗಿದ್ದು, ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಡೆಂಗಿ ನಿರ್ವಹಣೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅವರು ವಿದ್ಯಾರ್ಥಿಗಳಿಗೆ ಡೆಂಗಿ ಕುರಿತು ಅರಿವು ಮತ್ತು ಸೊಳ್ಳೆ ನಿವಾರಕಗಳನ್ನು ಹಚ್ಚಿಕೊಳ್ಳುವ ಬಗೆಯನ್ನು ತಿಳಿಸಿಕೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಮಾತನಾಡಿ, ಡೆಂಗಿ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಯ ನೌಕರರು, ಆರೋಗ್ಯ ಕಾರ್ಯಕರ್ತರು ಭಾಗಿಯಾಗಬೇಕು. ಆರೋಗ್ಯ ಇಲಾಖೆಯವರು ಪ್ರತಿ ದಿನ ಸಂಜೆ ನನಗೆ ಡೆಂಗಿ ಕುರಿತಾದ ದೈನಿಂದಿನ ವರದಿಯನ್ನು ನೀಡಬೇಕೆಂದು ಸೂಚಿಸಿದರು.
ವೈದ್ಯ ವಿದ್ಯಾರ್ಥಿಗಳಿಗೆ ಡೆಂಗ್ಯು : ಸಿಮ್ಸ್ ಮೆಡಿಕಲ್ ಕಾಲೇಜಿನ 04 ವಿದ್ಯಾರ್ಥಿಗಳು ಡೆಂಗಿ ಪಾಸಿಟಿವ್ ಇದ್ದು, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಲಾರ್ವಾ ಉತ್ಪತ್ತಿ ತಾಣ ನಾಶ ಮತ್ತು ಫಾಗಿಂಗ್ ಮಾಡಿಸಬೇಕೆಂದು ಸಿಮ್ಸ್ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಡಿಹೆಚ್‌ಓ ಡಾ.ನಟರಾಜ್, ವಿವಿಧ ಕಾರ್ಯಕ್ರಮಾಧಿಕಾರಿಗಳು, ಟಿಹೆಚ್‌ಓ ಡಾ.ಚಂದ್ರಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Prasar Bharati Doordarshan ದೂರದರ್ಶನ ಕೇಂದ್ರದ ಆಡಿಷನ್ ನಲ್ಲಿ ಭರತನಾಟ್ಯ ಕಲಾವಿದೆ ಪ್ರೇಕ್ಷಾ ಅರವಿಂದ್ ಗೆ “ಬಿ” ಗ್ರೇಡ್

0

Prasar Bharati Doordarshan ಪ್ರಸಾರ ಭಾರತಿ ದೂರದರ್ಶನ ಕೇಂದ್ರದಲ್ಲಿ ನಡೆಸಿದ ಭರತನಾಟ್ಯ ಆಡಿಷನ್‌ ನಲ್ಲಿ ನಗರದ ಪ್ರೇಕ್ಷಾಅರವಿಂದ್ ಅವರು ಆಯ್ಕೆಯಾಗಿದ್ದಾರೆ.

ಇದರಿಂದ ದೂರದರ್ಶನದ ಬಿ ಗ್ರೇಡ್ ಆರ್ಟಿಸ್ಟ್ ಎಂಬ ಶೀರ್ಷಿಕೆಗೆ ಪಾತ್ರರಾಗಿದ್ದು,
Prasar Bharati Doordarshan ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರಗೊಳ್ಳುವ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಪ್ರಸ್ತುತ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿರುವ ಇವರು ವೈದ್ಯ ಕೆ.ಎಲ್ ಅರವಿಂದ ಹಾಗೂ ಸಿ. ಎ. ಪೂರ್ಣಿಮಾ ಅವರ ಪುತ್ರಿ. ಪ್ರೇಕ್ಷಾ ಅವರು ನೃತ್ಯ ಗುರು ವಿದೂಷಿ ಡಾ. ಕೆ.ಎಸ್.ಪವಿತ್ರಾ ಇವರ ಶಿಷ್ಯೆ.

Madhu Bangarrappa ಭ್ರಷ್ಟಾಚಾರದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರೇ ನಂಬರ್ ಒನ್ – ಮಧು ಬಂಗಾರಪ್ಪ

0

Madhu Bangarrappa ವಾಜಪೇಯಿ ಲೇಔಟ್ ನ ಹಗರಣ, ಜಂಕ್ಷನ್‌ನಲ್ಲಿ ಯಡಿಯೂರಪ್ಪ ಅರಣ್ಯ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ, ನಿದಿಗೆ ಬಳಿ ಗಾರ್ಮೆಂಟ್‌ನ ಜಾಗಕ್ಕೆ ೧೯೨ ಎ ಸೆಕ್ಷನ್ ಹಾಕಿ ರೈತರ ಭೂಮಿಯನ್ನು ಬಲವಂತವಾಗಿ ಒಕ್ಜಲೆಬ್ಬಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳಿವೆ. ಇವುಗಳ ತನಿಖೆಗೂ ರಾಜ್ಯ ಸರಕಾರ ಮುಂದಾಗಲಿದೆ.

ಭ್ರಷ್ಠಾಚಾರದಲ್ಲಿ ಬಿಜೆಪಿಯ ಅಧ್ಯಕ್ಷರೇ ನಂಬರ್ ಒನ್ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Madhu Bangarrappa ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣದ ವಿಚಾರದಲ್ಲಿ ಪಾದಯತ್ರೆಗೆ ವಿಪಕ್ಷಗಳು ಮುಂದಾಗಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಹಗರಣವಾಗಿದ್ದಕ್ಕೆ ತಪ್ಪಿತಸ್ಥg ವಿರುದ್ಧ ಕ್ರಮ ಕೈಗೊಂಡರೂ ವಿಪಕ್ಷಗಳು ಆರೋಪ ಮಾಡಲು ಮುಂದಾಗಿವೆ. ಬಿ.ವೈ ವಿಜೇಂದ್ರ ಕೇವಲ ಸಿಎಂ ವಿರುದ್ಧ ಮಾತ್ರವಲ್ಲ, ನನ್ನ ವಿರುದ್ಧವೂ ಹಗುರವಾಗಿ ಮಾತನಾಡಿದ್ದಾರೆ. ಆದರೆ ಯತ್ನಾಳ್ ಎತ್ತಿರುವ ವಿಷಯಗಳ ಬಗ್ಗೆ ಅವರು ಮಾತನಾಡದೆ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ನೀತಿಗೆಟ್ಟ ವಿಚಾರದ ಬಗ್ಗೆ ವಿಜೇಂದ್ರ ಮಾತನಾಡುತ್ತಾರೆ. ಅವರ ವಿರುದ್ಧವೇ ಭ್ರಷ್ಠಾಚಾರ, ದೌರ್ಜನ್ಯದ ಆರೋಪವಿದೆ. ಆದರೆ ಸಿದ್ದರಾಮಯ್ಯನವರ ಮತ್ತು ಡಿಕೆಶಿ ವಿರುದ್ಧ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ. ಡಿಕೆಶಿಯನ್ನು ಜೈಲಿಗೆ ಹಾಕಿಸುವಲ್ಲಿ ಯಡಿಯೂರಪ್ಪನವರ ಪಾಲು ಇದೆ ಎಂದು ಗುಡುಗಿದರು.

Bharat Cultural Association Shivamogga ಆಗಸ್ಟ್ 18 ರಂದು”ಸೇಮ್ ಟು ಸೇಮ್ ಬಟ್ ಡಿಫರೆಂಟ್” ನಾಟಕ ಪ್ರದರ್ಶನ

0

Bharat Cultural Association Shivamogga ಸಹ್ಯಾದ್ರಿ ರಂಗ ತರಂಗ , ಶಿವಮೊಗ್ಗ ಹಾಗೂ ಭಾರತ ಸಾಂಸ್ಕೃತಿಕ ಸಂಘ ಶಿವಮೊಗ್ಗದ ವತಿಯಿಂದ ಆ.18 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸೇಮ್ ಸೇಮ್ ಬಟ್ ಡಿಫರೆಂಟ್ ಎಂಬ ನಾಟಕ ಸಂಜೆ 6:30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕುರಿತು ಪ್ರೆಸ್ ಟ್ರಸ್ಟಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ನಾಗಭೂಷಣ್, ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮುಂಬೈನ ಪ್ರಖ್ಯಾತ ರಂಗ ತಂಡ-ತಮಾಷಾ ಥಿಯೇಟರ್ಸ್ ತಂಡದ ಕಲಾವಿದರು ಈ ನಾಟಕ ಪ್ರದರ್ಶನ ನೀಡಲಿದ್ದಾರೆ ಎಂದರು.

Bharat Cultural Association Shivamogga ಒಂದು ವಿಭಿನ್ನ ಅಪರೂಪದ ಸಂಗೀತ ನಾಟಕ ಸೇಮ್ ಸೇಮ್ ಬಟ್ ಡಿಫರೆಂಟ್ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರದರ್ಶನಕಂಡು ಖ್ಯಾತಿಗಳಿಸಿದೆ. ಇದೊಂದು ಅಪರೂಪದ ಸಂಗೀತ ಪಯಣವಾಗಿದ್ದು, ಶ್ರೀಮತಿ ಸಪನ್ ಸರನ್ ಅವರು ಈ ನಾಟಕ ನಿರ್ದೇಶನ ಮಾಡಿದ್ದಾರೆ ಎಂದರು.

Department of Women Child Development ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಅವರಿಂದ ಮದಾರಿಪಾಳ್ಯದ ಅಂಗನವಾಡಿ ಪರಿಶೀಲನೆ

0

Department of Women Child Development ಶ್ರೀ ಹೇಮಂತ್. ಎನ್, ಐ,ಎ.ಎಸ್,ಮಾನ್ಯ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳು ಜಿಲ್ಲಾ ಪಂಚಾಯತ್, ಶಿವಮೊಗ್ಗ ರವರು ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ಹಾಗೂ ಉಪ ನಿರ್ದೇಶಕರು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ರವರೊಂದಿಗೆ ಪೂರಕ ಅಂದಾಜು ಯೋಜನೆಯಡಿಯಲ್ಲಿವಿನೂತನವಾಗಿ ನಿರ್ಮಿಸಿರುವ ಶಿವಮೊಗ್ಗ ತಾಲೂಕಿನ ಮಾದರಿಪಾಳ್ಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿ ಇದೆ ರೀತಿ ಇನ್ನೂ ಉತ್ತಮ ಮಟ್ಟದಲ್ಲಿ ಹೊಸ ತಂತ್ರಜ್ಞಾನ, ಕೌಶಲ್ಯ ಬಳಸಿಕೊಂಡು ಬಾಲಸ್ನೇಹಿಯಾಗಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ MGNREGA ಹೊಂದಾಣಿಕೆ ಅನುದಾನ ಘಟಕ ವೆಚ್ಚ 20 ಲಕ್ಷಗಳಲ್ಲಿ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 22 Department of Women Child Development ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ನಿರ್ಮಾಣ ಮಾಡುವ ಬಗ್ಗೆ ಪರಿಶೀಲಿಸಿ ಈ ಸಂಬಂಧಿಸಿದಂತೆ ಮಾದರಿ ನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲು ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಿಗೆ ಸೂಚಿಸಿದರು ಹಾಗೂ ಅಂಗನವಾಡಿ ಕೇಂದ್ರಗಳ ಹೊರಂಗಣ ಸ್ವಚ್ಛತೆ, ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಎಲ್ಲಾ ಮಕ್ಕಳು ಹಾಜರಿರುವಂತೆ ಅಗತ್ಯ ಕ್ರಮ ವಹಿಸಲು ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆರವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು

Ministry of Environment, Forest and Climate Change ಪಶ್ಚಿಮ ಘಟ್ಟದ 56,826 ಚದರ ಕಿಮೀ ಪ್ರದೇಶ ಪರಿಸರ ಸೂಕ್ಷ್ಮ ಎಂದು ಕೇಂದ್ರದಿಂದ ಕರಡು ಅಧಿಸೂಚನೆ

0

Ministry of Environment, Forest and Climate Change ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ, ವಯನಾಡ್‌ ಭೂಕುಸಿತ ದುರಂತ ಸಂಭವಿಸಿದ ಬಳಿಕ 6ನೇ ಅಧಿಸೂಚನೆ ಪ್ರಕಟಿಸಿದೆ. ಜುಲೈ 6, 2022ರಂದು 5ನೇ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯನ್ನು ಗುರುತಿಸುವ ವಿಚಾರದಲ್ಲಿ ಕೇಂದ್ರ ಮತ್ತು ಆರು ರಾಜ್ಯಗಳು ಇದುವರೆಗೆ ಒಮ್ಮತಕ್ಕೆ ಬಂದಿಲ್ಲ.
ಗುಜರಾತ್‌ನ 449 ಚದರ ಕಿ.ಮೀ, ಮಹಾರಾಷ್ಟ್ರದ 17,340, ಗೋವಾದ 1,461, ಕರ್ನಾಟಕದ 20,668 ತಮಿಳುನಾಡಿನ 6,914 ಮತ್ತು ಕೇರಳದ 9,994 ಚದರ ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕರಡು ಪ್ರತಿಗೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಕೇಂದ್ರವು 60 ದಿನಗಳ ಗಡುವನ್ನು ನೀಡಿದೆ.
ಪಶ್ಚಿಮ ಘಟ್ಟಗಳ ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಮೊದಲ ಬಾರಿಗೆ ಮಾರ್ಚ್ 2014 ರಲ್ಲಿ ಹೊರಡಿಸಲಾಗಿತ್ತು. ಇದು 2012ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಸಲಹೆಗಳನ್ನು ಆಧರಿಸಿದೆ.
Ministry of Environment, Forest and Climate Change ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಹಿರಿಯ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿಯು ಸಿದ್ಧಪಡಿಸಿದ್ದ ವರದಿಯ ಸಲಹೆಗಳನ್ನು ಪರಿಶೀಲಿಸಿತ್ತು.
ಆರು ರಾಜ್ಯ ಸರ್ಕಾರಗಳ ಸಲಹೆಗಳನ್ನು ಮರು ಪರಿಶೀಲಿಸಲು, ವಿಪತ್ತು ಪೀಡಿತ ಪ್ರಾಚೀನ ಪರಿಸರ ವ್ಯವಸ್ಥೆಯ ಸಂರಕ್ಷಣೆ ಅಂಶಗಳನ್ನು ಮತ್ತು ಪ್ರದೇಶದ ಹಕ್ಕುಗಳು, ಸವಲತ್ತುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 2022ರಲ್ಲಿ ಕೇಂದ್ರವು ಮತ್ತೊಂದು ಸಮಿತಿಯನ್ನು ರಚಿಸಿತ್ತು. ಅದರ ಸಲಹೆಗಳನ್ನು ಕೂಡ ಕರಡು ಪ್ರತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ವಯನಾಡ್ ಭೂಕುಸಿತ ದುರಂತ ಸಂಭವಿಸಿದ ಬಳಿಕ ಮಾಧವ್ ಗಾಡ್ಗೀಳ್ ನೇತೃತ್ವದ ‘ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ’ (WGEEP)ಯು ಆಗಸ್ಟ್ 2011ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಜಾರಿಗೆ ಆಗ್ರಹ ಕೇಳಿ ಬಂದಿದೆ.

MESCOM ಆಗಸ್ಟ್ 6 ರಂದು ಮಂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

MESCOM ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಘಟಕ-06ರ ವ್ಯಾಪ್ತಿಯಲ್ಲಿ ಹೊಸ 11ಕೆವಿ ಮಾರ್ಗದ ಕಾಮಗಾರಿ ನಿರ್ವಹಣೆ ಇರುವುದರಿಂದ ಆ. 06 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ಸರ್ಕಲ್, ಕೃಷಿ ಕಚೇರಿ, ಮಾಕಮ್ಮ ಈದಿ, MESCOM ಕೆರೆದುರ್ಗಮ್ಮನ ಕೇರಿ, ಪುಟ್ಟನಂಜಪ್ಪ ಕೇರಿ, ಆಜಾದ್‌ನಗರ, ಕಲಾರ್‌ಪೇಟೆ, ಸಿದ್ದಯ್ಯರಸ್ತೆ, ಇಮಾಮ್ ಬಡಾ, ಮುರಾದ್‌ನಗರ, ಕ್ರೌನ್ ಪ್ಯಾಲೇಸ್ ಶಾದಿ ಮಹಾಲ್, ತಹಾ ಶಾದಿ ಮಹಾಲ್, ಮಂಡಕ್ಕ ಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

PSI Parashuram ಯಾದಗಿರಿ ಪಿಎಸ್ ಐ ಪರಶುರಾಮ್ ಹಠಾತ್ ಸಾವು ಸ್ಥಳೀಯ ಶಾಸಕರ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ

0

PSI Parashuram ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದ್ದು, ಆದರೆ ಅವರ ಪತ್ನಿ ಈ ಸಂಬಂಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಪರಶುರಾಮ ಅವರು ಸೈಬರ್ ಕ್ರೈಂ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟ್ರಸ್‌ನ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆದರೆ, ಈ ಪ್ರಕರಣವು ಈಗ ರಾಜ್ಯದ ಗಮನ ಸೆಳೆಯುತ್ತಿದ್ದು, ಹೊಸ ತಿರುವು ಪಡೆದುಕೊಂಡಿದೆ. “ನನ್ನ ಪತಿ, ಪಿಎಸ್‌ಐ ಪರಶುರಾಮ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಸನ್ನೇ ಗೌಡ ಕಾರಣ” ಎಂದು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರಿಗೆ ದೂರು ಸಲ್ಲಿಸಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
“ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬೇಡಿಕೆ ಇಟ್ಟಿದ್ದರು. ಬಳಿಕ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿದ್ದರಿಂದ ಪರಶುರಾಮ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಅವರಿಗೆ ಹೃದಯಾಘಾತವಾಗಿದೆ. ಶಾಸಕರು ಮತ್ತು ಅವರ ಮಗ ವರ್ಗಾವಣೆಗೆ 30-40 ಲಕ್ಷ ರೂ. ಕೇಳಿದ್ದರು. ಅವರ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಜಾತಿ ಮತ್ತು ಹಣಕ್ಕಾಗಿ ನಿಯತ್ತಿನ ಅಧಿಕಾರಿಯ ಸಾವಿಗೆ ಕಾರಣರಾಗಿದ್ದಾರೆ” ಎಂದು ಪತ್ನಿ ಶ್ವೇತಾ ಆರೋಪಿಸಿದ್ದಾರೆ.
PSI Parashuram “ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್‌ಗಾಗಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಪರಶುರಾಮ 30 ಲಕ್ಷ ರೂ. ನೀಡಿ ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದ ಪೂರೈಸುವ ಮುನ್ನವೇ ಅವರನ್ನು ಮತ್ತೆ ಯಾದಗಿರಿ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು. ಸಾಲದ ಸುಳಿಗೆ ಸಿಲುಕಿದ್ದರು. ಶುಕ್ರವಾರ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಪೋನ್‌ನಲ್ಲಿ ಮಾತನಾಡಿದ್ದರು” ಎಂದು ಕುಟುಂಬಸ್ಥರು ಹೇಳಿದ್ದಾರೆ.

Ripponpet Police ವಿಷಸೇವಿಸಿದ ಯುವಕನ ಸ್ಥಿತಿ ಗಂಭೀರ

0

Ripponpet Police ರಿಪ್ಪನ್‌ಪೇಟೆ ಹೊಸನಗರ ರಸ್ತೆಯ ಲಾಡ್ಜ್ ವೊಂದರಲ್ಲಿ ಯುವಕನೊಬ್ಬ ವಿಷ ಸೇವಿಸಿರುವ ಘಟನೆ ನಡೆದಿದೆ.ಬಿದನೂರು ನಗರ ಸಮೀಪದ ಹೆಂಡೆಗದ್ದೆ ನಿವಾಸಿ ರಾಕೇಶ್ ( 22) ವಿಷ ಸೇವಿಸಿರುವ ಯುವಕನಾಗಿದ್ದಾನೆ.
ರಿಪ್ಪನ್‌ಪೇಟೆ ನಗರ ಮೂಲದ ಯುವಕ ರಾಕೇಶ್ ಖಾಸಗಿ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದು ಮಧ್ಯಾಹ್ನದ ಸಮಯದಲ್ಲಿ ವಿಷ ಸೇವಿಸಿದ್ದಾನೆ ಸ್ವಲ್ಪ ಸಮಯದಲ್ಲಿ ಯುವಕನು ನರಳಾಡುತಿದ್ದದ್ದು ಲಾಡ್ಜ್ ನ ವ್ಯವಸ್ಥಾಪಕರ ಗಮನಕ್ಕೆ ಬಂದು ಬಾಗಿಲು ತೆರೆದು ನೋಡಿದಾಗ ವಿಷ ಸೇವಿಸಿರುವುದು ಧೃಡಪಟ್ಟಿದೆ. ಕೂಡಲೇ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಯುವಕನನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
Ripponpet Police ಯುವಕನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.