Monday, April 6, 2026
Monday, April 6, 2026
Home Blog Page 612

Radio Shivamogga ರೇಡಿಯೊ ಶಿವಮೊಗ್ಗ ದಿಂದ ಆಗಸ್ಟ್ 15 ರಂದು ಆರ್ ಜೆ ಹಂಟ್ ಆಡಿಷನ್

0

Radio Shivamogga ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ ೯೦.೮ ಎಫ್ ಎಮ್ ಈಗ ಸಾರ್ವಜನಿಕರಿಗೆ ಆರ್ ಜೆ ಹಂಟ್ ನಡೆಸುತ್ತಿದೆ. ಇದರಲ್ಲಿ ಶಿವಮೊಗ್ಗದ ಆಸಕ್ತರಿಗೆ ಭಾಗವಹಿಸಲು ಅವಕಾಶವಿದೆ.
ಆ.೧೫ ರಂದು ಆಡಿಷನ್ ನಡೆಯಲಿದೆ. ಇದರಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಗೂಗಲ್ ಅಪ್ಲಿಕೇಷನ್ ಭರ್ತಿ ಮಾಡಬೇಕು. ನೋಂದಣಿ ಶುಲ್ಕ ೫೦ರೂ. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಒಂದು ಫೋಟೋ ಹಾಗೂ ಪೆನ್ ತರಬೇಕು. ಧ್ವನಿ, ಭಾಷಾ ಸ್ಪಷ್ಟತೆ, ಆತ್ಮ ವಿಶ್ವಾಸ, ನಿರೂಪಣೆ, ಸೋಷಿಯಲ್ ಮೀಡಿಯಾ ಆಸಕ್ತಿಗಳು, ಸಾಮಾನ್ಯ ಜ್ಞಾನ, ಸ್ಥಳೀಯ ಜ್ಞಾನ, ಬಾಡಿ ಲಾಂಗ್ವೇಜ್ ಇತ್ಯಾದಿಗಳನ್ನು ಗಮನಿಸಲಾಗುವುದು. ಆ.೧೩ ನೋಂದಣಿಗೆ ಕಡೆಯ ದಿನವಾಗಿದೆ.
ಭಾಗವಹಿಸುವವರು ತಮ್ಮ ಇಷ್ಟದ ಯಾವುದೇ ವಿಷಯದ ಬಗ್ಗೆ ೨-೩ ನಿಮಿಷದ್ಟು ಮಾತನಾಡಲು ಸಿದ್ಧರಾಗಿ ಬರಬೇಕು. ವಿಷಯದ ಆಯ್ಕೆಯಲ್ಲಿ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನ, ಕ್ರೈಮ್, ಸೆಕ್ಸ್ ಯಾವುದೇ ಧರ್ಮ, ಜಾತಿ, ಸಮುದಾಯಗಳು, ಲಿಂಗದ ನಿಂದನೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸಿದ್ದವಾಗಿ ಬಂದ ವಿಷಯದ ಬಗ್ಗೆ ಮಾತನಾಡುವುದು, ನಾವು ನೀಡುವ ವಿಚಾರದ ಬಗ್ಗೆ ಆಶು ಮಾತು ( ಸ್ಪಾಂಟೇನಿಯಸ್ ಟಾಕ್) ಇರುತ್ತದೆ.
Radio Shivamogga ಇದರಲ್ಲಿ ಆಯ್ಕೆಯಾದವರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಆರ್ ಜೆ ಕಾರ್ಯ ನಿರ್ವಹಣೆ, ವಿಷಯ ಸಂಗ್ರಹ, ಬೇಸಿಕ್ ವಾಯ್ಸ್ ಎಡಿಟಿಂಗ್ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತದೆ. ಈ ತರಬೇತಿಯಲ್ಲಿದ್ದವರಿಗೆ ಪ್ರಮಾಣ ಪತ್ರ ದೊರೆಯಲಿದೆ. ಇದರಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸಿದವರನ್ನು ಆಯ್ಕೆ ಮಾಡಿಕೊಂಡು ಬಾನುಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.
ಗೂಗಲ್ ಅಪ್ಲಿಕೇಷನ್ ಹಾಗೂ ಹೆಚ್ಚಿನ ಮಾಹಿತಿಗೆ ನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ (ಮೊ: ೭೨೫೯೧ ೭೬೨೭೯) ಇದಕ್ಕೆ ಸಂಪರ್ಕಿಸಬಹುದು. ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಳ್ಲಬಹುದು. ಎಂದು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.

Rashtothana ಅಜೇಯ- 50,ಅದಮ್ಯ-40 .ಕೃತಿಗಳ ಸಾರ್ಥಕ ವರ್ಷಾಚರಣೆ ಲೇಖಕರಿಗೆ ಅಭಿನಂದನೆ & ವಿಚಾರ ಸಂಕಿರಣ

0

Rashtothana ರಾಷ್ಟೋತ್ಥಾನ ಬಳಗ, ಶಿವಮೊಗ್ಗ, ಹಾಗೂ ವಿಕಾಸ ಟ್ರಸ್ಟ್, ಅಖಿಲ ಭಾರತ ಸಾಹಿತ್ಯ ಪರಿಷತ್‌ ಮತ್ತು ಸಂಸ್ಕಾರ ಭಾರತಿ, ಶಿವಮೊಗ್ಗ ಆ. 12ರ ಸೋಮವಾರ ಸಂಜೆ 6 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ವೈಚಾರಿಕ ಉಪನ್ಯಾಸ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಬಳಗದ ಅಧ್ಯಕ್ಷ ಡಾ!! ಪಿ. ಆರ್. ಸುಧೀಂದ್ರ,
ಬ್ರಿಟಿಷರನ್ನು ಭಾರತದಿಂದ ಹೊಡೆದು ಓಡಿಸಲು ಕ್ರಾಂತಿಕಾರಿ ಮಾರ್ಗವನ್ನು ಹಿಡಿದು ಬಹಳಷ್ಟು ಹೋರಾಟಗಾರರು ತಮ್ಮ ಪ್ರಾಣಾರ್ಪಣೆಯನ್ನು ಮಾಡಿದ್ದಾರೆ.

ಅಂತವರಲ್ಲಿ ಆಜಾದ್ ಚಂದ್ರಶೇಖರ್ ಕೂಡ ಒಬ್ಬರು. ತಮ್ಮ ತಾರುಣ್ಯದ ದಿನಗಳಲ್ಲಿ ಭಾರತದ ಹೋರಾಟಕ್ಕೆ ಹೊಸ ರೀತಿಯ ವ್ಯಾಖ್ಯಾನವನ್ನು ಬರೆದಂತಹ ಮಹಾನ್ ಧೀರ ಹೋರಾಟಗಾರ ಆಜಾದ್ ಚಂದ್ರಶೇಖರ್ ಇವರ ಜೀವನ ಚರಿತ್ರೆಯನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ, ಭಾರತದ ಯುವ ಜನತೆಯಲ್ಲಿ ಹೋರಾಟದ ಆ ದಿನಗಳನ್ನು ಮರು ಸೃಷ್ಟಿಸಿದಂತವರು ಖ್ಯಾತ ಲೇಖಕ ಬಾಬು ಕೃಷ್ಣಮೂರ್ತಿಯವರು ಎಂದರು.

ಆಜಾದ್ ಚಂದ್ರಶೇಖರ್ ಅವರ ಜೀವನ ಚರಿತ್ರೆ ಕೃತಿ “ಅಜೇಯ” ವನ್ನು ರಚಿಸಿ 1974 ರಲ್ಲಿ ಬಿಡುಗಡೆ ಮಾಡಿದರು. ಇಂದಿಗೆ 50 ವರ್ಷಗಳು ತುಂಬಿವೆ. ಜೊತೆಗೆ ಇನ್ನೊಬ್ಬ ಮಹಾನ್ ಹೋರಾಟಗಾರ ಕ್ರಾಂತಿಕಾರಿ ವಾಸುದೇವ ಬಲವಂತ ಪಡಕೆ ಇವರ ಜೀವನ ಚರಿತ್ರೆ “ಅದಮ್ಯ” ವನ್ನು ಪುಸ್ತಕ ರೂಪದಲ್ಲಿ ರಚಿಸಿ 40 ವರ್ಷಗಳು ತುಂಬಿದವು ಎಂದರು.

Rashtothana ಈ ಸಂದರ್ಭದಲ್ಲಿ ರಾಷ್ಟೋತ್ಥಾನ ಬಳಗ, ಶಿವಮೊಗ್ಗ ವತಿಯಿಂದ ಈ ಎರಡು ಕೃತಿಗಳ ಲೇಖಕರಿಗೆ ಅಭಿನಂದನೆ ಸಮಾರಂಭ ಹಾಗೂ ವೈಚಾರಿಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ ಉಪಸ್ಥಿತರಿರುವರು. ಪುಸ್ತಕ ಕುರಿತು ಮಾತನಾಡಲು ವಾಗ್ಮಿ, ಲೇಖಕ, ವೃತ್ತಿಯಲ್ಲಿ ಉಪನ್ಯಾಸಕ ಆದ ಆದರ್ಶ ಗೋಖಲೆ, ವಿಕಾಸ ಟ್ರಸ್ಟ್‌ನ ಅಧ್ಯಕ್ಷ ರಂಗನಾಥ ಬಿ.ಎ. ಉಪಸ್ಥಿತರಿರುವರು.

ಅಧ್ಯಕ್ಷತೆಯನ್ನು ರಾಷ್ಟೋತ್ಥಾನ ಬಳಗದ ಅಧ್ಯಕ್ಷ ಡಾ!! ಸುಧೀಂದ್ರ ವಹಿಸುವರು ಎಂದರು.

Human Fraternity Forum ಮೌಢ್ಯತೆ ವಿರುದ್ಧ ಜನಜಾಗೃತಿ ಪ್ರಜ್ಞಾವಂತರ ಜವಾಬ್ದಾರಿ- ರಾಜೇಶ್ .ಸಿ.ಕಾನಡೆ

0

Human Fraternity Forum ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ ಸಮಾಜದಲ್ಲಿ ಬಲವಾಗಿ ಬೇರೂರಿವೆ. ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುವ ಕಾರ್ಯ ಪ್ರಜ್ಞಾವಂತರ ಜವಾಬ್ದಾರಿ ಎಂದು ಮಾನವ ಬಂಧುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷ ರಾಜೇಶ್ ಸಿ. ಕಾನಡೆ ಹೇಳಿದರು.

ಆಯನೂರಿನ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಆಸರೆ ಮಹಿಳಾ ಸಂಘ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಹಮ್ಮಕೊಂಡ ಬಸವ ಪಂಚಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಗರ ಪಂಚಮಿ ಹಬ್ಬದ ಆಚರಣೆ ಹೆಸರಿನಲ್ಲಿ ಹುತ್ತ ಮತ್ತು ಕಲ್ಲು ನಾಗರ ಮೂರ್ತಿಗೆ ಹಾಲು, ನೈವೇದ್ಯ ಅರ್ಪಿಸಿ ದುಂದು ವೆಚ್ಚ ಮಾಡುವುದರಿಂದ ಲಕ್ಷಾಂತರ ಲೀಟರ್ ಹಾಲು ಮಣ್ಣು ಪಾಲು ಆಗುತ್ತಿದೆ. ಇದರಿಂದ ಯಾರಿಗೆ ಸಹ ಉಪಯೋಗವಿಲ್ಲ.
ಇದರ ಬದಲಾಗಿ ಬಡ ಮಕ್ಕಳು, ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು, ಹಣ್ಣು ನೀಡಿದರೆ ದೇವರಿಗೆ ನಿಜವಾದ ಪೂಜೆ ಸಲ್ಲಿಸಿದಂತಾಗುತ್ತದೆ. ಮೌಢ್ಯತೆ ವಿರುದ್ಧ ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲರಿಂದ ನಡೆಯಬೇಕು ಎಂದರು.

ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದ್ದು, ಮಾನವತವಾದವೇ ನಮ್ಮ ಧರ್ಮ ಎಂಬ ಉದ್ಧೇಶದಿಂದ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ 2023 ರಲ್ಲಿ ಸುಮಾರು 2.23 ಲಕ್ಷ ಮಕ್ಕಳು ಬಳಲುತ್ತಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೃಢಪಡಿಸಿತ್ತು. ಈ ನಿಟ್ಟಿನಲ್ಲಿ ಹಬ್ಬಗಳಲ್ಲಿನ ಮೌಢ್ಯತೆ ತೊಲಗಿಸಬೇಕು. ಕಲ್ಲಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಪಠ್ಯ ಪರಿಕರಗಳನ್ನು ಮಾನವ ಬಂಧುತ್ವ ವೇದಿಕೆಯಿಂದ ವಿತರಿಸಲಾಯಿತು.

Human Fraternity Forum ಆಸರೆ ಮಹಿಳಾ ಸಂಘದ ಅಧ್ಯಕ್ಷೆ ಆರ್. ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಲತಾ, ಆಸರೆ ಮಹಿಳಾ ಸಂಘದ ಕಾರ್ಯದರ್ಶಿ ವಿಶಾಲಾಕ್ಷಮ್ಮ, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಾಗರಾಜಪ್ಪ, ಮಾನವ ಬಂಧುತ್ವ ವೇದಿಕೆ ಗುಡುಗಿನಕೊಪ್ಪ ಗ್ರಾಮ ಸಂಚಾಲಕ ವೀರಭದ್ರ ಸ್ವಾಮಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಸೊರಬ ಕಾರ್ಯದರ್ಶಿ ಟಿ.ಎಚ್. ಲತಾ ಸೇರಿದಂತೆ ಅಂಗನವಾಡಿ ಸಿಬ್ಬಂದಿ ಮತ್ತು ಸ್ಥಳೀಯ ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.

Kanchi Kamakoti Medical Trust ನೇತ್ರ ಸಂಬಂಧೀ ಐಆರ್ ಐ ಎಸ್ ರಿಟ್ರಾಕ್ಟರ್ ಆವಿಷ್ಕಾರಕ್ಕೆ ಪೇಟೆಂಟ್

0

Kanchi Kamakoti Medical Trust ಕಂಚಿ ಕಾಮಕೋಟಿ ವೈದ್ಯಕೀಯ ಟ್ರಸ್ಟಿನ ಇಂಟ್ರಾ ಆಪರೇಟಿವ್ ಫ್ಲಾಪಿ ಐರಿಸ್ ಸಿಂಡೋಮ್ ನಿರ್ವಹಣೆಗಾಗಿ ಐಆರ್‌ಐಎಸ್ ರಿಟ್ರಾಕ್ಟರ್ ಎಂಬ ಅವಿ?ರಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯಿಂದ ಪೇಟೆಂಟ್ ನೀಡಲಾಗಿದೆ.

ಪೇಟೆಂಟ್ ಕಾಯಿದೆಗಳು, 1970 ರ ಅಡಿಯಲ್ಲಿ 20 ವರ್ಷಗಳವರೆಗೆ ಮಾನ್ಯವಾಗಿರುವ ಪೇಟೆಂಟ್ ಅನ್ನು ಇತ್ತೀಚೆಗೆ ನೀಡಲಾಗಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಐರಿಸ್ ನಿರ್ವಹಣೆಗೆ ಅನುವು ಮಾಡಿಕೊಡುವ ಈ ವಿಶಿ? ಅವಿಷ್ಕಾರವನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ ಮತ್ತು ವಕ್ರೀಕಾರಕ ಶಸ್ತ್ರಚಿಕಿತ್ಸೆಯ ಸಲಹೆಗಾರ ಡಾ|| ಮಲ್ಲಿಕಾರ್ಜುನ ಹೇರಲಗಿ ಅಭಿವೃದ್ಧಿಪಡಿಸಿದ್ದಾರೆ.

Kanchi Kamakoti Medical Trust ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಇಂಟ್ರಾ ಆಪರೇಟಿವ್ ಫ್ಲಾಪಿ ಐರಿಸ್ ಸಿಂಡೋಮ್ ಅನ್ನು ಐರಿಸ್ ನಡುಕ, ಛೇದನದ ಕಡೆಗೆ ಐರಿಸ್ ಸುತ್ತುವರಿಯುವುದು ಮತ್ತು ದೊಡ್ಡ ಮಟ್ಟದಲ್ಲಿ ಅಡ್ಡಿಯಾಗುವ ಬೆಳೆಯುತ್ತಿರುವ ಕಣ್ಣಿನ ಪಾಪೆಯ ಸಂಕೋಚನವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಸಣ್ಣ ಪಾಪೆಯಲ್ಲಿ ಬಳಸಬಹುದು.

Samyukta Kisan Morcha ಈಗ ರೈತ ಸಂಘಟನೆಗಳಿಂದ ‘ ಕಾರ್ಪೋರೇಟ್ ಕಂಪನಿಗಳೆ ಕ್ವಿಟ್ ಇಂಡಿಯಾ’ ಚಳವಳಿ

0

Samyukta Kisan Morcha ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶವ್ಯಾಪಿ ಕರೆಯಾದ ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಹೋರಾಟದ ಅಂಗವಾಗಿ ಇಂದು ನಗರದ ರಾಯಲ್ ವೃತ್ತದ ಬಳಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಪ್ರತಿಭಟನೆ ಮಾಡಿ, ಕಾರ್ಪೊರೇಟ್ ಕಂಪನಿಗಳ ಭೂತ ದಹನ ಮಾಡಲಾಯಿತು.

ಈ ಸಂದರ್ಭದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ , ಕರ್ನಾಟಕ ಜನಶಕ್ತಿಯ ವಸಂತ್ ಕಾಳೆ ಮಾತನಾಡುತ್ತಾ

ಸ್ವಾತಂತ್ರ್ಯ ಹೋರಾಟದಲ್ಲಿ 1942 ರ ಸಮಯದಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಐತಿಹಾಸಿಕ ಹೋರಾಟ ನಡೆದ ದಿನವಾದ ಇಂದು ಈ ದೇಶದ ದುಡಿಯುವ ಜನರಿಗೆ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂಬ ದೇಶವ್ಯಾಪಿ ಬೃಹತ್ ಹೋರಾಟ ನಡೆಯುತ್ತಿದೆ. ಇಂದು ಯಾವುದೇ ಸರ್ಕಾರಗಲಿ ಅಧಿಕಾರಕ್ಕೇರಲಿ ಈ ಬಂಡವಾಳಶಾಹಿ ಗಳ ಪರವಾಗಿ ನೀತಿಗಳನ್ನು ಜಾರಿಗೆ ತಂದು, ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ.

Samyukta Kisan Morcha ಹಾಗಾಗಿ, ಇಂದು ಕೃಷಿಯ – ಕಾರ್ಪೋರೇಟಿಕರಣ ನಿಲ್ಲಿಸಬೇಕು ರೈತ ವೀರೋಧಿ – ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಬೇಕು,
ಭಾರತದ ಕೃಷಿ ಉದ್ಪಾದನೆ- ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾದ ಆಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು, ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು, ಕೈಗಾರಿಕೆ- ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಿ, ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಿ, ಕೃಷಿ ಉತ್ಪನ್ನಗಳಿಗೆ ಡಾ/ ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ ೫೦% ಬೆಂಬಲ ಬೆಲೆಯನ್ನು ಕಾನೂನಾತ್ಮಕ ಗೊಳಿಸಿ, ಕೃಷಿ ಒಳಸುರಿಗಳ ಮೇಲಿನ GST ಹಿಂಪಡೆಯಿರಿ, ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು, ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಗಳನ್ನು ಸಹಕಾರಿಸಂಘಗಳ ಮೂಲಕ ನಿರ್ಮಿಸಲು ಸಹಾಯಧನ ನೀಡಬೇಕು, ಅಂತರ ರಾಜ್ಯ ನೀರಾವರಿ ಸಮಸ್ಯೆಗಳನ್ನು ಕಾಲಮಿತಿಯೊಳಗಡೆ ಬಗೆಹರಿಸಬೇಕು, ಅರಣ್ಯ ಸಂಪತ್ತನ್ನು ರಕ್ಷಿಸಲು ಪಶ್ಚಿಮಘಟ್ಟದ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ವರದಿಯನ್ನು ಅನುಷ್ಠಾನ ಗೊಳಿಸಬೇಕು, ಬರ ಹಾಗೂ ಅತೀವೃಷ್ಠಿಯಿಂದ ಕೃಷಿ ಕ್ಷೇತ್ರಕ್ಕಾದ ನಾಶ ನಷ್ಟಕ್ಜೆ ವೈಜ್ಞಾನಿಕ ಪರಿಹಾರಬನೀಡಬೇಕು, ಕೇರಳದ ವಯನಾಡು ಸೇರಿದಂತೆ ಈ ಬಾರಿಯ ಮೇಘಸ್ಪೋಟವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಪುನರ್ವಸತಿ ಕಲ್ಪಿಸಬೇಕು, ಸರಕಾರಗಳ ಕೃಷಿ ವೀರೋಧಿ ನೀತಿಯಿಂದಾಗಿ ಸಾಲಗಾರರಾದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಫಸಲ್ ಭೀಮಾ ಯೋಜನೆಯಿಂದಾಗಿ ರೈತರಿಗಾದ ಮೋಸ ಹಾಗೂಖಾಸಗಿ ವಿಮಾ ಕಂಪನಿಗಳ ಹಗಲು ದರೋಡೆ ನಿಲ್ಲಿಸಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಸರ್ಕಾರ ಹಿಡೇರಿಸಬೇಕು, ಇಲ್ಲದಿದ್ದರೆ ಬೃಹತ್ ಹೋರಾಟಗಳಿಗೆ ರೈತ ಕೃಷಿಕಾರ್ಮಿಕರು ಬಿದಿಗಿಳಿಯಬೇಕಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ , ರಾಜ್ಯ ರೈತ ಸಂಘದ ದ್ಯಾವಣ್ಣ ಜನಶಕ್ತಿಯ ಜಿಲ್ಲಾ ಸದಸ್ಯ ಅಪ್ಪಾಜಿ, ಹೊನ್ನೂರಪ, ಸೇರಿದಂತೆ ಇತರರು ಇದ್ದರು.

Shivamogga Police ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

0

Shivamogga Police ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ತಾನು ಕೂಡ ಬಾವಿಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಾಲೂಕಿನ ಮತ್ತಿಕೈ ವ್ಯಾಪ್ತಿಯಲ್ಲಿ ನಡೆದಿದೆ.

ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ(12), ಸಂಪದಾ (06) ಸಾವನ್ನಪ್ಪಿದವರು. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Shivamogga Police ಶಿವಮೊಗ್ಗ ನಗರ ಠಾಣೆ ಪಿಎಸ್‌ಐ ರಮೇಶ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ನಗರ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Shivamogga Narayana Hrudayalaya ಹೃದಯದಲ್ಲಿನ ರಂಧ್ರ ಮುಚ್ಚುವ ಯಶಸ್ವಿ ಶಸ್ತ್ರಚಿಕಿತ್ಸೆ- ಡಾ.ಬಾಲಸುಬ್ರಹ್ಮಣ್ಯಂ

0

Shivamogga Narayana Hrudayalaya ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ 2 ವರ್ಷಗಳಿಂದ ಮಿನಿಮಲ್ ಇನ್ಸಾಸಿವ್ ಹೃದಯ ಯ ಕಾರ್ಯ ವಿಧಾನವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ನಾವು 3 ಮಿನಿಮಲ್ ಇನ್ವಾಸಿವ್ ಮಹಾಪಧಮನಿಯ ಕವಾಟವನ್ನು ಬದಲಾಯಿಸಲಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ಚಿಕಿತ್ಸಾ ತಜ್ಞ ಡಾ!! ಬಾಲಸುಬ್ರಹ್ಮಣ್ಯಂ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9 ಮಕ್ಕಳು ಮತ್ತು ಯುವತಿಯರಲ್ಲಿ ಆಸ್ಟಿಯಮ್ ಸೆಕಂಡಮ್ ಹೃತ್ಕರ್ಣದ ಸೆಪ್ಪಲ್ ದೋಷ ಮುಚ್ಚುವಿಕೆ (ಹೃದಯದಲ್ಲಿನ ರಂಧ್ರ) ಎದೆಯ ಮಧ್ಯದಲ್ಲಿನ ಕಲೆ ಗುರುತನ್ನು ತಪ್ಪಿ ಸಲಾಗಿದೆ. ಇದು ಅತ್ಯುತ್ತಮ Shivamogga Narayana Hrudayalaya ಯಶಸ್ವಿ ಫಲಿತಾಂಶಗಳನ್ನು ನೀಡಿದೆ. ಆರ್ಮ್ಪಿಟ್ ಪ್ರದೇಶದಲ್ಲಿ ಮಿನಿಮಲ್ ಇನ್ಸಾಸಿವ್ ವಿಧಾನದ ಮೂಲಕ ಯುವಕನಲ್ಲಿ ಎಡ ಹೃತ್ಕರ್ಣದ ಹೃದಯದಿಂದ ಗೆಡ್ಡೆ ತೆಗೆದುಹಾಕುವುದನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.
ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ರೋಗಿಗಳಿಗೆ ಮಿನಿಮಲ್ ಇನ್ವಾಸಿವ್ ಹೃದಯ ಕಾರ್ಯ ವಿಧಾನವನ್ನು ವಿಸ್ತರಿಸುವುದನ್ನು ಮುಂದುವರಿಸಲಾಗುವುದು ಎಂದರು.

Public Health Campaigns ಜಿಲ್ಲೆಯಲ್ಲಿನ ಕ್ಲಿನಿಕ್ ಗಳಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

Public Health Campaigns 2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 3 ಕ್ಲಿನಿಕ್‌ಗಳಲ್ಲಿ ಖಾಲಿಯಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಎಂಬಿಬಿಎಸ್ ವೈದ್ಯರ -2 ಹುದ್ದೆಗೆ ಎಂಬಿಬಿಎಸ್ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂರ‍್ನ್ಶಿಪ್ ಪೂರೈಸಿರಬೇಕು.
ಕಿರಿಯ ಆರೋಗ್ಯ ಸಹಾಯಕ(ಆರೋಗ್ಯ ನಿರೀಕ್ಷಣಾಧಿಕಾರಿಗಳು)ರ-3 ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಕರ್ನಾಟಕ ರಾಜ್ಯದ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದ್ದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು.

ಅಥವಾ ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು. ಅಥವಾ ಪಿಯುಸಿ (ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು.
ನೇಮಕಾತಿಯು ಮೇರಿಟ್ ಕಂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು

ಆಸಕ್ತರು ಅರ್ಜಿ ನಮೂನೆಯನ್ನು ಎನ್.ಹೆಚ್.ಎಂ. ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಹಾಗೂ ವಾಸ ಸ್ಥಳದ ಬಗ್ಗೆ ಮಹಾನಗರ ಪಾಲಿಕೆ/ಸಂಬಂಧಿಸಿದ ಪಂಚಾಯತ್‌ನಿಂದ ದೃಢೀಕರಣ ಪತ್ರ ಮತ್ತು ಸ್ವವಿವರಗಳೊಂದಿಗೆ ಆ.13 ರಂದು ಮಧ್ಯಾಹ್ನ 1.30ರೊಳಗಾಗಿ ಸಲ್ಲಿಸುವುದು.

Public Health Campaigns ಅದೇ ದಿನ ಸಂಜೆ 5.30ರವೆಗೆ ಎಲ್ಲಾ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-200337 ನ್ನು ಸಂಪರ್ಕಿಸುವುದು.

Ministry of Forests and Climate Change ಗಮನಿಸಿ. ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ ಮಾಡಲಾಗಿದೆ

0

Ministry of Forests and Climate Change ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ನಿರ್ದೇಶನ ನೀಡಿದೆ.
Ministry of Forests and Climate Change ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ಧ್ವಜ ಸಂಹಿತೆ 2002 ರಡಿ ಎಲ್ಲಾ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ಹಾಗೂ ಸ್ವಾತಂತ್ರ‍್ಯ ದಿನಾಚರಣೆಯ ದಿನ ನಿಷೇಧಿತ ಪ್ಲಾಸ್ಟಿಕ್ ಧ್ವಜವನ್ನು ಬಳಸದಂತೆ ಹಾಗೂ ಈ ನಿರ್ದೇಶನವನ್ನು ಉಲ್ಲಂಘಿಸಿದವರ ವಿರುದ್ಧ ಅಪರಾಧ ಸ್ವರೂಪಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಮೇಶ್ ವಿ. ತಿಳಿಸಿದ್ದಾರೆ.

DC Shivamogga ಜಿಲ್ಲಾಮಟ್ಟದ ಜಾಗೃತಿ & ಉಸ್ತುವಾರಿ ದೌರ್ಜನ್ಯ ಪ್ರತಿಬಂಧ ಸಮಿತಿಗೆ ಅಧಿಕಾರೇತರ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಅರ್ಜಿ ಆಹ್ವಾನ

0

DC Shivamogga ಶಿವಮೊಗ್ಗ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿಗೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟಿಗೆ ಸೇರಿದ 05 ಮತ್ತು ಇತರೆ ಪ್ರವರ್ಗಗಳಿಂದ 03 ಅಧಿಕಾರೇತರ ಸದಸ್ಯರನ್ನು ಹೊಸದಾಗಿ ಆಯ್ಕೆಗೊಳಿಸಲು ಪ.ಜಾತಿ ಮತ್ತು ಪ.ವರ್ಗದವರ ಪರವಾಗಿ ಧ್ವನಿ ಎತ್ತಿ ನ್ಯಾ ಒದಗಿಸಬಲ್ಲಂತಹ ಆಸಕ್ತ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಮತ್ತು ಇತರೆ ಪ್ರವರ್ಗಕ್ಕೆ ಸೇರಿದವರಿಂದ ಅರ್ಜಿ ಆಹ್ವಾನಿಸಿದೆ.

DC Shivamogga ಆಸಕ್ತರು ಅರ್ಜಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.20 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ 08182-249241 ನ್ನು ಸಂಪರ್ಕಿಸುವುದು.