Sunday, April 5, 2026
Sunday, April 5, 2026
Home Blog Page 602

S.S. Mallikarjun ಭದ್ರಾ ಡ್ಯಾಂ ಭರ್ತಿ.ರೈತರಲ್ಲಿ ಹರ್ಷ. ತೋಟಗಾರಿಕಾ ವಾರ್ಷಿಕ ಎರಡು ಬೆಳೆಗಳಿಗೆ ಅನುಕೂಲ- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

0

S.S. Mallikarjun ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಂತೆ ಸಕಾಲಿಕವಾಗಿ ಬಂದ ಮುಂಗಾರು ಮಳೆಯಿಂದ ಭದ್ರಾ ಜಲಾಶಯ ಭರ್ತಿಯಾಗಿದ್ದು ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಶಿವಮೊಗ್ಗ ಸೇರಿದಂತೆ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಮತ್ತಿತರ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಹೇಳಿದರು.

ಅವರು ಇಂದು ಬಿ ಆರ್ ಪಿ ಯಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಕಳೆದ ಸಾಲಿನಲ್ಲಿ ಸಕಾಲದಲ್ಲಿ ಮಳೆ ಆಗದಿದ್ದ ಪರಿಣಾಮವಾಗಿ ರೈತರಲ್ಲಿ ಆತಂಕದ ಛಾಯೆ ಮೂಡಿತ್ತು. ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ, ಅದರಲ್ಲೂ ವಿಶೇಷವಾಗಿ ತೋಟಗಾರಿಕೆಯ ವಾರ್ಷಿಕ ಎರಡು ಬೆಳೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಹಾಯವಾಗಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕು ರೈತರ ನೆಮ್ಮದಿಯ ಬದಿಕಿಗೆ ಆಸಾರೆಯಾಗಲೆಂದು ಎಂದವರು ಆಶಿಸಿದರು.

S.S. Mallikarjun ಈ ಜಲಾಶಯದ ವ್ಯಾಪ್ತಿಗಳು ಕೊಡುವ ಅಚ್ಚು ಪಟ್ಟು ಪ್ರದೇಶದ ರೈತರು ಇರುವ ನೀರನ್ನು ಮಿತ ಬಳಕೆ ಹಾಗೂ ಸದ್ಬಳಕೆ ಮಾಡಿಕೊಂಡು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ದಾವಣಗೆರೆ ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಬಸವಂತಪ್ಪ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು, ಹೊನ್ನಾಳಿ ಶಾಸಕ ಶಾಂತನಗೌಡ ಹಾಗೂ ಹರಿಹರದ ಮಾಜಿ ಶಾಸಕ ರಾಮಪ್ಪ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕು ಗಳಿಂದ ಆಗಮಿಸಿದ್ದ ಅಧಿಕಾರಿಗಳು ganyaru ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

CM Siddharamaih ಪ್ರಾಸಿಕ್ಯೂಷನ್ ಅನುಮತಿ .ಸಿಎಂ ಸಿದ್ಧರಾಮಯ್ಯ ಅವರು ಹೇಳಿದ್ದೇನು?

0

CM Siddharamaih ಮಾನ್ಯ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಅವರ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ.

ನಮ್ಮ ಸರ್ಕಾರವನ್ನು ಅಭ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರದ ಪಾಲುದಾರರು. ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ.
ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು.

ನನ್ನ ವಿರುದ್ಧ ದೂರು ಬಂದ ದಿನವೇ ಶೋಕಾಸ್ ನೋಟೀಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರೆಲ್ಲರೂ ನನ್ನ ಪರವಾಗಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದು ರಾಜಕೀಯ ಪಿತೂರಿಯಾಗಿದ್ದು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.

ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ . ಬಿಜೆಪಿಯವರ ಈ ನಿಲುವಿಗ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ.

CM Siddharamaih ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿಯವರ ವಿರುದ್ಧ ದೂರು ನೀಡಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ನವೆಂಬರ್ ತಿಂಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿಗಾರಿಕೆಗೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗಿಲ್ಲ.
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

Klive Special Article ಮಲ್ಲಮ್ಮಳ ಮುಂದೆ ಮಂಡಿಯುರಿ ಕೃತಜ್ಞತೆ ಸಲ್ಲಿಸಿದ್ದ ಶಿವಾಜಿ

0

Klive Special Article ಬೆಳವಡಿ ಮಲ್ಲಮ್ಮ ಬೆಳವಾಡಿ ಸಾಮ್ರಾಜ್ಯದ (ಸಂಷ್ಟಾನ) ರಾಣಿ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಈ ಮಲ್ಲಮ್ಮ. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆಯಾಗಿದ್ದಾರೆ, ಜಗತ್ತಿನಲ್ಲಿ ಪ್ರಥಮವಾಗಿ ಎರಡು ಸಾವಿರ ಮಹಿಳಾ ಸೈನ್ಯವನ್ನು ಕಟ್ಟಿ ಶಿವಾಜಿ ಮಹಾರಾಜರ ಧೈರ್ಯ ಪ್ರಶ್ನೆ ಮಾಡಿದ ಮತ್ತು ಶಿವಾಜಿ ಮಾಹಾರಜರಿಗೆ ಪ್ರತಿಭಟಿಸಿದ ರಾಣಿ ಬೆಳವಡಿ ಮಲ್ಲಮ್ಮ

● ಬೆಳವಡಿ ಮಲ್ಲಮ್ಮನ ಬಾಲ್ಯದ ಜೀವನ:- ಆಧುನಿಕ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಗೋವಾವನ್ನು ನಿಯಂತ್ರಿಸಿದ ಸೋಧೆ ಸಾಮ್ರಾಜ್ಯದ ರಾಜ ಮಧುಲಿಂಗ ನಾಯಕನ ಮಗಳು ಈ ಮಲ್ಲಮ್ಮ, ಇವರ ಶಿಕ್ಷಣವು 5 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಅಲ್ಲಿ ಅವಳು ತನ್ನ ತಂದೆ ಮತ್ತು ಅವಳ ಸಹೋದರ ಸದಾಶಿವ ನಾಯಕನಿಗೆ ನಿರ್ಮಿಸಿದ ಶಾಲೆಯಲ್ಲಿ ಓದಿದಳು. ಶಾಲೆಯ ಪ್ರಾಂಶುಪಾಲರು ಶಂಕರ್ ಭಟ್ ಗಮನಾರ್ಹ ವಿದ್ವಾಂಸರಾಗಿದ್ದರು ಮತ್ತು 10 ಹಿರಿಯ ಶಾಸ್ತ್ರಿಗಳು (ತತ್ವಶಾಸ್ತ್ರ ಮತ್ತು ಪ್ರಾಚೀನ ಗ್ರಂಥಗಳ ಗೌರವಾನ್ವಿತ ಶಿಕ್ಷಕರು) ಮಲ್ಲಮ್ಮನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಮಲ್ಲಮ್ಮ ಮದುವೆಯ ವಯಸ್ಸನ್ನು ತಲುಪಿದಾಗ, ಅವಳ ತಂದೆ ಸ್ವಯಂವರವನ್ನು ಏರ್ಪಡಿಸಲು ನಿರ್ಧರಿಸಿದರು. ಮಲ್ಲಮ್ಮ ತನ್ನ ದಾಳಿಕೋರರಿಗೆ ಒಂದು ತಿಂಗಳೊಳಗೆ ಅವನ ವಯಸ್ಸು ಮತ್ತು ಒಂದಕ್ಕೆ ಸಮನಾದ ಹುಲಿಗಳ ಸಂಖ್ಯೆಯನ್ನು ಬೇಟೆಯಾಡಲು ಸವಾಲು ಹಾಕಲು ನಿರ್ಧರಿಸಿದಳು. ಬೆಳವಾಡಿಯ ರಾಜಕುಮಾರ ಈಶಪ್ರಭು ತನ್ನ 20ನೇ ವಯಸ್ಸಿನಲ್ಲಿ ಒಂದು ತಿಂಗಳಲ್ಲಿ 21 ಹುಲಿಗಳನ್ನು ಯಶಸ್ವಿಯಾಗಿ ಬೇಟೆಯಾಡಿ ಕೊಂದು ಮಲ್ಲಮ್ಮನ ಕೈಗೆ ಸಿಕ್ಕರು. ಈ ಒಕ್ಕೂಟದೊಂದಿಗೆ ಮಲ್ಲಮ್ಮ ಬೆಳವಾಡಿ ಮಲ್ಲಮ್ಮ ಎಂದು ಕರೆಯಲ್ಪಟ್ಟರು ಮತ್ತು ಈಶಪ್ರಭುವಿನ ಜೊತೆಯಲ್ಲಿ ಬೆಳವಾಡಿಯ ಆಡಳಿತ ದಂಪತಿಯಾದರು, ಇದು ತುಲನಾತ್ಮಕವಾಗಿ ಸಣ್ಣ ಸಾಮ್ರಾಜ್ಯವಾಗಿದ್ದು, ಅವರ ಪ್ರದೇಶಗಳು ಆಧುನಿಕ ದಿನದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಭಾಗಗಳನ್ನು ಒಳಗೊಂಡಿವೆ.

● ಮಲ್ಲಮ್ಮ ಮತ್ತು ಮರಾಠರ ಜೊತೆಗಿನ ಯುದ್ಧ:- ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠರ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜನನ್ನು ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.

Klive Special Article ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ. ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು ‘ಸಾವಿತ್ರಿ ಬಾಯಿ’ ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ.

ಶಿವಾಜಿ ಮಹಾರಾಜರ ಸೈನ್ಯ ನಿರಂತರ ಇಪ್ಪತ್ತೇಳು ದಿನಗಳ ಪ್ರಯತ್ನ ಮಾಡಿದರೂ ಬೆಳವಡಿ ಕೋಟೆ ಬೇದಿಸಲು ಸಾದ್ಯವಾಗಲಿಲ್ಲ. ಇಪ್ಪತ್ತೆಂಟನೆಯ ದಿನ ಕೋಟೆ ವಶವಾಯಿತು. ರಾಣಿ ಮಲ್ಲಮ್ಮನಿಗೆ ಅವಮಾನಿಸಿದ ಸುಖೋಜಿ ಗಾಯಕವಾಡನ ಕಣ್ಣುಗಳನ್ನು ಶಿವಾಜಿ ಮಹಾರಾಜರು ಕಿಳಿಸಿರುವುದಾಗಿ ಮರಾಠಿ ಇತಿಹಾಸದ ದಾಖಲೆಗಳು ಹೇಳುತ್ತವೆ. ಶಿವಾಜಿಯು ತನ್ನ ಸೈನಿಕರು ತಪ್ಪು ಮಾಡಿದ ಕಾರಣಕ್ಕೆ ಶಿವಾಜಿ ಸ್ವತಃ ರಾಣಿ ಬೆಳವಾಡಿ ಮಲ್ಲಮ್ಮ ಅವರ ಪರಾಕ್ರಮ ಮೆಚ್ಚಿ ಅವರ ಹತ್ತಿರ ಮಂಡಿ ಊರಿ ಕೃತಜ್ಞೆ ಹೇಳುತ್ತಾರೆ, ರಾಣಿ ಬೆಳವಾಡಿ ಮಲ್ಲಮ್ಮ ಅವರ ಸಂಸ್ಥಾನ ದಲ್ಲಿ ಶಿವಾಜಿ ಅವರ ಮೂರ್ತಿ ಸ್ಥಾಪನೆ ಮಾಡ್ತಾರ ಅಂತೆ ಪುರಾವೆಗಳಿವೆ.

ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು, ಹಾಗೂ ಬೆಳವಡಿಯ ಮಲ್ಲಮ್ಮಳು ಬಿಲ್ಲು ಬಾಣ, ಕಾವಲಿಗಳ ಆಯುಧಗಳನ್ನು ಉಪಯೋಗಿಸಿ ಯುದ್ಧ ಮಾಡಿದಳು ಎಂದು ಉಲ್ಲೇಖಿಸಲಾಗಿದೆ. ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ ಅವರು ಕ್ರಿ.ಶ 1704-05 ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.

● ಕೊನೆಯ ಮಾತು:- ಇತಿಹಾಸದಲ್ಲಿ ಬೆಳವಡಿ ಮಲ್ಲಮ್ಮಾ ಜೀ ಮತ್ತು ಶಿವಾಜಿ ಮಹಾರಾಜರ ಸಂಘರ್ಷದ ನಂತರ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯದ ಭಾವನಾತ್ಮಕ ಬೇಸುಗೆಯುಂಟು ಮಾಡುವ ಪ್ರೇರಣಾದಾಯಿ ಘಟನೆಯಾಯಿತು. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿ, ಮರಾಠರೊಂದಿಗೆ ಕೆಚ್ಚೆದೆಯಿಂದ ಹೋರಾಡಿ ಯುದ್ಧದಲ್ಲಿ ಜಯಶಾಲಿಯಾಗಿ, ಶತ್ರುಗಳನ್ನು ಮಂಡಿಯುರುವಂತೆ ಮಾಡಿದ ಮಲ್ಲಮ್ಮ ಎಂಬ ಈ ವೀರ ಮಹಿಳೆಗೆ ನಮ್ಮದೊಂದು ಸಲಾಂ ಹೇಳೋಣವೇ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

Koramagala Police ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

0

Koramagala Police ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ.

ಶನಿವಾರ ತಡರಾತ್ರಿ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿಯು ಹೊರ ರಾಜ್ಯದ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜ್ ವೊಂದರಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಲೈಂಗಿಕ ದೌರ್ಜನ್ಯದಿಂದ ಅಸ್ವಸ್ಥಗೊಂಡಿರುವ ಯುವತಿಯನ್ನು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಕರಣದ ಹಿನ್ನಲೆ :
ಸಂತ್ರಸ್ತ ಯುವತಿಯು ರಾತ್ರಿ ಕೋರಮಂಗಲದ ಪಬ್ ವೊಂದರಲ್ಲಿ ಸ್ನೇಹಿತರ ಜೊತೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದಳು. ತಡರಾತ್ರಿ ಪಾರ್ಟಿ ಮುಗಿಸಿದ ನಂತರ, ಅಪರಿಚಿತ ದ್ವಿಚಕ್ರ ವಾಹನ ಚಾಲಕನ ಮೂಲಕ ಮನೆಯತ್ತ ಲಿಫ್ಟ್ ಪಡೆದುಕೊಂಡಿದ್ದಳು.
ಈ ವೇಳೆ ಯುವತಿಯು ಮದ್ಯದ ನಶೆಯಲ್ಲಿದ್ದಳು ಎನ್ನಲಾಗಿದೆ.

ಬೈಕ್ ಚಾಲಕನು ಯುವತಿಯನ್ನು ಗೋಡೌನ್ ವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಯುವತಿಯನ್ನು ಹೆಬ್ಬುಗೋಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

Koramagala Police ಗೃಹ ಸಚಿವರ ಹೇಳಿಕೆ : ಈ ಕುರಿತಂತೆ ಭಾನುವಾರ ಗೃಹ ಸಚಿವ ಪರಮೇಶ್ವರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಕಾನೂನು ರೀತ್ಯ ಪೊಲೀಸರು ಕ್ರಮ ಜರುಗಿಸಲಾಗಿದ್ಧಾರೆ ಎಂದು ತಿಳಿಸಿದ್ದಾರೆ.

ತಂಡ ರಚನೆ :
ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಪತ್ತೆಗೆ, ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸಲಾರಂಭಿಸಿದ್ದಾರೆ. ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಬಿರುಸುಗೊಂಡಿದೆ.

Ninasam Theatre institute ನೀನಾಸಮ್ ಸಂಸ್ಥೆಯಲ್ಲಿ ಅಕ್ಟೋಬರ್ 02ರಿಂದ 6ರ ವರೆಗೆ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮ

0

Ninasam Theatre institute ನೀನಾಸಮ್ ಸಂಸ್ಥೆಯು ಅಕ್ಟೋಬರ್ 02ರಿಂದ 6ರ ವರೆಗೆ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಕಳೆದ ಎರಡು ವರ್ಷಗಳಿಂದ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

Ninasam Theatre institute ಹೆಚ್ಚಿನ ಮಾಹಿತಿ ಮತ್ತು ಅಭ್ಯರ್ಥಿಯಾಗಿ ನೋಂದಾಯಿಸಲು ಲಿಂಕ್ ಒತ್ತಬಹುದು.
Click the link for more details and to register.
https://ninasam.org/kalegala-sangada-matukate/

Kolkata Doctor Rape ಕೊಲ್ಲೊತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ವಿವಿಧ ಸಂಘಟನೆ ಗಳಿಂದ ಪ್ರತಿಭಟನೆ

0

Kolkata Doctor Rape Case ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಮತ್ತು ನಂತರ ಪ್ರತಿಭಟನಾನಿರತ ವೈದ್ಯ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇಂದು ಐಎಂಎ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಶನಿವಾರ ನಗರದಲ್ಲಿ ವೈದ್ಯರ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಿಮ್ಸ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು, ಗೋಪಿವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಮನವಿ ಸಲ್ಲಿಸಿದರು.
ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನಲೆಯಲ್ಲಿ ನಗರದಲ್ಲಿ ವೈದ್ಯರು ಒಪಿಡಿ ಬಂದ್ ಮಾಡಿದ್ದರು. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತಾಗಿ ಬೇರೆ ಸೇವೆ ಇಲ್ಲದ ಕಾರಣ ರೋಗಿಗಳಿಗೆ ತೊಂದರೆಯಾಗಿತ್ತು.
Kolkata Doctor Rape Case ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಮಾತನಾಡಿ, ವೈದ್ಯರಿಗೆ ಮತ್ತು ವೈದ್ಯ ವಿದ್ಯಾರ್ಥಿಗಳು ದಿನದ ೨೪ ಗಂಟೆಯೂ ತುರ್ತು ಸೇವೆ ಮಾಡಬೇಕಿರುತ್ತದೆ. ಆದರೆ, ವೈದ್ಯರಿಗೆ ಇತ್ತೀಚಿನದ ದಿನಗಳಲ್ಲಿ ರಕ್ಷಣೆ ಇಲ್ಲದಂತಾಗಿದೆ. ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಇಂತಹ ಘಟನೆಗಳು ಸಂಭವಿಸಿದ ತಕ್ಷಣ ’ವೈದೋ ನಾರಾಯಣೋ ಹರಿ’ ಎಂದು ಹೇಳುತ್ತಾರೆ. ಆದರೆ, ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದನ್ನು ಸರ್ಕಾರಗಳು ತಪ್ಪಿಸಬೇಕು. ಮಹಿಳಾ ವೈದ್ಯರಿಗೆ ಸೂಕ್ತರ ರಕ್ಷಣೆ ನೀಡಬೇಕು. ಕೂಡಲೇ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು. ಮುಚ್ಚಿಡಲು ಪ್ರಯತ್ನ ಕೂಡ ನಡೆಯುತ್ತಿದೆ. ಕೂಡಲೇ ಇಂತಹ ಪ್ರಕರಣಗಳು ಸಂಭವಿಸಿದಾಗ ಸರ್ಕಾರ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು. ಕಾಲಹರಣ ಮಾಡದೇ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
೨೦೨೦ರ ವೈದ್ಯಕೀಯ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕು. ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವಿನ ಜೊತೆಗೆ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಡಾ|| ಶ್ರೀಧರ್, ಡಾ|| ಸುರೇಶ್, ಡಾ|| ಸತೀಶ್‌ಕುಮಾರ್, ಡಾ|| ಸಂಜಯ್, ಡಾ|| ಹೇಮಂತ್, ಡಾ|| ರಮ್ಯಾ, ಡಾ|| ಜಿತೇಂದ್ರಕುಮಾರ್, ಡಾ|| ಶ್ರೀಕಾಂತ್ ಶೆಟ್ಟಿ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ವಿದ್ಯಾರ್ಥಿಗಳು, ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Vinesha Phogat “ನನ್ನನ್ನು ಬೆಂಬಲಿಸಿದ ಇಡೀ ದೇಶಕ್ಕೆ ಧನ್ಯವಾದಗಳು”- ವಿನೆಶ್ ಪೊಗಟ್

0

Vinesha Phogat ಕುಸ್ತಿಪಟು ವಿನೇಶಾ ಫೋಗಟ್ ಅವರು ಇಂದು ಭಾರತಕ್ಕೆ ಆಗಮಿಸಿದ ನಂತರ, ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇಡೀ ದೇಶಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಫೋಗಟ್ ದೆಹಲಿಗೆ ಬಂದಿಳಿಯುತ್ತಿದ್ದಂತೆ ಆಕೆಯ ಕುಸ್ತಿಯ ಜೊತೆಗಾರರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಸ್ವಾಗತಿಸಿದರು.
29 ವರ್ಷದ ಯುವತಿ ತನ್ನ ಒಲಂಪಿಕ್ ವೀರತೆಯನ್ನು ಆಚರಿಸಲು ನೆರೆದಿದ್ದ ಜನರ ಸಮೂಹವನ್ನು ನೋಡಿ ಕಣ್ಣೀರಿಟ್ಟಳು. ಜನರ ನಿರಂತರ ಬೆಂಬಲಕ್ಕಾಗಿ ರಾಷ್ಟ್ರಕ್ಕೆ ಧನ್ಯವಾದ ಅರ್ಪಿಸಿದರು. ತನ್ನ ಹೋರಾಟ ಇನ್ನೂ ದೂರದಲ್ಲಿದೆ ಮತ್ತು ತನ್ನ ಪ್ರಯತ್ನದಲ್ಲಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

“ನಾನು ಇಡೀ ದೇಶಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ, ನಾನು ನಿಜವಾಗಿಯೂ ಅದೃಷ್ಟಶಾಲಿ. ನನ್ನ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ಇದು ಇನ್ನೂ ಮುಗಿದಿಲ್ಲ, ಹೋರಾಟ ಮುಂದುವರಿಯುತ್ತದೆ” ಎಂದು ಹೇಳಿದ ಫೋಗಟ್, ಭಾವುಕರಾದರು.
ಪ್ಯಾರಿಸ್ ಗೇಮ್ಸ್‌ನಲ್ಲಿ ಮಹಿಳಾ ಫ್ರೀಸ್ಟೈಲ್ 50 ಕೆಜಿ ಕುಸ್ತಿಯಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಅವರನ್ನು ಸೋಲಿಸಿದ ನಂತರ ಫೋಗಟ್ ತನ್ನ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ.
ಬೆಳ್ಳಿ ಪದಕಕ್ಕೆ ಫೋಗಟ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸಿಎಎಸ್
Vinesha Phogat ಒಲಿಂಪಿಕ್ಸ್‌ನಲ್ಲಿ ಕುಸ್ತಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದಾಗ್ಯೂ, ಈವೆಂಟ್‌ನ 50 ಕೆಜಿ ಮಿತಿಗಿಂತ 100 ಗ್ರಾಂ ಭಾರವಿರುವ ಸಾರಾ ಹಿಲ್ಡೆಬ್ರಾಂಡ್ ವಿರುದ್ಧದ ತನ್ನ ಅಂತಿಮ ಪಂದ್ಯದ ಬೆಳಿಗ್ಗೆ ಅನರ್ಹಗೊಂಡಿದ್ದರಿಂದ ಫೋಗಾಟ್‌ನ ಕನಸಿನ ಪ್ರಯಾಣವು ದುರಂತ ಅಂತ್ಯಗೊಂಡಿತು.
ದುರದೃಷ್ಟಕರ ಘಟನೆಯ ನಂತರ, ಅವರು ಐಒಸಿ (ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ) ಮತ್ತು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ನ ತೀರ್ಪಿನ ವಿರುದ್ಧ ಕೋರ್ಟ್ ಆಫ್ ಆರ್ಬ್ರಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ನಲ್ಲಿ ಮನವಿ ಮಾಡಿದರು. ಒಂದು ವಾರದ ಅವಧಿಯ ವಿಚಾರಣೆಯ ನಂತರ ಸಿಎಎಸ್ ಆಕೆಯ ಮನವಿಯನ್ನು ವಜಾಗೊಳಿಸುವುದರೊಂದಿಗೆ ಆಕೆಯ ಪ್ರಯತ್ನಗಳು ನಿರರ್ಥಕವಾಗಿ ಕೊನೆಗೊಂಡಿತು.
ಆಕೆಯ ಹೃದಯವಿದ್ರಾವಕ ಅನರ್ಹತೆಯ ನಂತರ, ಕುಸ್ತಿಪಟು ತನ್ನ ಅಂತರರಾಷ್ಟ್ರೀಯ ನಿವೃತ್ತಿಯನ್ನು ಸಹ ಘೋಷಿಸಿದರು. ಫೋಗಟ್ ಹಿಂದಿರುಗುವ ಮೊದಲು ತನ್ನ ಅಭಿಮಾನಿಗಳೊಂದಿಗೆ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದು ತನ್ನ ಭಾವನೆಗಳನ್ನು ಹಂಚಿಕೊಂಡಿದ್ದರು. ಅವರು 2028 ರಲ್ಲಿ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಭಾರತವನ್ನು ಪ್ರತಿನಿಧಿಸುವ ಸುಳಿವು ನೀಡಿದ್ದಾರೆ.

Gajanur Jawahar Navodaya Vidyalaya ಗಾಜನೂರು ಜವಾಹರ್ ನವೋದಯ ವಿದ್ಯಾಲಯ 6 ನೇ ತರಗತಿಗೆ ಪ್ರವೇಶ ಪರೀಕ್ಷೆ

0

Gajanur Jawahar Navodaya Vidyalaya ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ ನವೋದಯ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿಗೆ ಆಯ್ಕೆ ಪರೀಕ್ಷೆಯನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ದಿ: 18/01/2025 ರಂದು ನಡೆಯಲಿದ್ದು, ಆಸಕ್ತರಿಂದ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್ https://navodaya.gov.in ರ ಮೂಲಕ ಸೆಪ್ಟಂಬರ್ 16 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

Tungabhadra Dam ತುಂಗಭದ್ರಾ ಡ್ಯಾಂ 19ನೇ ಗೇಟ್ ಯಶಸ್ವಿ ಅಳವಡಿಕೆ. ತಜ್ಞ ಕನ್ಹಯ್ಯ ನಾಯ್ಡು ಸಾಧನೆ

0

Tungabhadra Dam ತುಂಗಭದ್ರಾ ಜಲಾಶಯದಲ್ಲಿ ಮುರಿದುಹೋಗಿದ್ದ 19ನೇ ಗೇಟ್‌ ನಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದ್ದು ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.

ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ಗೆ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ನಿನ್ನೆ ಮೊದಲ ಸ್ಟಾಪ್ ಲಾಗ್ ಅಳವಡಿಸಲಾಗಿದ್ದು ಇಂದು ಮೂರು ಸ್ಟಾಪ್ ಲಾಗ್ ಅಳವಡಿಸಲಾಗಿದೆ.

ನಾಲ್ಕು ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಬಂದ್ ಆಗಿದೆ. ಸದ್ಯ ಜಲಾಶಲಯದ ಎಲ್ಲ 33 ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಡೆಸಿದೆ. ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಇನ್ನು ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ.

ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಟಿಬಿ ಡ್ಯಾಂನ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಸದ್ಯ ಡ್ಯಾಂನಿಂದ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸುವಲ್ಲಿ ತಂಡ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

Tungabhadra Dam bತುಂಗಭದ್ರಾ ಜಲಾಶಯದ ಮೊದಲ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿ, 4 ಗೇಟ್ ಗಳ ಅಳವಡಿಕೆ ಬಾಕಿ
70 ವರ್ಷದ ನಂತರ ಡಿಬಿ ಡ್ಯಾಂನಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದ್ದು 30ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿತ್ತು. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿತ್ತು. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಣೆಕಟ್ಟಿಗೆ ಭೇಟಿ ನೀಡಿದ ಬಳಿಕ ಹೇಳಿದ್ದರು.

V. Somanna ಕೇಂದ್ರ ಸಚಿವ ಸೋಮಣ್ಣ ಅವರಿಗೆ ಕಚೇರಿ ‘ ಶಾಕ್’ ನೀಡಿದ ರಾಜ್ಯ ಸರ್ಕಾರದ ನಡೆ

0

V. Somanna ಉದ್ಘಾಟನೆಗೆ ಸಿದ್ಧವಾಗಿದ್ದ ನೂತನ ಸಂಸದರ ಕಚೇರಿ ವಾಪಸ್ ಪಡೆದು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ
ತುಮಕೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ ಪರಿವೀಕ್ಷಣಾ ಮಂದಿರವನ್ನು (ಸೋಮಣ್ಣ ಅವರಿಗೆ ಸರ್ಕಾರ ನೀಡಿತ್ತು. ಆ.18 ನೂತನ ಕಚೇರಿ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.
V. Somanna ಸೋಮಣ್ಣ ಅವರು ನೂತನ ಕಚೇರಿಯಲ್ಲಿ ಟೇಬಲ್ ಹಾಗೂ ಕುರ್ಚಿಗಳನ್ನು ಹಾಕಿಸಿದ್ದರು. ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಕೂಡ ಹಾಕಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ನೂತನ ಸಂಸದರ ಕಚೇರಿ ವಾಪಸ್ ಪಡೆದಿದೆ.