Monday, April 6, 2026
Monday, April 6, 2026
Home Blog Page 603

BJP Shivamogga ರಾಜ್ಯ ಬಿಜೆಪಿ ನಾಯಕರಲ್ಲಿ “ಪಾದಯಾತ್ರೆ” ಪ್ರಸ್ತಾವನೆ. ಒಳ ಅತೃಪ್ತಿ ಅಪಸ್ವರದ ಸೂಚನೆಯೆ?

0

BJP Shivamogga ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬೆಳವಣಿಗೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಮುಡಾ ಹಗರಣ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮೈಸೂರು ಚಲೋ ಪಾದಯಾತ್ರೆ ನಡೆಸಿತ್ತು. ಆದರೆ, ಬಿಜೆಪಿಯ ಮತ್ತೊಂದು ಪಾಳಯ ಪ್ರತ್ಯೇಕ ಪಾದಯಾತ್ರೆ ಕೈಗೊಳ್ಳಲು ಮುಂದಾಗಿದ್ದು, ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಮುಂದುವರಿಸಿದ್ದಾರೆ.

ಬಿಜೆಪಿಯ ಬಂಡಾಯ ನಾಯಕರು ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಕೂಡಲಸಂಗಮ-ಬಳ್ಳಾರಿ ಪಾದಯಾತ್ರೆ ನಡೆಸಲು ನಿರ್ಧಾರ ಕೈಗೊಂಡಿದ್ದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಈ ಸಭೆ ನಡೆದಿತ್ತು.
ಸಭೆಯಲ್ಲಿ ಬಿಎಸ್ವೈ ಮಾಜಿ ಆಪ್ತ ಸಹಾಯಕ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ. ಜಿ.ಎಂ.ಸಿದ್ದೇಶ್ವರ್, ಬಿ.ಪಿ.ಹರೀಶ್, ಎನ್.ಆರ್.ಸಂತೋಷ್ ಭಾಗಿಯಾಗಿರುವುದು ಕಂಡು ಬಂದಿತ್ತು.

ಈ ಸಭೆಯ ಮೂಲಕ ತಾವು ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದರು. ಇದೀಗ ಈ ನಾಯಕರು ಪ್ರತ್ಯೇಕ ಪಾದಯಾತ್ರೆಗಾಗಿ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಬಂಡಾಯ ನಾಯಕರು ಪಾದಯಾತ್ರೆ ನಡೆಸಲು ನಿರ್ಧರಿಸಿರುವ ಸ್ಥಳ ವೀರಶೈವ-ಲಿಂಗಾಯತರನ್ನು ಹೊರತುಪಡಿಸಿ ಎಸ್‌ಸಿ/ಎಸ್‌ಟಿ/ಒಬಿಸಿ ಜನಸಂಖ್ಯೆ ಹೆಚ್ಚಿರುವ ಪ್ರದೇಶವಾಗಿದೆ. ಯಾವುದೇ ನಾಯಕ ಒಂದು ಪ್ರತ್ಯೇಕ ಸಮುದಾಯಕ್ಕೆ ಸೀಮಿತವಾಗಿರದೆ, ಎಲ್ಲರ ಹಿತ ಕಾಪಾಡುವ ನಾಯಕರನಾಗುವ ಸಾಮರ್ಥ್ಯ ಹೊಂದಿರಬೇಕು. ಯಡಿಯೂರಪ್ಪ ಅವರು ಈ ಹಾದಿಯಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯೇಂದ್ರ ಅವರು ಈಗಾಗಲೇ ವೀಶೈವ ಲಿಂಗಾಯತರು, ಧಾರ್ಮಿಕ ಮುಖಂಡರ ದೊಡ್ಡ ವರ್ಗದ ಜನರ ಸಹಾನುಭೂತಿ ಗಳಿಸಿದ್ದು, ಇದನ್ನು ಗಮನದಲ್ಲಿಟ್ಟುಕೊಂಡೇ ಬಂಡಾಯ ಬಣ ವಿಜಯೇಂದ್ರ ವಿರುದ್ಧ ಸೆಣಸಾಡಲು ತಂತ್ರ ರೂಪಿಸಿದೆ .

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಬಿಜೆಪಿಯಲ್ಲಿ ಆಂತರಿಕ ವೈಮನಸ್ಸು ಮೂಡಿರುವುದು ನಿಜ. ಈ ಬಗ್ಗೆ ದಹೆಲಿಗೆ ಭೇಟಿ ನೀಡಿದಾಗ ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

BJP Shivamogga ಈ ವಿಷಯದ ಬಗ್ಗೆ (ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ) ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ, ಇದನ್ನು ಕೇಂದ್ರ ಬಿಜೆಪಿ ನಾಯಕತ್ವವೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ನಿರ್ಧರ ಕೈಗೊಳ್ಳುತ್ತಾರೆ. ಸಾಧ್ಯವಾದರೆ ದೆಹಲಿಗೆ ಭೇಟಿ ನೀಡಿ ಇಲ್ಲಿನ ಬೆಳವಣಿಗೆಗಳನ್ನು ಗಮನಕ್ಕೆ ತರುತ್ತೇನೆ. ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ. ಪರಿಹಾರ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಮೈಸೂರು ಪಾದಯಾತ್ರೆಯಂತೆಯೇ ಹೈ ಕಮಾಂಡ್ ಒಪ್ಪಿಗೆ ನೀಡಿದರೆ, ಈ ಪಾದಯಾತ್ರೆಗೂ ಬೆಂಬಲ ನೀಡಲಾಗುವುದು ಎಂದೂ ಇದೇ ವೇಳೆ ಅಶೋಕ್ ತಿಳಿಸಿದರು.

ಬಿಎಲ್.ಸಂತೋಷ್ ಸೇರಿದಂತೆ ಕೇಂದ್ರ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನನಗೆ ಸೂಚಿಸಿದ್ದು, ಇದರಂತೆ ನಾನು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದೆ ಎಂದು ತಿಳಿಸಿದರು.

ಮಾಜಿ ಸಚಿವ ಮಾಧುಸ್ವಾಮಿ ಮಾತನಾಡಿ, ವಿಜಯೇಂದ್ರ ಯುವ ವಯಸ್ಸಿನವರಾಗಿದ್ದು, ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಬೇಗನೆ ನೀಡಲಾಗಿದೆ. ಹೀಗಾಗಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯಧ್ಯಕ್ಷ ಬದಲಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಬಹುದಿತ್ತು. ಇದನ್ನು ಒಪ್ಪಿಕೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.
ಈ ನಡುವೆ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮೈತ್ರಿ ಪಕ್ಷ ಜೆಡಿಎಸ್ ಪಕ್ಷಕ್ಕೂ ಇರಿಸು-ಮುರಿಸು ತರಿಸಿದೆ ಎಂದು ಮೂಲಗಳು ತಿಳಿಸಿವೆ.

Shivamogga Police ಆಟೋ ಚಾಲಕನ ಮೇಲೆ ಆಟೋ ಚಾಲಕರಿಂದಲೇ ಹಲ್ಲೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

Shivamogga Police ಊರಿನಿಂದ ಬಂದಿದ್ದ ತಂಗಿಯನ್ನು ಆಟೋದಲ್ಲಿ ಕರೆದೊಯ್ದ ಚಾಲಕನ ಮೇಲೆ ಸ್ಟಾಂಡ್‌ನಲ್ಲಿ ನಿಲ್ಲಿಸಿದ್ದ ಆಟೋದ ಚಾಲಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಘಟನೆ ಸಂಭವಿಸಿದೆ. ಆಟೋ ಚಾಲಕ ಅಜಯ್‌ ಮೇಲೆ ಮೂವರು ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಊರಿಂದ ಬಂದಿದ್ದ ತಂಗಿ ಮತ್ತು ಮಕ್ಕಳನ್ನು ಆಟೋ ಹತ್ತಿಸಿಕೊಂಡಿದ್ದಾರೆ.

Shivamogga Police ಆಗ ಇತರೆ ಆಟೋ ಚಾಲಕರು ಆಟೋ ತಂದು ಅಡ್ಡ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

Forest Department ವನ್ಯಜೀವಿ ಹಾರು ಬೆಕ್ಕಿನ ಬೇಟೆಯಾಡಿದ ವ್ಯಕ್ತಿಯ ಬಂಧನ

0

Forest Department ಅಧಿಕೃತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ನಗರ ವಲಯ ಅರಣ್ಯ ವ್ಯಾಪ್ತಿಯ ಹುಂಚಾ ಹೋಬಳಿ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.
Forest Department ಸರ್ವೇ ನಂಬರ್ 17 ರ ಕೃಷಿ ಜಮೀನಿನಲ್ಲಿ ಹಾರು ಬೆಕ್ಕನ್ನು ಬೇಟೆ ಮಾಡಿದ ಆರೋಪದ ಮೇಲೆ ಸತೀಶ್ ಬಿನ್ ಶೇಷನಾಯ್ಕನನ್ನು ಮಾಲು ಸಹಿತ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Hosanagara Police ಹೊಸನಗರ ತಾಲ್ಲೂಕು ಕಾನುಗೋಡು ಗ್ರಾಮದ ಮನೆಯಿಂದ ₹1.47 ಲಕ್ಷ ಮೌಲ್ಯದ ವಸ್ತುಗಳ ಕಳವು

0

Hosanagara Police ಕುಟುಂಬದವರೆಲ್ಲ ಸಂಬಂಧಿಯೊಬ್ಬರ ತಿಥಿ ಕಾರ್ಯಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನ, ಬೆಳ್ಳಿ ಅಭರಣ ಮತ್ತು ನಗದು ಸೇರಿ 1.47 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ.

ಹೊಸನಗರ ತಾಲೂಕು ನಗರ ಹೋಬಳಿಯ ಕಾನುಗೋಡು ಗ್ರಾಮದ ರಾಮಕೃಷ್ಣ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ತಿಥಿ ಕಾರ್ಯ ಮುಗಿಸಿ ಮನೆ ಬಳಿ ಬಂದಾಗ ಬಾಗಿಲುಗಳು ತೆರೆದಿದ್ದವು. ಮನೆಯೊಳಗೆ ಲೈಟ್‌ ಕಾಣಿಸಿತ್ತು. ಒಳ ಹೋಗಿ ನೋಡಿದಾಗ ಬೀರು ಬಾಗಿಲು ತೆರೆದುಕೊಂಡಿತ್ತು. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Bhadravathi Urban Development Authority ಸುಡಾದಿಂದ ಜನರೇಟರ್ ಶೆಡ್ ನಿರ್ಮಾಣ. ನಿಯಮ ಉಲಂಘನೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಆರೋಪ

0

Shivamogga Bhadravathi Urban Development Authority ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಮೂರನೇ ಕಾನೂನು ಬಾಹಿರ ನಿರ್ಮಾಣ. ಈಗಗಾಗಲೇ ರಸ್ತೆಯಲ್ಲಿ ಶೆಡ್ ನಿರ್ಮಾಣ, ಸೂಡ ಮತ್ತು ನೊಂದಾವಣೆ ಕಛೇರಿ ಪಕ್ಕದಲ್ಲಿ ಪಾರ್ಕಿನ ಒಳಗೆ ಲಿಪ್ಟ ಹಾಕಲು ಕಟ್ಟಡ ನಿರ್ಮಾಣ ಮಾಡಿರುವ ಸೂಡ. ಈಗ ಆದೇ ಪಾರ್ಕಿನಲ್ಲಿ ಜನರೇಟರ್ ಗೆ ಶೆಡ್ ನಿರ್ಮಿಸಿ ಜನರೇಟರ್ ಸ್ಥಾಪಿಸಿದ್ದಾರೆ. ಇದು ಸಹಾ ಮಹಾನಗರ ಯೋಜನೆ-2030 ನಿಯಮ ಸ್ಪಷ್ಟ ಉಲ್ಲಂಘನೆಯ ಮೂರನೇ ಅಪರಾದ. ಜಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈ ನಿರ್ಮಾಣವನ್ನೂ ತಕ್ಷಣ ತೆರುವು ಗೊಳಿಸಲು ಕ್ರಮ ಕೈಗೊಳ್ಳ ಬೇಕು.

Philip Green ಆಗುಂಬೆಗೆ ಭೇಟಿ ನೀಡಿ ನಿಸರ್ಗಕ್ಕೆ ಮನಸೋತ ಭಾರತದಲ್ಲಿರುವ ಆಸ್ಟ್ರೇಲಿಯ ಹೈಕಮೀಷನರ್ ಕುಟುಂಬ

0

Philip Green ಆಸ್ಟ್ರೇಲಿಯಾ ದೇಶದ ಭಾರತೀಯ ಹೈಕಮಿಷನರ್‌ ಫಿಲಿಪ್‌ ಗ್ರೀನ್‌ ಮತ್ತು ಅವರ ಕುಟುಂಬವು ಮಳೆ ಕಾಡು ಅಧ್ಯಯನಕ್ಕೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆಗೆ ಭೇಟಿ ನೀಡಿದೆ.

ಆಗುಂಬೆಗೆ ಆಸ್ಟ್ರೇಲಿಯಾದ ಭಾರತೀಯ ಹೈಕಮಿಷನರ್‌ ಭೇಟಿ, 3 ದಿನ ಅ‍ಧ್ಯಯನ ಪ್ರವಾಸ ಕೈಗೊಂಡಿದ್ದಾರೆ.
ಆಗುಬೆಯ ಸನ್‌ ಸೆಟ್‌ ಪಾಯಿಂಟ್‌ಗೆ ತೆರಳಿ ಪಶ್ಚಿಮಘಟ್ಟದ ವೈಭವ ಕಣ್ತುಂಬಿಕೊಂಡ ಫಿಲಿಪ್ ಗ್ರೀನ್ ಕುಟುಂಬ ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ‌.

Philip Green ಕಾಳಿಂಗ ಫೌಂಡೇಶನ್‌ಗೆ ಭೇಟಿ. ನೀಡಿ ,ಆಗುಂಬೆ ಭಾಗದ ವಿವಿಧೆಡೆ ಭೇಟಿ, ಟ್ರೆಕಿಂಗ್‌, ಕಾಳಿಂಗ ಸರ್ಪಗಳ ಕುರಿತು ಅಧ್ಯಯನ ನಡೆಸಿಲಾಗಿದೆ‌

Bharat Scouts and Guides ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ಮಾಡಬೇಕು- ಕೆ.ಪಿ.ಬಿಂದುಕುಮಾರ್

0

Bharat Scouts and Guides ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಶಿವಮೊಗ್ಗ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ 78ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮುಖ್ಯ ಆಯುಕ್ತರಾದ ಕೆ ಪಿ ಬಿಂದು ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಮಕ್ಕಳನ್ನು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು ನಮ್ಮ ದೇಶ ಮೊದಲಿಗಿಂತಲೂ ಎಲ್ಲಾ ಕ್ಷೇತ್ರಗಳಲ್ಲೂ ತುಂಬಾ ಸದೃಢವಾಗಿದೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಯೋಧರ ಹುತಾತ್ಮರ ಸ್ಮರಣೆ ನಿತ್ಯ ಮಾಡಲೇಬೇಕಾದ ಅಗತ್ಯತೆ ಇದೆ, ನಮ್ಮ ಮಕ್ಕಳಿಗೆ ಇಂದು ಸ್ವಾತಂತ್ರ್ಯ ಗಳಿಸುವಲ್ಲಿ ನಮ್ಮವರು ಮಾಡಿದ ಸಾಧನೆ ಇಂದ ನಾವು ಇಂದು ನೆಮ್ಮದಿ ಜೇವನ ನೆಡೆಸುತ್ತಿದ್ದೇವೆ ಎನ್ದು ನುಡಿದರು.. ಕಾರ್ಯಕ್ರಮದಲ್ಲಿ ಮಕ್ಕಳಿಂದ ಕವಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮ ಆಕರ್ಷಕ ಪೆರೇಡ್ ನೆರವೇರಿತು.

Bharat Scouts and Guides ಸಮಾರಂಭದಲ್ಲಿ ಸ್ಕೌಟ್ ಆಯುಕ್ತರಾದ ಶ್ರೀ ಎಸ್. ಜಿ. ಆನಂದ್., ಗೈಡ್ ಆಯುಕ್ತರದ ಶ್ರೀಮತಿ ಶಕುಂತಲಾ ಚಂದ್ರಶೇಖರ್. ಖಜಾಂಚಿ ಚೂಡಮಣಿ ಈ ಪವರ್. ಕಾರ್ಯದರ್ಶಿ ಪರಮೇಶ್ವರ್. ಸಹಕಾರ್ಯದರ್ಶಿ ಶ್ರೀ ವೀರೇಶಪ್ಪ. ಜಂಟಿ ಕಾರ್ಯದರ್ಶಿ ಶ್ರೀಮತಿ ಲಕ್ಷಿ÷್ಮ ಕೆ ರವಿ., ಶಿವಶಂಕರ್. ರಾಜೇಶ್ ಅವಲಕ್ಕಿ, ಶ್ರೀಮತಿ ಹೇಮಲತಾ, .ಚಂದ್ರಶೇಖರ್. ಮಲ್ಲಿಕಾರ್ಜುನ್ ಕಾನೂರ್, ಕೃಷ್ಣ ಸ್ವಾಮಿ, ಹಾಗೂ ಸ್ಕೌಟ್ ಅಂಡ್ ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು ದಳ ನಾಯಕ / ನಾಯಕಿರವರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.”

Klive Special Article ತಿಂಗಳ ಕವಿತೆ

0

Klive Special Article ಉತ್ತು – ಬಿತ್ತಿ ಭುವಿಗೆ
ಬೆವರ ಸುರಿಸಿ ನಾಡಿಗೆ
ಅನ್ನ ನೀಡುವ ನನ್ನ ರೈತ

ಬಿಸಿಲಲ್ಲಿ ಬೆಂದು
ಮಳೆಯಲ್ಲಿ ನೆನೆದು
ಚಳಿಯಲ್ಲಿ ನಡುಗಿ ಊರ ಹಸಿವು ನೀಗಿಸುವ ನನ್ನ ರೈತ

ಬೆಳೆಗಾಗಿ ಸಾಲ – ಸೂಲ ಮಾಡಿ ಹಾಕಿದ ಬೀಜ ಜೀವ – ಜಲವಿಲ್ಲದೆ ಕಂಗೆಟ್ಟು, ಮಳೆ ಬಂದಾಗ ಸಂತೋಷಪಟ್ಟ ನನ್ನ ರೈತ

ಮಳೆ ಬಂದು ಇಳೆತುಂಬಿ
ಬೆಳೆ ಮುಳುಗಿ ಹೋದಾಗ ಯಾರಿಗೂ ಹೇಳದೆ ಸಂಕಟ ಪಟ್ಟ ನನ್ನ ರೈತ

ಕಷ್ಟಪಟ್ಟು ಹೊಟ್ಟೆ – ಬಟ್ಟೆ ಕಟ್ಟಿ ದುಡಿದು – ದುಡಿದು ಸೋತು – ಸೊರಗಿ ಹೋದ ನನ್ನ ರೈತ

ಬೆಳೆಗಾಗಿ ತಂದ ಸಾಲ ತೀರಲಿಲ್ಲ ಕೊಟ್ಟವರು ಬಿಡುತ್ತಿಲ್ಲ ಮಾನಕ್ಕಾಗಿ ಜೀವ ಪಣಕಿಟ್ಟ ನನ್ನ ರೈತ

Klive Special Article ಸಾಲ ಕೊಟ್ಟವರು ಬಿಡಲಿಲ್ಲ
ಸರ್ಕಾರದ ಮನಸ್ಸು ಕರಗಲಿಲ್ಲ ಕೊನೆಗೂ ರೈತನ ಭವಣೆ ತೀರಲಿಲ್ಲ
ಇಷ್ಟೆಲ್ಲಾ ಕಷ್ಟವ ಅನುಭವಿಸಿಯೂ ಎದೆಗುಂದದೆ ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ
ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ…..!

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು ಹಾಗೂ ಹವ್ಯಾಸಿ ಕವಿ, ಸಾಗರ

Rain In Shivamogga ಭಾರಿಮಳೆಯಿಂದ ಜೈಲ್ ರಸ್ತೆ ಜಲಾವೃತ.ಸಂಚಾರ ಅಸ್ತವ್ಯಸ್ತ

0

Rain In Shivamogga ಶಿವಮೊಗ್ಗ ನಗರದಲ್ಲಿ ಮಳೆ ಅಬ್ಬರಿಸುತ್ತಿದೆ . ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಜೋರಾಗಿದೆ.
ನಗರದಲ್ಲಿ ದಟ್ಟ ಮೋಡ ಕವಿದಿದ್ದು ಕೆಲ ಹೊತ್ತು ಎಡೆಬಿಡದೆ ಮಳೆಯಾಗುತ್ತಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಿವಿಧೆಡೆ ಮನೆ, ಮಳಿಗೆಗಳಿಗು ನೀರು ನುಗ್ಗಿದೆ.
ಜೈಲ್‌ ರಸ್ತೆ ಜಲಾವೃತ
ಶಿವಮೊಗ್ಗ ಜೈಲ್‌ ರಸ್ತೆ ಜಲಾವೃತವಾಗಿದೆ.

Rain In Shivamogga ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್‌ ವರೆಗು ರಸ್ತೆ ಮೇಲೆ ನೀರು ಹರಿಯುತ್ತಿದೆ. ಚರಂಡಿಗಳು ಭರ್ತಿಯಾಗಿ ನೀರು ಉಕ್ಕಿ ಬರುತ್ತಿದೆ. ವಾಹನ ಸವಾರರು ನಿಧಾನವಾಗಿ ಚಲಿಸುವಂತಾಗಿದೆ. ಇನ್ನು, ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗು ನೀರು ನುಗ್ಗಿದೆ.

Election Commission of India ಹರಿಯಾಣ ಮತ್ತು ಜಮ್ಮು& ಕಾಶ್ಮೀರ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

0

Election Commission of India ಭಾರತೀಯ ಚುನಾವಣಾ ಆಯೋಗವು ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಳಿಗೆ ಚುನಾವಣೆ ಘೋಷಣೆ ಮಾಡಿದೆ.

ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗ ಮತದಾನ ಹಾಗೂ ಎಣಿಕೆಯ ದಿನಾಂಕಗಳನ್ನು ಪ್ರಕಟಿಸಿದೆ.
ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ಮಾಡಲಾಗುತ್ತದೆ.

Election Commission of India ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 18,25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ಮಾಡಲಾಗುತ್ತದೆ.
ಆರ್ಟಿಕಲ್ 370 ರದ್ದತಿ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಗೆ ಘೋಷಣೆಯಾಗಿದೆ.

ಸುಪ್ರೀಂ ಕೋರ್ಟ್ ವಿಧಿಸಿರು