Sunday, April 5, 2026
Sunday, April 5, 2026
Home Blog Page 601

Kumsi Police ಪ್ರಾಮಾಣಿಕತರ ಮೆರೆದ ನಾಗರೀಕರಿಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಸನ್ಮಾನ

0

Kumsi Police ಪ್ರಾಮಾಣಿಕತನ ಮೆರೆದ ಇಬ್ಬರು ನಾಗರೀಕರಿಗೆ ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಸನ್ಮಾನಿಸಿದ್ದಾರೆ. ಇದರ ಮೂಲಕ ಉತ್ತಮ ನಾಗರೀಕರ ಬೆನ್ನಿಗೆ ಪೊಲೀಸ್ ಇಲಾಖೆ ನಿಂತಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಸೋಮಶೇಖರ್ ಮತ್ತು ಸುಹಾಸ್ ಪ್ರಸಾದ್ ಸಿ ಚೋರಡಿ ಗ್ರಾಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆ.1 ರಂದು ಚೋರಡಿ ಗ್ರಾಮದ ಸೋಮಶೇಖರ್ ಅವರಿಗೆ ಗ್ರಾಮದ ರಂಗಮಂದಿರ ರಸ್ತೆಯಲ್ಲಿ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದ್ದು ಅದರಲ್ಲಿ ಐಡಿ ಕಾರ್ಡ್. 1 ಲಕ್ಷ ಹಣ. ಬ್ಯಾಂಕ್ ಪಾಸ್ ಪುಸ್ತಕ. ಎಟಿಎಂ ಕಾರ್ಡ್ ಹಾಗೂ ಶಾಲೆ ದಾಖಲಾತಿಗಳು ದೊರೆತಿದ್ದವು.
ಇವುಗಳನ್ನು ಸಂಬಂಧಪಟ್ಟ ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಲ್ ರೇಣುಕಾ ರವರಿಗೆ ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.

Kumsi Police ಅದೇ ರೀತಿ ಸುಹಾಸ್ ಪ್ರಸಾದ್ ಸಿ ಚೋರಡಿ ಜ.26 ರಂದು ಚೋರಡಿ ಗ್ರಾಮದ ಎನ್ ಹೆಚ್ 69 ರಸ್ತೆಯಲ್ಲಿ ಸಿಕ್ಕ ಪರ್ಸನಲ್ಲಿ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.
ಇದರ ಮಾಲೀಕರಾದ ನಿವೃತ್ತ ಐಜಿಪಿ ಸುರೇಶ್ ಬಾಬು ಅವರ ಮಗಳು ಶಶಿ ಶಾಲಿನಿಗೆ ವಾಪಸು ನೀಡಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

B.Y.Vijayendra ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಿಕಾರಿಪುರಕ್ಕೆ ಬಂದರೆ ಘೇರಾವ್- ನಾಗರಾಜ ಗೌಡ

0

B.Y.Vijayendra ರಾಜ್ಯದಾದ್ಯಂತ ಸಾವಿರಾರು ಕೋಟಿ ಆಸ್ತಿ ಮಾಡಿರುವ ಬಿ.ಎಸ್ ಯಡಿಯೂರಪ್ಪ ಹಾಗೂ ಅವರು ಕುಟುಂಬದ ತನಿಖೆಯಾಗಬೇಕು, ವಿಜಯೇಂದ್ರ ಶಿಕಾರಿಪುರಕ್ಕೆ ಬಂದರೆ ಘೇರಾವ್ ಹಾಕಲಾಗುವುದು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗರಾಜ್ ಗೌಡ ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು. ಕೇಂದ್ರ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್ ಕೊಡಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದು ರಾಜಕೀಯ ಪ್ರೇರಿತ ಹಾಗೂ ಒಬ್ಬ ವ್ಯಕ್ತಿಯ ಸ್ವಹಿತಾಸಕ್ತಿಯ ಕಾರಣಕ್ಕೆ ಪ್ರಾಸಿಕ್ಯೂಷನ್ ನಡೆಸಲಾಗುತ್ತಿದೆ ಎಂದರು.

ರಾಜ್ಯಪಾಲರ ಎದುರು ಅನೇಕ ಬಿಜೆಪಿ ನಾಯಕರ ಹಲವು ಪ್ರಕರಣಗಳಿದ್ದರೂ ಅದರ ಬಗ್ಗೆ ತನಿಖೆಗೆ ಆದೇಶಿಸದೆ ಯಾವುದೇ ಹಗರಗಳಿಲ್ಲದೆ ಪಾರದರ್ಶಕ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯರವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಣತಿ ನೀಡಲಾಗಿದ್ದು ಇದು ಕೇಂದ್ರ ಸರ್ಕಾರದ ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ. ಬಿ ಎಸ್ ವೈ
ಬಸವರಾಜ್ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ಹಲವಾರು ಭ್ರಷ್ಟಾಚಾರ ನಡೆದಿದ್ದು, ಈಬಗ್ಗೆ ಅನೇಕ ಬಾರಿ ರಾಜ್ಯಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.

ಹೀಗಿರುವಾಗ ಸಿದ್ಧರಾಮಯ್ಯರವರು ಮುಡಾ ಪ್ರಕರಙದಲ್ಲಿ ಭಾಗಿಯಾಗದಿದ್ದರೂ ಭಾಗಿಯಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಆಪಾದನೆಯಾಗಿದೆ ಎಂದರು.

B.Y.Vijayendra ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸಮಗ್ರ ಆಸ್ತಿಗಳ ತನಿಖೆ ನಡೆಸಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರು ಅಂಜುವ ಮಕ್ಕಳ್ಳಲ್ಲ, ಇನ್ನು ಮುಂದೆ ನಿಮ್ಮ ಆಟ ಹೇಗಿರುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ ಅವರು, ಶಿಕಾರಿಪುರದಲ್ಲಿ ನಿಮ್ಮ ದುರಾಡಳಿತ ಹಾಗೂ ದಬ್ಬಾಳಿಕೆಯ ವಿರುದ್ಧ ತಾಲ್ಲೂಕಿನ ಜನರು ಸೆಟೆದೆದ್ದು, ಕಾಂಗ್ರೆಸ್ ಪಕ್ಷಕ್ಕೆ 75,000 ಮತಗಳನ್ನ ನೀಡಿ ಆಶೀರ್ವದಿಸಿದ್ದಾರೆ ಅಲ್ಲದೇ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ನಿಮ್ಮನ್ನ ತಿರಸ್ಕರಿಸಿದ್ದಾರೆ ಮರೆಯಬೇಡಿ ಎಂದು ಹೇಳಿದರು.

ಬಿಎಸ್ವೈ ಮನೆಗೆ ಮುತ್ತಿಗೆ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಪಕ್ಷದ ಮುಖಂಡರಾದ ನಗರದ ಮಹದೇವಪ್ಪ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರನಗೌಡ ಮುಖಂಡರಾದ ಉಳ್ಳಿ ದರ್ಶನ, ಭಂಡಾರಿ ಮಾಲತೇಶ್, ರಾಘವೇಂದ್ರ ನಾಯಕ್, ಶಿವನಾಯಕ್, ಶಿವು ಹುಲ್ಮಾರ್, ಮಂಜು ಹುಣಸೆಕೊಪ್ಪ, ಎಚ್. ಎಸ್. ರವೀಂದ್ರ ಮಾರವಳ್ಳಿ ಉಮೇಶ್, ನಗರದ ರವಿ, ಸೇರಿದಂತೆ ಪಕ್ಷದ ಅನೇಕ ಮುಖಂಗರು, ಕಾರ್ಯಕರ್ತರು ಭಾಗವಹಿಸಿದ್ದರು.

Ayodhya Ram Mandira ಅಮೆರಿಕಾದಲ್ಲಿ ಆಯೋಜಿತವಾಗಿರುವ “ಇಂಡಿಯಾ ಡೇ ಪರೇಡ್” ಗೆ ಮುಸ್ಲೀಂ ಸಂಘಟನೆಗಳ ಟೀಕೆಗೆ ಪ್ರತ್ಯುತ್ತರ- ಅಂಕುರ್ ವೈದ್ಯ

0

Ayodhya Ram Mandira ಅಯೋಧ್ಯಾ ರಾಮ ಮಂದಿರವು ಬಾಬರಿ ಮಸೀದಿ ಧ್ವಂಸದ ಪ್ರತೀಕವಾಗಿದ್ದು, ಈ ಘಟನೆಯನ್ನು ನೆನಪಿಸುವ ಜೊತೆಯಲ್ಲೇ ವೈಭವೀಕರಿಸುತ್ತದೆ. ಅಷ್ಟೇ ಅಲ್ಲ, ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯದ ಪ್ರತೀಕವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಶೇ. 80 ರಷ್ಟು ಹಿಂದೂ ಜನಸಂಖ್ಯೆ ಇರುವ ಭಾರತದಲ್ಲಿ ಹಿಂದೂಗಳು ಮಾತ್ರವಲ್ಲ, 20 ಕೋಟಿ ಮುಸ್ಲಿಮರೂ ಇದ್ದಾರೆ. ಆದರೆ, ಹಿಂದೂ ರಾಷ್ಟ್ರೀಯವಾದಿಗಳು ಮುಸ್ಲಿಮರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಅಮೆರಿಕದ ಮುಸ್ಲಿಂ ಸಂಘಟನೆಗಳು ಆರೋಪ ಮಾಡಿವೆ.

ಭಾರತೀಯತೆಯನ್ನು ಬಿಂಬಿಸುವ ಪ್ರದರ್ಶನ ಆಯೋಜಿಸುವ ಬದಲು ಹಿಂದೂ ರಾಷ್ಟ್ರೀಯವಾದಿ ಸಿದ್ದಾಂತ ಪ್ರತಿಬಿಂಬಿಸುವ ಪ್ರತಿಕೃತಿಯ ಪ್ರದರ್ಶನ ಮಾಡಲು ಸಂಘಟಕರು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಮುಸ್ಲಿಂ ಸಂಘಟನೆಗಳು ಈ ಕುರಿತಾಗಿ ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೋಚುಲ್ ಹಾಗೂ ನ್ಯೂಯಾರ್ಕ್‌ ನಗರದ ಮೇಯರ್ ಎರಿಕ್ ಆಡಮ್ಸ್‌ ಅವರಿಗೆ ಪತ್ರ ಬರೆದಿದ್ದಾರೆ.

ಇದು ಸಾಂಸ್ಕೃತಿಕ ಪ್ರದರ್ಶನವಲ್ಲ, ಮುಸ್ಲಿಂ ವಿರೋಧಿ ದ್ವೇಷದ ಅಸಹ್ಯಕರ ಸಂಭ್ರಮಾಚರಣೆ ಎಂದು ಸಂಘಟನೆ ತನ್ನ ಪತ್ರದಲ್ಲಿ ಕಿಡಿ ಕಾರಿದೆ.
ಕೋಟ್ಯಂತರ ಭಾರತೀಯರ ನಂಬಿಕೆ, ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯಾ ರಾಮ ಮಂದಿರ ಒಂದು ಪವಿತ್ರ ತಾಣ ಎಂದು ಹೇಳಿರುವ ನ್ಯೂಯಾರ್ಕ್‌ ಇಂಡಿಯಾ ಡೇ ಪರೇಡ್‌ ಆಯೋಜಕರು ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.

ನಾವು ರಾಮ ಮಂದಿರದ ಪ್ರತಿಕೃತಿಯ ಮೆರವಣಿಗೆ ಮಾಡಿಯೇ ಸಿದ್ದ ಎಂದು ಹೇಳಿದ್ದಾರೆ.
ನಾವು ಯಾವುದೇ ರೀತಿಯ ಹಿಂಸೆ ಹಾಗೂ ದ್ವೇಷವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿರುವ ಕಾರ್ಯಕ್ರಮ ಆಯೋಜಕರು, ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡೋದನ್ನೂ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಂಕುರ್ ವೈದ್ಯ ಅವರು ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾವು ಶಾಂತಿಯುತ ಸಹಬಾಳ್ವೆಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

Ayodhya Ram Mandira ನ್ಯೂಯಾರ್ಕ್‌ನಲ್ಲಿ ನಡೆಸಲಾಗುವ ಇಂಡಿಯಾ ಡೇ ಪರೇಡ್‌ನಲ್ಲಿ ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತ ಧರ್ಮೀಯರನ್ನೂ ಪ್ರತಿನಿಧಿಸುವ ಪ್ರತಿಕೃತಿಗಳ ಪ್ರದರ್ಶನ ಆಗುತ್ತದೆ. ಭಾರತದ ವಿವಿಧತೆ, ಧಾರ್ಮಿಕ ಭಾವೈಕ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತೇವೆ ಎಂದು ಒಕ್ಕೂಟ ಸ್ಪಷ್ಟನೆ ನೀಡಿದೆ.
ಇದೇ ವೇಳೆ ವಸುದೇವ ಕುಟುಂಬಕಂ ಎಂಬ ಸಂಸ್ಕೃತದ ಸಾಲನ್ನೂ ನೆನಪಿಸಿರುವ ಒಕ್ಕೂಟದ ಅಧ್ಯಕ್ಷ ವೈದ್ಯ ಅವರು, ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ: ನ್ಯೂಯಾರ್ಕ್‌ನಲ್ಲಿ ‘ಭವಿಷ್ಯದ ಶೃಂಗ ಸಭೆ’ಯಲ್ಲಿ ಭಾಗಿ
ಕಳೆದ 42 ವರ್ಷಗಳಿಂದ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಇಂಡಿಯಾ ಡೇ ಪರೇಡ್‌ ನಡೆಯುತ್ತಿದೆ. ಈ ಭಾನುವಾರ 42ನೇ ಪರೇಡ್ ನಡೆಯಲಿದೆ.

ಭಾರತದ ಹೊರಗೆ ಭಾರತೀಯರು ನಡೆಸುವ ಅತಿ ದೊಡ್ಡ ಕಾರ್ಯಕ್ರಮ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಾವಿರಾರು ಭಾರತೀಯ ವಲಸಿಗರು, ಬಾಲಿವುಡ್ ತಾರೆಯರು, ಭಾರತದ ಕ್ರೀಡಾ ಪಟುಗಳು ನ್ಯೂಯಾರ್ಕ್‌ನ ಮ್ಯಾನ್‌ಹಟ್‌ನಲ್ಲಿ ಇರುವ ಮ್ಯಾಡಿಸನ್ ಅವೆನ್ಯೂನಲ್ಲಿ ಸೇರುತ್ತಾರೆ. ಇಲ್ಲಿ ಮೆರವಣಿಗೆ ಕೂಡಾ ನಡೆಯುತ್ತದೆ. ಭಾರತದಲ್ಲಿ ಬ್ರಿಟಿಷರ ರಾಜ್ಯಭಾರ ಅಂತ್ಯವಾಗಿ 1947ರ ಆಗಸ್ಟ್‌ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಯುತ್ತದೆ.

Supreme Court ಕೊಲ್ಕೊತಾ’ಹತ್ಯಾಚಾರ’ ಪ್ರಕರಣ. ಸುಪ್ರೀಂ ಕೋರ್ಟಿನಿಂದ ಸ್ವಪ್ರೇರಿತ ವಿಚಾರಣೆ

0

Supreme Court ಇಡೀ ದೇಶವನ್ನು ಬೆಚ್ಚಿಬೀಳಿಸಿದ ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವಿಷಯದ ವಿಚಾರಣೆಯನ್ನು ಆಗಸ್ಟ್ 20ರಂದು ನಡೆಸಲಿದೆ.

ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಗೆ ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಸುಪ್ರೀಂ ಕೋರ್ಟ್‌ನ ಈ ಕ್ರಮವು ಬಂದಿದೆ. ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು.

ಮರುದಿನ ಆರೋಪಿಯನ್ನು ಬಂಧಿಸಲಾಯಿತು. ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಆದೇಶಿಸಿದ ನಂತರ ಹೈ ಪ್ರೊಫೈಲ್ ಪ್ರಕರಣವನ್ನು ಈಗ ಸಿಬಿಐ ತನಿಖೆ ನಡೆಸುತ್ತಿದೆ.
ಈ ಘಟನೆಯ ಬಗ್ಗೆ ದೇಶಾದ್ಯಂತ ವೈದ್ಯರು ತಮ್ಮ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ದೇಶದ ವಿವಿಧ ಭಾಗಗಳ ಬೀದಿಗಳಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆಯಲ್ಲಿ ದೇಶದಾದ್ಯಂತ ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.

Supreme Court ಆದರೂ, ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇದ್ದವು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಶನಿವಾರ (ಆಗಸ್ಟ್ 17) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.

ಈ ಬಗ್ಗೆ ಐಎಂಎ ಕೆಲವು ಪರಿಹಾರಗಳು ಮತ್ತು ಬೇಡಿಕೆಗಳನ್ನು ಪ್ರಧಾನ ಮಂತ್ರಿಗೆ ಮುಂದಿಟ್ಟಿದೆ. “ಪರಿಸ್ಥಿತಿಯನ್ನು ಗಮನಿಸುವುದು ಮಹಿಳಾ ವೈದ್ಯರಿಗೆ ಮಾತ್ರವಲ್ಲದೆ ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬ ಮಹಿಳೆಗೆ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ಹೇಳಿದರು. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಮತ್ತು ಗೌರವ ಕಾರ್ಯದರ್ಶಿ ಡಾ.ಅನಿಲ್‌ಕುಮಾರ್ ಜೆ.ನಾಯಕ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಐಎಂಎ ಪತ್ರದಲ್ಲಿ, ಆಗಸ್ಟ್ 9 ರಂದು ಅಪರಾಧ ನಡೆದ ಆಗಸ್ಟ್ 14 ರಂದು ರಾತ್ರಿ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯವನ್ನು ಉಲ್ಲೇಖಿಸಿದೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Uttarakhand Police ಡೆಹ್ರಾಡೂನಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಐವರ ದಸ್ತಗಿರಿ

0

Uttarakhand Police ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ಬಸ್ ಚಾಲಕರು ಸೇರಿದಂತೆ ಐವರನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.

ಡೆಹ್ರಾಡೂನ್‌ನ ಐಎಸ್‌ಬಿಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಮೂರನೇ ಅತ್ಯಾಚಾರ ಪ್ರಕರಣ ಇದಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ತಂಡ ಅಪ್ರಾಪ್ತ ಬಾಲಕಿಯನ್ನು ಬಸ್ ನಿಲ್ದಾಣದಿಂದ ರಕ್ಷಿಸಿದ್ದು, ಘಟನೆಯನ್ನು ಬಯಲಿಗೆಳೆದಿದೆ.

“ಬಸ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯನ್ನು ದೆಹಲಿಯಿಂದ ಡೆಹ್ರಾಡೂನ್‌ಗೆ ಕರೆತಂದಿದ್ದರು. ಇಬ್ಬರು ಬಸ್ ಚಾಲಕರು, ಕಂಡಕ್ಟರ್, ಕ್ಯಾಷಿಯರ್ ಮತ್ತು ಸ್ವೀಪರ್ ಸೇರಿದಂತೆ ಐವರು ಅದೇ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ
ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Uttarakhand Police ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯು ಶನಿವಾರ ಐಎಸ್‌ಬಿಟಿ ಪೊಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸತತ ಮೂರು ಸಲ ಸಮಾಲೋಚನೆ ನಡೆಸಿದ ಬಳಿಕ ಬಾಲಕಿ ಉತ್ತರ ಪ್ರದೇಶದ ಮೊರಾದಾಬಾದ್ ಮೂಲದವಳು ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೊರಾದಾಬಾದ್‌ನ 16 . ಬಾಲಕಿ ಮೇಲೆ ಆಗಸ್ಟ್ 13 ರ ಸಂಜೆ ಡೆಹ್ರಾಡೂನ್ ISBT ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು.

ಬಾಲಕಿ ಪಂಜಾಬ್‌ನಿಂದ ದೆಹಲಿಗೆ ಮತ್ತು ನಂತರ ಡೆಹ್ರಾಡೂನ್‌ಗೆ ಪ್ರಯಾಣ ಬೆಳೆಸಿದ್ದಳು.

Police Department ಗೌರಿ ಗಣೇಶ-ಈದ್ ಮಿಲಾದ್ ಶಾಂತಿಯುತ ಆಚರಣೆ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಚನೆ

0

Police Department ಗೌರಿ ಗಣೇಶ- ಈದ್ ಮಿಲಾದ್: ಪೋಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ .

ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ ಪೊಲೀಸ್‌ ಇಲಾಖೆ ಆಯಾ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಬರುವ ಗಣೇಶ ಪ್ರತಿಷ್ಟಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆಯನ್ನು ನಡೆಸುತ್ತಿದೆ.ಕೆಲವೊಂದು ಸೂಚನೆಗಳನ್ನು ನೀಡುತ್ತಿದೆ.

Police Department ಪೊಲೀಸ್‌ ಇಲಾಖೆಯ ಸೂಚನೆ

1) ಗಣಪತಿ ಮೂರ್ತಿ ಪ್ರತಿಷ್ಟಾನೆಯ ದಿನಾಂಕ, ಸ್ಥಳ, ಮೆರವಣಿಗೆ ಮಾರ್ಗ ಮತ್ತು ವಿಸರ್ಜನೆ ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸ್ ಠಾಣೆಗೆ ನೀಡುವುದು.
2) ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ದಕ್ಕೆಯಾಗದಂತೆ ಗಣಪತಿ ಪೆಂಡಾಲ್ ಗಳನ್ನು ಹಾಕಬೇಕು.
3) ಈದ್ ಮಿಲಾದ್ ಮತ್ತು ಗಣಪತಿ ಮೆರವಣಿಗೆಯಲ್ಲಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದ ರೀತಿ ಮೆರವಣಿಗೆ ಮಾಡುವುದು.
4) ಗಣಪತಿ ಪೆಂಡಾಲ್ ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಗಣಪತಿ ಮೂರ್ತಿಗಳು ವಿಸರ್ಜನೆಯಾಗುವ ದಿನದ ವರೆಗೆ, ದಿನದ 24 ಗಂಟೆಯೂ ಪೆಂಡಾಲ್ ನಲ್ಲಿ ಇರುವ ಹಾಗೇ ನೋಡಿಕೊಳ್ಳಬೇಕು.
5) ಹಬ್ಬದ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕುವಾಗ ಇತರರ ಭಾವನೆಗಳಿಗೆ ದಕ್ಕೆಯಾಗದ ರೀತಿಯಲ್ಲಿ ಅಳವಡಿಸುವುದು.
6) ಹಬ್ಬದ ಆಚರಣೆಯಲ್ಲಿ ದ್ವನಿ ವರ್ಧಕಗಳನ್ನು ಬಳಕೆ ಮಾಡುವಾಗ, ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ಬಳಸುವುದು.
7) ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಎಂದು ಸೂಚಿಸಿದರು.

Department of Fisheries ಒಳನಾಡು ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ಸರಿಪಡಿಸಲು ಮೀನುಗಾರರ ಸಹಕಾರ ಸಂಘದ ಮನವಿ

0

Department of Fisheries ರಾಜ್ಯದ ಒಳನಾಡು ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಮಿತಿ ಒತ್ತಾಯಿಸಿದೆ.

ಮೀನುಗಾರಿಕೆ ಇಲಾಖೆಯಿಂದ ಸೌಲಭ್ಯ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರಿಂದ, ಒಳನಾಡು ಮೀನುಗಾರರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದೆ.

ಕಳೆದ ಎರಡು ವರ್ಷಗಳಿಂದ ಏತ ನೀರಾವರಿ ಕೆರೆಗಳನ್ನು ವಿಲೇವೇರಿ ಮಾಡಿಲ್ಲ. ಇಲ್ಲಿ ಸಮುದ್ರ ಮೀನುಗಾರಿಕೆ ಮಾಡುತ್ತಿರುವ ಮೀನುಗಾರರಿಗೆ ಸರ್ಕಾರದ ಯೋಜನೆಯ ಶೇ 90ರಷ್ಟು ಅನುದಾನ ನೀಡಲಾಗುತ್ತಿದೆ. ಆದರೆ,
ಒಳನಾಡು ಮೀನುಗಾರರಿಗೆ ಶೇ ೧೦ ಅನುದಾನ ಸಿಗುತ್ತಿದೆ. ಕಡಲ ತೀರದ ಮೀನುಗಾರಿಕೆಗೆ ಒಬ್ಬೊಬ್ಬರಿಗೆ ಆರರಿಂದ ಹತ್ತು ಲಕ್ಷ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದಾರೆ. ಒಳನಾಡಿನ ಮೀನುಗಾರರಿಗೆ 10 ಸಾವಿರ ಸಹಾಯಧನ ನೀಡುತ್ತಿದೆ. ಇದರಿಂದ ತಾಲ್ಲೂಕು ವ್ಯಾಪ್ತಿಯ ಉಳಿದ ಮೀನುಗಾರರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

Department of Fisheries ಮೀನುಗಾರಿಕೆ ಸಲಕರಣೆ ಕಿಟ್ ಗಳನ್ನು ಪ್ರತಿ ವರ್ಷವೂ ಮೀನುಗಾರರಿಗೆ ನೀಡಬೇಕು. ಮತ್ತು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಮೀನು ಮಾರಾಟ ಸಾಮಾಗ್ರಿ ಸಲಕರಣೆಗಳನ್ನು ನೀಡಬೇಕು. ಮೀನುಗಾರರಿಗೆ ಮನೆಗಳ ಸೌಲಭ್ಯದ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ, ಪ್ರತಿ ತಾಲೂಕಿಗೆ ಮನೆಗಳ ಸೌಲಭ್ಯ ದೊರೆಯುತ್ತಿಲ್ಲ.,

ಮೂಲ ಮೀನುಗಾರರು ವಿದ್ಯಾವಂತರಾಗಿರುವುದರಿಂದ ಇ- ಟೆಂಡರ್ ಬಗ್ಗೆ ತಿಳುವಳಿಕೆ ಇಲ್ಲ. ಇದರ ಲಾಭ ಕಾರ್ಪೊರೇಟ್ ಮತ್ತು ಹಣವಂತರು ಪಡೆಯುತ್ತಿದ್ದಾರೆ.

Brahma Kumaris Institute ನಗರದ ಬ್ರಹ್ಮ ಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬ ಆಚರಣೆ

0

Brahma Kumaris Institute ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು. ರಕ್ಷಾಬಂಧನ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಸೋದರ-ಸೋದರಿಯರು ಎಂಬ ಪವಿತ್ರ ದೃಷ್ಟಿಯ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಹಾಗೂ ಎಲ್ಲರಿಗೂ ಶ್ರೀರಕ್ಷೆಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪನರು,ಮಾಜಿ ಉಪಮುಖ್ಯ ಮಂತ್ರಿಗಳು, ಶಿವಮೊಗ್ಗ ಇವರು ಮಾತನಾಡುತ್ತಾ“ ಇಡೀ ವಿಶ್ವವನ್ನೇ ಒಂದುಗೂಡಿಸುವ ಸಂಸ್ಥೆಯೆಂದರೆ ಅದು ಈಶ್ವರೀಯ ವಿಶ್ವ ವಿದ್ಯಾಲಯ , ಇಲ್ಲಿ ಯಾವುದೇ ಜಾತಿ-ಧರ್ಮದ ಭೇದ-ಭಾವವಿಲ್ಲ ಎಂದರು.

Brahma Kumaris Institute ಮುಂದುವರೆದು ಮಾತನಾಡುತ್ತಾ ಪ್ರಸ್ತುತ ರಾಖಿಯ ಪಾವಿತ್ರತೆಯು ಜಗತ್ತಿನ ಮೃಗೀಯ ಮನಸ್ಕರಿಗೆ ಬೇಕಾಗಿದೆ. ನಾವು ಪರಸ್ಪರ ಅಣ್ಣ-ತಂಗಿಯರು,ಅಕ್ಕ-ತಮ್ಮಂದಿರು ಎಂಬ ಭಾವನೆಯಿಂದ ಸೋದರಿಯರ ರಕ್ಷಣೆಯಾಗಬೇಕು.ಅನಾಚರ-ಅತ್ಯಾಚಾರಗಳು ನಿಲ್ಲಬೇಕು “ ಎಂದು ರಾಖಿಯ ಮಹತ್ವವನ್ನು ತಿಳಿಸಿದರು. ನಂತರ ಶ್ರೀ ಈಶ್ವರಪ್ಪ ಹಾಗೂ ಶ್ರೀ ಕೆ ಈ ಕಾಂತೇಶ್ ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಾಖಿ ಕಟ್ಟಿ ಸನ್ಮಾನಿಸಿದರು. ಬಿಕೆ ಶಿವದೇವಿ , ಬಿಕೆ ನಾಗರಾಜ್ ,ಬಿಕೆ ಮಂಜಪ್ಪ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

[2] ಮಾನ್ಯ ಶ್ರೀ ಚೆನ್ನಬಸಪ್ಪ , ಶಾಸಕರು,ಶಿವಮೊಗ್ಗ ಹಾಗೂ ಮಾನ್ಯ ಶ್ರೀ ಡಿ ಎಸ್ ಅರುಣ್ , ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ -ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಕ್ಷಾಬಂಧನ ಕಟ್ಟಿ ಶುಭಹಾರೈಸಿದರು

DVS Independent College ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

0

DVS Independent College ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ದೈಹಿಕ ಶಿಕ್ಷಕ ಎನ್.ಮಧು ಹಾಗೂ ಕಾಲೇಜಿನ ಕ್ರೀಡಾಪಟುಗಳಿಗೆ ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್.ರಾಜಶೇಖರ್, ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಹಾಗೂ ಕಾಲೇಜಿನ ಸಿಬ್ಬಂದಿ ಶುಭಕೋರಿದ್ದಾರೆ.
ಬಾಲಕರ ವಿಭಾಗದ ಬೆಸ್ಟ್ ಅಥ್ಲೀಟ್, ಬಾಲಕರ ವಿಭಾಗದ ಸಮಗ್ರ ಪ್ರಶಸ್ತಿ ಹಾಗೂ ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿಗಳನ್ನು ಕ್ರೀಡಾಕೂಟದಲ್ಲಿ ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜು ತನ್ನದಾಗಿಸಿಕೊಂಡಿದೆ. ಉತ್ತಮ ಪ್ರದರ್ಶನ ನೀಡಿದ ಕಾಲೇಜಿನ ತಂಡ ವಾಲಿಬಾಲ್ ವಿನ್ನರ್ ಆಗಿ ಹೊರಹೊಮ್ಮಿದೆ
DVS Independent College ಬಾಲಕರ ವಿಭಾಗದಲ್ಲಿ 400 ಮೀ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ, 800 ಮೀ ಓಟದಲ್ಲಿ ಪ್ರಥಮ, 1500 ಮೀ ಓಟದಲ್ಲಿ ದ್ವಿತೀಯ, 4400 ಮೀ ಓಟದಲ್ಲಿ ಪ್ರಥಮ, 4100 ಮೀ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, ಟ್ರಿಪಲ್ ಜಂಪ್‌ನಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಪ್ರಥಮ, 100 ಮೀ ಹರ್ಡಲ್ಸ್ ನಲ್ಲಿ ಪ್ರಥಮ, 400 ಮೀ ಹರ್ಡಲ್ಸ್ ನಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ಪ್ರಥಮ, 200 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿದೆ.
ಬಾಲಕಿಯರ ವಿಭಾಗದಲ್ಲಿ 400 ಮೀ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ, 200 ಮೀ ಓಟದಲ್ಲಿ ಪ್ರಥಮ, ದ್ವಿತೀಯ, 100 ಮೀ ಓಟದಲ್ಲಿ ಪ್ರಥಮ, 110 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ, 400 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ, 4400 ಮೀ ಓಟದಲ್ಲಿ ಪ್ರಥಮ, 4100 ಮೀ ಓಟದಲ್ಲಿ ಪ್ರಥಮ ಹಾಗೂ ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜಿನ ಕ್ರೀಡಾಪಟುಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

S.N.Chennabasappa ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಶಾಸಕ ಚೆನ್ನಿಅಧಿಕಾರಿಗಳಿಗೆ ಸೂಚನೆ

0

S.N.Chennabasappa ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ನಗರದ ಬಿ.ಬಿ ರಸ್ತೆ ಹಾಗೂ ಕುಂಬಾರಕೇರಿಯ ಬಡಾವಣೆಗಳಿಗೆ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯರ ಸಮಸ್ಯೆಗಳನ್ನುಆಲಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.