Monday, March 30, 2026
Monday, March 30, 2026
Home Blog Page 570

Shivamogga Police ಅಪರಿಚಿತ ವ್ಯಕ್ತಿಯ ಶವ ಪತ್ತೆ. ಪೊಲೀಸ್ ಪ್ರಕಟಣೆ

0

Shivamogga Police ಸೆ.02ರಂದು ನಗರದ ಗಾರ್ಡನ್ ಏರಿಯಾ 2ನೇ ಕ್ರಾಸ್ ಸೂರ್ಯ ನರ್ಸಿಂಗ್ ಕಾಲೇಜ್ ಪಕ್ಕದ ಕನ್ಸರವೆನ್ಸಿ ರಸ್ತೆ ಒಳಚರಂಡಿಯಲ್ಲಿ ಸುಮಾರು045-50 ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈತನ ವಿಳಾಸ, ಹೆಸರು, ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ.

Shivamogga Police ಈತನ ಚಹರೆ ಸುಮಾರು ೦೫.೦೬ ಅಡಿ ಎತ್ತರ, ಗೋದಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈಮೇಲೆ ಕಪ್ಪು ಬಣ್ಣದ ಚಡ್ಡಿ ಇರುತ್ತದೆ. ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

Ganesh Chaturthi ಮಲವಗೊಪ್ಪ ಗಣೇಶೋತ್ಸವದಲ್ಲಿ ಹೊರಬಂದ ಸಂದೇಶ,” ಸರ್ಕಾರಿ ಶಾಲೆ ಉಳಿಸೋಣ

0

Ganesh Chaturthi ಶಿವಮೊಗ್ಗದ ಮಲವಗೊಪ್ಪದಲ್ಲಿ ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ.
ಇಲ್ಲಿನ ಮೂರನೇ ತಿರುವಿನಲ್ಲಿ ಈ ಗಣೇಶನನ್ನು ಕೂಡ್ರಿಸಲಾಗಿದೆ.
ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಇಲ್ಲಿನ ಯುವಕರ ತಂಡ ಮುಂದಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದೊದಗಿದೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸೋಣ ಎನ್ನುವ ಧ್ಯೇಯವಾಕ್ಯದೊಂದಿಗೆ ಗಣೇಶೋತ್ಸವದ ಸಂದೇಶ ಸಾರಲಾಗುತ್ತಿದೆ.
Ganesh Chaturthi ಈ ಯುವಕರ ತಂಡ ಉತ್ತಮ ಸಂದೇಶ ನೀಡುವ ಮೂಲಕ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ, ಗಣೇಶ ಮಂಟಪದಲ್ಲಿ ಸರ್ಕಾರಿ ಶಾಲೆಯ ಪರಿಸ್ಥಿತಿ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಶಾಲೆಯಿಂದ ಓದಿ ಉನ್ನತ ಹುದ್ದೆಗೆ ಏರಿದ ಅಧಿಕಾರಿಗಳು ಸಾಹಿತಿಗಳ ಭಾವಚಿತ್ರವನ್ನು ಮಂಟಪದಲ್ಲಿ ಅಳವಡಿಸಲಾಗಿದೆ. ಇವೆಲ್ಲವೂ ನೋಡುಗರ ಗಮನ ಸೆಳೆಯುತ್ತಿದೆ.

Horticulture Department ಪಿಎಂ ಕೃಷಿ ಸಿಂಚಾಯಿ ಯೋಜನೆ ಲಾಭ ಪಡೆಯಲು ಶಿಕಾರಿಪುರ ತಾಲ್ಲೂಕಿನ ಅರ್ಹರಿಂದ ಅರ್ಜಿ ಆಹ್ವಾನ

0

Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ.
ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಗೆ ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಮೊದಲ 2 ಹೆ. ಪ್ರದೇಶದವರೆಗೆ ಶೇ. 90% ಮತ್ತು 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ಇಲಾಖೆಯಿಂದ ಅನುಮೋದಿತ ಕಂಪನಿಗಳ ಮೂಲಕವೇ ರೈತರು ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿಕೊಲ್ಳುವುದು. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯುವುದು.
Horticulture Department 2024-25ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಪರಿಶಿಷ್ಟ ಜಾತಿ ರೈತರಿಗೆ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳುವುದು. ಹಾಗೂ 2024-25ನೇ ಸಾಲಿನ ಎಸ್.ಎಂ.ಎ.ಎಂ. ಯೋಜನೆಯಡಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೂ ಅಡಿಕೆ ದೋಟಿಗಳಿಗೆ ಸಹಾಯಧನ ನೀಡುಲಾಗುವುದು. ಆಸಕ್ತ ರೈತರು ಆಯಾ ಹೋಬಳಿ ರೈತರ ಸಂಪರ್ಕ ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವುದು.
ಈ ಎಲ್ಲಾ ಯೋಜನೆಗಳಿಗೆ ಸೆ. 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿರುತ್ತಾರೆ.

K. S. Eshwarappa ಮೃತ ಚಂದ್ರಶೇಖರ್ ಕುಟುಂಬಕ್ಕೆ ₹5 ಲಕ್ಷ ದೇಣಿಗೆ- ಕೆ.ಎಸ್.ಈಶ್ವರಪ್ಪ

0

K. S. Eshwarappa ಈ ಹಿಂದೆ ತಾನು ಘೋಷಿಸಿದಂತೆ “ರಾಷ್ಟ್ರಭಕ್ತರ ಬಳಗದ ಸದಸ್ಯರು ದೇಣಿಗೆಯಾಗಿ ನೀಡಿದ 5,00,000-00 (ಐದು ಲಕ್ಷ) ರೂಪಾಯಿಗಳನ್ನು ‌ಸೆ. 11 ರ ಬುಧವಾರ ಬೆಳಿಗ್ಗೆ 11:30 ಗಂಟೆಗೆ ಶಿವಮೊಗ್ಗದ ವೀರಣ್ಣ ಲೇಔಟ್‌ನಲ್ಲಿರುವ ಮೃತರ ಮನೆಗೆ ತಲುಪಿಸಲಾಗುವುದು ಎಂದು ಮಾಜಿ ಡಿಸಿಎಂ
‌ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಈ ಸತ್ಕಾರ್ಯದಲ್ಲಿ “ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರೊಂದಿಗೆ ಜವಾಬ್ದಾರಿಯುತ ಶಿವಮೊಗ್ಗದ ಜನತೆ ಪಾಲ್ಗೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ “ರಾಷ್ಟ್ರಭಕ್ತರ ಬಳಗ”ದಿಂದ 5 ಲಕ್ಷ ರೂಪಾಯಿ ಧನ ಸಹಾಯ ಮಾಡುವಲ್ಲಿ ಸಹಕರಿಸಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ
ನಿಗಮದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ಹೊರಬರಲು ಪ್ರಮುಖ ಕಾರಣರಾದ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ತಿಂಗಳುಗಳೇ ಕಳೆದರೂ, ಅವರ ಕುಟುಂಬಕ್ಕೆ ಸರ್ಕಾರ ಘೋಷಿಸಿದ 25,00,000-00 (ಇಪ್ಪತೈದು ಲಕ್ಷ) ರೂಪಾಯಿ ಪರಿಹಾರ ಇನ್ನೂ ಮೃತರ ಪತ್ನಿಗೆ ತಲುಪಿಲ್ಲ ಎಂದ ಅವರು, ಈ ಸಂಬಂಧವಾಗಿ “ರಾಷ್ಟ್ರಭಕ್ತರ ಬಳಗ”ದ ಪರವಾಗಿ ತಾನು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ ಬಳಿ ಮಾತನಾಡಿದಾಗ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಲು ಕ್ರಮವಹಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಮೃತರ ಕುಟುಂಬಕ್ಕೆ ಹಣ ಸಂದಾಯವಾಗಿಲ್ಲ ಎಂದರು.
.ಈ ವಿಷಯಕ್ಕೆ ಸಂಬಂಧಿಸಿದಂತೆ “ರಾಷ್ಟ್ರಭಕ್ತರ ಬಳಗ ಇತ್ತೀಚೆಗೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪರಿಹಾರ ನೀಡುವುದಾಗಿ ಘೋಷಿಸಲಾಗಿತ್ತು. ಆ ಪ್ರಕಾಎ ನಾಡಿದ್ದು ನೀಡಲಾಗುವುದು ಎಂದರು.
ಈ ಸಂಬಂಧವಾಗಿ ಸರ್ಕಾರದಿಂದ ಬರುವ ಪರಿಹಾರದ ಹಣ ಬಸೆ. 20 ಒಳಗಾಗಿ ತಲುಪದಿದ್ದರೆ ತನ್ನ ನೇತೃತ್ವದಲ್ಲಿ “ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ “ಜೈಲ್ ಭರೋ” ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

Department of School Education ಕ್ರೀಡೆ ಶಿಸ್ತನ್ನು ಕಲಿಸುತ್ತದೆ- ರಮೇಶ್

0

Department of School Education ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು,ನಮ್ಮ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ. ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಅಭಿಪ್ರಾಯಪಟ್ಟರು.
ಅವರು ನೆಹರೂ ಕ್ರೀಡಾಂಗಣದಲ್ಲಿ ಎರಡು ದಿನ ನಡೆಯಲಿರುವ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ಹಾಗೂ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಕಾಶಿಪುರ,ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಸಿ ಮತ್ತು ಡಿ ವಲಯಗಳ ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯ ಶಿವಮೊಗ್ಗ ತಾಲ್ಲೂಕಿನ ವಲಯ ಮಟ್ಟದ ಕ್ರೀಡಾ ಕೂಟದ ಧ್ವಜಾರೋಣ ನೆರವೇರಿಸಿ ಮಾತನಾಡುತ್ತಾ, ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದ ಅವರು, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ ಅಲ್ಲದೇ ಕ್ರೀಡೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.
ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ ಎಂದ ಅವರು, ಕ್ರೀಡೆ ತಮ್ಮ ಮಾನಸಿಕ ಬುದ್ದಿ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸತತವಾಗಿ ಅಭ್ಯಾಸದಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ವಾಗುತ್ತದೆ ಎಂದರು.
Department of School Education ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂಬ್ರಿಡ್ಜ್ ಶಾಲೆಯ ಆಧ್ಯಕ್ಷರಾದ ಬಿ. ಎಸ್. ಯಶೋಧ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಿ. ಹೆಚ್. ನಿರಂಜನ್ ಮೂರ್ತಿ ಅವರು ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಎರಡನ್ನೂ ಸಮನಾವಾಗಿ ನೋಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಎಸ್. ಶಶಿಧರ್, ಪ್ರಾಂಶುಪಾಲರಾದ ಶಾರದಾ ಎಸ್. ನಾಯಕ್ , ಕೇಂಬ್ರಿಡ್ಜ್ ಪಿಯು ಕಾಲೇಜಿನ ಕಾರ್ಯ ದರ್ಶಿ ಪ್ರವೀಣ್, ಸಿ. ಆರ್. ಪಿ. ಚೇತನ್ , ಕೆ. ಜಿ. ಮಠಪತಿ,
ಸಂಘದ ಕಾರ್ಯದರ್ಶಿ ತೇಜಸ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನ, ಸೋಮಶೇಖರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್ :

Karnataka Public Service Commission ಕೆಪಿಎಸ್ ಸಿ ನೂತನ ಸದಸ್ಯರಾಗಿ ಆಯ್ಕೆಯಾದ ಭೋಜ್ಯಾನಾಯಕ್ ಅವರಿಗೆ ಸನ್ಮಾನ

0

Karnataka Public Service Commission ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಚ್.ಎಸ್.ಭೋಜ್ಯಾನಾಯ್ಕ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೇಮಕ ಮಾಡಿದ್ದಾರೆ. ಕೆಪಿಎಸ್‌ಸಿ ನೂತನ ಸದಸ್ಯ ಎಚ್.ಎಸ್. ಭೋಜ್ಯಾನಾಯ್ಕ್ ಅವರಿಗೆ ಶಿವಮೊಗ್ಗ ನಗರದಲ್ಲಿ ಆತ್ಮೀಯರು ಅಭಿನಂದಿಸಿದರು.
ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ 25 ವರ್ಷಗಳಿಂದ ಭೋದನೆ ವೃತ್ತಿ ಮಾಡುತ್ತಿದ್ದು, ಕುವೆಂಪು ವಿವಿ ಕುಲಸಚಿವ ಹಾಗೂ ಪರೀಕ್ಷಾಂಗದ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದು, ಅಪಾರ ಆಡಳಿತ ಅನುಭವ ಹೊಂದಿದ್ದಾರೆ. ಸೂಕ್ತ ವ್ಯಕ್ತಿಗೆ ಉನ್ನತ ಸ್ಥಾನಮಾನ ದೊರಕಿದೆ. ಇವರ ಅಧಿಕಾರದ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಶುಭಕೋರಿದರು.
Karnataka Public Service Commission ಎಚ್.ಎಸ್.ಭೋಜ್ಯಾನಾಯ್ಕ್ ಅವರ ಕೆಪಿಎಸ್‌ಸಿ ನೂತನ ಸದಸ್ಯತ್ವ ಅವಧಿ ಆರು ವರ್ಷ ಇರಲಿದೆ. ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ರಾಜ್ಯಪಾಲರು ಭೋಜ್ಯಾನಾಯ್ಕ ಅವರನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಕ ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಅಭಿನಂದಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಮಮತಾ, ಸಿವಿಲ್ ಇಂಜಿನಿಯರ್ ಚಂದನ್ ಆರ್., ನಿವೃತ್ತ ಮುಖ್ಯಶಿಕ್ಷಕ ರುದ್ರಪ್ಪ ಚಿಲೂರ್ ಉಪಸ್ಥಿತರಿದ್ದರು.

S. Bangarappa ಮಾಜಿಮುಖ್ಯಮಂತ್ರಿ ಬಂಗಾರಪ್ಪ ಜನ್ಮದಿನವನ್ನ ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಆಗ್ರಹ

0

S. Bangarappa ಅಕ್ಟೋಬರ್ 26 ರಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ದೀನದಲಿತರ ಕಣ್ಮಣಿಯಾಗಿದ್ದರು. ರೈತರ, ಕಾರ್ಮಿಕರ ಆಶಾಕಿರಣವಾಗಿದ್ದರು.. ಬಗರ್ ಹುಕುಂ ರೈತರ ಪಾಲಿಗೆ ಬೆನ್ನೆಲುಬಾಗಿದ್ದರು. ಸಮಾಜವಾದಿಯ ದಿಟ್ಟ ಹೋರಾಟಗಾರರು ಎಂದರು.

ಇಂತಹವರ ಜನ್ಮ ದಿನಾಚರಣೆಯನ್ನು ಸರಕಾರಿ ಕಚೇರಿ‌ ಮತ್ತು ಶಾಲಾ ಕಾಲೇಜಿನಲ್ಲಿ ಆಚರಿಸಲು ಆದೇಶಿಸಬೇಕೆಂದರು.
ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ : 66 ರಲ್ಲಿ 68 ಎಕರೆ 1960-61 ರಲ್ಲಿ 34 ಪ್ರತಿ ಕುಟುಂಬದವರಿಗೆ 2,00 ಎಕರೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಆ. 25ರಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೂ ಪಾದಯಾತ್ರೆ ನಡೆಸಿ ಆರಂಭಿಸಿರುವ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.

ಕ್ಷೇತ್ರಕ್ಕೆ ಜಿಲ್ಲಾ ಮಂತ್ರಿ ಎಸ್ ಮಧು ಬಂಗಾರಪ್ಪ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗ ನಗರದಲ್ಲಿ ಇದ್ದರೂ ಕನಿಷ್ಟ ಸೌಜನ್ಯಕ್ಕಾದರೂ ಭೇಟಿ ನೀಡದೆ ರೈತರ ಸಮಸ್ಯೆಗಳನ್ನು ಆಲಿಸದ ಕ್ರಮವನ್ನು ಖಂಡಿಸಸುವುದಾಗಿ ಹೇಳಿದರು.
ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಒತ್ತಾಯಿಸಿ ಹಾಗೂ ಸತ್ಯಾಗ್ರಹವು ಮುಂದುವರೆಯಲಿದೆ.

S. Bangarappa ಸೆ 10 ರಂದು ಸಾಗರದಲ್ಲಿ ಕಾಗೋಡು ತಿಮ್ಮಪ್ಪ ರವರಿಗೆ ವಿಶ್ವ ಮಾನವ ಪ್ರಶಸ್ತಿಯನ್ನು ಅರ್ಪಿಸಿ ಹೋರಾಟದ ಮನವಿಯನ್ನು ಸಹ ಅರ್ಪಿಸಿ ಅದೇ ದಿನ ಅಲ್ಲಿಂದ ಸೊರಬ ತಾಲ್ಲೂಕಿನಲ್ಲಿ ಇರುವ ಎಸ್ ಬಂಗಾರಪ್ಪ ಸಮಾಧಿ ಸ್ಥಳದ ಮುಂದೆ ಪ್ರತಿಭಟನಾ ಸತ್ಯಾಗ್ರಹ ಮುಂದುವರೆಯಲಿದೆ ಎಂದು‌ವಿವರಿಸಿದರು.

ಮಲೆನಾಡು ರೈತರ ಹೋರಾಟ ಸಮಿತಿಯೂ ಸಹ ಈ ಧರಣಿಗೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ತೀ ನಾ ಶ್ರೀನಿವಾಸ್ ಈ ವೇಳೆ ಹೇಳಿದರು.

Bahumukhi Shivamogga ದಲಿತ್ – ಒಂದು ಅವಲೋಕನ”. ಟೆಲೆಕ್ಸ್ ರವಿ ಅವರಿಂದ ವಿಶೇಷ ಉಪನ್ಯಾಸ

0

Bahumukhi Shivamogga ಶಿವಮೊಗ್ಗ ನಗರದ ಬಹುಮುಖಿಯ ವತಿಯಿಂದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಸೆ. 11ರ ಬುಧವಾರ ಸಂಜೆ 5:30ಕ್ಕೆ ನಡೆಯುವ 40ನೇ ಕಾರ್ಯಕ್ರಮದಲ್ಲಿ, ಪತ್ರಕರ್ತರು, ಲೇಖಕರು, ಸಮಾಜಿಕ ಹೋರಾಟಗಾರರೂ ಆದ ಎನ್. ರವಿಕುಮಾರ್ (ಟೆಲೆಕ್ಸ್) ರವರು ದಲಿತ್-ಒಂದು ಅವಲೋಕನ ಕುರಿತು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಲಿದ್ದಾರೆ.

ಎನ್. ರವಿಕುಮಾರ್. ಟೆಲೆಕ್ಸ್ ರವಿ ಎಂದೇ ಕರೆಯಲ್ಪಡುವ ಇವರು ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆ, ಈ ವಾರ ಸೇರಿದಂತೆ ಸ್ಥಳೀಯ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಸಂಪಾದಕರಾಗಿದ್ದಾರೆ. ಅನೇಕ ಜನಪರ ಚಳುವಳಿಗಳಲ್ಲಿ ಭಾಗವಹಿಸಿ, ಸಫಾಯಿ ಕರ್ಮಚಾರಿಗಳ ಬಗ್ಗೆ ಅಧ್ಯಯನ ನಡೆಸಿ, ಅವರ ಹಕ್ಕಿಗಾಗಿ ಹೋರಾಟ ನಡೆಸಿರುವ ಇವರು, ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗದ ಪಂಚವಟಿ ಕಾಲೋನಿ ಕೊಳಚೆ ಪ್ರದೇಶದ ಪೌರಕಾರ್ಮಿಕರ ಪುನರ್ ವಸತಿಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ.

Bahumukhi Shivamogga ಕವಿಗಳು, ಬರಹಗಾರರು ಆಗಿರುವ ಇವರು, ದಾವಣಗೆರೆ, ಕುವೆಂಪು ವಿವಿಗಳಲ್ಲಿ ಅಲ್ಲದೆ ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿದ್ದಾರೆ.
ದಮನಿತರ ಪರವಾಗಿ ಸದಾ ಹೋರಾಟ ನಡೆಸುವ ಇವರಿಗೆ ಗಿರಿಧರ ಪ್ರಶಸ್ತಿ, ಬಿಎಂಶ್ರೀ ಕಾವ್ಯ ಪುರಸ್ಕಾರ, ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ… ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದ್ದು, ವಿವರಗಳಿಗೆ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.

Sharavati River ತಾಂತ್ರಿಕ ದೋಷದ ಕಾರಣ ಸಾಗರ ಮುಪ್ಪಾನೆ ಲಾಂಚ್‌ ಸ್ಥಗಿತ

0

Sharavati River ಸಾಗರ ತಾಲ್ಲೂಕು ಕರೂರು ಹೋಬಳಿಯಿಂದ ಕಾರ್ಗಲ್‌ ಹಾಗೂ ಜೋಗಕ್ಕೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಮುಪ್ಪಾನೆ ಲಾಂಚ್‌ ಸ್ಥಗಿತಗೊಂಡಿದೆ.

ಹಲ್ಕೆ-ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಲಾಂಚ್‌ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಹಿನ್ನೀರು ಹೆಚ್ಚಿದ್ದು ಲಾಂಚ್‌ ನಿಲ್ಲಿಸಲು ಸೂಕ್ತ ಪ್ಲಾಟ್‌ ಫಾರಮ್‌ ಸಿಗುತ್ತಿಲ್ಲ. ಮಣ್ಣಿನ ದಿಬ್ಬದ ಮೇಲೆ ಲಾಂಚ್‌ ನಿಲ್ಲಿಸುವ ವೇಳೆ ಲಾಂಚ್‌ನ ಮೋಟಾರ್‌ನ ಪ್ಯಾನ್‌ಗೆ ಮರದ ದಿಮ್ಮಿಗಳು ತಗುಲಿ ಸಮಸ್ಯೆಯಾಗಿದೆ ಎನ್ನಲಾಗಿದೆ.

Sharavati River ಲಾಂಚ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಅಧಿಕಾರಿಗಳು ಪರಿಹಾರ ಹುಡುಕುತ್ತಿದ್ದು, ಸದ್ಯಕ್ಕಂತೂ ಸಂಚಾರ ಸ್ಥಗಿತಗೊಂಡಿದೆ. ಲಾಂಚ್‌ನ ಮೋಟಾರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಯಂತ್ರವನ್ನು ಸಾಗರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲಿಯೇ ರಿಪೇರಿಯಾಗುವ ಸಾಧ್ಯತೆ ಇದೆ.

CM Siddaramaiah ಭದ್ರಾವತಿ ತಾಲ್ಲೂಕಿನ ರಾಜಕೀಯ ಮುಖಂಡರ ಪಕ್ಷಾಂತರ ಪರ್ವ

0

CM Siddaramaiah ಭದ್ರಾವತಿ‌ ನಗರಸಭೆ ಯ ಮೂವರು ಸದಸ್ಯರು, ಬೆಂಗಳೂರಿನಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ನಗರಸಭಾ ಸದಸ್ಯ ವಿ.ಕದಿರೇಶ್, ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಇವರ ಜೊತೆಗೆ ವಿ.ಕದಿರೇಶ್ ಅವರ ಪುತ್ರ, ಬಿಜೆಪಿಯ ಹಿಂದುಳಿದ ವರ್ಗ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್ ಅವರು ಕೂಡ, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಸಿಎಂ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ, , ಮುಖಂಡರಾದ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
CM Siddaramaiah ಪ್ರಸ್ತುತ ಕಾಂಗ್ರೆಸ್ ಸೇರ್ಪಡೆಯಾಗಿರುವ ಮೂವರು ನಗರಸಭಾ ಸದಸ್ಯರು ಬಿಜೆಪಿ ಪಕ್ಷದವರಾಗಿದ್ದಾರೆ. ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ವೇಳೆ, ಈ ಮೂವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷವು ಈ ಮೂವರು ಸದಸ್ಯರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.