Karnataka Public Service Commission ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಚ್.ಎಸ್.ಭೋಜ್ಯಾನಾಯ್ಕ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೇಮಕ ಮಾಡಿದ್ದಾರೆ. ಕೆಪಿಎಸ್‌ಸಿ ನೂತನ ಸದಸ್ಯ ಎಚ್.ಎಸ್. ಭೋಜ್ಯಾನಾಯ್ಕ್ ಅವರಿಗೆ ಶಿವಮೊಗ್ಗ ನಗರದಲ್ಲಿ ಆತ್ಮೀಯರು ಅಭಿನಂದಿಸಿದರು.
ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ 25 ವರ್ಷಗಳಿಂದ ಭೋದನೆ ವೃತ್ತಿ ಮಾಡುತ್ತಿದ್ದು, ಕುವೆಂಪು ವಿವಿ ಕುಲಸಚಿವ ಹಾಗೂ ಪರೀಕ್ಷಾಂಗದ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದು, ಅಪಾರ ಆಡಳಿತ ಅನುಭವ ಹೊಂದಿದ್ದಾರೆ. ಸೂಕ್ತ ವ್ಯಕ್ತಿಗೆ ಉನ್ನತ ಸ್ಥಾನಮಾನ ದೊರಕಿದೆ. ಇವರ ಅಧಿಕಾರದ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಶುಭಕೋರಿದರು.
Karnataka Public Service Commission ಎಚ್.ಎಸ್.ಭೋಜ್ಯಾನಾಯ್ಕ್ ಅವರ ಕೆಪಿಎಸ್‌ಸಿ ನೂತನ ಸದಸ್ಯತ್ವ ಅವಧಿ ಆರು ವರ್ಷ ಇರಲಿದೆ. ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ರಾಜ್ಯಪಾಲರು ಭೋಜ್ಯಾನಾಯ್ಕ ಅವರನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಕ ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಅಭಿನಂದಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಮಮತಾ, ಸಿವಿಲ್ ಇಂಜಿನಿಯರ್ ಚಂದನ್ ಆರ್., ನಿವೃತ್ತ ಮುಖ್ಯಶಿಕ್ಷಕ ರುದ್ರಪ್ಪ ಚಿಲೂರ್ ಉಪಸ್ಥಿತರಿದ್ದರು.
Karnataka Public Service Commission ಕೆಪಿಎಸ್ ಸಿ ನೂತನ ಸದಸ್ಯರಾಗಿ ಆಯ್ಕೆಯಾದ ಭೋಜ್ಯಾನಾಯಕ್ ಅವರಿಗೆ ಸನ್ಮಾನ
Date: