Monday, March 30, 2026
Monday, March 30, 2026
Home Blog Page 571

Industrial Smart Cities shimoga ಶಿವಮೊಗ್ಗ ನಗರವನ್ನ ಕೈಗಾರಿಕಾ ಸ್ಮಾರ್ಟ್ ಸಿಟಿ ಆಯ್ಕೆಗೆ ಪರಿಗಣಿಸಲು ಮನವಿ

0

Industrial Smart Cities shimoga ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗ ಮಹಾನಗರವನ್ನು ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಆಯ್ಕೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಸಭೆಯಲ್ಲಿ ದೇಶದ 12 ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪಿಸಲು ಅನುಮೋದನೆ ನೀಡಿದೆ. ಶಿವಮೊಗ್ಗ ನಗರವನ್ನು ಯೋಜನೆ ವ್ಯಾಪ್ತಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪಿಸಲು ಆಯ್ಕೆ ಮಾಡಲು ಮುಂದಾಗಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆಯು ಪ್ರವಾಸೋದ್ಯಮ, ಆಹಾರ ಉತ್ಪನ್ನ ಕ್ಷೇತ್ರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು, ಈಗಾಗಲೇ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಗಳನ್ನು ನೀಡುತ್ತಿದೆ. ಕರ್ನಾಟಕ ರಾಜ್ಯದಿಂದ ಶಿವಮೊಗ್ಗ ಆಯ್ಕೆ ಮಾಡುವುದು ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಿದರು.
Industrial Smart Cities shimoga ಶಿವಮೊಗ್ಗ ಮಹಾನಗರಕ್ಕೆ ಹೊಂದಿಕೊಂಡಿರುವ ದೇವಕಾತಿಕೊಪ್ಪದಲ್ಲಿ ಕೈಗಾರಿಕೆಗೆ ಅವಶ್ಯವಿರುವ ಸೌಕರ್ಯ ಹಾಗೂ ಅನುಮತಿಯನ್ನು ಒದಗಿಸಬೇಕು. ಸಿದ್ಲಿಪುರ ಸೇರಿ ಕೈಗಾರಿಕೆಗೆ ಇರುವ ಅವಕಾಶ ಜಾಗಗಳಲ್ಲಿ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆಯು ಪ್ರಸ್ತುತ ವಾಯು ಸಾರಿಗೆ, ರೈಲ್ವೆ ಸಾರಿಗೆ ಹಾಗೂ ರಸ್ತೆ ಸಾರಿಗೆಯಲ್ಲಿ ಉತ್ತಮ ಸೌಲಭ್ಯ ಹೊಂದಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ಶಿವಮೊಗ್ಗದಲ್ಲಿದೆ. ಇಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪಿಸಿದಲ್ಲಿ ಉದ್ಯೋಗ ಅವಕಾಶ ಹೆಚ್ಚು ಲಭ್ಯವಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಹರ್ಷ ಕಾಮತ್, ಪ್ರದೀಪ್ ವಿ.ಎಲಿ, ವಿಶ್ವೇಶ್ವರಯ್ಯ, ರಾಮಾಜೋಯೀಸ್ ಇತರರಿದ್ದರು.

Bhadravathi Ganesha Festival 2024 ಅರಬಿಳಚಿಯಲ್ಲಿ ಗಣೇಶೋತ್ಸವ ವಾದ್ಯಮೇಳ ವಿವಾದ,ಗಲಭೆ. ಆರು ಮಂದಿ ಗಾಯಾಳು

0

Bhadravathi Ganesha Festival 2024 ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಪೊಲೀಸರೇ ವಿಸರ್ಜನೆ ನಡೆಸಿದ ಘಟನೆ ಅರೆಬಿಳಚಿ ಕ್ಯಾಂಪಿನಲ್ಲಿ ನಡೆದಿದೆ.
ಈ ವೇಳೆ ನಡೆದ ಗಲಾಟೆಯಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯವಾಗಿದೆ.,
ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ಗಣಪತಿಯನ್ನ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅರಬಿಳಚಿ ಕ್ಯಾಂಪ್‌ನಲ್ಲಿ ತಮಿಳರ ಮತ್ತು ಬೋವಿ ಕಾಲನಿಯ ಗಣಪತಿಯನ್ನು ಪ್ರತ್ಯೇಕ ಕೂಡ್ರಿಸಲಾಗಿದ್ದು, ವಿಸರ್ಜನೆಗೆ ಒಂದೇ ಡೊಳ್ಳಿನ ತಂಡದವರಿಗೆ ಆಮಂತ್ರಿಸಲಾಗಿತ್ತು.

Bhadravathi Ganesha Festival 2024 ತಂಡದವರು ಬಂದಾಗ ತಮ್ಮ ಗಣಪತಿ ವಿಸರ್ಜನೆಗೆ ಬರಬೇಕೆಂದು ಇತ್ತಂಡದವರೂ ಹಠ ಹಿಡಿದಾಗ ಗಲಾಟೆ ನಡೆದಿದೆ‌ .
ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike Accident In Hole Honnur ಬೈಕ್ ಡಿಕ್ಕಿಯಾಗಿ ಪಾದಚಾರಿ ಮರಣ

0

Bike Accident In Hole Honnur ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ಪಾದಚಾರಿಯೋರ್ವನಿಗೆ ಬೈಕ್ ವೊಂದು ಡಿಕ್ಕಿ ಹೊಡೆದು ಆತ ಸಾವು ಕಂಡ ಘಟನೆ ನಿನ್ನೆ ನಡೆದಿದೆ.
ಹೊಸಕೊಪ್ಪ ಗ್ರಾಮದ ಕೂಲಿ ಕಾರ್ಮಿಕ ಚಂದ್ರಪ್ಪ (58) ಹೊಳೆಹೊನ್ನೂರಿನಲ್ಲಿ ಕೂಲಿ ಮುಗಿಸಿಕೊಂಡು ಮನೆ ಕಡೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ
KA 14 HA 0712 ಕ್ರಮಸಂಖ್ಯೆಯ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಕಿವಿಯಲ್ಲಿ ರಕ್ತ ಬಂದಿದೆ. ತಕ್ಷಣವೇ ಆತನನ್ನು ಹೊಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು.
ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Rotary Club Shimoga ಗುಡ್ ಟಚ್,ಬ್ಯಾಡ್ ಟಚ್. ಹೆಣ್ಣುಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

0

Rotary Club Shimoga ಶಿವಮೊಗ್ಗ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಆನ್ಸ್ ಕ್ಲಬ್ ನಿಂದ ಅನನ್ಯ ಸ್ಕೂಲಿನಲ್ಲಿ ಹೆಣ್ಣು ಮಕ್ಕಳಿಗೆ ಪ್ರೌಢ ಹಂತದಲ್ಲಿ ಆಗುವ ದೈಹಿಕ ಬದಲಾವಣೆ ಮತ್ತು ಗುಡ್ ಟಚ್ ಬ್ಯಾಡ್ ಟಚ್ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ನಾರಾಯಣ ಹೃದಯಾಲಯ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ರಶ್ಮಿ ಅಂಚಿನಾಳು ಮಕ್ಕಳ ಪ್ರೌಢ ಹಂತದಲ್ಲಾಗುವ ಹಾರ್ಮೋನ್ ಗಳ ಉತ್ಪತ್ತಿ, ಧ್ವನಿ ಬದಲಾವಣೆ, ಬ್ರೆಸ್ಟ್ ಡೆವಲಪ್ಮೆಂಟ್, ಗರ್ಭಕೋಶದ ಸಣ್ಣ ಪರಿಚಯ, ಋತುಮತಿ ಆಗುವುದು ಅಂದರೆ ಏನು ಮತ್ತು ಮಾನಸಿಕವಾಗಿ ಆಗುವ ಆತಂಕ ಹಿಂಜರಿಕೆ ಬಗ್ಗೆ ಹಾಗೂ ಆಹಾರ, ನಿದ್ರೆ, ಕ್ರೀಡೆ, ವ್ಯಾಯಾಮ, ಸ್ವಚ್ಛತೆ ಮುಂತಾದ ವಿಷಯಗಳ ಕುರಿತು ತುಂಬಾ ಉಪಯುಕ್ತ ಮಾಹಿತಿಗಳನ್ನು ಚಿಕ್ಕ ಮಕ್ಕಳಿಗೆ ತಿಳಿಸಿ, ಹಾಗೆಯೇ ಋತುಮತಿಯಾದ ನಂತರದಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಕಿವಿಮಾತು ಹೇಳಿದರು.

Rotary Club Shimoga ಆನ್ಸ್ ಅಧ್ಯಕ್ಷರಾದ ಗೀತಾ ಜಗದೀಶ್ ಮಾತನಾಡಿ, ಹೆಣ್ಣು ಮಕ್ಕಳು ಋತುಮತಿಯಾಗುವುದು ಸಹಜವಾದ ಕ್ರಿಯೆ. ಇದು ಪ್ರತಿಯೊಂದು ಹೆಣ್ಣು ಮಕ್ಕಳಲ್ಲಿಯೂ ಆಗುವ ದೈಹಿಕ ಕ್ರಿಯೆ. ಇದಕ್ಕೆ ಆತಂಕ ಹಿಂಜರಿಕೆ ಪಡಬಾರದು. ಋತುಮತಿಯಾಗುವ ಮೊದಲು ನೀವು ಎಲ್ಲಾ ಕೆಲಸಗಳಲ್ಲಿಯೂ ಹೇಗೆ ಚಟುವಟಿಕೆಯಿಂದ ಇರುತ್ತಿದ್ದಿರೋ ಅದೇ ರೀತಿ, ನಂತರವೂ ಆಟ ವಿದ್ಯಾಭ್ಯಾಸ ಮನೆ ಕೆಲಸ ಎಲ್ಲದರಲ್ಲಿಯೂ ಚಟುವಟಿಕೆಯಿಂದಿರಬೇಕು. ಇಂದು ನಿಮಗೆ ತಿಳಿದಿರುವ ಸ್ವಲ್ಪ ವಿಷಯವಾದರೂ ನಿಮ್ಮ ಸ್ನೇಹಿತೆಯರಿಗೂ ತಿಳಿಸಿ ಎಂದು ಮಕ್ಕಳನ್ನು ಕುರಿತು ಹೇಳಿದರು.

ಅನನ್ಯ ಶಾಲೆಯ ಮಕ್ಕಳು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅನನ್ಯ ಶಾಲೆಯ ಫೌಂಡರ್ ಮತ್ತು ಪ್ರಾಂಶುಪಾಲರಾದ ಗಿರೀಶ್ ಹಾಗೂ ಅನನ್ಯ ಶಾಲೆಯ ಶಿಕ್ಷಕರು, ಪಾಸ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೊಜಿ , ಧರ್ಮೇಂದ್ರ ಸಿಂಗ್, ಕೆ.ವಿ.ಗಣೇಶ್ ಹಾಗೂ ಜ್ಯೋತಿ ಶ್ರೀ ರಾಮ್, ನಯನ ಗಣೇಶ್ ಉಪಸಿತರಿದ್ದರು. ರಾಜಶ್ರೀ ಬಸವರಾಜ್ ವಂದನಾರ್ಪಣೆ ಮಾಡಿದರು.

Bharat Scouts and Guides Shivamogga ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಚಟುವಟಿಕೆಗೆ ಸಹಕಾರವಿದೆ- ಆರ್.ಎಸ್.ಮಂಜುನಾಥ್

0

Bharat Scouts and Guides Shivamogga ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಶಿವಮೊಗ್ಗ ಜಿಲ್ಲೆಯ ನೂತನ ಉಪನಿರ್ದೇಶಕರಾಗಿ ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ. ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್. ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕೇಂದ್ರ ಸ್ಥಾನಿಕ ಆಯುಕ್ತರುಗಳಾದ. ಜಿ ವಿಜಯಕುಮಾರ್. ಕೆ ರವಿ ಅವರು ಮಾತನಾಡಿ. ಶಿಕ್ಷಣ ಇಲಾಖೆಯ ಸಹಕಾರದಿಂದಲೇ ಸ್ಕಉಟ್ಸ್ ಅಂಡ್ ಗೈಡ್ ಸಂಸ್ಥೆ ನಡೆಯುತ್ತಿರುವುದು ಶಿಕ್ಷಣ ಇಲಾಖೆಯ ಅವಿಭಾಜ್ಯ ಅಂಗ ಸ್ಕೌಟ್ಸ್ ನ ಎಲ್ಲಾ ಸಾಮಾಜಿಕ ಕಾರ್ಯ Bharat Scouts and Guides Shivamogga ಚಟುವಟಿಕೆಗಳಿಗೆ ನಿರಂತರವಾಗಿ ಸಲಹೆ ಸಹಕಾರ. ನೀಡಬೇಕೆಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ನೂತನವಾಗಿ ಅಧಿಕಾರವಹಿಸಿಕೊಂಡ ಉಪನಿರ್ದೇಶಕರಾದ ಎಸ್ ಆರ್ ಮಂಜುನಾಥ್ ಅವರು ಸಮ್ಮತಿ ಸೂಚಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು

Death News In Shimoga ರೈಲಿಗೆ ಸಿಲುಕಿ ಯುವಕನ ಸಾವು.ಪೊಲೀಸ್ ಮಾಹಿತಿ

0

Death News In Shimoga ಶಿವಮೊಗ್ಗ ಅಪರಿಚಿತ ಯುವಕನೊಬ್ಬ ಮೃತಪಟ್ಟಿದ್ದಾನೆ. ನಿನ್ನೆ ಶಿವಮೊಗ್ಗ – ಭದ್ರಾವತಿ ನಡುವೆ ಹಳಿ ಮೇಲೆ ಶನಿವಾರ ಮೃತದೇಹ ಗಮನಿಸಿದ 16621 ರೈಲಿನ ಲೋಕೋ ಪೈಲೆಟ್‌ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದರು.
ರೈಲಿಗೆ ಸಿಲುಕಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದ. ಮೃತನಿಗೆ 25 ರಿಂದ 30 ವರ್ಷವಾಗಿದೆ. 5.4 ಅಡಿ ಎತ್ತರವಿದ್ದಾನೆ. ಬಲಗೈ ಭುಜದ ಬಳಿ ಅಮ್ಮ ಎಂಬ ಹಚ್ಚೆ ಇದೆ. ಗುಲಾಬಿ ಬಣ್ಣದ ಟೀ ಶರ್ಟ್‌, ಕಪ್ಪ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾನೆ.
Death News In Shimoga ಘಟನೆ ಸಂಬಂಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಾರಸುದಾರರು ಇದ್ದಲ್ಲಿ ರೈಲ್ವೆ ಠಾಣೆ ದೂರವಾಣಿ ಸಂಖ್ಯೆ : 08182 222974 ಸಂಪರ್ಕಿಸಬಹುದು ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Shambhu Baligar ಮಹಾನ್ ವ್ಯಕ್ತಿಗಳನ್ನು ರೂಪಿಸುವ ಅವಕಾಶ ಶಿಕ್ಷಕರ ಮೇಲಿದೆ- ಡಾ.ಶಂಭು ಬಳಿಗಾರ್

0

Shambhu Baligar ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಮಹಾನ್ ವ್ಯಕ್ತಿಗಳನ್ನು ರೂಪಿಸುವ ಅವಕಾಶ ಶಿಕ್ಷಕರಿಗೆ ಇದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು.
ಇಡೀ ದೇಶವನ್ನು ಸಂರಕ್ಷಿಸುವ, ಸಭ್ಯ ಸಮಾಜ ನಿರ್ಮಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಕ್ತಿ ಶಿಕ್ಷಕರಲ್ಲಿ ಇದೆ. ನಮ್ಮ ಸಂಸ್ಕೃತಿಯನ್ನು, ಸಂಸ್ಕಾರವನ್ನು ಹಾಗೂ ಮಕ್ಕಳು ಏನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಡಬೇಕು. ಮಕ್ಕಳು ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಅದಕ್ಕಾಗಿ ಬಳಸುವ ಪದಗಳ ಬಗ್ಗೆ, ನಡೆ, ನುಡಿ ಬಗ್ಗೆ ಶಿಕ್ಷಕರು ಎಚ್ಚರಿಕೆಯಿಂದ ಇರಬೇಕು. ನಾನು ಸಭ್ಯ ಆಗಿದ್ದಾಗ ಮಾತ್ರ ಸಭ್ಯರನ್ನು ರೂಪುಗೊಳ್ಳಿಸಬಹುದು. ಶಿಕ್ಷಕರು ಆದರ್ಶ ವ್ಯಕ್ತಿಯಾಗಿರಬೇಕು. ಬದುಕು ಮತ್ತು ಬೋಧನೆ ಒಂದಾದಾಗ ಉತ್ತಮ ವಿದ್ಯಾರ್ಥಿಗಳನ್ನು ತಯಾರಿ ಮಾಡಬಹುದು. ಕಲಿಸುವುದು ಒಂದು ಕಲೆ. ಮಕ್ಕಳನ್ನು ಸ್ಫೂರ್ತಿಗೊಳಿಸಿ, ಆಸಕ್ತಿ ಮೂಡಿಸಿ ಪಾಠ ಮಾಡಬೇಕು.
ಬದುಕು ಕಟ್ಟಿಕೊಡುವ ಶಕ್ತಿ ಗುರುಗಳಿಗೆ ಇರುತ್ತದೆ. ಶಿಕ್ಷಕರು ಕರ್ತವ್ಯ ಕೇವಲ ಶಾಲೆಯಲ್ಲಿ ಮಾತ್ರ ಇರುವುದಿಲ್ಲ. ಪೂರ್ವತಯಾರಿ ಮಾಡಿಕೊಂಡೇ ತರಗತಿಗೆ ಹೋಗಬೇಕೆಂದು ಕಿವಿಮಾತು ಹೇಳಿದ ಅವರು ಕೇವಲ ಅಕ್ಷರ ಕಲಿಸಿದರೆ ಸಾಲದು ವಿನಯ, ವಿದ್ಯೆ, ದಯೆ, ಸಭ್ಯತೆ, ಸಜ್ಜನಿಕೆ, ಪ್ರಾಮಾಣಿಕತೆ, ತ್ಯಾಗದಂತಹ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಲ್ಲಿ ವಿವೇಕ ಬಿತ್ತಬೇಕು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವುದು ಹೆಮ್ಮೆ ಎನಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕ ವೃತ್ತಿ ಎಲ್ಲರ ಜೀವನ ಬೆಳೆಸುವ ಶ್ರೇಷ್ಠ ವೃತ್ತಿ. ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರನ್ನು ನಾವು ಸ್ಮರಿಸಲೇ ಬೇಕು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಾವುಗಳು ಸದನದಲ್ಲಿ ಶಿಕ್ಷಣ ವ್ಯವಸ್ಥೆ, ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ನಮ್ಮ ಆಡಳಿತ ಸಾಮಾನ್ಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ನೀಡಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಪ್ರಸ್ತುತ ಶಿಕ್ಷಕರು ವಿದ್ಯಾರ್ಥಿಗಳಸನ್ನು ಭಾವನಾತ್ಮಕವಾಗಿ ಜೋಡಿಸುವ ಕೆಲಸ ಮಾಡಬೇಕು. ಹಾಗೂ ನೀತಿಪಾಠಗಳು ಆಗಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಸತ್ಯದೆಡೆ, ಬೆಳಕಿನೆಡೆ, ಅಮರತ್ವದ ಕಡೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಗುರುಗಳಿಗಿದೆ. ಪಾಠ ಮಾಡುವ ಶಿಕ್ಷಕರು ತಮ್ಮ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಸಲಹೆಗಳನ್ನು ನೀಡಿದರು.
Shambhu Baligar ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ ಮಾತನಾಡಿ, ಪ್ರಶಸ್ತಿಗಳ ಗುಣಮಟ್ಟ ಕಾಪಾಡಬೇಕು. ಪ್ರಶಸ್ತಿ ಆಯ್ಕೆ ಮಾನದಂಡಗಳನ್ನು ಅನುಸರಿಸಿ ಪ್ರಶಸ್ತಿಗಳನ್ನು ನೀಡಬೇಕು. ಹಾಗೂ ಪ್ರಶಸ್ತಿಯ ಮೌಲ್ಯ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕಿದೆ. ಶಿಕ್ಷಕರ ಜೊತೆ ನಾವಿದ್ದೇವೆ. ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಮಾನದಂಡಗಳಲ್ಲಿ ಕೆಲವು ಬದಲಾವಣೆ ಆಗಬೇಕು. ಶಿಕ್ಷಕರ ಸಾಧನೆಯ ಡಾಂಕ್ಯುಮೆAಟರಿ ಮಾಡಿ ತೋರಿಸಿದಲ್ಲಿ ಅದು ಇತರರಿಗೆ ಮಾದರಿ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ 2024-25 ನೇ ಸಾಲಿನಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ 21 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

Forest Department ರೈತರಿಗೆ ಕಸಿ ಸಸಿಗಳ ವಿತರಣೆಗೆ ಅರಣ್ಯ ಇಲಾಖೆ ವ್ಯವಸ್ಥೆ- ಮಾಹಿತಿ

0

Forest Department ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ-ಪ್ಲೆಕ್ಸಿ ಫಂಡ್ (ಕೆ.ಎಫ್.ಡಿ.ಎಫ್) ಹಾಗೂ ಆರ್.ಎಸ್.ಪಿ.ಡಿ ಲೆಕ್ಕಶೀರ್ಷಿಕೆಯಡಿ ಬೆಳೆಸಲಾದ 8×12 ಅಳತೆಯ ಕಸಿ ಸಸಿಗಳನ್ನು ಪ್ರಸ್ತುತ ಸಾಲಿಗೆ ಇಲಾಖಾ ಹಂಚಿಕೆ/ಸಾರ್ವಜನಿಕ/ರೈತರಿಗೆ ವಿತರಣೆ ಮಾಡಲು ಧಾರವಾಡ ಸಂಶೋಧನಾ ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Forest Department ಅದೇ ರೀತಿ, ಶಿವಮೊಗ್ಗ ಸಂಶೋಧನಾ ವಲಯದಲ್ಲಿ 2024-25ನೇ ಸಾಲಿಗೆ ಅರಣ್ಯ ಅಭಿವೃದ್ಧಿ ನಿಧಿ-ಪ್ಲೆಕ್ಸಿ ಫಂಡ್ (ಕೆ.ಎಫ್.ಡಿ.ಎಫ್) ಯೋಜನೆಯಡಿಯಲ್ಲಿ 8×12 ಅಳತೆಯ ಪಾಲಿಥೀನ್ ಬ್ಯಾಗಿನಲ್ಲಿ 10000 ಕಸಿಕಟ್ಟಿದ ಸಸಿಗಳನ್ನು ಇಲಾಖೆಗೆ ವಿತರಿಸಲು ಹಾಗೂ ಆ‌ರ್.ಎಸ್.ಪಿ.ಡಿ.ಯೋಜನೆಯಡಿಯಲ್ಲಿ 8000 ಕಸಿಕಟ್ಟಿದ ಸಸಿಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ಸಸಿಗಳು ಲಭ್ಯವಿದೆ. ಅರಣ್ಯ ಇಲಾಖೆಗೆ ಹಾಗೂ ರೈತರು/ಸಾರ್ವಜನಿಕರು ಪಡೆದುಕೊಳ್ಳಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ; 9481996689,9535598470 ಸಂರ್ಕಿಸಬಹುದು.

Shimoga News ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿಯಬೇಕು- ಎ.ಡಿ.ಪ್ರಕಾಶ್

0

Shimoga News ಕುವೆಂಪು ವಿ.ವಿ ಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗ ಹಾಗೂ ಪರಿಸರ ಪ್ರವಾಸೋದ್ಯಮ ಮಂಡಳಿ ಬೆಂಗಳೂರು, ಭದ್ರಾ ಹುಲಿ ಸಂರಕ್ಷಿತ ಯೋಜನೆ ಚಿಕ್ಕಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 03ರಿಂದ 6ರವರೆಗೆ ನಾಲ್ಕು ದಿನ ಪ್ರಮಾಣಿಕೃತ ನಿಸರ್ಗ ತಜ್ಞರ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ಪ್ರಕಾಶ್ ಏ.ಡಿ ವ್ಯವಸ್ಥಾಪಕ ನಿರ್ದೇಶಕರು, ಪರಿಸರ ಪ್ರವಾಸೋದ್ಯಮ ಮಂಡಳಿ, ಬೆಂಗಳೂರು ಇವರು ಮಾತನಾಡಿ ಪ್ರತಿಯೊಂದು ಜೀವಿಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಗಾರ ಬಹು ಉಪಯೋಗವಾಗಿದೆ. ಎಲ್ಲ ಜೀವಿಗಳಿಗೂ ಸಹ ಬದುಕುವ ಹಕ್ಕಿದೆ ಎಂಬುದನ್ನು ಅರಿಯಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಕುಮಾರ್ ಮಾತನಾಡಿ ನಮ್ಮ ರಾಜ್ಯದಲ್ಲಿ ವಿ.ವಿ ಮಟ್ಟದಲ್ಲಿ ನಡೆಯುತ್ತಿರುವುದು ಇದು ಮೊದಲನೆಯ ಕಾರ್ಯಕ್ರಮವಾಗಿದೆ ಇದು ನಮಗೆ ತುಂಬಾ ಹೆಮ್ಮೆ ತಂದಿದೆ. ಇಂತಹ ಕಾರ್ಯಕ್ರಮಗಳು Shimoga News ಎಲ್ಲೆಡೆ ಆದಲ್ಲಿ ಸಾರ್ವಜನಿಕರಿಗೆ ಜೀವವೈವಿಧ್ಯತೆಯ ಪ್ರಾಮುಖ್ಯತೆ ಏನೆಂಬುದು ತಿಳಿದು ಜೀವವೈವಿಧ್ಯತೆ ಉಳಿಸಲು ಸಾಧ್ಯವಾಗುತ್ತದೆ ಎಂದರು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಾಹುಲ್ ಆರಾಧ್ಯ, ಶ್ರೀ ಕಿರಣ್ ಬಾಗಡೆ ಶ್ರೀನಿವಾಸ್, ಡಾ. ಸಂತೋಷ್ ಕುಮಾರ್ ಮತ್ತು ಕಾರ್ತಿಕ್ ಎನ್. ಜೆ ಭಾಗವಹಿಸಿ ಕಾರ್ಯಗಾರವನ್ನು ಯಶಸ್ವಿಗೊಳಿಸಿಕೊಟ್ಟರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಸಾಗರ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ನಾಗರಾಜ್ ಪರಿಸರ, ವಲಯ ಅರಣ್ಯ ಅಧಿಕಾರಿ ಸಂತೋಷ್, ಕುಮಾರ್ ನಾಯಕ್, ಡಾ. ಪ್ರಮೋದ್, ಇನ್ನಿತರರು ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕುಮಾರಿ ಸಿಂಚನ ನಿರೂಪಿಸಿ, ಜಯಂತ್ ಬಾಬು ಎಲ್ಲರನ್ನು ವಂದಿಸಿದರು.

Shivamogga News ಸೆ.,12 ರಂದು ಬ್ರಾಂಡ್ ಶಿವಮೊಗ್ಗ ಸೌಹಾರ್ದ ಹಬ್ಬ

0

Shivamogga News ಬ್ರ್ಯಾಂಡ್‌ ಶಿವಮೊಗ್ಗವನ್ನು ಬೆಳೆಸಲು, ಶಾಂತಿ, ಸೌರ್ಹಾದತೆ ಕಾಪಾಡುವಂತೆ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸಲು ಸೆ.12ರಂದು ಸೌರ್ಹಾದವೇ ಹಬ್ಬ ಜಾಥಾ ಆಯೋಜಿಸಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಜಾಥಾ ಮತ್ತು ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪ ವಿವರಿಸಿದರು.
ವಕೀಲ ಕೆ.ಪಿ.ಶ್ರೀಪಾಲ್‌ ಮಾತನಾಡಿ, ಶಿವಮೊಗ್ಗದ ಜನ ಶಾಂತಿ ಪ್ರಿಯರು. ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬಗಳು ಜೊತೆಗೆ ಬರುತ್ತವೆ. ಈ ಮೂಲಕ ಸೌರ್ಹಾತೆ ಸಾರುತ್ತಿವೆ. ನಾವು ಮೂರನೆ ವರ್ಷದ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇವೆ. ಸೆ.12ರಂದು ಮಧ್ಯಾಹ್ನ 3 ಗಂಟೆಗೆ ಮೆಗ್ಗಾನ್ ಆಸ್ಪತ್ರೆಯಿಂದ ಹೊರಟು ಸೈನ್ಸ್ ಮೈದಾನ ತಲುಪಲಿದೆ. ಅಲ್ಲಿ ಧರ್ಮಗುರುಗಳು ಸಂದೇಶ ನೀಡಲಿದ್ದಾರೆ. ಯಾವುದೇ ರಾಜಕೀಯ ನಾಯಕರು, ಸಂಘಟಕರು ವೇದಿಕೆ ಹತ್ತುವುದಿಲ್ಲ ಎಂದರು..
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್‌.ಆರ್.ಬಸವರಾಜಪ್ಪ ಮಾತನಾಡಿ, ಎಲ್ಲ ಧರ್ಮಗಳು ಶಾಂತಿಯನ್ನು ಸಾರುತ್ತವೆ. ತೀರ ಇತ್ತೀಚಿನವರೆಗೆ ಶಿವಮೊಗ್ಗದಲ್ಲಿ ಶಾಂತಿಯುತ ವಾತಾವರಣ ಇತ್ತು. ಈಚೆಗೆ ಶಾಂತಿ ಕದಡುವ ಪ್ರಯತ್ನವಾಗುತ್ತಿದೆ. ಹಾಗಾಗಿ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಅಭಿವೃದ್ಧಿ ಬಯಸುವವರು ಹಿಂಸೆ ಇಷ್ಟಪಡುವುದಿಲ್ಲ. ಇಲ್ಲಿನ ವ್ಯಾಪಾರ, ವಹಿವಾಟಿನ ಅನುಕೂಲಕ್ಕೆ, ಬಡವರು ನೋವು ಅನುಭವಿಸದಂತೆ ತಡೆಯಲು ಈ ನಡಿಗೆ ಎಂದರು.
Shivamogga News ಕಿರಣ್‌ ಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ರೈಲು, ರಸ್ತೆ ಸಂಪರ್ಕವು ಉತ್ತಮವಾಗಿದೆ. ಇಲ್ಲಿನ ವ್ಯಾಪಾರ, ವಹಿವಾಟು ಅಭಿವೃದ್ಧಿ ಆಗಬೇಕಿದೆ. ಬ್ರ್ಯಾಂಡ್‌ ಶಿವಮೊಗ್ಗ ಬೆಳೆಯಲು ಹಲವು ಆಯಾಮದಲ್ಲಿ ನಗರ ಬೆಳೆಯಬೇಕು. ಊರು ಶಾಂತವಾಗಿದ್ದರೆ ಸರ್ವ ರೀತಿಯ ಅಭಿವೃದ್ಧಿ ಆಗಲಿದೆ. ಈ ಹಿನ್ನೆಲೆ ಮೂರನೆ ವರ್ಷದ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಸ್ಪೆಲ್ಲಿಂಗ್‌ನಲ್ಲಿ HIM ಇದೆ. ಹೆಚ್‌ ಅಂದರೆ ಹಿಂದೂ, ಐ ಅಂದರೆ ಇಸಾಯಿ, ಎಂ ಅಂದರೆ ಮುಸ್ಲಿಂ. ಎಲ್ಲರು ಸೌರ್ಹಾದವಾಗಿ ಬದುಕಬೇಕು, ಬ್ರ್ಯಾಂಡ್ ಶಿವಮೊಗ್ಗದ ಇಮೇಜ್ ಬೆಳವಣಿಗೆಗೆ ಈ ಕಾರ್ಯ. ಅಂದು ಸಿಗ್ನೇಚರ್ ಬೋರ್ಡ್ ಮಾಡಲಿದ್ದೇವೆ. ಅದರಲ್ಲಿ ವ್ಯಾಪಾರ, ವಾಹಿವಾಟು, ಧಾರ್ಮಿಕ ಕ್ಷೇತ್ರದವರು ಸೇರಿ ಎಲ್ಲರು ಸ್ಟಿಕರ್‌ಗಳನ್ನು ಅಂಟಿಸಬಹುದು ಎಂದರು.
ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್‌ ಮಾತನಾಡಿ, 60-70ರ ದಶಕದಲ್ಲಿ ಸೌರ್ಹಾದತೆಕ್ಕೆ ಧಕ್ಕೆ ಆದಾಗ ಪತ್ರಕರ್ತರು ಮುಂದೆ ನಿಂತು ಶಾಂತಿ ಮರು ಸ್ಥಾಪಿಸಿದ್ದರು. ಅಹಿತಕರ ಘಟನೆಗಳ ನಡೆದಾಗ ಸೂಕ್ಷ್ಮ ವರದಿಗಾರಕೆ ಮೂಲಕ ಶಾಂತಿ ಸ್ಥಾಪನೆ ಮಾಡಬೇಕು ಎಂದರು.
ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಜೀವ, ಆಸ್ತಿ ಹಾನಿ ತಡೆಯುವುದು ಸೌರ್ಹಾದ ಹಬ್ಬದ ಮುಖ್ಯ ಉದ್ದೇಶ. ಶಾಂತಿ ನೆಲಸಬೇಕು. ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಅರಿವು ಮೂಡಿಸಲಾಗುತ್ತದೆ. ಇದು ಅತ್ಯುತ್ತಮ ಕಾರ್ಯಕ್ರಮ. ಇದರಿಂದ ಅಪರಾಧ ಪ್ರಮಾಣ ಕಡಿಮೆಯಾಗಿದೆ‌ ಎಂದರು.
ಸೈನ್ಸ್‌ ಮೈದಾನದಲ್ಲಿ ಬಸವಕೇಂದ್ರ, ಬೆಕ್ಕಿನಕಲ್ಮಠ ಮತ್ತು ಜಡೆ ಮಠದ ಸ್ವಾಮೀಜಿಗಳು, ಜಾಮೀಯ ಮಸೀದಿ ಮತ್ತು ಚರ್ಚ್‌ನ ಧರ್ಮಗುರುಗಳು ಶಾಂತಿಯ ಸಂದೇಶ ನೀಡಲಿದ್ದಾರೆ ಎಂದರು.