Monday, March 30, 2026
Monday, March 30, 2026
Home Blog Page 566

Government of India Community Radio Association ಅಬ್ಬಲಗೆರೆ ಪಂಚಾಯತಿಯಲ್ಲಿ ರೇಡಿಯೊ ಶಿವಮೊಗ್ಗದಿಂದ ಜನತಾ ಜಾಗೃತಿ ಕಾರ್ಯಕ್ರಮ

0

Government of India Community Radio Association ಪಂಚಾಯತ್ ರಾಜ್ ಇಲಾಖೆ ಭಾರತ ಸರ್ಕಾರ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಹಾಗೂ ರೇಡಿಯೋ ಶಿವಮೊಗ್ಗ ಸಹಯೋಗದಲ್ಲಿ ನಡೆಯುತ್ತಿರುವ ಜನತಾ ಜಾಗೃತಿ ಅಂಗವಾಗಿ ನೈರ್ಮಲ್ಯ ಗ್ರಾಮ ಪಂಚಾಯ್ತಿಯ ಕುರಿತಾದ ಕಾರ್ಯಕ್ರಮ ಸೆ.12ರಂದು ಪ್ರಸಾರವಾಯಿತು. ಇದೇ ಕಾರ್ಯಕ್ರಮ ಸೆ.14ರಂದು ಮಧ್ಯಾಹ್ನ 3ಕ್ಕೆ ಮರುಪ್ರಸಾರವಾಗಲಿದೆ.

ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿಯಲ್ಲಿ ಜನತಾ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ರೇಡಿಯೋ ಶಿವಮೊಗ್ಗ ಇದನ್ನು ಆಯೋಜಿಸಿತ್ತು.

ರೇಡಿಯೋದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು, ಅದರಲ್ಲೂ ವಿಶೇಷವಾಗಿ ಜನತಾ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಜನತಾ ಜಾಗೃತಿಯಲ್ಲಿ ಇದುವರೆಗೂ ಪ್ರಸಾರವಾದ ಕಾರ್ಯಕ್ರಮಗಳು, ಅದರ ವಿವರಣೆ ನೀಡಲಾಯಿತು. ಜನತಾ ಜಾಗೃತಿ ಕಾರ್ಯಕ್ರಮದ ಉದ್ದೇಶ, ಗ್ರಾಮ ಪಂಚಾಯ್ತಿಗಳ ಸಶಕ್ತೀಕರಣ, ಸುಸ್ಥಿರ ಪ್ರಗತಿಗೆ ಪೂರಕವಾಗುವ ಅನೇಕ ಅಂಶಗಳನ್ನು ಚರ್ಚಿಸಲಾಯಿತು. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.

ಒಟ್ಟಾರೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಅಗತ್ಯವಿತ್ತು ಎಂದು ತಿಳಿಸಿದ ಜನರು ಜನತಾ ಜಾಗೃತಿ ಕಾರ್ಯಕ್ರಮದ ಉದ್ದೇಶವನ್ನು ಶ್ಲಾಘಿಸಿದರು. ಪಂಚಾಯತ್ ರಾಜ್ ಇಲಾಖೆ ಭಾರತ ಸರ್ಕಾರ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಹಾಗೂ ರೇಡಿಯೋ ಶಿವಮೊಗ್ಗ ಈ ಪ್ರಯತ್ನ ನಮ್ಮೆಲ್ಲರ ಸಹಕಾರವಿರಲಿದೆ ಎಂದರು.

ಈ ಜನತಾ ಜಾಗೃತಿ ಕಾರ್ಯಕ್ರಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೆಚ್. ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರಾಜಶೇಖರಪ್ಪ ಕೆಲವು ಸಲಹೆ ನೀಡಿದರು ಅಬ್ಬಲಗೆರೆಯ ಗ್ರಾಮಸ್ಥರು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೇಡಿಯೋ ಶಿವಮೊಗ್ಗದ ಸಂಯೋಜಕ ಗುರುಪ್ರಸಾದ್ ಕಾರ್ಯಕ್ರಮದ ಮುಖ್ಯ ಉದ್ದೇಶದ ಬಗ್ಗೆ ಮಾತನಾಡಿದರು ರೇಡಿಯೋ ಶಿವಮೊಗ್ಗದ ಆರ್ ಜೆ ಶ್ರೀಧರ್ ಆರೋಗ್ಯದ ಕುರಿತು ಗ್ರಾಮಸ್ಥರಿಗೆ ಸಲಹೆ ನೀಡಿದರು. ಆರ್ ಜೆ ಮಹಾಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.

ನೈರ್ಮಲ್ಯ ಗ್ರಾಮ ಪಂಚಾಯ್ತಿಯ ಕುರಿತಾದ ಕಾರ್ಯಕ್ರಮ ಸೆ.14ರಂದು ಮಧ್ಯಾಹ್ನ 3ಕ್ಕೆ ಮರುಪ್ರಸಾರವಾಗಲಿದ್ದು, ನಿಮ್ಮ ಮೊಬೈಲ್ ಗಳಲ್ಲೇ ಕೇಳಬಹುದಾಗಿದೆ. ಈ ಜನತಾ ಜಾಗೃತಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯ್ತಿಗಳು 72591 76279 ಈ ಸಂಖ್ಯೆಗೆ ಸಂಪರ್ಕಿಸಬಹುದು.

Government of India Community Radio Association ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ಮೆಂಟ್ ಸೊಸೈಟಿ (ಕಿಡ್ಸ್) ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿವೆ. ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಗಳ ಮುಖಾಂತರ ಡೌನ್ಲೋಡ್ ಮಾಡಿಕೊಂಡು, ದಿನದ 24 ಗಂಟೆಗಳ ಪ್ರಸಾರವನ್ನು ಆನಂದಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.

BGS Gurupura ತರಗತಿ ಪಾಠದ ಸಂತೋಷ & ಆಟದ ಮೈದಾನದ ಸಂತೋಷ ಎರಡೂ ಭಿನ್ನ ಅನುಭವಗಳು – ಶ್ರೀಪಸನ್ನನಾಥಶ್ರೀ

0

BGS Gurupura ಕ್ರೀಡೆ ಎಂದ ತಕ್ಷಣ, ಕ್ರೀಡಾ ಕ್ಷೇತ್ರ ನಮಗೆ ದೈಹಿಕವಾಗಿ ಅಂದರೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಎರಡು ಸ್ವಾಸ್ಥ್ಯವನ್ನು ಕೊಡುವಂತಹ ಕ್ಷೇತ್ರ ಎಂದರೆ ಅದು ಕ್ರೀಡಾಕ್ಷೇತ್ರ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.
ಅವರು ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ.
ಹಾಗೂ ಅನುದಾನ ರಹಿತ ಶಾಲೆಗಳ ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟ, ಶಿವಮೊಗ್ಗ. ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲೆಗಳ ಅನುದಾನ ರಹಿತ ಶಿವಮೊಗ್ಗ ತಾಲ್ಲೂಕಿನ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ, ಮನಸ್ಸು ಸ್ವಾಸ್ಥ್ಯವಾಗಿದ್ದರೆ, ಮನಸ್ಸು ಚೆನ್ನಾಗಿದ್ದರೆ, ಎಂತಹ ಕೆಲಸ ಮಾಡಬೇಕಾದರೂ ಮನಸ್ಸು ಬರುತ್ತದೆ. ಹಾಗಾಗಿ ಆ ಮನಸ್ಸು ಸ್ವಾಸ್ಥ್ಯವಾಗಿ, ಆರೋಗ್ಯಕರವಾಗಿ ಇರಬೇಕಾದರೆ,ನಮಗೆ ಮುಖ್ಯವಾಗಿ ಬೇಕಾಗಿರುವುದು ಕ್ರೀಡೆ. ಮಕ್ಕಳೇ ತರಗತಿ ಮಧ್ಯದಲ್ಲಿರುವಂತಹ ಸಂತೋಷಕ್ಕೂ, ಹಾಗೂ ಆಟದ ಮೈದಾನದಲ್ಲಿರುವ ಸಂತೋಷಕ್ಕೂ ಅಜ ಗಜಾಂತರ ವ್ಯತ್ಯಾಸವನ್ನು ಕಾಣುತ್ತೇವೆ.
ಪ್ರಾಣಿ ಪಕ್ಷಗಳು ಸಹ ಎಷ್ಟು ಅದ್ಭುತವಾಗಿ ಆಟ ಆಡ್ತಾ ಇರುತ್ತವೆ. ಪ್ರಾಣಿ ಪಕ್ಷಿಗಳು ಸಹ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತವೆ . ಅದಕ್ಕೆ ಗೊತ್ತಿದೆ, ನಾನು ಆಟ ಆಡ್ತಾ ಇದ್ದರೆ ಶಾರೀರಿಕಾವಾಗಿ ಸದೃಢವಾಗಿರುತ್ತೇನೆ ಎಂದು.
ಮಕ್ಕಳೇ ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಬಿಸಿಲಲ್ಲಿ ಒಂದಿಷ್ಟು ಆಟ ಆಡಿದರೆ, ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ, ಹಾಗಾಗಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ. ಕೃಷಿಕ ಎಷ್ಟು ಶ್ರಮ ಪಡುತ್ತಾನೆ, ಸೈನಿಕ ಎಷ್ಟು ಕಷ್ಟ ಪಡುತ್ತಾನೆ,ಹಾಗಾಗಿ ಅವರು
ಆರೋಗ್ಯವಂತರಾಗಿರುತ್ತಾರೆ ಎಂಬುದನ್ನು ನಾವು ಗಮನಿಸಬೇಕು ಎಂದರು.
BGS Gurupura ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಜಿ.ಕೆ. ಮಿಥುನ್ ಕುಮಾರ್ ಕ್ರೀಡಾಕೂಟಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್,ಟಿವಿಗಳ ಹಾವಳಿಯಿಂದ ಕ್ರೀಡೆಗೆ ಎಲ್ಲೋ ಒಂದು ರೀತಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಇದೆ ಎಂಬುದು ನನ್ನ ಭಾವನೆ. ಓದಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು, ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಯಾಕೆಂದರೆ ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಕಾಣಬಹುದು. ನಾನು ಕೂಡ ಕ್ರೀಡಾಪಟುನೇ,ವಾಲಿಬಾಲ್, ಬಾಸ್ಕೆಟ್ ಬಾಲ್ ,ಇನ್ನು ಮುಂತಾದ ಕ್ರೀಡೆಗಳನ್ನು ಹೀಗೂ ಕೂಡ ಆಡುತ್ತೇನೆ. ಕ್ರೀಡೆಯಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ.ಸೋಲು ಗೆಲುವನ್ನು ಹೇಗೆ ಒಂದೇ ಸಮನಾಗಿ ತೆಗೆದುಕೊಳ್ಳಬಹುದು ಎಂಬುದನ್ನು ಕ್ರೀಡೆಯಲ್ಲಿ ಕಾಣಬಹುದು.
ಅಂಕಗಳು ಒಂದು ಸಲ ಕಡಿಮೆ ಆಗುತ್ತದೆ, ಹೆಚ್ಚು ಆಗುತ್ತದೆ, ಇಂತಹ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಇಂತಹ ನೂನ್ಯತೆಗಳಿಂದ ದೂರವಾಗಬಹುದು, ಹಾಗಾಗಿ ಪ್ರತಿದಿನ ವಿದ್ಯಾರ್ಥಿಗಳು ಅರ್ಧ ಗಂಟೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ, ಧೈರ್ಯ ವಂತರಾಗಲು ಕಾರಣವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಭಾವಂತರಾಗಿರುತ್ತಾರೆ. ಅಂತಹ ಪ್ರತಿಭೆಗಳನ್ನು ಹೊರಗೆ ತರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಶ್ರಮಪಟ್ಟು ಮುಂದೆ ಬರಬೇಕೆಂದರೆ, ತಾವೆಲ್ಲರೂ ಸತತ ತರಬೇತಿಯನ್ನು ಪಡೆದು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಆರ್.ಗಿರೀಶ್ ಮಾತನಾಡಿ,ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಗಳಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಶ್ರೀ ನಿರಂಜನ್ ಮೂರ್ತಿ, ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ,
ಬಿಜಿಎಸ್ ಗುರುಕುಲ ಶಾಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ಎಸ್. ಹೆಚ್. ಮತ್ತು ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರುಗಳು , ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Power Outage ಸೆ.14 ರಂದು ಆಲ್ಕೊಳ ಸುತ್ತಮುತ್ತ ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯ

0

Power Outage ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಫ್-8 ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಎಸ್.ಆರ್.ಎಸ್ ಶಾಮಿಯಾನ ಮುಖ್ಯ ರಸ್ತೆ, ಕೆಂಚಪ್ಪ ಲೇಔಟ್, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 14 ರಂದು ಬೆಳಗ್ಗೆ 09 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Rotary Shivamogga ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು – ಅರುಣ್ ದೀಕ್ಷಿತ್

0

Rotary Shivamogga ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಜವಾದ ಶಿಲ್ಪಿಗಳು. ಶಿಕ್ಷಕರ ಸಮರ್ಪಣಾ ಭಾವದಿಂದ ಶಾಲೆಯು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜೇಂದ್ರ ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ನೀಡುವ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಹಂತ ಹಂತವಾಗಿ ಸಾಧನೆ ಹಾದಿಯಲ್ಲಿ ಮುನ್ನಡೆಯುತ್ತಾರೆ ಎಂದು ತಿಳಿಸಿದರು.

ರೋಟರಿ ಶಾಲೆಯಲ್ಲಿ ಸ್ಥಾಪಿತವಾದ “ಫಂಡ್ ಫಾರ್ ನೀಡಿ” ನಿಧಿಗೆ ಸಹಾಯಧನ ನೀಡಿ ಮಾತನಾಡಿದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್, ಶಾಲೆಯ ಹಳೆಯ ವಿದ್ಯಾರ್ಥಿ ಸುನೀಲ್. ಎಂ.ಡಿ., ಇತ್ತೀಚಿನ ವರ್ಷಗಳಲ್ಲಿ ಶಾಲೆಯು ಉತ್ತಮ ಸಾಧನೆ ಮಾಡುತ್ತಿದ್ದು, ಶಿಕ್ಷಕರ ಸಮರ್ಪಣಾ ಭಾವ ಹಾಗೂ ವಿದ್ಯಾರ್ಥಿಗಳ ಪ್ರಯತ್ನದಿಂದ ಶಾಲೆ ಫಲಿತಾಂಶ ಉತ್ತಮವಾಗಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರಿಗೆ ಅಭಿನಂದಿಸಲಾಯಿತು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10,000 ರೂ. ನಗದು ಬಹುಮಾನವನ್ನು ಸುನೀಲ್.ಎಂ.ಡಿ. ನೀಡಿ ಅಭಿನಂದಿಸಿದರು. ಫಂಡ್ ಫಾರ್ ನೀಡಿ ಖಾತೆಗೆ 5೦೦೦ ದೇಣಿಗೆ ನೀಡಿದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸಾಧಕರಿಗೆ ರೋಟರಿ ಪೂರ್ವ ಖಜಾಂಚಿ ಗಣೇಶ್ ಅವರು ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ.ಎಂ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಕೆಲಸ ಮಾಡಬೇಕು. ಶಾಲೆಯು ಶೇ. 100 ಫಲಿತಾಂಶ ಗಳಿಸುವಲ್ಲಿ ಶ್ರಮವಹಿಸಿದ ಶಿಕ್ಷಕರಿಗೆ ಆಡಳಿತ ಮಂಡಳಿ ವತಿಯಿಂದ ನಗದು ಬಹುಮಾನ ನೀಡಲಾಗುವುದು ಎಂದರು.

ರೋಟರಿ ಪೂರ್ವ ಕ್ಲಬ್, ರೋಟರಿ ಶಾಲಾ ವಿದ್ಯಾರ್ಥಿ ವೃಂದ ಹಾಗೂ ಟ್ರಸ್ಟ್ ಸಹಕಾರ್ಯದರ್ಶಿ ನಾಗವೇಣಿ ಎಸ್ ಆರ್ ವತಿಯಿಂದ ಪ್ರತ್ಯೇಕವಾಗಿ ಶಾಲೆಯ ಬೋಧಕ ಹಾಗೂ ಬೋಧಕೇತರ ವೃಂದದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಏರ್ಪಡಿಸಿದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

Rotary Shivamogga ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ, ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್, ಖಜಾಂಚಿ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಇನ್ನರ್‌ವ್ಹೀಲ್ ಕಾರ್ಯದರ್ಶಿ ಲತಾ ಸೋಮಶೇಖರ್, ಸದಸ್ಯೆ ಬಿಂದು ವಿಜಯಕುಮಾರ್, ಸೀಮಾ, ಪ್ರಾಚಾರ್ಯ ಸೂರ್ಯನಾರಾಯಣನ್, ಕುಮಾರ್.ಎನ್., ಗೌತಮಿ.ಎಂ., ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Shivamogga Hindu Mahasabha Ganapathi ಸೆ.17 ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಶಿವಮೊಗ್ಗದಲ್ಲಿ ವಾಹನಗಳ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ

0

Shivamogga Hindu Mahasabha Ganapathi ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆ.17 ರಂದು ವಿಸರ್ಜನೆ ಮಾಡುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಸಂಚಾರ ಸುಗಮಗೊಳಿಸುವ ಸಲುವಾಗಿ ವಾಹನ ಸಂಚಾರ ನಿಷೇಧ, ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲು ತಾತ್ಕಾಲಿಕ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೊರಡಿಸಿದ್ದಾರೆ.
ಸೆ.17 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್ ಸರ್ಕಲ್, ಬಿ.ಹೆಚ್ ರಸ್ತೆ, ಎ.ಎ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಮಹಾವೀರ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಹತ್ತಿರ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.

  • ಬೆಂಗಳೂರು ಭದ್ರಾವತಿ, ಎನ್‌ಆರ್ ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಮತ್ತು ಸಿಟಿ ಬಸ್‌ಗಳು, ಕಾರುಗಳು ಎಂ.ಆರ್.ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‌ಗಳು ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ ಮತ್ತು ಹೋಗುವ ಎಲ್ಲಾ ಭಾರೀ ವಾಹನಗಳು ಮತ್ತು ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರೀ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್, ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿ, ರಾಜ್ ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮುಖಾಂತರವಾಗಿ ಸವಳಂಗ ರಸ್ತೆಗೆ ಹೋಗುವುದು.
  • ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು.
  • ಶಿಕಾರಿಪುರ, ಸೊರಬ, ಅನವಟ್ಟಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಮತ್ತು ಹೊರ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ Shivamogga Hindu Mahasabha Ganapathi ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್, ಲಕ್ಷಿö್ಮ ಟಾಕೀಸ್ ಸರ್ಕಲ್, ಪೋಲಿಸ್ ಚೌಕಿ, ಆಲ್ಕೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಂಚರಿಸುವುದು.
    ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ :
  • ಕೋಟೆ ರಸ್ತೆ, ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.
  • ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣೆಗೆಯ ಮಾರ್ಗವಾದ ಭೀಮೇಶ್ವರ ದೇವಸ್ಥಾನದಿಂದ ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್ ಸರ್ಕಲ್, ಬಿ.ಹೆಚ್ ರಸ್ತೆ, ಎ.ಎ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಮಹಾವೀರ್ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ, ಭೀಮೇಶ್ವರ ದೇವಸ್ಥಾನವರೆಗಿನ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ವಾಹನ ನಿಲುಗಡೆ ನಿಷೇಧಿಸಲಾಗಿದೆ.
    ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Tobacco control ಸೊರಬದಲ್ಲಿ ತಂಬಾಕು ನಿಯಂತ್ರಣ ಸಿಬ್ಬಂದಿ ದಾಳಿ.12 ಪ್ರಕರಣ ದಾಖಲು

0

Tobacco control ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ದಾಳಿಯನ್ನು ಹಮ್ಮಿಕೊಳ್ಳಲಾಯಿತು.

Tobacco control ಒಟ್ಟು 12 ಪ್ರಕರಣಗಳನ್ನು ದಾಖಲಿಸಿ ರೂ. 2300 ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು. ತಂಡದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಶಿವಮೊಗ್ಗ, ಸಮಾಜ ಕಾರ್ಯಕರ್ತ ರವಿರಾಜ್, ಸೊರಬ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಶಬೀರ್, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಅಕ್ಷಯ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Rotary Club ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‍ ನಲ್ಲಿ ಗಣೇಶೋತ್ಸವ

0

Rotary Club ಇದೇ ಮೊದಲ ಬಾರಿಗೆ ರೋಟರಿ ಕ್ಲಬ್ ಸೆಂಟ್ರಲ್‍ನಲ್ಲಿ ಅವರವರ ಕುಟುಂಬ ಸದಸ್ಯರೊಂದಿಗೆ ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಲಾಯಿತು. ಮತ್ತು ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿಯನ್ನು ವಿಸರ್ಜಿಸಲಾಯಿತು.

ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ವಿಶೇಷವಾಗಿತ್ತು. ರೋಟರಿ ಗಣಪತಿ ಎಂದು ಹೆಸರಿಸಲಾಗಿದ್ದು, ಸೆಂಟ್ರಲ್ ಕ್ಲಬ್‍ನ ಎಲ್ಲಾ ಸದಸ್ಯರ ಕುಟುಂಬದವರು ಸೇರಿ ವಿಜೃಂಭಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲಾಯಿತು. ಇದರ ಜೊತೆಗೆ ಗಣಪತಿಗೆ ಅಲಂಕಾರವಾಗಿ ರೋಟರಿಯ ವೀಲ್ ಮತ್ತು ಸೆವೆನ್ ಏರಿಯಾ ಬಹಳ ವಿಶೇಷವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿರಣ್ ಕುಮಾರ್.ಜಿ ಮಾತನಾಡಿ, ಗಣೇಶ ಹಬ್ಬವನ್ನು ಎಲ್ಲರೂ ಅವರವರ ಮನೆಯಲ್ಲಿ ಆಚರಿಸುತ್ತಾರೆ. ಆದರೆ ಕ್ಲಬ್ ನಲ್ಲಿ ಎಲ್ಲಾ ಕುಟುಂಬಗಳು ಸೇರಿ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

Rotary Club ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಈಶ್ವರ್, ಬಸವರಾಜ್, ರವಿ ಕೋಟೊಜಿ, ಪಿಡಿಜಿ ಪ್ರಕಾಶ್, ಸುರೇಖಾ ಮುರಳಿಧರ್, ರಮಾನಂದ ಗಿರಿ, ಇಂದ್ರೇಶ್,  ಸಂತೋಷ್ ಎಸ್.ಕೆ, ಕುಮಾರ್, ಧಮೇರ್ಂದ್ರ ಸಿಂಗ್, ಗೀತಾ ಜಗದೀಶ್, ಶುಭಾ ಚಿದಾನಂದ್, ಜಯಶೀಲ ಶೆಟ್ಟಿ ಹಾಗೂ ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ಕದಂ, ರೋಟರಿ ಈಸ್ಟ್ ಅಧ್ಯಕ್ಷ ಅರುಣ್, ದೀಕ್ಷಿತ್ ಮತ್ತು ಎಸ್‍ಪಿ ಶಂಕರ್ ಹಾಗೂ ರೋಟರಿ ಕ್ಲಬ್ ಸೆಂಟ್ರಲ್‍ನ ಎಲ್ಲಾ ಸದಸ್ಯರು ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು

Consumer Disputes Redressal Commission ಲಿಫ್ಟ್ ಲೋಪ – ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಆದೇಶ

0

Consumer Disputes Redressal Commission ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್ ಪ್ರೈ.ಲಿ. ಚೆನ್ನೈ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್ ರವರು ವಕೀಲರ ಮುಖಾಂತರ ಎದುರಾದರರ ವಿರುದ್ದ ದೂರನ್ನು ಸಲ್ಲಿಸಿ, ತಾವು ಗೋಪಾಲಗೌಡ ಬಡಾವನೆಯಲ್ಲಿ ಮೊದಲನೇ ಮತ್ತು ಎರಡನೇ ಮಹಡಿಯುಳ್ಳ ಮನೆಯನ್ನು ಕಟ್ಟಿಸಿದ್ದು, ಮನೆಯಲ್ಲಿ ವೃದ್ದ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳಿಗೆ 2ನೇ ಮಹಡಿಗೆ ಹೋಗಲು ಅನುಕೂಲವಾಗುವಂತೆ ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಖರೀದಿಸಲು ಬಯಸಿ, ಜಿಎಸ್‌ಟಿ ಒಳಗೊಂಡಂತೆ ರೂ.13,44,999/- ಗಳನ್ನು ಪಾವತಿಸಿ ಮನೆಯ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಅಳವಡಿಸಲು ಹೇಳಿರುತ್ತಾರೆ.
ಅದರಂತೆ ಎದುರುದಾರರು ಎಲಿವೇಟರ್/ಲಿಫ್ಟ್ನ್ನು ಅಳವಡಿಸಿರುತ್ತಾರೆ. ಆದರೆ ಸದರಿ ಎಲಿವೇಟರ್/ಲಿಫ್ಟ್ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರು 2ನೇ ಮಹಡಿವರೆಗೆ ಹೋಗಲು ತೊಂದರೆಯಾಗಿರುತ್ತದೆ ಹಾಗೂ ಇದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರ ಎದುರಲ್ಲಿ ತಮಗೆ ಅವಮಾನವಾಗಿದ್ದು, ಎದುರುದಾರರ ಕೃತ್ಯದಿಂದಾಗಿ ತಾವು ಮನೆಯವರಿಂದ ಹಾಗೂ ಬಂಧುಮಿತ್ರರಿAದ ತುಂಬಾ ಅವಮಾನಕ್ಕೆ ಗುರಿಯಾಗಿರುವುದಲ್ಲದೆ ಮಾನಸಿಕವಾಗಿ ಸಹ ತುಂಬಾ ನೊಂದಿರುವುದಾಗಿ ದೂರನ್ನು ಸಲ್ಲಿಸಿ, ಎದುರುದಾರರಿಂದ ತಾವು ಎಲಿವೇಟರ್/ಲಿಫ್ಟ್ನ್ನು ಖರೀದಿಸಿದ ಮೊತ್ತವನ್ನು ಹಿಂದಿರುಗಿಸಲು ಹಾಗೂ ನ್ಯಾಯಾಲಯದ ಖರ್ಚು-ವೆಚ್ಚ ಹಾಗೂ ಪರಿಹಾರವಾಗಿ ರೂ.50,000/- ಗಳನ್ನು ನೀಡಬೇಕೆಂದು ಎದುರುದಾರರಿಗೆ ನಿರ್ದೇಶನ ನೀಡಬೇಕೆಂದು ಕೋರಿರುತ್ತಾರೆ.
Consumer Disputes Redressal Commission ದೂರುದಾರರ ದೂರು, ಎದುರುದಾರರ ಲಿಖಿತ ತಕರಾರು, ಉಭಯತರರು ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷಾö್ಯಧಾರಗಳನ್ನು ಹಾಗೂ ಉಭಯತರರ ವಾದ-ವಿವಾದಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಉಭಯ ಪಕ್ಷಗಾರರ ಒಪ್ಪಂದದಂತೆ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಸರಿಯಾಗಿ ಕೆಲಸ ಮಾಡುವ ಹಾಗೆ ಅಳವಡಿಸಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವುದಾಗಿ ತೀರ್ಮಾನಿಸಿ, ಎದುರುದಾರರು ದೂರುದಾರರಿಂದ ಪಡೆದ ರೂ.13,44,999/-ಗಳ ಮೇಲೆ ದಿ: 06-02-2024 ರಿಂದ ಶೇ.9 ಬಡ್ಡಿಯನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತದ ಮೇಲೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣ ನೀಡುವವರೆಗೂ ಹಾಗೂ ರೂ.50,000/- ಗಳನ್ನು ಪರಿಹಾರವಾಗಿ ಮತ್ತು ರೂ.10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತ ಬಿ.ಪಟ್ಟಣ ಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಇವರನ್ನೊಳಗೊಂಡ ಪೀಠವು ಆ.21 ರಂದು ಆದೇಶಿಸಿದೆ.

Shivamogga Post Division ಶಿವಮೊಗ್ಗ ಅಂಚೆ ವಿಭಾಗದ ಸೆ.27 ರಂದು ಡಾಕ್ ಅದಾಲತ್

0

Shivamogga Post Division ಶಿವಮೊಗ್ಗ ಅಂಚೆ ವಿಭಾಗದ 2024 ರ ಸೆಪ್ಟೆಂಬರ್ ಮಾಹೆ ಕೊನೆಗಳ್ಳುವ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಸೆ. 27 ರ ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಛೇರಿ, ಶಿವಮೊಗ್ಗ ಅಂಚೆ ವಿಭಾಗ ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದೆ.
Shivamogga Post Division ಸಾರ್ವಜನಿಕರು ಅಂಚೆ ಇಲಾಖೆಯ ಕುಂದು ಕೊರತೆಗಳನ್ನು ಅಥವಾ ಸಲಹೆಗಳನ್ನು ಸೆ. 25 ರ ಒಳಗೆ ಅವುಗಳ ನಿವಾರಣೆಗೆ ಕಳುಹಿಸಬಹುದು ಮತ್ತು ಡಾಕ್ ಅದಾಲತ್‌ನಲ್ಲಿ ಭಾಗವಹಿಸಬಹುದು ಎಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Agumbe Rainforest Research Station ಆಗುಂಬೆಯಲ್ಲಿ ರಿಯಾಯಿತಿ ದರದಲ್ಲಿ ಆಲ್ಫೋನ್ಸ ಮಾವಿನ ಸಸಿ

0

Agumbe Rainforest Research Station ತೀರ್ಥಹಳ್ಳಿಯ ಆಗುಂಬೆ ಸಂಶೋಧನಾ ವಲಯದಲ್ಲಿ ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ ಮಾವಿನ ಸಸಿಗಳನ್ನು(8*12’ ಅಳತೆ) ಸಾರ್ವಜನಿಕರಿಗೆ ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ಪ್ರತಿ ಸಸಿಗೆ ರೂ.43 ರಂತೆ ವಿತರಿಸಲಾಗುತ್ತಿದೆ.
ಆಸಕ್ತರು ಆರ್.ಟಿ,ಸಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅಗುಂಬೆ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ
Agumbe Rainforest Research Station ದೂ.ಸಂ: 8310655489 ಮತ್ತು ಗಸ್ತು ಅರಣ್ಯ ಪಾಲಕ ಮೊ.ಸಂ 9611930366 ಇವರನ್ನು ಸಂಪರ್ಕಿಸುAತೆ ತೀರ್ಥಹಳ್ಳಿ ಆಗುಂಬೆ ಸಂಶೋಧನಾ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.