Wednesday, April 30, 2025
Wednesday, April 30, 2025

Consumer Disputes Redressal Commission ಲಿಫ್ಟ್ ಲೋಪ – ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಆದೇಶ

Date:

Consumer Disputes Redressal Commission ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್ ಪ್ರೈ.ಲಿ. ಚೆನ್ನೈ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್ ರವರು ವಕೀಲರ ಮುಖಾಂತರ ಎದುರಾದರರ ವಿರುದ್ದ ದೂರನ್ನು ಸಲ್ಲಿಸಿ, ತಾವು ಗೋಪಾಲಗೌಡ ಬಡಾವನೆಯಲ್ಲಿ ಮೊದಲನೇ ಮತ್ತು ಎರಡನೇ ಮಹಡಿಯುಳ್ಳ ಮನೆಯನ್ನು ಕಟ್ಟಿಸಿದ್ದು, ಮನೆಯಲ್ಲಿ ವೃದ್ದ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳಿಗೆ 2ನೇ ಮಹಡಿಗೆ ಹೋಗಲು ಅನುಕೂಲವಾಗುವಂತೆ ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಖರೀದಿಸಲು ಬಯಸಿ, ಜಿಎಸ್‌ಟಿ ಒಳಗೊಂಡಂತೆ ರೂ.13,44,999/- ಗಳನ್ನು ಪಾವತಿಸಿ ಮನೆಯ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಅಳವಡಿಸಲು ಹೇಳಿರುತ್ತಾರೆ.
ಅದರಂತೆ ಎದುರುದಾರರು ಎಲಿವೇಟರ್/ಲಿಫ್ಟ್ನ್ನು ಅಳವಡಿಸಿರುತ್ತಾರೆ. ಆದರೆ ಸದರಿ ಎಲಿವೇಟರ್/ಲಿಫ್ಟ್ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರು 2ನೇ ಮಹಡಿವರೆಗೆ ಹೋಗಲು ತೊಂದರೆಯಾಗಿರುತ್ತದೆ ಹಾಗೂ ಇದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರ ಎದುರಲ್ಲಿ ತಮಗೆ ಅವಮಾನವಾಗಿದ್ದು, ಎದುರುದಾರರ ಕೃತ್ಯದಿಂದಾಗಿ ತಾವು ಮನೆಯವರಿಂದ ಹಾಗೂ ಬಂಧುಮಿತ್ರರಿAದ ತುಂಬಾ ಅವಮಾನಕ್ಕೆ ಗುರಿಯಾಗಿರುವುದಲ್ಲದೆ ಮಾನಸಿಕವಾಗಿ ಸಹ ತುಂಬಾ ನೊಂದಿರುವುದಾಗಿ ದೂರನ್ನು ಸಲ್ಲಿಸಿ, ಎದುರುದಾರರಿಂದ ತಾವು ಎಲಿವೇಟರ್/ಲಿಫ್ಟ್ನ್ನು ಖರೀದಿಸಿದ ಮೊತ್ತವನ್ನು ಹಿಂದಿರುಗಿಸಲು ಹಾಗೂ ನ್ಯಾಯಾಲಯದ ಖರ್ಚು-ವೆಚ್ಚ ಹಾಗೂ ಪರಿಹಾರವಾಗಿ ರೂ.50,000/- ಗಳನ್ನು ನೀಡಬೇಕೆಂದು ಎದುರುದಾರರಿಗೆ ನಿರ್ದೇಶನ ನೀಡಬೇಕೆಂದು ಕೋರಿರುತ್ತಾರೆ.
Consumer Disputes Redressal Commission ದೂರುದಾರರ ದೂರು, ಎದುರುದಾರರ ಲಿಖಿತ ತಕರಾರು, ಉಭಯತರರು ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷಾö್ಯಧಾರಗಳನ್ನು ಹಾಗೂ ಉಭಯತರರ ವಾದ-ವಿವಾದಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಉಭಯ ಪಕ್ಷಗಾರರ ಒಪ್ಪಂದದಂತೆ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಸರಿಯಾಗಿ ಕೆಲಸ ಮಾಡುವ ಹಾಗೆ ಅಳವಡಿಸಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವುದಾಗಿ ತೀರ್ಮಾನಿಸಿ, ಎದುರುದಾರರು ದೂರುದಾರರಿಂದ ಪಡೆದ ರೂ.13,44,999/-ಗಳ ಮೇಲೆ ದಿ: 06-02-2024 ರಿಂದ ಶೇ.9 ಬಡ್ಡಿಯನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತದ ಮೇಲೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣ ನೀಡುವವರೆಗೂ ಹಾಗೂ ರೂ.50,000/- ಗಳನ್ನು ಪರಿಹಾರವಾಗಿ ಮತ್ತು ರೂ.10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತ ಬಿ.ಪಟ್ಟಣ ಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಇವರನ್ನೊಳಗೊಂಡ ಪೀಠವು ಆ.21 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಕೆಡಿಪಿ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಶಾಸಕ ಚೆನ್ನ ಅವರಿಂದ ಚರ್ಚೆ

S.N. Channabasappa ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ...

KSRTC ಮೃತವ್ಯಕ್ತಿ ಕುಟುಂಬಕ್ಕೆ ಪರಿಹಾರ ಧನ ತಲುಪಿಸಿದ ಕಾರವಾರ ಸಾರಿಗೆ ವಿಭಾಗ

KSRTC 2024 ರ ಜು.22 ರಂದು ಶಿರಸಿ ಮತ್ತು ಸಾಗರ ಮಾರ್ಗದಲ್ಲಿ...

ಚಿತ್ರದುರ್ಗ ಜಿಲ್ಲೆಯ “ಕನ್ನಡ ಸಂಪಿಗೆ” ಪತ್ರಕರ್ತ ಟಿ.ತಿಪ್ಪೆಸ್ವಾಮಿ “ಬಸವಸೇವಾರತ್ನ” ಪ್ರಶಸ್ತಿ

ಯಶಸ್ವಿ ಪತ್ರಿಕೋದ್ಯಮ ಹಾಗೂ ಅಲಕ್ಷಿತ ಸಣ್ಣ ಸಮುದಾಯಗಳ ಪರವಾಗಿ ದುಡಿದ ಅನುಪಮ...

Sri Shivananda Bharati Chintamani Swami ಹೊಸಪೇಟೆಯಲ್ಲಿ ಶಂಕರ ವರ್ಧಂತಿ ವಿಶೇಷ ಶಂಕರ ಸ್ತೋತ್ರ ಪಠಣ ಸಮರ್ಪಣೆ

Sri Shivananda Bharati Chintamani Swami ಶ್ರೀಶ್ರೀ ಶಿವಾನಂದ ಭಾರತಿ ಚಿಂತಾಮಣಿ...