Vishwakarma Jayanti ವಿಶ್ವಕರ್ಮರನ್ನು ಪ್ರಪಂಚದ ‘ದೈವಿಕ ಇಂಜಿನಿಯರ್’ ಎಂದು ಕರೆಯಲಾಗುತ್ತದೆ. ಅವರು ವಾಸ್ತುಶಿಲ್ಪಿಗಳ ಪ್ರಧಾನ ದೇವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಶ್ರೀ ವಿಶ್ವಕರ್ಮರನ್ನು ಕುರಿತು ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಜಯಂತಿ ಒಂದು ಪವಿತ್ರವಾದ ದಿನ. ಬ್ರಹ್ಮನ ಮಗನಾದ ವಿಶ್ವಕರ್ಮನು ಶಿಲ್ಪಕಲೆ, ವಾಸ್ತುಶಿಲ್ಪ ಕರಕುಶಲತೆಯನ್ನು ಜಗತ್ತಿಗೆ ನೀಡಿದವರು. ಎಷ್ಟೇ ತಾಂತ್ರಿಕತೆ ಬೆಳೆದರೂ ಕಲೆ, ಸಾಹಿತ್ಯ, ಕೌಶಲ್ಯಗಳನ್ನು ಮಷೀನ್‌ಗಳು ಸೃಷ್ಟಿಸಲು ಸಾಧ್ಯವಿಲ್ಲ.
ಪ್ರಧಾನಮಂತ್ರಿಯವರು ಕುಶಲಕರ್ಮಿಗಳ ರಕ್ಷಣೆಗಾಗಿ ಹಾಗೂ ಯುವಜನತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆಂಬ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದು 8 ರಿಂದ 10 ಕೋಟಿ ಯುವ ಕುಶಲಕರ್ಮಿಗಳ ವೃತ್ತಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
Vishwakarma Jayanti ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ರೈಲ್ವೇ, ವಿಮಾನ, ರಾಷ್ಟಿçÃಯ ಹೆದ್ದಾರಿಗಳು, ರಸ್ತೆಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಯನ್ನು ಕಾಣುತ್ತಿದ್ದೇವೆ. ಮುಂದೆ ಸಹ ಜಿಲ್ಲೆಯ ಅಭಿವೃದ್ದಿಗೆ ತಾವು ಶ್ರಮಿಸುವುದಾಗಿ ಹೇಳಿದರು.
ಲಾಲ್ ಬಹದ್ದೂರ್ ಶಾಸ್ತಿç ಕಲಾ ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನ ಇತಿಹಾಸ ಉಪನ್ಯಾಸಕ ನವೀನ್ ಜಿ. ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರನ್ನು ನಾವು ಅನಂತ, ಅನಾದಿ ಎಂದು ಬಣ್ಣಿಸುತ್ತೇವೆ. 33 ಕೋಟಿ ದೇವರನ್ನು ಸೃಷ್ಟಿ ಮಾಡಿದವರು ವಿಶ್ವಕರ್ಮ. ದೊಡ್ಡ ದೊಡ್ಡ ಅರಮನೆಗಳು ಹಾಗೂ ಸೇತುವೆ ನಿರ್ಮಾಣಕಾರ ವಿಶ್ವಕರ್ಮ. ಖಗೋಳಶಾಸ್ತ್ರದ ಜ್ಞಾನವನ್ನೂ ಹೊಂದಿದ್ದ ವಿಶ್ವಕರ್ಮರ ಪಾಂಡಿತ್ಯ ಅಪಾರ. ಕುಶಲಕರ್ಮಿಗಳಾಗಿ ಬಹುಮುಖಿ ಸಾಧನೆಯನ್ನು ವಿಶ್ವಕರ್ಮರು ಮಾಡಿದ್ದಾರೆ ಎಂದು ತಿಳಿಸಿದ ಅವರು ಶ್ರೀ ವಿಶ್ವಕರ್ಮರ ಸೃಷ್ಟಿ ಮತ್ತು ಚರಿತ್ರೆ ಕುರಿತು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ವಿಶ್ವಕರ್ಮ ಧರ್ಮ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಶಿಲ್ಪ ಸಂಸ್ಕೃತಿ ಬೆಳೆಸಿದ ಸಮಾಜ. ವಿಶ್ವಕರ್ಮ ಸಮಾಜದವರು ಸುಸಂಸ್ಕೃತರಾಗಿದ್ದು, ಉನ್ನತ ಮಟ್ಟದ ಅಭಿವೃದ್ಧಿ ಹೊಂದಬೇಕು ಆಶಿಸಿದ ಅವರು ರಾಜ್ಯ ಸರ್ಕಾರ ಜನ ಸಾಮಾನ್ಯರು, ಬಡವರ ಆರ್ಥಿಕ ಸಬಲೀಕರಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಅರ್ಹರೆಲ್ಲ ಇದರ ಲಾಭ ಪಡೆಯಬೇಕು. ಇನ್ನೂ ಸೌಲಭ್ಯ ಪಡೆಯದವರು ಇದರು ಸದುಪಯೋಗ ಪಡೆಯಬೇಕೆಂದರು.
ವಿಶ್ವಕರ್ಮ ಸಮಾಜದ ಮುಖಂಡರಾದ ಎಸ್.ರಾಮು ಮಾತನಾಡಿ, ಮೊದಲು ವಿಶ್ವಕರ್ಮ ಸಮುದಾಯದವರನ್ನು ಒಗ್ಗೂಡಿಸಲು ಪೂಜಾ ಕಾರ್ಯ ಮಾಡುತಿದ್ದೆವು. ಇದೀಗ ಸರ್ಕಾರ ವಿಶ್ವಕರ್ಮ ಜಯಂತಿಯ ಆಚರಣೆ ಜಾರಿಗೆ ತಂದಿದೆ. ಹಾಗೂ ನಮ್ಮ ಪ್ರಧಾನಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದು ಕುಶಲಕರ್ಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಶ್ವಕರ್ಮ ಸಮಾಜದಲ್ಲಿ 42 ಉಪ ಪಂಗಡಗಳಿದ್ದು ಎಲ್ಲರೂ ಒಗ್ಗೂಡಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷ ಸೋಮಾಚಾರಿ, ಸಮಾಜದ ಮುಖಂಡರಾದ ಅಗರದಹಳ್ಳಿ ನಿರಂಜನಮೂರ್ತಿ, ಶ್ರೀನಿವಾಸ್, ಹೆಚ್.ಎಂ.ಲೀಲಾ ಮೂರ್ತಿ, ರೂಪಾ ಚಂದ್ರಶೇಖರ್, ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು.
Vishwakarma Jayanti ಕುಶಲ ಕರ್ಮಿಗಳ ರಕ್ಷಣೆಗಾಗಿ ಪಿಎಂ ವಿಶ್ವಕರ್ಮ ಯೋಜನೆ- ಸಂಸದ ರಾಘವೇಂದ್ರ
Narendra Modi 74 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ. ಗಣ್ಯರಿಂದ ಶುಭಾಶಯಗಳ ಮಹಾಪೂರ
Narendra Modi ಪ್ರಧಾನಮಂತ್ರಿ ನರೇಂದ್ರ ಮೋದಿಯವರು 74ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ಬಿಜೆಪಿ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ.
ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಜಗಮೆಚ್ಚಿದ ಜನನಾಯಕ, ಭಾರತ ಕಂಡ ಹೆಮ್ಮೆಯ ಪ್ರಧಾನಿ, ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಹೇಳಿ, ಕೊಂಡಾಡಿದೆ.
Narendra Modi ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ಇನ್ನೂ ಸುದೀರ್ಘ ಕಾಲ ತಮ್ಮ ಸಾರ್ಥಕ ದೇಶಸೇವೆ ನಡೆಯುತ್ತಿರುವಂತೆ ದೇವರ ಆಶೀರ್ವಾದವಿರಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.
B. Y. Vijayendra ಶಾಸಕ ವಿಜಯೇಂದ್ರ ಮೈಸೂರಿನಲ್ಲಿ ಬೇನಾಮಿ ಆಸ್ತಿಹೊಂದಿದ್ದಾರೆ .ಕೆ.ಎಸ್.ಶಿವರಾಮು ಆರೋಪ.
B. Y. Vijayendra ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರೊಂದಿಗೆ ಕೈಜೋಡಿಸಿ ಮೈಸೂರಿನಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸರಿಲ್ಲಿದ್ದ ಜಂಟಿ ಜಾಗ. ಈರನಗೆರೆ ಸರ್ವೆ ನಂ 85/2 ರಲ್ಲಿ 1 ಎಕರೆ 3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ. ಅರ್ಜಿ ಸಲ್ಲಿಸಿದ ಬಳಿಕ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ ಮಾಡಲಾಗಿದೆ.
50 ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಸಿ. ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದಿನ ಬಿಜೆಪಿ ಜಿಲ್ಲಾಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮ ಎಸಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದಲ್ಲಿ ಮಹಾದೇವಸ್ವಾಮಿ ಗುರುತಿಸಿಕೊಂಡಿದ್ದು, ಎಲ್.ಆರ್. ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ಹೆಚ್ಚುವರಿಯಾಗಿ ಸರಸ್ವತಿಪುರಂನಲ್ಲಿ 50×80 ಹೆಚ್ಚುವರಿ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅದೇ ಬಡಾವಣೆ ಬಿಟ್ಟು ಕೋಟಿ ಕೋಟಿ ಬೆಲೆ ಬಾಳುವ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಇದೇ ನಿವೇಶನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ನಿವೇಶನ ಖರೀದಿಸಿದ್ದಾರೆ.
B. Y. Vijayendra ಮಾರುಕಟ್ಟೆ ಮೌಲ್ಯದ ಪ್ರಕಾರ, ಸೈಟ್ 7 ಕೋಟಿ ರೂ.ಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆ, ಆದರೆ ಸೌಮ್ಯ ಅದನ್ನು 5.36 ಲಕ್ಷಕ್ಕೆ ಖರೀದಿಸಿದ್ದಾರೆ. ನಟೇಶ್ ಮತ್ತು ಮಹದೇವಸ್ವಾಮಿ ಅವರು ವಿಜಯೇಂದ್ರ ಅವರ ಆಪ್ತರಾಗಿರುವ ಕಾರಣ, ಕೋಟ್ಯಾಂತರ ಬೆಲೆ ಬಾಳುವ ಪ್ರದೇಶದಲ್ಲಿ ನಿವೇಶನ ಪಡೆಯಲು ಸಂಚು ರೂಪಿಸಲಾಗಿದೆ. ಇದೀಗ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಕೂಡಲೇ ಈ ನಿವೇಶನವನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಮುಡಾ ಭ್ರಷ್ಟಾಚಾರದ ಪಿತಾಮಹ ಬಿ.ವೈ. ವಿಜಯೇಂದ್ರ. 2021 ರಲ್ಲಿ ವಿಜಯೇಂದ್ರ ಪಟಾಲಮ್ ಮೂಲಕ ಭ್ರಷ್ಟಾಚಾರ ಮಾಡಿದ್ದರು. ಡಿ.ಬಿ. ನಟೇಶ್ ಮುಡಾ ಮಾಜಿ ಆಯುಕ್ತ, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ದೇವಸ್ಥಾನಗಳಿಗೆ ಹೆಲಿಕಾಪ್ಟರ್ ನಲ್ಲಿ ಹೊಗುತ್ತಾ ಇದ್ದರು ಎಂದು ಆರೋಪಿಸಿದರು.
Ramesh Jarakiholi ಬಿಜೆಪಿಗೆ ಭ್ರಷ್ಟ ಅಂತ ಲೇಬಲ್ ಕೊಟ್ಟದ್ದು ವಿಜಯೇಂದ್ರ- ರಮೇಶ್ ಜಾರಕಿಹೊಳಿ
Ramesh Jarakiholi ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ಬಿಜೆಪಿ ನಾಯಕರ ಜೊತೆ ಆರ್ ಎಸ್ ಎಸ್ ನಡೆಸಿದ ಸಂಘಟನಾ ಸಭೆ ವಿಚಾರವಾಗಿ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಆರ್ ಎಸ್‌ಎಸ್ ಸಭೆಯಲ್ಲಿ ಏನ್ ಚರ್ಚೆ ಆಯಿತು ಎಂದು ಹೇಳೋಕೆ ಬರಲ್ಲ. ಸಭೆಯಲ್ಲಿ ಯಾರು ಯಾರನ್ನು ಬೈದ್ರು ಅಂತಾನೂ ಹೇಳೋಕೆ ಬರಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ. ವಿಜಯೇಂದ್ರ ಅವರ ಅಧ್ಯಕ್ಷ ಸ್ಥಾನವನ್ನು ಎಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಅವನಿಗೆ ಏನು ಐಡಿಯಾಲಜಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
Ramesh Jarakiholi ವಿಜಯೇಂದ್ರ ಭಾರತೀಯ ಜನತಾ ಪಕ್ಷದ ಭ್ರಷ್ಟ ಎಂಬ ಲೇಬಲ್ ಗೆ ಅಷ್ಟೇ ಸೀಮಿತವಾಗಿದ್ದಾರೆ. ಭಾರತಿ ಜನತಾ ಪಕ್ಷಕ್ಕೆ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರು ಪ್ರಬಲ ನಾಯಕನಾಗಿಲ್ಲ. ಬಿಜೆಪಿಯ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ ಎಂದರು.
ಒಬ್ಬರ ಕೈಯಲ್ಲಿ ಪಕ್ಷ ಸಿಕ್ಕರೆ ಸರ್ವಾಧಿಕಾರಿ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಅಂತ ರಮೇಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು
Kidavento Institute ಶಿಕ್ಷಕಿ ನೀಲಮ್ಮ ಅಣ್ಣಿಗೇರಿಗೆ “ಕಿಡವೆಂಟೋ ಸಂಸ್ಥೆಯಿಂದ ಪ್ರಶಸ್ತಿ
Kidavento Institute ” ರಾಷ್ಟ್ರೀಯ ಶಿಕ್ಷಣ ಸಮಿತಿ “” ಶಿವಮೊಗ್ಗ ಸಂಸ್ಥೆಯ ‘ನ್ಯಾಷನಲ್ ಇಂಗ್ಲೀಷ ಸ್ಕೂಲ್ ‘ ಚೀಲೂರಿನಲ್ಲಿ ಹಿಂದಿ ಭಾಷಾ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ” ನೀಲಮ್ಮ ವಿ ಅಣ್ಣಿಗೇರಿ ” ಇವರ ಸೇವೆಗೆ ಕಿಡವೆಂಟೋ ಸಂಸ್ಥೆ ವತಿಯಿಂದ ” ಉತ್ತಮ ಶಿಕ್ಷಕಿ ” ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ .
Kidavento Institute ಈ ಸಮಯದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಆದರ್ಶ ಜಿ ಸಿ ಯವರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಇವರ ಸುದೀರ್ಘ ಸೇವೆಗೆ ಆಡಳಿತ ಮಂಡಳಿ ಯವರು ಅಭಿನಂದಿಸಿದ್ದಾರೆ
Narendra Modi ನ್ಯಾ.ಚಂದ್ರಚೂಡ್ ಗೃಹ ಗಣೇಶಾರತಿಯಲ್ಲಿ ಪ್ರಧಾನಿ ಮೋದಿ ಭಾಗಿ. ಭಿನ್ನ ಭಿನ್ನ ಅನಿಸಿಕೆಗಳು.
ಲೇ. ಎಚ್.ಕೆ.ವಿವೇಕಾನಂದ.
Narendra Modi ಶ್ರೀ ನರೇಂದ್ರ ಮೋದಿ ಮತ್ತು
ಶ್ರೀ ಡಿ ವೈ ಚಂದ್ರ ಚೂಡ್……
ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು….
ಒಂದು ಖಾಸಗಿ ಭೇಟಿಯ ಸುತ್ತಾ…….
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಿ ಜೆ ಐ ಅವರ ಮನೆಯಲ್ಲೇ ನಡೆದ ಗಣೇಶ ಹಬ್ಬದಲ್ಲಿ ಭಾಗವಹಿಸಿ ಅವರ ಕುಟುಂಬದೊಂದಿಗೆ ದೇವರ ವಿಗ್ರಹಕ್ಕೆ ಕೈ ಮುಗಿಯುತ್ತಿರುವ ದೃಶ್ಯ ಸ್ವತಃ ಪ್ರಧಾನಿಗಳೇ ತಮ್ಮ ಎಕ್ಸ್ ಖಾತೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ…….
ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಸರಿ ಎನ್ನುವವರದು ಒಂದು ವಾದವಾದರೆ, ತಪ್ಪು ಎನ್ನುವವರದು ಇನ್ನೊಂದು ವಾದ. ಮೂರನೆಯ ತಟಸ್ಥ ನಿಲುವು ಅಥವಾ ನೇರವಾದ ಸ್ಪಷ್ಟ ನಿಲವು ಪ್ರಕಟಿಸುವ ಮುನ್ನ ಪರ ವಿರೋಧದ ಅಂಶಗಳನ್ನು ಗಮನಿಸೋಣ…..
Narendra Modi
ಪರವಾಗಿ ವಾದಿಸುವವರು ಇದೇನು ಮಹಾ ಅಪರಾಧವಲ್ಲ. ದೇಶದ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿ ಅವರನ್ನು ಖಾಸಗಿಯಾಗಿ ತಮ್ಮ ಮನೆಗೆ ಆಹ್ವಾನಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುವುದು ಸಹಜವಾದದ್ದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಎಲ್ಲರಿಗೂ ಅವರವರದೇ ಆದ ಸ್ವಾತಂತ್ರ್ಯ ಇದೆ. ಇದು ಮೊದಲೇನು ಅಲ್ಲ. ಹಿಂದೆ ಡಾಕ್ಟರ್ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿಗಳನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದರು. ಆಗ ಅವರು ಸಹ ಅದರಲ್ಲಿ ಭಾಗವಹಿಸಿದ್ದರು. ಆದ್ದರಿಂದ ಇದು ವಿವಾದವೇ ಅಲ್ಲ. ಅನಾವಶ್ಯಕವಾಗಿ ಬೇಕಂತಲೇ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳುತ್ತಾರೆ…….
ಹಾಗೆಯೇ ಇದನ್ನು ವಿರೋಧಿಸುವವರು,
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಹಂತದಲ್ಲಿರುವಾಗ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸರ್ವಾಧಿಕಾರಿ ಆಡಳಿತಗಾರ ಎನ್ನುವ ಆರೋಪ ಇರುವಾಗ, ಬಹಳಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿರುವಾಗ, ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನ ಕೆಲವು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಮಾಡಿರುವಾಗ, ಮುಖ್ಯ ನ್ಯಾಯಮೂರ್ತಿಗಳಾಗಲಿ ಅಥವಾ ಪ್ರಧಾನ ಮಂತ್ರಿಗಳಾಗಲಿ ಈ ರೀತಿ ಬಹಿರಂಗವಾಗಿ ಒಬ್ಬರಿಗೊಬ್ಬರು ಖಾಸಗಿ ಮತ್ತು ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕೆಟ್ಟ ಸಂದೇಶವನ್ನು ನೀಡುತ್ತದೆ. ಸಾರ್ವಜನಿಕ ಅಥವಾ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಖಾಸಗಿಯಾಗಿ ನ್ಯಾಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಮುಖ್ಯಸ್ಥರು ಆತ್ಮೀಯತೆ ಪ್ರದರ್ಶಿಸುವುದು ಅಂತಹ ಒಳ್ಳೆಯ ನಡೆಯಲ್ಲ ಎನ್ನುವುದು ವಿರೋಧಿಗಳ ವಾದ……
ಕಾನೂನುತ್ಮಕವಾಗಿ ಮೋದಿಯವರಿಗೆ ಮತ್ತು ಚಂದ್ರಚೂಡ್ ಅವರಿಗೆ ಈ ರೀತಿ ಮಾಡಲು ಯಾವುದೇ ಅಡ್ಡಿ ಆತಂಕವಿಲ್ಲ. ಅವರು ಒಬ್ಬರಿಗೊಬ್ಬರು ಕೌಟುಂಬಿಕ ಬಾಂಧವ್ಯ ಹೊಂದಬಹುದು. ಹಾಗೆಯೇ ನೈತಿಕವಾಗಿ ಖಂಡಿತವಾಗಲೂ ಈ ಸಂದರ್ಭದಲ್ಲಿ ಅವರು ಜೊತೆಯಾಗಿದ್ದು, ಅದು ಬಹಿರಂಗವಾಗಿ ಮೋದಿಯವರು ಹೆಮ್ಮೆಯಿಂದ ಹೇಳಿಕೊಳ್ಳುವುದು ಅನೈತಿಕವಲ್ಲದಿದ್ದರೂ ತಪ್ಪು ನಡೆ ಎಂದು ಸಹ ಅಷ್ಟೇ ನೇರವಾಗಿ ಹೇಳಬಹುದು…..
ಇದರ ನಡುವೆ ಮತ್ತೊಂದು ಅಭಿಪ್ರಾಯವೂ ಇದೆ…..
ಈ ಕ್ಷಣದ ಭಾರತದ ರಾಜಕೀಯ ಪರಿಸ್ಥಿತಿಯಲ್ಲಿ ಚಂದ್ರಚೂಡ್ ಮತ್ತು ಮೋದಿ ಅವರಿಗೆ ಈ ಭೇಟಿಯ ಅವಶ್ಯಕತೆ ಇತ್ತೇ ಅಥವಾ ನಿಜಕ್ಕೂ ಇದೊಂದು ಮುಂದಿನ ಭಾರತದ ರಾಜಕೀಯ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಅತ್ಯುತ್ತಮ ನಡೆಯೇ ಅಥವಾ ಪ್ರಧಾನಿಯವರು ಈ ಟ್ವೀಟ್ ಮೂಲಕ ವಿರೋಧಿಗಳಿಗೆ ಏನಾದರೂ ಸಂದೇಶವನ್ನು ರಾಜಕೀಯವಾಗಿ ನೀಡಿದ್ದಾರೆಯೇ ಅಥವಾ ಚಂದ್ರಚೂಡ್ ಅವರು ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಇನ್ನೇನಾದರೂ ಸಂದೇಶ ನೀಡಿದ್ದಾರೆಯೇ ಅಥವಾ ಸಾಮಾನ್ಯ ಜನ ಮಾತನಾಡಿಕೊಳ್ಳುವಂತೆ ಅವರವರ ಲಾಭಕ್ಕಾಗಿ ಏನಾದರೂ ಈ ರೀತಿಯ ಭೇಟಿ ನಡೆಯಿತೇ……
ಇದು ಒಂದು ಸಾಮಾನ್ಯ ಚರ್ಚೆ ಮತ್ತು ಅಭಿಪ್ರಾಯ. ಏಕೆಂದರೆ ಭೇಟಿ ಮಾಡಿರುವ ಇಬ್ಬರೂ ಕೇವಲ ವ್ಯಕ್ತಿಗಳು ಮಾತ್ರವಲ್ಲ ಪ್ರಜಾಪ್ರಭುತ್ವದ ಮುಖ್ಯ ಅಡಿಪಾಯಗಳಂತಿರುವವರು. ಎರಡು ಆಧಾರ ಸ್ತಂಭಗಳು. ಕಾನೂನು ಮಾಡುವವರು ಮತ್ತು ಕಾನೂನನ್ನು ಅರ್ಥೈಸುವವರು ಹಾಗೂ ದೇಶದ ಸಂವಿಧಾನವನ್ನು ರಕ್ಷಿಸುವವರು….
ಇವರು ಖಾಸಗಿಯಾಗಿ ಭೇಟಿಯಾದಾಗ ಮೂಡುವ ಅನುಮಾನಗಳು ಅತ್ಯಂತ ಸಹಜವಾದದ್ದು. ಅದರಲ್ಲಿ ಅನೇಕ ಸೂಕ್ಷ್ಮಗಳನ್ನು ಹುಡುಕುವ ಜವಾಬ್ದಾರಿ ಪ್ರತಿ ರಾಜಕೀಯ ಆಸಕ್ತರಿಗೆ ಇದ್ದೇ ಇರುತ್ತದೆ ಮತ್ತು ಅದನ್ನು ಪ್ರಶ್ನಿಸುವುದು ಸಹ ಸರಿಯಾಗಿಯೇ ಇದೆ. ಅದು ಸಹಜವಾಗಿದ್ದರೆ ತುಂಬಾ ಸಂತೋಷ. ಒಂದು ವೇಳೆ ಅದು ಅಸಹಜ ಅಥವಾ ಹಿಡನ್ ಅಜೆಂಡಾ ಹೊಂದಿರುವ ಭೇಟಿಯಾಗಿದ್ದರೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕಬಹುದು. ಇದರಲ್ಲಿ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ…..
ಆದರೂ ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಲ್ಲಿರುವವರು ತಮ್ಮ ನಡವಳಿಕೆಗಳನ್ನು ಹೆಚ್ಚು ಜಾಗೃತವಾಗಿ ರೂಪಿಸಿಕೊಂಡರೆ ಒಳ್ಳೆಯದು ಎಂದು ಅಪೇಕ್ಷಿಸುವುದು ನಮ್ಮ ಕರ್ತವ್ಯ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….
Thirtahalli Police ಆತ್ಮಹತ್ಯೆಗೆ ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಗುತ್ತಿಗೆದಾರನನ್ನ ಬದುಕಿಸಿದ ತೀರ್ಥಹಳ್ಳಿ ಪೊಲೀಸ್ ಸಿಬ್ಬಂದಿಯ ಮಾನವೀಯತೆ
Thirtahalli Police ತೀರ್ಥಹಳ್ಳಿಯ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸ್ ಅಧಿಕಾರಿಗಳು ಜೀವ ಉಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ಕನ್ಸ್ಟ್ರಕ್ಷನ್ ಕೆಲಸ ಮಾಡಿದ ಹಣ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಹಾಗೂ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ರಮೇಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದರು.
ಮಂಗಳವಾರ ಸಂಜೆ ಹಲವು ಮುಖಂಡರಿಗೆ ಕರೆ ಮಾಡಿ ತಾನು ಸಾಯುತ್ತಿರುವುದಾಗಿ ರಮೇಶ್ ಅವರು ತಿಳಿಸಿದ್ದು,
ಪೊಲೀಸರು ಯಡೇಹಳ್ಳಿಕೆರೆ ಬಳಿ ಆತ ನೀರಿನಲ್ಲಿ ಒದ್ದಾಡುತ್ತಿರುವುದನ್ನು ನೋಡಿ ಆತನನ್ನು ರಕ್ಷಿಸಿದ್ದಾರೆ.
ತಕ್ಷಣವೇ ಆತನಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಕರೆದೋಯ್ದಿದರು.
Thirtahalli Police ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಅಭಿನಂದನೆ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ

Centrally Sponsored Scheme ತಂದೆ ಇಲ್ಲದ ಮಕ್ಕಳಿಗೆ ವಿದ್ಯಾರ್ಥಿವೇತನ” ಸುದ್ದಿ ಬಗ್ಗೆ ನಿಜಾಂಶ ತಿಳಿಯಲು ಈ ಪ್ರಕಟಣೆ ಓದಿ
Centrally Sponsored Scheme ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆಯು ಎಲ್ಲಾ ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್ ಅನ್ವಯವಾಗುವುದಿಲ್ಲ. ಈ ಯೋಜನೆಯಲ್ಲಿ ಫಲಾನುಭವಿಯಾಗಲು ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ.
ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24000/- ಸ್ಕಾಲರ್‌ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೆ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು “ಸುಳ್ಳುಸುದ್ದಿ”ಯಾಗಿದೆ. ಈ ಯೋಜನೆಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರ ಸ್ಕಾಲರ್‌ಶಿಪ್ ಲಭಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಂದ(ಬಾಲಕರ/ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯ) ಹೊರಹೋಗಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಮಕ್ಕಳು, ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತçತ ಕುಟುಂಬದಲ್ಲಿ ಜೀವಿಸುತ್ತಿದ್ದರೆ, ಕಾರಾ ಗೃಹದಲ್ಲಿರುವ ಪೋಷಕರ ಮಕ್ಕಳು, ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಮಕ್ಕಳು, ಪೋಷಕರು ಗಂಭೀರ ಸ್ವರೂಪದ ಕಾಯಿಲೆಯ (ಮಾರಣಾಂತಿಕ ಕಾಯಿಲೆ) ಸಂತ್ರಸ್ಥರ ಮಕ್ಕಳು, ಪೋಕ್ಸೋ ಸಂತ್ರಸ್ಥ ಮಕ್ಕಳು, ಬಾಲಸ್ವರಾಜ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಮಕ್ಕಳು, ಯಾವುದೇ Centrally Sponsored Scheme ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣೆಗೊಳಗಾದ ಮಕ್ಕಳು, ಹೆಚ್‌ಐವಿ/ಏಡ್ಸ್ ಬಾಧಿತ (ಪೀಡಿತ) ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಅನಾಥ, ಕಾಣೆಯಾದ ಅಥವಾ ಓಡಿಹೋದ ಮಕ್ಕಳು, ಬಾಲ ಬಿಕ್ಷುಕರು ಅಥವಾ ಬೀದಿಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು, ನಿರ್ಗತಿಕರಾಗುವುದು. ಸಂಕಷ್ಟಕ್ಕೆ ಈಡಾಗುವ ಸಂಭವವಿರುವ ಕುಟುಂಬದ ತಾಯಿ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಥವಾ ವಿಧವೆ. ವಿಚ್ಛೇದಿತೆ ಮಗು ಜೈವಿಕ ಕುಟುಂಬದಲ್ಲೇ (ವಿಸ್ತೃತ ಕುಟುಂಬ ಹಾಗೂ ರಕ್ತ ಸಂಬಂಧ ಒಳಗೊಂಡಂತೆ) ಮುಂದುವರೆಯುವ ಮಕ್ಕಳಿಗೆ ಈ ಯೋಜನೆ ಲಭಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷಣಾಲಯ ಕಟ್ಟಡ, ೧೦೦ ಅಡಿ ರಸ್ತೆ, ಆಲ್ಕೋಳ ಶಿವಮೊಗ್ಗ, ದೂ. ಸಂಖ್ಯೆ:೦೮೧೮೨-೨೯೫೭೦೯ ಸಂಪರ್ಕಿಸಿ ಎಂದು ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ.
Consumer Disputes Redressal Commission ವಾಹನ ವಿಮೆ ಪರಿಹಾರ ಗ್ರಾಹಕರಿಗೆ ನೀಡಲು ಆಯೋಗದ ಆದೇಶ
Consumer Disputes Redressal Commission ವಿಠಲ ಶೆಟ್ಟಿ ಎಂಬುವವರು ಪ್ರಾಂಕ್ಲಿನ್ ಇ.ವಿ.ಎಸ್.ವಿ ಎಲೆಕ್ಟ್ರಿಕ್ ವೆಹಿಕಲ್, ಹೈದರಾಬಾದ್ ಮತ್ತು ಜಿ.ಆರ್.ಪಿ. ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರ ವಿಠಲ ಶೆಟ್ಟಿಯವರು ಜಿ.ಆರ್.ಪಿ ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿಸಿದ್ದು, ಕೆಲವೇ ದಿನಗಳಲ್ಲಿ ಸ್ಕೂಟರ್ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲವೆಂದು ತಿಳಿಸಿದಾಗ, ಎದುರುದಾರರು ಬ್ಯಾಟರಿಯನ್ನು ಕೊಂಡ್ಯೋದು ರಿಪೇರಿ ಮಾಡಿ ಅಳವಡಿಸಿದ್ದಾಗಿ ತಿಳಿಸಿ ವಾಪಾಸ್ಸು ತಂದರೂ ಮತ್ತೆ ಅದೇ ಸಮಸ್ಯೆ ಉಂಟಾಗಿರುತ್ತೆದೆ. ಆದ್ದರಿಂದ ಹೊಸ ಬ್ಯಾಟರಿ ಅಳವಡಿಸಿ ವಾಹನ ಚಾಲು ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಕಂಪನಿಯವರು ಬದಲಿ ಹೊಸ ಬ್ಯಾಟರಿ ಅಳವಡಿಸಿಕೊಡಲು ನಿರಾಕರಿಸಿದ್ದಾರೆ.
Consumer Disputes Redressal Commission ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು ೧ ಮತ್ತು ೨ ನೇ ಎದುರುದಾರರು ನೋಟಿಸ್ ಪಡೆಯಲು ತಿರಸ್ಕರಿಸಿದ್ದು ಆಯೋಗದ ಮುಂದೆ ಹಾಜರಾಗಿರುವುದಿಲ್ಲ ಕಾರಣ ೧ ಮತ್ತು ೨ ನೇ ಎದುರುದಾರರನ್ನು ಏಕ ಪಕ್ಷೀಯವೆಂದು ತೀರ್ಮಾನಿಸಲಾಗಿರುತ್ತದೆ.
ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ. ಎದುರುದಾರು ಅರ್ಜಿದಾರರಿಗೆ 45 ದಿನಗಳೊಳಗಾಗಿ ದೂರುದಾರರ ಸ್ಕೂಟರ್‌ಗೆ ಹೊಸ ಬ್ಯಾಟರಿಯನ್ನು ಅಳವಡಿಸಿಕೊಡಬೇಕಾಗಿ ತಪ್ಪಿದಲ್ಲಿ ದಿನಕ್ಕೆ ೧೫೦ ರೂ. ನಂತೆ ಓಡಾಟದ ಖರ್ಚಾಗಿ ಹೊಸ ಬ್ಯಾಟರಿಯನ್ನು ಅಳವಡಿಸಿ ಸ್ಕೂಟರ್‌ನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡುವವರೆಗೂ ನೀಡಬೇಕೆಂದು ಹಾಗೂ ರೂ.೧೫೦೦೦ ಗಳನ್ನು ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಪಾವತಿಸಬೇಕೆಂದು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.
Jawahar Navodaya Vidyalaya ಗಾಜನೂರು ನವೋದಯ ಶಾಲೆಗೆ ಆರನೇ ತರಗತಿ ಪ್ರವೇಶಾತಿ ಪರೀಕ್ಷೆಯ ದಿನಾಂಕ ಮುಂದೂಡಿಕೆ
Jawahar Navodaya Vidyalaya ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2025-26ನೇ ಸಾಲಿಗೆ ಆರನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆ.23ರವರೆಗೆ ಮುಂದೂಡಲಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವೆಬ್‌ಸೈಟ್ https://navodaya.gov.in ಮೂಲಕ ಅರ್ಜಿ ಸಲ್ಲಿಸುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
