Sunday, March 29, 2026
Sunday, March 29, 2026
Home Blog Page 556

SPSS PU College ಪಠ್ಯಗಳ ಬಗ್ಗೆ ವಿಧ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡಲ್ಲಿ ಯಾವ ವಿಷಯವೂ ಕಷ್ಟಕರವಲ್ಲ : ಪೋ.ಎಂ.ಪಿ. ರುದ್ರಪ್ಪ

0

SPSS PU College ಮಕ್ಕಳು ವಿಜ್ಞಾನ ವಿಷಯ ಅಭ್ಯಾಸ ಮಾಡಬೇಕೆಂದು ಬಹುತೇಕ ಪೋಷಕರ ಅಭಿಲಾಷೆ ಆದರೆ ವಿದ್ಯಾರ್ಥಿಗಳು ವಿಜ್ಞಾನ ಗಣಿತಗಳು ಕಷ್ಟ ಎಂದುಕೊಳ್ಳುತ್ತಾರೆ, ಆಸಕ್ತಿ ಬೆಳೆಸಿಕೊಂಡಲ್ಲಿ ಇವು ಎಂದೂ ಕಷ್ಟಕರವಲ್ಲ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಂಪಿ ರುದ್ರಪ್ಪ ಹೇಳಿದರು.

ಅವರಿಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಒಂದು ಮನೆ ನಡೆಸುವುದಕ್ಕಿಂತ ಒಂದು ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರ, ಅಧ್ಯಾಪಕರು ವೇತನಕ್ಕಿಂತ ಆತ್ಮ ಸಂತೋಷಕ್ಕೆ ಪ್ರಾಧಾನ್ಯತೆ ನೀಡಿ ಪಾಠ ಮಾಡಬೇಕು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬವೆಂದು ಸ್ವೀಕರಿಸಿದರಲ್ಲಿ ಭಯ ಆತಂಕ ಇರುವುದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಹರಪನಹಳ್ಳಿಯ ಎ ಡಿ ಬಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎ ಎಂ ರಾಜಶೇಖರಯ್ಯ ಮಾತನಾಡಿ ಅತಿಯಾದ ಮೊಬೈಲ್ ಮೋಹವು ಸಾಧನೆಗೆ ಅಡ್ಡಿಯಾಗಬಹುದು, ವಿಜ್ಞಾನ ತಂತ್ರಜ್ಞಾನಗಳು ಜೀವನ ಸುಗಮಗೊಳಿಸಬೇಕೇ ಹೊರತು ಜೀವನ ಸಮಾಧಾನಗಳನ್ನು ನಾಶ ಮಾಡಬಾರದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿಕೊಳ್ಳಬೇಕು ಆಗ ಉತ್ತರವು ಸುಲಭವಾಗಿ ಹೊಳೆಯುತ್ತದೆ ಎಂದರಲ್ಲದೇ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು ಯಾವುದೇ ಸಾಧನೆಗೂ ಇದು ಕಡಿಮೆಯೇನಲ್ಲ ಎಂದರು.

SPSS PU College ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ ಜಿ ಸಾಯಿ ವಿಶೇಷ ಆಹ್ವಾನಿತರಾಗಿದ್ದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಉಮೇಶ್ ರವರು ವಿದ್ಯಾರ್ಥಿಗಳು ಸಾಧನೆಯ ಸಂಕಲ್ಪ ಮಾಡಬೇಕು, ಶೈಕ್ಷಣಿಕ ಸಾಧನೆಯೇ ವಿದ್ಯಾರ್ಥಿಗಳು ಗುರುಗಳಿಗೆ ಕೊಡುವ ಗುರುದಕ್ಷಿಣೆ ಎಂದರು.

ಅಧ್ಯಾಪಕ ವರ್ಗದ ಎಲ್ ಎಸ್ ಶರ್ಮಿಳಾ, ಕೆ ಸಿ ವಿಜಯಕುಮಾರ್, ಬಿ ಎಂ ಶಿವಕುಮಾರ್, ಕೆ ಸಿ ಶಿವಶಂಕರ್, ಶ್ರುತಿ, ಚೇತನ್ ಹೆಚ್ ಜಿ, ಗಗನ ಟಿ ಎಂ, ರಾಜೇಶ್ವರಿ, ವಿದ್ಯಾರ್ಥಿ ಸಂಘದ ವಿಶ್ವನಾಥ್, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದು ನಿರೂಪಣೆಯನ್ನು ಮೇಘ ಎ ಆರ್, ಅಕ್ಷತಾ ಮಾಡಿದರೆ ಪ್ರಾರ್ಥನೆಯನ್ನು ದರ್ಶನ್ ಆರ್ ಹಾಡಿದರು.

ಎಸ್ ಮೇಘನಾ ಸ್ವಾಗತ ಕೋರಿದರು. ಅತಿಥಿಗಳ ಪರಿಚಯವನ್ನು ವನಿತಾ, ಸುವಿಧಾ ಮಾಡಿದರೆ ಪ್ರತಿಭಾ ಪುರಸ್ಕಾರವನ್ನು ಉಪನ್ಯಾಸಕ ಕೆ ಸಿ ಶಿವಶಂಕರ್ ನೆರವೇರಿಸಿದರು. ರೀತು ವಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

-ಚಿತ್ರ ಹಾಗೂ ವರದಿ ಡಾ. ಹೆಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-

GM Institute of Technology ರಾಷ್ಟ್ರ ನಿರ್ಮಾಣದ ಗುರುತರ ಹೊಣೆಗಾರಿಕೆ ಭಾರತದ ಇಂಜಿನಿಯರ್ ಪದವೀಧರರ ಮೇಲಿದೆ: ಎಚ್.ಬಿ.ಮಂಜುನಾಥ

0

GM Institute of Technology ರಾಷ್ಟ್ರ ನಿರ್ಮಾಣದ ಗುರುತರ ಹೊಣೆಗಾರಿಕೆಯು ಭಾರತದ ಇಂಜಿನಿಯರಿಂಗ್ ಪದವೀಧರರ ಮೇಲಿದ್ದು ಕೇವಲ ಉದ್ಯೋಗ ಪ್ರಾಪ್ತಿಗಷ್ಟೇ ಗುರಿಯನ್ನು ಕೇಂದ್ರೀಕರಿಸಬೇಡಿ ಎಂದು ನೂತನ ವಿದ್ಯಾರ್ಥಿಗಳಿಗೆ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು.

ಅವರು ಜಿ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ವಿದ್ಯಾರ್ಥಿಗಳ ಪೀಠಿಕಾ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಸ್ಕೃತಿ, ಪರಂಪರೆ, ಶೈಕ್ಷಣಿಕ ಶಿಸ್ತು’ ವಿಷಯವಾಗಿ ಮಾತನಾಡುತ್ತಾ ದೇಶದ ಸುಮಾರು 8876 ತಾಂತ್ರಿಕ ಕಾಲೇಜುಗಳಿಂದ ವಾರ್ಷಿಕ ಸುಮಾರು 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿದ್ದು ಇವರಲ್ಲಿ ಶೇಕಡ ಹತ್ತರಷ್ಟು ಪದವೀಧರರು ವಿನೂತನ ಚಿಂತನೆಗಳಿಂದ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದರೂ ಸಾಕು ನಮ್ಮ ಜಿ ಡಿ ಪಿ ಯು ಗರಿಷ್ಠ ಮಟ್ಟ ತಲುಪುತ್ತದೆ.

GM Institute of Technology ರಾಷ್ಟ್ರಾಭಿಮಾನ ಬೆಳೆಸಿಕೊಂಡರೆ ಇದನ್ನು ಸಾಧಿಸಬಹುದು. ಇದಕ್ಕಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವಿಶೇಷತೆಯನ್ನು ಅರಿತುಕೊಳ್ಳಬೇಕು, ವಿದ್ಯಾರ್ಥಿ ದೆಸೆಯಲ್ಲಿ ಶೈಕ್ಷಣಿಕ ಶಿಸ್ತು ಪಾಲಿಸಿದಲ್ಲಿ ಇವೆಲ್ಲವೂ ಸಾಧ್ಯ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು. ಅಧ್ಯಾಪಕ ವರ್ಗದ ಡಾ. ಓಂಕಾರಪ್ಪ, ಮೇಘ ಹಿರೇಮಠ, ಸುಮಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.

Klive Special Article ನವಜಾತ ಶಿಶುಗಳ ‘ಅಮೃತಧಾರೆ’ ತಾಯಿ ಎದೆ ಹಾಲಿನ ಕೇಂದ್ರ

0


Klive Special Article ನವಜಾತ ಶಿಶುಗಳಿಗೆ ಅಮೃತವಾಗಿರುವ ತಾಯಿ ಎದೆ ಹಾಲು ಒದಗಿಸುವ ‘ಅಮೃತಧಾರೆ’ ಎದೆಹಾಲಿನ ಬ್ಯಾಂಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದು ಜಿಲ್ಲೆಯ ಮತ್ತು ಸುತ್ತಮುತ್ತಲ ಜಿಲ್ಲೆಯ ಎದೆಹಾಲು ವಂಚಿತ ಶಿಶುಗಳಿಗೆ ಮರುಜೀವ ಲಭಿಸಿದಂತಾಗಿದೆ.
ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತವಾಗಿರುತ್ತದೆ, ಇದು ಶಿಶುಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನೆಲ್ಲ ಒಸಗಿಸಿ, ಶಿಶುಗಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಆರೋಗ್ಯವಾಗಿರುತ್ತದೆ. ಆದರೆ ಕೆಲವೂಮ್ಮೆ ತಾಯಿಯ ಆರೋಗ್ಯ ಅಥಾವ ಶಿಶುವಿನ ಆರೋಗ್ಯ ಸಮಸ್ಯೆಯಿಂದ ಅನೇಕ ಶಿಶುಗಳು ಹುಟ್ಟುತ್ತಲೇ ಈ ಅಮೃತದಿಂದ ವಂಚಿತರಾಗಿರುತ್ತಾರೆ. ಇಂತಹ ಸಂಧರ್ಭದಲ್ಲಿ ನವಜಾತ ಶಿಶಿಗಳಿಗೆ ತೊಂದರೆ ಉಂಟಾಗುತ್ತದೆ.

ಆದ್ದರಿಂದ ಮಗುವಿನ ತಾಯಿಯಿಂದಲೇ ಅಥವಾ ಬೇರೆ ತಾಯಿಯಿಂದ ಹಾಲನ್ನು ದಾನವಾಗಿ ಪಡೆದು ಪಾಶ್ಚಕರಿಸಿ ಶಿಶುಗಳಿಗೆ ನೀಡುವ ಹೊಸ ಯೋಜನೆ ಅಮೃತಧಾರೆ.

Klive Special Article ಮಲೆನಾಡು ಭಾಗದಲ್ಲಿ ನಿರ್ಮಿಸಿರುವ ಮೊದಲನೇಯ ಹಾಗೂ ರಾಜ್ಯದ ಮೂರನೇಯದಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ಅಗತ್ಯವಿರುವ ಶಿಶುಗಳಿಗೆ ಪಾಶ್ಚರೀಕರಿಸಿದ ತಾಯಿಯ ಹಾಲನ್ನು ಒದಗಿಸಲು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ತಾಯಿ ಹಾಲಿನ ಬ್ಯಾಂಕ್
ಅಮೃತದಾರೆಯನ್ನು ಸ್ಥಾಪನೆ ಮಾಡಲಾಗಿದೆ.

ಶಿವಮೊಗ್ಗ ಅಮೃತಧಾರೆಯಲ್ಲಿ ಮೇ ಮಾಹೆಯಿಂದ ಜುಲೈವರೆಗೆ 376 ತಾಯಂದಿರು ಹಾಲನ್ನು ದಾನ ಮಾಡಿದ್ದಾರೆ. ಒಟ್ಟು 127 ನವಜಾತ ಶಿಶುಗಳಿಗೆ ಹಾಲನ್ನು ನೀಡಿ ಪೋಷಿಸಲಾಗಿದೆ. ಹಾಲನ್ನು ಪಾಶ್ಚರೀಕರಿಸಿದ ಬಳಿಕ 6 ತಿಂಗಳವರೆಗೆ ಅದನ್ನು ಬಳಸಬಹುದಾಗಿದೆ.

ದಾನಿಗಳು ನೀಡಿದ ಹಾಲನ್ನು ಮಗುವಿನ ತಾಯಿಯ ಒಪ್ಪಿಗೆ ಮೇರೆಗೆ ನೀಡಲಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಯಿತು.

ತೃತೀಯ ಆರೈಕೆ ಸೌಲಭ್ಯಗಳಲ್ಲಿ ನೆಲೆಗೊಂಡಿರುವ ಎಸ್‌ಎನ್‌ಸಿಯುಗಳು ಮತ್ತು ನವಜಾತ ತೀವ್ರ ನಿಗಾ ಘಟಕಗಳಲ್ಲಿ ವಿಶೇಷ ಆರೈಕೆಯ ಸುಧಾರಿತ ಪ್ರವೇಶದ ಹೊರತಾಗಿಯೂ, ಅನಾರೋಗ್ಯ ಮತ್ತು ಅಕಾಲಿಕ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಗಮನಾರ್ಹ ಅಂತರವಿದೆ.

ಎಲ್ಲಾ ನವಜಾತ ಶಿಶುಗಳು ಮತ್ತು ಶಿಶುಗಳು ಕೇವಲ ತಾಯಿ ಹಾಲನ್ನು ಮಾತ್ರ sಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸೌಲಭ್ಯಗಳಲ್ಲಿ ಸೂಕ್ತವಾದ ಸ್ತನ್ಯಪಾನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಈ ಅಂತರದ ಹೆಚ್ಚಿನ ಭಾಗವನ್ನು ನಿವಾರಿಸಬಹುದು.

ತಾಯಿ ಹಾಲು ಅತ್ಯುತ್ತಮ ಪೋಷಣೆಯನ್ನು ಒದಗಿಸುತ್ತದೆ, ಸಾಮಾನ್ಯ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ನರ-ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪ್ರಭಾವದ ಜೊತೆಗೆ ಅನಾರೋಗ್ಯ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. ಏಕೆಂದರೆ ಇದು ನವಜಾತ ಶಿಶುವಿನ ಎಲ್ಲಾ ಅಗತ್ಯಗಳನ್ನು, ಅತ್ಯುತ್ತಮ ಪೋಷಣೆ ಮತ್ತು ರಕ್ಷಣಾತ್ಮಕ ಸೋಂಕು ನಿವಾರಕ ವಸ್ತುಗಳನ್ನು ಒದಗಿಸುತ್ತದೆ. ಆದರೆ ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಹಾಲನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ಶಿಶುಗಳ ಸುಧಾರಿತ ಬದುಕುಳಿಯುವಿಕೆ ಮತ್ತು ಯೋಗಕ್ಷೇಮಕ್ಕಾಗಿ ಆರೋಗ್ಯ ಸೌಲಭ್ಯಗಳಲ್ಲಿ ದಾಖಲಾದ ಎಲ್ಲಾ ಶಿಶುಗಳಿಗೆ ಸುರಕ್ಷಿತ ಎದೆಹಾಲು ನಿರಂತರ ಪೂರೈಕೆಯ ಅವಶ್ಯಕತೆಯಿದೆ. ಅಮೃತಧಾರೆ ತಾಯಿ ಹಾಲಿನ ಬ್ಯಾಂಕ್‌ನಿಂದ ತಾಯಂದಿರಿಂದ ನೈಸರ್ಗಿಕ ಹಾಲುಣಿಸುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಚರೈಸ್ ಮಾಡಿದ ಎದೆಹಾಲನ್ನು ಒದಗಿಸುವ ಪ್ರಯತ್ನವಾಗಿದೆ.

ಹ್ಯೂಮನ್ ಮಿಲ್ಕ್ ಬ್ಯಾಂಕ್ ಎನ್ನುವುದು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಆಸ್ಪತ್ರೆಯ ವಾಸ, ಸುಧಾರಿತ ಬದುಕುಳಿಯುವ ಫಲಿತಾಂಶ, ಕಡಿಮೆ ಸೋಂಕಿನ ದರಗಳನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಿರುವ ನವೀನ ತಂತ್ರವಾಗಿದೆ.

ಮಗುವಿನ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ತಾಯಿ ಹಾಲಿನ ಕೊಡುಗೆಯು ಅಪಾರವಾಗಿರುವ ಕಾರಣ ಹಾಲಿನ ಬ್ಯಾಂಕ್ ತೆರೆಯಲು ವಿಶಿಷ್ಟ ಪ್ರೇರೇಪಣೆ ದೊರೆತಿದೆ.
ಭಾರತದಲ್ಲಿ ಪ್ರತಿ ವರ್ಷ 27 ಮಿಲಿಯನ್ ಶಿಶುಗಳು ಜನಿಸುತ್ತವೆ. ಅದರಲ್ಲಿ 3.5 ಮಿಲಿಯನ್ ಅವಧಿಪೂರ್ವ ಮತ್ತು 7.5 ಮಿಲಿಯನ್ ಕಡಿಮೆ ತೂಕ ಹೊಂದಿದ ಶಿಶುವಗಳ ಜನನವಾಗಿದೆ. ಭಾರತದಲ್ಲಿ ಸುಮಾರು ಶೇ. 47 ರಷ್ಟು ಶಿಶುಗಳು ಅವಧಿಪೂರ್ವವಾಗಿ ಜನಿಸಿದ ಮಕ್ಕಳಾಗಿರುತ್ತವೆ.

ಕರ್ನಾಟಕವು ಸುಮಾರು 23% ರಷ್ಟು ಅವಧಿಪೂರ್ವ ಜನನ ಪ್ರಮಾಣವನ್ನು ಹೊಂದಿದೆ. ಪ್ರಸವಪೂರ್ವ ಮತ್ತು ಕಡಿಮೆ ತೂಕದ ಶಿಶುಗಳು 28 ದಿನಗಳಲ್ಲಿ ನವಜಾತ ಶಿಶುಗಳ ಮರಣದ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ಒಟ್ಟಾರೆ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಪೌಷ್ಠಿಕಾಂಶ ವಿಧಾನದ ಅಗತ್ಯವಿದೆ. ಈ ಎಲ್ಲಾ ಶಿಶುಗಳು ಬದುಕುಳಿಯುವಿಕೆ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ದುರ್ಬಲವಾಗಿರುತ್ತವೆ. ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಆಹಾರ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಈ ನವಜಾತ ಶಿಶುಗಳ ಬೆಳವಣಿಗೆಗೆ ಮತ್ತು ಪೋಷಣೆಯನ್ನು ಮಾಡಲು ಶಿಶುಗಳಿಗೆ ನೇರ ಹಾಲುಣಿಸುವಿಕೆಯು ಸಾಧ್ಯವಾಗುವುದಿಲ್ಲ. ಹಾಗಾಗಿ ಅದೇ ಜೈವಿಕ ತಾಯಿಯಿಂದ ಅಥಾವ ದಾನ ಮಾಡಿ ತಾಯಿಯ ಎದೆ ಹಾಲನ್ನು ಪಾಶ್ಚರೀಕರಿಸಿ ಶಿಶುವಿಗೆ ನೀಡಿ ಆರೈಕೆ ಮಾಡಲಾಗುತ್ತದೆ.

ದುರ್ಬಲ ಶಿಶುಗಳಿಗೆ ಡಿಹೆಚ್‌ಎಂ(ಡೋನರ್ ಹ್ಯೂಮನ್ ಮಿಲ್ಕ್) ನಿಂದ ಪ್ರಯೋಜನಗಳು ಸಾಕಷ್ಟಿವೆ ಎಂದು ಜಾಗತಿಕ ಪುರಾವೆಗಳು ಹೇಳುತ್ತವೆ.

ಯಾರು ಎದೆಹಾಲು ದಾನ ಮಾಡಬಹುದು:
ಹಾಲುಣಿಸುವ ಮಹಿಳೆ ತನ್ನ ಹೆಚ್ಚುವರಿ ಎಕ್ಸ್ಪ್ರೆಸ್ಡ್ ಸ್ತನ ಹಾಲು (ಇಃಒ) ದಾನ ಮಾಡಲು ಸಿದ್ಧರಿದ್ದರೆ ಅವರು ಸಂಭಾವ್ಯ ದಾನಿಯಾಗಿದ್ದಾರೆ. ಹಿಂದಿನ ಮತ್ತು ದೈಹಿಕ ಪರೀಕ್ಷೆಯಿಂದ ಖಚಿತವಾದಂತೆ ಉತ್ತಮ ಆರೋಗ್ಯ ಹೊಂದಿದ ತಾಯಂದಿರು ದಾನ ಮಾಡಬಹುದು. ತಮ್ಮ ಸ್ವಂತ ಶಿಶುಗಳಿಗೆ ಸಮರ್ಪಕವಾಗಿ ಹಾಲುಣಿಸಿದ ನಂತರ ಹೆಚ್ಚುವರಿ ಹಾಲನ್ನು ಸ್ರವಿಸುವ ತಾಯಂದಿರು ದಾನ ಮಾಡಬಹುದು.

ಎದೆಹಾಲು ದಾನವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.
ಅಮೃತಧಾರೆ ಕೇಂದ್ರದ ಉಪಯೋಗಗಳು
ತಾಯಿಯ ಎದೆ ಹಾಲನ್ನು ದುರ್ಬಲ, ಕಡಿಮೆ ಜನನ ತೂಕದ ಶಿಶುಗಳಿಗೆ ನೀಡಿದಾಗ ಸೆಪ್ಸಿಸ್ ಅಪಾಯವನ್ನು 19% ರಷ್ಟು ಕಡಿಮೆ ಮಾಡುತ್ತವೆ. ಮಾನವ ಹಾಲು ಆಹಾರ, ಸೂತ್ರವನ್ನು ತಪ್ಪಿಸಿದಾಗ 79% ರಷ್ಟು ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್ ಅನ್ನು ಕಡಿಮೆ ಮಾಡುತ್ತದೆ. ಹಲವಾರು ರೀತಿಯಲ್ಲಿ ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಿದ್ದು ಎನ್‌ಐಸಿಯು ನಲ್ಲಿ ಮಗು ಉಳಿಯುವ ಅವಧಿಯನ್ನು ಕಡಿಮೆ ಮಾಡಿದೆ.
ಹಾಗೂ ವೆಚ್ಚ ಉಳಿತಾಯ ವಿಧಾನವಾಗಿದೆ. ತಾಯಿ ಹಾಲು ಫೀಡಿಂಗ್ ಉತ್ತಮ ನ್ಯೂರೋ ಡೆವಲಪ್‌ಮೆಂಟಲ್ ಫಲಿತಾಂಶ, ಉತ್ತಮ ಐಕ್ಯು ಸ್ಕೋರ್‌ಗಳು ಮತ್ತು ಇತರ ದೀರ್ಘಾವಧಿ ಪ್ರಯೋಜನಗಳನ್ನು ಹೊಂದಿದೆ.

ಯಾರಿಗೆ ನೀಡಲಾಗುತ್ತದೆ
ಅವಧಿಪೂರ್ವ ಹಾಗೂ ಕಡಿಮೆ ತೂಕದ ಶಿಶುಗಳಿಗೆ ಈ ಎದೆಹಾಲು ಉಪಯಕ್ತವಾಗಿದೆ. ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್ ಅಥವಾ ಜಠರಗರುಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಅನಾರೋಗ್ಯದ ನವಜಾತ ಶಿಶುಗಳು, ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆಹಾರವನ್ನು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರು, ಪರಿತ್ಯಕ್ತ ಶಿಶುಗಳು ಮತ್ತು ತಾಯಿ ಇಲ್ಲದ ಶಿಶುಗಳಿಗೆ ಅಮೃತಧಾರೆ ಹೆಚ್ಚು ಉಪಯುಕ್ತವಾಗಿದೆ.

ಅಮೃತಧಾರೆಯಿಂದ ನವಜಾತ ಶಿಶುಗಳಿಗೆ ಹೆಚ್ಚು ಅನೂಕೂಲ ಆಗುತ್ತದೆ. ಈ ಯೋಜನೆಗೂ ಮುನ್ನ ಶಿಶುವಿಗೆ ಪೌಡರ್ ಹಾಲನ್ನು ನೀಡಲಾಗುತ್ತಿತ್ತು, ಈ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾದರೆ ಅದನ್ನು ಸಹ ತಡೆಯಬುದಾಗಿದೆ. ಎದೆ ಹಾಲಿನ ಸೇವನೆಯಿಂದ ಶಿಶುಗಳ ದೀರ್ಘಕಾಲೀನ ನರ-ಅಭಿವೃದ್ಧಿ ಬೆಳವಣಿಗೆಯನ್ನು ಒದಗಿಸುತ್ತದೆ ಎಂಬುದು ಸಾಬೀತಾಗಿದೆ.

8.3 ಐಕ್ಯೂ ಪಾಯಿಂಟ್‌ಗಳ ಪ್ರಯೋಜನ ಮತ್ತು ಸುಧಾರಿತ ಫಲಿತಾಂಶಗಳು ಲಭ್ಯವಾಗಿದೆ. ಹೀಗಾಗಿ ನವಜಾತ ಬದುಕುಳಿಯುವ ಮತ್ತು ಗುಣಮಟ್ಟದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ರೂ. 75 ಲಕ್ಷ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ಇದನ್ನು ಸ್ಥಾಪಿಸಲಾಗಿದೆ. ಈ ತಾಯಿಯ ಎದೆ ಹಾಲು ಕೇಂದ್ರ ನಮ್ಮ ಮಲೆನಾಡು ಭಾಗದ 5 ಜಿಲ್ಲೆಗಳಲ್ಲಿ ಮೊದಲನೆಯದು. ಸಾವಿರಾರು ನವಜಾತ ಶಿಶುಗಳಿಗೆ ಅನುಕೂಲವಾಗಲಿದೆ. ಕಡಿಮೆ ತೂಕ, ತಾಯಿಯ ಮರಣ, ಜನನದಲ್ಲೇ ಕಾಯಿಲೆಯಿರುವ ಮಕ್ಕಳನ್ನು ಐಸಿಯು ನಲ್ಲಿ ಇರಿಸಿಕೊಂಡು, ಅಮೃತಧಾರೆ ಮೂಲಕ ಹಾಲನ್ನು ನೀಡಿ ಪೋಷಿಸಲಾಗುತ್ತದೆ. ಇದು ಫಾರ್ಮೂಲ ಫೀಡ್ ನೀಡುವುದನ್ನು ಮತ್ತು ಅದರಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ. ಆದ್ದರಿಂದ ಮಕ್ಕಳು ಸ್ವಾಭಾವಿಕವಾಗಿ ಬೆಳವಣಿಗೆ ಹೊಂದುತ್ತವೆ. ಶಿಶುಗಳ ಬುದ್ಧಿ ಶಕ್ತಿಯು 8 ರಿಂದ 10 ರಷ್ಟು ಹೆಚ್ಚುತ್ತದೆ ಎಂದು ಡಾ|| ಸಿದ್ಧನಗೌಡ ಪಟೇಲ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮೆಗ್ಗಾನ್ ಆಸ್ಪತ್ರೆ ಇವರು ತಿಳಿಸಿದ್ದಾರೆ.

ಅಮೃತಧಾರೆ ಯೋಜನೆ ನಿಜಕ್ಕೂ ನಮ್ಮ ಮಗುವಿನ ವಿಷಯದಲ್ಲಿ ಅಮೃತದಂತೆ ಕೆಲಸ ಮಾಡುತ್ತಿದೆ. ನನ್ನ ಅನಾರೋಗ್ಯದ ಕಾರಣ ನನ್ನ ಎದೆ ಹಾಲನ್ನು ನನ್ನ ಮಗುವಿಗೆ ನೀಡಲು ಸಾಧ್ಯವಾಗಲಿಲ್ಲ. ಆಗ ಈ ಯೋಜನೆ ಬಗ್ಗೆ ತಿಳಿದು ಅಮೃತಧಾರೆಯಿಂದ ನನ್ನ ಮಗುವಿಗೆ ತಾಯಿ ಹಾಲು ನೀಡಲು ಸಾಧ್ಯವಾಗುತ್ತಿದ್ದು, ನನ್ನ ಮಗು ಆರೋಗ್ಯವಾಗಿದೆ ಎಂದು ಫಲಾನುಭವಿಗಳಾದ
ಸಾವಿತ್ರಿ, ಶಿವಮೊಗ್ಗ ಇವರು ತಿಳಿಸಿದ್ದಾರೆ.

ನನ್ನ ಶಿಶುವು ಅನಾರೋಗ್ಯದಿಂದಾಗಿ ಐಸಿಯುನಲ್ಲಿ ಇದ್ದ ಕಾರಣ ನೇರವಾಗಿ ಹಾಲನ್ನು ನೀಡಲು ಸಾದ್ಯವಾಗುತ್ತಿರಲಿಲ್ಲ, ಆದರೆ ಅಮೃತಧಾರೆ ಮೂಲಕ ಮಗುವಿಗೆ ಎದೆಹಾಲು ನೀಡಲು ಸಹಕಾರಿಯಾಗಿದೆ ಎಂದು ಕವಿತಾ, ಸಾಗರ ಇವರು ಹೇಳಿದ್ದಾರೆ.
ಲೇಖನ :ಮನೋಜ್ ಎಂ
ಅಪ್ರೆAಟಿಸ್,ವಾರ್ತಾ ಇಲಾಖೆ

Karnataka Sahitya Academy ಹಾವೇರಿ ಜಿಲ್ಲೆಯ ಗೊಟಗೋಡಿಯ 3 ದಿನಗಳ ಕಮ್ಮಟ

0

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾವೇರಿ ಜಿಲ್ಲೆಯ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಗಿರಿಜನ ಉಪಯೋಜನೆಯಡಿ ಅಕ್ಟೋಬರ್ ಕೊನೆಯ ವಾರದಲ್ಲಿ “ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು” ಎಂಬ ವಿಷಯದ ಕುರಿತು 3 ದಿನಗಳ ಕಮ್ಮಟವನ್ನು ಹಾವೇರಿ ಜಿಲ್ಲೆಯ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಆಸಕ್ತಿ ಇರುವ 20 ರಿಂದ 45 ವರ್ಷ ವಯಸ್ಸಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯ ಎಲ್ಲಾ ಭಾಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅಕಾಡೆಮಿ ವೆಬ್‌ಸೈಟ್ http://karnatakasahithyaacademy.org ರಿಂದ ಅರ್ಜಿ ನಮೂನೆಯನ್ನು ಪಡೆದು, ಅ.08ರೊಳಗಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ತಿಳಿಸಿದ್ದಾರೆ.

Karnataka Sahitya Academy ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-22211730/22106460 ಅಥವಾ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದು.

Youth Empowerment and Sports ದಸರಾ ಹಿನ್ನೆಲೆ ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ

0

Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.23 ಮತ್ತು 24 ರಂದು ಬೆಳಗ್ಗೆ 9.30ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸೆ. 23 ರಂದು ಬೆಳಗ್ಗೆ 10.00ಕ್ಕೆ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಬ್ಯಾಸ್ಕೆಟ್‌ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ ಮತ್ತು ಆಯ್ಕೆಯ ಕ್ರೀಡೆಗಳು ಟೆನ್ನಿಸ್, ನೆಟ್‌ಬಾಲ್, ಈಜು ಕ್ರೀಡೆಗಳನ್ನು ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವೀತಿಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

Youth Empowerment and Sports ಅರ್ಹತೆ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಕೂಟ ನಡೆಯುವ ದಿನಾಂಕದಂದು ಬೆಳಗ್ಗೆ 10.00 ರೊಳಗಾಗಿ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ಹೆಸರನ್ನು ನೋಂದಾಯಿಸಿಕೊಳ್ಳುವುದು. ತಾಲೂಕುಗಳಿಂದ ಭಾಗವಹಿಸುವ ತಾಲೂಕು ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗಕ್ಕೆ ಬಂದುಹೋಗುವ ಸಾಮಾನ್ಯ ಪ್ರಯಾಣಭತ್ಯೆ ನೀಡಲಿದ್ದು ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ, ಕ್ರೀಡಾಪಟುಗಳು ಆಧಾರ್‌ಕಾರ್ಡ್ ಕಡ್ಡಾಯ ತರಬೇಕು. ಯಾವುದೇ ತಂಡ/ಸ್ಪರ್ಧಿ ಸಂಘಟಕರ/ತೀರ್ಪುಗಾರರ ವಿರುದ್ಧ ಪ್ರತಿಭಟನೆ ಮಾಡಿದರೆ ಅಂತಹ ತಂಡ/ಸ್ಪರ್ಧಿಯನ್ನು ಕ್ರೀಡಾಕೂಟದಿಂದ ನಿಷೇಧಿಸಲಾಗುವುದು. ಯಾವುದೇ ತಂಡ ತೀರ್ಪಿನ ಬಗ್ಗೆ ಅಥವಾ ಸ್ಪರ್ಧೆಗೆ ಸಂಬಂಧಿಸಿ ಯಾವುದೇ ವಿಚಾರಗಳಿಗೆ ಮೇಲ್ಮನವಿಯನ್ನು ರೂ.500/- ಶುಲ್ಕದೊಂದಿಗೆ ಕ್ರೀಡಾ ಸಂಘಟನಾ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಾಹಿತಿಗಾಗಿ ಇಲಾಖೆಯ ದೂ.ಸಂ.: 08182-223328 ನ್ನು ಸಂಪರ್ಕಿಸಬಹುದು.

Rotary Club Shivamogga ಎಸ್.ರಂಗಣ್ಣ ನಿಧನಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಸಂತಾಪ

0

Rotary Club Shivamogga ಮಹಾನಗರ ಪಾಲಿಕೆ ಮಾಜಿ ಉಪಮೇಯರ್, ರೋಟರಿಯನ್ ಸುರೇಖಾ ಮುರಳೀಧರ್ ಅವರ ತಂದೆ ಎಸ್.ರಂಗಣ್ಣ ( 89) ಗುರುವಾರ ನಿಧನರಾದರು. ಮೂವರು ಪುತ್ರರು ಹಾಗೂ ಪುತ್ರಿ ಸುರೇಖಾ ಮುರಳೀಧರ್ ಇದ್ದಾರೆ. ರಂಗಣ್ಣ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಗುರುವಾರ ಸಂಜೆ ಜಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು. ರಂಗಣ್ಣ ಅವರ ನಿಧನಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂತಾಪ ಸೂಚಿಸಿದೆ.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್, ಕಾರ್ಯದರ್ಶಿ ಈಶ್ವರ್, ವಲಯ ಹನ್ನೊಂದರ ಅಸಿಸ್ಟೆಂಟ್ Rotary Club Shivamogga ಗವರ್ನರ್ ಎಚ್.ಎಂ.ಸುರೇಶ್, ಜಿಲ್ಲಾ ಗವರ್ನರ್ ದೇವಾನಂದ್, ಜಿ. ವಿಜಯಕುಮಾರ್, ಜಿ.ಎನ್.ಪ್ರಕಾಶ್, ರವಿ ಕೋಟೋಜಿ, ಚೂಡಾಮಣಿ ಪವಾರ್, ಧರ್ಮೇಂದ್ರ ಸಿಂಗ್, ಬಸವರಾಜ್, ಜಯಶೀಲಶೆಟ್ಟಿ ಅರುಣ್, ರಮೇಶ್, ಸಂತೋಷ್, ಬಲರಾಮ್ ಕುಮಾರ್, ಆನಂದ್, ರಮನಾಥ್ ಗಿರಿಮಾಜಿ, ಗಣೇಶ್ ಅಂಗಡಿ, ಗಿರೀಶ್, ಗೀತಾ ಜಗದೀಶ್, ಶುಭಾ ಚಿದಾನಂದ್ ಮತ್ತು ರೋಟರಿ ಕ್ಲಬ್ ಸೆಂಟ್ರಲ್ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Ministry of Minority Affairs ರಾಜ್ಯದ 15 ಜಿಲ್ಲೆಯಲ್ಲಿ ವಕ್ಫ್ ಬೋರ್ಡಿನಿಂದ ಮಹಿಳಾ ಪಿಯು ಕಾಲೇಜು ಸ್ಥಾಪನೆ

0

Ministry of Minority Affairs ಕರ್ನಾಟಕ ವಕ್ಪ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆ ಗೆ ವಿಶೇಷ ಸಂಪುಟ ಸಭೆ ಯಲ್ಲಿ ಅನುಮೋದನೆ ದೊರೆತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 47.76 ಕೋಟಿ ರೂ. ವೆಚ್ಚದಲ್ಲಿ 15 ಮಹಿಳಾ. ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ. ಪ್ರತಿ ಕಾಲೇಜಿಗೆ 3.18 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

Ministry of Minority Affairs ಎಲ್ಲೆಲ್ಲಾ ಕಾಲೇಜು ನಿರ್ಮಾಣ?ವಕ್ಫ್ ಬೋರ್ಡ್ ನಲ್ಲಿ ಜಮೆ ಆಗಿರುವ ಬಡ್ಡಿ ಮೊತ್ತ 47.76 ಕೋಟಿ ರೂ. ನಲ್ಲಿ ಬಾಗಲಕೋಟೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಕೊಪ್ಪಳ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ವಿಜಯ ನಗರ, ಕಲಬುರಗಿ, ಉಡುಪಿ, ವಿಜಯಪುರ, ಕೋಲಾರ, ದಾವಣಗೆರೆ ಹಾಗೂ ಧಾರವಾಡ ದಲ್ಲಿ ಮಹಿಳಾ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.ಮಹಿಳಾ ಕಾಲೇಜು ಸ್ಥಾಪನೆಯಿಂದ ಸಮುದಾಯಕ್ಕೆ ಉನ್ನತ ಶಿಕ್ಷಣ ಇದರ ಜತೆಗೆ, ಕರ್ನಾಟಕ ಗೃಹ ಮಂಡಳಿ ವತಿಯಿಂದ 50:50 ಅನುಪಾತದಲ್ಲಿ ಕಲಬುರಗಿಯ ತಾವರೆಗೆರೆ ಯಲ್ಲಿ 80ಕೋಟಿ ರೂ. ವೆಚ್ಚದಲ್ಲಿ ಒಟ್ಟು 286.28 ಎಕರೆ ಪೈಕಿ ಮೊದಲ ಹಂತದಲ್ಲಿ 87.34 ಎಕರೆ ಜಮೀನಿನಲ್ಲಿ ಹೊಸ ಬಡಾವಣೆ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು

D. Kempanna ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನಿಧನ

0

D. Kempanna ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಗಂಭೀರ ಆರೋಪ ಮಾಡಿದ್ದ ‘ರಾಜ್ಯ ಗುತ್ತಿಗೆದಾರರ ಸಂಘ’ದ ಅಧ್ಯಕ್ಷ ಡಿ. ಕೆಂಪಣ್ಣ (84) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಗಂಭೀರ ಆರೋಪ ಮಾಡಿದ್ದ ಕೆಂಪಣ್ಣ ಅವರು, ಹಿಂದಿನ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ದೇಶದಾದ್ಯಂತ ದೊಡ್ಡ ಸುದ್ದಿಯಾಗಿದ್ದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಇತ್ತೀಚೆಗಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸು, ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಇಂದು (ಸೆ.19) ಬೆಳಗ್ಗೆ 10 ಗಂಟೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಡಿ. ಕೆಂಪಣ್ಣ ಅವರು ಹಿಂದಿನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಕೆಂಪಣ್ಣ ಅವರ ಆರೋಪವನ್ನು ಕಾಂಗ್ರೆಸ್‌ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ಬಿಜೆಪಿ ವಿರುದ್ಧ‘ಪೇ ಸಿಎಂ’ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿತ್ತು.

D. Kempanna ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ :

“ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ನಿಧನವಾರ್ತೆ ನೋವುಂಟುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು” ಎಂದು ಸಿಎಂ ಸಿದ್ದರಾಮಯ್ಯ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
“ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದ ನಿರ್ಭೀತ ಧ್ವನಿಯೊಂದನ್ನು ನಾಡು ಇಂದು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಕಲಿ, ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

McGann Hospital ಅಪರಿಚಿತ ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ

0

McGann Hospital ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ಸುಸ್ತಾಗಿ ಮಲಗಿದ್ದ ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಸೆ. 19 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
McGann Hospital ಈ ಮೃತ ವ್ಯಕ್ತಿಯು 05.10 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ದೃಢವಾದ ಮೈಕಟ್ಟು ಹೊಂದಿದ್ದು, ಎದೆಯ ಬಲಭಾಗದ ಮೇಲೆ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ತಿಳಿನೀಲಿ ಬಣ್ಣದ ಕಪ್ಪು ಚುಕ್ಕೆಗಳಿರುವ ಅರ್ಧ ತೋಳಿದ ಶರ್ಟ್, ಪಾಚಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ.: 08182-261414 / 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Good Luck Araike Kendra ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಎಚ್. ಎಸ್. ಸುಂದರೇಶ್ ಅವರ ಹುಟ್ಟುಹಬ್ಬ ಆಚರಣೆ

0

Good Luck Araike Kendra ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿ. ಶಿವಮೊಗ್ಗ ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಗುಡ್ ಲಕ್ ಆರೈಕೆ ಕೇಂದ್ರದ ಆಶ್ರಮ ವಾಸಿಗಳೊಂದಿಗೆ ಕೇಕ್ ವಿತರಿಸಿ. ಆಶ್ರಮ ವಾಸಿಗಳಿಗೆ ಸಾಂತ್ವಾನ ಹೇಳಿ. ಆ ಇಡೀ ದಿನದ ಅನ್ನಪೂರ್ಣೇಶ್ವರಿ ನಿತ್ಯ ಪ್ರಸಾದ ಯೋಜನೆಗೆ ಧನಸಹಾಯ ನೀಡಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು ಇದೇ ಸಂದರ್ಭದಲ್ಲಿ ಮಾತನಾಡುತ್ತಾ ನಮ್ಮ ಹುಟ್ಟುಹಬ್ಬಗಳು ಸಾರ್ಥಕವಾಗಬೇಕಾದರೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಮುಖಾಂತರ ಜನಮಾನಸವನ್ನು ತಲುಪಬೇಕು.

Good Luck Araike Kendra ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಅನಾಥಾಶ್ರಮಗಳಲ್ಲಿ ಏ ಕಾರ್ಯಗಳನ್ನು ಮಾಡುತ್ತಾ ಹಾಗೂ. ಮೊನ್ನೆ ನಡೆದಂತ ಹಿಂದೂ ಮಹಾಸಮ ಗಣಪತಿ ವಿಸರ್ಜನಾ ಸಂದರ್ಭದಲ್ಲಿ ಹತ್ತು ಸಾವಿರ ಜನಕ್ಕೂ ಹೆಚ್ಚು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದ್ದನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ಯು ರವೀಂದ್ರನಾಥ್ ಐತಾಳ್ ಅವರು ಶುಭಾಶಯ ಕೋರಿ ಹಾರೈಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಜಿ ವಿಜಯಕುಮಾರ್ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ. ಸದಾಶಿವಪ್ಪ ರಘುವೀರ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಸ್ನೇಹಿತರು ಉಪಸ್ಥಿತರಿದ್ದರು