Sunday, March 29, 2026
Sunday, March 29, 2026
Home Blog Page 557

World Peace Youth Service Committee Bangalore ಮೂಡಬಿದರೆಯಲ್ಲಿ ಜೈನರಿಂದ ಸೆ,22 ರಂದು ವಿಶ್ವ ದಾಖಲೆ ಕಾರ್ಯಕ್ರಮ

0

World Peace Youth Service Committee Bangalore ವಿಶ್ವಶಾಂತಿ ಯುವ ಸೇವಾ ಸಮಿತಿ ಬೆಂಗಳೂರು ಇವರ ನೇತೃತ್ವದಲ್ಲಿ ವೀಣಾ ರಘುಚಂದ್ರ ಶೆಟ್ಟಿ ಇವರು ರಚಿಸಿರುವ, ಭಗವಾನ್ ಆದಿನಾಥ ಸ್ವಾಮಿಯ ಸಹಸ್ರ ನಾಮಗಳುಳ್ಳಂತಹ ಸಾಂಗತ್ಯ ರೂಪದ ಸ್ತುತಿಯನ್ನು ಅಂದರೆ ಸಾವಿರದೆಂಟು ಪ್ಯಾರಗಳುಳ್ಳ ಈ ಹಾಡನ್ನು ಯಾವುದೇ ವಿರಾಮವಿಲ್ಲದೆ ೧೨ ತಾಸುಗಳ ಕಾಲ ಸುಮಾರು ೨೨೦ ಜನರು ಹಾಡುವುದರ ಮೂಲಕ ವಿಶ್ವದಾಖಲೆ ಮಾಡಲು ಮುಂದಾಗಿದ್ದಾರೆ
World Peace Youth Service Committee Bangalore ಸೆಪ್ಟೆಂಬರ್ ೨೨, ಭಾನುವಾರ ದಂದು ಜೈನಕಾಶಿ ಮೂಡುಬಿದಿರೆಯ, ಕಲ್ಲಬೆಟ್ಟು ಎಕ್ಸೆಲೆಂಟ್ ಕಾಲೇಜಿನಲ್ಲಿ ವಿಶ್ವದಾಖಲೆಯ ಕಾರ್ಯಕ್ರಮ ನಡೆಯಲಿದೆ. ಸಮಯ- ೪ ಗಂಟೆ ಬೆಳಗಿನ ಜಾವದಿಂದ ರಾತ್ರಿ ೯ ಗಂಟೆಯವರೆಗೆ. ಸಂಜೆ ೬ ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಜೈನ ಮಠ ಮೂಡುಬಿದಿರೆ ಇವರ ಸಾನಿಧ್ಯವಿರಲಿದೆ. ಅಧ್ಯಕ್ಷರಾಗಿ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಡಿ ಹರ್ಷೇಂದ್ರಕುಮಾರ್ ಹಾಗೂ ಅವರ ಧರ್ಮಪತ್ನಿ ಸುಪ್ರಿಯಾ ಹರ್ಷೇಂದ್ರಕುಮಾರ್ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಎಕ್ಸೆಲೆಂಟ್ ಕಾಲೇಜು ಮೂಡುಬಿದಿರೆಯ ಸಂಸ್ಥಾಪಕ ಯುವರಾಜ್ ಜೈನ್, ಅವರ ಧರ್ಮಪತ್ನಿ ರಶ್ಮಿತಾ ಜೈನ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಮೂಡುಬಿದಿರೆ ಆಗಮಿಸಲಿದ್ದಾರೆ.
ಜೈನಧರ್ಮವನ್ನು ವಿಶ್ವದೆಲ್ಲೆಡೆ ಸಾರುವ ದಿನ ಅಂದರೆ ಸೆಪ್ಟೆಂಬರ್ ೨೨ ರಂದು ಆಗಮಿಸಿದ ಪ್ರತಿಯೋರ್ವರಿಗೂ ಶುದ್ಧ ಜೈನ ಆಹಾರದ ವ್ಯವಸ್ಥೆ ಇರುತ್ತದೆ. ಜಿನಸಹಸ್ರನಾಮ ಪಠಣೆಯಿಂದ ಇಷ್ಟಾರ್ಥ ಸಿದ್ಧಿ, ಮಾನಸಿಕ ನೆಮ್ಮದಿ, ಪುಣ್ಯಪ್ರಾಪ್ತಿಯಾಗುತ್ತದೆ. ಇಂತ ಸಾವಿರದೆಂಟು ನಾಮಗಳಿಗೂ ಒಂದೊಂದು ಪದ್ಯಗಳ ಮೂಲಕ ಭಕ್ತಿಯ ಸಮರ್ಪಣೆ ಮಾಡುವ ಕಾರ್ಯಕ್ರಮ ಇದಾಗಿದೆ

ಕಚ್ಚಿದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ಯುವಕ

0

ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಹಾವನ್ನು ಹಿಡಿದುಕೊಂಡು ಯುವಕ‌ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದ ಘಟನೆ ಇಂಗಳಗಿ ಗ್ರಾಮದಲ್ಲಿ ನಡೆಯಿತು.

ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಹಾವು ಕಡಿತಕ್ಕೊಳಗಾದವ.
ತಂದೆಯೊಂದಿಗೆ ಶೇಂಗಾ ಕೀಳಲು ಹೋಗಿದ್ದಾಗ ಯುವಕನಿಗೆ ಹಾವು ಕಚ್ಚಿದೆ. ಕೂಡಲೇ ಹಾವಿನ ತಲೆ ಜಜ್ಜಿ ಕೊಂದು ಹಾಕಿದ್ದಾನೆ. ನಂತರ ತಂದೆಯ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಯುವಕನ ತಂದೆ ಈರಪ್ಪ ಅಣ್ಣಿಗೇರಿ ಪ್ರತಿಕ್ರಿಯಿಸಿ, “ಹೊಲದಲ್ಲಿ ಕೆಲಸ ಮಾಡುವಾಗ ಮಗನಿಗೆ ಹಾವು ಕಚ್ಚಿತು. ಕೂಡಲೇ ಹಾವನ್ನು ಜಜ್ಜಿ ಹಾಕಿ ಕೊಂದು ಚೀಲದಲ್ಲಿ ಹಾಕಿಕೊಂಡು ಬಂದು ವೈದ್ಯರಿಗೆ ತೋರಿಸಿದ್ದಾನೆ. ಆಗ ವೈದ್ಯರು ಹೊರ ಹಾಕಲು ಹೇಳಿದರು.

ಅದು ಚಿಣಗೇನ ಹಾವು. ಮಗ ವೈದ್ಯರಿಗೆ ಹಾವನ್ನು ತೋರಿಸಿ, ಇದೇ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ” ಎಂದು ಹೇಳಿದರು.

High Court of Himachal Pradesh ಸರ್ಕಾರಿ ಶಾಲೆಯಲ್ಲೇ ಮಗನ ಮದುವೆ ಮಾಡಿದ ಶಿಕ್ಷಕಿ :ವಿಭಿನ್ನ ಶಿಕ್ಷೆ ನೀಡಿದ ಹಿಮಾಚಲ ಪ್ರದೇಶ ಹೈಕೋರ್ಟ್

0

High Court of Himachal Pradesh ಹಿಂದಿನ ದಿನಗಳಲ್ಲಿ ಮನೆ ಮುಂಭಾಗದಲ್ಲೇ ಚಪ್ಪರ ಹಾಕಿ ಮದುವೆ ಸಮಾರಂಭವನ್ನ ನೆರವೇರಿಸುತ್ತಿದ್ದರು. ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳನ್ನ ಚೌಟ್ರಿಗಳಲ್ಲಿ ಕಲ್ಯಾಣ ಮಂಟಪಗಳಲ್ಲಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಮಗನ ಮದುವೆಯನ್ನ ಸರ್ಕಾರಿ ಶಾಲೆ ಆವರಣದಲ್ಲಿ ನೆರವೇರಿಸಿ ಇದೀಗ ಹೈಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದ ಹಮೀಪುರ ಜಿಲ್ಲೆಯ ಸುಲ್ಯಾಂವ್ ಗ್ರಾಮದಲ್ಲಿ. ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ತನ್ನ ಮಗನ ಮದುವೆಯನ್ನು ಆಯೋಜಿಸಿದ ಶಿಕ್ಷಕಿಗೆ ವಿಚಿತ್ರ ಶಿಕ್ಷೆಯನ್ನು ನೀಡುವ ಮೂಲಕ ಹಿಮಾಚಲ ಪ್ರದೇಶ ಹೈಕೋರ್ಟ್ ಗಮನ ಸೆಳೆದಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್ನ ಅಜಯ ಮೋಹನ್ ಗೋಯಲ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ತಪ್ರೊಪ್ಪಿಕೊಂಡ ಶಿಕ್ಷಕಿಗೆ ನಾಲ್ಕು ವಾರಗಳ ಒಳಗೆ ಶಾಲೆಗೆ ಎರಡು ನೀರಿನ ಶುದ್ದೀಕರಣ ಯಂತ್ರ ಅಳವಡಿಸಲು ಸೂಚಿಸಿದೆ.

ಹಿಮಾಚಲ ಪ್ರದೇಶದ ಹಮೀಪುರ ಜಿಲ್ಲೆಯ ಸುಲ್ಯಾಂವ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಮಗನ ವಿವಾಹವನ್ನು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಸಹಿತ ಎಲ್ಲ ಶಿಕಕರು, ಸಿಬ್ಬಂದಿ ಹಾಜರಿದ್ದರು. ಈ ಮದುವೆ ಸಮಾರಂಭದ ಬಗ್ಗೆ ಶಶಿಕಾಂತ್ ಎಂಬವರು ಶಿಕ್ಷಣ ಇಲಾಖೆಗೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು.

ಅಲ್ಲದೆ, ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರು.

High Court of Himachal Pradesh ಶಿಕ್ಷಣ ಇಲಾಖೆ ಅಧಿಕಾರಿಗಳು ತಪಾಸಣೆಗಾಗಿ ಶಾಲೆಗೆ ಭೇಟಿ ನೀಡಿದ್ದು, ಮದುವೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಆದರೆ, ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಈ ಘಟನೆ ಮತ್ತು ನಡೆಸಿದ ತನಿಖೆಯ ಬಗ್ಗೆ ಆರ್ಟಿಐ ಮೂಲಕ ಮಾಹಿತಿ ಪಡೆದ ಶಶಿಕಾಂತ್ ಹೈಕೋರ್ಟ್ಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹಿಮಾಚಲ ಹೈಕೋರ್ಟ್, ಶಿಕ್ಷಕಿ ತಪ್ಪೊಪ್ಪಿಕೊಂಡರೂ ಎರಡು ಶುದ್ಧ ನೀರಿನ ಯಂತ್ರವನ್ನು ಅಳವಡಿಸುವಂತೆ ಆದೇಶ ಹೊರಡಿಸಿದೆ. ಆದೇಶವನ್ನು ನಾಲ್ಕು ವಾರಗಳಲ್ಲಿ ಪಾಲಿಸಿ ಹೈಕೋರ್ಟ್ ಕಚೇರಿಗೆ ವರದಿ ನೀಡುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿತು.

Muniratna Naidu ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ 7 ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

0

Muniratna Naidu ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವ ಆರೋಪದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆಯಲ್ಲಿ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಮುನಿರತ್ನ, ಅವರ ಗನ್‌ಮ್ಯಾನ್ ವಿಜಯಕುಮಾರ್, ಸುಧಾಕರ್,ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಹಾಗೂ ಲೋಕಿ ಸೇರಿ 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

Muniratna Naidu ಸಮಾಜ ಸೇವಕಿಯಾಗಿರುವ ಸಂತ್ರಸ್ತೆ ಡಿವೈಎಸ್‌ಪಿ ಪಿ ದಿನಕರ ಶೆಟ್ಟಿ ಸಮ್ಮುಖದಲ್ಲಿ ದೂರು ದಾಖಲಿಸಿದ್ದಾರೆ. 2020ರಿಂದ 2022ರ ನಡುವೆ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ.

ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾಗಿ ವರದಿಗಳು ಹೇಳಿವೆ.

Forest Department ಅರಣ್ಯ ಇಲಾಖೆಪಶ್ಚಿಮ ಘಟ್ಟ ವ್ಯಾಪ್ತಿಯ ಜನಪ್ರತಿನಿಧಿಗಳ ಜೊತೆ ಈಶ್ವರ್ ಖಂಡ್ರೆ ಸಭೆ

0

Forest Department ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ವಿಧಾನಸೌಧದಲ್ಲಿ ಮಾನ್ಯ ಅರಣ್ಯ ಇಲಾಖೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪಾಲ್ಗೊಂಡು, ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರವು ಘೋಷಿಸಿರುವುದಕ್ಕೆ ಸಂಬಂಧಿಸಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆಯಲ್ಲಿ ಅಲ್ಲಿನ ಮುಖ್ಯ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು .

Forest Department ಈ ವೇಳೆ ವಿಧಾನ ಪರಿಷತ್ ಉಪಸಭಾಪತಿಗಾಳಾದ ಶ್ರೀ ಎಂ.ಕೆ ಪ್ರಾಣೇಶ್, ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ, ಶ್ರೀ ಆರ್.ವಿ ದೇಶಪಾಂಡೆ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಮಂಕಾಳ್ ವೈದ್ಯ, ಶ್ರೀ ಕೆ.ಜೆ ಜಾರ್ಜ್ ಸೇರಿದಂತೆ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ ಸಂಸದರು, ಶಾಸಕ ಮಿತ್ರರು ಉಪಸ್ಥಿತರಿದ್ದರು.

Bhadravati Social Welfare Department  ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

0

Bhadravati Social Welfare Department  ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯು 2024-25ನೇ ಸಾಲಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು, ವಿದ್ಯಾರ್ಥಿವೇತನ ಪೋರ್ಟಲ್ https://ssp.postmatric.karnataka.gov.in ರಲ್ಲಿ ನವೀನ ಹಾಗೂ ನವೀಕರಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಲ್ಲಿ ಅರ್ಜಿ Bhadravati Social Welfare Department  ಸಲ್ಲಿಸುವಂತೆ ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವುದು.

MESCOM ಗಾಜನೂರು ವ್ಯಾಪ್ತಿ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

0

MESCOM ಶಿವಮೊಗ್ಗ ಗಾಜನೂರು ಶಾಖಾ ವ್ಯಾಪ್ತಿಯ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಗಾಜನೂರು, ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆ ಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, MESCOM ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೆ.21 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Eid Milad festival ಸೆ.22 ರಂದು ಈದ್ ಮಿಲಾದ್ ಮೆರವಣಿಗೆ ಪ್ರಯುಕ್ತ ಸಾರ್ವಜನಿಕ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಿ ಮಾರ್ಗ ಸೂಚನೆ

0

Eid Milad festival ದಿನಾಂಕ:22.9.2024ರಂದು ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆಯು ಶಿವಮೊಗ್ಗ ನಗರದ ಗಾಂಧಿಬಜಾರ್ ಜಾಮೀಯ ಮಸೀದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್ 2ನೇ ಕ್ರಾಸ್.ನಾಗಪ್ಪನ ಕೇರಿ,ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ -ಓಲ್ಡ್ ಬಾರ್ ಲೈನ್ ರಸ್ತೆ – ಪೆನ್ದನ್ ಮೊಹಲ್ಲಾ-ಬಾಲ್ ರಾಜ್ ಅರಸ್ ರಸ್ತೆ-ಮಹಾವೀರ ಸರ್ಕಲ್-ಗೋಪಿ ಸರ್ಕಲ್- ನೆಹರು ರಸ್ತೆ- ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ -ಅಶೋಕ ಸರ್ಕಲ್-ಎನ್ ಟಿ ರಸ್ತೆ ಗುರುದೇವ ರಸ್ತೆ -ರ್ಕ್ಲಾಕ್ ಪೇಟೆ. ನೂರಾನಿ ಮಸೀದಿ ಕೆಆರ್ ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ ತಲುಪುತ್ತದೆ.

ಸದರಿ ಮೆರವಣಿಗೆ ಸಂದರ್ಭದಲ್ಲಿ ಸಂಚಾರ ಸುಗಮಗೊಳಿಸುವ ಸಲುವಾಗಿ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ.ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲು ತಾತ್ಕಾಲಿಕವಾಗಿ ಅಧಿಸೂಚನೆ ಹೊರಡಿಸಲಾಗಿದೆ.

Eid Milad festival ಭದ್ರಾವತಿ ಬೆಂಗಳೂರು,ಎನ್ ಆರ್ ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಎಂ.ಆರ್ .ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

  1. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಹೊಳೆಹೊನ್ನೂರು ಸರ್ಕಲ್.ಎಂ.ಆರ್.ಎಸ್ .ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  2. ಹೊನ್ನಾಳಿ,ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಶಂಕರ ಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ವಿದ್ಯಾನಗರ, ಎಂ. ಆರ್ ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು
  3. ಕೆ.ಎನ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ,ದಾವಣಗೆರೆಗೆ ಹೋಗುವ ಎಲ್ಲಾ ಬಸ್ ಗಳು ಮತ್ತು ಭಾರಿ ಸರಕು ವಾಹನಗಳು ಬೈಪಾಸ್ ಮುಖಾಂತರವಾಗಿ ಎಂಆರ್ ಎಸ್ ಸರ್ಕಲ್.
  4. ವಿದ್ಯಾನಗರ ಶಂಕರಮಠ ಸರ್ಕಲ್, ಸಂಗೊಳ್ಳಿರಾಯಣ್ಣ ಸರ್ಕಲ್ ಮುಖಾಂತರ ಹೋಗುವುದು.
  5. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎ ವಾಹನಗಳು ಬೈಪಾಸ್ ರಸ್ತೆ ಎಂ.ಆರ್ .ಎಸ್ ಸರ್ಕಲ್ ಮುಖಾಂತರ ಹೋಗುವುದು.
  6. ಶಿಕಾರಿಪುರ ಸೊರಬ ಅನವಟ್ಟಿ, ಕಡೆಯಿಂದ ಶಿವಮೊಗ್ಗಕೆ ಬರುವ ಮತ್ತು ಹೊರ ಹೋಗುವ ಎಲ್ಲಾ ಬಸ್ ಗ ಮತ್ತು ಭಾರಿ ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್.ಲಕ್ಷ್ಮೀ ಟಾಕೀಸ್ ಸರ್ಕಲ್ ಪೊಲೀಸ್ ಚೌಕಿ ಅಲ್ಕೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಂಚರಿಸುವುದು.

-:ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ :-

  1. ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.
  2. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಮಾರ್ಗವಾದ ಗಾಂಧಿಬಜಾರ್ ಜಾಮೀಯ ಮಸೀದಿಯಿ- ಗಾಂಧಿಬಜಾರ್ 2ನೇ ಕ್ರಾಸ್ ನಾಗಪ್ಪ ಕೇರಿ -ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆ- ಓಲ್ಡ್ ಬಾರ್ ಲೈನ್ ರಸ್ತೆ– ಮೊಹಲ್ಲಾ -ಬಾಲ್ ರಾಜ್ ಅರಸ್ ರಸ್ತೆ- ಮಹಾವೀರ್ ನರ್ಕಲ್ – ಗೋಪಿ ಸರ್ಕಲ್ -ನೆಹರು ರಸ್ತೆ ಅವ ಅಹ್ಮದ್ ಸರ್ಕಲ್- ಬಿ.ಹೆಚ್ ರಸ್ತೆ-ಅಶೋಕ ಸರ್ಕಲ್-ಎನ್ ಟಿ ರಸ್ತೆ-ಗುರುದೇವ ರಸ್ತೆ-ಕ್ಲಾರ್ಕಪೇಟೆ-ನರಾನಿ ಮಸೀದಿ -ಕೆ ಆರ್.ಪುರಂ. ರಸ್ತೆ ಮಾರ್ಗವಾಗಿ ಅಮೀರ್ ಅಹ್ಮದ್ ಸರ್ಕಲ್ ವರೆಗಿನ ಮೆರವಣಿಗೆ ಮಾರ್ಗದಲ್ಲಿ ಮತ್ತುಮಾರ್ಗದ ಸುತ್ತ ಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ವಾಹನ ನಿಷೇಧಿಸಲಾಗಿದೆ.
  3. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಅಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ.

Port Blair ಪೋರ್ಟ್ ಬ್ಲೇರ್ ಗೆ ಇನ್ನುಮುಂದೆ ಹೊಸ ಹೆಸರು”ಶ್ರೀವಿಜಯಪುರಂ”

0

Port Blair ಈ ಹಿಂದೆ 18ನೇ ಶತಮಾನದ ಅಂತ್ಯದಲ್ಲಿ ಅಂಡಮಾನ್ ಮತ್ತು‌ ನಿಕೋಬಾರ್ ಪ್ರದೇಶಕ್ಕೆ ಆಗಮಿಸಿದ ಬ್ರಿಟಿಷ್ ನೌಕಾ ಸರ್ವೇಯರ್ ಆರ್ಚಿಬಾಲ್ಡ್ ಬ್ಲೇರ್ ಅವರ ಹೆಸರನ್ನು ಪೋರ್ಟ್ ಬ್ಲೇರ್ ಹೆಸರಿಸಲಾಗಿತ್ತು.
ಆದರೆ ಅದಕ್ಕೂ ಮುಂಚೆ ಚೋಳರ ನೌಕಾನೆಲೆಯಾಗಿ ರೂಪಿಸಲ್ಪಟ್ಟತ್ತು.

‘ಶ್ರೀವಿಜಯ’ ಪೋರ್ಟ್ ಬ್ಲೇರ್‌ಗಿಂತ 1400 ವರ್ಷ ಹಳೆಯದು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿನಲ್ಲಿ, “ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಸೇವೆ ಸಲ್ಲಿಸಿದ ದ್ವೀಪ ಪ್ರದೇಶವು ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ.”

Port Blair ಬ್ರಿಟೀಷರು ತಮ್ಮ ಆಧಿಪತ್ಯ ಇದ್ದೆಡೆ ಅಲ್ಲಿಯ ಚಾರಿತ್ರಿಕ ಹೆಸರುಗಳನ್ನ ಬಿಟ್ಟು ತಮ್ಮದೇನಾಯಕರ ಹೆಸರುಗಳನ್ನಿಡುವ ಚಾಳಿ ಎಲ್ಲರಿಗೂ ಗೊತ್ತಿದೆ.
ಈನೂತನ ನಾಮಕರಣಕ್ಕೆ ಎಂದಿನಂತೆ ವಿರೋಧಪಕ್ಷವಾದ ಕಾಂಗ್ರೆಸ್
ಅಪಸ್ವರ ಎತ್ತಿದೆ.
ಸ್ಥಳೀಯರನ್ನ ಕೇಳಿ ಹೆಸರು ಬದಲು ಮಾಡಬೇಕಿತ್ತು ಎಂಬುದಷ್ಟೇ ಅದರ ವಾದ, ಮತ್ತೇನಿಲ್ಲ.

Department of Women and Child Development ಅಪೌಷ್ಠಿಕತೆಯಿಂದ ಯಾವುದೇ ಜನತೆ ಬಳಲದಂತೆ ಆಗಲಿ- ನ್ಯಾ ಎಂ.ಎಸ್.ಸಂತೋಷ್

0

Department of Women and Child Development ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಶಿವಮಗ್ಗ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಆಯೋಜಿಸಲಾಗಿದ್ದ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮ ಹಾಗೂ ಪೌಷ್ಟಿಕ ಆಹಾರ ಮತ್ತು ಗ್ರೋಥ್ ಮಾನಿಟರಿಂಗ್ ಕುರಿತು ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಕಲಿಸುವ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸೂಪರ್‌ವೈಸರ್‌ಗಳು ಒಂದು ರೀತಿಯಲ್ಲಿ ತಳಮಟ್ಟದಲ್ಲಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು ತಮಗೆ ನೀಡಿದ ಯಾವುದೇ ಕೆಲಸವನ್ನು ಸಮರ್ಪಕವಾಗಿ ಯೋಜನೆ ರೂಪಿಸಿಕೊಂಡು ಮಾಡಬೇಕು. ಆಗಬೇಕಾದ ಕೆಲಸಗಳ ಕುರಿತು ಒಂದೆಡೆ ಬರೆದಿಟ್ಟುಕೊಳ್ಳಬೇಕು. ಕೆಲಸ ಮುಗಿದು ವರದಿ ನೀಡುವವರೆಗೆ, ಅಪ್‌ಡೇಟ್ ಆಗುವವರೆಗೆ ಕಾರ್ಯವೆಸಗಬೇಕು ಎಂದು ಕಿವಿ ಮಾತು ಹೇಳಿದರು.
Department of Women and Child Development ಜಿಲ್ಲೆಯಲ್ಲಿ 2563 ಅಂಗನವಾಡಿಗಳು ಇದ್ದು ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳ ಅಪ್‌ಡೇಟ್ ಸಹ ಸಮರ್ಪಕವಾಗಿ ಆಗಬೇಕು. ‘ಸುಪೋಷಿತ್ ಕಿಶೋರಿ ಮತ್ತು ಸಶಕ್ತ ನಾರಿ’ ನಿರ್ಮಾಣ ಈ ಎಲ್ಲ ಕಾರ್ಯಕ್ರಮಗಳ ಉದ್ದೇಶವಾಗಿದ್ದು ಜಿಲ್ಲೆಯಲ್ಲಿ ಯಶಸ್ವಿಯಾಗಿ ಇಂತಹ ತರಬೇತಿಗಳು ನಡೆಯಲಿ. ಹಾಗೂ ಭವಿಷ್ಯದಲ್ಲಿ ಅಪೌಷ್ಟಿಕತೆಯಿಂದ ಯಾವುದೇ ಜನತೆ ಬಳಲದಂತೆ ಆಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗ ತಯಾರು ಮಾಡಬೇಕು. ಮಕ್ಕಳಲ್ಲಿ ಎಸ್‌ಕ್ಯು3ಆರ್ ಸೂತ್ರವನ್ನು ಅಳವಡಿಸಬೇಕು. ಎಸ್ ಎಂದರೆ ಸ್ಕಿçÃನಿಂಗ್ ಮಕ್ಕಳು ಎಲ್ಲವನ್ನು ಪರಿಶೀಲಿಸುವ, ಕ್ಯು ಎಂದರೆ ಕ್ವೆಷನಿಂಗ್ ಪ್ರಶ್ನಿಸುವ ಮತ್ತು 3 ಆರ್ ಎಂದರೆ ರೀಡ್, ರಿಸೈಟ್, ರಿವೈಸ್ ಮಾಡುವುದನ್ನು ಕಲಿಸಬೇಕು. ಇದರಿಂದ ಅವರಲ್ಲಿ ಓದುವ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.
ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು, ಹಣದ ಮತ್ತು ಹಸಿವಿನ ಮಹತ್ವ ತಿಳಿಸಬೇಕು, ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು, ಸೇವಾ ಮನೋಭಾವ ಬೆಳೆಸಬೇಕು. ಟಿವಿ ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು. ಬಂಡೆಯಿAದ ಉತ್ತಮ ಶಿಲ್ಪ ರೂಪುಗೊಳ್ಳಲು ಪೋಷಕರು, ಗುರುಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದ ಅವರು ತರಬೇತುದಾರರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಇಂದು ಇಲ್ಲಿ ತರಬೇತಿ ಪಡೆದ ತರಬೇತುದಾರರು ತಮ್ಮ ಅಧೀನದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧನಾತ್ಮಕ ಸಲಹೆಗಳನ್ನು ನೀಡಬೇಕು. ಗುಂಪಿನಲ್ಲಿರುವ ಮಕ್ಕಳಿಗೆ ಸ್ಪಂದಿಸುವ ಬಗೆಯನ್ನು ಅರಿತು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕು. ಮುಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ತಾವು ಸಹ ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ನೀಡುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಹೆಚ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ.ಎಸ್. ಕಾರ್ಯಕ್ರಮದ ಕುರಿತು ಮಾತನಾಡಿದರು. ಯುನಿಸೆಫ್ ಕನ್ಸಲ್ಟೆಂಟ್‌ಗಳಾದ ಮನೋಜ್ ಸೆಬಾಸ್ಟಿನ್ ಅನೀಮಿಯಾ ಮುಕ್ತ ಭಾರತ ಕುರಿತು ಹಾಗೂ ಕೆ.ವಿಶ್ವನಾಥ್ ಪೌಷ್ಟಿಕ ಆಹಾರ ಹಾಗೂ ಗ್ರೋಥ್ ಮಾನಿಟರಿಂಗ್ ಕುರಿತು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸಿಡಿಪಿಓ ಗಳು, ಅಂಗನವಾಡಿ ಸೂಪರ್‌ವೈಸರ್‌ಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.